ಸಾಮಾಜಿಕ ಬದಲಾವಣೆ :

ಸಮಾಜದ ವಿವರವಾದ ವಿವರಣೆಯನ್ನು ತಿಳಿಯದ ವಿನಃ ಯಾವ ರೀತಿಯ ಬದಲಾವಣೆಯು ಸಮಾಜದಲ್ಲಿ ನಡೆಯುತ್ತಿದೆ ಎಂಬುದನ್ನು ತಿಳಿಯಲು ಸಾಧ್ಯವಿಲ್ಲ. ಬದಲಾವಣೆಯು ಅನಿವಾರ್ಯ ಮತ್ತು ಅವಶ್ಯವಿರುವಂಥಾದ್ದು. ಇಲ್ಲಿಯವರೆಗಿನ ಸಮುದಾಯದ ರೂಢಿ, ಸಾಂಪ್ರದಾಯಿಕ ರೀತಿ, ಧಾರ್ಮಿಕ ನಡುವಳಿಕೆ ಇವುಗಳಲ್ಲಿ ಯಾವ ರೀತಿಯ ಬದಲಾವಣೆ ಪರಿಸ್ಥಿತಿಗೆ ಸರಿಹೋಗುವಂತೆ ಅವುಗಳಲ್ಲಿ ಬದಲಾವಣೆ ಮಾಡಲು ಸಾಧ್ಯವಿದೆಯೆಂಬುದನ್ನೂ ಇಲ್ಲಿ ಅರಿಯಲು ಯತ್ನಿಸಲಗಿದೆ. ನಿರ್ಣಯಗಳನ್ನು ನಿಯೋಜಿಸುವ ಪೂರ್ವದಲ್ಲಿ ಬೆಳೆಯುತ್ತಿರುವ ವ್ಯಕ್ತಿ ಮತ್ತು ಬೆಳವಣಿಗೆ ಹೊಂದುತ್ತಿರುವ ಸಮಾಜ ಇವುಗಳನ್ನು ಅರಿಯುವುದು ಅವಶ್ಯವಿದೆ. ಸುವ್ಯವಸ್ಥಿತ ಸಮಾಜದ ಲಕ್ಷಣವೆಂದರೆ ಅಲ್ಲಿ ಪ್ರತಿ ವ್ಯಕ್ತಿಯೌ ಮೆಲ್ಮಟ್ಟದ ಅನುಭವಗಳನ್ನು ಅನುಭವಿಸುವದಾಗಿದೆ. ಕ್ರಮಬದ್ಧವಾದ ನಡತೆಯನ್ನು ಹೊಂದಿ, ನಾಮಾಜಿಕ ನೈತಿಕ ಆಧ್ಯತ್ಮಿಕ ಬೇಡಿಕೆಗಳನ್ನು ಪ್ರಮಾಣ ಬದ್ಧವಾಗಿ ಪೂರೈಸಬಲ್ಲವನಾಗಿದ್ದಾನೆ. ಮಾನವನಲ್ಲಿಯ ಕೆಳದರ್ಜೆಯ, ಮತ್ತು ಹೆಚ್ಚಿನ ಸ್ತರದಲ್ಲಿಯ ತಿಳಿವಳಿಕೆಯಲ್ಲಿ ಸದಾ ಘರ್ಷಣೆ ನಡೆದು ಕೆಳಮಟ್ಟದವುಗಳ ಸೋಲಿನಲ್ಲಿ ಅಂತ್ಯವಾಗುವದು, ನಾಗರಿಕ ಸುಧಾರಣೆ ಹೊಂದಿದವನ ಲಕ್ಷಣ. ಇದು ಮಾನವನ ಅಭ್ಯುದಯದ ಮೂದಲನೆಯ ಸೋಪಾನ; ಎಲ್ಲಗಳ ಒಂದು ಸ್ಥಿರಸಮಬಾರಸ್ಥಿಯನ್ನು ಕಂಡುಕೊಂಡಿರುವದರಿಂದ ವ್ಯಕ್ತಿಯ ಆಂತರಿಕ ತೃಪ್ತಿಯು ತೋರಿಬರುತ್ತದೆ. ಇದನ್ನೇ ಕೆಲವು ಸಮಾಜ ವಿಜ್ಞಾನಿಗಳ ಅಭಿಪ್ರಾಯದಂತೆ, ಕೆಳ ದರ್ಜೆಯ ಪ್ರವೃತ್ತಿಯನ್ನು ನೆಚ್ಚುವದು, ಅದರಂತೆ ವರ್ತಿಸುವುದನ್ನೇ ತಡೆಗಟ್ಟುವದೇ ಏಳಿಗೆ, ಏರಿಳಿತವಿಲ್ಲದ ನಿಂತ ಸ್ಥಿತಿಯನ್ನು ಮನೋವಿಜ್ಞಾನಿಗಳು ಗುರ್ತಿಸಿದ್ದಾರೆ.ಹೆಚ್ಚಿನ ಯೋಜನೆಯನ್ನು ಮೊದಲು ವಹಿಸಬೇಕು. ಅದನ್ನು ಊಹಿಸುವಲ್ಲಿ ಹೆಚ್ಚಿನ ತೀಕ್ಷಣತೆಯು ಇದ್ದು, ಅದು ಪೂರ್ವ ನಿಯೋಜಿತ ಪೂರೆಯನ್ನು ಹರಿದು ಮಾನವನನ್ನು ಹೊರಸಾಗಿಸುವಂತಿರಬೇಕು. ಇದು ವ್ಯಕ್ತಿಯ ವ್ಯಕ್ತಿತ್ವವನ್ನೂ ಆತನ ಅಭಿರುಚಿಯನ್ನೂ ಬದಲಾಯಿಸುತ್ತದೆ; ಇಲ್ಲಿಂದ ಅನಿಸುವಿಕೆಯ ಪ್ರಾರಂಭವು. ತರ್ಕವು ಅದನ್ನು ನಿರ್ದೇಶಿದಬಲ್ಲುದಾಗಿದೆ. ಮತ್ತು ತರ್ಕ ವಿಧಾನದಿಂದ ಕ್ರಮವಾದ ಮತ್ತು ವ್ಯವಸ್ಥಿತ ಸ್ಥಿತಿಯನ್ನು ಹೊಂದಬಹುದು. ಇಂಥ ತಾರ್ಕಿಕ ಬದಲಾವಣೆಗೆ ಸಮಾಜದ ಸಣ್ಣ ಗುಂಪು ಅತಿ ಯೋಗ್ಯವಾದುದು. ಜಾನಪದ ಆಟದ ಮೇಳವು ಇಂಥ ಸಣ್ಣ ಗುಂಪಿನ ಸ್ಥಾನವನ್ನು ಹೊಂದಬಲ್ಲದು ಮತ್ತು ಅವರೆಲ್ಲರು ಒಂದೆಡೆ ಸೇರಿ ಒಂದು ನಿರ್ದಿಷ್ಟ ಉದ್ದೇಶದಿಂದ ಅನೇಕ ದಿನಗಳನ್ನು ಕಳೆಯುವುದರಿಂದ ಪರಸ್ಪರ ಅರಿವು; ಭಾವನೆಯು ಮೂಡುತ್ತದೆ. ಜಾನಪದ ಆಟವು ಜನತೆಗೆ ಹಿಂದಿನ ವೈಭವಯುತವಾದ ಧಾರ್ಮಿಕ ಪರಂಪರೆಯ ಜೀವನದ ಮಾಹಿತಿಯನ್ನು ಬೀರುವುದಾಗಿದೆ. ಒಂದು ದೃಷ್ಟಿಯಲ್ಲಿ ಜಾನಪದ ರಂಗಭೂಮಿಯು ಜನತೆಯ ನಡತೆಯನ್ನು ನಿಯಂತ್ರಿಸಿ, ರೂಪಿಸುವುದಾಗಿದೆ.

ಇಂದಿನ ಸಮಾಜದ ಸ್ಥಿತಿಯ ಬಗ್ಗೆ ಒಂದೆರಡು ಮಾತುಗಳು. ನಮ್ಮ ತಾಂತ್ರಿಕ, ವೈಜ್ಞಾನಿಕ ಸಂಶೋಧನೆಗಳಿಂದಾಗಿ ಮಾನವನ ಐಹಿಕ ಬೇಡಿಕೆಗಳ ಪೂರೈಕೆಯಾಗಿ, ಪ್ರತಿಯೂಬ್ಬನಲ್ಲಿ ತಾನು ಸರ್ವಸ್ವತಂತ್ರ, ಸಮಾಜದಲ್ಲಿ ಇತರರಿಗೂ ತನಗೂ ಏನೂ ಸಂಬಂಧವಿಲ್ಲವೆನ್ನುವ, ವಾತಾವರಣವನ್ನು ಕಲ್ಫಿಸಿದ್ದು ಸಮಾಜ ವಿಜ್ಞಾನಿಗಳ ಅಭಿಪ್ರಾಯದಂತೆ ದುರಾದೃಷ್ಟಕರವಾಗಿದೆ. ಒಂದು ರೀತಿಯ ‘ಗರ್ವವು’ ಉಂಟಾಗಿ ಅದು ಇತರರೂಂದಿಗೆ ಸಹ ಬಾಳ್ವೆ ನಡೆಸುವುದನ್ನು ಕಲಿಸುವ ಬದಲು, ಅವರನ್ನು ಶೋಷಿಸುವಂತೆ ಪ್ರೇರೇಪಿಸುತ್ತದೆ. ನಮ್ಮ ಸಾಮಾಜಿಕ ಜೀವನವೂ, ಜೀವನದ ರೀತಿಗಳನ್ನು ತಿಳಿಸಿದೆಯೇ ವಿನಃ ಅದರ ಅಂತ್ಯಗಳನ್ನು ತಿಳಿಸಿಲ್ಲ. ಡಾಕ್ಟರ ಎಸ್. ರಾಧಾಕೃಷ್ಣನ್ನರ ಶಬ್ದಗಳಲ್ಲಿ, A terrible blindness has afficted the men of our generation who do not hesitate to gramble in human sorrow through hard economic laws in terms of peace and aggression and cruelty in the times of war. The defeat of human by the material, is tha central weakness of out civilization. The theories which insist that man should live by bread alone. are cutting off man’s connections with the world of Spirits and integrating his totality in the worldly communities of class and race, State and Nation…The real values by which we live, whatever our profession be are those of our enemies the lust for power. the joy of curelty and Pride of dominance.

The World is filled with the clammer of pain which calls across the ages for justice, The present world is full of missunderstanding, bitterness and stride. The atmosphere is charged with suspician, uncertainity, and much fear for the future.

There is relaxing of tradition of restrains and of established law and order. Ideals which until yesterday, were regaraded as inseparable from social decency and justice which were able to direct and decipline conduct for centuries, are swept away…

ನಾಗರಿಕತೆಯು ಜೀವನದ ಹಾದಿ, ಮಾನವನ ತಿಳುವಳಿಕೆಯ ಪಥ, ಇದರ ತಥ್ಯಾಂಶಗಳು ಜನಾಂಗಗಳ, ರಾಷ್ಟ್ರಗಳ ಬಾಹ್ಯ ಬಂಧನ; ಹೊಂದಣಿಕೆಗಳಲ್ಲಿ, ರಾಜಕೀಯ ಆರ್ಥಿಕ ಒಪ್ಪಂದಗಳಲ್ಲಿ ಇಲ್ಲಿ ಆದರೆ ಅವುಗಳನ್ನು ಹುಟ್ಟಿಸುವ ಮತ್ತು ನಿರಂತರವಾಗಿ ಸಾಗುವಂತೆ ಮಾಡುವುದರಲ್ಲಿ ಅಡಗಿದೆ.

ಆದರೆ ಇಂದಿನ ಪರಿಸ್ಥಿತಿಯನ್ನು, ವ್ಯಕ್ತಿ ಜೀವನವನ್ನು ವಿಶ್ಲೇಷಿಸದಲ್ಲಿ ನಮಗೆ ಕಂಡು ಬರುವುದೇನು? ಇತರರಿಗೆ ಪೀಡೆಯಾಗುವಷ್ಟು ಸ್ವಂತಕ್ಕಾತಿರುವ ಅಭಿರುಚಿ ಭೌತಿಕ ಐತಿಕ ಲಲಸೆ, ಇತರರ ಮೇಲೆ ದಬ್ಬಾಳಿಕೆಯ ಪ್ರವೃತ್ತಿ, ಇವೇ ಇಂದು ಸಮಾಜವನ್ನು ನಿರ್ದೇಶಿಸುವ, ಆಳುವ ತತ್ವಗಳಾಗಿವೆ.

ಈ ತತ್ವಗಳು ವ್ಯಕ್ತಿಯ ಸರ್ವತೋಮುಖವಾದ ಏಳಿಗೆಯನ್ನಾಗಲಿ, ಸಮಾಜದ ಏಳಿಗೆಯನಾಗಲಿ ಸಾಧಿಸಲಾರವು.  ಸಮಾಜದ ಬೆಳವಣಿಗೆಯ ಚರಿತ್ರೆಯಲ್ಲಿ ಸುಖ ದುಃಖಗಳನ್ನು ಸಮುಉದಾಯದವರು ಪರಸ್ಪರ ಹಂಚಿಕೊಳ್ಳುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿ ಎಂಥದು ! ಇದಕ್ಕೆ ಧಾರ್ಮಿಕ ಮತ್ತು ನೈತಿಕ ಮೌಲ್ಯಗಳ ಅರಿವಿನ ಅಭಾವವೇ ಕಾರಣ. ನಮ್ಮ ಸಂಪ್ರದಾಯದಲ್ಲಿ ಅವು ಹಾಸು ಹೊಕ್ಕಾಗಿದ್ದವು. ಅದನ್ನು ಕಡೆಗಣಿಸಿದ್ದರ ಪ್ರಭಾವವಿದು. ಇಂದಿನ ನಾಗರಿಕತೆಯ ದೋಷವು ಐಹಿಕ ಲಾಲಸೆಗೆ ಪ್ರಾಧಾನ್ಯತೆಯನ್ನು ಕೊಟ್ಟಿದ್ದಾಗಿದೆ. ನಮ್ಮ ಸಂಪ್ರದಾಯದಲ್ಲಿ ಇದಕ್ಕೆ ಕೊನಯ ಸ್ಥಾನವನ್ನು ಕೊಡಲಾಗಿತ್ತು. ಪರೋಪಕಾರಕ್ಕಾಗಿ, ಮಾನಕ್ಕಾಗಿ, ಇತರರಿಗೆ ಗೌರವ ಸಲ್ಲಿಸುವುದಕ್ಕಾಗಿ ಪ್ರಾಣತೆತ್ತ ಊದಾಹರಣೆಗಳೆಷ್ಟೋ ನಮ್ಮಲ್ಲಿವೆ. ನಾವು ಅನೇಕ ಬಾರಿ ಅನೇಕ ಸಮಸ್ಯೆಗಳನ್ನು ಕೂಲಂಕಷವಾಗಿ ಯೋಚಿಸಿದವರಾಗಿದ್ದೇವೆ. ಇಂದಿನ ಯಾವುದೇ ಮನರಂಜನೆಯ ಸಾಧನೆಯನ್ನು ವಿಶ್ಲೇಷಿಸಿ ಅಲ್ಲಿ ಐಹಿಕ ಭೋಗ ಲಾಲಸೆಯನ್ನು ಪಡೆಯುವುದೇ ಶ್ರೇಷ್ಠವೆಂದು ಬಿಂಬಿಸುವಂಥವುಗಳಗಿವೆ ಅವನ್ನು ಸಾಧಿಸದಿದ್ದರೆ ಒಂದು ತರದ ಅಸಮಾಧಾನ, ಸಾಧಿಸಿದರೆ ಇನ್ನೂಂದು ರೀತಿಯ ಅಸಮಾಧಾನ, ಅತೃಪ್ತಿ, ಅನೇಕ ವೃತ್ತಿ ನಾಟಕಗಳು, ಚಲನ ಚಿತ್ರಗಳೂ ಇವನ್ನೇ ನಿರಂತರವಾಗಿ ಜನತೆಗೆ ಬೋಧಿಸುತ್ತವೆ. ಅವುಗಳಿಂದಾಗುವ ಪರಿಣಾಮ ಎಲ್ಲಾ ವಯಸ್ಸಿನವರಲ್ಲಿಯೂ ಇದ್ದು ಪ್ರಾರಂಭದಲ್ಲಿ ಕಂಡು ಬರದ ಕ್ಷಯ ರೋಗಾಣುಗಳಿದ್ದಂತೆ. ನಾಳಿನ ಜನಾಂಗದ ಮೂಲಭೂತ ಜೀವನಗಳ ಮೌಲ್ಯಗಳ ಮೇಲೆಯೂ ಪ್ರಭಾವ ಬೀರುವಂಥವುಗಳು.

) ಸಾಮಾಜಿಕ ದೃಷ್ಟಿಯಿಂದ :

ಸಾಮಾಜಿಕ ಬದಲಾವಣೆ, ಇಂದಿನ ಸ್ಥಿತಿಯನ್ನು ತಿಳಿದ ನಂತರ, ಸಮುದಾಯದ ಸಾಂಸ್ಕೃತಿಕ ಅಭಿವೃದ್ಧಿಯ ಅವಶ್ಯಕತೆಯಿರುವ ಇಂದಿನ ಗಳಿಗೆಯಲ್ಲಿ ಈಗಿನ ಪರಿಸ್ಥಿತಿಯಿಂದ, ಉದ್ಧಾರ ಹೊಂದಲು ಜಾನಪದ ಆಟಗಳ ತಂಡವು ಹೇಗೆ ಯತ್ನಿಸಬಲ್ಲವು, ಅವುಗಳನ್ನು ಹೇಗೆ ಕಾಯ್ದುಕೊಳ್ಳಬೇಕು ಎಂಬುದನ್ನು ಇಲ್ಲಿ ಕಾಣಬಹುದು.

ಗುಡಿಗಾರನಿಗೆ, ಸ್ಥಾನಿಕ ಕಲಾಕಾರರ ಆಂತರಿಕ ತೃಷೆಯನ್ನು  ನೀಗಿಸಲಿಕ್ಕಾಗಿ ಪುರಾತನ ಸಂಪ್ರದಾಯದ ವೇಷಭೂಷನ, ಮುಖವರ್ಣಿಕೆಗಳನ್ನು ಉಳಿಸಿಕೊಳ್ಳುವುದು ಯೋಗ್ಯವಾದುದು. ಅನೇಕ ಹಳ್ಳಿಯು ಕಲಾಕಾರರು ತಯಾರಿಸುವ ರಂಗಸಜ್ಜಿಕೆ. ವೇಷಭೂಷಣಗಳು ಇಂದಿಗೂ ಗಮನಾರ್ಹವಾಗೆವೆ. ಜಾನಪದ ಆಟಗಳ ಅವಸಾನದೊಂದಿಗೆ ಈ ಕಲಾಕಾರರ ಕಲೆಯು ನಶಿಸುತ್ತಿದೆ. ನಾಟಕ ಮತ್ತು ಚಲನಚಿತ್ರಗಳು ವ್ಯಾಪಾರ ಪ್ರವೃತ್ತಿಯುಳ್ಳವುಗಳಾಗಿದ್ದರಿಂದ, ಹಾಡು ಮತ್ತು ಕುಣಿಯಬೇಕೆಂಬ ಆಂತರಿಕ ಅಭಿಲಾಷೆಗಳು ಸರ್ವರಲ್ಲಿ ಸಾಮಾನ್ಯವಾಗಿದ್ದು ಹಳ್ಳಿಗರಲ್ಲಿಯ ಈ ಅಭಿಲಾಷೆಯನ್ನು ಹೊರಹಾಕುವ ಬೇರೊಂದು ರೂಪದ ಕಲೆಯು ಇನ್ನೂ ಹುಟ್ಟದ್ದರಿಂದ ‘ಜಾನಪದ ಆಟ’ಗಳನ್ನು ಮುಂದೊರೆಯಿಸುವುದು ಅವಶ್ಯವಿದೆ. ಇದಕ್ಕೆ ಮಾನಸ ಶಾಶ್ತ್ರಜ್ಞರ ಮನ್ನಣಿಯೂ ಇದೆ. ಹಳ್ಳಿಗರಿಗೆ ಒಂದು ಸುಸಂಧಿಯನ್ನು ಒದಗಿಸುವ ಕಲೆಯ ಆಗರವಾದ ಜಾನಪದ ಆಟದ ಪ್ರದರ್ಶನಕ್ಕೆ ಸರಕಾರ ಮತ್ತು ಸಾರ್ವಜನಿಕರು ಸಹಾಯ ಸಲ್ಲಿಸಿ ಪ್ರೋತ್ಸಾಹಿಸುವುದು ಅವಶ್ಯವಿದೆ.

ಈ ಪ್ರಬಂಧದಲ್ಲಿ ಅಲ್ಲಲ್ಲಿ ಉದಹರಿಸಿದ ಜಾನಪದ ಆಟಗಳು ಸಮುದಯದಲ್ಲಿಲ್ಲ ಒಂದು ರೀತಿಯ ವ್ಯವಸ್ಥಿತ ಸ್ಥಿತಿಯನ್ನು, ಸಾಂಘಿಕ ಭಾವನೆಯನ್ನು ನಾವೆಲ್ಲ ಒಂದೆಂಬ ಅಭಿಮಾನವನ್ನು- ಸುಚಿಸುವಂಥವುಗಳಾಗಿವೆ. ಹಳ್ಳಿಗರು ನಾಟಾಕ ಚಲನಚಿತ್ರ, ಎತರ ಮನರಂಜನೆಗಳತ್ತ ಅಂಧರಾಗಿ ಓಡೋಡುವ ಪ್ರವೃತ್ತಿಯ ತೀಕ್ಷ್ಣತೆಯನ್ನು ಕಡಿಮೆ ಮಾಡುವಂತಹ ಸಾಧನಗಳಗಿವೆ. ಈ ಜಾನಪದ ಆಟಗಳು ಹಳ್ಳಿಗಳಲ್ಲಿ ವ್ಯವಸಾಯ, ನೇಕಾರಿಕೆ ಇತರ ಯಾವುದೇ ಕಸುಬಿನವರಾದರೂ ಅವರಿಗೆ ಸಾಯಂಕಾಲ ಬಿಡುವಿದೆ. ಸಾಕಷ್ಟು ಸಮಯವು ಲಭ್ಯವಿದೆ. ಈ ವೇಳೆಯನ್ನು ತಮಗಾದ ಬೇಸರಿಕೆಯನ್ನು ಕಳೆಯಲು ತಮಗೆ ಮನರಂಜನೆಯೆನಿಸಿದ ರಿತಿಯಲ್ಲಿ ಕಳೆಯುವರರಿಂದೇನು ಎಂಬುದಾಗಿ ವ್ಯರ್ಥವಾಗಿ ತರ್ಕಿಸುತ್ತ ವಾದಿಸುವವಕ್ಕಿಂತ ಅವರೆಲ್ಲರೂ ‘ಜಾನಪದ ಆಟ್ ’ಗಳ ತಂಡ ಮಾಡಿ ಆಟಾ ಆಡುವುದು ಲಾಭದಾಯಕವೂ, ಹರ್ಷದಾಯಕವೂ ಸಮುದಾಯದ ‘ ಏಳಿಗೆಯನ್ನು ಅಪರೋಕ್ಷವಾಗಿ ಸಾಧಿಸುವಂತಹದೂ ಆಗಿದೆ. ಇದಕ್ಕೆ ದೊರೆತ ನಿದರ್ಶನಗಳನ್ನು ಅಂಕಿ ಸಂಖ್ಯೆಗಳನ್ನು ‘ ನನ್ನ ಕರ್ನಾಟಕ ಜಾನಪದ ರಂಗಭೂಮಿ ’ ಗ್ರಂಥದಲ್ಲಿ ಒಂದು ಜಾನಪದ ಆಟವನ್ನು ಮೂಡಲಪಾಯ, ಸಣ್ಣಾಟ ಯಕ್ಷಗಾನ ಯಾವುದೇ ಇರಲಿ; ತಯಾರಿಸಿ ಆಡಲು ಒಂದಿಷ್ಟು ದುಡ್ಡು ಖರ್ಚಾಗುವುದೇನೋ ನಿಜ, ಆದರೆ ಅವರೆಲ್ಲವೂ ವೇಳೆಯ ಬೆಲಯನ್ನೂ, ಆಜ್ಞಾಧಾರಕದಂತಹ ಒಳ್ಳೆಯ ಗುಣವನ್ನೂ, ಕಲಿಯುವುದರೊಂದಿಗೆ ಪ್ರತಿದಿನ ಎರಡುಮೂರು ಘಂಟೆಗಳ ಕಾಲವನ್ನು ಯೋಗ್ಯ ಪರಿಸರದಲ್ಲಿ ಕಳೆಯುವರು. ಎಂಟು ಮೂಡಲು ಪಾಯಗಳ ತಂಡಗಲ್ಲಿ ಏಳರಲ್ಲಿ ಗಮನಾರ್ಹ ಪ್ರಗತಿಯು ಕಂಡುಬಂದಿತು. ಎರಡು ಜಾನಪದ ಆಟಾಗಳನ್ನು ಆಡುವುದನ್ನು ಅವರು ಕಲಿತರಲ್ಲಿದೆ. ಪರಸ್ಪರರಲ್ಲಿ ಪ್ರೀತಿಯಿಂದ ನಡೆಯುವುದನ್ನೂ ಕಲಿತರು. ಸಮುದಾಯದ ಸಾಂಸ್ಕೃತಿಕ ಕೇಂದ್ರವನ್ನಾಗಿ ಆಟದ ತಂಡವನ್ನು ಪರಿವರ್ತಿಸುವುದು ಸಾಧ್ಯವಿದೆ. ಸಮಾಜದಲ್ಲಿ ಒಳ್ಳೆ ರೀತಿಯ ಜೀವನ, ಸಾಂಸ್ಕೃತಿಕ ಚಟುವಟಿಕೆಗಳನ್ನು ಪ್ರೋತ್ಸಾಹಿಸುವ, ಅಭಿವೃದ್ಧಿಗೊಳಿಸುವ ಪಾರುಪತ್ಯವನ್ನಾಗಿ ಜಾನಪದ ಆಟದ ತಂಡವನ್ನು ಪರಿವರ್ತಿಸಬಹುದು. ಸಮುದಾಯದ ಶಿಕ್ಷಣವೆಂದರೆ ಜನತೆಯಲ್ಲಿ ಆರ್ಥಿಕ, ರಾಜಕೀಯ ಜಾಗೃತಿಯನ್ನುಂಟು ಮಾಡುವುದು, ಸಕ್ರಿಯ ಬಾಗವಹಿಸುವಂತೆ ಮಾಡುವುದು ಎಂಬುದನ್ನು ಒಪ್ಪಿಕೊಂಡರೆ, ಜಾನಪದ ಆಟದ ತಂಡಗಳು ಈ ಕಾರ್ಯವನ್ನು ಸಮರ್ಥ ರೀತಿಯಿಂದ ನಿರ್ವಹಿಸಬಲ್ಲವುಗಳಾಗಿವೆ. ನನ್ನ ಸಂಶೋಧನೆಯ ದತ್ತಾಂಶಗಳಿಂದ ಈ ಮಾತು ಸಿದ್ಧವಾಗುತ್ತದೆ. ಜಾನಪದ ಆಟದ ತಂಡವನ್ನು ರೂಪಿಸುವುದು ಕಷ್ಟದ ಕೆಲಸವೇನಲ್ಲ. ಅವರಲ್ಲಿ, ಅನೇಕರು ಅಭಿರುಚಿಯ ಸ್ಕ್ರಿಯ ಪಾತ್ರವಹಿಸಬೇಕೆಂಬ ಆಂತರಿಕ ಲಾಲಸಿಯಿಂದ ಕೂಡಿದವರಿದ್ದು ಪೂರ್ಣ ಸಹಕಾರ ಕೊಡಬಲ್ಲರು. ಅನೇಕ ದಿನಗಳ ಪರಸ್ಪರ ಸಮೀಪದ ಸಹವಾಸದಿಂದ, ತಪ್ಪು ತಿಳುವಳಿಕೆಗಳು ನಶಿಸಿ, ಮತ ಬಾವನೆಯನ್ನು ತೊರೆದು ತಾವು ಹೆಚ್ಚೆಂಬ ಅಹಂಕಾರವನ್ನು ಕಳೆಯಬಹುದಾಗಿದೆ ಈ ಜಾನಪದ ತಂಡ. ಇದು ವೀಕ್ಷಣ ಸಂಗರಿಗಳನ್ನು ಆಧಾರವಾಗಿ ಪಡೆದಿವೆ. ಒಂದು ತಂಡಕ್ಕೆ ಆಟದ ರಂಗ ತಾಲೀಮಿಗಾಗಿ ಒಂದು ಕೋಣೆ, ದೊಡ್ಡದಿದ್ದರೆ ಒಳ್ಳೆಯದು, ಒಂದು ಹಾರ್ಮೋನಿಯಮ್, ಮದ್ದಳೆ, ತಾಳಗಳು ಇಷ್ಟು ಸಲಕರಣೆಗಳಿದ್ದರೆ ಸಾಕು. ಇಂತಹ ತಂಡಗಳಿಗೆ ಊರಲ್ಲಿಯ ಗುಡಿಗುಂಡಾರ, ಶಾಲಾ ಕಟ್ಟಡಗಳನ್ನು ಉಪಯೋಗಿಸಲು ಅನುಮತಿ ದೊರೆಯಬೇಕು. ಅಪರೋಕ್ಷವಾಗಿ ಜನತೆಯಲ್ಲಿ ಸಾಹಿತ್ಯಾಭಿರುಚಿಯನ್ನು ಯುವಕರಲ್ಲಿ ಹುಟ್ಟಿಸಿ, ತಮ್ಮ ಮಕ್ಕಳಿಗಾದರೂ ಯೋಗ್ಯ ಶಿಕ್ಷಣದ ಅವಶ್ಯಕತೆ ಇದೆ ಎಂಬುದನ್ನು ಅವರೆಲ್ಲರೂ ತಿಳಿತುವಂತಾಗುತ್ತದೆ. ಸಂಬಾಷಣೆ ಹಾಡುಗಳನ್ನು ಬಾಯಿ ಪಾಠ ಮಾದುವಾಗ್ಗೆ ಕಲ್ಪನಾಲೋಕದಲ್ಲಿ ವಿಹರಿಸುವಂತೆ ಕಾಣುತ್ತದೆ. ಅದು ಮನಸ್ಸಿಗೆ ಹಿತವಾದುದು ಎಂಬುದಾಗಿ ನಾನು ಭೇಟಿಮಾಡಿದ ಅನೇಕ ಜಾನಪದ ಕಲಾವಿದರು, ರಂಗಭೂಮಿ ಕಲಾವಿದರು ಅಭಿಪ್ರಾಯಪಟ್ಟರು.

ಜಾನಪದ ಆಟಗಳನ್ನು (ಕೃಷ್ಣಪಾರಿಜಾತವನ್ನೂಳಗೊಂಡು) ಮೇಲಿಂದಮೇಲೆ, ಹಬ್ಬ-ಹರಿದಿನಗಳಲ್ಲಿ ಆಡುವುದರಿಂದ ಸಾಮೂಹಿಕ ಕಲಾ ಅಭಿರುಚಿಯಲ್ಲಿ ಬದಲಾವಣೆ ಕಂಡು, ಮಟ್ಟದವನ್ನು ಮೇಲಕ್ಕೇರಿಸುವಂತೆ ಮಾಡಾಲು ಸಾಧ್ಯವಿದೆ. ಸಮುದಾಯದ ಅಭಿರುಚಿಯು ಇಂದು ಹೇಳಿಕೊಳ್ಳುವಂತಹ ಸ್ಥಿತಿಯಲ್ಲಿಲ್ಲ. ನಗರಗಳಲ್ಲಿ ನಿರಕ್ಷರಿಗಳೂ,  ಆಂಗ್ಲಭಾಷೆಯ ಅರ್ಥವಾಗದವರೂ ಗಂಟೆಗಟ್ಟಲೆ ಕಾಯ್ದು ಇಂಗ್ಲೀಷ್ ಮ್ಯಾಟಿನಿಗಳನ್ನು ನೋಡುವ ಅರ್ಥವಾದರೂ ಏನು? ಇದರರ್ಥ ಜನತೆ ಆಂಗ್ಲ ಚಿತ್ರಗಳನ್ನು ನೋಡಬಾರದೆಂದಲ್ಲ. ಅಲ್ಲಲ್ಲಿ ಪ್ರೇಕ್ಷಕರ ಅಭಿರುಚಿ ಅವರ ಲಾಲಸೆಯನ್ನು ತಿಳಿದೇ ಹೇಗೆ ಬರೆಯಬೇಕಾಯಿತು. ಯಾವುದೇ ಸಮಸ್ಯಯನ್ನಾಗಲೀ ಜೀವನದ ಮೌಲ್ಯಗಳ ಅರಿವಾಗಲಿ ಅವರಿಗೆ ಬೇಕಿಲ್ಲ. ಹೆಚ್ಚಿನವರೆಗೆ ಅರೆ ನಗ್ನದ ನಟಿಯರನ್ನು ಅತೀರೇಕದ ಆಂಗ್ಲ ದೃಶ್ಯಗಳನ್ನು ಮುತ್ತಿಡುವುದನ್ನು ಕಾಣಬೇಕಾಗಿದೆ. ನಮ್ಮ ಸಿನೇಮಾದಾಗ ಅವು ಇಲ್ಲವಲ್ಲಾ…ಎಂಬುದೇ ಇವರ ವ್ಯಥೆಯಾಗಿದೆ. ನಮ್ಮ ಚಲನ ಚಿತ್ರಗಳಲ್ಲಿ ನಟಿಯರ ಅಂಗಸೌಷ್ಟವನ್ನು ಅನುಚಿತವಾಗಿ, ಯೋಗ್ಯವಲ್ಲದ ರೀತಿಯಲ್ಲಿ ತೋರಿಸಲಾಗುತ್ತಿದೆ. ಇದು ಪ್ರೇಕ್ಷಕರಲ್ಲಿ ಬೀರುವ ವಾಸನೆ, ಪರಿಮಾಮ ಅಂದೇ ಕಾಣದಿದ್ದರೂ ಕಾಲಾಂತರದಲ್ಲಿ ಅವ್ಯಸ್ಥಿತ ಮಾನಸಿಕ ಸ್ಥಿತಿಯನ್ನು ನಿರೂಪಿಸುತ್ತದೆ. ಇಬ್ಬರೂ ಕಾಲೇಜು ವಿದ್ಯಾರ್ಥಿನಿಯರ ನಡುವೆ ಹಿಂದಿ ಚಲನಚಿತ್ರಗಳ ಆರಾಧನೆಯಿಂದ ಯಾವ ಮಟ್ಟಕ್ಕಿಳಿಯಿತು, ಜೀವನದಲ್ಲಿ ಸಾಧಿಸಿಬೇಕಾದ, ಭಾರತೀಯ ಸಾಂಪ್ರದಾಯದ ಮೌಲ್ಯಗಳೇನಾದವು ಎಂಬುದನ್ನು ಕೇಸ ವಿಶ್ಲೇಷಣೆಯಿಂದ ತಿಳಿದು ಹೀಗೆ ಬರೆದಿದ್ದೇನೆ. ಐಹಿಕ ಲಾಲಸೆಯ ಸಾಧನೆಯೇ ಜೀವನದ ಅಂತಿಮ ಗುರಿಯಾಗಿರುವ ಚಲನಚಿತ್ರಗಳು ಕೂನೆಗೆ ಗಡಿಬಿಡಿಯಿಂದ ಅಂತ್ಯ ದೃಶ್ಯದಲ್ಲಿ ಅಂತಹ ಜೀವನದಲ್ಲಿ ಸುಖವಿಲ್ಲವೆಂದು ತೋರಿಸಿದರೂ ಅದರ ಪರಿಣಾಮವಾಗುವುದಿಲ್ಲ.

) ಸಾಂಸ್ಕೃತಿಕ ದೃಷ್ಟಿಯಿಂದ :

ಜಾನಪದ ಆಟವನ್ನು ನಾವು ನೋಡುವಾಗ ಅದು ಮೂಡಲ ಪಾಯದ ದೊಡ್ಡಾಟವಿರಲಿ, ಯಕ್ಷಗಾಣವಿರಲಿ, ಪಾರಿಜಾತವಿರಲಿ ಇತರ ಯಾವುದೇ ಆಟವಿರಲಿ- ಅದು ಪ್ರತಿಕ್ಷಣ ತನ್ನ ಕಂಪನ್ನು ಕಳೆದುಕೊಳ್ಳುತ್ತಿರುವ ಭಾವನೆಯುಂಟಾಗಿತ್ತದೆ. ಇದಕ್ಕೆ ಮೂಲ ಕಾರಣವೆಂದರೆ ಜಾನಪದ ಕಲೆಯ ಸಾಂಪ್ರದಾಯವನ್ನು ಕಲಾವಿದರು ಮತ್ತು ಪ್ರೋತ್ಸಾಹಿಗಳು ಅರಿಯದಿರುವುದೇ ಆಗಿದೆ. ಬಿಜಾಪುರದಲ್ಲಿ ಸಂಗೀತ ನಾಟಕ ಅಕಾಡಮಿ ಏರ್ಪಡಿಸಿದ್ದ ಜಾನಪದ ಸಮ್ಮೇಳನದಲ್ಲಿ ನೇಪತ್ಯದಲ್ಲಿ ನಾನು ನೋಡಿದ ಸತ್ಯಭಾಮೆಯ ಎಡಗೈಯಲ್ಲಿ ಮುಂಗೈ ಗಡಿಯಾರ! ಕಲಾ ವಿಮರ್ಶಕರು ಜಾನಪದ ಕಲಾವಿದರು, ಇತರರನ್ನು ಅಂಧ ನಂಬಿಕೆಯಿಂದ ಅನುಕರಿಸುವುದನ್ನು ಖಂಡಿಸಬೇಕು. ಜಾನಪದ ಕಲಾವಿದರು, ವೃತ್ತಿನಾಟ್ಯ ಮತ್ತು ಚಲನಚಿತ್ರ ಕಲಾವಿದರನ್ನು ಅನುಸರಿಸುವುದರಲ್ಲಿಯೇ ಬಮ್ಮ ಹೆಚ್ಚಳವಿದೆಯೆಂದು ತಿಳಿಯುದರ ಮೂಲ ಈ ಕಲಾವಿದರು ಆದರ್ಶಕಲಾವಿನ ಅಂತಸ್ತಿನವರೆಂಬ ಭಾವನೆಯನ್ನು ಹೊಂದಿದ್ದಾರೆ. ಇದನ್ನು ನಿಖರವಾಗಿ ಜಾನಪದ ಕಲಾವಿದರಿಗೆ ಮನವರಿಕೆಮಾಡಿಕೊಳ್ಳುವುದು ಅತ್ಯವಶ್ಯವಿದೆ. ಜಾನಪದ ಕಲಾವಿದನಿಗೂ ಇತರ ರೀತಿಯ ಕಲವಿದನಿಗೂ ಗಜಗಜಾಂತರದಷ್ಟು ವ್ಯತ್ಯಾಸವಿದೆಯೆಂಬುದನ್ನು ತಿಳಿಯಬೇಕಾಗಿದೆ. ಜಾನಪದ ವಾದ್ಯಗಳನ್ನು ಈಗಿರುವ ರೀತಿಯಲ್ಲಿಯೇ ಮುಂದುವರೆಯಿಸುವುದು ಅಗತ್ಯವಿದೆ, ಏಕೆಂದರೆ -ಈ ವಾದ್ಯಗಳು ಯಾವ ಉದ್ದೇಶಕ್ಕಾಗಿ ನಿರ್ಮಿಸಲ್ಪಟ್ಟಿವೆಯೋ ಅದನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಿವೆ. ಜನತೆಯಲ್ಲಿ ಜಾನಪದ ಕಲೆಗಿರುವ ಭಾವನೆಯನ್ನು ಜಾಗ್ರತಗೊಳಿಸಿ, ಇಂದಿನಂತೆ ಲಘುವಾಗಿ ಅವುಗಳನ್ನು ಪರಿಗಣಿಸುವ ಹವ್ಯಾಸವನ್ನು ಖಂಡಿಸಬೇಕು. ಜಾನಪದ ಕಲೆಯನ್ನು ನಿರೀಕ್ಷಿಸುವ ಹೊಸ ದೃಷ್ಟಿಯಿಂದ ರೂಪಿಸಬೇಕಾಗಿದೆ.

ಸಮುದಾಯದ ಬಹು ಹೆಚ್ಚಿನ ಸಂಖ್ಯೆಯ ಜನ ಉದಾತ್ತವಾದ ಕಲೆಯನ್ನಾಗಲಿ, ಜಾನಪದ ಕಲೆಯನ್ನಾಗಲಿ ಪೂರ್ಣವಾಗಿ ಅನುಭವಿಸಲಾರದವರಾಗಿದ್ದಾರೆ. ರಸಾನುಭವದಲ್ಲಿ ಅವರಿಗೆ ಯಾವ ರೀತಿಯ ತರಬೇತಿನ ವ್ಯವಸ್ಥೆ ಇಂದಿನ ಸಮಾಜ ರಚನೆಯಲ್ಲಿ ಇಲ್ಲದಾಗಿದೆ. ಅವರಿಗೆ ಯೋಗ್ಯವಾದ ಮಾರ್ಗದರ್ಶನ ಬೇಕಾಗಿದೆ. ‘ಮಮ್ಮಿ ’, ‘ಡ್ಯಾಡಿ ’ ಎಂಬ ಶಬ್ದಗಳ ಅರ್ಥವನ್ನು ಅರಿಯದವರೂ ಸಹ ತಮ್ಮ ಮಕ್ಕಳು ತಮ್ಮನ್ನು ಹಾಗೆ ಸಂಬೋಧಿಸಲಿ ಎಂದು ಆಶಿಸುವಂತಹ ಕೃತಕ ಸಂಸ್ಕೃತಿಯ ಮೊರೆ ಹೊಗುವ ರೂಢಿ ಬೆಳೆಯಹತ್ತಿದೆ. ಅವರಿಗೆ ತಮ್ಮ ಮಕ್ಕಳು ‘ತಂದೆ’, ‘ತಾಯಿ’ ಎಂದು ಕರೆದರೆ ಅವರ ಪ್ರಕಾರ ಅದು ಹಳೆಯ ಸಂಪ್ರದಾಯದ ರೀತಿ, ಹಳ್ಳಿಗಮಾರ ಪದ್ಧತಿಯನ್ನುವ ಮಟ್ಟವನ್ನು ಅನೇಕರು ತಲುಪಿದ್ದಾರೆ, ನಿತ್ಯ ಜೀವನದಲ್ಲಿ ಇಂಥ ರೂಢಿಗಳೇ ಬೆಳೆಯತೊಡಗಿದರೆ ಸಂಪ್ರದಾಯದ ಗತಿ ಏನು?

ಕಲೆಯ ವಿಷಯದಲ್ಲಿಯೂ ನಿಸ್ಸಂದೇಹವಾಗಿ ಇಂಥ ಪರಂಪರೆಯೇ ಬೆಳೆಯತೊಡಗಿದೆ. ಯಕ್ಷಗಾಣವು ಧಾರ್ಮಿಕ ಆಟವಾಗಿ, ದೇವಾಲಯಗಳಿಂದ ಪೋಷಿಸಲ್ಪಟ್ಟಿದೆ. ದೇವಾಲಯಗಳು ಇಂತಹ ತಂಡಗಳನ್ನು ನಡೆಸಲು ಪ್ರೋತ್ಸಾಹಿಸಲು ಅನುಕೂಲವಾಗುವಂತೆ ವ್ಯವಸ್ಥೆ ಮಾಡಬೇಕು. ಮೇಳಗಳು ಹೆಚ್ಚು ಹೆಚ್ಚು ಆಟಗಳನ್ನು ಹಬ್ಬ ಹರಿದಿನಗಳಂದು ಪ್ರದರ್ಶಿಸುವಂತೆ ಮಾಡಬೇಕು. ಹೀಗೆ ಮಾಡುವುದರಿಂದ ದೇವಸ್ಥಾನದಲ್ಲಿ ಅನೇಕ ಸಮಸ್ಯೆಗಳು ಉದ್ಭವವಾಗುತ್ತವೆಯೆಂಬ ಪೂರ್ವಭಾವಿಯಾಗಿ ಗ್ರಹಿಸುವುದಕ್ಕಿಂತ, ಕಲೆಯ ಪುನರುದ್ಧಾರಕ್ಕಾಗಿ, ಕಲೆಗಾಗಿ ಕಲೆಯ ವ್ಯವಸ್ಥೆಯಾಗಬೇಕು.

ಮೂಡಲಪಾಯದ ಆಟದ ತಂಡವು ಯಾವ ದೇವಾಲಯಗಳಿಂದಲೂ ಎಂದೂ ಪೋಷಿಸಲ್ಪಟ್ಟಿಲ್ಲ. ಮೂಡಲಪಾಯದ ಆಟದ ಕಲಾವಿದರಲ್ಲಿ ಹೆಚ್ಚಿನವರು ನೇಕಾರಿಕೆ ಮತ್ತು ಬೇಸಾಯದವರು. ಆದ್ದರಿಂದ ಮೂಡಲಪಾಯ ಆಟದ ತಂಡವನ್ನು ಮತ್ತು ಪಾರಿಜಾತ ತಂಡವನ್ನು ನಡೆಸಿಕೊಂಡು ಹೋಗಲು ಹೆಚ್ಚಿನ ಕಷ್ಟವೇನು ಆಗುವುದಿಲ್ಲ. ಹಾಗೂ ಇವರು ಪ್ರತಿದಿನ ಸಾಯಂಕಾಲ ವಿರಾಮ ಪಡೆದವರಾಗಿರುವರು. ಸಾಮಾಜಿಕ ಮತ್ತು ನೈತಿಕ ಸಣ್ಣಾಟಗಳ ಪ್ರದರ್ಶನವನ್ನು ಪ್ರೋತ್ಸಹಿಸಬೇಕು. ಹಬ್ಬ ಹರಿದಿನಗಳಲ್ಲಿ, ಜಾತ್ರೆಯ ಸಂದರ್ಭಗಳಲ್ಲಿ ದೊಡ್ಡಾಟಗಳನ್ನೂ ಸಣ್ಣಾಟಗಳನ್ನೂ ಕೃಷ್ಣಪಾರಿಜಾತ ಆಡುವ ವ್ಯವಸ್ಥೆಯಾಗಬೇಕು. ಇದನ್ನು ಸಮಾಜ ಕರ್ಯಕರ್ತರು ಹಳ್ಳಿಯ ಜನತೆಯ ಸಹಕಾರದೊಂದಿಗೆ ಸುಲಭವಾಗಿ ಮಾಡಬಹುದು. ಜಾನಪದ ಆಟಗಳ ಬಗ್ಗೆ ಪ್ರಶ್ನೋತ್ತರ ಸಂದರ್ಭದಲ್ಲಿ ಕೇಳಿ ಬಂದ “ಯಾರಪ್ಪಾs ಅಷ್ಟೆಲ್ಲಾ ಶ್ರಮವಹಿಸಿ ದೊಡ್ಡಾಟ ಆಡೋದು?” ಎನ್ನುವುದು ಇಲ್ಲದಾಗಬೇಕು. ಜಾನಪದ ಆಟವನ್ನು ಆಡುವ, ನೋಡುವ ಅಭಿರುಚಿಯಿದ್ದವರೂ “ತೊಂದರೆ ತೆಗೆದುಕೊಳ್ಳುವವರು ಯಾರು?” ಇದಕ್ಕೆ ಸಮಾಜಕಾರ್ಯಕರ್ತರು ಉತ್ತರಿಸಬೇಕು. ಸ್ವಲ್ಪ ತೊಂದರೆ ತೆಗೆದುಕೊಂಡು ಸಮುದಾಯದ ಸಾಂಸ್ಕೃತಿಕ ಮನರಂಜನೆಯ ವ್ಯವಸ್ಥೆಯನ್ನು ಜನತೆಯ ಸಹಕಾರದೊಂದಿಗೆ ಮಾಡಬೇಕು. ಕೇಸ ಪ್ರಸಂಗಗಳಲ್ಲಿ, “ಕೇವಲ ಮೂವತ್ತು ಪೈಸೆ ಕೊಟ್ಟು ಮೂರು ತಾಸು ಸಿನೇಮಾ ನೋಡಬಹುದು, ಅದರಲ್ಲಿ ಹಾಡು, ಡ್ಯಾನ್ಸುಗಳನ್ನು ಕಾಣಬಹುದು. ಇದು ಸಾಮಾನ್ಯರ ಅಭಿರುಚಿಯ ನಿದರ್ಶನವಾಗಿದೆ. ಇದರಿಂದ ಈ ಸ್ಥಿತಿಯಿಂದ ಜನತೆಯನ್ನು ಉದ್ಧರಿಸಬೇಕಾದುದು ಸಮಾಜ ಹಿತಚಿಂತಕರ, ಕಾರ್ಯಕರ್ತರ ಕಾರ್ಯವಾಗಿದೆ. ಜಾನಪದ ಆಟಗಳನ್ನು ವಾಣಿಜ್ಯ ಪ್ರದರ್ಶನಕ್ಕಾಗಿ ಪರಿವರ್ತಿಸುವುದರಲ್ಲಿ ಅರ್ಥವೇನೂ ಇಲ್ಲ.

ಜಾನಪದ ಕಲೆಯ ಅಂತರಾರ್ಥವನ್ನು ಸಮಾಜದ ಎಲ್ಲ ವರ್ಗದವರೂ ಅರಿತು, ಹರ್ಷಿಸುವಂತಾದಲ್ಲಿ, ಬದಲಾವಣೆಯನ್ನು ನಾವು ಕಾಣಬಹುದು. ಆದರೆ ಈ ದಿಶೆಯಲ್ಲಿ ಪ್ರಾರಂಭಿಸಬೇಕಾದ ಯತ್ನವು ಇನ್ನೂ ರೂಪಗೊಂಡು ಮೂರ್ತಿ ಸ್ವರೂಪವನ್ನೇ ಪಡೆದಿಲ್ಲ. ಕರ್ನಾಟಕದ ವಿಶಿಷ್ಟ ರೀತಿಯ ಜಾನಪದ ಆಟಗಳ ಕಲೆಯಳ ಉಳಿವಿಗಾಗಿ ಸ್ಪಷ್ಟವಾದ ಮತ್ತು ನಿಖರವಾದ ಮಾರ್ಗದಲ್ಲಿ ಪ್ರಯತ್ನವು ಈಗಿನಿಂದಲೇ ಪ್ರಾರಂಭವಾಗುವುದು ಅವಶ್ಯವಿದೆ. ಇಲ್ಲದಿದ್ದಲ್ಲಿ ನಾಳಿನ ಜನತೆ, ಕರ್ನಾಟಕದ ಕಲೆ, ಜಾನಪದ ಆಟಗಳಿಗಾಗಿ, ಚರಿತ್ರೆಯ ಪುಟಗಳನ್ನು ನೋಡಬೇಕಾದ ದುರ್ದೈವದ ದಿನಗಳನ್ನು ಕಾಣಬೇಕಾಗಬಹುದು.

* * *