ಒಂದೂರಲ್ಲಿ ಅರಸಿದ್ದ. ಅವನಿಗೆ ಒಂದ್ ಹೆಂಡ್ತಿತ್ತು. ಅದ್ಕೆ ಹುಡುಗರೇ ಆಗಲಿಲ್ಲ. “ಮತ್ತೊಂದ್ ನಗ್ನಾಗ್ಲೋ ಹೇಗೆ?” ಕೇಳ್ದ. “ನಗ್ನಾಗು ಕಡ್ಡಿಲ್ಲ. ತನ್ಗೆ ಬೇರೆ ಮನಿ ಕಟ್ಬೇಕು. ಮಂತಾನ್ದೊಳ್ಗಿದ್ದದ್ದೆಲ್ಲ ಶರಿಪಾಲ್ ಕೊಡ್ಬೇಕು”. ಅದೇ ರೀತಿ ಮಾಡ್ತ ಅವ. ನಗ್ನಾಯ್ತು. ಮತ್ತೆ ಅದಕ್ಕೆ ಅದಕ್ಕೆ ಒಂದೇ ಗರ್ಬಕೆ ಯೇಯ್ಡ್‌ಜನ ಗಂಡು ಹುಡುಗರು ಹುಟ್ಟಿದರು. ಹುಡುಗರು ಸ್ವಲ್ಪು ದೊಡ್ಡಾದ್ರು. ತಂದೆ ಹತ್ರೆ ಚೆಂಡು ಬೇಕು ಹೇಳಿದ್ರು ಅವ್ರು. ತಂದಿ ಜನಕೊಂದೊಂದ್ ಚಂಡು ಮಾಡಿಕೊಟ್ಟ. ಹುಡುಗರು ಹಿರಿಯ ಹೆಂಡ್ತಿ ಮನಿ ಅಂಗಳದಲ್ಲಿ ಆಡೂಕೆ ಹೋದ್ರು. ಅದು ಬೇಕಂತಲೆ ಹೊಡ್ತ ಹೊಡೀತು. ಹುಡ್ಗರಿಗೆ ಆವಾಗ ಗಂಡನ್ನ ಕರ್ದಿ ಹೇಳ್ತು. “ನಿನ್ಗೆ ಹುಡ್ಗರ ಇಬ್ರಾದ್ರೂವ ತಲಿ ಕಡಿಬೇಕು. ಇಲ್ಲಾದ್ರೆ ನೀನು, ನಿನ್ ಹೆಂಡ್ತಿ, ಹುಡ್ಗರು ಎಲ್ಲಾ ಯಿಸ ಹಾಕಿ ಕೊಲ್ತೆ” ಹೇಳ್ತು.

ಅವಾಗ ತಂದಿ ಯೇನ್ಮಾಡ್ದ? ಆ ಕೂಡ್ಲೆ ಕಲಾಸಿಗೋಳ ಕರಿಸ್ದ. ಅವರ ತಲಿ ಹೊಡ್ದಿ ಬರೂಕೆ. ಆವಾಗ ಆ ತಾಯಿ ಹೇಳ್ತು. “ಇಂದ ವಂದಿವ್ಸಿ ತನ್ಗೆ ಅದರ ಕೊಡಬೇಕು” ಹೇಳ್ತು- ಹುಡುಗರ ತಾಯಿ. ಆವಾಗ ರಾತ್ರಿ ಎಲ್ಲಾ ನಿದ್ರಿ ಬಂದ ಸಮಿದಾಗೆ ಎಯ್ಡೂ ಜನ ಹುಡ್ಗರಿಗೆ ಒಂದೊಂದ ಶಿದ್ದಿ ಹೊನ್ನ ಅಳೆದು ಒಂನಂದ್ ಪಂಜಿ ತುಂಡ್ನಗೆ ಕಟ್ತು. ಒಂದೊಂದ ಶರ್ಗನಾಗೆ ಹಾಲೂ ಅನ್ನ ಹಾಕಿ ಪೊಟ್ಟಣ ಕಟ್ಟಿ ಹುಡುಗರಿಗೆ ಹೇಳಿತು. “ನೀವು ಯೆಲ್ಲಾದ್ರೂವ ವಂದ ಅರಸನ್ದಲೆ ವಳ್ದಿ ಸುಖವಾಗಿ ಇರಿ” ಎಂದು ಹೇಳ್ತು. ಕೆಳಗಿಸಿ ಬಿಟ್ತು ಅವ್ರ ರಾತ್ರಿಗೇಯ.

ಆ ಹುಡುಗರು ಹನ್ನೆರಡು ಗಂಟೆ ಹೊಡುವರಿಗೆ ಬೆಳ್ಗಾ ಮುನ್ನ ನೆಡದ್ರು. ಅಲ್ಲಿ ಹನ್ನೆಯ್ಡು ಗಂಟೆ ಮೇನೆ ವಂದೆ ಕೆರೆ (ಸರೋವರ) ಶಿಕ್ತು. ಆವಾಗ ಅಲ್ಲಿ ಮಿಂದ್ರು. ತಾಯಿ ಕೊಟ್ಟ ಅನ್ನದ ಬುತ್ತಿ ಶಿಕ್ತು. ಬುತ್ತಿ ವೋಟ ಮಾಡಿದ್ರು. ವೋಟ ಮಾಡಿ ಅಲ್ಲೇ ಒಂದ ಅಸ್ವಂತ ಕಟ್ಟಿತ್ತು. ಕಟ್ಟಿಮೇಲೆ ಮಲಗಿದ್ರು.

ಬಾಳಷ್ಟು ತರಾಸಾಗಿ ಎಯ್ಡೂ ಮಂದೀಗೂವ ನೆದ್ರಿ ಹತ್ ಹೋಯ್ತು. ಸೂರ್ಯ ಪಶ್ಚಿಮಕ್ಕೆ ಹೋಗಬೇಕಾದ್ರೆ ಆ ಕಿರಿಯನ್ಗೆ ಎಚ್ಚರಾಯ್ತು. ಅಟ್ ಹೊತ್ಗೆ ಯಳ್ಳಿ ಮರಕ್ಕೆ ಎಯ್ಡ ಹಕ್ಕಿ ಬಂತು. ಕುಂತ್ಕಂಡ್ತು. ಆವಾಗ ಗಂಡ್ ಹಕ್ಕಿ ಹೆಣ್ಣಕ್ಕಿ ಹೇಳ್ತು. “ನಂಗೆ ಕತಿ ಹೇಳಿ ಹೇಳಿ ಯಂತಾ ಕತಿ ಹೇಳೂದು? ಪರಸ್ಥಳದಾಗಿದ್ದ ಎಯ್ಡು ಜನ ರಾಜನ ಮಕ್ಳಯ ಬಂದು ಈ ಅಸ್ವಂತ್ ಮರನಡಿಗೆ ಮನ್ಗರೆ. ಇನ್ನೊಂದು ಚಣದಾಗೆ ಈ ಬೇಟೆಗಾರ ಬರ್ತಾನೆ. ಬಲಿ ಹಾಕ್ತಾ ಮರಕೆ. ವಂದ್ ಹಕ್ಕಿ ಬಲಿವೊಳ್ಗೆ ಬೀಳ್ತದೆ. ಅದ ಬಲಿಂದ ತಪ್ಪಿಸಕಂಡಿ ಇವ್ರ್ ಅಣ್ಣ ತಮ್ಮ ಮನ್ಗದ ನೆಡುಗೆ ಬಂದಿ ಹಕ್ಕಿ ಬೀಳ್ತದೆ. ಅವ್ರು ಬುದವಂತರಾದ್ರೆ ಅವ ಯೆಟ್ ಪರಿ ಬೇಟಿಗಾರ ಕೇಳ್ದರೂ ಆ ಹಕ್ಕಿ ಕೊಡೂಕಾಗ” ಅಂತು. ಆವಾಗ ಆ ಹಕ್ಕಿ ಯೇನ್ ಮಾಡ್ಬೇಕು ಕೇಳ್ತು. ಮತ್ತೊಂದು ಹಕ್ಕಿ “ಆ ಹಕ್ಕಿ ಶುಟ್ಟಿ ಅಣ್ಣಗೆ ತಲಿ ಬದಿ ಕೊಡ್ಬೇಕು ತಮ್ಮ ದೇಯ ಬದಿ ತಿನ್ಬೇಕು” ಅಂತು. ಹಕ್ಕಿ ತಿಂದಾಕ್ಷಣ ಯೇನಾತದೆ ಕೇಳ್ತು ಮತ್ತೊಂದ್ ಹಕ್ಕಿ ಆ ತಲಿ ತಿಂದವ್ಗೆ ಅರಸತನ ಶಿಕ್ತದೆ. ದೇಯ ತಿಂದವನ ಹೊಟ್ಟೀಲಿ ವಜ್ರ ಬೆಳಿತದೆ ಅಂತು ಹಕ್ಕಿ. ಸುಡಬೇಕಾದ್ರೆ ಬೆಂಕಿಗೆ ಯೆಲ್ ಹೋಗೂದು ಕೇಳ್ತು ಆ ಹಕ್ಕಿ. “ಅವ್ರ ಬುದವಂತರಾದರೆ ಯೆಯ್ಡು ಕಲ್ಗೆ ಕಲ್ ಮೇನ ಕಲ್ ಜಪ್ಕಂಡ್ರೆ ಬೆಂಕಿ ಕತ್ತದೆ” ಅಂದ್ ಹೇಳಿ ಹಕ್ಕಿ ಹೋಯ್ತು.

ಆಮೇಗೆ ಬೇಟೆಗಾರ ಬಂದ. ಆ ಮರಕ್ಕೆ ಬಲಿ ಹಾಕ್ದ. ವಂದ ಹಕ್ಕಿ ಶಿಕ್ತು. ಅದ್ಯೇನೋ ಕೈ ತಪ್ಪಿ ಇವ್ರ ಮಗ್ಗುಲ್ಲೇ ಬಿದ್ ಬಿಟ್ರು. ಅವ ಬಾಳಟ್ ಹೇಳ್ದ. “ಕೊಡಿಯಪ್ಪ” ಹೇಳಿ. ಕೊಡಲಿಲ್ಲ. ಯೇನ ಮಾಡ್ರೂವ. ಅಣ್ಣ “ನಮ್ಗೆ ಹೊಟ್ಟಿಗೆ ಬಾಳ ಹಸುವಾಗದೆ. ನಾನು ನೀನು ಕೊಡ್ಕಂಡಿ ಸುಟ್ಕಂಡಿ ತಿನ್ನಬೇಕು”.

ಕಲ್ ಮೇನೆ ಕಲ್ಲಿಟ್ಟೆ ತಮ್ಮ ಜಪ್ದ. ಅಡಿ ಬೆಂಕಿ ಉರಿತು. ಆ ಹಕ್ಕಿ ಸುಟ್ಟ. ಅಣ್ಣಗೆ ತಲಿ ಕೊಟ್ಟ. ತಮ್ಮ ದೇಯ ತಿಂದು ಸುಮಾರ ಹಾದಿ ನಡೆದು. ತಿಂದ್ಕಂಡಿ ಅಲ್ವೊಂದ್ ಗೊಟ್ಟಿ ಯೆಯ್ಡ್ ರಸ್ತಿ ಕೂಡ್ತು. ಅಣ್ಣಗೆ ಯೇನೂ ಈ ಶಂಗ್ತಿ ಗೊತ್ತಿಲ್ಲ. ಹಕ್ಕಿ ಹೇಳದ್ದು. “ಬಲಕನ ಹಾದೀಲಿ ಹೋಗ್ತೆ” ಹೇಳ್ದ ಅಣ್ಣ. ಯೆಡಕನ ಹಾದೀಲಿ ತಮ್ಮ ಹೋದ. ತಮ್ಮ ಹೋದ ಹಾದೀಲಿ ವಂದ ಕೋಮ ಯೇಳ ಮರಿ ಹಾಕಂಡಿತ್ತು.

ಕೂಮ ಹೇಳ್ತು ಹುಡ್ಗನ ಹತ್ರೆ “ಅಪ್ಪಾ, ನಿನ್ಗೆ ಯೇನಾರೂ ಕಟ್ ಬಂದರೆ ನಮ್ ದ್ಯಾನ ಮಾಡು. ನಮ್ ವಂದ ತಕಹೋಗಿ ನೀರ್ನಲೆ ಬಿಟ್ ಹಾಕು.” ಅಂತು. ಆ ಪಂಜಿ ತುಂಡಾಗಿ ಏಳೂ ಮರಿ, ಅಬ್ಬಿ ಅಟ್ಟೂ ಕಟ್ಕಂಡಿ, ಹೊಗಲ ಮೇಲ್ ಹಾಕಂಡ್ ಅವ ಹೋದ. ಸಮುದ್ರದಲಿ ತಕ್ ಹೋಗಿ ಕುತ್ಗ್ ನೀರಲ್ ಬಿಟ್ಟಾಕ್ದ. ಆ ಹುಡ್ಗ ಅವ.

ಈ ಹುಡಗಗೆ ಬಾಳ ಬಯಾರಾಗಿತ್ತು. ಆಸ್ತು, ಸುತ್ತು ನೋಡ್ದ. ಶಣ್ಣ ಗುಡಿಸಲು ಕಂಡಿತು. ಅವಗೆ ಅಲ್ಲಿ ವಂದೆ ಅಜ್ಜಮುದ್ಕಿತ್ತು ಆ ಗುಡಿಸಲನಾಗೆ. ಅವರ ಮನಿಗೆ ಹೋದ. ಅವ್ರ ಮನಿಗೆ ಹೋದ ಕೂಡ್ಲೇಯ “ಅಜವಾ ನನ್ಗೆ ವಂದೆ ಹನಿ ಆಸ್ತಿಗೆ ಕೊಡು” ಅಂದ. ಅದ್ಯೇನ್ಮಾಡ್ತು? ತಾಂಬರ ಪಾತ್ರದಲ್ಲಿ ಇಟ್ ಆಸ್ತನ ತಂದೆ ಅವ್ಗೆ ಕೊಟ್ತು. ಆ ಆಸ್ರಿ ಕುಡ್ದ ಮೇನೆ ಏಳ್ ಮಣ ಹೊನ್ನ ವಾಂತಿ ಮಾಡ್‌ಹಾಕ್ದ. ಆಗ ರಾಶಿ ಹಾಕ್ದ. ಅಜ್ಜಿ ಯೇನ್ ಮಾಡ್ತು? ಅಟ್ಟೂ ಪಾತ್ರದಲ್ಲಿ ಮಡಕೇಲಿ ಆರಲಿ ಇರಲಿ ತುಂಬಕಂಡ್ತು.

ಅವಾಗೆ ಅರಸೂ ಮನಿಗೆ ಹೂಗಿನ ದಂಡಿ ಕಟ್ಕ ಹೋಗಿ ಒಂದ್ ಶಿದ್ ಅಕ್ಕಿ ತರ್ತಿತ್ತು ಅದು ದಿವ್ಸಾವ. ಆವಾಗ ಶಲ್ಪ ಅದರದೇಯ ಬುಡ್ಸ್‌ತು. ತಾನಿಟ್ ವೋಟ್ ಮಾಡ್ತು. ಆವಾಗ ಅಜ್ಜವಿ ಕೈಲಿ ಹೇಳ್ದ. “ನಾ ಇಲ್ಲಿ ಬಂದ್ ಸುದ್ದಿಯ ಅರಸು ಮನಿದಲ್ ನೀ ಹೋಗ ಹೇಳಬೇಡ” ಅಂದ. ಅವಲ್ಲೇ ನಾಕ ದಿವ್ಸಿ ಸ್ವಂತ ಉಳ್ಕಂಬಿಟ್ಟ.

ಇತ್ತಲಾಗೆ ಅಣ್ಣ ಹೋದಲ್ಯೇನಾಯ್ತು? ವಂದ ರಾಜಗೆ ವಂದೇ ಹುಡ್ಗಿಯಾಗಿತ್ತು. ಆ ರಾಜ ಅನೇಕ ಅರಸು ಮಕ್ಳಿಗ್ಯೆಲ್ಲ ಕರಸಿದ್ದ. ಆನಿ ಕೊಳ್ಗೆ ಹೂಗಿನ ಮಾಲಿಕಿ ಹಾಕಿದ್ದ. ಯಾರ ಕೊಳ್ಗೆ ಹಾಕ್ತಿ. ತನ್ ಮಗಳ ಅವಗೆ ಕೊಡ್ತೆ ಅಂದಿ ಪಣ ಮಾಡಿದ್ದ ಅವ. ಆ ಹುಡ್ಗ ಹೋಗಿ ವಂದ ಬದೀಗೆ ನಿತ್ಕಂಡಿದ್ದ. ಆ ಆನಿ ಆ ಹೂಮಾಲಿ ತಂದಿ ಆ ಹುಡ್ಗಗೆ ಹಾಕ್ತು. ಆವಾಗ ಆ ಹುಡ್ಗಿ ಅವನಿಗೆ ಕೊಟ್ಟಿ ಆ ರಾಜ ಅವನಿಗೆ ನಗ್ನ ಮಾಡ್ದ. ಆವಾಗ ಅಜ್ಜಿ ಹೂ ಕಟ್ಕ ಹೋಗಿತ್ತು. ಅಲ್ದೆ ಬಾಳ ಹೊತ್ತಾಗಿತ್ತು. “ಯಂತ ತಡ ಆಯ್ತು?” ಕೇಳ್ದ. “ಮೊಮ್ಮಗನೇ, ಮತ್ಯಂತರಲ್ಲ ರಾಜನ ಮನೀಲಿ ಮಗಳ ಮದವಿ ತಯಾರಿಲಿದ್ದ ರಾಜ. “ಯಾರ್ಗೆ ನಗ್ನಾಯ್ತು?” ಕೇಳ್ದ ಹುಡಗ. ಆ ರಾಜನ ನೋಡದ್ರೆ ನಿಂದೇ ನಮೂನ್ಯಾಗೆ ಕಾಣ್ತದೆ. ಮಗನೇ, ಯಾರೋ ವಬ್ಬ ಬಂದವ್ಗೆ ಆನಿ ಹೂಗಿನ ಮಾಲ್ಕಿ ಹಾಕಿ ನಗ್ನಾಯ್ತು ಅಂತು. ಆವಾಗಿವ್ ತಕ್ಕಂಡ ತನ್ನಣ್ಣನೆ ಆಗಿರೂದು. ಅಂದಿ ಆಲೋಚ್ನಿ ಮಾಡ್ದ.

ಅಜ್ಜ ಕೈಲಿ ರಾಜ (ಅಣ್ಣ) “ನಮ್ಮನಿ ದನಾ ಕಾಯೂಕೆ ಯಾರಾದ್ರು ಹುಡಗರು ಶಿಕ್ಕೂರೋ?” ಕೇಳ್ಕಂಡ್ ಕೇಳ್ದ. ಆವಾಗ ಅಜ್ಜಿ ಬಂದಿ ಮೊಮ್ಮಗನ ಕೇಳ್ತು. ಆಗೂದು ಅಂದೆ ಹೇಳು. ನಾ ದನ ಕಾಯೂಕೆ ಹೋಗ್ತೆ. ಹೇಳ್ದ ಆವಾಗೆ ಮರದಿವ್ಸಿ ಇವಂ ಹೋದ.

ಆ ಹುಡ್ಗಿ ತಂದೆ ದನಾ ಬಿಟ್ ಹಾಕ್ದ. ಇವ ಗೋಲಿ ಬಿಟ್ಕ ಹೋದ. ಸಂಜಿಗೆ ಬಂದ. ದನ ಕಟ್ಟಿ ಅಂದ. ಮನಿಗೆ ಬಂದ ಅಜಿಮುಕ್ದಿ ಮನಿಗೆ.

ಅವ ಯೇನಂದ ಮಾವನ ಹತ್ರೆ? ತಾನು ಹಡಗಿನ ಯಾಪಾರ ಮಾಡಹೋಬ್ಬೇಕು. ಹಡಗಿನ ಕಡಿಸಿ ಕೊಡು ಅಂದ ಹೆಣಿ ಕೊಟ್ಟ ಮಾವನ ಹತ್ರೆ, ಆವಾಗ ಮಾವ ಹೇಳ್ತಾನೆ. “ದುಡ್ಡಿಲ್ಲ, ನಗ್ನದ ಹಳಕೀಲಿ ಕರ್ಚಾಯ್ತು. ಸ್ವಲ್ಪ ದಿವಸ ಹೋಗ್ಲಿ” ಅಂದ. ಹಡಗು ಕಡಿಸುವಷ್ಟು ರೊಕ್ಕ ನನ್ ಕೈಲದೆ ಕಡಿಸೇ ತೀರಬೇಕು ಹೇಳ್ದ. ಆವಾಗೊಂದ್ ದೊಡ್ಡ ಗುಡ್ಡದ ಮೇನ್ ಮಾಮೇಲಿ ಮರಿತ್ತು. ಕಡಿಸ್ದ. ಬೋಟಿ ಮಾಡಿಸ್ದ. ಮಾವ ಆಖ್ ಹಚ್ಚೊ ವಂದ ಸಾವಿರ ಜನ ವಟ್ ಮಾಡಿ ಆ ಬೋಟಿ ಯೇಳ್ಸಕೆ ಹೋದ. ಅದ್ ಬರಲೇ ಇಲ್ಲ. ಯೆಂಟ್ ದಿವಸ ಪರಯತ್ನ ಮಾಡ್ರು. ಬರಲೇ ಇಲ್ಲ. ಆವಾಗೆ ವಂದ ಜೋಯಿಸರ ಕೇಳದ್ರು ಹೇಳಾಯ್ತು ಹೋಗಿ. “ಅದು ನರ ಮನಸರ ಬಲಿ ಬೇಡದೆ; ನರ ಮನಸರ ರಕ್ತ ಕೊಟ್ರಿ ಬತ್ತದೆ” ಅಂದ್ರು.

“ಯಾರು ಬತ್ತರೆ?” ಅಜ್ಜಿ ಮನಿಲಿ ದನ ಕಾಯೂಕೆ ಬರು ಪೋರನ್ನೆ ಅದಕ್ಕೆ ಸಾವಿರ ರೂಪಾಯಿ ಕೊಟ್ಟು ಅವನ ಕಳ್ಗಬೇಕು. ಹೇಳಬೇಕು. ಅಜ್ಜಿ ಬಂದಿ ಮೊಮ್ಮಗನ ಕೈಲಿ ಹೇಳ್ತು. “ಮಗನೆ ಹೀಗಂತರೆ ಅರಸುಗೊಳು” ಹೇಳ್ತು. “ಆಗೂದು. ತಾನೆ ಬರ್ತೆ ಬಾಳಿಕೆ ಹತ್ ಗಂಟೆವೊಳ್ಗೆ ತಾನು ಹಾಜಿರಾತೆ” ಅಂದ ಅವ.

ಹುಡ್ಗ ಅಂಗ್ಡಿಗೆ ಹೋದ. ಚಲೋದೆ ವಂದ ಮಾವ್ನ ಹಣ್ ತಕಂಡ; ಚಾಕ್ ತಕಂಡ. ಶಣ್ಣ ಕಂಬ್ಲಿ ಚಾಪಿ ಹೊಗಲ ಮೇನ್ ಹಾಕಂಡ್ನಿ ಅಲ್ಲೇ ಹೋಗಿ ನಿತ್ತ. ಆವಾಗ ಇವನ ತಿ ಕಡೂಕೆ ಎಲ್ಲಾ ತಯಾರಿ ಮಾಡದ್ರು. ಆವಗೆ ಅವ ಹೇಳ್ದ. “ನಾ ವಂದ ಮಾಯಿನ ಹಣ್ ತಂದನೆ. ಮಾಯಿನ ಹಣ್ ಕೊಯ್ದಿ ನಾ ತಿಂತೆ” ಹೇಳ್ದ. “ನಂತರ ನನ ತಲೆ ಹೊಡಿರಿ”. ಮಾಯಿನ ಹಣ್ ಕೊಯ್ಕಂಡಿ ಹಡಗಿಗೆ ವಂದ ಕೇದ್ಗಿ ಇಟ್ಟು ತಾ ವಂದ ಕೇದ್ಗ ತಿಂದ. ತಿಂದ್ಕಂಡಿ ತನ ಬೆಳ್ನೇಯ ಆ ಚಾಕ್ನಲಿ ಬಗೀಲೆ ಕೊಯ್ಕಂಡ. ಆವಾಗ :ಬೇಕಾರೆ ಕಡೂದಾರ ಕಡೀಲಕ್ಕಿ. ಹಡ್ಗ ಶಲ್ಪ ಮಾತ್ರ ಹಿಡೀರಿ” ಅಂದ. ಹುಡ್ಗ ಶರಾನೆ ಬಂದೇ ಬಿಟ್ತು ಸಮುದ್ರಕೆ. ತಮ್ಮ ಅಜ್ಜಿ ಮನೆಗೆ ಬಂದ ಬಿಟ್ಟ.

ಮಾವನ ಕೈಲಿ ಹೇಳ್ದ “ಯೆಂಟ್ ಜನ ನನ್ಗೆ ಕಲಾಸಿಗಳ ಕೊಡಬೇಕು.” ಎಂಟ್ ಜನ ಕಲಾಸಿಗೊಳ ಕೊಟ್ಟ ಮಾವ. ಹದ್ನೈದ್ ದಿವ್ಸ್ ಬೀಯ ಯೆಲ್ಲ ಕೊಟ್ಟ. ಈ ಹಡ್ಗ ಹತ್ತಿ ಹಡ್ಗ ಬಿಟ್ರು. ಆ ಹಡಗು ಯೆಂಟ್ ಮಂದಿ ಹೊತ್ತು ಹಾಗೇ ದನು ಕಾಯೂ ಕೂಸನ ಮನಿಗೇ ಬತ್ತದೆ. “ಯೆಟ್ ಮಾಡ್ರೂವ ದನು ಕಾಯೂ ಪೋರನ ಕರ್ಕ ಹೋಗ್ವ. ಅವನ ಬದಿಗೇ ಬತ್ತದೆ ಅಂದಿ ಅವನ ಹಡಗಿನ ಮೇನೆ ಹತ್ಸಕಂಡ್ರು.

ಜಲ್ಲಾ ತಕಂಡಿ, ಹಡ್ಗ ವತ್ಕಂಡಿ ಕಾಶೀಪಟ್ಟಣಕ್ಕೆ ಹೋದ್ರು ಹುಡುಗರು. ಕಾಶೀ ಪಟ್ಟಣ ರಾಜನಿಗೆ ವಂದ ಹುಡ್ಗಿ ಅದೆ, ಅದು ವಂದ ಪಣ ಮಾಡದೆ. ತನ್ ಕೊಳ್ಳಗೆ ವಂದ್ ಅಂತ್ರದ ಚಾವ್ಗಿ ಅದೆ (ತಗಡಿನ). ಅದ್ರೊಳಗೆ ಯೇನದೆ ಅಂದಿ ಯಾರು ಬಿಡಿಸಿ ಹಾಕಿದರು ಅವರಿಗೆ ತಾ ನಗ್ನಾತೆ” ಅಂದಿ ಪಣ. ಇವ್ರು ಎಂಟ ಮಂದಿ, ರಾಜ. ಅಣ್ಣ ಬಿಡ್ಸೆ ಹಾಕೂಕಾಗ್ದೆ ಅವರು ಮನಿ ಶಗ್ಣಿ ತೆಗೆಬೇಕು. ಅಂದಿ ಸಾವಿರ ಜನ ಅವ್ರ ಶಗ್ಣಿ ತಗೇತಿ (ಉಳಿದ್ರು).

ನಂತ್ರವ ತಮ್ಮ ಹೋದ. ಇದ್ರ ನಾನ್ ಬಿಡ್ಸಿ ಹಾಕಿದರೆ ನಿಮ್ಮಿಂದ ವೊಟ್ಟು ಜನರನೂ ನೀ ಬಿಟ್ ಹಾಕತ್ಯೋ ಕೇಳ್ದ. ಅವರ ಕೈಲಿ ಅದ್ಹೇಳ್ತು ಹೌದು ಹೇಳಿ. “ ವಂದ್ ಶಣ್ಣಕ್ಕಿ, ಶಣ್ಣಕ್ಯಟ್ಟೆ ನೀರು-ಯೇಯ್ಡು ವಸ್ತ್ರದೆ ನಿನ ಕೊಳ್ಳಗೆ” ಅಂದ ಅವ. ಆವಾಗೆ ಅದು ತಡಮಾಡ್ಲೇ ಇಲ್ಲ. ಕೊಳ್ಳನ ಪಕ್ಕದ ಶರ ತೆಗ್ದು ಮಾಲಿ ಹಾಕ ಬಿಟ್ತು. “ನೀನೇ ಪತಿ” ಎಂದು ಏಳಿ. ಅವ್ರಟ್ಟೂ ಜನ್ರನೂ ಬಿಟ್ ಹಾಕ್ರು. ಅದ್ರ ತಂದೆ ಯೇನ್ ಮಾಡ್ದ? ಹುಡಗಿಗೆ ತಕ್ಕವಾದ ಕಂಚಿನ ಪೆಟ್ಗಿ ಮಾಡಿ ಅದರಲ್ಲಿ ಹಾಕ್ದ.

ಒಳ್ಳೆ ಕೀಲಿ ಮಾಡ್ದ. ಹಡಗಿನ ಮೇನ ತಂದ್ ಹಾಕ್ರು. ಆಗೆ ಹಡ್ಗ ಬಿಟ್ರು. ಮದ್ದಿಗೆ ಬರೂಕೆ ಅರ್ಸು ಯೇನ್ಮಾಡ್ದ? ಅಣ್ಣ? ಇವ್ನೊಬ್ಬ ಕೊಂದ್ರೆ ಆ ಹುಡ್ಗಿ ನನ್ಗಾಯ್ತು ಅಂದ ಅವನ ನೆಗೆದು ಸಮುದ್ರದಲಿ ಹಾಕದ್ರು.

ಅವ್ಯೆನ ಮಾಡ್ದಿಟ್ಟ? ಸಮುದ್ರದಲಿ ಬಿದ್ ಕೂಡ್ಲೇಯ ಕೂಮನ ಜಾನ ಮಾಡ ಬಿಟ್ಟ. ಯೇಳ್ ಮರಿ, ಅಬ್ಬೆ ಯೆಂಟ್ ಕೋಮ ಬಂದಿ ಅವನ ಹತ್ಸಕೆ ಹೋಗಬಿಟ್ತು. ಮುಂದೆ ಅವಾಗ ಹುಡ್ಗನ ತಕಹೋಗೆ ಅಜ್‌ಮುದ್ಕಿ ಮನೆಗೆ ಮುಟ್ಸಿದ್ರು. ಅಡಿಗೆ ಇವ (ಅಣ್ಣ) “ತನ್ಗೆ ಆಯ್ತು ಹೆಂಡ್ತಿ” “ಅಂದಿ ಯಲ್ಲಾ ಜನರ ಹತ್ರ ಹೇಳ್ದ. ತಾ ನಗ್ನಾಗಿ ಬಂದಿ” ಹೇಳ್ಕಂಡಿ.

ಮರುದಿವ್ಸ ಮುದ್ಕಿ ಕೈಲಿ ಯೆಯ್ಡು ಹೂಗಿನ ದಂಡಿ ಕಟ್ಕಂಬಾ ಅಂದ್ರ. ಇವ ಶಣಿ ಚೀಟಿ ಬರ್ದಿ “ನಿನ್ ಗಂಡ ಮತ್ತೆ ಸಮುದ್ರದಲ್ಲಿ ಸಾಯಿಲಿಲ್ಲ. ಬರುವೆ ಅವ ಯೇನ ಬಂಗ ಮಾಡ್ರೂವ ಹೆದರಬೇಡ”. ಅಂದಿ ಅಜ್ಜಿ ಕೈಲಿ ಕೊಟ್ಟ. ಅಜ್ಜಿ ಹೋಗಿ “ಹೂಗು ಸೂಡತೆ ಅಂತು” ಹೂಗಿನೊಳಗನ ಚೀಟಿ ಕುಡ್ಗಿ ನೋಡ್ಕ ಹೇಳಿ ಓದಿ ಸೋಮ್ಲ ಉಳ್ಕಂಡ್ತು ಅದು.

ಸಂಜಿಕೆ ಅದ್ಕೆ ಬಹಳಷ್ಟು ತರಾಸ ಕೊಟ್ಟ ಅಣ್ಣ. ಅದ ಹೇಳ್ತು. “ನಾಳಿಕೆ ವಂದ ಗಂಟೆಗೆ ದೊಡ್ಡ ಊಟ ಮಾಡಿ ರಸಬಾಳಿ ಹೆಣ್ಣಿನ ಸೋಜ್ ಮಾಡ್ಬೇಕು. ನಾ ಅದ್ರ ಸರೂರಿಗೂ ಬಡ್ಸಬೇಕು” ಹೇಳ್ತು. ರಸಬಾಳಿ ಹಣ್ಣಿನ ತಂದ ಬಡ್ಸೂಕೆ ಹೋಯ್ತು ಇದು. ಈ ಹುಡುಗನೂ ಹೋಗಿದ್ದ. ದನ ಕಾಯು ಹುಡ್ಗ. ಅವಗೆ ಬಡ್ಸೂಕೆ ಹೋತ್ನೂ ಅವ ಆ ಹುಡುಗಿ ಮುಂಗೈ ಹಿಡ್ದ್‌ಬಿಟ್ಟ. ಆವಾಗೆ ದೊಡ್ ಗಲಾಟೆ ಬಿದ್ ಹೋಯ್ತು. ಅರಸು ಹೆಂಡ್ತಿ ಮುಂಗೈ ಹಿಡ್ದ ದನು ಕಾವ ಹುಡ್ಗ ಅಂದೆ ಹೇಳಿ.

ಆವಾಗ ಅವ ಅಣ್ಣಗೆ ಹೇಳ್ದ. ನೀ ಮಾಡದ್ದ ಎಲ್ಲ ತಪ್ಪು ಹೇಳ್ದ. ತಾಯಿ ಕೂಟ್ ದುಡ್ನ ಪೊಟ್ಟಣ ಯಲ್ ಹೊಪ್ದಾರೂ ಅವ ತಟ್ಕು ಹೋತ. ಕರ್ಚು ಮಾಡ್ಲಿಲ್ಲ. ಆವಾಗಿನ ಸುಮ್ಗ ಉಳ್ಕಂಡ. ಅವನ ಹಿಂಡ್ತಿ ತಕಂಡಿ ಅಜ್‌ಮುದ್ಕಿ ಮನಿಗೆ ಬಂದು ಅಣ್ಣಲ್ಲಿ ತಮ್ಮಿಲ್ಲಿ ಉಳ್ಕಂಡ್ರು.

 ಹೇಳಿದವರು

ಕನ್ನೆ ಗೋವಿಂದ ಪಟಗಾರ,
ಮಾಸೂರು