ಪಲ್ಲವಿ : ಭಕುತರ ವಶನೇ ದೇವ – ವಸುದೇವ ಸುತನೇ ಜಯ

ಚರಣ :  ಕುಸುಮಚಾಪ ಪಿತನೇ – ಸುಮಧುರ ಗುಣಯಶ
ತವನಿಧಿ ನಿನ್ನಯ ಕೃಪೆಯು – ದೇವಮಾತೃಕಾ ಸೇವಿತ

ರವಿಕುಲವ ಬೆಳಗಿದವ – ದೇವದೇವರೊಳು ದೇವರು
ವಶನಾಗು ನನ್ನಯ ಭಕ್ತಿಗೆ – ಸುಂದರ ಮೋಹನ ಮುಖದವ

ಶಂಕರಿಸೋದರ ಶೌರೇ – ತಮಸಾ ನದಿಯಲಿ ನಿಂದವ
ನೇತಾರರಿಗೆ ನೇತ್ರನೇ – ನನ್ನನು ರಕ್ಷಿಸು ನೀನೇ

ದೇಹದ ಮೋಹ ತೊಲಗಿಸೋ – ಹರಿಹರ ಬ್ರಹ್ಮ ಒಂದಾದ
ವಂದಿಪೆ ನಿನ್ನನು ಶ್ರೀಹರಿ – ಜಯಕೊಡು ಸ್ವಾಮಿ ಜಯದತ್ತ