ಗಂಡ- ಹೆಂಡ್ತಿ ಮುಸಲ್ರು. ತೆನಿಮೇಲೆ ಮನಗತಿದ್ದ ಸಿಪಾಯಿ. ಬಾವಿ ಮನೆ ಮುಂದೆ. ಹೊತ್ತರ ಮುನ್ನೆ ನೀರ ಸೇತ್ತದೆ. ಕೊಂಡ್ಲ ಮೂಗತಿ ದೃಷ್ಟಿಗೆ ಬಿತ್ತು. ಕೊಂಡ್ಲ ಮೂಗ್ತಿಗೆ ಗುಂಡ ಹಾರಿಸಿದ. “ಬಹಾದ್ದೂರ ಸಿಪಾಯಿ” ಹೇಳಿ ಮೀಸಿ ಮೇಲೆ ಕೈಯೆಳೆದ. ಬಗ್ಗಿಲೆ ಹೆಚ್ ಕಮ್ಯಾದ್ರೆ ಜೀಮ್ಮೇ ಹೋತದ ಹೇಳಿ ಚೀರಾಯ್ತು.

ಬೈಸ್ಸಿರ ಕಡೆ ನೆರಮನಿಲ್ಲಿ ಬೆಂಕಿಗೆ ಹೋಯ್ತು. “ಬಾಯೇ, ಜರ ಬತ್ತಿತನೆ? ಸಾವ್ಕಾಗಿಯಲ್ಲೆ ಏನು?” “ನಮ್ಮಲೆ ಹೊತ್ತಾರೆ ಯೆದ್ದಿ ಡಂ ಅನ್ನಸತ್ತಾರೆ. ಬಾದ್ದೂರ ಸಿಪಾಯಿ ಹೇಳಿ ಮೇಸಿ ಮೇಲೆ ಕೈಯೆಳೆತ್ತಾರೆ. ಅದ್ದೇ ಚೀರಾದೆ” ಅಂತು. “ಊರಿಗೆ ಯಾರಾರು ಹೆಚ್ಚಿನೋರು ಇರೋರ ಹೇಳು” ಹೇಳ್ ಕೊಟ್ಟ ಹುಡಗ.

ಬೆಳ್ಗಾಗೆ ನೀರ ಸೇದವಾಗ ಡಂ ಅನ್ನಿಸಿಕಂಡ ಹಾಗೇ ಕೇಳ್ದ. “ಊರಗೆ ಯಾರಾರು ಇರೂರು?” ಅಂತು.ಅಡ್ಗಿ ಮಾಡ್ತು. ಊಟ ಮಾಡಿ ಕೋವಿ ಹೆಗಲ ಮೇಲೆ ಹಾಕ್ದ. ಹೊಂಟ. ಅರತಾಸು ಬಿಸ್ಲು. ಆಲದ ಮರದ ಮೇಲೆ ಅಂಬಿಗ ಕೂತಿದ್ದ “ಮರದ ಮೇಲೆ ಯಂತಕೆ ಕೂತಿದ್ದೆ?” ಕೇಳ್ದ ಅಂಬಿಗ. “ನಾನು ಅರವತ್ ಯೋಜನೆ ಮೇಲೆ ಮದಗ ಅದೆ. ಆ ಮದಗದಲ್ ಬಿಸೂಲಲ್ ಮೀನ ಏಳ್ತದೆ. ಇಲ್ಲಿಂದ ಗುಂಡು ಹೊಡೆದು ಮೀನ ಕೊಲ್ತೆ. ಸತ್ ಮೇಲೆ ಕೆಳಗೆ ಬಿಳ್ತದೆ.” ಅವನ ಕೆಳಗೆ ತಕಂಡ ಅವ್ನೊ ತಕಂಡ ಹೋದ. ಹೋದ್ರು. ಸಂಚಿಕಡಾನ್ ಹೊತ್ತಾಗಿತ್ತು. ದನ ಕಾದ ಪೋಡ ಗುಡ್ಡಿ ಮೇಲಿಂದ ದನು ಕರ ಕಂಡ ಬತ್ತಾನೆ. “ಹಲಲಲ ಕೀಹಾ” ಅಂದ ಹುಡ್ಗ. “ಯಾಕೋ ಹಲಲಲ ಕೀಹಾ”?

“ಅರವತ್‌ಯೊಜನೆ ದೊರೆ ದೊಂಬರಾಟ ಮಾಡ್ತಾರೆ. ನಂಗೆ ಇಲ್ಲಿದ ಕಂಡ್ತು. ಚೆಂದ ಕಂಡ್ತು. ಕೀ ಹಾಕ್ದೆ” ಅಂದ. (ಅವನ್ನೂ) ಕರಕಂಡೆ ಮೂರ ಜನ ಆದ್ರು. ಸಂಜಿಯಾಯ್ತು. ಹಳ್ಳದಾಗೆ ಪಟಪಟ ಪಟ ವಲಿಯಾತದೆ. ಶಬ್ದದ ಮೇಲೆ ಹೋದ್ರು, ಮಡಿವಾಳ ವಸ್ತ್ರ ಶಳಿತನೆ. “ಎಲ್ಲದೆ ಊರು?” ಹೇಳ್ದ. ಹದಿನಾರ ಹರದಾರಿ ಆಚೆ ನನಗೆ ಏನು ಚಣಚಣ “ನಮ್ಮ ಕರಕ ಹೋಗೋ” ಅಂದರು. ವಸ್ತ್ರ ಒಗೆದ ಮೇಲೆ ಮೂರಾಳ್ನೂ ಪೊಟ್ಟೆಲಿ ಕಟ್ಟಿಕೊತ್ಕಂಡ ಹೋದ. ಅಲ್ಲಿ ಅರಸತನದಲ್ಲಿ ಗಂಡೆ ತೂಗಾಕರೆ. ಒಂದೇ ಗಂಡನಗೆ ಗಂಟೆ ನಾಲ್ಕ ಕತ್ತರಿಸಬೇಕು. ಕೆಂದೇಳಿ ಹೂಗೆ ತರಬೇಕು. ಹುಡಗೀಗೆ ಮುಡಿಸಬೇಕು. ಲಗ್ನಾತದೆ. “ಕೆಂದಾಳಿ ಹೂಗು ಅರವತ್ ಗಾವಿದ ಆಚೆ ಅದೆ. ಹೋದೋರ ಹಿಂತಿರುಗಿ ಬಂದರಿಲ್ಲ. ಹುಲಿ ಕರಡಿ ರಾಜ್ಯ. ಮಾತಾರಿಕಂಡ್ರು. ಮಡಿವಾಳ ಅಲ್ಲಿ ಹೋಬೇಕು. ಕೆಂದಳಿ ಹೂಗ ತರೂಕೆ ಹುಲಿ ಕರಡಿ ಬಂದ್ರ ದನಕಾವು ಹುಡುಗಗೆ ತೆಳಿದದೆ. ಅವ ಹುಲಿ ಕರಡಿ ತೋರ್ತನೆ. ಅಂಬಿದ ಡಂ ಅನ್ನಿಸ್ತನೆ. ಸಿಪಾಯಿ ಗಂಡೆ ನಾಲ್ಗಿ ಉದರಿಸಿದ ಗುಂಡ ಹೊಡ್ದಿ. ಕೆಂದಳಿ ಹೂಗಿನ ಗಿಡ ಸಮೀಪಕೆ ಅದೆ ಹೇಳುವಾಗ “ಹುಲಿ ಬಂತು” ಅಂದ. ಅಂಬಿಗ “ಕೈ ನೀಡಿ ತೋರು” ಅಂದ. ತೋರಿದ ಡಂ ಅನ್ನಿಸಿದ, ಸತ್ತು. ಮಡಿವಾಳ ಕೆಂದಾಳಿ ಹೂ ಕೊಯ್ದ ತಂದ ಬೇಗ. ಹೆಣ್ಣು ಯಾರಿಗಾಯ್ತು? ಮಡಿವಾಳ “ನನಗಾಯ್ತು” ಅಂದ. ನಾ ಹುಲಿ ತೋರನೆ ಅಂದ ದನಕಾವು ಪೋರ. ಅಂಬಿಗ “ನಾ ಕೊಂದನೆ” ಅಂದ. ಸಿಪಾಯಿ “ನನಗಾಯ್ತು” ಅಂದ. ವ್ಯವಹಾರಕ್ಕೆ ಹೋಯ್ತು.

ಮುಸಲ್ರ ಹಂಗಸು ಬೆಂಕಿಗೆ ಹೋದಾಗ ಹೇಳಿಕೊಟ್ಟ ಆಚೆ ಮನೆ ಹುಡುಗ. ಊರಿಗೆ ಯಾರಾರು ಇರೂರು ಹೇಳು ಅವಗಾಯ್ತು ಯಾವಾರ ತುದಿ ಮೇಲೆ ಹೆಣ್ಣು.

 ಹೇಳಿದವರು:

ದಿ. ದುರ್ಗು ತಿಮ್ಮಣ್ಣ ಹೊಸಕೇರಿ,
ನುಕ್ಕೇರಿ, ತಾ. ಕುಮಟಾ, ಉ.ಕ., ೬೮ ನೇ ಇಸ್ವಿ,
ಅಕ್ಟೋಬರ್‌ದಲ್ಲಿ ನಿರೂಪಕರ ಮನೆಯಲ್ಲಿ ಹೇಳಿಸಿ ಬರೆದುಕೊಂಡಿದ್ದು.