Categories
ಮಾಧ್ಯಮ ರಾಜ್ಯೋತ್ಸವ 2016 ರಾಜ್ಯೋತ್ಸವ ಪ್ರಶಸ್ತಿ

ಭವಾನಿ ಎನ್. ಲಕ್ಷ್ಮಿನಾರಾಯಣ

ಏಳು ದಶಕಗಳಿಂದ ಛಾಯಾಗ್ರಾಹಕರಾಗಿ ಕಾರ್ಯ ನಿರ್ವಹಿಸುತ್ತಿರುವ ಚಿಕ್ಕಬಳ್ಳಾಪುರದ ಭವಾನಿ ಎನ್. ಲಕ್ಷ್ಮೀನಾರಾಯಣ ಅವರು ಛಾಯಾಚಿತ್ರ ಅಂಕಣವನ್ನು ಕನ್ನಡ ಪತ್ರಿಕೋದ್ಯಮದಲ್ಲಿ ಆರಂಭಿಸಿದ ಮೊದಲಿಗರು. ಮದರಾಸು, ಮುಂಬಯಿ ಹಾಗೂ ಬೆಂಗಳೂರಿನ ಚಲನಚಿತ್ರ ಚಟುವಟಿಕೆಗಳನ್ನು ನಿರಂತರವಾಗಿ ಛಾಯಾಗ್ರಹಣ ಮಾಡುತ್ತಿದ್ದ ಲಕ್ಷ್ಮಿನಾರಾಯಣ ಸುಧಾ ವಾರಪತ್ರಿಕೆಯಲ್ಲಿ ಸಿನಿಮಾಂಕಣ, ಮಯೂರ ಮಾಸಿಕದಲ್ಲಿ ಸಾಹಿತಿಗಳ ಛಾಯಾ ಅಂಕಣವನ್ನು ಆರಂಭಿಸಿದರು.
ಪತ್ರಿಕಾ ಛಾಯಾಗ್ರಾಹಕರಾಗಿ ಗೋಕುಲ, ಪ್ರಜಾಮತ, ಪ್ರಜಾವಾಣಿ, ಉದಯವಾಣಿ ಪತ್ರಿಕೆಗಳಿಗೆ ಕೆಲಸ ಮಾಡಿದ್ದಾರೆ. ಕ್ಯಾಮೆರಾ ಕಣ್ಣಲ್ಲಿ ರಾಜ್ ಸೇರಿದಂತೆ ಛಾಯಾಚಿತ್ರ ಕುರಿತಂತೆ ಹಲವು ಪುಸ್ತಕಗಳನ್ನು ಭವಾನಿ ಹೊರತಂದಿದ್ದಾರೆ.