ದೊಡ್ಡ ರಾಜರು, ಅವ್ರಿ ಗೆ ಹುಡ್ಗರಾಗಲೇ ಇಲ್ಲ. ದೇವರಲ್ಲಿ ತಿರ್ಗಿ ತಿರ್ಗಿ ಸಾಕಾಗೆ ಹೋಯ್ತು. ಹರ್ಕಿ ಹೇಳ್ಕಂಡ್ರು “ಮಕ್ಕಳು ಹುಟ್ಟಿದರೆ ತಿರ್ಪತಿಗೆ ಬರತ್ರು.” ಅಂದಿ ಹರ್ಕಿ ಹೇಳ್ಕಂಡ್ರು. ವಂದ ಹುಡ್ಗ ಹುಟ್ದ. “ಈಗ ನಾವು ಹುಡ್ಗನ ತಕಂಡಿ ತಿರ್ಪತಿಗೆ ಹೋಗಬೇಕಲ್ಲಾ” ಅಂದಿ ಬಾಲಿ ತಕಂಡಿ ತಿರ್ಪತಿಗೆ ಹೋಗೂಕೆ ರೈಲ್ ಹತರು. ರೈಲು ಹತ್‌ಬೇಕಿದ್ರೆ ಆ ಹುಡ್ಗ ಕೈ ತಪ ಬಿದ್ ಹೋಗ ಬಿಟ್ಟ. ಕೈತಪಿ ಬಿದ್ದ ಹೋದ ಕೊಡ್ಲೇವ, ವಂದ ಮಡಿವಾಳ ಹೆಕ್ಕಂಡ ಹೋದ. ಹೆಕ್ಕಂಡೆ ಹೋಗಿ, ಸಾಕ್ ಸಲಗಿ ಕಲಿಸಿ ನೌಕರಿ ಮಾಡ್ಸಿತ. ಅವ ಮಾಸ್ತರಾದ.

ಮಾಸ್ತರಾದ ನಂತರ ಅವ್ರು ಬೇರೆ ಕಡೆ ಸಾಲೀಗೆ ಹಾಕಿರು. ವಂದ ಮನೆಯಲ್ಲಿ ಉಳಿತ. ಹಿರಿಯ ಹೆಂಡ್ತಿ ಸತ್ ಹೋಗಿರುತ್ತಾಳೆ. ಅವ ಊರಿಗೆ ದೊಡ್ಡ ಅರಸು, ಎರಡನೆಯ ಹೆಂಡ್ತಿ ಮದ್ವಿಯಾಗಿರ್ತ. ಮಾಸ್ತರನ ಮನೆಯಲ್ಲಿ ಇಟಕಳ್ತ. ಈ ಹಿರಿಯ ಹೆಂಡ್ತಿ ಮಗಳು ಶಾಲೆಗೆ ಹೋತದೆ. ಇವ ಮಾಸ್ತರ. ಅದು ನಾಕನೆ ಇಯತ್ತೆಯೋ ಐದನೆ ಯತ್ತೆಯೋ ಕಲಿತಿರ್ತದೆ. ಈ ಮಾಸ್ತರ ಅಂದರೆ ಪ್ರಾಣ. ಅದ್ಕೆ ಬಾಳ ಪ್ರೀತಿ. ತಿಂಡಿ ಕೊಡ್ಲಿ ಯೇನೇ ಕೊಡ್ಲಿ ನಾನೇ ತಕಂಡ ಹೋಗ ಕೊಡ್ತೆ.

ತಿರ್ಪತಿಗೆ ತಾಯಿ ತಂದೆ ಹೋದ ಮೇಲೆ ಮಗ ಹೀಗೆ ಬಿದ್ ಹೋದ. ಪ್ರಸಾದ ಕಟ್ಟಿ ಕೇಳಿಸ್ತಾರೆ. ಕೇಳ್ಸಿತಿರಬೇಕಾದ್ರೆ ಪೂಜೆ ವೋದ್ವರಿಗೆ ಬಾರ ಬರ್ತದೆ. ಅವ್ರ ಹೇಳ್ತಾರೆ. ನೀನು ವಂದ ಹುಡ್ಗ ಹುಡ್ಗಿ ಶಿಕತಾರೆ ಹೆಂಗ್ಸು. ಮದಿಯಾದ ಹೆಂಗ್ಸು ವಂದೆ ಹುಡ್ಗನೆ ನೆಕ್ಕಂಡ ಹೋಗಿರ್ತದೆ. ಅದ್ರ ಬಿಡ್ಬೇಡಿ ನೀವು. ಯಾರಾದ್ರೂ ಜಾಗಾ ಕೊಟ್ರೆ, ನಾ ಅವ್ರೆ ಮತ ಉಳೀತ ಹೇಳ್ತದೆ ಆದ್ರ ಬಿಡ್ಬೇಡಿ ನೀವು ಅಂದ. ಬಾರದಲಿ ಹೇಳಿತಾ.

ಆಯ್ತು ಅಂದೆ ಹೇಳಿತ್ರು. “ನಿಮ್ಮ ಮಗ್ನ ಗುರ್ತ ಅದ್ಯಲ್ಲಾ ನಿಮಗೆ”? “ಸರ್ಪನ ಹೆಡಿ ಅವನಾ ಬಲಕನ ತೋಳ ಮೇಲೆ ಇರ್ತದೆ. ಅದರಿಂದೇ ನಾವೆ ಗುರ್ತ ಹಿಡೀತ್ರು ಮಗನಾ” ಅಂತಾರೆ. ಅವ ದೊಡ್ಡಾಗಿರ್ತಾ, “ನೌಕರಿಯಾದ ಮೇಲೆ ಸಿಕ್ಕೂದು ಫಸ್ಟ್‌ಗೆ ಸೊಸೆ ಮೊಮ್ಮಗ ಸಿಕ್ತಾರೆ. ತ್ರ ಮಗ ಸಿಕ್ತಾ ಚಿಂತೆ ಬಿಡಿ ಹೇಳ್ತಾರೆ. ಆಯ್ತು. “ಹೇಳಿ ಅವರು ಮುಂದೆ ಬರ್ತಾರೆ ಬರುವರಿಗೆ ಬೇರೆ ಊರಲ್ಲಿ ಮಾಸ್ತರ ಉಳೀತ, ಶಾಲೆಗೆ ಬೇರೆ ಕಡೆ ದೊಡ್ಡ ಅರಸೂ ಮನಿಲಿರ್ತ ಅರಸೂ ಹಿರಿಯ ಹೆಂಡ್ತಿ ಮಗಳು ಆ ಸಾಲಿಗೆ ಹೋಗ್ತಾಳೆ. ಆ ಹುಡ್ಗಿಗ ಚಿಕ್ಕ ತಾಯಿ ಬಾಳ ತ್ರಾಸ ಕೊಡ್ತದೆ. ಅವ್ನ ಹತ್ರ ಮಾತಾಡೂಕೆಲ್ಲ ನೀನು ಹೇಳ್ತದೆ. ಅದು ಯೇನ್ ಮಾಡ್ರೂ ಕೇಳೂದೆಲ್ಲ. “ನಾನೇ ನಿಮ್ಮ ಮದಿಯಾಗ್ವಳು” ಅಂದಿ ಹೂಗ್ನ ಮಾಲಿ ತಕಂಡ ಹೋಗ ಹಾಕ್ತದೆ. ಮಾಲಿ ಹಾಕ್ದ ಕೂಡ್ಲೆ ಮಾಸ್ತರು “ಹಾಗೆ ಮಾಡಬಾರ್ದು ನೀನು, ಸಾಲಿಗೆ ಹೋಗ್ವವಳು” ಹೇಳ್ತಾರೆ.

ಕಡಿಗೆ ಮದಿಯಾದೆ ಕೊಡ್ಲೆ ಯೇನ್ ಮಾಡ್ತು? ಹಿರಿಯ ಹೆಂಡ್ತಿ ಮಗಳು ಪಾಪ ತ್ರಾಸ ಕೊಡ್ತದೆ. ಚಿಕ್ಕ ತಾಯಿ ಮದ್ವಿಯಾಗಿ ನೀವು “ಹೇಳ್ತಾರೆ ಜನ, ಜನಯೆಲ್ಲಾ ಕೂಡಿ ಮದ್ವಿ ಮಾಡಿ ಬಿಡ್ತಾರೆ. ತಂದಿಗೆ ಗುತ್ತಾಗಿರುವುದಿಲ್ಲ. ಮದ್ವೆಯಾಗದೆ ಹೇಳಿ ಇವರು ಗಂಡ ಹೆಂಡ್ತಿ ಆಗ ಉಳಿದ್ರಲ್ಲ? ಅವಳು ಗರ್ಭಿಣಿ ಇರ್ತದೆ. ಕಡಿಗೆ ಗರ್ಭಿಯಾದ್ದು ತಾಯಿಗೆ ಗೊತ್ತಾಗೆಬಿಡ್ತದೆ. ಕಡಿಗೆ ಅದ್ಕೆ “ಹೊಟ್ಟಿಗೆ ಹಾಕುದೆಲ್ಲ” ಹೇಳ್ತದೆ ಅದು “ಮಾಸ್ತರ್ಗೆ ಮಾತ್ರ ಊಟ ಹಾಕ್ದೆ ನಿಂಗೆ ಹಾಕೂದೆಲ್ಲ” ಹೇಳ್ತದೆ. ಅದ ಮಾಸ್ತರ ಯೇನ ಮಾಡ್ತರು? ಬಾಳೆ ಹಣ್ಣು ಬೇರೆ ತಿಂಡಿ ಯೆಲ್ಲಾ ತಂದ ಕೊಡ್ತೆ ಇರ್ತಾರೆ.

ವಂದಿವ್ಸ, ಆ ಅರಸು ಜಾಗ ಮಾರ್‌ಬೇಕು, ಕೆಲಸ ಮಾಡೂಕಾಗೂದೆಲ್ಲ ಹೇಳಿ ಗಿರಾಕಿ ಕೇಳುಕೆ ವಬ್ನರ ಕರಕಂಡ ಹೋಗ್ತಾ. ಆವಾಗೆ ಊಟಾ ಮಾಡೂದಿಲ್ಲ. ಇದು ಅರಸು ವಬ್ನ ಕರ್ಕಂಡ ಹೋದ ಕೂಡ್ಲೆ ತೀಡ್ತದೆ. “ಚಿಕ್ಕೀ ನಾನು ಇಲ್ಲಿ ಇರೂದೆಲ್ಲ. ಗಂಜೆ ತೆಳಿಯಾದ್ರೂ ಕೊಡು ನಿನ್ ಕೈಯಿಂದ ನಾ ಕುಡ್ಕಂದ ಹೋಗ್ತೆ” ಅಂತದೆ. ಅದೆ ನಾ ಕೊಡೂದೆಲ್ಲ. ನಿನ್ಗೆ ಕೊಡೂದಾದ್ರೆ ಕುನ್ನಿ ಹಂಚಲ್ ಹೊಯ್ಕೊಡ್ತೆ. ಅಂದೆ ಹೇಳ್ತ ಅದ್ರಕೆ ಹೊಯ್ ಕೊಡ್ತು. ಅದ್ರ ಕುಡ್ಕಂಡ ಹೋಯ್ತು.

ತಂದ್ಯವರೆ ಮಗಳ ಹತ್ರ ಕೀಲಿ ಕೊಟ್ ಹೋಗಿದ್ರು. ಆವಾಗ, ದುಡ್ ಬೇಕಾದಟ ತೆಕ್ಕಂಡಿ ಆಸ್ತರ ಕೈಲಿ ಕೊಟ್ಟಿತ್ತು. ಕಡಿಗೆ “ಕೀಲಿ ಮಾತ್ರ ಇಟ್ಕಳಿ” ಅಂದ ಹೇಳ್ತು. “ನಾನು ಆಸ್ಪತ್ರೆಗೆ ಹೋಗ ಬರ್ತೆ.” ಅಂದಿ ಹೋಯ್ತು. ಅದು ಯೆಲ್ ಹೋಯ್ತು? ಹೋತೇ ಹೋತೇ ಇರಬೇಕಿದ್ರೆ ವಂದ ಅಡವಿಯಲ್ಲಿ ಬಾಳಂತ್ಯಾಯ್ತು ಅದು. ಹುಡ್ಗ ಹುಟ್ತಾ. ವಬ್ಬ ಸೇವಕ ಸಿಕ್ತಾ. ಆ ಸೇವಕ ತಕಂಡೆ ಹೋಗಿ ಆಸ್ಪತ್ರಿಗೆ ಸೇರ್ಸದ. ಅಲ್ ಅದ್ಕೆ ಒಂದು ಸ್ವಲ್ಪ ದಿವಸ ಉಳಿತು. ಯಾರದಾದ್ರೂ ಮನೀಲಿ ಪಾತ್ರ ತೊಳ್ಕಂಡಾರೂವ ಜೀವನ ಮಾಡ್ತೇ ಉಳೀತೆ ಅಂದ ಹೇಳಿ ಆ ಹುಡ್ಗನ ನೆಕ್ಕಂಡಿ ಬತ್ತೇ ಉಳೀತು.

ತಿರುಪತಿಗೆ ಹೋಗಿ ಕೇಳ್ಕಂ ಬಂದರು. ತನ್ನ ಕೆಲ್ಸಕೆ ಮೊಗೆ ವೋಳಿಗೆ ನೀರ್ ಹೊವ್ ಹೋತದೆ ಇದು. ಬಾಲಿ ಕಂಡವಳು ಸಿಕ್ತದೆ. ರಾಜ್ನ ಹೆಂಡ್ತಿನೇ ಕೇಳ್ತದೆ. ಎಲ್ಲಿ ಹೋತೆ ನೀನು ಅಂದೆ ಕೇಳ್ತದೆ. “ಯಾರ್ದಾದ್ರೂ ಮನೆಯಲ್ಲಿ ಪಾತ್ರೆ ತಿಕ್ಕಂಡೆ ಜೀವ್ನ ಮಾಡ್ಬೇಕೆಂದು ಹೋಗ್ತೆ” ಅಂದು ಆವಾಗ ಅದೇ ತಟ್ನೆ ತಿರ್ಪತಿಲಿ ಹೇಳಿದ್ದು ತಲೆಯಲ್ಲಿ ಹೊಳೀತು. ನೆನಪಾಯ್ತು. ಆವಾಗೆ ಕರ್ಕಂಡೆ ಹೋಯ್ತು. ನೀನು ಹೊರಗಿನ ಕೆಲಸ ಮಾಡೂದ ಬೇಡ ಒಳಗಿನ ಕೆಲಸ ಅಡ್ಗಿ, ಅನ್ನ ಸಾರ ಇಂಥಾದ ಮಾಡ್ಕಂಡಿ ನಮ್ಮಲೆ ಉಳಿ ಹೇಳಿ ಹೇಳ್ತು ಉಳೀತು ಮನೆಯಲ್ಲಿ.

ಹುಡುಗ ದೊಡ್ಡಾಗಿ ಸಾಲಿಗೆ ಹೋಗ್ತ. ಅವ್ನ ಅಪ್ಪ ಆ ಖಾರ್ಗೆ ವರ್ಗಾಗಿ ಅದೇ ಮಗ ಹೋಗೂ ಸಾಲಿಗೆ ಬರ್ತಾ. ಆ ಮದ್ವಾಳ ಇರೂದೂ ಅದೇ ಊರ್ನಲ್ವೇವ ಸಾಲಿಗೆ ಹೋಗ್ತಾ ಇರ್ತಾ ಇವ “ಮಾಸ್ತರು ಯೆಷ್ಟೆಲ್ಲಾ ಪ್ರೀತಿ ಮಾಡ್ತಾರೆ. ನನ್ನ ಕಂಡು” ಹೇಳ್ತ ತಾಯೀ ಹತ್ರ. ಕಡಿಗೆ ಅಜ್ಜಿ ಹೇಳ್ತದೆ. “ಹಾಗಾದ್ರೆ ನಾಳೆ ನಿನ್ ಮುಂಜಿ ಮಾಡ್ವಾ ಮಾಸ್ತರ ಕರ್ಕಂಡ ಬಾ” ಹೇಳಿ ಹೇಳ್ತದೆ. ಕಡಿಗೆ ಸಾಲಿಗೆ ಬಂದಿ ಹೇಳ್ತ. ನಾಳಿಗೆ ನನ್ನ ಮುಂಜಿ ಬರ್ಬೇಕು. ನೀವು ಹೇಳ್ತ ಆವಾಗವ್ರು “ಅಡ್ಡಿಲ್ಲ, ನಿನ್ನ ಮುಂಜಿಗೆ ಬರ್ದೆ ಇರೆತ್ನಾ?” ಹೇಳಿ ಕೇಳ್ರು.

ಅಜ್ಜಿ, ಅಜ್ಜನ ಕೈಲ, ತಾಯಿ ಕಲಿ ಯೆಲ್ಲಾ ಹೇಳ್ದಾ “ಮಾಸ್ತರು ನಾಳೆ ಬರ್ತಾರೆ” ಹೇಳ್ದ. ಮರದಿವ್ಸ ಬಂದ್ರ. ಮಿಂದ್ಕೆಂಡ್ ಬನಿ ಅಂದ ಹೇಳಿದ್ರು, “ಮಿಂದಿ ಉಡ್ಗೇರಿ ಕೊಡ್ಬೆಕು” ಅಂದಿ ಮಾಸ್ತರ ಹತ್ರ ಹೇಳ್ತಾರೆ. ಹೋಗ್ತಾರೆ ಮಾಸ್ತರ ಅಂಗಿ ಕಳಚಿಟ್ಟ ಕೂಡ್ಲೆ ಅದ್ರ ಬಲಕಿನ ಕೈತೋಳ ನೋಡ್ತದೆ ಅಜ್ಜಿ. ಅಲ್ಲಿ ಸರ್ಪನ ಹೆಡೆ ಹಾಣ್ತದೆ. ಅವನ ಕಣ್ಣಿಗೆ ಆವಾಗೆ ನೀವು ಯಾರಿಗೆ ಹುಟ್ಟಿದವ್ರು? ಅಂತದು ಯೆಲ್ಲಾ ಕೇಳ್ತದೆ. ಉಡ್ಗೆರಿ ಯೆಲ್ಲಾ ಆದ ಮೇಲೆ ಕೇಳ್ತದೆ.

ಕಡೀಗೆ ಹೇಳ್ತಾ ಸ್ವಲ್ಪ ದೊರೆ ಮಡವಳ ರೈಲಿಗೆ ಹೋಗೆ ಬೇಕಿದ್ರೆ ಅವ್ರಿಗೆ “ತಂದೆ-ತಾಯಿಗೆ ನಾ ಕೈ ತಪ್ಪಿ ಹೋಗಿದ್ನಂತೆ ತಂದೆ ತಾಯಿ ಗೊತ್ತಿಲ್ಲ. ಮಡಿವಾಳ ಕರ್ಕಂಡ ಹೋಗಿ ನನ್ನ ಸಾಕ್ದ. ಸಾಕಿ ನೌಕರಿಯಲ್ಲಾ ಮಾಡ್ಸಿದಾ” ಅಂದ ಹೇಳ್ತಾರೆ.

ಆವಾಗೀ ಅಜ್ಜಿ ನೀನು ನನ್ನ ಮಗ ಅಂತು “ಹೇಗೆ ನಿಮ್ಮ ಮಗ?” ಕೇಳ್ದ “ಇದೇ ಊರಲ್ಲಿ ಇದ್ದೆ. ನಿಮ್ಮ ಮಗ ಅಂದೆ ಬಿಟ್ರೆ ಹೇಗೆ?” ಮಡಿವಾಳ್ರ ಕರ್ಕಂಡ ಬರತ್ರು ಅಂತು. ಕರ್ಕಂಡು ಬಂದ್ರು. ಮಡಿವಾಳ್ನ ಹತ್ರ ಹೇಳಿತ್ರು. ಇವ್ರೆ ನನ್ನ ಮಗ ಹೇಳು ಹೇಗೆ “ಹೀಗೆ ನಿಮ್ಮ ಮಗಾ ನನ್ಗೆ ಸಿಕ್ಕು ನಾನು ಇಟ್ಟೆಲ್ಲಾ ಕಲಿಸಿ ನೌಕರಿ ಮಾಡಿಸ್ದೆ. ನನ್ನ ಗ್ಯಾರೂ ಗತಿಯಿಲ್ಲ. ಇವಂದೇ ಗತಿ” ಅಂದೆ ಹೇಳ್ದಾ “ನಿನ್ ಬಿಡೂದೆಲ್ಲ ನಾವು, ನಿನ್ನ ಸಾಕೆತ್ರು.” ಅಂದ ರಾಜ ಹೇಳ್ದಾ “ಇವ್ನ ತೋಳ ಮೇಲೆ ಸರ್ಪದ ಹೆಡಿ ಇದೆ. ಹಾಗಾಗಿ ಗುರ್ತ ಹಿಡಿದ್ರು” ಹೇಳ್ರು.

ಇಲ್ಲಿ ಈ ಅರಸು ಜಾಗ ಮಾರೂಕೆ ಹೋದವ ಜಾಗ ಮಾರಾಟ ಮಾಡ್ದ ಅವ. “ಇಲ್ಲ ಬೇಡವೇ ಬೇಡಾ ಮಾರಾಟ ಮಾಡಿ ಪೇಟೆಯಲ್ಲಿ ಹೋಗ ಉಳಿವಾ” ಅಂತದೆ ಹೆಂಡ್ತಿ ಅದ್ರ ತಾಯೀ ಮನಿಂದೇ ಬತ್ತಾ. ಆಳು ಹೇಳ್ತ “ಅವ ಮುದ್ಕಾ ಜಮೀನೆಲ್ಲಾ ಮಾರಾಟ ಮಾಡಿ ತೋಟ ಎಲ್ಲ ಮಾರಾಟ ಮಾಡಿ ನಾವು ಹೋಗ್ವಾ ಅಂತಾ ದುಡ್ ತಕಂಡಿ ವಂದೂರಲ್ಲಿ ಪೇಟೆಗೆ ಬಂದಿ ವಂದೆ ರೂಮ್ ತಕಂಡಿ ಉಳೀತಾರೆ. ರಾತ್ರಿಗೆ ಮಲ್ಗಿದಾಗ ಗಂಡಗೆ ವಿಷ ಹಾಕ್ಬೇಕು.” ಹೇಳಿ ನೋಡ್ತಾರೆ. ಅವ ಯೆಂತದೂ ಕುಡೀಲೇ ಇಲ್ಲ. ಅವರ ಕೈಲಿ ರಾತ್ರಿ ಮಲ್ಗಿದಲ್ಲಿ ಹಾಕಾರೂ ಹೋಗ್ವಾ ಹೇಳಿ ಬಾಯ್ಲಿ ಬಿಟ್ಟಾ ಕಣ್ಗಿ ಬಿದ್ ಹೋಯ್ತು. ಕಣ್ಗೆ ಪೆಟ್ಟಾಯ್ತು. ಕಣ್ ಮುಚ್ಕಂಡಿದ್ದ ಅವ ಉರಿ ಯೆದ್ದಿ ಕಣ್ ತಿಕ್ಕಂತ ಉಳ್ದಾ. ಇವು ದುಡ್ಡಟ್ಟು ತಕ್ಕಂಡೆ ಪಾರು.

ಕಡಿಗಿವ ಬೆಳಗಾದ ಕೂಡ್ಲೆ ದುಡ್ಡೆಲ್ಲ. ಯೇನೆಲ್ಲ ಕಣ್ವಂದು ಹನೀ ಕಾಣ್ತದೆ. ಅದೇ ಹಳ್ಳೀಲಿ ಮಾಸ್ತರ್ರ ಮನೆ, ಮಗಳ ಮನೆ ಇರದು ಕಡಿಗೆ ಮಗಳ ಮನಿಗೆ ಬಂದು “ಬಿಕ್ಷಾ ಕೊಡಿ ಇಲ್ಲಾ ಒಂದು ಊಟಾನಾದ್ರೂ ಹಾಕಿ ನನಗೆ ಕಣ್ ಕಾಣೂದಿಲ್ಲ.” ಅಂದೆ ಹೇಳ್ತಾ. ಕಡಿಗವು ಒಳಗೆ ಕರೆದಿ ಮಣಿ ಕೊಟ್ಟೆ ಕೂರ್ಸಿ ಊಟ ಹಾಕಿತ್ರು. ಊಟ ಹಾಕೆ ಬೇಕಿದ್ರೆ ಸಾರ್ ತಂದ ಹಾಲಿ ಹೇಳಿ ಆ ಅತ್ತೆ ಹೇಳ್ತೂ ಅವರಿಗೆ “ಸಾರ್ ತಂದ ಹಾಕು ಅಂದ ಹೇಳ್ತದೆ. ಕಡಿಗವ ಊಟ ಬಿಟ್ಕಂಡಿ ಕೂತ್ಕಂಡಿ ತೀಡ್ಕಂತ ಉಳಿತಾ ನನ್ನ ಮಗಳು ರೇಖಾ ಆಗಿತ್ತು. ಹೇಳ್ತಾ, ತೀಡ್ತಾ ಎಲ್ಲಾ ಹೋಯ್ತು ನಿಮ್ಮ ಮಗಳು ಎಲ್ಲಾ ಹೋಯ್ತು? ಹೇಳಿ ಕೇಳ್ತಾರೆ. “ಅದು ನನ್ ಮಗಳು. ಹಿರಿಯ ಹೆಂಡ್ತಿ ಮಗಳಾಗಿತ್ತು. ಸಾಲಿಗೆ ಹೋಗ ಬೇಕಿದ್ರೆ ಮಾಸ್ತರ ಪ್ರೀತಿ ಮಾಡಿತ್ತು. ಊರ್ನಲೆ ಯೆಲ್ಲಾ ಕೂಡಿ ಮಾಸ್ತರಿಗೆ ಮದ್ವಿ ಮಾಡ್‌ಕೊಟ್ರು. ಇವ ಜಾಗ ಮಾರ್ದು ಯೆಲ್ಲಾ ಹೇಳ್ದಾ. ಜಾಗ ಮಾರಿ ಬರೂವರಿಗೆ ನನ್ನ ಮಗಳು ಇಲ್ಲ ಮಾಸ್ತರೂ ಇಲ್ಲ. ಅಂತಾ ಮಾಸ್ತರ ಸಿಕಬೇಕಿದ್ರೆ ಯೆಷ್ಟೆ ಪುಣ್ಯ ಮಾಡಿದ್ರೂ ನಾನು ಅಂತಾ ಮಾಸ್ತರ ಸಿಕ್ಕೊದೆಲ್ಲಾಗಿತ್ತು” ಅಂದ. ನಾನು ದೊಡ್ಡ ಅರಸೂ ಆಗಿತ್ತು. ಕಿರಿ ಹೆಂಡ್ತಿ ವಬ್ನ ಇಟ್ಕಂಡೇ ಬಂದಿತ್ತು. ಬರ್ವಾಗ ಆಳು ಆಳು ಹೇಳ್ತಾ ಬಂದಿತ್ತು. ನನ್ಗೆ ತೆಳೀಲೇ ಇಲ್ಲಾಗಿತ್ತು. ಮುದ್ಕೆ ಹೇಳಿ ನನ್ಗೆ ವಿಷ ಹಾಕಿ ಕೊಲ್ಲುಕೆ ಮಾಡ್ರು. ಕಣ್ಗ ಬಿದಂ ಹೋಯ್ತು ವಿಷ. ನನ್ನ ಕಣ್ಗಿ ಏನಾಗಲೇಯಿಲ್ಲಾ ಹಾಗೆಯೇ ಸ್ವಲ್ಪ ಚಿಕಿತ್ಸೆ ಮಾಡ್ಬೇಕಾಗೂದು. ಮತ್ತೇನಾಲೆಲ್ಲ ಹೇಳ್ದಾ, ಇವ್ರೆಗೆ ಗುತ್ತಾಯ್ತು.

ಅದ್ಕೆ ಹೊಡ್ದಿ ಕೊಲೆ ಮಾಡಿ ದುಡ್ಡಟ್ಟು ಕಟ್ಕಂಡ್ ಹೋಗಿ ಬಿಟ್ಟ ಮಿಂಡ. ಅವನೂರ್ಗೆ ಅವ ಹೋಗೆ ಬಿಟ್ಟಾ. ಮಾಸ್ತರೂ ನಿಂದೇವ, ನಿಂದೇ ಮಗಳು ಹಿಂದೆ ಹೇಳಿ ಆಸ್ಪತ್ರೆಗೆ ಕರ್ಕಂಡ ಹೋಗಿ ಚಿಕಿತ್ಸೆ ಮಾಡ್ಸಿ ಇವನ್ನೂ ಇಟ್ಕಂಡು ಮಡಿವಾಳ್ನೂ ಇಟ್ಕಂಡು ಸುಖ ಸಂತೋಷದಿಂದ ಉಳೀತಾರೆ.

ಹೇಳಿದವರು:
ಸೌ. ಮಹಾದೇವಿ ಜಟ್ಟಪ್ಪ ಪಟಗಾರ, ಮೊಸಳೆ ಸಾಲು, ತಾಲೂಕು ಕುಮಟಾ, ಅವರ ಮನೆಯಲ್ಲಿ
ದಿನಾಂಕ: ೦೩—೦೪-೨೦೦೧ ರಂದು ಹೇಳಿಸಿ ಬರೆದುಕೊಂಡದ್ದು.