ಪಂಚನಮಸ್ಕಾರಮನೋದುತ್ತಮು ಚ್ಚಾರಿಸುವ್ಯದಂ ಕೇಳುತ್ತಮಿರಿಮೆಂದುಂ ಕಲ್ಪಿಸಿ ಭಟಾರರ್ ಪಂಚನಮಸ್ಕಾರಮಂ ಪಿರಿದು ಬೇಗಂ ಪೇೞೆ ಪ್ರಾಯೋಪಗಮನದಿನೆಂತಂತೆ ಶುಭಪರಿನಾಮದಿಂ ಸವ್ಮ್ಯಗ್ ದರ್ಶನ ಜ್ಞಾನಚಾರಿತ್ರಂಗಳಂ ಸಾಸಿ ಮುಡಿಪಿ ಸೌಧರ್ಮ ಕಲ್ಪದೊಳೆರಡು ಸಾಗರೋಪಮಾಯುಷ್ಯಮನೊಡೆಯೊಂ ಕನಕಧ್ವಜನೆಂಬೊಂ ದೇವನಗಿ ಪುಟ್ಟಿಯವಜ್ಞಾನದಿಂ ತನ್ನ ಭವಮನಱದೀ ಶರೀರದಿಂದಮಿಂತಪ್ಪ ದಿವ್ಯಶರೀರಮುಂ ದೇವಲೋಕದೊಳಪ್ಪ ಸುಖಮೈಶ್ವರ್ಯಮುಮಾದುದೆಂದು ಮೂಱುಕೋಟಿ ಪರಿವಾರ ದೇವರ್ಕಳುಂ ಮೂಱುಲಕ್ಕೆ ದೇವಿಯರಪ್ಪರಸಿಯರ್ಕಳುಂ ಗಣಿಕಯರ್ಕಳುಂ ಬೆರಸು ಸುರತ್ನಮಯಮಪ್ಪ ದಿವ್ಯವಿಮಾನಮುಂ ಘಂಟಾಜಾಳ ಮುಕ್ತಾಜಾಳ ಹೇಮಜಾಳಂಗಳಿಂದೊಪ್ಪುವ ವಿಮಾನಮನೇಱ ಮಹಾವಿಭೂತಿಯಿಂ ತಗುಳ್ದುರಗಾವ್ಮರಂಬೆರಸು ಪಾಡುತ್ತಂ ಬರ್ಪನ್ನೆಗಮಿತ್ತ ವೈದಿಶಮೆಂಬ ಪೊೞಲೊಳ್ ನಂದಿಮಿತ್ರ ಕಿತ್ತಯ್ಯಂಗಳ್ ಮುಡಿಪಿದರೆಂಬುದಂ ಕೇಳ್ದರಸನುಂ ಮಹಾದೇವಿಯುಂ ಮಂತ್ರಿಯುಂ ಪೆರ್ಗಡೆಯುಂ ಮೊದಲಾಗಿ ಪೊೞಲೊಳಗುಳ್ಳ ಜನಮೆಲ್ಲಮರ್ಚನೆಗಳುಂ ಕೊಂಡು ಬಂದರಸಂ ತಾಂ ಪಕ್ಕದಿರ್ದು ಕ್ಷಪಣಕನನುಯ್ವ ವಿಮಾನಮುಮಂ ಮತ್ತಂ ಶೋಭೆಗೆಂದು ಪಲವು ವಿಮಾನಂಗಳುಮನೊಳ್ಳಿದುವಾಗಿ ಮಾಡಿಸಿ ಪಲವುಂ ನೇತ್ರದ ಪೞವುಲ್ಲವಂಗಳ್ ಧ್ವಜ ಪತಾಕೆಗಳುಮನೆತ್ತಿಸಿ ಚಾತುರ್ವರ್ಣ ಶ್ರವಣ

ಮಾಡುವುದನ್ನು ಕೇಳುತ್ತಾ ಇರಿ ” ಎಂದು ಕಲಿಸಿಕೊಟ್ಟು ಋಷಿಗಳು ಪಂಚನಮಸ್ಕಾರದ ಮಂತ್ರವನ್ನು ಬಹಳ ಬೇಗನೆ ಹೇಳಿದರು. ಆಗ ನಂದಿಮಿತ್ರನು ಪ್ರಾಣಾಂತ ಉಪವಾಸವ್ರತದಿಂದ ಹೇಗೋ ಹಾಗೆ ಶುಭವಾದ ಪರಿಣಾಮದಿಂದ ಸಮ್ಕ್ಯಗ್ ದರ್ಶನ – ಜ್ಞಾನ – ಚರಿತ್ರಗಳೆಂಬ ರತ್ನತ್ರಯವನ್ನು ಪಡೆದು, ಸತ್ತು, ಸೌಧರ್ಮ ಎಂಬ ಸ್ವರ್ಗದಲ್ಲಿ ಎರಡು ಸಾಗರದಷ್ಟು ಆಯುಷ್ಯವುಳ್ಳ ಕನಕಧ್ವಜನೆಂಬ ದೇವನಾಗಿ ಹುಟ್ಟಿದನು. ಅವನು ಅವಜ್ಞಾನದಿಂದ ತನ್ನ ಜನ್ಮವಿಚಾರವನ್ನು ತಿಳಿದು, “ಈ ಶರೀರದಿಂದ ಇಂತಹ ದಿವ್ಯವಾದ ಶರೀರವೂ ದೇವಲೋಕದಲ್ಲಿ ಆಗತಕ್ಕ ಸುಖೈಶ್ವರ್ಯಗಳೂ ಆದುವು” ಎಂದುಕೊಂಡು, ಮೂರು ಕೋಟಿ, ಪರಿವಾರ ದೇವತೆಗಳನ್ನೂ ಮೂರು ಲಕ್ಷದೇವಾಂಗನೆಯಾರಾದ ರಾಣಿಯರನ್ನೂ ದಾಸಿಯರನ್ನೂ ಕೂಡಿಕೊಂಡು ಒಳ್ಳೆಯ ರತ್ನಗಳಿಂದ ಕೊಡಿದ ಮತ್ತು ಗಂಟೆ, ಮುತ್ತು, ಚಿನ್ನಗಳ ಸಮೂಹದಿಂದ ಮೆರೆಯುವ, ದಿವ್ಯವಾದ ವಿಮಾನವನ್ನೇರಿ ಮಹಾವೈಭವದಿಂದ ಅನುಸರಿಸಿ ಬರುತ್ತಿದ್ದ ಉರಗಲೋಕದವರೂ ದೇವಲೋಕದವರೂ ಸೇರಿಕೊಂಡಿದ್ದು, ಹಾಡುತ್ತ ಬರುತ್ತಿದ್ದನು. ಆ ವೇಳೆಗೆ ಇತ್ತ ವೈದಿಶವೆಂಬ ಪಟ್ಟಣದಲ್ಲಿ ನಂದಿಮಿತ್ರ ಚಿಕ್ಕಸ್ವಾಮಿಗಳು ಸತ್ತುಹೋದರೆಂಬುದನ್ನು ಕೇಳಿ ರಾಜನೂ ಮಹಾರಾಣಿಯೂ ಮಂತ್ರಿಯೂ ಹೆಗ್ಗಡೆ (ಅರಮನೆಯ ಅಕಾರಿ)ಯೂ ಮುಂತಾದ ಪಟ್ಟಣದಲ್ಲಿದ್ದ ಜನರೆಲ್ಲರೂ ಪೂಜಾವಸ್ತುಗಳನ್ನು ತೆಗೆದುಕೊಂಡು ಬಂದರು. ಅರಸನು ತಾನು ಪಕ್ಕದಲ್ಲೇ ಇದ್ದು ಜೈನಸನ್ಯಾಸಿಯನ್ನು ಒಯ್ಯುತ್ತಿದ್ದ ಮಂಟಪವನ್ನಲ್ಲದೆ ಮತ್ತೂ ಹೆಚ್ಚಿನ ಶೋಭೆಗಾಗಿ ಹಲವು ಮಂಟಪಗಳನ್ನು ಒಳ್ಳೆಯ ರೀತಿಯವಾಗಿ ಮಾಡಿಸಿದನು. ಹಲವು ಬಗೆಯ ನೇತ್ರವೆಂಬ ರೇಷ್ಮೆವಸ್ತ್ರದ ಮೇಲ್ಕಟ್ಟುಗಳನ್ನೂ ಧ್ವಜಪತಾಕೆಗಳನ್ನೂ ಎತ್ತಿಸಿದನು. ಬ್ರಾಹ್ಮಣ, ಕ್ಷತ್ರಿಯ, ವೈಶ್ಯ, ಶೂದ್ರರೆಂಬ ನಾಲ್ಕು ವರ್ಣದವರು ಜೈನಸನ್ಯಾಸಿಗಳ ವೃಂದ

ಸಂಘ ಸಹಿತಂ ಪಟು ಪಟಹ ತುಣವ ಭಂಭಾ ಮರ್ದಳೆ ಝಲ್ಲರಿ ಮುಕುಂದ ತಾಳ ಕಾಹಳ ಶಂಖ ವಂಶ ವೀಣಾಸ್ವರಂಗಳೆಸೆಚಿi ಕವಿವರರುಂ ಪೆಚಿಡವಾಸದೊಳ್ವೆಂಡಿರ್ಕಳುಂ ವಿಮಾನಂಗಳ ಮಂದಾಡುತ್ತಂ ಕಮ್ಮಮುಮಂ ಪೊನ್ನುಮಂ ಕೇಳಿಮಾಡಿ ಮುಂದೆ ಸೂಸುತ್ತಮೊಯ್ವುದಂ ಕನಕಧ್ವಜನೆಂಬ ದೇವಂ ಕಂಡೆನ್ನ ದೇಹಕ್ಕಿವರೆಲ್ಲಮಿನಿವಿರಿ ದರ್ಚನೆಯುಮಂ ಪೂಜೆಯುಮಂ ವಿಭವಮುಂ ಪ್ರಭಾವನೆಯುಮಂ ಮಾಡಿದಪ್ಪರೆಂದೊಡಾನೆನ್ನ ದೇಹಕ್ಕೆ ಮಾಡದಿರ್ಪನೆಯೆಂದು ಪಲವು ವಿಮಾನಂಗಳಂ ವಿಗುರ್ವಿಸಿ ಕ್ಷಪಣಕನ ವಿಮಾನದ ಮುಂದೆ ಬಳಸಿಯುಂ ಪೋಪಂತು ಮಾಡಿಯಾಕಾಶಮೆಲ್ಲಮಂ ವಿಮಾನಮಯಮಾಗೆ ವಿಗುರ್ವಿಸಿ ದೇವಲೋಕದ ಪಱೆಗಳಂ ಬಾಜಿಸುತ್ತಂ ನಮೇರು ಮಂದಾರ ಸಂತಾನಕ ಪಾರಿಜಾತಂಗಳೆಂಬ ಪೂಗಳಂ ಸುರಿಯುತ್ತಂ ದೇವರ್ಕಳ ದೇವಿಯರ್ಕಳ್ ಸಹಿತಂ ಕ್ಷಪಣಕನ ವಿಮಾನದ ಮುಂದೆ ಇಂತೆಂದು ಪೇೞ್ದಾಡಿದಂ :

ಗಾಹೆ || ಪೆಚ್ಚಹ ಪೆಚ್ಚಹ ಓದಣ ಮುಂಡ
ಅಚ್ಚರ ಮಜ್ಝಗಯಂ ರವ್ಮಣಿಜ್ಜಂ
ಆಂಜೆಣ ಮಂತೆಣ ಕಾರಣ ಯೇಣ
ಪಚ್ಚ ಇಯವ್ವಂಹೋ ಇಣರೇಣ

ಎಂದು ಛಂದಛಂದದಿಂ ಪೇೞ್ದಾಡುವ್ಯದಂ ಕಂಡರಸಂ ಮೊದಲಾಗಿ ಪೊೞಲ ಜನವೆಲ್ಲಂ ಚೋದ್ಯಂಬಟ್ಟು ಬೆಱಗಾಗಿ ನೋಡುತ್ತಿರ್ದಿಂತೆಂದರಸಂ ಬೆಸಗೊಂಡಂ ವೀಮಾರ್ಗೇನೆಂಬಿರೆಲ್ಲಿಂ ಬಂದಿರಿಂತೇಕೆ

ಸಮೇತವಾಗಿದ್ದರು. ಸಮರ್ಥವಾದ ತಮಟೆ, ತುಣವ, ಭಂಭಾ (ಭೇರಿ), ಮದ್ದಳೆ, ಝಲ್ಲರಿ (ವಲಯಾಕರಾದ ವಾದ್ಯ), ಮುಕುಂದ (ಒಂದು ಬಗೆಯ ಮದ್ದಳೆ), ತಾಳ, ಕಾಹಳ(ತುತೂರಿ), ಶಂಖ, ಕೊಳಲು, ವೀಣೆ – ಇವುಗಳಿಂದ ನಾದ ಶೋಭಿಸುತ್ತಿತ್ತು. ಕವಿಶ್ರೇಷ್ಠರೂ ರಾಣೀವಾಸದ ಒಳ್ಳೆಯ ಹೆಂಡಿರೂ ಆ ಮಂಟಪಗಳ ಮುಂದೆ ಆಡುತ್ತ ದಮ್ಮ ಎಂಬ ನಾಣ್ಯಗಳನ್ನೂ ಹೊನ್ಮ್ನಗಳನ್ನೂ ಆಟದಂತೆ ಮುಂದೆ ಚೆಲ್ಲುತ್ತಿದ್ದರು. ನಂದಿಮಿತ್ರನ ಶವವನ್ನು ಈ ರೀತಿಯಾಗಿ ಒಯ್ಯುವುದನ್ನು ಕನಕಧ್ವಜನೆಂಬ ದೇವನು ಕಂಡನು. “ನನ್ನ ಹಿಂದಿನ ಮೃತದೇಹಕ್ಕೆ ಇವರೆಲ್ಲ ಇಷ್ಟೊಂದು ಹಿರಿದಾದ ಅರ್ಚನೆಯನ್ನೂ ಪ್ರಜೆಯನ್ನೂ ವೈಭವವನ್ನೂ ಗೌರವವನ್ನೂ ಮಾಡುತ್ತಿರುವಾಗ ನಾನು ನನ್ನ ದೇಹಕ್ಕೆ ಮಾಡದಿರುವೆನೆ ? ” ಎಂದು ಕನಕಧ್ವಜನು ಹಲವು ವಿಮಾನಗಳನ್ನು ಮಾಯೆಯಿಂದ ಸೃಷ್ಟಿಸಿ ಜೈನಸಂನ್ಯಾಸಿ ನಂದಿಮಿತ್ರನ ಶವದ ವಿಮಾನದ (ಮಂಟಪ) ಮುಂದೆ ಬಳಸಿ ಹೋಗುವಂತೆ ಮಾಡಿದನು. ಆಕಾಶವೆಲ್ಲವೂ ತುಂಬಿ ಹೋಗುವಂತೆ ಮಾಯೆಯಿಂದ ವಿಮಾನಗಳನ್ನು ಸೃಷ್ಟಿಸಿ ದೇವಲೋಕದ ಚರ್ಮವಾದ್ಯಗಳನ್ನು ಬಾರಿಸಿಕೊಂಡು, ಸುರಪುನ್ನಾಗ (ನಮೇರು), ಮಂದಾರ, ಸಂತಾನಕ, ಪಾರಿಜಾತ – ಎಂಬ ದೇವಲೋಕದ ಮರಗಳ ಹೂಗಳನ್ನು ಸುರಿಸುತ್ತ, ದೇವತಾಪುರುಷರಿಂದಲೂ ಸ್ತ್ರೀಯರಿಂದಲೂ ಕೂಡಿ ನಂದಿಮಿತ್ರ ಜೈನ ಸಂನ್ಯಾಸಿಯ ಶವಮಂಟಪದ ಮುಂದೆ ಹೀಗೆ ಹೇಳಿಕೊಂಡು ನೃತ್ಯ ಮಾಡಿದನು – (ಅನ್ನಕ್ಕಾಗಿ ತಲೆಯನ್ನು ಬೋಳಿಸಿರುವ ಬೋಳನನ್ನು – ಅಪ್ಸರಸ್ತ್ರೀಯರ ನಡುವೆ ಸುಂದರನಾಗಿ ಇರುವವನನ್ನು ನೋಡು ನೋಡು. ಯಾವುದಾದರೂ ಕಾರಣದಿಂದ

ಪೇೞ್ದಾಡಿದಪ್ಪಿರೆಂದು ಬೆಸಗೊಂಡೊಡಾನಲ್ತೆ ನಂದಿಮಿತ್ರನಪ್ಪ ಕಿತ್ತಯ್ಯನೆನುಣಿಸಿಂಗೆಂದು ತಪಂಬಟ್ಟೇೞುದಿವಸಮುಪವಾಸಂಗೆಯ್ದು ಮುಡಿಪಿ ಸಂನ್ಯಸನಂಗೆಯ್ದು ಮುಡಿಪಿ ದೇವಲೋಕದೊಳ್ ಕನಕಧ್ವಜನೆಂಬೊಂ ದೇವನಾಗಿ ಪುಟ್ಟ ಎನ್ನ ದೇಹಮಂ ಪೂಜಿಸಲುಂ ನಿಮಗೆನ್ನ ವಿಭವಮಂ ತೋಱಲ್ ಬಂದೆನೆಂದು ಪೇೞ್ದು ತನ್ನ ಶರೀರಮಂ ದಿವ್ಯಮಪ್ಪ ಗಂಧ ಪುಷ್ಪ ದೀಪ ಧೂಪಾಕ್ಷತೆಗಳಿಂದರ್ಚಿಸಿ ತನ್ನ ಗುರುಗಳಪ್ಪ ಶಿವಗುಪರೆಂಬಾಚಾರ್ಯರುಮಂ ಪೂಜಿಸಿ ನಿಮ್ಮ ಪ್ರಸಾದದಿಂದೆನಗಿನಿವಿರಿದು ಶ್ರೀಯುಂ ಮಹಾವಿಭೂತಿಯುಮೈಶ್ವರ್ಯಮುಂ ದೇವತ್ವಮುಮಾದುದೆಂದು ಪೇೞ್ದು ಬಂದಿಸಿ ತನ್ನ ದೇವಲೋಕಕ್ಕೆ ಪೋದನ್ ಇತ್ತಲರಸನುಮದೆಲ್ಲಮಂ ಕಂಡು ಸಂಸಾರ ಶರೀರ ಭೋಗ ವೈರಾಗ್ಯಪರಾಯಣನಾಗಿ ಶ್ರೀವರ್ಮನೆಂಬ ತನ್ನ ಪಿರಿಯ ಮಗಂಗೆ ರಾಜ್ಯಪಟ್ಟಂಗಟ್ಟಿ ಪಲಂಬರರಸುಮಕ್ಕಳು ಮಹಾದೇವಿ ಮೊದಲಾಗಿ ಪಲಂಬರರಸಿಯರ್ಕಳುಂ ಪರಿವಾರದವರುಂ ಪೊೞಲ ಪಲಂಬರ್ ಜನಂಗಳೆಲ್ಲಂ ಬೆರಸು ಶಿವಗುಪ್ತ ಭಟ್ಟಾರರ ಪಕ್ಕದೆ ತಪಂಬಟ್ಟು ಸವ್ಮ್ಯಗ್ ಜ್ಞಾನ ಚಾರಿತ್ರಂಗಳೊಳಗೊಳ್ಳಿತಾಗಿ ನೆಗೞ್ದು ಪಶ್ಚಾತ್ಕಾಲದೊಳ್ ಸಂನ್ಯಸನಂಗೆಯ್ದು ಮುಡಿಪಿಯನಿಬರುಂ ದೇವಲೋಕಕ್ಕೆ ವೋದರ್ ಮತ್ತಂ ಕನಕಧ್ವಜನೆಂಬ ದೇವಂ ಪಲಕಾಲಂ ದೇವಲೋಕದ

ಮನುಷ್ಯನು ಇಂತಹದನ್ನು ನಂಬುತ್ತಾನೆ) ಈ ರೀತಿಯಾಗಿ ಬೇರೆ ಬೇರೆ ಛಂದಸ್ಸುಗಳಿಂದ (ಪದ್ಯ ಧಾಟಿಗಳಿಂದ) ಹೇಳಿ ನರ್ತಿಸುವುದನ್ನು ರಾಜನೇ ಮುಂತಾದ ಪಟ್ಟಣಿಗರೆಲ್ಲ ಆಶ್ಚರ್ಯಚಕಿತರಾಗಿ ನೋಡುತ್ತಿದ್ದರು.  ರಾಜನು ಕನಕಧ್ವಜನೊಡನೆ – “ ನೀವು ಯಾರ ಸಂಬಂಧದವರು ? ಏನು ಹೇಳಲಿದ್ದೀರಿ ? ಎಲ್ಲಿಂದ ಬಂದಿರಿ? ಈ ರೀತಿ ಹೇಳಿಕೊಂಡು ಯಾಕೆ ಕುಣಿದಾಡುತ್ತೀರಿ? ” ಎಂದು ಕೇಳಿದನು. ಆಗ ಅವನು “ನಾನು ನಂದಿಮಿತ್ರನೆಂಬ ಚಿಕ್ಕಸ್ವಾಮಿಯಾಗಿದ್ದವನಲ್ಲವೆ? ಊಟಕ್ಕಾಗಿ ತಪಸ್ಸನ್ನು ಸ್ವೀಕರಿಸಿ ಏಳು ದಿವಸ ಉಪವಾಸ ಮಾಡಿ ಸತ್ತು ಸಂನ್ಯಾಸ ಕೈಕೊಂಡು ಸತ್ತು ದೇವಲೋಕದಲ್ಲಿ ಕನಕಧ್ವಜನೆಂಬ ದೇವನಾಗಿ ಹುಟ್ಟಿದೆನು. ನನ್ನ ಹಿಂದಿನ ಶರೀರವನ್ನು ಪೂಜಿಸುವುದಕ್ಕೂ ನಿಮಗೆ ನನ್ನ ವೈಭವವನ್ನು ತೋರಿಸುವುದಕ್ಕೂ ಬಂದಿದ್ದೇನೆ” ಎಂದು ಹೇಳಿದನು. ಆಮೇಲೆ ತನ್ನ ಶರೀರವನ್ನು ದೇವಲೋಕದಿಂದ ತಂದ ಗಂಧ, ಪುಷ್ಪ, ದೀಪ, ಧೂಪ, ಅಕ್ಷತೆಗಳಿಂದ ಪೂಜಿಸಿದನು. ತನ್ನ ಗುರುಗಳಾದ ಶಿವಗುಪ್ತರೆಂಬ ಆಚಾರ್ಯರನ್ನು ಪೂಜಿಸಿ, “ನಿಮ್ಮ ಅನುಗ್ರಹದಿಂದ ನನಗೆ ಇಷ್ಟೊಂದು ಹಿರಿದಾದ ಕಾಂತಿಯೂ ಐಶ್ವರ್ಯವೂ ಮಹಾಸಂಪತ್ತೂ ದೇವತ್ವವೈ ಆಗಿದೆ” ಎಂದು ಹೇಳಿ ವಂದಿಸಿ ತನ್ನ ದೇವಲೋಕಕ್ಕೆ ತೆರಳಿದನು. ಇತ್ತ ಜಯವರ್ಮ ಮಹಾರಾಜನು ಅದೆಲ್ಲವನ್ನೂ ಕಂಡು ಸಂಸಾರದಲ್ಲಿಯೂ ಶರೀರದಲ್ಲಿಯೂ ಸುಖದಲ್ಲಿಯೂ ವೈರಾಗ್ಯವೇ ಮುಖ್ಯ ಗುರಿಯಾಗುಳ್ಳವನಾಗಿ ಶ್ರೀವರ್ಮನೆಂಬ ತನ್ನ ಹಿರಿಯ ಮಗನಿಗೆ ರಾಜ್ಯಪಟ್ಟ ಕಟ್ಟಿದನು. ಅವನೂ ಹಲವು ಮಂದಿ ರಾಜಕುಮಾರರೂ ಮಹಾರಾಣಿ ಮುಂತಾದ ಹಲವು ಮಂದಿ ರಾಣಿಯರೂ ಪರಿವಾರದವರೂ ಪಟ್ಟಣದ ಹಲವು ಜನರೂ ಒಟ್ಟಾಗಿ ಶಿವಗುಪ್ತ ಋಷಿಗಳ ಬಳಿಯಲ್ಲಿ ತಪಸ್ಸನ್ನು ಸ್ವೀಕರಿಸಿದರು. ಸವ್ಮ್ಯಗ್ ಜ್ಞಾನ ಸಮ್ಯಕ್ ಚಾರಿತ್ರಗಳನ್ನು ಚೆನ್ನಾಗಿ ಆಚರಿಸಿ ಅನುಚಿತರದ ಕಾಲದಲ್ಲಿ ಸಂನ್ಯಾಸವನ್ನು ಮಾಡಿ ಸತ್ತು ಅವರೆಲ್ಲರೂ ದೇವಲೋಕಕ್ಕೆ ಹೋದರು. ಆಮೇಲೆ ಕನಕಧ್ವಜನೆಂಬ ದೇವನು ಹಲವು ಕಾಲ ದೇವಲೋಕದ ಸುಖವನ್ನು ಅನುಭವಿಸಿ ಮತ್ತೆ ಈ ಭೂಮಿಗೆ ಬಂದು

ಸುಖಮನನುಭವಿಸಿ ಬಂದಿಲ್ಲಿ ನೀಂ ಸಂಪ್ರತಿ ಚಂದ್ರಗುಪ್ತನಾಗಿ ಪುಟ್ಟಿದೆಯೆಂದು ಸಮಾಗುಪ್ತ ಭಟ್ಟಾರರ್ ತನ್ನ ಭವಮಂ ಪೇೞ್ದೊಡಾದಮಾನುಮೊಸೆದು ಸಂತೋಷಂಬಟ್ಟು ಭಟ್ಟಾರರಂ ವಂದಿಸಿ ತನ್ನರಮನೆಗೆ ವೋಗಿ ಇಂತು ಸಂಪ್ರತಿ ಚಂದ್ರಗುಪ್ತ ಮಹಾರಾಜಂ ಪೃಥ್ವಿಯನೇಕಚ್ಛತ್ರಚ್ಛಾಯೆಯಿಂದ ಮಾಳುತ್ತಮುಜ್ಜೇನಿಯೊಳ್ ಸುಖದಿಂದಿರ್ಪನ್ನೆಗಂ ಇತ್ತ ದ್ವಾದಶಾಂಗ ಚತುರ್ದಶಪುರ್ವಧಾರಿಗಳಪ್ಪ ಭದ್ರಬಾಹು ಭಟ್ಟಾರರ್ ಪಿರಿದು ಋಷಿಸಮುದಾಯಂ ಬೆರಸು ಗ್ರಾಮ ನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ವಿಹಾರಿಸುತ್ತಂ ಬರ್ಪೊರುಜ್ಜೇನಿಗೆ ವಂದಾ ಪೊೞಲ ಬಹಿರುದ್ಯಾನವನದೊಳಿರ್ದರದನರಸಂ ಕೇಳ್ದು ಪರಿವಾರಸಹಿತಂ ಪೋಗಿ ಭಟಾರರಂ ವಂದಿಸಿ ಸದ್ಧರ್ಮಮಂ ಕೇಳ್ದು ಶ್ರಾವಕಬ್ರತಂಗಳನೇಱಸಿಕೊಂಡು ವಂದಿಸಿ ತನ್ನರಮನಗೆಗೆ ವೋದನಿತ್ತ ಭಟಾರರುಂ ಪಲವು ದಿವಸಮಾ ಪೊೞಲೊಳಿರೆ ಮತ್ತೊಂದು ದಿವಸಂ ಋಷಿಸಮುದಾಯವೆಲ್ಲಮಂ ಚರಿಗೆವೊಗಿಸುತ್ತಮೆಲ್ಲರುಮಂ ನಿಱಸಿ ತಾವೊರ್ವರೆಯೊಂದು ಮನೆಯಂ ಪೊಕ್ಕಾಗಳಾ ಮನೆಚಿiಳಾರು ಮಿಲ್ಲೋಸರಿಗೆಯೊಳ್ ತೊಟ್ಟಿಲೊಳಿರ್ದವ್ಯಕ್ತ ಕಿಱುಗೂಸು ಬೋಳಹ ಬೋಳಹ ಭಟ್ಟಾರಾ ಎಂದತ್ತಾಗಳಾ ವಚನಮಂ ಭಟ್ಟಾರರ್ ಕೇಳ್ದು ದಿವ್ಯವಾಕ್ಯಮೆದಱದು ಕಾಲಪ್ರಮಾಣಮಂ ಬೆಸಗೊಂಡೊಡೆ ದ್ವಾದಶವರ್ಷಮೆಂದು ಪೇೞ್ದತ್ತು ಭಟ್ಟಾರರ್ ಕಾಲದೋಷದಿಂ ಪ್ರಜಾಪೀಡೆಯಾದಪ್ಪುದೆಂದಱದು ಕಾರುಣ್ಯಬುದ್ಧಿಮುಂದಾಹಾರಮಂ ಕೊಳ್ಳೆದೆ ಅಲಾಭಂ ಮಾಡಿಯಂತೆ ಬಸದಿಗೆ ವೋಗಿ

ನೀನೀಗ ಸಂಪ್ರತಿ ಚಂದ್ರಗುಪ್ತನಾಗಿ ಹುಟ್ಟಿರುತ್ತೀಯೆ – ಎಂದು ಸಮಾಗುಪ್ತ ಋಷಿಗಳು ಅವನ ಜನ್ಮವೃಂತ್ತಾಂತವನ್ನು ಹೇಳಿದರು. ಇದರಿಂದ ಅತ್ಯಂತ ಪ್ರೀತಿಗೊಂಡು ಸಂತೋಷಪಟ್ಟು ಸಂಪ್ರತಿ ಚಂದ್ರಗುಪ್ತ ಮಹಾರಾಜನು ಸಮಾಗುಪ್ತ ಋಷಿಗಳನ್ನು ವಂದಿಸಿ ತನ್ನ ಅರಮನೆಗೆ ಹೋಗಿ ಈ ರೀತಿಯಾಗಿ ಭೂಮಿಯನ್ನು ಏಕಚ್ಛತ್ರದ ನೆರಳಿನಲ್ಲಿ (ಚಕ್ರವರ್ತಿಯಾಗಿ) ಆಳುತ್ತ ಉಜ್ಜಯನಿಯಲ್ಲಿ ಸುಖದಿಂದ ಇದ್ದನು. ಇತ್ತ ಹನ್ನೆರಡು ಅಂಗಗಳನ್ನೂ ಹದಿನಾಲ್ಕು ಪೂರ್ವವೆನಿಸಿದ ಶಾಸಗಳನ್ನೂ ಬಲ್ಲ ಭದ್ರಬಾಹು ಋಷಿಗಳು ಹೆಚ್ಚು ಋಷಿಗಳ ಸಮೂಹವನ್ನು ಕೂಡಿಕೊಂಡು ಗ್ರ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಮುಖಗಳನ್ನು ಸಂಚಾರಮಾಡುತ್ತ ಬರುತ್ತಿದ್ದವರು ಉಜ್ಜಯನಿಗೆ ಬಂದು ಆ ಪಟ್ಟಣದ ಬಾಹ್ಯೋದ್ಯಾನದಲ್ಲಿದ್ದರು. ಅವರು ಅಲ್ಲಿದ್ದುದನ್ನು ರಾಜನು ಕೇಳಿ ಪರಿವಾರದೊಡನೆ ಹೋಗಿ ಋಷಿಗಳನ್ನು ವಂದಿಸಿ ಅವರಿಂದ ಒಳ್ಳೆಯ ಧರ್ಮದ ಉಪದೇಶವನ್ನು ಕೇಳಿ, ಶ್ರಾವಕವ್ರತಗಳನ್ನು ಸ್ವೀಕರಿಸಿ, ವಂದಿಸಿ ತನ್ನ ಅರಮನೆಗೆ ತೆರಳಿದನು. ಇತ್ತ ಋಷಿಗಳು ಹಲವು ದಿವಸ ಆ ಪಟ್ಟಣದಲ್ಲಿದ್ದರು. ಹೀಗಿರಲು ಒಂದು ದಿವಸ ಅವರು ಋಷಿಸಮೂಹವನ್ನು ಅಲ್ಲಲ್ಲಿ ಭಿಕ್ಷೆಗೆ ಕಳುಹಿಸಿ ಅವರೆಲ್ಲರೂ ಅಲ್ಲಲ್ಲೇ ಊಟಮಾಡುವಂತೆ ಹೇಳಿ ತಾವು ಒಬ್ಬರೇ ಒಂದು ಮನೆಯನ್ನು ಹೊಕ್ಕರು. ಆ ಮನೆಯಲ್ಲಿ ಯಾರು ಇರಲಿಲ್ಲ. ಒಳಕೋಣೆಯಲ್ಲಿ ತೊಟ್ಟಿಲಲ್ಲಿ ಇದ್ದಂತಹ ಮತ್ತು ಅಸ್ಪಷ್ಟವಾಗಿ ಕಾಣುತ್ತಿದ್ದಂತಹ ಒಂದು ಚಿಕ್ಕಮಗು “ಎಲೈ ಋಷಿಯೇ, ಹೋಗು ಹೋಗು” ಎಂಬಂತೆ ಕೂಗಿತು. ಆ ಮಾತನ್ನು ಭದ್ರಬಾಹು ಭಟ್ಟಾರರು ಕೇಳಿ, ಇದು ದೇವರ ಮಾತೆಂತಲೇ ತಿಳಿದು “ಎಷ್ಟು ಕಾಲ?” ಎಂಬುದಾಗಿ ಕೇಳಿದರು. ಆಗ ಅದು “ಹನ್ನೆರಡು ವರ್ಷ” ಎಂದು ಹೇಳಿತು. ಕಾಲದೋಷದಿಂದ ಪ್ರಜೆಗಳಿಗೆ ತೊಂದರೆಯಾಗುವುದೆಂದು ಋಷಿಗಳು ತಿಳಿದು, ಕರುಣೆಯ ಬುದ್ಧಿಯಿಂದ ಆಹಾರವನ್ನು ಸ್ವೀಕರಿಸದೆ (ಅಲಾಭ ಮಾಡಿ) ಹಾಗೆಯೇ

ಗೋಚಾರನಿಯಮಂಗೆಯ್ದು ವೞಕ್ಕೆ ರಿಸಿಯರ್ಕಳ್ಗೆಲ್ಲಂ ಬೞಯನಟ್ಟಿ ಬರಿಸಿ ಇಂತೆಂದರೀ ನಾಡೊಳ್ ಪನ್ನೆರಡು ಮರುಷಂಬರೆಗಮನಾವೃಷ್ಟಿಯಾಗಿ ದುರ್ಭಿಕ್ಷಮಾದಪ್ಪುದೀ ನಾಡೊಳಗಿರ್ದ ರಿಸಿಯರ್ಕಳ್ಗೆಲ್ಲಂ ಬೇಗಂ ಬೞಯಟ್ಟಿ ಬರಿಸಿಂ ಪೋಪಂ ದಕ್ಷಿಣಾಪಥಕ್ಕೆಂದು ರಿಸಿಯರ್ಕಳ್ಗೆಲ್ಲಂ ಬೞಯನಟ್ಟಿದರಿತ್ತರಸನುಮಾ ದಿವಸದಿರುಳ್ ಪದಿನಾಱುಂ ಪೊಲ್ಲಕನಸುಗಳಂ ಕಂಡನವಾವುವೆಂದೊಡೆ ಆದಿತ್ಯನಸ್ತಮಾನಕ್ಕೆ ಸಲ್ವುದುಮಂ ಕಲ್ಪವೃಕ್ಷದ ಕೋಡುಡಿವುದುಮಂ ನೆಲಕ್ಕೆವರುತಿರ್ದ ವಿಮಾನಂ ಬಾರದೆಡೆಮುಂದೆ ಮೇಗೆ ಮಗುೞ್ದದುಮಂ, ಪನ್ನೆರಡು ತಲೆಯ ಪಾವುಮಂ ಚಂದ್ರನೊಡೆದುದುಮಂ ಕಡುಗಡಿಯವಪ್ಪೆರಡಾನೆಗಳ್ ತಮ್ಮೊಳ್ ಪೋರಲ್ ಸಾರ್ದು ಪೆಱಪಿಂಗಿ ಪೋದುದುಮಂ ಮೀನಂ ಬುೞುವುಮಂ ನೀರಿಲ್ಲದ ಕೆಱೆಯ ನಡುವುಮಂ ಪೊಗೆ ಪೆರ್ಚಿ ನೆಗೆದ ಕಾೞರ್ಚುಮಂ ಸಿಂಹಾಸನದ ಮೇಗೇಱರ್ದ ಕೋಡಗಮುಮಂ ಪೊನ್ನ ತಳಿಗೆಯೊಳ್ ನಾಯ್ ತುಯ್ಯಲುಣ್ಬುದುಮಂ ಕೊಡಗವೇಱರ್ದ ಸೊರ್ಕಾನೆಯುಮಂ ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಸಮುದ್ರಂ ಮೇರೆದಪ್ಪಿದುದುಮಂ ಬೆಳ್ಗೞ್ತೆಪೂಡಿದ ಪೊನ್ನರಥಮಂ ಬೆಳ್ಗೞ್ತೆಯನರಸರ್ಕಳೇಱುವುದುಮಂ – ಇಂತೀ ಪದಿನಾಱುಂ ಕನಸುಗಳಂ ಸಮ್ಯಗ್ದರ್ಶನ ಶುದ್ಧಿ ಮೊದಲಾಗೊಡೆಯ ಗುಣಂಗಳಿಂ ಕೂಡಿದ ಸಂಪ್ರತಿ ಚಂದ್ರಗುಪ್ತಮಹಾರಾಜಂ ಪೊಲ್ಲಕನಸುಗಳಂ ಕಂಡೆನೆಂದಂಜಿ ನೇಸಱ್ ಮೂಡಿದಾಗಳ್ ಭದ್ರಬಾಹು ಭಟ್ಟಾರರಲ್ಲಿಗೆ ಪೋಗಿ ವಂದಿಸಿ ತನ್ನ ಕಂಡ ಕನಸುಗಳಂ ಭಟಾರರ್ಗೆ ಭಟಾರರ್ಗೆ ಪೇೞ್ದದರ ಫಲಂಗಳಂ ಬೆಸಗೊಂಡೊಡೆ ಭಟಾರರಿಂತೆಂದು

ಬಸದಿಗೆ ಹೋಗಿ ಗೋಚಾರ ನಿಯಮವನ್ನು ಮಾಡಿ (ಬೇರೆ ಯಾವ ಕಡೆಗೂ ಮನಸ್ಸು ಕೊಡದೆ) ಮತ್ತೆ ಋಷಿಗಳಿಗೆಲ್ಲ ಕರೆ ಕಳುಹಿಸಿ ಬರಮಾಡಿ ಅವರೊಡನೆ ಹೀಗೆಂದರು – “ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಮಳೆಬಾರದೆ ದುರ್ಭಿಕ್ಷ (ಬರಗಾಲ) ವುಂಟಾಗುವುದು. ಈ ನಾಡಿನಲ್ಲಿರುವ ಋಷಿಗಳಿಗೆಲ್ಲ ಬೇಗ ಕರೆ ಕಳುಹಿಸಿ ಬರಮಾಡಿ, ದಕ್ಷಿಣದೇಶಕ್ಕೆ ಹೋಗೋಣ, “‘ ಈ ರೀತಿಯಾಗಿ ಋಷಿಗಳಿಗೆಲ್ಲ ಕರೆ ಕಳುಹಿಸಿದರು. ಇತ್ತ ರಾಜನು ಅಂದಿನ ರಾತ್ರಿ ಹದಿನಾರು ದುಃಸ್ವಪ್ನಗಳನ್ನು ಕಂಡನು. ಅವು ಯಾವುವೆಂದರೆ : . ಸೂರ್ಯನು ಅಸ್ತಂಗತನಾಗುವುದು, ೨. ಕಲ್ಪವೃಕ್ಷದ ಕೊಂಬೆ ಮುರಿಯುವುದು, ೩. ನೆಲಕ್ಕೆ ಬರುವ ವಿಮಾನ ಬಾರದೆ ಮಧ್ಯದಿಂದಲೇ ಮೇಲಕ್ಕೆ ತಿರುಗಿಹೋದುದು, ೪. ಹನ್ನೆರಡು ತಲೆಗಳುಳ್ಳ ಹಾವು ಕಾಣಿಸಿದುದು, ೫. ಚಂದ್ರಬಿಂಬ ಒಡೆದುದು, ೬. ಅತ್ಯಂತ ಬಲಿಷ್ಠವಾದ ಎರಡು ಆನೆಗಳು ತಮ್ಮೊಳಗೆ ಹೋರಾಡುವುದಕ್ಕಾಗಿ ಹತ್ತಿರ ಬಂದು ಹಿಂದಕ್ಕೆ ಸರಿದು ಹೋದುದು, ೭. ಮಿಂಚುಹುಳು ಕಾಣಿಸಿದುದು, ೮. ನೀರಿಲ್ಲದ ಕೆರೆಯ ಮಧ್ಯಭಾಗ, ೯. ಹೊಗೆ ಹೆಚ್ಚಾಗಿ ಮೇಲೆದ್ದ ಕಾಡುಗಿಚ್ಚು, ೧೦. ಸಿಂಹಾಸನದ ಮೇಲೆ ಏರಿದ ನರಿ, ೧೧. ಚಿನ್ನದ ತಟ್ಟೆಯಲ್ಲಿ ನಾಯಿ ಪಾಯಸವನ್ನು ಉಣ್ಣುವುದು, ೧೨. ಮದ್ದಾನೆಯ ಮೇಲೆ ಕೋತಿ ಕುಳಿತುದು, ೧೩. ಕಸದ ರಾಶಿಯಲ್ಲಿ ತಾವರೆ ಹುಟ್ಟಿದುದು, ೧೪. ಸಾಗರವು ತನ್ನ ಎಲ್ಲೆ ದಾಟಿದುದು, ೧೫. ಬಿಳಿಯ ಕತ್ತೆಯನ್ನು ಕಟ್ಟಿದ ಚಿನ್ನದ ತೇರು, ೧೬. ರಾಜರುಗಳು ಬಿಳಿಕತ್ತೆಯ ಮೇಲೆ ಸವಾರಿಮಾಡುವುದು – ಈ ರೀತಿಯಾಗಿ ಹದಿನಾರು ಕೆಟ್ಟ ಕನಸುಗಳನ್ನು ಸಮ್ಯಗ್ದರ್ಶನ – ಶುದ್ಧಿ ಮುಂತಾಗಿರುವಗುಣಗಳಿಂದ ಕೂಡಿದ ಸಂಪ್ರತಿ ಚಂದ್ರಗುಪ್ತ ಮಹಾರಾಜನು ತಾನು ಕಂಡೆನೆಂದು ಹೆದರಿದನು. ಸೂರ್ಯೋದಯವಾದ ವೇಳೆಗೆ ಅವನು ಭದ್ರಬಾಹು ಋಷಿಗಳಲ್ಲಿ ಹೋಗಿ ನಮಸ್ಕರಿಸಿ, ತಾನು ಕಂಡ ಕನಸುಗಳನ್ನು ಋಷಿಗಳಿಗೆ ಹೇಳಿ ಅವುಗಳ ಫಲವೇನೆಂಬುದಾಗಿ

ಪೇೞಲ್ ತೊಡಗಿದರ್ ಅದಿತ್ಯನಸ್ತಮಾನಕ್ಕೆ ಸಲ್ವುದಂ ಕಂಡುದಱಂದೀ ಭರತಕ್ಷೇತ್ರದೊಳ್ ಚತುರ್ದಶಪೂರ್ವಧಾರಿಗಳುಮವಜ್ಞಾನಿಗಳುಮಿಲ್ಲಿಂದಿತ್ತಲಾಗರ್ ಕಲ್ಪವೃಕ್ಷದ ಕೋಡುಡಿದುದುಮಂ ಕಂಡುದಱಂದಿಂದಿಂನ ದಿವಸಂ ಕೞದೊಡೆ ಕುಲಬಲವಿಭವದಿಂ ಪಿರಿಯರಪ್ಪ ಮಕುಟಬದ್ಧರ್ಪರಸುಗಳ್ ತಪಂಬಡುವರಲ್ಲರ್ ನೆಕ್ಕೆವರುತ್ತರ್ದ ಮಿಮಾನದೆಡೆಮುಂದಂ ಮೇಗೆ ಮಗುೞು*ದಂ ಕಂಡುದಱಂ ದೇವರ್ಕಳುಂ ವಿದ್ಯಾಧರ್ರಳುಮಿಲ್ಲಿಂದಿತ್ತೀ ಕ್ಷೇತ್ರಕ್ಕೆ ವಾರರ್ ಪನ್ನೆರಡು ತಲೆಯ ಪಾವಂ ಕಂಡುದಱಂದಿಲ್ಲಿಂ ತೊಟ್ಟೀನಾಡೊಳ್ ಪನ್ನೆರಡು ವರ್ಷಂಬರಂ ರೌದ್ರ ಪಸವಮಕ್ಕುಂ ಚಂದ್ರನೊಡೆದುದುಂ ಕಂಡುದಱಂ ಸದ್ದರ್ಮದ ಮೊದಲ ಪೊರ್ದಿದ ಮಾರ್ಗದಿಂ ಬೆಳೆಯೊಳ್ ಪುಲ್ಗಳ್ ಪಲವಕ್ಕುಂ ಕಡುಗಡಿಯವಪ್ಪೆರಡಾನೆಗಳ್ ತಮ್ಮೊಳ್ ಪೋರಲ್ ಸಾರ್ದು ಪೆಱಪಿಂಗುವ್ಯದಂ ಕಂಡುದಱಂ ಪ್ರಜೆಗಳ ಮೆಚ್ಚಿದಂತೆ ಮೞೆಕೊಳ್ಳವು ಮಂಡಲ ವರ್ಷಂಗಳಕ್ಕುಂ ಮೀನಂಬುೞುವಂ ಕಂಡುದಱಂ ಮೀನಂಬುೞುವಿನೋಲೋರನ್ನವು ಶಾಸ್ತ್ರಂಗಳುಮಂಗ ಬಾಹ್ಯಮಪ್ಪ ಚತುರ್ದಶ ವಿದ್ಯಾಸ್ಥಾನಂ ಗಳುಂ ಕುಂದಿಯುಪದೇಶ ತನುಮಾತ್ರಮೆ ನಿಲ್ಕುಂ ನೀರಿಲ್ಲದೆ ಕೆಱೆಯ ನಡುವಂ ಕಂಡುದಱೆಂ ತೀರ್ಥಂಕರ ಚಕ್ರವರ್ತಿಗಳ ಪುಟ್ಟಿದ ಮಧ್ಯದೇಶದೊಳ್ ಪಿನ್ನ ನೆಗೞ್ತೆಯಾಗದು ಆ ಮಧ್ಯಪ್ರದೇಶಕ್ಕೆ ಸಂಬಂಯೀ

ಗಾಹೆ: ಪುವ್ವೇಣ ಅಂಗವಿಸಓ ದಕ್ಖಣ ದೋ ಜಾವಹೋ ಇ ಕೋಸಂಬೀ
ಅವರೇಣ ಜಾವ ದೂಣಾ ಕುಣಾಳ ವಿಸಯೋಯ ಉತ್ತರದೋ ||

ಕೇಳಲು ಭದ್ರಬಾಹು ಮುನಿಗಳು ಹೀಗೆ ಹೇಳತೊಡಗಿದರು – ಸೂರ್ಯನು ಮುಳುಗುವುದನ್ನು ಕಂಡುದರಿಂದ ಈ ಭರತಕ್ಷೇತ್ರದಲ್ಲಿ ಹದಿನಾಲ್ಕು ಪೂರ್ವಗಳನ್ನು ತಿಳೀದವರೂ ಅವಜ್ಞಾನಿಗಳೂ ಇನ್ನು ಮುಂದೆ ಆಗರು. ಕಲ್ಪವೃಕ್ಷದ ಮರಕೊಂಬೆ ಮುರಿದುದನ್ನು ಕಂಡುದರಿಂದ ಈ ದಿವಸ ದಾಟಿದರೆ, ಕುಲ – ಸಾಮರ್ಥ್ಯ – ವೈಭವದಿಂದ ದೊಡ್ಡವರೆನಿಸಿದ ಕಿರೀಟಧಾರಿಗಳದ ರಾಜರುಗಳು ತಪಸ್ಸು ಮಾಡಲು ಉದ್ಯುಕ್ತರಾಗರು. ನೆಲಕ್ಕೆ ಬರುತ್ತಿದ್ದ ವಿಮಾನವು ಮಧ್ಯದಿಂದಲೇ ಮೇಲಕ್ಕೆ ತಿರುಗಿದುದನ್ನು ಕಂಡುದರಿಂದ ದೇವತೆಗಳೂ ವಿದ್ಯಾಧರರೂ ಇಲ್ಲಿಂದ ಮುಂದೆ ಈ ಕ್ಷೇತ್ರಕ್ಕೆ ಬರಲಿಕ್ಕಿಲ್ಲ. ಹನ್ನೆರಡು ತಲೆಗಳಿರುವ ಹಾವನ್ನು ಕಂಡುದರಿಂದ ಇಲ್ಲಿಂದ ಹಿಡಿದು ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಘೋರವಾದ ಕ್ಷಾಮ ತಲೆದೋರುವುದು. ಚಂದ್ರಬಿಂಬ ಹೋಳಾದುದನ್ನು ಕಂಡುದರಿಂದ ಸದ್ಧರ್ಮದ ಮೂಲದ ಮಾರ್ಗದಲ್ಲಿರುವ ಬೆಳೆಯಲ್ಲಿ ಹಲವು ಹುಲ್ಲುಗಳು ಕಳೆಯಾಗಿ ಉಂಟಾಗಿರುವುವು (ಧರ್ಮ ಕೆಡುವುದು). ಬಲಿಷ್ಠವಾದ ಎರಡು ಆನೆಗಳು ಹೋರಾಡಲು ಬಂದು ಹಿಂಜರಿದುದನ್ನು ಕಂಡುದರಿಂದ ಪ್ರಜೆಗಳು ಇಚ್ಚಿಸಿದ ಹಾಗೆ ಮಳೆಗಳಾಗವು, ಕೆಲಕೆಲವು ಪ್ರದೇಶಗಳಲ್ಲಿ ಮಾತ್ರ ಮಳೆಗಳು ಸುರಿದಾವು. ಮಿಂಚು ಹುಳವನ್ನು ಕಂಡುದರಿಂದ ಮಿಂಚುಹುಳುವಿನಂತಾಗಿ ಶಾಸ್ತ್ರಗಳು ಕುಂದಿಹೋಗಿ ಹೊರ ಮೈ ಮಾತ್ರ ನಿಲ್ಲುವುದು. ನೀರಿಲ್ಲದೆ ಕೆರೆಯ ಮಧ್ಯಭಾಗವನ್ನು ಕಂಡುದರಿಂದ ತೀರ್ಥಂಕರ ಚಕ್ರವರ್ತಿಗಳು ಜನಿಸಿದ ಮಧ್ಯದೇಶದಲ್ಲಿ ಹಿಂದಿನ ಕಾಲದ ಖ್ಯಾತಿ ಇಲ್ಲವಾಗುವುದು. ಆ ಮಧ್ಯದೇಶವನ್ನು ಸಂಬಂಸಿದ ಗಾಹೆಯ ಅರ್ಥ ಹೀಗಿದೆ – (ಪೂರ್ವದಲ್ಲಿ ಅಂಗದೇಶ. ಚಕ್ಷಿಣದಲ್ಲಿ ಕೌಶಂಬೀನಗರ. ಪಶ್ಚಿಮದಲ್ಲಿ ದಾಣ, ಉತ್ತರದಲ್ಲಿ ಕುಣಾಳ ದೇಶ – ಈ

ಎಂದು ಮಧ್ಯದೇಶಪ್ರಮಾಣಂ ಮತ್ತಂ ಪೊಗೆಂದಂ ಪೆರ್ಚಿ ನೆಗೆದ ಕಾೞ್ಕರ್ಚಂ ಕಂಡುಕಱಂ ಧೂರ್ತರಪ್ಪ ಪೊಲ್ಲಲಿಂಗಿಗಳ ಪೆರ್ಚಕ್ಕುಂ ಮತ್ತಂ ದಯೆ ಮೊದಲಾಗೊಡೆಯ ಸದ್ಧರ್ಮಕ್ಕೆ ವಿರುದ್ಧ ಮಾಗಿ ನೆಗೞ್ದ ಪಿರಿದಪ್ಪ ಹಿಂಸಾದಿಗಳಂ ಗೆಯ್ವ ವೇದಾದಿಶಾಸ್ತ್ರಂಗಳ ಪೆರ್ಚಕ್ಕುಂ ಸಿಂಹಾಸನ ಮನೇಱರ್ದ ಕೋಡಗಮಂ ಕಂಡುದಱಂ ಕುಲಜರಲ್ಲದವರರಸುಗೆಯ್ವರ್ ಪೊನ್ನತಳಿಗೆಯೊಳ್ ನಾಯ್ ತುಯ್ಯಲನ್ಮಣ್ಬುದಂ ಕಂಡುದಱಂ ಪೊಲ್ಲಲಿಂಗಿಗಳರಸರ್ಕಳಿಂದಂ ಪೂಜಿಸೆ ಪಡುವರ್ ಕೋಡಗಮಾನೆಯನೇಱುವ್ಯದಂ ಕಂಡುದಱಂದಾದಮಾನುಂ ಶುದ್ಧಕುಲದೊಳ್ ಪುಟ್ಟಿದರಸು ಮಕ್ಕಳುತ್ತಮ ಕುಲದೊಳಪ್ಪಭಿಮಾನಮಂ ತೊಱೆದು ಬಾೞ್ಕಾರಣಮಾಗಿ ಕುಲಜರಲ್ಲಕದವರ್ಗಾಳಾಗಿ ಬಾೞ್ವರ್ ಕಸಕುಪ್ಪೆಯೊಳ್ ತಾಮರೆ ಮೂಡಿದುದಂ ಕಂಡುಕಱಂ ದಯೆಯುಪಶಮಮುಂ ಪರಿಗ್ರಹ ಪರಿತ್ಯಾಗಮುಂ ಸಮಾಯುಂ ಸತ್ಯಮುಂ ಶೌಚಮುಂ ಕ್ಷಮೆಯುಮೆಂದಿವು ಮೊದಲಾಗೊಡೆಯವಱೊಳ್ ಕೂಡಿದ ಮಿಕ್ಕ ಸದ್ಧರ್ಮಮಾರ್ಗಮಂ ದ್ರವ್ಯಪತಿಗಳುಮರಸು ಮಕ್ಕಳುಂ ತಮ್ಮ ದ್ರವ್ಯಾದಿ ಮದದಿಂದಂ ತೊಱೆವರ್ ನೀಚಜಾತಿಗಳುಂ ಬಡವರುಂ ಸದ್ಧರ್ಮಮಂ ಕೈಕೊಂಡು ನೆಗೞ್ವರ್ ಸಮುದ್ರಂ ಮೇರೆದಪ್ಪುವ್ಯದಂ ಕಂಡುದಱಂದರಸುಮಕ್ಕಳ್ ತಮ್ಮ ಮರ್ಯಾದೆಯಂ ಮಿಕ್ಕು ದ್ರವ್ಯಂ ಮೊದಲಾಗೊಡೆಯವಱೊಳ್ ಲೋಭಿಷ್ಠರಪ್ಪರ್ ಒಳ್ಳಿತಪ್ಪ ಸತ್ಯ ಶೌಚ ಚಾರಿತ್ರವೆಂದಿವಱಂ ಕುಂದಿಯಾದಮಾನುಂ ನಿರ್ದಯರ್ಕಳಪ್ಪರ್ ಬೆಳ್ಗೞ್ತೆ ಪೂಡಿದ ಪೊನ್ನರಥಮಂ ಕಂಡುದಱಚಿದಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಿಂದಂ ಪವಿತ್ರಮಪ್ಪ ನಿರ್ಗ್ರಂಥ ಲಿಂಗಮಪ್ಪುದನೞದೊಳ್ಳಿತಪ್ಪ

ಭಾಗವೇ ಮಧ್ಯದೇಶ.) ಮಧ್ಯದೇಶದ ಹರಹು ಹೀಗಿದೆ. ಆಮೇಲೆ ಹೊಗೆ ಹೆಚ್ಚಾಗಿ ಮೇಲೆದ್ದ ಕಾಡುಗಿಚ್ಚನ್ನು ಕಂಡುದರಿಂದ ದುಷ್ಟರಾದ ಕೆಟ್ಟ ಲಾಂಛನವುಳ್ಳವರು ಹೆಚ್ಚಳವಾಗುವುದು, ಮತ್ತು ದಯೆ ಮುಂತಾಗಿರುವ ಸದ್ಧರ್ಮಕ್ಕೆ ವಿರುದ್ಧವಾಗಿ ವರ್ತಿಸುವ ಹೆಚ್ಚಿನ ಹಿಂಸೆ ಮುಂತಾದುವನ್ನು ಮಾಡುವ ವೇದಶಾಸ್ತ್ರಗಳು ಹೆಚ್ಚಾಗುವುವು. ಸಿಂಹಾಸನವೇರಿದ ಕೋತಿಯನ್ನು ಕಂಡುದರಿಂದ ಕುಲೀನರಲ್ಲದವರು ರಾಜ್ಯವಾಳುವರು. ಹೊಂದಟ್ಟೆಯಲ್ಲಿ ನಾಯಿ ಪಾಯಸವುಣ್ಣುವುದನ್ನು ಕಂಡದ್ದರಿಂದ ಕೆಟ್ಟಲಾಂಛನದವರು ರಾಜರಿಂದ ಪೂಜಿಸಲ್ಪಡುವರು. ಮಂಗವು ಆನೆಯ ಮೇಲೆ ಏರಿದುದನ್ನು ಕಂಡುದರಿಂದ ಅತ್ಯಂತ ಪವಿತ್ರವಾದ ವಂಶದಲ್ಲಿ ಜನಿಸಿದ ರಾಜಕುಮಾರರು ತಮ್ಮ ಶ್ರೇಷ್ಠವಂಶದ ಗೌರವವನ್ನು ಬಿಟ್ಟು ಜೀವನೋಪಾಯಕ್ಕಾಗಿ ಕುಲೀನರಲ್ಲದವರಿಗೆ ದಾಸರಾಗಿ ಬಾಳುವರು. ಕಸದ ರಾಶಿಯಲ್ಲಿ ತಾವರೆ ಹುಟ್ಟಿದುದನ್ನು ಕಂಡುದರಿಂದ ದಯೆ, ಶಾಂತಿ, ಅಪರಿಗ್ರಹ, ಸಮಾ, ಸತ್ಯ, ಶುಚಿತ್ವ, ಕ್ಷಮೆ, ಮುಂತಾದವುಗಳಿಂದ ಕೂಡಿದ ಶ್ರೇಷ್ಠವಾದ ಸದ್ಧರ್ಮದ ಹಾದಿಯನ್ನು ಶ್ರೀಮಂತರೂ ರಾಜಕುಮಾರರೂ ತಮ್ಮಲ್ಲಿರುವ ಧನ ಮುಂತಾದವುಗಳ ಮದದಿಂದ ಬಿಟ್ಟುಬಿಡುವರು. ಕೀಳುಜಾತಿಯವರೂ ಬಡವರೂ ಒಳ್ಳೆಯ ಧರ್ಮವನ್ನು ಸ್ವೀಕರಿಸಿಕೊಂಡು ಅದನ್ನು ಆಚರಿಸುವರು. ಸಮುದ್ರವು ತನ್ನ ಎಲ್ಲೆಯನ್ನು ಮೀರಿರುವುದನ್ನು ಕಂಡ ಕಾರಣ ರಾಜಕುಮಾರರು ತಮ್ಮ ಮರ್ಯಾದೆಯನ್ನು ಮೀರಿ ಧನ ಮುಂತಾಗಿರುವ ವಿಷಯಗಳಲ್ಲಿ ದುರಾಶಭರಿತರಾಗಿ ವರ್ತಿಸುವರು. ಒಳ್ಳೆಯದಾಗಿರುವ ಸತ್ಯ, ಶುಚಿತ್ವ, ನಡತೆ ಎಂಬುವುಗಳಲ್ಲಿ ನ್ಯೂನತೆಯುಳ್ಳವರಾಗಿ ಅತ್ಯಂತ ದಯಾಹೀನರಾಗುವರು. ಬಿಳಿ ಕತ್ತೆಯನ್ನು ಕಟ್ಟಿದ ಚಿನ್ನದ ರಥವನ್ನು ಕಂಡುದರಿಂದ ಸಮ್ಯಗ್ದರ್ಶನ, ಸಮ್ಯಗ್ಞಾನ,

ತಪಮಂ ಕೈಕೊಳೆಪಟ್ಟುಂ ಪಿರಿದಪ್ಪ ಪುರುಷಕಾರಮುಂ ಸತ್ಯಮುಂ ಮನೋಬಲಮುಂ ವೀರ್ಯಮುಮೆಂದಿವಱಂದಂ ಕೂಡಿದವರ್ಗಳಿಂದಮೊಳ್ಳಿದರಪ್ಪ ತೀರ್ಥಕರ ಪರಮ ದೇವರ್ಕಳಿಂದಂ ಚಕ್ರವರ್ತಿಗಳಿಂದಂ ಚರಮದೇಹಧಾರಿಗಳಿಂದಂ ನೆಗೞೆಪಟ್ಟುದನೊಳ್ಳಿತಪ್ಪ ಮೋಕ್ಷಮಾರ್ಗಮಂ ಪೊರ್ದಿಯುಂ ವಿಷಯ ಸುಖಂಗಳೊಳ್ ಮೋಹಿತರ್ಕಳಾಗಿ ಕಿಡುವರ್ ಬೆಳ್ಗೞ್ತೆಯನರಸರ್ಕಳೇಱುವ್ಯದಂ ಕಂಡುದಱಂದುತ್ತಮ ಕುಲದವರ್ಗಳ್ಗೆ ಕುಲಜರಲ್ಲದವರೊಡನೆ ಮದುವೆಯೊಳ್ ತೊಟ್ಟ ನಣ್ಪುಗಳಕ್ಕುಮೆಂದಿಂತು ಪದಿನಾಱುಂ ಕಂಡ ಕನಸುಗಳ ಫಲಂಗಳಂ ಸಂಪ್ರತಿ ಚಂದ್ರಗುಪ್ತ ಮಹಾರಾಜಂಗೆ ಭದ್ರಬಾಹು ಭಟ್ಟಾರರ್ ಪೇೞ್ದು ಮತ್ತಮೀ ಕಲಿಯುಗ ಮಹಾರಾಜನ ಸ್ವರೂಪಮನಿಂತೆಂದು ಪೇೞಲ್ ತೊಡಗಿದರ್ :

ಹರಿಣಿ || ಅನೃತವಚನೇ ನಿತ್ಯಾಭ್ಯಾಸ: ಖಲೇಷು ವಿದಗ್ಧತಾ
ಗುಣಬತಿ ಜನೇ ವೈರಬುದ್ಧಿ: ಖಲೇಷ್ವತಿಗೌರವಂ
ಯತಿಷು ನಿಯತಂ ವಾಕ್ಷಾರುಷ್ಯಂ ವಿಪತ್ತಿಷು ಚ ಕ್ರಿಯಾ
ಕಲಿಯುಗ ಮಹಾರಾಜಸ್ಯೇತಾನಿ ರಾಜವಿಭೂತಯ: ||


ಕಾಲೇ ಸಂಪ್ರತಿವರ್ತತೇ ಕಲಿಯುಗೇ ಸತ್ಯಾ ನರಾ ದುರ್ಲಭಾ

ನಾನಾ ಚೋರಗಣಾ ಮುಷಂತಿ ಪ್ಲಥಿವೀಮಾರ್ಯೋ ಜನ: ಕ್ಷೀಯತೇ
ದೇವಾಶ್ಚ ಪ್ರಲಯಂಗತಾ: ಕರಭವಲ್ಲೌಲ್ಲ್ಯಂ ಗತಾ: ಪಾರ್ಥಿವಾ:
ಪುತ್ರಸ್ಯಾಪಿ ನ ವಿಶ್ವಸಂತಿ ಪಿತರಂ: ಕಷ್ಟಂ ಯುಗಂ ವರ್ತತೇ ||

ಸಮ್ಯಕ್ಚಾರಿತ್ರಗಳಿಂದ ಪರಿಶುದ್ಧವೆನಿಸುವ ದಿಗಂಬರತ್ವದ ಲಾಂಛನವನ್ನೂ ಬಿಟ್ಟು ಒಳ್ಳೆಯ ತಪಸ್ಸನ್ನು ಸ್ವೀಕರಿಸಿಯೂ ಹಿರಿದಾದ ಪುರುಷ ಪ್ರಯತ್ನ, ಸತ್ಯ, ಮನಶ್ಯಕ್ತಿ, ವೀರ್ಯ ಎಂಬುವುಗಳಿಂದ ಕೂಡಿದಂತಹ ಒಳ್ಳೆಯವರಾದ ತೀರ್ಥಂಕರರೆಂಬ ಶ್ರೇಷ್ಠ ದೇವತೆಗಳಿಂದಲೂ ಚಕ್ರವರ್ತಿಗಳಿಂದಲೂ ಚಮರ (ಕೊನೆಯ) ದೇಹಧಾರಿಗಳಿಂದಲೂ ಆಚರಿಸಲ್ಪಟ್ಟ ಒಳ್ಳೆಯದಾದ ಮೋಕ್ಷದ ದಾರಿಯನ್ನು ಹಿಡಿದಿದ್ದರೂ ಪಂಚೇಂದ್ರಿಯ ವಿಷಯಗಳ ಸುಖಗಳಲ್ಲಿ ಮೋಹಗೊಂಡವರಾಗಿ ಕೆಟ್ಟುಹೋಗುವರು. ಬಿಳಿ ಕತ್ತೆಯನ್ನು ರಾಜರು ಏರುವುದನ್ನು ಕಂಡುದರಿಂದ ಶ್ರೇಷ್ಠ ಕುಲದವರಿಗೆ ಕುಲಹೀನರೊಡನೆ ಮದುವೆಯ ನಂಟತನಗಳಾಗುವುವು. ಈ ರೀತಿಯಾಗಿ ಹದಿನಾರು ಕಂಡ ಕನಸುಗಳ ಫಲವನ್ನು ಸಂಪ್ರತಿ ಚಂದ್ರಗುಪ್ತ ಮಹಾರಾಜನಿಗೆ ಭದ್ರಬಾಹುಮುನಿಗಳು ಹೇಳಿದರು. ಆಮೇಲೆ ಈ ಕಲಿಯುಗವೆಂಬ ಮಹಾರಾಜನ ಸ್ವರೂಪವನ್ನು ಹೀಗೆ ಹೇಳತೊಡಗಿದರು – ಸುಳ್ಳಾಡುವುದರಲ್ಲಿ ಎಡೆಬಿಡದೆ ಅಭ್ಯಾಸ, ದುಷ್ಟರಲ್ಲಿ ಪಾಂಡಿತ್ಯ, ಗುಣವಂತರಾದ ಜನರಲ್ಲಿ ದ್ವೇಷಬುದ್ಧಿ, ದುಷ್ಟರಲ್ಲಿ ಬಹಳ ಮರ್ಯಾದೆ, ಯತಿಗಳಲ್ಲಿ ಮಾತಿನ ಬಿರುಸುತನ, ಆಪತ್ತು ಅಡಗಿಸಿದಾಗಲೂ ಕಾರ್ಯತತ್ಪರತೆ – ಇವೆಲ್ಲವೂ ಕಲಿಯುಗವೆಂಬ ಮಹಾರಾಜನ ರಾಜವೈಭವಗಳಾಗಿವೆ. ಈಗ ನಡೆಯುತ್ತಿರುವ ಕಲಿಯುಗದಲ್ಲಿ ಸತ್ಯವಂತರಾದ ಮನುಷ್ಯರು ದೊರಕಲಾರರು. ಹಲವು ಬಗೆಯ ಕಳ್ಳರ ಗುಂಪುಗಳು ಲೋಕವನ್ನೇ ಅಪಹರಿಸುವುವು. ಶ್ರೇಷ್ಠಜನರು ನಾಶಹೊಂದಿದ್ದಾರೆ. ದೇವತೆಗಳೂ ನಾಶವಾದಾರು. ರಾಜರು ಒಂಟೆಯಂತೆ ದುರಾಶೆಗೊಂಡಿದ್ದಾರೆ. ತಂದೆ ತಾಯಿಗಳು ಮಗನ ಮೇಲೂ ನಂಬಿಕೆಯಿಡರು. ಕಷ್ಟಕರವಾದ ಕಲಿಯುಗ ಹೀಗಿರುತ್ತದೆ. ಭೂಮಿ ಸತ್ವಹೀನವಾಗಿದೆ. ಔಷ (ಸಸ್ಯಗಳ) ರಸಗಳು

ನಿರ್ವೀರ್ಯಾ ಪೃಥಿವೀ ಗತೌಷರಸಾ ನೀಚಾ ಮಹತ್ತ್ವಂ ಗತಾ:
ರಾಜಾನೋ ರ್ಥಪರಾ: ಕುಧರ್ಮನಿರತಾ ವಿಪ್ರಾ ವಿಕರ್ಮಸ್ಥತಾ:
ಭಾರ್ಯಾ ಭರ್ತರಿ ನೈವಬದ್ಧಹ್ಲದಯಾ ಪುತ್ರಾ: ಪಿತೃದ್ವೇಷಿಣ:
ಇತ್ಯೇವಂ ಸಮುಪಸ್ಥಿತೇ ಕಲಿಯುಗೇ ಧನ್ಯಾ ವನಂ ಪ್ರಸ್ಥಿತಾ: ||

ಎಂದಿಂತು ಭಟ್ಟಾರರ್ ಪೇೞೆ ಸಂಪ್ರತಿ ಚಂದ್ರಗುಪ್ತ ಮಹಾರಾಜಂ ಕೇಳ್ದು ಮತ್ತಂದಿನ ದಿವಸಂ ಕೞದೊಡೆ ಮಂಡಳಿಕರ್ ಜಿನದೀಕ್ಷೆಯಂ ಕೈಕೊಳ್ಳರೆಂಬುದಂ ಕೇಳ್ದಾದಮಾನುಂ ಭೀತನಾಗಿ ಸಿಂಹಸೇನನೆಂಬ ತನ್ನ ಪಿರಿಯ ಮಗಂಗೆ ರಾಜ್ಯಪ್ಪಟಂಗಟ್ಟಿ ಭದ್ರಬಾಹುಟ್ಟಾರಾರ ಪಕ್ಕದೆ ಪಲಂಬರರಸು ಮಕ್ಕಳ್ವೆರಸಾ ದಿವಸಮೆ ತಪಂಬಟ್ಟಂ ಮತ್ತಿತ್ತ ಮಧ್ಯದೇಶದೊಳಿರ್ದ ರಿಸಿಯರ್ಕಳ್ಗೆಲ್ಲಂ ಬೞಯಟ್ಟಿ ಬರಿಸಿ ಭಟ್ಟಾರರಿಂತೆಂದರ್ ಪನ್ನೆರಡು ವರ್ಷಂಬರೆಗಮೀ ನಾಡೊಳನಾವೃಷ್ಟಿಯಾಗಿ ಮಹಾರೌದ್ರ ಪಸವಮಕ್ಕುಂ ಮಧ್ಯಮದೇಶಮೆಲ್ಲಂ ಪಾೞಕ್ಕುಮೀ ನಾಡೊಳಿರ್ದ ರಿಸಿಯರ್ಕಳ್ಗೆ ಬ್ರತಭಂಗಮಪ್ಪುದದಱಂ ಪೋಪಂ ದಕ್ಷಿಣಾಪಥಕ್ಕೆಂದಾಚಾರ್ಯರ್ಕಳ್ ಸಹಿತಮಿರ್ಚ್ಛಾಸಿರ ರಿಸಿಸಮುದಾಯಮುಂ ಸಂಪ್ರತಿ ಚಂದ್ರಗುಪ್ತ ಮುನಿಯುಂ ಬೆರಸು ದಕ್ಷಿಣಾಪಥಕ್ಕೆ ಪೋದರಿತ್ತ ರಾಮಿಲಾಚಾರ್ಯರುಂ ಸ್ಥೂಲಾಚಾರ್ಯರುಂ ಸ್ಥೂಲಭದ್ರಾಚಾರ್ಯರುಮಿಚಿತೀ ಮೂವರಾಚಾರ್ಯರುಂ ಭಟಾರರೊಡನೆ ಪೋಗಲೊಲ್ಲದೆ ತಂತಮ್ಮ ಋಷಿಸಮುದಾಯಂಬೆರಸು ಸಿಂಧುವಿಷಯಕ್ಕೆ ಪೋದರಿತ್ತ ಭಟ್ಟಾರರುಂ ಪಿರಿದು ಋಷಿಸಮುದಾಯಂ

ಇಲ್ಲವಾಗಿವೆ. ಕೀಳಾದ ಜನರು ಮಹತ್ವದ ಸ್ಥಾನವನ್ನು ಪಡೆದಿದ್ದಾರೆ. ರಾಜರು ಹಣದ ಆಸೆಯುಳ್ಳವರಾಗಿದ್ದಾರೆ. ಕೆಟ್ಟ ಧರ್ಮದಲ್ಲಿ ತತ್ಪರರಾದ ಬ್ರಾಹ್ಮಣರು ಅನ್ಯಾಯವಾದ ಕಾರ್ಯದಲ್ಲಿ ತೊಡಗಿದ್ದಾರೆ. ಹೆಂಡಿರು ಗಂಡನಲ್ಲಿ ಅನುರಾಗವುಳ್ಳ ಹೃದಯದವರಾಗಿಲ್ಲ. ಗಂಡುಮಕ್ಕಳು ತಂದೆಯಲ್ಲಿ ದ್ವೇಷವುಳ್ಳವರು. ಹೀಗಿರತಕ್ಕ ಕಲಿಯುಗದಲ್ಲಿ ಕಾಡಿಗೆ ಹೋಗಿ ನಿಂತವರು ಧನ್ಯಜೀನಿಗಳು.ಹೀಗೆ ಋಷಿಗಳು ಹೇಳಿದಾಗ ಸಂಪ್ರತಿ ಚಂದ್ರಗುಪ್ತ ಮಹಾರಾಜನು ಕೇಳಿ ಅಂದಿನ ದಿವಸ ದಾಟಿದರೆ ಅವನ ಸಾಮಂತರು ಜಿನದೀಕ್ಷೆಯನ್ನು ಸ್ವೀಕಾರ ಮಾಡಲಿಕ್ಕಿಲ್ಲವೆಂಬುದನ್ನು ತಿಳಿದು ಅತ್ಯಂತ ಭಯಪಟ್ಟನು. ಸಿಂಹಸೇನನೆಂಬ ತನ್ನ ಹಿರಿಯ ಮಗನಿಗೆ ರಾಜ್ಯಾಕಾರ ಕೊಟ್ಟು ಭದ್ರಬಾಹುಸ್ವಾಮಿಗಳ ಬಳಿ ಹಲವಾರು ರಾಜಕುಮಾರರೊಟ್ಟಿಗೆ ತಪಸ್ಸನ್ನು ಕೈಗೊಂಡನು. ಇತ್ತ ಮಧ್ಯದೇಶದಲ್ಲಿದ್ದ ಋಷಿಗಳೆಲ್ಲರ ಬಳಿಗೂ ಜನ ಕಳುಹಿಸಿ ಅವರನ್ನು ಬರಿಸಿ ಭದ್ರಬಾಹುಮುನಿಗಳು ಹೀಗೆಂದರು – “ಈ ನಾಡಿನಲ್ಲಿ ಹನ್ನೆರಡು ವರ್ಷಗಳವರೆಗೆ ಮಳೆಬಾರದೆ ಭಯಂಕರವಾದ ಕ್ಷಾಮವುಂಟಾಗುವುದು. ಮಧ್ಯದೇಶವೆಲ್ಲ ಹಾಳಾಗುವುದು. ಈ ನಾಡಿನಲ್ಲಿದ್ದ ಋಷಿಗಳ ವ್ರತ ಕೆಟ್ಟುಹೋಗುವುದು. ಆದುದರಿಂದ ದಕ್ಷಿಣ ಭಾರತದ ಕಡೆಗೆ ಹೋಗೋಣ“, ಹೀಗೆ ಹೇಳಿ ಆಚಾರ್ಯರುಗಳೊಂದಿಗೆ ಎರಡು ಸಾವಿರ ಋಷಿಗಳು ಸಮೂಹವನ್ನೂ ಸಂಪ್ರತಿ ಚಂದ್ರಗುಪ್ತ ಮುನಿಯನ್ನೂ ಕೂಡಿಕೊಂಡು ದಕ್ಷಿಣ ದೇಶಕ್ಕೆ ತೆರಳಿದರು. ಇತ್ತ ರಾಮಿಲಾಚಾರ್ಯ, ಸ್ಥೂಲಾಚಾರ್ಯ, ಸ್ಥೂಲಭದ್ರಾಚಾರ್ಯ – ಈ ಮೂವರು ಆಚಾರ್ಯರು ಭದ್ರಬಾಹು ಮುನಿಗಳೊಂದಿಗೆ ಹೋಗಲು ಒಪ್ಪಲಿಲ್ಲ. ಅವರು ತಮ್ಮ

ಬೆರಸು ಗ್ರ್ರಾಮನಗರ ಖೇಡ ಖರ್ವಡ ಮಡಂಬ ಪಟ್ಟಣ ದ್ರೋಣಾಮುಖಂಗಳಂ ಕೞದು ಪೋಗಿ ಕೞ್ಚಪ್ಪುನಾಡನೆಯ್ದಿ ಪೋಗುತ್ತಾಂ ಭದ್ರಬಾಹು ಭಟ್ಟಾರರ್ ತಮ್ಮಾಯುಷ್ಯಪ್ರಮಾಣ ಮಱದಾಮಿಲ್ಲಿ ಸಂನ್ಯಸನಂಗೆಯ್ದಪ್ಪೆವು ನೀಮೆಲ್ಲಂ ಪೋಗಿಮೆಂದು ತಮ್ಮ ಪಿರಿಯ ಶಿಷ್ಯರ್ ದಶಪೂರ್ವಧಾರಿಗಳ್ ವಿಶಾಖಾಚಾರ್ಯರೆಂಬೊರಲ್ಲಿಂ ಬೞಯಮಾರ್ಯ ಸುಹಸ್ತಿಗಳುಮರಭದ್ರರುಂ ಸುಭದ್ರಮಿತ್ರರುಂ ಮಹಾಗಿರಿಯುಂ ಸುಮತಿಯುಂ ಮಹಾಮತಿಯುಂ ವಿಶಾಖನಂದಿಯು ಮೆಂದಿವರ್ಗಲೆಲ್ಲರುಮನಾಚಾರ್ಯರ್ ಮಾಡಿ ದ್ರವಿೞವಿಷಯಕ್ಕೆ ಪೋಗಿಮೆಂದು ವಿಶಾಖಾಚಾರಯರೊಡನೆ ಎಣ್ಭಾಸಿರ್ವರ್ ರಿಸಿಯರನಟ್ಟಿದರ್ ಚಂದ್ರಗುಪ್ತಮುನಿಯುಮನವರೊಡನೆ ಪೋಗಿಮೆಂದು ಭಟ್ಟಾರರ್ ಕೀಱಪೋಗಳ್ವೇೞ್ದೊಡಾಮುಂ ಪೋಗಲೊಲ್ಲೆವು ನಿಮ್ಮಡಿಗಳ್ಗೆ ವಿನಯಂ ಗೆಯ್ಯುತ್ತಮಿರ್ದಪ್ಪೆಮೆಂದು ಪೋಗಲೊಲ್ಲದೆ ಪಕ್ಕದಿರ್ದರುೞದರೆಲ್ಲಂ ಪೋದರಿತ್ತ ಭದ್ರಬಾಹು ಭಟ್ಟರರ್ ಕೞ್ಬಪ್ಪುನಾಡಡವಿಯ ಬೆಟ್ಟದ ಮೇಗಣೀಕಸಱಯಮೇಗಿರ್ದು ಚತುರ್ವಿಧಮಪ್ಪಾಹಾರಕ್ಕಂ ಶರೀರಕ್ಕಂ ಜಾವಜ್ಜೀವಂ ನಿವೃತ್ತಿಪೂರ್ವಕಂ ಸಂನ್ಯಸನಂ ಗೆಯ್ದರ್ ಇತ್ತ ಚಂದ್ರಗುಪ್ತಮುನಿಯುಮಷ್ಟೋಪವಾಸಂಗೆಯಿರ್ದೊರಂ ಭಟ್ಟಾರರೆಂದರಾಮುಂ ನೋಂತಿರ್ಪೆವು ನೀಮುಂ ಚರಿಗೆಪುಗುವುದಲ್ಲತೆಯೆಂದೊಡೆ ಭಟ್ಟಾರಾ ಊರಿಲ್ಲ ಕೇರಿಯಿಲ್ಲೀಯಡವಿಯೊಳೆಲ್ಲಿಗೆ ಚರಿಗೆವುಗುದೆಂದೊಡೆ ಭಟ್ಟಾರರೆಂದರ್ ಕಾಂತಾರಭೈಕ್ಷಮೆಂಬುದಾಗಮದೊಳ್ ಪೇೞ್ದುದಾರಾನುಂ ಬಟ್ಟೆವೋಪರ್ ಬೀಡಂ ಬಿಟ್ಟಿರ್ದರ್

ತಮ್ಮ ಋಷಿವೃಂದದೊಡನೆ ಸಿಂಧುದೇಶಕ್ಕೆ ಹೋದರು. ಭದ್ರಬಾಹು ಋಷಿಗಳು ಇತ್ತ ದೊಡ್ಡದಾದ ಋಷಿ ಸಂದೋಹದೊಡನೆ ಗ್ರಾಮ, ನಗರ, ಖೇಡ, ಖರ್ವಡ, ಮಡಂಬ, ಪಟ್ಟಣ, ದ್ರೋಣಾಮುಖಗಳೆಂಬ ಭೂಭಾಗಗಳನ್ನು ದಾಟಿ, ಕಳ್ಬಪ್ಪು ಎಂಬ ಹೆಸರುಳ್ಳ ಶ್ರವಣಬೆಳಗೊಳಕ್ಕೆ ಬಂದರು. ತಮ್ಮ ಆಯುಷ್ಯವೆಷ್ಟಿದೆಯೆಂಬುದನ್ನು ತಿಳಿದ ಭದ್ರಬಾಹು ಋಷಿಗಳು – “ತಾವು ಇಲ್ಲಿ ಸಂನ್ಯಾಸ ಕೈಗೊಳ್ಳುತ್ತೇವೆ. ನೀವೆಲ್ಲರೂ ಹೋಗಿ” ಎಂದು ಹೇಳಿ ತಮ್ಮ ಹಿರಿಯ ಶಿಷ್ಯರೂ ದಶಪೂರ್ವಗಳನ್ನರಿತವರೂ ಆದ ವಿಶಾಖಾಚಾರ್ಯ ರೆಂಬವರನ್ನಲ್ಲದೆ, ಶ್ರೇಷ್ಠರಾದ ಸುಹಸ್ತಿಗಳು, ಅರಭದ್ರರು, ಸುಭದ್ರಮಿತ್ರರು, ಮಹಾಗಿರಿ, ಸುಮತಿ, ಮಹಾಮತಿ, ವಿಶಾಖನಂದಿ ಎಂಬ ಇವರೆಲ್ಲರನ್ನೂ ಆಚಾರ್ಯರನ್ನಾಗಿ ಮಾಡಿ, “ನೀವೆಲ್ಲ ದ್ರಾವಿಡ ದೇಶಕ್ಕೆ (ತಮಿಳು ನಾಡಿಗೆ) ಹೋಗಿ” ಎಂದು ವಿಶಾಖಾಚಾರ್ಯ ರೊಂದಿಗೆ ಎಂಟು ಸಾವಿರ ಮಂದಿ ಋಷಿಗಳನ್ನು ಕಳುಹಿಸಿದರು. ಚಂದ್ರಗುಪ್ತಮುನಿಯೊಡನೆ “ನೀವೂ ಅವರೊಡನೆ ಹೋಗಿ” ಎಂದು ಋಷಿಗಳು ಒತ್ತಾಯಮಾಡಿ ಹೋಗಲು ಹೇಳಿದಾಗ ಅವರು “ನಾನು ಹೋಗಲೊಲ್ಲೆವು. ನಿಮ್ಮ ಸೇವೆಮಾಡುತ್ತ ಇರುತ್ತೇವೆ” ಎಂದು, ಹೋಗಲು ಒಪ್ಪದೆ, ಜೊತೆಯಲ್ಲೇ ಇದ್ದರು. ಉಳಿದವರೆಲ್ಲ ಹೋದರು. ಇತ್ತ ಭದ್ರಬಾಹು ಋಷಿಗಳು ಕಳ್ಬಪ್ಪು (ಕಟವಪ್ರ = ಶ್ರವಣಬೆಳ್ಗೊಳ) ನಾಡಿನ ಕಾಡುಬೆಟ್ಟದ ಮೇಲಿನ ಒಂದು ಬಂಡೆಗಲ್ಲಿನ ಮೇಲೆ ಇದ್ದುಕೊಂಡು ನಾಲ್ಕು ವಿಧದ ಆಹಾರಕ್ಕೂ ಶರೀರಕ್ಕೂ ಜೀವಿಸುವ ತನಕವೂ ಪರಿಹಾರ ಮಾಡಿ ಸಂನ್ಯಾಸವನ್ನು ಕೈಗೊಂಡರು. ಇತ್ತ ಚಂದ್ರಗುಪ್ತ ಋಷಿಗಳು – “ನಾವೂ ವ್ರತವನ್ನು ಧರಿಸಿದ್ದೇವೆ. ನೀವು ಭಿಕ್ಷಕ್ಕೆ ಹೋಗುವುದು ಒಳ್ಳೆಯದಲ್ಲವೆ ? ” ಎಂದರು. ಅದಕ್ಕೆ ಉತ್ತರವಾಗಿ – “ಪೂಜ್ಯರೇ, ಇಲ್ಲಿ ಯಾರೂ ಇಲ್ಲ, ಬೀದಿಯೂ ಇಲ್ಲ. ಈ ಕಾಡಿನಲ್ಲಿ ಎಲ್ಲಿ ಭಿಕ್ಷಕ್ಕೆ ಹೋಗಲಿ ? “

ನಿಱಸುವರಪ್ಪುದಱಚಿದೆ ಚರಿಗೆವುಗುವ್ಯದೆಂದೊಡೆ ಅಂತೆಗೆಯ್ವೆನೆಂದು ದೇವರಂ ಬಂದಿಸಿ ಚರೆಗೆವೊಕ್ಕಡವಿಯಂ ತೊೞಲ್ವಲ್ಲಿಯೊಂದು ಮರದ ಪೊೞಲೊಳಿರ್ದು ಮಾಣಿಕದ ಮುತ್ತಿನ ಪಿಂಡುಗಂಕಣಮಂ ತೊಟ್ಟಕೈಯಿಂದಂ ಪೊನ್ನ ಸಟ್ಟುಗಮಂ ತೀವಿ ಭೈಕ್ಷಮಂ ಪಿಡಿಯೆಂದು ನೀಡಿದ ಕೈಯನಿತನೆ ಕಂಡು ತೊೞಲ್ದಲಾಭಮಾಗಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರ್ ನಿಲೆವಟ್ಟುದೆಯೆಂದು ಬೆಸಗೊಂಡೊಡವರುಂ ತಮ್ಮ ಕಂಡುದಂ ಪೇೞ್ದೊಡೆ ಬೇಸಱದೆ ದಿವಸಕ್ಕಂ ಚರಿಗೆವೊಗುವ್ಯದೆಂದು ಭಟ್ಟಾರರ್ ಕಲ್ಪಿಸಿದೊಡಂತೆಗೆಯ್ವಮೆಂದು ಮಱುದಿವಸಂ ಚರಿಗೆವೊಕ್ಕಡವಿಯಂ ತೊೞಲ್ವಲ್ಲಿಯೊಂದು ಮರದ ಕೆೞಗೆ ಪೊನ್ನ ಮಡಕೆಯೊಳ್ ಬೋನಮನೊಡ್ಡಿ ನೆಱೆಯೆ ತೊಟ್ಟುಟ್ಟು ಮಗಂಸವಸದನಂಗೊಂಡು ದಿವ್ಯಸ್ತ್ರೀ ಬಂದು ನಿಱಸಿದೊಡೆ ಇಂತೆಂದರಬ್ಬಾ ನೀನೊರ್ವಳೆಯೆ ಪೆಱರಾರುಮಿಲ್ಲಿಂತು ರಿಸಿಯರ್ಕಳ್ಗೆ ನಿಲಲಾಗದೆಂದು ಪೇೞ್ದು ತಮ್ಮಿರ್ದೆಡೆಗೆವೋದೊಡೆ ಭಟ್ಟಾರರಿಂತೆಂದರ್ ನಿಲೆವಟ್ಟುದೆ ಎಂದು ಬೆಸಗೊಂಡೊಡವರಿಂತೆಂದರ್ ಒವಾಳ್ ದಿವ್ಯಸ್ತ್ರೀ ಸರ್ವಾಭರನ ಭೂಷಿತೆಯೊಂದು ಮರದ ಕೆೞಗೆ ಬೋನಮನೊಡ್ಡಿರ್ದಿದಿರಂ ಬಂದು ನಿಱಸಿದೊಡೊರ್ವಳೆ ಪೆಱರಾರುಮಿಲ್ಲೆಂದೆನೆ ನಿಲ್ಲದೆ ಬಂದೆಮೆಂದೊಡೊಳ್ಳಿಕೆಯ್ದಿರೆಂದೊರಿಂತುಪತ್ತು ಪವಾಸಂಗೆಯ್ದು ಪನ್ನೊಂದನೆಯ ದಿವಸದಂದು ಚರಿಗೆಪೊಕ್ಕಡವಿಯಂ ತೊೞಲ್ವನ್ನೆಗಂ ಪಿರಿದೊಂದು ಪೊೞಲುಂ ಧವಳಾರಂಗಳುಂ ನೆಲೆಯ ಮಾಡಂಗಳುಂ ಸೂಳೆಗೇರಿಗಳುಂ ದೇವಾಲಯಂಗಳುಮಾನೆ ಕುದುರೆಗಳುಂ ಮಾನಸರ ಬರವುಮಂ ಪೋಗುಮಂ ಕಂಡಿನಿತು ದಿವಸಮೀ ಮರಗಳ ಗಿಡುಗಳ

ಎಂದರು. ಆಗ ಋಷಿಗಳು – “ಶಾಸ್ತ್ರದಲ್ಲಿ ಕಾಂತಾರಭೈಕ್ಷ (ಕಾಡಿನಲ್ಲಿ ಭಿಕ್ಷೆ ಬೇಡುವುದು) ಎಂಬುದನ್ನು ಹೇಳಿದೆ. ಯಾರಾದರೂ ದಾರಿ ಹೋಗುವವರು ಬೀಡುಬಿಟ್ಟಿರುತ್ತಾರೆ. ಅವರು ಊಟಕ್ಕಾಗಿ ನಿಲ್ಲಿಸುತ್ತಾರೆ – ಆದುದರಿಂದ ಭಿಕ್ಷೆಗೆ ಹೋಗಬಹುದು” ಎಂದರು ಚಂದ್ರಗುಪ್ತ ಮುನಿಗಳು ಹಾಗೆಯೆ ಮಾಡುವೆನು ಎಂದುಕೊಂಡು ದೇವರನ್ನು ವಂದಿಸಿ ಭಿಕ್ಷೆಗೆಂದು ಕಾಡನ್ನು ಸುತ್ತಾಡುವಾಗ, ಒಂದು ಮರದ ಪೊಟ್ಟರೆಯೊಳಗಿದ್ದುಕೊಂಡು ಮಾಣಿಕ ಮುತ್ತುಗಳ ಹಿಂಡುಬಳೆಯನನು ಧರಿಸಿದ ಕೈಯಿಂದ ಚಿನ್ನದ ಸೌಟಿನಲ್ಲಿ ತುಂಬಿದ ಭಿಕ್ಷೆಯನ್ನು ‘ತೆಗೆದುಕೋ” ಎಂದು ನೀಡಿದ ಕೈಯನ್ನು ಮಾತ್ರವೇ ಕಂಡು, ಸುತ್ತಾಡಿ ಏನೂ ಭಿಕ್ಷೆ ಪಡೆಯದೆ, ತಮ್ಮ ವಾಸದ ಕಡೆಗೆ ಹೋದರು. ಆಗ ಭದ್ರಬಾಹು ಋಷಿಗಳು “ನಿಲ್ಲಿಸಲ್ಪಟ್ಟಿರೆ (ಭಿಕ್ಷಕ್ಕೆ ಯಾರಾದರೂ ನಿಲ್ಲಿಸಿದರೆ)? ” ಎಂದು ಕೇಳಿದರು. ಆಗ ಅವರು ತಾವು ಕಂಡುದನ್ನು ಹೇಳಲು, ಪ್ರತಿದಿನವೂ ಬೇಸರ ಪಡೆದೆ ಭಿಕ್ಷಕ್ಕೆ ಹೋಗುವಂತೆ ಋಷಿಗಳು ಹೇಳಿದರು. “ಹಾಗೆಯೇ ಮಾಡೋಣ” ಎಂದು ಚಂದ್ರಗುಪ್ತ ಮುನಿಗಳು ಮರುದಿವಸ ಭಿಕ್ಷೆಗೆ ಹೋಗಿ ಕಾಡನ್ನೆಲ್ಲ ಸುತ್ತಾಡಿದಾಗ ಓರ್ವ ದೇವತಾ ಸ್ತ್ರೀ ಕಾಣಿಸಿದಳು. ಆಕೆ ಒಂದು ಮರದ ಕೆಳಗೆ ಚಿನ್ನದ ಪಾತ್ರೆಯಲ್ಲಿ ಭೋಜನವನ್ನು ಸಿದ್ಧಪಡಿಸಿ, ಪರಿಪೂರ್ಣವಾಗಿ ಉಡಿಗೆತೊಡಿಗೆಗಳನ್ನು ಧರಿಸಿ ಮಂಗಳಾಲಂಕಾರದಿಂದಿದ್ದಳು. ಆಕೆ ಊಟಕ್ಕೆ ನಿಲ್ಲುವಂತೆ ಹೇಳಿದಾಗ, ಚಂದ್ರಗುಪ್ತ ಮುನಿಗಳು – “ಅಮ್ಮಾ ನೀನು ಒಬ್ಬಳೇ ಇರುವೆಯಾ? ಬೇರೆ ಯಾರೂ ಇಲ್ಲವೆ ? ಹೀಗಿದ್ದರೆ (ನಮ್ಮಂತಹ) ಋಷಿಗಳಿಗೆ ನಿಲ್ಲಲು ಸಾಧ್ಯವಿಲ್ಲ” ಎಂದು ಹೇಳಿ ತಾವು ಇದ್ದಲ್ಲಿಗೆ ತೆರಳಿದರು. ಭದ್ರಬಾಹು ಋಷಿಗಳು – –

ಪೊದಱುಗಳ ಮಱೆಗಳೊಳೀ ಪೊೞಲಂ ಕಂಡೆಮಿಲ್ಲೆಂದು ಮನದೊಳ್ ಬಗೆದು ಪೊೞಲೊಳಗೆ ಚರಿಗೆಪೊಕ್ಕಾಗಳೊರ್ವಳ್ ದಿವ್ಯ ಸ್ತ್ರೀ ಪರಿವಾರಸಹಿತಮಿದಿರಂ ಬಂದು ನಿಱಸಿ ತನ್ನ ಮಾಡಕ್ಕೊಡಗೊಂಡು ಪೋಗಿಕಾಲಂ ಕರ್ಚಿಯರ್ಚಿಸಿ ಗುರುಭಕ್ತಿಗೆಯ್ದು ವಂದಿಸಿಯಾದಮಾನುಂ ಭಕ್ತಿಯಿಂದಂ ದಿವ್ಯಾಹಾರಮಂ ಮಗುೞೆ ಮಗುೞೆ ಬಡ್ಡಿಸೆ ಚರಿಗೆಮಾಡಿ ಪರಸಿ ತಮ್ಮಾವಾಸಕ್ಕೆ ಪೋದೊಡೆ ಭಟ್ಟಾರರ್ ನಿಲೆಮಟ್ಟುದೆ ಯೆಂದು ಬೆಸಗೊಂಡೊಡೆ ನಿಲೆವಟ್ಟುದೆಂದೊಡೆಲ್ಲಿ ನಿಂದಿರೆಂದು ಬೆಸಗೊಂಡೊಡಿಂತೆಂದರ್ ಭಟ್ಟಾರಾ ಇನಿತು ದಿವಸಂ ಮರಂಗಳ ಪೊದಱುಗಳ ಮಱೆಗಳೊಳೀ ಪೊೞಲಂ ಕಂಡೆಮಿಲ್ಲಿಂದಿನಿಸಾನುಂ ತಿಣ್ಣಂ ತೊೞಲ್ವಲ್ಲಿ ಪಿರಿದೊಂದು ಪೊೞಲಂಕಂಡು ಚರಿಗೆಪೊಕ್ಕೊಡೊರ್ವಳ್ ದಿವ್ಯಸ್ತ್ರೀ ಪರಿವಾರಸಹಿತಮಿದಿರಂ ಬಂದು ನಿಱಸಿ ತನ್ನ ಮನಗೆಗೊಂಡುಪೋಗಿ ಕಾಲಂ ಕರ್ಚಿಯರ್ಚಿಸಿ ಗುರುಭಕ್ತಿಗೆಯ್ದು ವಂದಿಸಿಯಾದಮಾನುಂ ಭಕ್ತಿಯಿಂದಂ ದಿವ್ಯಾಹಾರಂಗಳಂ ಬಡ್ಡಿಸೆ ಶ್ರಮಂ ಪೋಗಿ ಚರಿಗೆಮಾಡಿ ಪರಿಸ ಬಂದೆಮೆಂದು ಭಟ್ಟಾರರ್ಗೆ ಪೇೞ್ದೊಡೊಳ್ಳಿತ್ತಾಯಿತ್ತೆಂದು ಸಂತೋಸಂ ಬಟ್ಟಿರ್ದರಿಂತು ದಿವಸಕ್ಕಂ ಪೊೞಲ್ಗೆ ವೋಗಿ ಚರಿಗೆ ಮಾಡುವರಿತ್ತ ಭದ್ರಬಾಹು ಭಟ್ಟಾರರ್ ಮುನ್ನೆ ತಮ್ಮ ತಪಂಗೆಯ್ವಂದೆಲ್ಲಾ ಕಾಲಮುಮವಮೋದರ್ಯ ಚರಿಗೆಮಾಡಿ ಪಸಿವಂ ಸೈರಿಸಿ ತಮ್ಮ ಮೆಯ್ಯಂ ಕ್ಷಯಕ್ಕೆ ತಂದು ಸಂನ್ಯಸನಂಗೆಯ್ದು ಪಲವು ದಿವಸದಿಂದಂ ಪಸಿವುಂ ನೀರೞ್ಕೆಯುಮಂ ಸೈರಿಸಿ ಶುಭಪರಿಣಾಮದಿಂದಂ ಸಮ್ಯಗ್ದರ್ಶನ ಜ್ಞಾನ ಚಾರಿತ್ರಂಗಳಂ ಸಾಸಿ ಮುಡಿಪಿ ಬ್ರಹ್ಮಕಲ್ಪದೊಳ್

“ಭಿಕ್ಷಕ್ಕೆ ಯಾರಾದರೂ ನಿಲ್ಲಿಸಿದರೆ ? ” ಎಂದು ಕೇಳಿದರು. ಆಗ ಅವರು ಹೀಗೆಂದರು – “ಒಬ್ಬಳು ದೇವತಾಸ್ತ್ರೀ ಎಲ್ಲಾ ಆಭರಣಗಳಿಂದಲೂ ಅಲಂಕರಿಸಿಕೊಂಡು ಒಂದು ಮರದ ಕೆಳಗೆ ಊಟವನ್ನು ಸಿದ್ಧಮಾಡಿದವಳಾಗಿ ನನ್ನ ಎದುರಿಗೆ ಬಂದು ಊಟಕ್ಕೆ ನಿಲ್ಲುವಂತೆ ಹೇಳಿದಳು. ಆಕೆ ಒಬ್ಬಳೇ ಇದ್ದುದು, ಬೇರೆ ಯಾರೂ ಇಲ್ಲವೆಂದು ಆಕೆ ಹೇಳಿದ್ದರಿಂದ ನಾನು ನಿಲ್ಲಲಿಲ್ಲ, ಬಂದು ಬಿಟ್ಟೆನು” ಎಂದು ಹೇಳಿದರು. ನೀವು ಒಳ್ಳೆಯದು ಮಾಡಿದಿರಿ – ಎಂದು ಋಷಿಗಳು ಹೇಳಿದರು. ಹೀಗೆ ಹತ್ತು ದಿನಗಳ ಉಪವಾಸವನ್ನು ಮಾಡಿ ಹನ್ನ್ನೊಂದನೆಯ ದಿವಸದಂದು ಭಿಕ್ಷೆಗೆ ಹೋಗಿ ಕಾಡನ್ನೆಲ್ಲ ಸುತ್ತಾಡುತ್ತಿರಲು, ಒಂದು ದೊಡ್ಡ ಪಟ್ಟಣ ಕಾಣಿಸಿತು. ಅಲ್ಲಿ ಸುಣ್ಣ ಬಳಿದು ಬಿಳುಪೇರಿದ ಮನೆಗಳೂ ಉಪ್ಪರಿಗೆ ಮನೆಗಳೂ ವೇಶ್ಯಾವಾಟಿಗಳೂ ದೇವಾಲಯಗಳೂ ಆನೆಕುದುರೆಗಳೂ ಮನುಷ್ಯರ ಬರುವಿಕೆ ಹೋಗುವಿಕೆಗಳೂ ಕಾಣಿಸಿದುವು. ಇವನ್ನೆಲ್ಲ ಕಂಡು, “ಇಷ್ಟು ದಿವಸವೂ ಈ ಮರಗಿಡ ಪೊದರುಗಳ ಮರೆಯಲ್ಲಿದ್ದ ಆ ಪಟ್ಟಣವನ್ನು ನಾವು ಕಂಡೇ ಇಲ್ಲ” ಎಂದು ಮನಸ್ಸಿನಲ್ಲಿ ಭಾವಿಸಿ, ಆ ಪಟ್ಟಣದಲ್ಲಿ ಭಿಕ್ಷೆ ಪಡೆಯಲು ಹೋದರು. ಆಗ ಒಬ್ಬಳು ದೇವತಾ ಸ್ತ್ರೀ ತನ್ನ ಪರಿವಾರದೊಡನೆ ಎದುರಿಗೆ ಬಂದು ಅವರನ್ನು ಊಟಕ್ಕೆ ನಿಲ್ಲಿಸಿ, ತನ್ನ ಮನೆಗೆ ಕರೆದುಕೊಂಡು ಹೋಗಿ ಕಾಲನ್ನು ತೊಳೆದು ಪೂಜಿಸಿ ಗುರುಭಕ್ತಿಯನ್ನು ಮಾಡಿದಳು. ನಮಸ್ಕರಿಸಿ ಅತಿಶಯಾವಾದ ಭಕ್ತಿಯಿಂದ ದಿವ್ಯವಾದ ಆಹಾರವನ್ನು ಮತ್ತೂ ಮತ್ತೂ ಬಡಿಸಿದಳು. ಚಂದ್ರಗುಪ್ತ ಮುನಿಗಳು ಊಟ ಮಾಡಿ ತಮ್ಮ ವಾಸಸ್ಥಳಕ್ಕೆ ತೆರಳಿದಾಗ ಭದ್ರಬಾಹು ಋಷಿಗಳು – “ಯಾರಾದರೂ ಊಟಕ್ಕೆ ನಿಲ್ಲಿಸಿದರೆ ? ” ಎಂದು ಕೇಳಲು “ನಿಲ್ಲಿಸಿದರು” ಎಂದು ಉತ್ತರ ಕೊಟ್ಟಾಗ, “ಎಲ್ಲಿ ಊಟಕ್ಕೆ ನಿಂತಿರಿ ? ” ಎಂದು ಕೇಳಿದರು. ಆಗ ಚಂದ್ರಗುಪ್ತ ಮುನಿಗಳು – “ಪೂಜ್ಯರೇ, ಇಷ್ಟು ದಿವಸವೂ ಮರಗಳ