ನಾವೆಲ್ಲರೂ ಭಾಷೆಯನ್ನು ಕಲಿತವರು. ಮಕ್ಕಳು ಭಾಷೆಯ ಸಾಮರ್ಥ್ಯ ಪಡೆಯುತ್ತಾರೆ. ಇದೊಂದು ವೈಯಕ್ತಿಕ ನೆಲೆಯ ಸಂಗತಿಯಾಗಿರುವಂತೆ ಅತ್ಯಂತ ಸಾಮಾಜಿಕವಾದ ಘಟನೆಯೂ ಹೌದು. ಮಗು ಭಾಷೆಯ ಸಾಮರ್ಥ್ಯ ಪಡೆಯುವುದು ಅತ್ಯಂತ ಸಹಜವಾಗಿ ಸಂಭವಿಸಿದಂತೆ ತೋರಿದರೂ ಅದೊಂದು ಸಂಕೀರ್ಣವಾದ ವಿಕಸನಶೀಲ ಕ್ರಿಯೆ.

ಮಗು ಭಾಷೆಯನ್ನು ಕಲಿಯುವ ಬಗೆ, ವಿವಿಧ ಹಂತಗಳು, ಬೇರೆ ಬೇರೆ ಕೌಶಲಗಳನ್ನು ಪಡೆದುಕೊಳ್ಳುವ ಕ್ರಮ. ತಿದ್ದುವ, ತಿದ್ದಿಕೊಳ್ಳುವ ರೀತಿ ಇತ್ಯಾದಿಗಳನ್ನು ವಿವರಿಸುವ ಲೇಖನಗಳು ವಿಭಾಗದಲ್ಲಿವೆ.