ಜನರ ಸಾಮಾನ್ಯ ತಿಳುವಳಿಕೆಯಂತೆ ವ್ಯಕ್ತಿಯ ವ್ಯಕ್ತಿತ್ವವನ್ನು ಹೇಗೋ ನಮಗೆ ತೋರಿಸುತ್ತದೆ. ಅಂದರೆ ವ್ಯಕ್ತಿಯ ಭಾಷೆಯನ್ನು ನೋಡಿ ನಾವು ಆ ವ್ಯಕ್ತಿಯ ಕುರಿತು ಕೆಲವು ನಿರ್ಣಯಗಳನ್ನು ಮಾಡುತ್ತೇವೆ. ಭಾಷೆ, ಹೀಗಾಗಿ ಒಂದು ಕನ್ನಡಿ.

ಈ ಕನ್ನಡಿಯಲ್ಲಿ ಏನೆಲ್ಲವನ್ನು ಕಾಣಲು ಸಾಧ್ಯ. ವ್ಯಕ್ತಿಗೇ ಹಲವಾರು ಚಹರೆಗಳಿವೆ. ದೈಹಿಕ ವಿವರಗಳು, ಮನಸ್ಸಿನ ವಿವಿಧ ಅವಸ್ಥೆಗಳು, ವ್ಯಕ್ತಿಯು ವಾಸಿಸುವ ಪ್ರದೇಶ, ವ್ಯಕ್ತಿಗೆ ದತ್ತವಾಗಿರುವ ಒಂದು ರಾಷ್ಟ್ರ, ಆ ವ್ಯಕ್ತಿ ಜೀವಿಸುತ್ತಿರುವ ಸಮಾಜ, ವ್ಯಕ್ತಿ ಮಾತಾಡುತ್ತಿರುವ ಸಂದರ್ಭ ಹೀಗೆ ಹಲವು ಚಹರೆಗಳಿಂದ ಗುರುತಿಸುತ್ತೇವೆ. ಎತ್ತರ, ತೂಕ, ಬಣ್ಣ ಇವೆಲ್ಲ ದೈಹಿಕ ವಿವರಗಳು. ಕೋಪ, ತಾಳ್ಮೆ, ಅವಸರ ಪ್ರವೃತ್ತಿ ಇವೆಲ್ಲ ಮನಸ್ಸಿನ ಅವಸ್ಥೆಗಳು. ಕನ್ನಡದವರಾದರೆ ಮಂಗಳೂರು, ಬಳ್ಳಾರಿ, ಬೀದರ್ ಇವೆಲ್ಲ ಪ್ರದೇಶಗಳು ಬೇರೆ ಬೇರೆಯಾಗಿವೆ. ಅವನ್ನು ಆಡುವ ಜನರನ್ನು ಆಯಾ ಪ್ರದೇಶದೊಡನೆ ಗುರುತಿಸುತ್ತೇವೆ.

ಈ ಎಲ್ಲ ಅಂಶಗಳನ್ನು ಚರ್ಚಿಸುವ ಲೇಖನಗಳು ಈ ಭಾಗದಲ್ಲಿವೆ.