ಅಣ್ಣ ತಂಗಿ, ತಂಗಿದಟ್ಟೂ ಬೂರ್ ಹೊಂಗಾಲಿ, ನಂದಟ್ಟೂ ಹೆಣಿ ಹೊಂಗಾಲಿ. ಅಣ್ಣಂದು ಹೆಣಿ ಹೊಂಗು, ತಂಗಿದೂ ಬೂರ್ ಹೊಂಗು, ಅಣ್ಣ ದಂಡ್ಗೆ ಹೋತ.

ಅವಿ ಗೊಂಡಿ ಹೊಂಗೆ ಕೊಯ್‌ದ್ರೆ, ಅವ ಬೈವ.ತ ಗಿ ಕೊಯ್ಕ ಮುಡ್ಕಂತದೆ.

ಅಣ್ಣ (ತಂಗಿ ಮದ್ವೆಯಾತೆ ಅಂತ) ಮುಚ್ ಮುಡ್ಗೆ ಹಾಕಂಡ್ ಮನಿಕಂಡ. “ಏಳು” ಆಗೂಕೆಲ್ಲಾ (ತಂಗಿನೇ ಮದ್ವೇಯಾಬೇಕು ಅಂತ)

ಮಂಡಿ ಹಿಕ್ಕಂಡಿ, ಚೀಲ ತಟ್ಕಂಡಿ, ಕವಳಬಿವಳ ಹಾಕ್ಕಂಡಿ, ಹಿತ್ಲ ಕಡ್ನ ಬಾಗ್ಲಲ ನೆಡ್ದದೆ. ಮರ ಹತ್ಕಂಡಿ ಕುತ್ಕಂಡದೆ ತಂಗಿ ಹುಡಕಾಟ್ಗೆ.

ಅಜ್ಜಿ ಮುದ್ಕಿ ಬೇಡ್ಕಂತ ಬಂತು. ಬೆಶೂಲಗೆ ಬಂತು. ಕಟ್ವೆ ಕೆಳ್ಗೆ ಕುತ್ಕಂಡದೆ. ಕದ ಹಾಕಂಡಿ ನೆಂಜತೂರ್ತು, ಯೆಂಜ್ಲ ತಲಮೆನೆ ಬಿತ್ತು. ಕರಿಯದೆ ಮಿಂದ್ಕಂಡಿ “ಅಜವಾ, ಕಾಣಿಲೆಲ್ಲ. ಬೇಡೂಕೆ ಹೋಗು. ಮನಿಲಿ ತಾ ಯಾರೂ ಹೇಳಬೇಡ” ಅಂತು.
ಅಕ್ಕಿ ಕಾಳು ಕೊಟ್ರು. ಮರ್ನ ಮೇನದೆ ಅಂದಿ (ಹೆಳ್ತು) “ಓ ಮಾದೇವೀ, ಮಾದೇವೀ, ಕಾದ ನೀರು ಕಬ್ಬಿಣಾಯ್ತು. ತಂದ ಶೀರಿ ಅರಿಶ್ನಗೊಂಡ್ತು. ಮಾಡಿದಡ್ಗೆ ಗೊಬ್ಬರಾಯ್ತು. ನೀರು ಕಾದಿ ಕೊರ್ಸಾಗೆ ಹೋಯ್ತು.” (ಇಳಿದು ಬಾರೇ ಇರಬೇಕಾಗಿತ್ತು.)

“ಅಗೇನಂದ್ರೆ ಅಪ್ಪನಾದೆ, ಈಗೇನೆಂದ್ರೆ ಮಾವಾದ್ರೆ? ಇಂತಾ ಪಾಪ್ಕೆ ವಳ್ಗಾಗನಾರೇ.” ತಾಯಿ ಅದೆ.

“ಅಗೇನಂದ್ರೆ ತಾಯಿ ಅದೆ. ಈಗೇನಂದ್ರೆ ಅತ್ತೆಯಾದೆ? ಇಂತಾ ಪಾಪ್ಕೆ ನಾ ವಳ್ಗಾಗನಾರೇ”

(ಅಣ್ಣ “ಅಗೇನಂದ್ರೆ ಅಣ್ಣನಾದೆ, ಈಗೇನಂದ್ರೆ ಪುರ್ಸನಾದ್ರೆ ಇಂತಾ ಪಾಪ್ಕೆ ನಾ ವಳ್ಗಾಗನಾರೇ”

ಮರ ಕಡಿದ್ರು ಮರ ಬಿತ್ತು. ಅಂಬಾಗೆ ಸ್ವಾಮಿಕೈಲಿ “ನುಗ್ಲಬಿಡು” ಅಂತು. ಮಗ ಹುಟ್ತ.

ದಾತ್ರಿ ನೆದ್ರಿ ಕೊಟ್ ಬಿಟನೆ ಅವನೇಯ.

ಕರಿಯಂಗಿ, ಕರಿತೊಪಿ ಕಾಲನ್‌ಗೆಜ್ಜಿ ತಾಯೂ ಹೇಳ್ತದೆ (ಕದ ತೆಗಿರಿ ಹೇಳಿ) “ಕತ್ತೆಗಿರೋ” ಅಂದ್ ಕೊಣಿತ.

ಗೆಜ್ಜಿ ಕಾಲ ಮೊಮ್ಮಗ ಬಂದ ಮುದ್ಲಕಣ (ಹಾಗೆ) ಕೊಣಿತ “ಅಜಾ, ಕತ್ತೆಗ್ಯೋ” ಮಾಯ್ಕಕುಂಟಿ ನೆದ್ರಿ ಕೊಟ್ಟನೆ.

ನೆರೆಮನಿ ಅಜ್ಜಿ ಮುದ್ಕಿ “ಇವ್ರೆಗೆ ಯಂತಾ ನೆದ್ರೆಯೇ?” ಅಡ್ಗಿ ಮಾಡಿ ಬಡ್ಸತದೆ. ದುಡ್ಡು ಅಪ್ಪ-ಅವಿ –ತಲದೆಶಿ ಇಟ್ಟು ಹೆರಬಿದ್ ಹೋಯ್ತು.

ಯಚರಾಯ್ತು. ಹೊನ್ನು, ಕಪ್ಡ ಅಲ್ಗಿ ಇಟ್ಕಹೋಗದೆ “ನಿಮ್ಗೆ ಯೆಂತಾ ನೆದ್ರಿ ಬಿದ್ ಹೋಗಿತ್ತೇ ಕತ್‌ತೆಗ್ಯೆ” ಅಂದಾ.

ಅಪ್ಪ ಮಗಳದಲ್ ಸ್ವಾಮಿ ಕೂಡ್ “ನುಗ್ಲ ಬಿಡು” ಅಂದ್ ಹೇಳಿ ಹತ್ತಿ ಮಗಳ ಮನಿಗೆ ಹೋತ. ನಾಕ್‌ದೆನ ಉಳ್ಕಂಡ್ ಬತ್ತ. ಲಡ್‌ನುಗಲ ಬಿಡ್ತ. ಅರ್ದದಾರಿಲೆ ಹುಶ್ಕ ಬಿತ್ತು. ಶತ್‌ನೆಡಿತಾನೆ.

 ಹೇಳಿದವರು

ನಾಗಿ ಶಿವಪ್ಪ ಪುಟದಾರ,
ನವಿಲಗೋಣ.