ಧಾರ್ಮಿಕ, ಕಾರ್ಮಿಕ ನಗರವಾಗಿರುವ ಭದ್ರಾವತಿ ಶಿವಮೊಗ್ಗದಿಂದ ೨೫ ಕಿ.ಮೀ. ದೂರದಲ್ಲಿದೆ. ಭದ್ರಾವತಿ ವಿಶ್ವೇಶ್ವರಯ್ಯನವರ ಕನಸಿನ ಕೂಸು. ಹಿಂದೆ ಬೆಂಕಿಪುರ ಎಂಬುದಾಗಿ ಕರೆಯಲ್ಪಡುತ್ತಿತ್ತು. ಮಂಕಿಋಷಿಗಳ ತಪೋಭೂಮಿ. ಹಳೆ ಟೌನ್ ನಲ್ಲಿ ನಕ್ಷತ್ರಾಕಾರದ ವೇದಿಕೆಯ ಮೇಲಿರುವ ಹೊಯ್ಸಳ ಕಾಲದ ಶ್ರೀ ಲಕ್ಷ್ಮಿನರಸಿಂಹ ದೇವಾಲಯ ಅಪೂರ್ಣಗೊಂಡಿದ್ದರೂ ಶಿಲ್ಪ ಕಲಾ ದೃಷ್ಟಿಯಿಂದ ಆಕರ್ಷಣೀಯ. ಇಲ್ಲಿಯ ನರಸಿಂಹ, ಬೃಹತ್ ಗಣೇಶ ಸುಂದರ ಕೆತ್ತನೆಯಿಂದ ಕೂಡಿದೆ. ಪ್ರತಿವರ್ಷ ಮೇ ತಿಂಗಳಿನಲ್ಲಿ ರಥೋತ್ಸವ ನಡೆಯುತ್ತದೆ. ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ, ಕಾಗದದ ಕಾರ್ಖಾನೆ ನೋಡುವಂತಹುದು.

 

ಲಕ್ಕವಳ್ಳಿ ( ಬಿ.ಆರ್. ಪ್ರಾಜೆಕ್ಟ್)

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೨೫ ಕಿ.ಮೀ
ಜಿಲ್ಲಾ ಕೇಂದ್ರದಿಂದ ೨೫ ಕಿ.ಮೀ

ಲಕ್ಕವಳ್ಳಿಯಲ್ಲಿ ಭದ್ರಾನದಿಗೆ ಅಡ್ಡವಾಗಿ ಆಣೆಕಟ್ಟನ್ನು ಕಟ್ಟಲಾಗಿದೆ. ಇದು ಶಿವಮೊಗ್ಗದಿಂದ ೨೫ ಕಿ.ಮೀ ದೂರದಲ್ಲಿದೆ. ಈ ಜಲ ಸಾಗರದಲ್ಲಿ ವಿದ್ಯುತ್ ತಯಾರಿಕಾ ಘಟಕಗಳು ಇವೆ

 

ಕುವೆಂಪು ವಿಶ್ವವಿದ್ಯಾನಿಲಯ ಶಂಕರಘಟ್ಟ:

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೧೪ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೬ ಕಿ.ಮೀ.

ಶಿವಮೊಗ್ಗದಿಂದ ೨೬ ಕಿ.ಮೀ. ಲಕ್ಕವಳ್ಳಿಯಿಂದ ಸುಮಾರು ೩ ಕಿ.ಮೀ. ದೂರದಲ್ಲಿ ಇರುವ ಶಂಕರಘಟ್ಟದಲ್ಲಿ ಕುವೆಂಪು ವಿಶ್ವವಿದ್ಯಾನಿಲಯ ಇದೆ. ಕರ್ನಾಟಕದ ವಿಶ್ವವಿದ್ಯಾನಿಲಯದಲ್ಲಿ ಇದಕ್ಕೆ ಪ್ರಮುಖ ಸ್ಥಾನವಿದೆ.

ಇದರ ವ್ಯಾಪ್ತಿಗೆ ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ಎಲ್ಲಾ ಉನ್ನತ ಶಿಕ್ಷಣದ ಕಾಲೇಜುಗಳು ಒಳಪಟ್ಟಿರುತ್ತದೆ.

 

ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನ

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೧೮ ಕಿ.ಮೀ

ಕಟ್ಟಡದ ವಿಶೇಷ: ಹೊಯ್ಸಳರ ಕಾಲದ ವಿಷ್ಣುವರ್ಧನನ ಮೊಮ್ಮಗ ವೀರನರಸಿಂಹ ಎಂಬುವವನು ಈ ದೇವಸ್ಥಾನದ ಕೆತ್ತನೆಯನ್ನು ಮಾಡಿಸಿದ್ದಾನೆ. ಇದರ ಕೆತ್ತನೆಯನ್ನು ಡಕಣಾಚಾರಿ ಮಗ ಡಂಕಣ ಮತ್ತು ಮಾಬಾ ಎಂಬ ಶಿಲ್ಪಿಗಳು ೧೦೦ ವರ್ಷಗಳ ಕಾಲ ಕೆತ್ತನೆ ಮಾಡಿ ಪೂರೈಸಿದ್ದಾರೆ. ಆದರೂ ಇದು ಅಪೂರ್ಣವಾಗಿದೆ. ಇದು ನಕ್ಷತ್ರಾಕಾರದ ದೇವಸ್ಥಾನವಾಗಿದೆ. ಸುತ್ತಲೂ ಆನೆಗಳಿಂದ ಹೊರಲ್ಪಟ್ಟಿದೆ. ಸುಮಾರು ೧೪೦ ರಿಂದ ೧೫೦ ರಾಜಗೋಪುರಗಳಿವೆ.

ದೇವರ ವಿಗ್ರಹ ವಿಶೇಷತೆ: ದೇವಸ್ಥಾನದ ಒಳಗೆ ಕಲ್ಲಿನ ಕಿಟಕಿಗಳಿವೆ. ಈ ವಿಗ್ರಹವನ್ನು ಪರಕೀಯರಿಂದ ರಕ್ಷಣೆ ಮಾಡುವುದಕ್ಕಾಗಿ ಜೇಡಿಮಣ್ಣು ಮತ್ತು ಸುಣ್ಣದ ಲೇಪನ ಮಾಡಲಾಗಿದೆ. ಈ ವಿಗ್ರಹಕ್ಕೆ ತ್ರಿನೇತ್ರಗಳಿವೆ. ಪದ್ಮ, ಗಧಾ, ಶಂಖಗಳಿವೆ. ಪಕ್ಕದಲ್ಲಿ ಲಕ್ಷ್ಮೀಯು ಎಡಗೈಯಲ್ಲಿ ಅಮೃತ ಕಳಶವನ್ನು ಹಿಡಿದಿದ್ದಾಳೆ. ಆದ್ದರಿಂದ ಅಮೃತವಲ್ಲಿ ಎಂಬ ಹೆಸರಿನ ಅಮ್ಮನನ್ನೆ ದಿಟ್ಟಿಸಿ ನೋಡುತ್ತಿರುವ ವಿಗ್ರಹ ಮೂರ್ತಿಯಾಗಿದೆ.

 

ಆಕಾಶವಾಣಿ

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೨ ಕಿ.ಮೀ.

ಪೂರ್ಣ ಹೆಸರು: ಪ್ರಸಾರ ಭಾರತಿ, ಭಾರತೀಯ ಪ್ರಸಾರ ನಿಗಮ, ಆಕಾಶವಾಣಿ, ಜೆ.ಪಿ.ಎಸ್, ಕಾಲೋನಿ, ಭದ್ರಾವತಿ.

ಸ್ಥಾಪನೆ: ೦೭-೦೨-೧೯೬೫

ಸಂದರ್ಶನ ಸಮಯ: ಪ್ರತೀ ಶನಿವಾರ ಮತ್ತು ಭಾನುವಾರ ಹಾಗೂ ಎಲ್ಲಾ ಸರ್ಕಾರಿ ರಜಾ ದಿನಗಳನ್ನು ಹೊರತು ಪಡಿಸಿ ಉಳಿದ ದಿನಗಳಲ್ಲಿ ಬೆಳಗ್ಗೆ ೧೦ ರಿಂದ ಸಂಜೆ ೫ ರವರೆಗೆ.

ವಿಶೇಷತೆ: ಧ್ವನಿ ಮುದ್ರಣ ಕೊಠಡಿಗಳು ವಿವಿಧ ಕಾರ್ಯಕ್ರಮಗಳ ಧ್ವನಿ ಮುದ್ರಣ, ಸಾಂಸ್ಕೃತಿಕ ಕಾರ್ಯಕ್ರಮಗಳ ಧ್ವನಿಮುದ್ರಣ, ಸಂಗೀತ ಉಪಕರಣಗಳು ವ್ಯವಸ್ಥಿತವಾದ ಸಿಬ್ಬಂದಿ ವರ್ಗ, ಫೋಟೋ, ವಿಡಿಯೋ ನಿಷೇಧ, ಪ್ರವಾಸಿ ಶಾಲಾ ಮಕ್ಕಳಿಗೆ ಆ ಕ್ಷಣದಲ್ಲಿಯೇ ಕಾರ್ಯಕ್ರಮ ನೀಡುವ ವ್ಯವಸ್ಥೆಯೂ ಇದೆ.

 

ವಿಶ್ವೇಶ್ವರಾಯ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆ ( ವಿ.ಐ.ಎಸ್.ಎಲ್)

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೦ ಕಿ.ಮೀ.
ಜಿಲ್ಲಾ ಕೇಂದ್ರದಿಂದ: ೨೦ ಕಿ.ಮೀ.

ಸ್ಥಾಪನೆ: ಸರ್.ಎಂ.ವಿಶ್ವೇಶ್ವರಯ್ಯನವರು ೧೯೧೮ರಲ್ಲಿ ಸ್ಥಾಪಿಸಿದ್ದಾರೆ. ಆಗ ಇಲ್ಲಿ ಬೆಂಕಿಪುರ ಎಂಬ ನಾಮವಿತ್ತು. ಸುಂದರವಾದ ದೊಡ್ಡದಾದ ಭದ್ರಾನದಿ ದಂಡೆಯಲ್ಲಿ ವಿಶಾಲವಾದ ಮೈದಾನ ಹಾಗೂ ನಿರ್ಜನವಾದ ಪ್ರದೇಶವಿತ್ತು. ಈ ಕಾರ್ಖಾನೆಯನ್ನು ಸ್ಥಾಪಿಸಿ ಸಾವಿರಾರು ಜನರಿಗೆ ಉದ್ಯೋಗವನ್ನು ದೊರಕಿಸಿ ಕೊಟ್ಟಿದ್ದಾರೆ. ಇಲ್ಲಿ ೨೩೦೦ ಸಿಬ್ಬಂದಿ ಇದ್ದಾರೆ ಹಾಗೂ ೬೩೦೦ ವಾಸದ ಮನೆಗಳಿವೆ.

ವಿಸ್ತೀರ್ಣ: ೩.೮ ಚ್.ಕಿ.ಮೀ

ಭೇಟಿಯ ಸಮಯ: ಪ್ರತಿ ಶನಿವಾರ ಮಾತ್ರ, ಬೆಳಗ್ಗೆ ೧೦ ರಿಂದ ಮಧ್ಯಾಹ್ನ ೧ ಗಂಟೆಯವರೆಗೆ. ೧ ತಿಂಗಳ ಮುಂಚಿತ ಅನುಮತಿಯನ್ನು ಪಡೆಯುವುದು.

ಕಚ್ಚಾವಸ್ತು: ಹೊಸಪೇಟೆಯಿಂದ ಕಬ್ಬಿಣದ ಮ್ಯಾಂಗನೀಸ್ ಅದಿರು ಸರಬರಾಜಾಗುತ್ತದೆ.

ತಯಾರಾಗುವ ವಸ್ತುಗಳು: ಆಲಾಯ್ ಸ್ಟೀಲ್. ಇದು ದೇಶದ ಇತರೆ ರಾಜ್ಯಗಳಿಗೆ ಮತ್ತು ಪರದೇಶಗಳಿಗೂ ರಫ್ತಾಗುತ್ತದೆ.

ಆಡಳಿತ: ಸ್ಟೀಲ್ ಅಥಾರಿಟಿ ಆಫ್ ಇಂಡಿಯಾ ಲಿಮಿಟೆಡ್, ಭಾರತ ಸರ್ಕಾರ.

ಇತರೆ ವ್ಯವಸ್ಥೆ: ಆಸ್ಪತ್ರೆ, ಸ್ಟೇಡಿಯಂ,ಶಾಲೆಗಳು, ಪಶುವೈದ್ಯ ಆಸ್ಪತ್ರೆ.

 

ಮೈಸೂರು ಕಾಗದ ಕಾರ್ಖಾನೆ ನಿಯಮಿತ (ಎಂ.ಪಿ.ಎಂ)

ತಾಲ್ಲೂಕು: ಭದ್ರಾವತಿ
ತಾಲ್ಲೂಕು ಕೇಂದ್ರದಿಂದ: ೩ ಕಿ.ಮೀ
ಜಿಲ್ಲಾ ಕೇಂದ್ರದಿಂದ: ೨೨ ಕಿ.ಮೀ

ಹೆಸರು: ದಿ ಮೈಸೂರು ಪೇಪರ್ ಮಿಲ್ಸ್ ಲಿಮಿಟೆಡ್, ಪೇಪರ್ ಟೌನ್

ದೂರ: ಬಸ್ ನಿಲ್ದಾಣದಿಂದ ೨ ಕಿ.ಮೀ

ಸ್ಥಾಪನೆ: ೨೦-೦೫-೧೯೩೬ರಲ್ಲಿ ರಿಜಿಸ್ಟರ್ ಪಡೆಯಿತು. ೦೧-೦೪-೧೯೩೭ರಲ್ಲಿ ಶ್ರೀ ಕೃಷ್ಣ ರಾಜೇಂದ್ರ ಒಡೆಯರ್ ಅವರಿಂದ ಅಡಿಗಲ್ಲು.

ನೌಕರರು: ೩೦೬ ನೌಕರರು, ೨೫೦ ಗುತ್ತಿಗೆದಾರರು ಹಾಗೂ ಇತರೆಯವರು ಉದ್ಯೋಗದಲ್ಲಿದ್ದಾರೆ.

ವಿಸ್ತೀರ್ಣ: ೨೬೬ ಎಕರೆ ವ್ಯಾಪ್ತಿಯಲ್ಲಿ ಈ ಉದ್ಯಮ ನಡೆಯುತ್ತಿದೆ.

ಕಚ್ಚಾವಸ್ತು: ೭೫೦೦೦ ಎಕರೆ ಪ್ರದೇಶದಲ್ಲಿ ಅಕೇಶಿಯ, ನೀಲಗಿರಿ ಮುಂತಾದ ಮೆದು ಮರಗಳು, ಬೊಂಬು, ಬೊಕಾಸೆ ಮತ್ತು ಹೊರದೇಶದಿಂದ ಪಲ್ಪ್

ಉತ್ಪಾದನೆ: ಬರವಣಿಗೆ ಮತ್ತು ಮುದ್ರಣಕ್ಕಾಗಿ ಕಾಗದ ಹಾಗೂ ಸಕ್ಕರೆ, ಡ್ರಾಯಿಂಗ್ ಹಾಳೆ ಇತ್ಯಾದಿ ಎಲ್ಲಾ ವಿಧದ ಗಾತ್ರಗಳಲ್ಲಿ ಕಾಗದ ತಯಾರಾಗುತ್ತದೆ. ವಾರ್ಷಿಕ ೮೮೦೦೦ ಮೆಟ್ರಿಕ್ ಟನ್.

ಆಡಳಿತ: ಕರ್ನಾಟಕ ಸರ್ಕಾರದ ಆಡಳಿತಕ್ಕೆ ಒಳಪಟ್ಟಿದೆ.

ಇತರೆ ಸೌಲಭ್ಯ: ಆಸ್ಪತ್ರೆ ಮತ್ತು ಶಾಲಾ ಕಾಲೇಜುಗಳು.