ಭಾಷೆಯೊಂದು ಸಂಕೇತಗಳ ವ್ಯವಸ್ಥೆ. ಆದರೆ ಸಂಕೇತಗಳು ಭಾಷೆಯನ್ನು ಹೊರತು ಪಡಿಸಿಯೂ ಹಲವು ಕಡೆ ಸಂವಹನಕ್ಕಾಗಿ ಬಳಕೆಯಾಗುತ್ತವೆ. ಇಂಥ ಪ್ರಸಂಗಗಳಲ್ಲಿ ಸಂಕೇತಗಳ ಬಳಕೆಗೆ ಸಂದರ್ಭನಿಷ್ಠವಾದ ನಿಯಮಗಳಿರುತ್ತವೆ. ಇವು ಕೆಲವು ತಮಗೆ ತಾವೇ ಸ್ವಯಂಪೂರ್ಣ ವ್ಯವಸ್ಥೆ ಗಳಾಗಿರುತ್ತವೆ; ಕೆಲವು ಆಡುಭಾಷೆಗೆ, ಲಿಖಿತ ಭಾಷೆಗೆ ಪೂರಕವಾಗಿರುತ್ತವೆ. ಮತ್ತೆ ಕೆಲವು ಭಾಷೆಗೆ ಪರ‍್ಯಾಯವಾಗಿರುತ್ತವೆ. ಎಲ್ಲ ನೆಲೆಗಳನ್ನು ವಿವರಿಸುವ ಲೇಖನಗಳು ಭಾಗದಲ್ಲಿದೆ.