ಬರೆಯುವುದು ಮತ್ತು ಓದುವುದು ಭಾಷೆಯ ಬಳಕೆಯ ಎರಡು ಕೌಶಲಗಳು. ಜಗತ್ತಿನ ಬಹುಪಾಲು ಭಾಷೆಗಳಿಗೆ ಲಿಪಿಯಿಲ್ಲ. ಬರವಣಿಗೆಯಿಲ್ಲ. ಹಾಗಾಗಿ ಕೌಶಲಗಳನ್ನುಳ್ಳ ಭಾಷಿಕ ಸಮುದಾಯಗಳ ಸಂಖ್ಯೆ ಕಡಿಮೆ. ಅಲ್ಲದೆ ಲಿಪಿಯುಳ್ಳ ಭಾಷೆಗಳಲ್ಲೂ ಭಾಷಾ ಸಮುದಾಯದ ಎಲ್ಲ ಸದಸ್ಯರೂ ಕೌಶಲಗಳನ್ನು ಹೊಂದಿರಲೇಬೇಕಾಗಿಲ್ಲ. ಹೀಗಿದ್ದರೂ ನಾಗರಿಕತೆಯ ಬೆಳವಣಿಗೆಯಲ್ಲಿ ಬರವಣಿಗೆ ಮತ್ತು ಓದುವಿಕೆಗಳು ಮಹತ್ವದ ಪಾತ್ರವನ್ನು ವಹಿಸಿವೆ.

ಬರೆವಣಿಗೆಯಲ್ಲಿ ವಿವಿಧ ಮಾದರಿಗಳಿವೆ. ಅದಕ್ಕೆ ಬಗೆಬಗೆಯ ಉದ್ದೇಶಗಳಿವೆ. ದೇಶಕಾಲಗಳು ಬದಲಾದಂತೆ ಬರವಣಿಗೆಯಲ್ಲಿ ಪರಿವರ್ತನೆಗಳಾಗಿವೆ. ಯಂತ್ರಗಳ ಆವಿಷ್ಕಾರದಿಂದ ಹಲವು ಮೂಲಭೂತ ಪರಿಕಲ್ಪನೆಗಳು ಪಲ್ಲಟಗೊಂಡಿವೆ. ಹಾಗೆಯೇ ಓದುವಿಕೆಯ ವ್ಯಾಖ್ಯೆಯೂ ಬದಲಾಗುತ್ತಿದೆ. ಕಣ್ಣು ಮಾತ್ರ ಬಳಕೆಯಾಗುತ್ತಿದ್ದ ಕಡೆ, ಕಣ್ಣು ಕಿವಿಗಳೆರಡೂ ಬಳಕೆಯಾಗುತ್ತಿವೆ. ಸ್ಪರ್ಶವೂ ಓದುವಿಕೆಗೆ ಮಾಧ್ಯಮವಾಗಿದೆ.

ಕೌಶಲಗಳ ಸ್ವರೂಪ, ಲಕ್ಷಣ, ಸಾಮಗ್ರಿ, ವಿಕಾಸ ಇತ್ಯಾದಿಗಳನ್ನು ವಿವರಿಸುವ ಲೇಖನಗಳು ಭಾಗದಲ್ಲಿವೆ.