ರಾಜ ಅಣ್ಣ- ತಮ್ಮ ಹಿರಿಯಣ್ಣ ರಾಜ್ಯ ಆಳಿದ. ತಮ್ಮನಿಗೆ ಒಂದೆ ಹುಡಗಿ ವಂದ ಹುಡಗ. ರಾಜ್ಯ ಆಳುವಾಗ ಅಣ್ಣ ತಮ್ಮ ಕಲ ಬಂದಿ ಅರಸು ತಮ್ಮನ ಬೇರೆ ಹಾಕಿ ಹಿರಿ ಅರಸು ರಾಜ್ಯ ಆಳ್ದ. ತಮ್ಮ, ಹೆಂಡತಿ ಕೊದ್ರಿ ಕೊಟಗಿಲಿ ಉಳಕೊಂಡ್ರು. ಹಿರಿ ಅರಸು ಹುಡಗ ಲಗ್ನ ಪ್ರಾಯಕ ಬಂದ. ವಿದ್ಯಾ ಬುದ್ದಿ ಕಲಿಸಿ ಪರದಾನಿ ಕರೆದು “ಹುಡ್ಗ ಲಗ್ನ ಪ್ರಾಯಕ ಬಂದಾನೆ. ಚಲೋ ಅರಸತನದಲಿ ಹೋಗಿ ಹೆಣ್ ಕೇಳ್ಕ ಬರಬೇಕು” ಹೇಳಿ ಹೋದ. ಪರದಾನಿ ಹತ್ ಗಂಟೆಗೆ ತಯಾರಾಗಿ ಬಂದ.

ಹೆಣ್ ಕೇಳೂಕೆ ಹೋಗಲಿಕ್ಕೆ ಜರಿಕೋಟು, ರುಮಾಲು, (ಹಾಕಿಕೊಂಡು) ಬಂದ ಅರಸು ಹೇಳ್ದ “ಚಲೋ ಅರಸತನದಲ್ಲೇ ಹೆಣ್ಣು ನೆಂಟಸ್ತನ ಮಾಡಕಂಡ ಬರಬೇಕು” ಅಂದ. ಹನ್ನೊಂದ ಗಂಟೆ ಆಗ್ತಾ ಬಂತು. ಕರ್ಚಿಗೆ ತಕಂಡಿ ಹೋದ. ಅರಸು ಹುಡ್ಗ ಬಂದ. ಯಾವಲ್ಲಿಗೆ ಹೋಗತೆ ಕೇಳಿದ. ಪರದಾನಿ ಹೇಳಿದ. “ತಂದೆಯವರು ಹೆಣ್ ಕೇಳ್ಕಂಬಾ ಅಂದ್ರ, ಹೋಗ್ತೆ” ಅಂದ ಹುಡಗ ‘ಅಡ್ಡಿಲ್ಲ. ನನ್ನಂತೆ ರೂಪದಲ್ಲಿದ್ದ ಹೆಣ್ಣು ಬೇಕು’ ಹೇಳಿ ತನ್ನ ಪೋಟನ ಕೊಟ್ಟ. ಪರದಾನಿ ಫೋಟೋ ತಕಂಡಿ ಅರಸತನ ಹೊಕ್ದ. ಹೆಣ್ಣದೆ. ಅರಸು ಹುಡುಗನ ರೂಪದಲ್ಲಿಲ್ಲ. ಹೆಣ್ಣು ಅರಸು ಹುಡಗಗೆ ಯೋಗ್ಯಾದ್ದಲ್ಲಿ ಹೆಣ್ಣು ಲಾಗೂ ಇಲ್ಲ ಹೇಳ್ದಿ ಬೇರೆ ರಾಜ್ಯಸ್ತಾನಕ್ಕೆ ಹೋದ. ಅಲ್ಲೂ ಯಯ್ಡ ಜನ. ಪೋಟಿನ ಶರಿ ಇಲ್ಲ. ಏನೂ ತಾಳಿ ಇಲ್ಲ. “ಅಪಾ, ಹೆಣ್ ಕೇಳೂಕೆ ಬಂದವ. ಏನು ಮಾತಾಡುದಿಲ್ಲ.” ಅಂದ್ರ. ರೂಪ ಅರಸು ಹುಡಗಗೇ ಸರಿ ಇಲ್ಲ. ಅದ್ಕೆ ಮಾತಾಡ್ಲಿಲ್ಲ ಅಂದು ಹೊರಟ.

ದಾರೀಲಿ ಬಿಸಿಲು ನಡೀನಾರ ಹೇಳಿ ಅಸ್ವತ ಕಟ್ಟಿ ಮೇಲೆ ಹೋಗಿ ಕೂತ. ಬೇರೆ ರಾಜಸ್ತಾನದ ಪರದಾನಿ ಹೆಣ್ಣಿನ ಪೋಟ ತಕಂಡೆ ಬಂದ. ಅವನೂ ಅದೇ ಕಟ್ಟಿ ಮೇಲೆ ತಂಪ್ ಮಾಡ್ಕ ಹೋಗ್ವ ಹೇಳಿ ಕೂತ. ‘ನೀ ಯೆಲ್ಗೆ ಹೊಗಾಕ ಬಂದಿದ್ಯಪ್ಪ?’ “ನಮ್ಮ ಅರಸು ಹುಡ್ಗಿ ನನ್ನಂತೆ ರೂಪದಲ್ಲಿದ ಗಂಡ ಕೇಳ ಬಾ ಹೇಳ್ತು” ಅಂದ, ತಾನೂ “ಅರಸು ಹುಡ್ಗ ನನ್ನಂತೆ ರೂಪದಲ್ಲಿದ್ದ ಹೆಣ್ಣು ಬೇಕು ಹೇಳಿ ತನ್ನ ಪೋಟನ ಕೊಟ್ಟ” ಅಂದ.

ಯೆಯ್ಡೂ ಪೋಟ ಶರಿ ಬತ್ತದೆ. ಇನ್ನೆಲ್ಲೂ ಹುಡ್ಕೂಕೆ ಹೊಗೂದ ಬೇಡ. ಶರಿಯದೆ. ನಿಕ್ಕಿ ಮಾಡ್ಕ ಹೊಗೂದ ಲಾಯ್‌ಕು ಹೇಳಿ “ಇಂದ ಬೆರಸ್ತಾರ, ಇನ್ನೊಂದು ಬೆರಸ್ತಾರ ನಾವು ದೆಬಣ ತಕಂಡ ಬತ್ರು” ಹೇಳಿ ಹೇಳ್ದ. ನಾವು ಯೆಲ್ಲಾ ತಯಾರಿ ಮಾಡ್ಕಂತ್ರು ಹೇಳಿ ಹೆಣ್ಣಿನ ಪರದಾನಿ ಹೇಳ್ದ. ಪೋಟೋ ತಕಂಡೆ ಹೋದ್ರು.

ಅರಸನ ಮನೆಗೆ ಹೋಗಿ ನಿಕ್ಕಿಯಾಗಿ ಬಂದ ತೆಳಿಸಿದ. ಅಡ್ಡಿಲ್ಲ ಅಂದ್ರು. ಬೆರಸ್ತಾರ ದೊಳಗೇಯ ಗಂಡಿನ ತಂದೆ ತೀರ್ಕ ಬಿಟ್ಟ. ಆವಾಗೆ ತಿಳಿಸಿರು ಕಾಗ್ದದ ಮೇನೆ. ಈಗ ಹಾಲಿ ನಗ್ನಕೆ ಬರೂಕಾಗುದಿಲ್ಲ. ಹೇಳಿ ಪರದಾನಿ ತಿಳಿಸಿದ. ಜಂಬರಯೆಲ್ಲ ತೀರಿದ ಮೇಲೆ ನಮ್ಮ ಯೇನ ಮಾಡಿದ? ಅಣ್ಣ ತೀರ ಹೋದ್ದಕ್ಕನೆ ತನ್ನ ಮಗನಿಗೆ ನನ್ನ ಮಾಡ್ಕಂಡೆ ಬರ್ವ ಹೇಳಿ ಹೆಣ್ಣಿನವರ ಮನೆಗೆ ಹೆರಯವನ ಪೈಕಿ ಹೇಳೇ ತಿಳಿಸಿ ದಿಬ್ಬಣ ತಕಂಡೆ ಹೋದ.

ಕಿರಿಯ ಅರಸು ಹುಡಗ “ತನ್ಗೆ ಲಗ್ನ ಮಾಡೂ ಹೆಣ್ಣಾಗಿತಲ್ವೊ? ನಾ ತಮ್ಮನ ಲಗ್ನ ದೆಬ್ಬಣಕೆ ಹೋಗ್ತೆ” ಅಂದ. ಇವ ಹೋದ್ರೆ ನನ್ನ ಮಗನಿಗೆ ವಂದ ಬಾದ್ಕ ಬರೂದು ಹೇಳಿ ಕೋಣೀಲ್ ಹಾಕಿ ಕದ ಹಾಕ್ದ.

ಯೆಯ್ಡ ಮಾಡಿದ ಮನೆಯಾಗಿತ್ತು. ಅಟ್ಟ ಹತ್ತಿ ಬಂದ ಮಾಡಿದ ಬದಿನ ಹಂಚ ತೆಗೆದು ತಾಯಿಗೆ ಗೊತ್ತಿಲ್ಲದೆ ಹಾಗೆ ಗುದ್ಕಿ ಓಡಿದ.

ಪರದಾನಿ ತಾನು ಹೆಣಿ ಕೇಳ್ದವ ದಾರೀಲಿ ಬಂದ ನಿಂತಿದ್ದು ಕರೆದ. “ಓ ಅರಸುಗೋಳ್ಯಾ ಹೇಳಿ ಕರ್ದ. ಉಟ್ಟ ಪಂಜಿ, ಅಂಗಿ ಮಾತ್ರ, ಬಡತನ.

ಮೂರೇ ಮಾತಾಡಿ ಹೋಗಿ ಅಂದ ಪರದಾನಿ. ಮನಿಗೆ ಕರ್ಕ ಹೋಗಿ ಹೊಸ ಕೋಟು, ತಪ್ಪಿ, ಕುದ್ರಿ, ಕೈಲೊಂದು ಪಟ ಕೊಟ್ಟ. ಕೊದ್ರಿಯೇರಿ ಹೋದ. “ಲಗ್ನಕೆ ಹೋಗಿ ನಾನು ನಿಮ್ಮಂತೆ ರೂಪದ ಹೆಣ್ಣ ನಿಕ್ಕಿ ಮಾಡಿದೆ. ಹೋದ್ರೆ ಎಚ್ಚರಿಕಿಯಿಂದ ಕೆಲಸ ಮಾಡ್ಕ ಬರಬೇಕು. ಹೇಳಿ ಕಳಿಸಿದ. ಬುದ್ದಿಯಿದ್ರೆ ಯೆದ್ ಕುತ್ಕಂಬೇಕು” ಎಂದ.

ಅರಸು ಹುಡಗ ಆಲೋಚ್ನೆ ಮಾಡಿದ. ಬನಾವಟಿ ಮುಂದೆ ಹೋದ್ರೆ ಏನ್ ಮಾಡಲಿ? ದೆಬ್‌ಣ ಹೋಗಿ ನಿಂತಿದೆ. ಇವ ಊರ ಮುಂದೆ ಉಳಿದ. ಅರಸು ಹುಡ್ಗಿಗೆ ಅಜ್‌ಮುದಕಿ ಹೂಗೆ ಕಟ್ಕ ಹೋತಿತು. ಹಿಂದಾಗೋಗದೆ ಓಡ್ತದೆ. ಕರೆದ “ಬಾ”. ಅದು ಬಯ್ದು ಬಿಡುರು ತಡಾಯ್ತು. ಇದೇ ಮಾತದೆ ನಿಲ್ಲು ಹೇಳಿ ಕಾಗತ ಬರೆದ. ನಿನ್ನಂತೆ ರೂಪದ ಹುಡಗನ ಮದುವೆಯಾಗಬೇಕು. ಹೇಳಿದ್ರೆ ಕಟ್ಟಿಮೇಲೆ ಕುಂತನೆ. ಅಪ್ಪಚ್ಚಿ ಹುಡ್ಗ ಚೆಂದಿಲ್ಲ. ಅವ ದೆಬ್ಣ ತಕಂಡ ಬಂದನೆ ಹೇಳಿ ಬರುವ ಅಜ್ಜವ್ವಗೆ ಆ ಹುಡಗಿ ಹತ್ರೆ ಚೀಟಿ ಕೊಡು. ಬೇರೆ ಯಾರ ಹತ್ರ ಕೊಟ್ರೆ ಘಾತ ಮಾಡ್ದ ಹಾಗೆ ಅಂದ.

ಅದು ಮೇನ್ ಹೋಯ್ತು. ಚೀಟಿ ಕೊಟ್ಟರೆ ಅರಸು ಹುಡ್ಗ. ಬಾಳ ಚಂದಾಗವ್ರೆ, ಚೀಟಿ ವೊತ್ತು. ಇವನಿಗೆ ನಾ ಲಗ್ನಾಗೂ ಹಾಂಗಿಲ್ಲ ಹೇಳಿ ಅಪ್ಪನ ಪೈರಣ. ದೋತ್ರ ಹಾಕ್ತು. ಮಸಿ ಮೀಸೆ ಬಡ್ಕಂಡ್ತು. ತಲೆಗೆ ಟೊಪ್ಪಿ ಹಾಕ್ತು. ಕೆಳಗೆ ಬಂತು. ಕೊದ್ರಿ ಸಾಲಿಗ ಬಂತು. ಕೊದ್ರಿ ಹತ್ತು ಅಂಗಳ ದಾರೀಲೆ ಮದ್ಯದಾಗ ಕೊಡ್ರಿ ಹಾರಸಕಂಡ ಬಂತು. ದೆಬ್ಬಣ ಜನ ಯಾವೂರ್ ಪರದಾನಿ ಅರಸೂ ಹುಡ್ಗ ದಿಬ್ಬಣ ಸದ್ದಿಲ್ಲದೇ ಹಾರ್ಸಕಂಡ್‌ಹೋದ ಅಂದ.

ಕಟ್ಟಿ ಮೇಲಿದ್ದವ ತನ್ ಹತ್ರ ಮಾಡೂಕೆ ಬಂದ ಹೇಳಿ ಜೀವದ ಕಂಗಾಲಾಗಿ ಕುದ್ರಿ ಓಡ್ಸಕಂಡ್ ಬಂದ. ಇದೂ ಕೊದ್ರಿ ಹಾರಸತು. ಹುಡಗಿ ಹೇಳ್ತು. ಕುದ್ರಿ ನಿಲ್ಸಿ ಹೇಳ್ತೇ ಕೊದ್ರಿ ಹಾರ್ಸದೆ. ಕುದ್ರಿ ಹತ್ ಹಾರಸವವ ಬೇರೆ ರಸ್ತಿ ಹತ್ತರ ಹೋಗ್ತ. ಹಳ್ಳ ಶಿಕ್ತು. ಹಳ್ಳ ತೆಪ್ಪ ಕಟ್ಟಿರು. ಕೊದ್ರಿ ಯೇರಿಸಕಂಡ ದಾಟೇ ಬಿಟ್ಟ. ಆವಾಗೆ “ನಾ ನಿಮ್ಗೆ ಲಗ್ನ ಮಾಡ್ಕಬೇಕು ಹೇಳಿ ಬಂದವ್ಳು. ಹೆಂಗ್ಸೇಯ. ತೆಪ್ಪ ದೂಡು ಬತ್ತೆ” ಹೇಳ್ತದೆ.

“ನನ್ನ ಲಗ್ನ ಮಾಡೂಕೆ ಬಂದವ್ನೇಯ ಅಂದೆಯಲ್ಲ? ನನ್ ಪರಿಸ್ಥಿತಿ ಹಾಳಾಗೂದು ಬಿಟ್ ಹೋದ್ರೆ” ಅಂತು.

“ಹೆಂಗಸಾದ್ರೆ ಕೈಯೊಳಗಿನ ಪಟ ಈಚೆ ಬದಿವಗಿ” ಹೇಳ್ದ. ತೆಪ್ಪ ದೂಡುಕಟ್ಟಿಲ್ಲ ಹೇಳ್ದ. ಅದು ವಗೀತು. ಅವನ ಹತ್ತಿರ ಯೆಯ್ಡ ಪಟ ಅಯ್ತಲ್ವೊ? ತೆಪ್ಪ ಈಚಿ ದೂಡ್ ಹಾಕ್ದ. ಇದು ತೆಪ್ಪ ಕೊದ್ರಿ ಹಾರ್ಸಕಂಡಿ ದಾಟಿ ಹೋಯ್ತು. ಅವನಿಗೇ ಮತ್ತು ಸಂಸಿಯೇವ; ಮತ್ತೂ; ಗಂಡಸು ಹೇಳುದೆ ಬಾವ್ನಿ. “ನೀನೇ ಮುಂದಾಗು” ಅಂದ.

ಆ ಹೆಂಗಸು ಸ್ವಲ್ಪ ಕೊದ್ರಿ ನಲ್ಸಿ ಅಂತು. ಮರದ ಮರ ಸಲಿಗೆ ಹೋಗಿ ಪಟ ಕಚ್ಚಿ ವಂದ ಪೈರಣ, ಕೋಟು ತೆಗೆದು ಪೊಟ್ಟಣ ಕಟ್ಟಿ ಸೀರೆ ಮೇಲೆ (ಉಳಿತು). ಆವಾಗೆ ಖಾತ್ರಿಯಾಯ್ತು. ಖುಷಿಯಾದ. ಊರಪದ ತಪಹೋಗ ಬಿಟ್ಟದೆ. ಹೋಗ್ತ ಹೋಗ್ತ ಬಾಳಟ್ಟು ಅರಸು ಹುಡ್ಗನಿಗೆ ಆಶ್ರ ಆಗೋಯ್ತು. ಅರಸು ಹುಡ್ಗಿ ಹತ್ರ ಹೇಳ್ದ. ಕುದ್ರಿ ಹಾರಸಕ ಬರ್ತಾ ಅಡವೀಲೆ ಮನೆ ಕಂಡ್ತು. ನೀರ್ ಕುಡ್ದ ಹೋಗ್ವ ಹೇಳುವರಿಗೆ ಮನೆಯಲ್ಲಿ ಅಜ್ಜಿ ಮುದ್ಕಿ ಏಳು ಜನ ಗಂಡು ಮಕ್ಕಳು, ಕಳ್ಳರು, ಅಜ್ಜಿ ಮುದ್ಕಿ “ಬಿಸಿಲಾಗದೆ ತತ್ತೆ” ಹೇಳಿ ಅಜ್ಜಿ ಮುದ್ಕಿ ಮನೆ ಬಂತು. ಹುಡುಗರು ಊಟಕೆ ಬರೂ ಹೊತ್ತಾಯ್ತು. ಈ ಹುಡಗಿ ವೊಳ್ ಮಾಡ್ಕಬೇಕು. ಹುಡುಗರು ಅವರ್ನ ಕೊಂದ ಹಾಕ್ತರೆ ಹೆಳಿ ತಡಮಾಡ್ತು.

“ಸ್ವಾಮಿ ಆಶರಾದ್ರೆ ಮುಂದೆ ಯೆಲ್ಲಾರೂ ಸಿಕ್ಕೂದು. ಕೊದ್ರಿ ಹತ್ತಿ” ಹೇಳ ಗಂಡನ ಕೊದ್ರಿ ಹತ್ತಿಸಿಕೊಂಡ ಹೋಯ್ತು. ಯೇಳ್ ಜನರೂ ಕಳೂಕೆ ಹೋದೋರ್ ಬಂದ್ರು. “ಮಕ್ಕಳಿರಾ ಯೆಲ್ಗೆ ಹೋಗಿರಿ? ಎರಡು ಜನ ಆಶ್ರ ಕುಡೂಕೆ ಬಂದಿರು”. ಎಲ್ಗೆ ಹೋಗಿರಿ? ಅರ್ದ ಮೈಲು ಹೋಗಿರುರು. ಹೀಗೆ ಹೋಗಿ ಹೇಳಿ ಮಕ್ಕಳ ಹತ್ರ ಹೇಳ್ತು.

ಕಳ್ಳರು ಯೇಯ್ಡು ಜನರು ರಸ್ತೆಯಲ್ಲಿ ಹೋಗ್ ಒಳರಸ್ತೀಲೆ ಹೋದ್ರು. ಅದು ಹಿಂತಿರುಗಿ ನೋಡ್ತ ಕುದ್ರಿ ಹಾರ್ಸುತಿತ್ತು.

ಇವರು ರಸ್ತೆಗೆ ಬಿದ್ದು ಕಾಲು ದಾರೀಲಿ ವೋಡಿ ಬತ್ತಾರೆ. ಪರ್ಲಾಂಗ್ ಹಿಂದವ್ರೆ. “ಇವರು ಕೊಲ್ತಾರೆ. ನನ್ಗೆ ಯೇನೂ ಮಾಡೂದಿಲ್ಲ.” ಹೇಳಿ ಅರಸು ಹುಡ್ಗನ ಹತ್ರ ಹೇಳ್ತು. “ನೀವು ಮುಂದೆ ಹೋಗಿ. ಇಲ್ಲದಿದ್ರೆ ಪರಿಣಾಮಿಲ್ಲ. ನಿಮ್ಗೆ ಲಗ್ನಾಗು ಯೋಗವಿದ್ರೆ ನಾ ನಿಮಗೆ ಶಿಕವೆ” ಹೇಳಿ ಅವನ್ನ ಕಳ್ಸಿತು.

ಏಳು ಜನರೂ ಹೋಗಿ ಹುಡ್ಗಿ ಹಿಡಿದರು. ಒಬ್ಬ ತನ್ ಹೆಂಡ್ತಿ ಒಬ್ಬ ತನ್ ಹೆಂಡ್ತಿ ಹೇಳ್ತ. ಯೇಳು ಜನ ನನ್ನ ಹೆಂಡ್ತಿ, ತನ್ ಹೆಂಡ್ತಿ ಹೇಳದ್ರೆ ಕೇಳೂದಿಲ್ಲ.

“ಶಪತ್ ಮಾಡ್ತೆ. ಅದರ ಮಾಡಿದವನ್ನ ನಾ ಲಗ್ನಾಗ್ತೆ” ಅಂತು.

ಕೆರಿಲಿ ತಾವರಿ ಹೂ ನೋಡಿತ್ತು ಬರವಾಗ. ಆ ಕೆರಿಗೆ ಅವರ ಕರಕಂಡ್ ಹೋಯ್ತು. ಹುಡ್ಗಿ ಏಳು ಜನ ಇದ್ರಲ್ವೋ ತಾವರಿಗೂಗು ಅವೆ ನೆಡೂಗೆ ನಾನು ವಂದ, ಯೆಯ್ಡ್, ಮೂರ್ ಅಂತೆ. ಮೂರ್ ಹೇಳ್ದ ಕೂಡ್ಲೆ ಏಳು ಜನ ಕೆರೀಲಿ ಬೀಳಬೇಕು. ಆ ತಾವರಿ ಹೂದ ಯಾರು ಬೇಗ ಕೊಯ್ಕ ಬಂದು ಮುಡಿಸಿದರೋ ಅವನನ್ನ ಗಂಡ ಅಂತು. ವಂದು ಎರಡು ಮೂರು ಅಂತು. ಏಳು ಜನರು ಕೆರೀಲಿ ಬಿದ್ರು.

ಅವರ ಅಂಬು ಬಿಲ್ಲು ಮೇನಿಟ್ಟಿದ್ದು, ಒಬ್ಬೊಬ್ರು ಮುಳ್ಕಿ ಯೆದ್ದ್ ಕೂಡ್ಲೆ ಒಬ್ಬೊಬ್ಬರ ಅಂಬು ಬಿಲ್ಲು ಹೊಡೆದು ಆರು ಜನರ ತಲಿ ಕತ್ತರಿಸಿತು. “ಏಳ ಬೇಕಾದ್ರೆ ಆರ್ ಜನರ ಒಬ್ಬರದೂ ಸಪಳವಿಲ್ಲ” ಹೇಳಿ, ದೆಡದ ಬದಿಗಿದ್ದ ಮುಖ ಮಾಡಿ ಎದ್ದ. ಅದು ಅವಗೆ ಹೊಡೂಕೆ ತಯಾರ ಮಾಡಬೇಕಿದ್ರೆ ಕೆರಿ ಒಳಗೆ ಮುಳಕಿದ. ವಂದ್ ಹಗಲು, ವಂದ್ ರಾತ್ರಿ ಅವನ್ನ ಹೊಡಿಲಿಕ್ಕೆ ಬರಬೇಕು ಹೇಳಿ ಕುಂತಿತ್ತು. ಅವ ಏಳಲೇಯಿಲ್ಲ. ಏನ್ ಮಾಡೂದು ಹೇಳಿ ಹುಡ್ಗಿ ಅಂಬುಬಿಲ್ ಅಲ್ಲೇ ಹೊತಾಕ್ತು. ಕೊದ್ರಿ ಹತ್ತಿ ಬಂದ್ ಬಿಡ್ತು.

ಅರಸು ಹುಡಗ, ರಸ್ತೆ ಬದಿ ಕಾಳಿಕಾದೇವಿ ಮನಿ ಇತ್ತು. ಪುಣ್ಯಾತ್ಮರು ಹೋದ್ರೆ ಕೈಯಿಟ್ದಲ್ಲೇ ಬಾಗ್ಲು. ಪಾಪಿಗಳಾದರೆ ಎಲ್ಲೂ ಬಾಗ್ಲೇಯಲ್ಲ. ದೇವಸ್ಥಾನದೊಳಗೆ ಅವ ಹೋದ. ಅದು ಹೋಗಿ ಅಲ್ಲೇ ಉಳಿತು. ಸಂಜ್ಯಾಗಿ ಹೋಯ್ತು.

ಕಳ್ಳ ತಾಸೊತ್ತಿರುವಾಗ ನೋಡಿದ. ಅದು ಯಲ್ಲ. ಅಂಬು ಬಿಲ್ಲು ಹಿಡಕಂಡಿ ತಾವರಿ ಹೂ ಕೆಯ್ಕಂಡಿ ಹೆಜ್ಜೆ ನೆನಪಿನ ಮೇಲೆ ನೆಡದಿ ಬಂದಿ ಯೆಯ್ಡು ತಾಸು ಮೂರು ತಾಸು ರಾತ್ರಿ ಕೂಡಿ “ಈ ದೇವಸ್ಥಾನದವರೆಗೆ ಹೆಜ್ಜೆ, ಅದು ಮುಂದೆ ಯಲ್ಲ”, ಹೇಳಿ ಅಲ್ಲೇ ನಿಂತ.

ಅವ ಕಿಟಕಿಲಿ ಅವರ ನೋಡಿದ. ಕಿಡಕಿಲಿ ಹುಡಗಿ ನೋಡಿತು. ಮೋಸಾಯ್ತು ಅಂಬುವಿಲ್ಲು ಬಿಟ್ ಬಂದದ್ ತಪ್ಪಾಯ್ತು ಹೇಳಿ ರಾತ್ರಿ ಅರಸು ಹುಡ್ಗನ ಮರಿ ಮಾಡಿ ಮನಗಿತ್ತು. ಹೊಡುಕಾಗೊದಿಲ್ಲ. ದೇವಸ್ಥಾನದ ಒಳಗ ಹೋಗೂಕೆ ಅವನಿಗೆ ಬಾಗಿಲಿಲ್ಲ. ಆರು ಜನ ಬಾವದಿಕ್ಳ ಅವ್ರೆ. ಅವ್ರ ಕರಕಂಬಂದಿ ಹಂಚ ತೆಗೆದು ಕೆಳಗಿಳಿದು ಇವಳನ್ನ ಕರಕಂಡ್ ಹೋಬೇಕು. ಹೇಳಿ ಬಾವದಿಕ್ಳ ಮನೆಗೋದ ಏಳಿಸಿದ.

ಚಲೋ ಗಂಡಿದ್ದ ಮನಿ ನೋಡ್ಕ ಬಂದಿದ್ದೆ ಏಳಿ ಹೇಳ್ದ. ಅವರನ್ನು ಕರಕಂಬಂದ. ಏಳು ಜನರೂ ಗುಣಗತ ಬರುತಿದ್ರು. ಅವಳಿಗೆ ಕೇಳಿತು. ಆರು ಜನರೂ ಹಂಚ್ ತೆಗೇತಿದ್ರು. ಕೇಳ್ತು ಅದು. ಅರಸು ಹುಡಗನಿಗೆ ನಿದ್ರೆ ಬಂದಿತ್ತು. ಅಟ್ಟ ಹತ್ತ್‌ತು. ಪಟ ಹಿಡಕಂಡಿ ಮರಿಗೆ ನಿತ್ತು.

ಕಿರಿಕಳ್ಳ ಬಾವದಿರನ್ನೇ ಇಳಿಸದ. ಆವಾಗ ಆವಾಗ ತಲೆಕೆಳಗೆ ಕೊಟ್ಟ ಕೂಡಲೇ ಕಚ್ಚನೆ ಕಡಿದು ಕೆಳಗೇ ಕಡಿಯಿತು. ಆರೂ ಜನ ಭಾವದಿರ ಕಡಿತು. ಅವ ಇಳೂಕೆ ಹೋದವ ಆರೂ ಜನ ಬಾವದಿರು “ಶಪ್ಳಯಲ್ಲಾ, ಮೋಸಾಯ್ತು” ಹೇಳಿ ಇಳಿಲೇ ಯಲ್ಲ.

ಇವ ಇಳಿದಿ ಬಂದ್ ಕಿಟಕಲಿ ಅಂಬು ಬಿಲ್ ಇಟ್ಟು ಅರಸು ಹುಡಗಗೆ ಬಾಣ ಬಿಟ್ಟು ಅರಸು ಹುಡಗನ ಹೊಡೆದು ಕೊಂಡ. ಎದಿಮೇಲೆ ಬಾಣ,

ಅರ್ಧ ತಾಸಿನ ಮೇಲೆ ಅದು ಇಳಿದು ಬಂದು ನೋಡಿತು. ಬೆಳಗಾಗುತ್ಲೂ ಅರಸು ಹುಡ್ಗನ ಎದಿ ಬಾಣ ತೆಗಿದೇ ಹಾಸ್ಲಿ ಮುಡ್ಸಿನಿಲ್ಸಿ ಅವನಿಗೆ ಕಾಣದಿದ್ದ ಹಾಗೆ ಮಡ್ಲಲಿ ಪಟ ಹಾಯ್ಕಂಡ್ತು.

ಹೊರಬಿದ್ ಬಂತು. ಕಳ್ಳ ನೆಗೆಯಾಡತ ಬಂದ. ನಿನ್ ಕೈವಸಾದೆ ನಾನು. ನೆಡಿ ನಿಮ್ಮನಿಗೆ ಅಂತು. ಕಳ್ಳಗೆ “ಅದರ ಬರವಸಿಲ್ಲ. ನೀನೇ ಮುಂದಾಗು” ಅಂದ. ಅದು ನೀನೇ ಅಂತು. ಅವ ಕೇಳ್ಳಿಲ್ಲ. ಅದೇ ಮುಂದಾಗಿ ಬರುದರೊಳಗೆ ಊರು ಬಂತು.

ಈಗ ಊರು ಬಂತು. ನೋಡಿದೋರು ಹೆಂಡ್ತಿ ಮುಂದೆ ಮಾಡ್ಕಂಡು ಗಂಡ ಹಿಂದೆ ಬತ್ತನೆ ಹೇಳಿ ನೆಗೆಯಾಡೂರು. ಹೇಳಿ ಈಗಾರೂ ನೀ ಮುಂದಾಗು ಅಂತು ಕಳ್ಳನ ಹತ್ತರ. ಅವನಿಗೆ ಹೌದಂಬುಕ ಹಣಕತು. ಅವ ಮುಂದಾಗಿ ನಾಲ್ಕು ಹೆಜ್ಜೆ ಕೀಳುರೊಳಗೆ ಮಡ್ಲ ಪಟ ತೆಕಂಡಿ ಅವನ ಕಡಿದು ಕೆಡಗಿತು.

ಪರತ್ ಬರೂ ಮೊದಲೇ ಕಡ್ಡಿ, ಕಾಯಿ, ಕರ್ಪೂರ ಯಲ್ಲ ಪೇಟಿಂದ (ಬಾಳಿಹಣ್ಣು) ತಕಂಡಿ ದೇವಸ್ಥಾನದಲ್ಲಿ ಬಂತು. ದೇವರಿಗೆ ಮೀಶಿ ಹೊಗ್ಗಂದ ಮಾಡಿ ಆರತಿ ಮಾಡಿ ಒಲುವಂಗೆ ಬಕ್ತಿಂದ ಶೇವಿ ಮಾಡ್ತು. ಕಾಳ್ಯಾದೇವಿ ಮೆಚ್ಚಿತು. “ಏನು ಬೇಕು ಬೇಡ್ಕ” ಹೇಳ್ತು. “ತನಗೇ ಐಶ್ವರ್ಯ ಬೇಡ, ನನ್ ಗಂಡನ ಜೀವ ಹೋಗಿ ನಿನ್ ಜಾಗ್ದಲ್ಲಿಗೇ ಅವ್ನೆ. ಅವನಿಗೆ ಜೀವ ಬರುದ ಹಾಗೆ ಮಾಡು ಅಂತು.” “ಅಡ್ಡಿಲ್ಲ ಅವನ ಎದಿ ಅಂಬು ಶೊಗಿದಿ ನನ್ನ ತೀರ್ತ ಹಾಕು. ನೆದ್ರೆ ಬಂದು ಎದ್ದವನ ಹಾಗೆ ಏಳ್ತಾನೆ” ಅಂತು.

ಹಾಗೆ ಮಾಡ್ತು. ಅವನಿಗೆ ಜೀವಾಯ್ತು. ಹೊರಟರು. ದಡ್ಡ ಊರು, ಪೇಟಿಶಾರು. ಅರಸು ಹುಡ್ಗನ ಹತ್ರೆ ಕಟ್ಟಿ ಮೇಲೆ ಹೇಳ್ತು. “ನಾನು ದುಡ್ ಕೊಡ್ತೆ. ಊಟದ ಸಾಮಗ್ರಿ ತಕಂಡೆ ಬನಿ” ಹೇಳಿ ಕಳಸತ್ತು. “ಲಗು ಬನ್ನಿ ನಾ ಹೆಂಗ್ಸು” ಹೇಳ್ತು. ಗಂಡ ಹೋದ. ಅಲ್ಲಿ ಎಷ್ಟು ಅಂಗಡಿಯಿದೆ ಅಷ್ಟೇ ಅಂಗಡಿಗೆ ಹೋತನೆ. ತಕಳದೆ ಹೆರಬಿದ್ ಬಂದ ಬಡ್ತನೆ. ಹೊಲಿತಾ ಅಜ್ಜಿ ಮುದ್ಕಿ ಇತ್ತು. ಅದು “ಇವ ಎಲ್ಲಿ ಮನ್ಸ?” ಹೇಳಿ ರೋಮ ಕಿತ್ಕಂಡ ಕುರಿಯಾಗಿ ಹೋಗಲಿ ಹೇಳ ಹೊತಾಕ್ತು. ಅರಸು ಹುಡ್ಗ ಕುರಿಯಾಗಿ ಬ್ಯಾಗಡಿತ್ವೆ. ಹಗ್ಗ ಹಾಕಿ ಕಟ್ಕಂಡ್ತು ಕೊಟ್ಗಲಿ ಅಂಗಡೀಲಿ.

ಅರಸು ಹುಡಗಿ ಬೆಳಗಾಗುವರೆಗೆ ನೋಡ್ತು. ಅರಸು ಹುಡಗ ಬರಲಿಲ್ಲ. ಕೈಕಾಲ ಮಾತ್ರ ತೊಳಕಂಡಿ “ಏನು ಕಷ್ಟ ಬಂತಪ್ಪಾ ಇನ್ನೂ ಬರಲಿಲ್ಲ” ಹೇಳಿ ಗಂಡು ಡ್ರೆಸ್ ಹಾಕ್ಕಂಡ್ತು ಇದು. ಪರಕಾಳಿ ಉಟ್ಟಿಕೊಂಡು ಒಡವಿ ಹಾಕಂಡ ಕೊದ್ರಿ ಹತ್ತಿ ಹೋಯ್ತು. ವೋಣೋಣಿ ಹುಡಕತು. ಕುರಿ ಬೇ ಅಂತ ಅಂಗಡಿಲಿ ಕಟಕಂಡದೆ ಬಿಬ್ಬಿ. ಅರಸು ಹುಡಗಿ ಗಂಡು ರೂಪ ಕುರಿ ಅಲ್ ಬಂದ್ ಕೂಡ್ಲೆಯ ಬ್ಯಾ ಅಂತದೆ ಮೂರನೇ ಸಾರಿ. ಅದು ಕುರಿ ನೋಡ್ತು. “ನನ್ನ ಗಂಡನ ಕುರಿ ಮಾಡಿ ಇಟ್ಕಬಿಟ್ಟಿದೆ ಇದು.”

ಅಲ್ಲಿ ಪೇಟೆಯಲ್ಲಿ ದಿವ್ಸ ಗಂಡು ರೂಪ್ದಲ್ಲೇ ಕಳೀತು. ಮೂರನೇ ದಿವ್ಸ ಅರಸು ಮನೆಗೆ ಹೋಯ್ತು. ಅರಸು ಅಶ್ರ ಕುಡ್ಕ ಬಂದ ಕೂತಿದ್ದ. ಸಲಾಂ ಅಂದ. ಯೆಲ್ಲಾಯ್ತು? ದೂರ. ನೌಕರಿ ಸಿಕ್ಕುದೊ? ಕೇಳ್ತು. ಕೊಡ್ತ. ನನ್ಗೆ ಪಗಾರು ಇದ್ದರೆ ಶಾವಿರ, ಕುಂತರೆ ಸಾವಿರ, ಸಲಾಂ ಹೊಡೆದರೆ ಸಾವಿರ. ಹತ್ ಸಾವಿರ ರೂಪಾಯಿ ಕೊಡಬೇಕು ಹೇಳ್ತು. ಅರಸು ಆಲೋಚ್ನಿ ಮಾಡಿದ. ಒಂದು ತಿಂಗಳ ಇಟ್ಕಂಡ ಇವನ ತಲಿ ಬುಯ್ಡಿ ನೋಡಬೇಕು ಅಂತಿ. ನಾನ್ ಹೇಳಿದ ಕೆಲಸಮಾಡಬೇಕು. ಅಂತ. ಅಲ ನಿನ್ನ ಹೆಸರು ಏನು? ಕೊತ್ತಗಲ್ ಶಾಯ್ಬ ಹೇಳ್ತು. ಊರ ಹೊರಗೆ ಬೇರೆ ವಂದ ಬಿಡಾರದಲ್ಲಿರಬೇಕು ಅಂತು. ಊರ ಹೊರಗೆ ಬಿಡಾರ ಮಾಡಿಸಿದ ಅರಸು ಮನೆಗೆ ಹೋಗೂದು ಬರೂದು ಮಾಡ್ತಿದ್ದ. ಕೊತಗಾಲ್ ಶಾಯ್ಬ ಹೋದಾಗ ಯೆರ್ಡ್‌, ಮೂರು ಬಾರಿ ಹೊರಕ್ಕೆ ಕನ್ನಡಿ ಹಿಡ್ದ ಕೆಲ್ಸಿ ಅವೂರ ನೇಮ ಕನ್ನಡಿ ಕೆಲಸ್‌ಇ ಹಿಡದರೆ ಗಂಡಸು ಅವನದಲ್ಲಿ ಚೌರಕೆ ಹೋಗಿ ಕುಳ್ಳಬೇಕು. ಏಳು ಬಾರಿ ಹಿಡಿದನೋಯೆಲ್ವೋ? ಇವರ ಚೌರಕೆ ಹೋಗಲಿಲ್ಲ. ಪತ್ನಿ ಹಿಡ್ದ ಅರಶುಗೊಳ್ರೆ ಕೊತಗಾಲ ಶಾಯ್ಬ ಗಂಡಸಲ್ಲಾ ಹೆಂಗಸು ಅಂದ. ಗಂಡಸು ಅಂದ. ಅರಸು ಹುಶಾರನ್ನೆ ಅಲ್ಲ ಹೆಂಗಸೆಂದು ಅಂದ ಕೆಲಸಿ. “ಹಾಗಾದರೆ ಗಂಡಶಾಲೆ ಮನಿ ಮುಂದೆ ತೆಂಗಿನ ಮರ ಅದ್ಯಲ್ವೋ ಬರೀ ಕಾಲಲ್ಲಿ (ಬಳ್ಳಿ ಹಾಕೂಕಾಗ) ಹತ್ತಿ ಕಾಯ್ ಹಿಂಡ್ಗಿ ಕಡಿದಿ ಹಾಗೇ ಹೊತ್ಕಂಡ್ ಕೆಳಗಿಳಿಸಬೇಕು”. ಹೇಳ್ದ. ಅರಸು ಹೇಳ್ದ. “ಕೊತ್ತಗಾಲ ಶಾಯ್ಬ ಅಷ್ಟೂ ಕೆಲಸ ಮಾಡದರೆ ನಿನಗೇನು ಮಾಡಬೇಕು” ಕೇಳ್ದ. ನನ್ನ ಕೈನೇ ಕಡೀಬೇಕು ಅಂದ.

ಅರಸು ಕೊತಗಾಲ ಶಾಯ್ಬಗೆ ಕಾರ್ಯ ಕಳಿಕೊಟ್ಟಿ.

ಅರಸು ಕರಿಕಳ್ಗದೆ ಬನ್ನಿ ಅಂದ. ಕೊತಗಾಲ ಶಾಯ್ಬ ಬಂದ. ಸಲಾಂ ಅಂದ. ಕುಂತ. ನನ್ನ ಕರೆದದ್ಯಾಕೆ? ಬಾಗಿಲ ಮುಂದೆ ತೆಂಗಿನ ಮರ ಬರೀಲಾಲಲಿ ಹತ್ತಿ ಕಾಯಿ ಹಿಂಡಗಿ ಕೆಡಗಡೆ ಕೈಲಿ ತಕ ಬಾ ಅಂದ. ಕತ್ತಿ ಕೊಡಿ ಅಂದ. ತಕಂಡ ಜಡಾಯಸಿ  ಬರಿ ಕಾಲಲ್ ವಸ್ತ್ರ ತೆಗಿದೆ ಕಾಯ್ ಹಿಂಡ್ಗಿ ಕಡದಿ ಕೆಳಗಿಳಿದು ಅರಸದಲಿ ಕೈಲೇ ಹಿಡದು ತಲೆಮೇಲಿಟ್ಕಂಡು ಬಂದ ಬುಟ್ತೂ ಮೂರು ಸಾವಿರ ರೂಪಾಯಿ ತಕಂಡ ನೆಡಿತು. ಕೆಲ್ಸಿ ಹತ್ರ ಹೇಳ್ದ ಅರಸು. “ಹೇಗಾಯ್ತು ಈಗ? ಹೆಂಗ್ಸೋ ಗಂಡಸೋ ನೀ ಹೇಳಿದ ಶರ್ತ ಕಡೀರಿ” ಅಂದ. “ಈಗ ಮಾಫಿ ಬಿಡ್ತೆ. ಹೋಗೂ ಹುಚ್ಚು ತಲಿಗೆ ಹಚ್ಚಬೇಡ” ಅಂದ. ಮತ್ತೆ ಮೊಕಕೆ ಕನ್ನಡಿ ಹಿಡಿತಾನೆ ಕೊತ್ತಗಾಲ ಶಾಯ್ಬಗೆ.

ಮತ್ತೆ ಅರಸೂ ಕೂಡ ಹೇಳ್ದ. “ಹೆಂಗಸೇ, ಗಂಡಸಲ್ಲ ಹೇಗೆ?” ಹೊಳಿಯದ್ಯಲ್ಲ? ಹೊಳಿ ಮೀಶಿ ದಿಡಕಿಟ್ಟಿ ಕಾಲೂರುಕಾಗ. ಪುನಃ ಈಚೆ ಬಂದೆ ನಿಲ್ಲಬೇಕು. ಅಷ್ಟ ಮಾಡಿದರೆ ಕೊತ್ತಗಾಲ ಶಾಯ್ಬ ನನ್ನ ಕೈ ನಿಜವಾಗಿ ಕಡೂದೇಯ ಅಂದ. ಕೊತ್ತಗಾಲ ಶಾಯ್ಬಗೆ ಅರಸು ಕರ್ಯ ಬಿಟ್ರು. ಬಂದ. ಸಲಾಂ ಅಂದ. “ನನ್ನ ಕರ್ದದ್ಯಾಕೆ? ಹೇಳಿ. ಮೀಶಿ ಅಚಿದಡ ಕಿಟ್ಟಿ ಪುನಃ ಮೀಶಿ ಈಚಿ ಬರಬೇಕು ಅಂದ ‘ಹೂಂ’ ಅಂದ.

ಬಹಳ ಜನ ಕೂಡಿ ಮೀಸಿದರು. “ತನ್ನಲ್ ಪತಿವ್ರತಾಧರ್ಮ ಇದ್ರೆ ತನ್ಗೆ ಸರಿಯಾಗಿ ಮೀಶಿ ಆಚಿ ದಡಕೆ ಹೋಗಿ ಈಚೆ ದಡಕೆ ಬರುವ ಹಾಗೆ ಮಾಡು” ಹೇಳಿ ಗಂಗಾದೇವಿ ಪ್ರಾಥನೆ ಮಾಡ್ತು. ಮೀಶಿ ಬಂತು. ವಸ್ತ್ರ ತೆಗಿಲಿಲ್ಲ. ಮೇಲೆ ಹತ್ತು. ಅರಸು ಮನಿಗೆ ಬಂತು. ಮೂರು ಸಾವಿರ ರೂಪಾಯಿ ತಕಂಡ್ತು. ಮನಿಗೆ ಬಂತು. ಅರಸು “ಮತ ಹುಚ್ ತಲಿ ಮಾಡಬೇಡ, ಗಂಡಸೇಯ ಹೆಂಗಸಲ್ಲ ಅಂದ”. (ಹೆಂಡತಿ) ಹೊಳಿ ಮೀಯ ಕಾಗೂದಿಲ್ಲ.ನಿಂಗ್ಯೇನ್ ಮಾಡಬೇಕು? “ನನ್ನ ಕೈಕಡಿಸಿ” ಇದೂ ವಂದ ಬಾರಿ ಮಾಫಿ. ಹಾಗೆ ಹೇಳಬೇಡ ಹೇಳಿ ಅರಸೂ ಕೆಲಸಿ ಕಳಿಸಿಕೊಟ್ಟ.

ಎರಡು ದಿನದ ಮೇಲೆ ಕೆಲಸಿ ಬಂದ. ಮೊಕಚೌರ ಮಾಡಬೇಕಾರೆ ಹೇಳ್ತ. ಮತ್ತೆ ಕನ್ನಡಿ ತೋರಿಸ್ತಾನೆ. “ಯೆಲ್ಲ ಅರಸೂಗೊಳೆ, ನಿಜವಾಗೂ ಗಂಡಸಲ್ಲ, ಹೆಂಗಶೇ.” ಗಂಡಸೇ ಅಂದ ಅರಸು. ತೆಳಿತದೆ. ನಿಮ್ಮ ಮನಿ ಮುಂದೆ ನಿಜಮಾರಿನ ಅಗಳದೆಯಲ್ವೋ? ಅಗಳದ ಆಚೆ ಉಚ್ಚಿ ಹಾರಿಸಬೇಕು ಅಂದ. ಅರಸು ಕೊತಗಾಲ ಶಾಯ್ಬ ಕೆಲಸ ಮಾಡಿದರೆ? ಅಂದ. ಕೈ ಕಡಿಬೇಕು. ಕೊತಗಾಲ ಶಾಯ್ಬ “ನಳಗ ಹಚ್ಚಿ ಉಚ್ಚಿ ಹಾರಸತು ಪೂರಾ, ಅದೂ ಶಪತ ಮಾಡ್ತು. ಅರಸು ಕೈ ಕಡಿಸಿದ. ಬೈಯ ಕೈಗೂ ಮೂರ್ ಸಾವಿರ ತಕಂಡ ಹೋದ. ಕೊತಗಾಲ ಸಾಯ್ಬ.

ಅರಸು ಊರಲ್ಲಿ ಮಾದೊಡ್ಡ ಹುಲಿತ್ತು. ದನಕರ ಆಗೂಕೆ ಕೊಡುದಿಲ್ಲ. ಊರೆಲ್ಲ ಒಟ್ಟಾಗಿ ‘ಕೊತಗಾಲ ಸಾಯ್ಬ ಅವನೆ ಅವ ಹೊಡೆದರೆ ಹೊಡಿಬೇಕು’. ಹೇಳಿ ಅರಸು ಹತ್ರ ಹೋಗಿ ಹೇಳಿದರು. ಅರಸು ಅಡ್ಡಿಲ್ಲ ಹೇಳಿ ಕರಿಕೊಟ್ಟ. ಹನೈಯ ಗಂಡೆ ಟಾಯಮ್ ಪೊಲೀಸನ ಹತ್ತಿರ ‘ಮಿವ್ಕೆ ನಿತ್ತನೆ. ಅರ್ಧ ತಾಸಿನಲ್ಲಿ ಬರ್ತ’ ಅಂತು. ಬಂತು. ಎರಡನೆಯ ಪೊಲೀಸ ಬಂದ. ಜೋರು ಮಾಡಿದ ಸಲಾಂ ಸಾವಿರದವ ನೀನು.

ಅದು ಊಟ ಮಾಡಿ ಬರ್ತೆ ಹೇಳು ಅಂದಿ ಕಳಸತು. ಕೊತಗಾಲ ಪೊಲೀಸ ಹಾಗೇ ಹೇಳ್ದ. ಊಟಕೆ ಕೂತದೆ. ಮತ್ತೊಬ್ಬ ಪೊಲೀಸನ ಕಳಸದ. ಅವನು ಜೋರು ಮಾಡಿದ. “ಮೂರು ಸಾವಿರ ಪಗಾರಾಗಬೇಕು.” ಹೇಳಿ ಮತ್ತ ಎರಡು ಸಾವಿರ ಬಾಚ್ಕಂಡಿತ್ತು. ‘ಈಗಿಂದೀಗ ಬಂದೆ’ ಹೇಳಿ ಬಾಳಿ ತೆಗದು ವಗೀತು. ವಸ್ತ್ರ ಹಾಯ್ಕಂಡ್ತು. ಅರಸು ಮನಿಗೆ ಬಂದ್ ಬಿಡ್ತು. ಅರಸೂದು ಮನಿಗೆ ಬಂದಿ ಸಲಾಂ ಅಂದಿ ಕೂತ ಶಾಯ್ಬ. “ಅಡವೀಲಿ ಮಾದಡ್ ಹುಲ್ಯದೆ. ಹುಲಿ ಹೊಡ್ದೊರಿಗೆ ಹುಡ್ಗಿ ಕೊಡ್ತೆ ಅರ್ಧ ರಾಜ್ಯ ಕೊಡ್ತೆ. ಕೆಲಸ ಮಾಡವ್ಯೋ? ಅಡ್ಡಿಲ್ಲ”.

“ಮೂರು ಜನ ಕಲಾಸ, ವಂದ ಗಾಡಿ, ಎರಡು ಎತ್ತು ಆಗಬೇಕು” ಹೇಳ್ತು. ಊರಿನವರ ಕೈಲೂ ಹೇಳಿ ಧೈರ್ಯ ಕೊಟ್ಟ ಅರಸು. ಮೂರನೆ ದಿವಸ ಹೋಯ್ತು. ಜೋರು ಮಾಡಿದ ಪೊಲೀಸರ ಮೂರು ಜನರನ ತಕಂಡ್ತು. ಬಂದೂ ತಕಂಡಿ ಹೋಯ್ತು. ಗಾಡಿ ಹತ್ತಿ ಅಡವಿ ಶನಿಕೆ ಯಲ್ಗು ಲಿಪ್ಗು ಹೆಚ್ ಬಿದ್ದಲ್ಲಿ ಮೊದಾಲೆ ಕರೂಕೆ ಹೋದವನಲ್ಲಿ ಗಾಡಿ ಎತ್ತು ತಕಂಡು ಉಳಿ ಹೇಳ್ ಬಿಟ್ತು.

ಜೋರು ಮಾಡ್ದವರ ಎರಡು ಜನರ ಬೆನ್ನ ತಕಂಡ ಹೋಯ್ತು. ದೂರಿರಬೇಕಾದ್ರೆ ಮೈಗೆ ಮಾರಕ ಪಂಜೆ ಬಿಕ್ಕಂಡ ಮರದ ಮೇಲೆ ಕೂತ್ಕಂಡ್ ಹೇಳ್ತು. ಅದು ಮುಂದೆ ಹೋಗ್ಬೇಕಾರೆ ಹುಲಿ ಅಡಗಿತ್ತು. ನೆತ್ತಿಗೆ ಗುಂಡಿಟ್ಟು ಕೊಂದ್ಬಿಟ್ತು. ಭಯಂಕರ ಕೂಗೂದ್ ಕೇಳ್ಕಂಡ್ ಪೊಲೀಸರು ಯಬ್ಬರಾಳೂ ಹೇತ್ಕ ಬಿಟ್ಟರೆ.

ಪಟದಲ್ಲಿ ಅದು ಹುಲಿ ಕೊಂದಿ ತಲೆ ಕಡ್ಕಂಡಿ ಗಾಡಿ ಶನಿಕೆ ಇಟ ಹೋಯ್ತು. ಹತ್ ಮಾರು ಹಿಂದೆ. ಯಬ್ಬರಾಳು ಹೇತ್ಕ ಬಜಾರ ಮಾಡವ್ರೆ. “ಹಳ್ಳಕೆ ಹೋಗಿ ಮಿಂದ್ಕಂಡ ಚೊಕ್ಕಾಗಿ ಬರಬೇಕು.” ಹೇಳ್ತು. “ಮೂರು ಸಾವಿರ ಪಗಾರು ಹೇಳಿ ಅವಾಗ ಜೋಶ ಮಾಡಿದ್ರಿ” ಹೇಳ್ತು.

ಹತ್ತು ಮಾರು ಹಿಂದೆ ಹುಲಿ ತಲಿ ಇಟ್ತದೆ. “ಮೂರು ಜನ ಹೋಗಿ ಹುಲಿ ತಲಿ ಹೆಕ್ಕ ಬಂದೆ ಹುಲಿ ತಲಿ ತನ್ನಿ” ಅಂತು ಮೂರು ಜನರೂ ನೆಲ ತಪ್ಸೂಕೆ ಆಗೂದೆಲ್ಲ. ಹೆಣಗಾಡಿ ವಂದ ತಾಸಾಯ್ತು. ಆಗೂದೆಲ್ಲ. ಅವರಿಗೆ ಹೇಳ್ತು. “ನೀವಿಬ್ಬರಿಗೂ ಮೂರು ಸಾವಿರ ಪಗಾರ. ಕೊಂದ ಹುಲಿ ತಲಿ ತರೂಕಾಗುದೆಲ್ಲ” ಹೇಳ್ತು. ಹೇಳಿ, ಕೊಂಡೆ ಮೇಲೆ ಅವರಿಬ್ಬರಿಗೂ ವದೀತು.

ಗಾಡಿಗೆ ಹಾಯ್ಕಂಡಿ ತಕಬಂದ್ರು. ಅರಸು ಮನಿಮುಂದೆ ಗಾಡಿ ನಿಲ್ಲಿಸಿ ಅರಸು ಕೂಡೆ ಹೇಳ್ತು. ಮೂರು ಸಾವಿರ ಪಗಾರ ಕಟ್ಕಂಡ್ತು. ಬಿಡಾರಕ್ಕೆ ನಡೀತು.

ಮೂರನೆ ದಿವಸ ಕಪ್‌ತದೆ (ಪ್ರಾರಂಭವಾಗುತ್ತದೆ) ಹುಡ್ಗಿ ಕೊಡ್ತೆ ಹೇಳಿ ಅರ್ಧ ರಾಜ್ಯ ಹೊತ್ತರ ಮುಂಚೆ ಪೊಲೀಸರ ಕಳಿಸದ ಶಾಯ್ಬ ಬಂದ. ಸಲಾಂ ಅಂದ. ‘ಕರದದ್ಯಾಕೆ? ಹುಲಿ ಹೊಡೆದರಿಗೆ ಹುಡ್ಗಿ ಕೊಡ್ತೆ ಅರ್ಧ ರಾಜ್ಯ ಕೊಡ್ತೆ. ಅದು “ನನ್ನ ಪಟಕ್ಕೆ ನಗ್ನ ಮಾಡ ಕೊಡೂದಾದರೆ ಆಗೂದು. ನಾ ಬಾಶಿಂಗ ಕಟ್ಕ ಬರಕ ಹಾಗಿಲ್ಲ ಅಂದ್ರೆ ಅಡ್ಡಿಲ್ಲ” ಹೇಳ್ತು. ಅರಸು ಒಂದೇ ಅಲ್ವೊ? ನಿನ್ನ ಪಟಕೂ ಲಗ್ನ ಮಾಡಿ ಕೊಡ್ತೆ ಅಂದ. ಮೂರು ಸಾವಿರ ರೂಪಾಯಿ ಕಟ್ಕ ಬಂತು. ಲಗ್ನಕ್ಕೆ ತಯಾರಾಯ್ತು. ಗಂಡನ ಪಟಕೆ ಶೃಂಗಾರ ಮಾಡಿ ಬಾಸಿಂಗ ಕಟ್ಟಿ ಜನರ ಸಾಬಿಕೆ ಕಳಶನು. ಅರಸು ಮನಿದಲ್ಲಿ ಅರಸು ಪಟಕ್ಕೆ ಲಗ್ನ ಮಾಡಿ ಹುಡಗಿ ಕೊಟ್ಟ. ನಾಲ್ಕೈದು ದಿವಸ ಉಳಿದ. ಲೆಕ್ಕ ಮಾಡ್ಕಂಡಿ ಸಾಯ್ಬನ ಬೇಡಾರಕ್ಕೆ ಹೋದ. ಹುಡಗಿನೂ ಕಳಿಸಿದ.

ಕೊತಗಾಲಸಾಯ್ಬ ತಾನು ಹೆಂಗ್ಸು ಹೇಳಿ ಗೊತ್ತಾಯ್ದದಲ್ಲ? ತಾನು ಮಾವನ ಮನೆಗೆ ಹೋಗು ಕೆಲಸದೆ. ಮಾತಾಡ್ಕ ಬತ್ತೆ. ಯವಾರ ನಾ ನೋಡ್ತೆ. ನಾಕ್ದಿವ್ಸ ಆರಾಮ ತಕಣಿ ಹೇಳಿ ಅರಸು ಕೈಲಿ ಹೇಳ್ತು ಕೊತಗಾಲ ಶಾಯ್ಬ. ಅವ ಅಡ್ಡಿಲ್ಲ ಹೇಳಿ ಯಾವರ ಕೊಟ್ಟ ಮನಿಗೆ ಬಂದ. ಆ ದಿವಸ ಹಗಲು ರಾತ್ರಿ ಅಲ್ಲೇ ಉಳಿದು ಅರಸು ಹತ್ರ ಹೇಳ್ತು. ಇಪ್ಪತ್ತು ವರ್ಷದ ವ್ಯವಹಾರದ ನಿಕಾಲೆ ಮಾಡಿ ಹಾಕ್ತು.

“ಮಾವಾ ನಿಮ್ಮೂರಲ್ಲಿ ಕೋಳಿ ಲಡಾಯಿ, ಒಂದು ಕುರಿ ಲಡಾಯ ನಾಳೆಗೆ ಮಾಡಿಸಬೇಕು” ಹೇಳ್ತು. ಅರಸು ಅಡ್ಡಿಲ್ಲ ಹೇಳಿ ಪೊಲೀಸ ಕಳಿಸಿ ಅಟ್ಟೂ ಮನೆಗಳಿಗೆ ಕೋಳಿ ಕುರಿ ತನ್ನಿ ಹೇಳಿ ಡಂಗುರ ಹೂಡಿಸಿದ.

ಮೂರನೇ ದಿವಸ ಕೋಳಿ ಕುರಿ ಎಲ್ಲಾ ತಕ ಹೋದ್ರು. ಕೋಳಿ ಲಡಾಯ ಮಾಡಸದ್ರು ಕುರಿಯಲ್ಲಾ ನೋಡ್ತು. ಗಂಡನ ಕುರಿ ಮಾಡಿಬಿಟ್ಟಳು. ತರಲೇ ಇಲ್ಲ. ಮಾ ದೊಡ್ಡ ಕುರಿಗೆ ಜೋಡಿ ಕುರಿಲ್ಲ. ಅರಸೂಗೆ ಹೇಳ್ತು “ಡಬ್ಬಿ ಅಂಗಡಿಯಲ್ಲಿ ದಡ್ಡ ಕುರಿ ಅವೆ. ಅದರ ತರಿಸಿ” ಅದು ಹೇಳ್ತು.

ಅರಸು ಪೊಲೀಸರ ಕಳಿಸಿದ. ಅವರು ಹೋಗಿ ಕುರಿ ತಕ ಬಾ ಅಂತಾರೆ ಅರಸು ಹೇಳಿ ಮುದ್ಕಿ ಕುರಿ ತಕಂಡ ಬಮದ ಕೋಳಿ ಲಡಾಯಿ ಆಯ್ತು.

ಕೋಳಿ ಲಡಾಯ ಮಾಡಿಸಿದರು. ಕುರಿ ಲಡಾಯಿ ಮಾಡಿಸಿದರು. ಗಂಡನ ಕುರಿ ದೊಡ್ಡ ಕುರಿ ಲಡಾಯಿ ಮಾಡಿಸಿದರು. ತಲೆ, ತಲೆ ಹೊಡೆದಾಡಿದವು. ಇದಕ್ಕೆ ಹೆದರಿಕೆ. ಗಂಡ ತಲಿ ಒಡದಿದು ಹೇಳಿ ಹೆದರಿ ನಿಲ್ಲಿಸಿತು. ಎಲ್ಲರಿಗೂ ಹೋಗಲಿಕ್ಕೆ ಹುಕುಂ ಕೊಡಿ ಹೇಳಿ ಕಳಸತು. ಡಬ್ಬಿ ಹತ್ರ ನೀ ಮಾತ್ರ ಹೋಗಬೇಡ, ಹೇಳಿ ನಿಲ್ಲಿಸಿದ ಕೊತಗಾಲ ಶಾಯ್ಬ.

ಅರಸನೂ ಹೋದ. ಬಿಬ್ಬಿ, ಕೊತಗಾಲ ಶಾಯ್ಬ ಉಳಿದರು. “ಬಿಬ್ಬಿ, ಕುರಿ ಹೊಟ್ಟಿಲ್ಲಿ ಹುಟ್ಟಿದ್ದೊ, ಅಲ್ಲ ನೀನೇ ಮೋಸ ಮಾಡಿದ್ದೋ?” ಇಲ್ಲ ಕುರಿ ಹೊಟ್ಟಿಯಲ್ಲಿ ಹುಟ್ಟಿದ್ದು. “ಸುಳ್ಳು ನೀನೇ ಮಾಡಿದ್ದು, ಸುಳ್ಳು ಹೇಳಿದ್ರೆ ನಿನ್ನ ತಲಿ ಕಡಿತೆ” ಹೇಳಿ ಪಟ ನಿಗರಿಸಿತು. ಹೆದ್ರಿ ಕರೆದು ಹೇಳ್ತು  “ಮೊದ್ಲನ ಹಾಗೇ ಮಾಡು” ಮತ್ತೊಂದು ರೋಮ ತೆಗೆದು ಒಗಿತು. ಅರಸು ಮಗನಾದ. ಬಿಬ್ಬಿಗೆ ಹೇಳ್ತು “ಇಂಥ ಕೆಲಸ ಮಾಡಬೇಡ, ಹಾಗೆ ಮಾಡೂದಾದರೆ ತಲಿ ಕಡೀತೆ” ಹೇಳಿ ಇಲ್ಲಿ ಹೇಳಿಸಿ ಕಳಿಸಿತು.

ಡ್ರೆಸ್ ಕಳಚಿತು. ಹೆಂಗಸು ರೂಪಾಯ್ತು. ಬಿಡಾರಕೆ ಗಂಡನ ಕರಕಂಡ ಹೋಯ್ತು. ಹೀಗಿಗ ಮಾಡನೆ. ನಿಮ್ಮ ಪಟಕೆ ಲಗ್ನ ಮಾಡ್ಸನೆ. ಬಿಡಾರದಲಿ ಅದೆ. ಅರಸು ಮಗಳು ನಿಮ್ಮ ಹೆಂಡ್ರಿ ಹೇಳ್ತು. ಎರಡು ಮೂರು ದಿನಾಯ್ತು.

ಅರಸು ಹುಡಗಿ ಹೇಳ್ತು “ನಾಳಿಗೆ ಹೇಳ್ಕ ಬನ್ನಿ” ಅರಸು ಹತ್ರ ನಾಳಿಗೆ ಹೋಗು ಹೇಳಿ ರೂಪಾಯಿ ನಮ್ಮೂರಿಗೆ ತಕ ಹೋಗೂದಿಲ್ಲ. ಹೇಳಿ ಹೇಳಿ ಸರಿಯಾಗಿ ಹೇಳಿ ಗಂಡನ ಕಳಿಸಿಕೊಟ್ಟು ಹೇಳ್ದ. ನಾಲಿಗೆ ಊರ್ಗೆ ಹೋತ್ರು. ಮೂರೆ ಗಾಡಿ ಕಳಸಿ. ಪಗಾರ ರೂಪಾಯಿ ತಕ ನಿವಾಗೆ ಒಪ್ಪಿಸಿಕೊಳ್ಳಿ. ಅಂದರೆ ಗಾಡಿ ತುಂಬಿಸಿ ತಂದ ಗಂಡ ಹೆಂಡ್ತಿ ಕೊತಗಾಲ ಶಾಯ್ಬ ಹಡ್ಗಿ ಬಂದಿ ಶುಕದಲ್ಲಿ ವಳ್ಕಂಡ್ರು.

 ಹೇಳಿದವರು

ದಿ. ಕಲ್ಲಬಾವಿ ಸಂಕಪ್ಪ ಬೊಬ್ಬು ಪಟಗಾರ,
ಮಾಸೂರ