ಮಡದಿ ಮಕ್ಕಳ ಭಾಗ್ಯ ಉಂಟೆಂದು
ಮನದೊಳು ಹಿಗ್ಗಿ ನೀ ಕೆಡಬೇಡ ಕತ್ತೇ
ಬಿಡದೇ ಹಿಡಿದು ನಿನ್ನ ಯಮದವರು ಎಳೆವಾಗ
ಬಿಡಿಸಿ ಕೊಂಬುವರೇನೇ ಕತ್ತೆ || ಕತ್ತೆಯು
ನೀನಲ್ಲಾ ಕರುಣಸಾಗರನಯ್ಯ
ಕತ್ತೆಯಾಗಲು ಬೇಡ ಕತ್ತೆ || ಮಡದಿ ||

ದಾನ ಧರ್ಮದಿ ನೀನು ಪರಪಿತಾರ್ಥವ ಮಾಡಿ
ಪದವಿಯ ಪಡೆದು ಬಾಳೋ ಕತ್ತೆ
ಈ ಊರುಗಾ ಮೃಗ ಪಕ್ಷಿ ಕ್ರಿಮಿಕೀಟದೊಳು
ಜನಿಸಿ ದುಃಖಿಸಬೇಡ ಕತ್ತೆ || ಮಡದಿ ||

ಹಲವಾರ ನೊಡನಾಡಿ ಅರಿವಿಲ್ಲವನೆಂದು
ಅಗಲಿ ನೀ ಕೆಡಬೇಡ ಕತ್ತೆ
ವೇದ ಶಾಸ್ತ್ರಗಳೆಂಬ ಗಾದೆಗೆ ಒಳಗಾಗಿ
ಬಾಧೆ ನೀ ಪಡಬೇಡ ಕತ್ತೆ || ಮಡಿದ ||

ಕೊಳಕುಕುಹಕರ ಸಂಘದಿ ಕೆಡದೆ ನೀನು
ಗುರುಹಿರಿಯರ ನೆನೆದು ಬಾಳೋ ಕತ್ತೇ
ಪುನಃ ಜನ್ಮವೆತ್ತಿ ನಿಜಮಾನಷ ರತ್ನವಾಗಿ
ಭಕ್ತಿ ಮುಕ್ತಿಯ ಕಾಣೋ ಕತ್ತೆ || ಮಡದಿ ||

ಮಲ್ಲ ಸದ್ಗುರು ನಿನಗೆ ಮರಳಿ ಹುಟ್ಟಿದಹಾಗೆ
ಮದ್ದು ಕೊಟ್ಟಿದ್ದಾನೆ ಕತ್ತೆ || ನಾದದಿಂದಲೇ ಪ್ರಾಣವ
ಬೋಧದೊಳಗೆ ಮುಕ್ತಿ ದ್ವಾರವ ಸಾಧಿಸೊ ಕತ್ತೇ || ಮಡದಿ ||