ಭಂಗವೇಕೆ ಪಡುವೆ ನಿಸ್ಸಂಗಿಯಾಗೋ ಮನವೇ
ರಂಗುಗೂಡಿ ಬಹಿರಂಗವಾಗಿ
ತನು ಸಂಗದಿಂದ ನಿಜಲಿಂಗವ ಕಾಣದೆ || ಭಂಗವೇಕೆ ||

ಬಂಧು ಬಳಗವೆಂದು ಸಡಗರದಿಂದ ಬಳಲಿನೊಂದು
ಸಂದು ತಿಳಿಯದೆ ಹಿಂದೆ ಉಳಿಯದೆ ಎಂದಿನಂತಲೇ
ಹೊಂದುತ ತನುಗಳ || ಭಂಗವೇಕೆ ||

ಆತ್ಮ ಭಾವವಳಿದು ಇಲ್ಲದ ಜಾತಿಯಲ್ಲಿ ಸುಳಿದು
ಜಾತಿ ಪೋಗಿಯಮ ಭೀತಿಗಾಗಿ ಬಹುನಾಥನಾಗಿ
ಕಡು ಪಾತರೆಯಾಗುತ || ಭಂಗವೇಕೆ ||

ಶಂಕೆಯಲ್ಲಿ ಪಳಗಿ ಪಾಪದ
ಪಂಕದಲ್ಲಿ ಮುಳುಗಿ ಸಂಕಟಾಟವಿಗೆ
ಬೆಂಕಿಯಾದು ಗುರು ಶಂಕರರಿಗೆ
ಕಿಂಕರನಾದೆ || ಭಂಗವೇಕೆ ||