ನನ್ನ ಎಲ್ಲ ಕೃತಿಗಳನ್ನು ಪ್ರಕಟಿಸುತ್ತಿರುವಂತೆ ಇದನ್ನೂ ಪ್ರಕಟಿಸುತ್ತಿರುವ ಅಕ್ಷರ ಪ್ರಕಾಶನದ ಆತ್ಮೀಯ ಕೆ.ವಿ. ಸುಬ್ಬಣ್ಣನಿಗೆ, ಅಚ್ಚಿನ ಕೆಲಸವನ್ನು ವಹಿಸಿಕೊಂಡ ಶ್ರೀ ಮಹಿಮಯ್ಯರಿಗೆ, ಇಡೀ ಪುಸ್ತಕದ ದೋಷಮುಕ್ತವಾಗಿ ಅಚ್ಚಾಗುವಂತೆ ತಮ್ಮ ಅಮೂಲ್ಯ ಕಾಲವನ್ನು ಕೇವಲ ನನ್ನ ಮೇಲಿನ ಪ್ರೀತಿಯಿಂದ ಕೊಟ್ಟ ಗೆಳೆಯ ಕಿ.ರಂ.ಗೆ.; ಈ ದಿನಗಳಲ್ಲಿ ನನ್ನ ಹಲವಾರು ಜವಾಬ್ದಾರಿಗಳನ್ನು ಹಗುರಾಗಿ ನಿರ್ವಹಿಸುವಂತೆ ನನಗೆ ಸಹಾಯ ಮಾಡುತ್ತಿರುವ ಗೆಳೆಯ ಅಗ್ರಹಾರ ಕೃಷ್ಣಮೂರ್ತಿಗೆ; ತಪ್ಪಿಲ್ಲದಂತೆ ಈ ಕೃತಿ ಮುದ್ರಣವಾಗಲು ಸಹಾಯ ಮಾಡಿದ ಶ್ರೀಮತಿ ಮೀನಲೋಚನಿಯವರಿಗೆ; ಮುಖಚಿತ್ರ ಮಾಡಿಕೊಟ್ಟ ಧೀಮಂತ ಜೀವವಿಜ್ಞಾನಿ ಮತ್ತು ಕಲಾವಿದ ಡಾ.ಹರೀಶ್ ಗಾಂವ್‍ಕರ‍್ಗೆ; ನನ್ನ ಮನಸ್ಸನ್ನು ಚುರುಕಾಗಿ ಇಟ್ಟಿರುವ ಯುವ ಚಿಂತಕ ಡಾ.ಡಿ.ಆರ್. ನಾಗರಾಜ್‍ಗೆ; ಈ ಕೃತಿಯಲ್ಲಿ ಕಾಣುವ ಶೋಧನೆಗೆ ಸುಮಾರು ಎರದು ದಶಕಗಳಿಂದ ನನ್ನನ್ನು ಪ್ರೇರೇಪಿಸುತ್ತಲೇ ಇರುವ ಅಮೆರಿಕನ್ ಕವಿ ಶ್ರೀಮತಿ ಜೂಡಿತ್ ಕ್ರೋಲ್‍ಗೆ; ಕುಕ್ಕೆ ಸುಬ್ರಹ್ಮಣ್ಯಕ್ಕೆ ಕೆಲವು ತಿಂಗಳುಗಳ ಹಿಂದೆ ಹೋದಾಗ ಅಕಸ್ಮಾತ್ತಾಗಿ ನನಗೊಂದು ಭೇಟಿಯ ಅಪೂರ್ವ ಅನುಭವವನ್ನು ಉಂಟುಮಾಡಿದ ಗೆಳೆಯ ಲಕ್ಷ್ಮೀಶ ತೊಳ್ಪಾಡಿಗೆ; ಈ ಕೃತಿಯ ಪ್ರಕಟಣೆಯ ಸಂದರ್ಭದಲ್ಲಿ ಅಚ್ಚಿನ ಮತ್ತು ಮುಖಪುಟದ ಉಸ್ತುವಾರಿಯಲ್ಲಿ ಸಹಕರಿಸಿದ ಶ್ರೀಮತಿ ಪ್ರತಿಭಾ ನಂದಕುಮಾರ್ಗೆ; ಡಾ.ಮುರಾರಿ ಬಲ್ಲಾಳ ಅವರಿಗೆ; ಹನ್ನೆರಡು ದಿನಗಳ ಕಾಲ ಕಟ್ಮಂಡುವಿನಲ್ಲಿ ಈ ಕೃತಿಯನ್ನು ರಚಿಸಲು ನನಗೆ ನಾನು ಸಂಪೂರ್ಣ ಒದಗಿ ಬಿಡುವಂತೆ ಅವಕಾಶ ಮಾಡಿಕೊಟ್ಟ ಬಿ.ಪಿ.ಕೊಯಿರಾಲ ಫೌಂಡೇಶನ್ನಿಗೆ; ಮಾತಿಗೆ ಸಿಲುಕದ ಕಾರಣಗಳಿಗಾಗಿ ಎಸ್ತರ್ಗೆ ಕೃತಜ್ಞತೆಗಳು.

ಯು.ಆರ್. ಅನಂತಮೂರ್ತಿ
ಕಟ್ಮಂಡು
ಆಗಸ್ಟ್ ೧೯೯೪