ಮಾನವಸಂಬಂಧಿ ಜನರಂಜನಾ ಕುಣಿತಗಳು :

ಭೂತ ಮತ್ತು ವರ್ತಮಾನವನ್ನು ಒಟ್ಟೊಟ್ಟಿಗೆ ಬದುಕುವ, ಭೂತವನ್ನು ವರ್ತಮಾನದಿಂದ ಪರೀಕ್ಷಿಸುವ, ವರ್ತಮಾನವನ್ನು ಭೂತದ ನೆರಳಿನಲ್ಲಿ ಸಾಧ್ಯಮಾಡಿಕೊಳ್ಳುವ ಬದುಕಿನ ಪ್ರಕ್ರಿಯೆ ಮಾನವಸಂಬಂಧಿ ಜನರಂಜನಾ ಕುಣಿತಗಳಲ್ಲಿ ಕಂಡುಬರುತ್ತದೆ. ಭವಿಷ್ಯವನ್ನು ಜಾನಪದದ ಮೂಲಕ ನೋಡುವ ಮನೋಧರ್ಮವನ್ನು ನಮ್ಮ ಬಹುತೇಕ ಜಾನಪದರು ಇಟ್ಟುಕೊಂಡಿಲ್ಲ. ಜಾನಪದ ಭವಿಷ್ಯಕ್ಕೆ ಇರುವುದಿಲ್ಲ, ಬತ್ತಿ ಹೋಗುತ್ತದೆ. ನಶಿಸಿ ಹೋಗುತ್ತದೆ ಇಲ್ಲವೆ ಅದು ಇದ್ದರೆ ಅದು ಜಾನಪದ ಆಗಿರದೆ ಬೇರೇನೋ ಆಗಿರುತ್ತದೆ ಎನ್ನುವ ಧೋರಣೆಯೆ ಇದಕ್ಕೆ ಕಾರಣ. ಜಾನಪದ ಭವಿಷ್ಯಕ್ಕೆ ಇರುವುದಿಲ್ಲ ಎನ್ನುವುದಾದರೆ ಜನಪದಗಳೂ ಇರುವುದಿಲ್ಲ. ಜನಪದಗಳು ಇರುವುದಿಲ್ಲ ಎನ್ನುವುದಾದರೆ ಸಮಾಜ ಮತ್ತು ಸಮೂಹಗಳು ಇರುವುದಿಲ್ಲ. ಈ ದೃಷ್ಟಿಯಲ್ಲಿ ನಮ್ಮ ಜಾನಪದರು ಮೂರನೆ ಮಹಾಯುದ್ಧವನ್ನು ನಿರೀಕ್ಷಿಯೆ ಇದ್ದಾರೇನೊ ಎನಿಸುತ್ತದೆ.

ವಾಸ್ತವದಲ್ಲಿ ಪ್ರತಿ ಜಾನಪದ ಅಂಶ ಹುಟ್ಟುವುದೇ ಜನಪದವನ್ನು ಭವಿಷ್ಯಕ್ಕೆ ಉಳಿಸಲೆಂದು, ತಾನು ಯಾವರೀತಿ ಭವಿಷ್ಯಕ್ಕೆ ವಸ್ತುವಾಗಬಲ್ಲೆ ಎಂಬುದನ್ನು ಜಾನಪದ ಜೀವಸತ್ವ ಸದಾ ತನ್ನೊಳಗೆ ಸಾಪೇಕ್ಷವಾದ ರೀತಿಯಲ್ಲಿ ತುಡಿಯುತ್ತಲೇ ಇರುತ್ತದೆ. ನಮ್ಮ ಜನರಂಜನಾ ನೃತ್ಯಗಳಲ್ಲಿ ಅದನ್ನು ಕಾಣುತ್ತೇವೆ. ಮಾನವ ಸಂಬಂಧಿ ಜನರಂಜನಾ ಕುಣಿತಗಳಲ್ಲಿ, ನಮ್ಮ ಸಾಂಸ್ಕೃತಿಕ ಬದುಕಿನಲ್ಲಿ ಘಟಿಸಿದ ಹತಾಶ, ಪದಚ್ಯುತಿ, ಪ್ರಶಂಶೆ, ಅವಮಾನ, ಹಿಂಸೆ ಮತ್ತು ಕೀರ್ತಿಗಳೆಂಬ ಸಿದ್ದ ಜೀವನಾನುಭವಗಳಿವೆ. ಅವು ಭವಿಷ್ಯದ ಜನಪದಗಳ ವಾಸ್ತವತೆಯನ್ನು ಪ್ರತ್ಯಕ್ಷವಾಗಿಯೋ ಪರೋಕ್ಷವಾಗಿಯೋ ಅರ್ಥೈಸುತ್ತವೆ. ನಮ್ಮ ಪರಿಭಾವನೆಗೆ ಅಂಥ ಕುಣಿತಗಳಾದ ಆಂಜಯ್ಯನ ಕುಣಿತ, ಗಾರುಡಿ ಕುಣಿತ, ಪಾಳ್ಳೇಗಾರನಕುಣಿತ ಮತ್ತು ಕೋಲಾಟದ ಕುಣಿತಗಳನ್ನು ಒಳಪಡಿಸಬಹುದು.

ಕುಣಿತ :

ಹೆಸರು ಆಂಜಯ್ಯನ ಕುಣಿತ
ವಸ್ತು “ವಿಕಾಸ ಸಮರ್ಪಣೆ”
ವೇಷ ಕಪಿಮನುಷ್ಯತ್ವ (zoomosplic)
ಕುಣಿತ “ವಿಕಾಸದ ಆನಂದ”
ನಡವಳಿಕೆ “ಪ್ರಾಣಿ ಮಾನವನಾಗುವ ಗಾಂಭೀರ್ಯ”
ಮುನ್ನಡೆ “ವಿಕಾಸದ ಪ್ರಶ್ನೆ ಏನು?”

ಆಂಜಯ್ಯ ಆಂಜನೇಯ, ಹನುಮಂತ, ಹನುಮ ಮೂಲದಲ್ಲಿ ಕಪಿ. ಈ ಕಪಿ ಮನುಷ್ಯನಾಗುವ ® ಸಾಂಸ್ಕೃತಿಕ ಜೀವಿಯಾಗುವ ® ಭಕ್ತನಾಗುವ ® ವಿಕಾಸದ ಮುನ್ನಡೆಯನ್ನು ಆರಾಧಿಸುವ “ಶ್ರೀ” ಆದ “ಆರ್ಡಿನರಿ ರಾಮನ” (ಅಥವಾ ಬರಿ ಹೆಸರಿನ) ಸೇವಕ, ಬಂಟ ಇದೇ ಅವನ ಅಭಿನಯ. ಹನುಮ ಮಹಾಜ್ಞಾನಿ ಎನಿಸಿಕೊಳ್ಳುವುದರ ಮೂಲಕ ಹನುಮಂತ ಎನಿಸಿಕೊಂಡ. ಆ ಸೇವೆಯನ್ನು ಅತ್ಯಂತ ನಿಷ್ಠೆ (ಗುಲಾಮತನದ?) ಯಿಂದ ಮಾಡಿದನಾದ್ದರಿಂದ ಲೋಕವಿಖ್ಯಾತನಾದ ; ಧನ್ಯವಾದ.

ಹನುಮಂತ ಹಾರುತ್ತಾನೆ ಮತ್ತು ನಡೆಯುತ್ತಾನೆ. ಹಲ್ಲುಕಿರಿಯುತ್ತಾನೆ ಮತ್ತು ಅದಕ್ಕೆ ತದ್ವಿರುದ್ಧವಾಗಿ ಕಾಲುಕೂಡಿಸಿ ಕೈ ಜೋಡಿಸಿ ಅನನ್ಯ ಭಕ್ತಿಯಿಂದ ಗಂಭೀರವಾಗಿ ನಿಂತುಕೊಳ್ಳುತ್ತಾನೆ. ಆತ ಹಾರುವುದು ಅತಿವಿಶೇಷ, ನಡೆಯುವುದು ಸಾಮಾನ್ಯ ; ಇದು ಇವತ್ತಿನ ನಮಗೆ ಆಗುತ್ತಿರುವ ಅನುಭವ. ಮೈಗೆ ಅಂಗಿ ಇಲ್ಲ. ಚಡ್ಡಿ ಮಾತ್ರ ಇದೆ ; ಮೈಗೆ ರಾಜವೈಭವದ ಕವಚ-ಕುಂಡಲಗಳು ಇಲ್ಲ, ತಲೆಗೆ ಕಿರೀಟ ಇದೆ ; ಇದೂ ಒಂದು ವಿಶೇಷ – ಪ್ರಾಣಿಗೆ ಮಾನ-ಅವಮಾನದ ಪ್ರಶ್ನೆ ಬಂತಲ್ಲ ಅಂತ. ಇನ್ನೂ ದೊಡ್ಡ ವಿಶೇಷವೆಂದರೆ ಚಡ್ಡಿಯ ಮೇಲೆ, ಬೆನ್ನಿನ ಹಿಂದೆ ಇರುವ, ಮನುಷ್ಯನಲ್ಲಿ ಇಲ್ಲದಿರುವ ಬಾಲ. ಅರ್ಥಾತ್ ಮನುಷ್ಯನನ್ನೂ ಪ್ರಾಣಿಯನ್ನೂ ಒಟ್ಟಿಗೆ ದರ್ಶಿಸುವ ವಿಕಾಸದ ಮಹೋನ್ನತ ಸ್ಥಿತಿ : ಬಾಲ ಉದುರದ ಮನುಷ್ಯ, ರೋಮ ಸವೆಯುವ ಮನುಷ್ಯ. ಇಡೀ ಸುಗ್ರೀವ ರಾಜ್ಯವೆ ಅಯೋಧ್ಯೆ ಮತ್ತು ಲಂಕೆಯ ಮಧ್ಯೆ ಗೌಪ್ಯವಾಗಿ ವಿಕಾಸವಾಗುತ್ತಿರುವ ಮನುಕುಲದ ಒಂದು ಆಶ್ಚರ್ಯದ ಸ್ಥಿತಿ ; “ಶ್ರೀ ರಾಮ”ನಿಗೆ ದೊರೆತ ಒಂದು ಮಹಾ ಸುಯೋಗ ಮತ್ತು ದರ್ಶನ. ಅದೇ ರೀತಿ, ವಿಕಾಸದ ಸೌಜನ್ಯಸ್ಥಿತಿಯನ್ನು ತಲುಪಿದ ರಾಮನ “ಶ್ರೀ ದರ್ಶನ” ಸುಗ್ರೀವ ರಾಜ್ಯದವರಿಗೆ. ಇಂಥ ಭಾರತದ ಜನಾಂಗಗಳ ಮಧ್ಯೆ ನಡೆದ ಸಂಸ್ಕೃತೀಕರಣಕ್ಕೆ ಸಂಬಂಧ ಪಡೆದ ಮಾನವ ಶಾಸ್ತ್ರೀಯ ವಿಕಾಸದ ಪ್ರಾಕೃತಿಕ ಸುಯೋಗ – ಮನುಷ್ಯನಾಗುವ ಪ್ರಾಣಿಗೆ ದೊರಕಿದ್ದು. ಇಂಥ ಒಂದು ಕುತೂಹಲ ಆಶ್ಚರ್ಯಗಳ-ದರ್ಶನಗಳ ಸಂಕೇತ ಆಂಜಯ್ಯ/ಆಂಜನೇಯನ ಕುಣಿತ.

ಕಪಿಗಳು ಮಾನವರಾದಾಗ, ಮಾನವರಾದ ಕಪಿಗಳು ಮಾಡಿದ ಜನರಂಜನೆಯ ಮನೋವಿಕಸದ ಕುಣಿತ. ಈ ಕುಣಿತ-ಜಿಗಿತ-ಅನ್ನಮಯದಿಂದ ಮನೋಮಯದ ಕಡೆಗೆ ನಡೆದ ಮುನ್ನಡೆ. ಆದ ಕಾರಣವೆ ಆಂಜಯ್ಯನ ಕುಣಿತ ರಂಜನೆಯೂ ಹೌದು; ನಮ್ಮ ಬದುಕಿನ ವಾಸ್ತವ ಮುನ್ನಡೆಯ ತಾಳಗತಿ ಕೂಡ ಹೌದು.

ಕುಣಿತ :

ಹೆಸರು ಗಾರುಡಿಗನ ಕುಣಿತ
ವಸ್ತು “ಯಾಂತ್ರಿಕತೆಯ ಅಸ್ತತ್ವ”
ವೇಷ ಮಂತ್ರವಾದಿ
ಕುಣಿತ ಸೃಷ್ಟಿ-ಲಯ
ನಡವಳಿಕೆ ಗತ್ತು-ಗಾಂಭೀರ್ಯ
ಮುನ್ನಡೆ ಧಾರ್ಮಿಕ ಅಸ್ತಿತ್ವವಾದ

ಶಕ್ತಿಗಳ ಬಳಕೆಯ ಆಚರಣೆಯ ಮಾರ್ಗ ಮಂತ್ರವಾದಿತ್ವದ ಸಾಧನೆಯ ಮೂಲ. ಉತ್ಪತ್ತಿ – ಹಂಚಿಕೆ

[1] ಮತ್ತು ಬಳಕೆಗಳನ್ನು ನಿಯಂತ್ರಿಸುವ ಮತ್ತು ನಿರ್ವಹಿಸುವ ಜೀವನಧರ್ಮದ ನಡವಳಿಕೆಯ ಮಂತ್ರವಾದಿ ಮತ್ತು ಅವನ ಪ್ರದರ್ಶನದ ಪರಿಣಾಮ. ಈ ಸಾಮಾನ್ಯ ಮತ್ತು ಸಹ್ಯ ಧರ್ಮದ ಮುಂದುವರಿಕೆಯೆ ನಮ್ಮ ಮಧ್ಯ ಉಳಿದುಬಂದಿರುವ ಗಾರುಡಿಗನ ಕುಣಿತ. ಗಾರುಡಿಗನ ದೇಹ, ತಲೆ, ತೋಳು ಅಷ್ಟೇಕೆ ಗಾತ್ರವಾಗಿವೆ ಮತ್ತು ಅಷ್ಟೇಕೆ ದವಲತ್ತಿನಿಂದ ಆ ವೇಷ ಕುಣಿಯುತ್ತದೆ ಎಂಬುದಕ್ಕೆ ಉತ್ತರ ಬಯಲಾಟಗಳಲ್ಲಿ ಅಷ್ಟೇಕೆ ಭಯಂಕರ ಕುಣಿತ, ವಿಜೃಂಭಿಸುವ ಮತ್ತು ಆರ್ಭಟಗಳಿವೆ ಎಂಬ ಪ್ರಶ್ನೆಯ ಉತ್ತರದಲ್ಲಿ ಇದೆ. ಯಾಕೆಂದರೆ, ಪುಂಗಿ ಊದುವ ಆತ ಹಾವಾಡಿಗನಲ್ಲ, ಲಂಗ ಸುತ್ತಿಕೊಂಡದ್ದರಿಂದ ಹೆಂಗಸಲ್ಲ, ಜಡೆ ಹಾಕಿಕೊಂಡದ್ದರಿಂದ ಹುಡುಗಿ ಖಂಡಿತ ಅಲ್ಲ ; ಆತ ನಮ್ಮ ಮೊದಲ ಮೂಲದ ಧರ್ಮಾಧಿಕಾರಿ.

ಕುಣಿತ :

ಹೆಸರು ಪಾಳ್ಳೇಗಾರನ ಕುಣಿತ
ವಸ್ತು “ಸಾಮಂತಶಾಹಿಯ ಪತನ”
ವೇಷ ಅಧಿಕಾರ ಕಳಕೊಂಡ ಸಾಮಂತ
ಕುಣಿತ ಅಹಂಕಾರ, ಹತಾಶೆ, ಸಿಟ್ಟು ಮತ್ತು ಹಳಹಳಿಕೆ.
ನಡವಳಿಕೆ ಕ್ರೂರ ಗಂಭೀರ
ಮುನ್ನಡೆ “ಜನಪದಗಳ ಸ್ಥಿತ್ಯಂತರ ವಾಸ್ತವತೆ”

ಪಾಳ್ಳೇಗಾರ ಮತ್ತು ಪೋಟಿ[2] ಒಂದೇ ಮೂಲವಸ್ತುವಿನಿಂದ ರೂಪ ಪಡೆದ ಬೇರೆ ಬೇರೆ ಸಂದರ್ಭದ ಪರಿಣಾಮಗಳು. ಪೋಟಿ ಹೋರಾಟಗಾರ. ಅವನ ಹೋರಾಟದ ಉದ್ದೇಶ ಸ್ಪಷ್ಟವಾಗಿಲ್ಲ. ಪಾಳ್ಳೇಗಾರ ಅಧಿಕಾರ, ಅಂತಸ್ತು ಮತ್ತು ಅದರ ಜೊತೆಗಿನ ಭ್ರಮಾತ್ಮಕ ಅಹಂಕಾರಗಳನ್ನು ಕಳೆದುಕೊಂಡ ಹತಾಶ ಪಾತ್ರ. ಯಾವುದೆ ಜನಪದ ವಾಸ್ತವತೆಯನ್ನು ತಿರಸ್ಕರಿಸಿ ಮೆರೆಯಲು ವಿಜೃಂಭಿಸಿದರೆ ಅದಕ್ಕೆ ಒದಗುವ ಗತಿ-ಸ್ಥಿತಿ ಏನು ಎಂಬುದನ್ನು ಸಂಬೋಧಿಸುವ ಜನಪದ ಪರಂಪರೆಯ ದಿಕ್ಸೂಚಿ ಇಲ್ಲಿದೆ. ವಾಸ್ತವತೆ ಪ್ರಜಾಪ್ರಭುತ್ವವಾಗಿ, ಪಾಳ್ಳೇಗಾರಿಕೆ ಸಾಮಂತ ಪ್ರಭುತ್ವವಾಗಿ ; ಇವೆರಡರ ಮಧ್ಯೆ ಉಂಟಾಗುವ ವಾಸ್ತವಿಕ ಅಸಾಂಗತ್ಯದಿಂದಾಗಿ ಪಾತ್ರ, ಸನ್ನಿವೇಷ, ಕುಣಿತ ಮತ್ತು ಅಲಂಕರಣಗಳೆಲ್ಲ ತಿರಸ್ಕಾರ ಸ್ಥಾಯಿಯಿಂದ ಪುಟಿದೆದ್ದ ತಮಾಷೆ-ರಂಜನೆಗಳಾಗಿಬಿಡುತ್ತವೆ. ಬಂದೂಕು ಹಿಡಿದವರ ಮುಂದೆ ಕುಡುಗೋಲು ಅಥವಾ ದೊಣ್ಣೆ ಹಿಡಿದ ಪ್ರತಾಪಶಾಲಿಯ ಒದರಾಟದಂತೆ, ಪ್ರಜಾಪ್ರಭುತ್ವವನ್ನು ಸ್ವೀಕರಿಸಿರುವ ಜನಪದದ ಮುಂದೆ ಪಾಳ್ಳೇಗಾರನ ನೆಗೆತ-ಜಿಗಿತ, ಭೂಮಿ ನಡುಗುವಂತೆ ಕುಣಿತ, ಜನ ಹೆದರುವಂತೆ ಮಾಡುವ ಆರ್ಭಟ, ಅವನ ಆರ್ಭಟಗಳನ್ನು ಧ್ವನಿಗಳಲ್ಲಿ ಹೊರಡಿಸುವ ತಮಟೆಯ ಸದ್ದು ಭಯಕ್ಕಿಂತ ಮನಸ್ಸನ್ನು ಹಗುರ ಮಾಡಿಕೊಳ್ಳುವ ಸಂಗತಿಗಳಾಗುತ್ತವೆ.

ಪಾಳ್ಳೇಗಾರ ವೀರನಿರಬಹುದು, ಅವನ ಹೆಜ್ಜೆಗಳು ವೀರತ್ವದ ಪರಾಕು ಇರಬಹುದು, ಆದರೆ ಅವು ಸಾಂದರ್ಭಿಕವಾಗಿ ವ್ಯಯಗಳು. ಇಂಥ decreate ಆದ ಸಂಗತಿಗಳನ್ನೇ ನಾವು ಸಾಯುತ್ತಿರುವ ಜಾನಪದ ಎಂದು ಕರೆಯುತ್ತೇವೆ. ಆದರೆ ಇದೇ ವೀರತ್ವ ಅನ್ಯತ್ರ recreate ಆಗುವುದೂ ಉಂಟು. ಗುಜ್ಜಾರಿ ವೇಷದ ಕುಣಿತದಲ್ಲಿ ಇದನ್ನು ಸ್ಪಷ್ಟವಾಗಿ ಕಾಣುತ್ತೇವೆ. ಗುಜ್ಜಾರಿವೇಷ ಮೇಲುನೋಟಕ್ಕೆ ಮಂಡಿಯೂರಿ ಕುಣಿಯುವುದು, ಕೈಲಿ ಕತ್ತಿ ಹಿಡಿದು ಮಂಡಿಯ ಮೇಲೆ ಗರಗರನೆ ವೀರಾವೇಷದಿಂದ ತಿರುಗಿ ಆರ್ಭಟಿಸುವುದು ವೀರತ್ವದ ಪುನಶ್ಚೇತಕ್ಕೆ ಕಾರಣ ಆಗುತ್ತದೆ. ಕಾರಣ ಮಂಡಿಯಿಂದ ಕೆಳಗಿನ ಕಾಲುಗಳನ್ನು ಕಳೆದುಕೊಂಡ ಮತ್ತೊಬ್ಬ ವೀರ ಅಭಿಮನ್ಯುವನ್ನು ನಾವಿಲ್ಲಿ ಕಾಣುತ್ತೇವೆ. ಇಲ್ಲಿ ತಮಾಷೆ-ರಂಜನೆ ಆಕಸ್ಮಿಕವಾಗಿ ಅದರ ಮೂಲಾರ್ಥ ಸ್ಫುರಣೆಯೊಂದಿಗೆ ಮನಸ್ಸು ಕರಗುತ್ತದೆ. ನಮ್ಮ ಜಾನಪದ ಮತ್ತು ಜನಪದ ನೃತ್ಯಗಳ ಅರ್ಥ ಮತ್ತು ಉದ್ದೇಶಗಳನ್ನು ನಾವು ಅಭ್ಯಾಸ ಮಾಡದೆ ಅವುಗಳನ್ನು ವಿಡಿಯೊ ಅಥವಾ ಸಿನೆಮಾ ಬೆಳಕಿನಲ್ಲಿ ನೋಡುವಂತೆ ನೋಡುತ್ತಿರುವ ಕಾರಣ ನಮಗೆ ನಾವೇ ಇನ್ನೂ ಅರ್ಥವಾಗದೆ ಉಳಿದಿದ್ದೇವೆ.

ಮಾನವಸಂಬಂಧಿ ರಂಜನಾ ಕುಣಿತಗಳಲ್ಲಿ ವಸ್ತುಗಳನ್ನು ಆಧರಿಸಿದ ಕುಣಿತಗಳು ಪ್ರತ್ಯೇಕ ಅರ್ಹತೆಯನ್ನು ಪಡೆದಿವೆ. ಆಶಯಾತ್ಮಕವಾಗಿ ಒನಕೆಕುಣಿತ, ಕರಂಗೋಲು ಕುಣಿತ, ಕೋಲಾಟದಂಥ ಕುಣಿತಗಳು ವಸ್ತುಗಳ ಮೂಲಕ ಪುರುಷತ್ವ ಪ್ರದಾಯಕ ಕುಣಿತಗಳು. ಈ ಪುರುಷತ್ವದ ಕಲ್ಪನೆ ದಮನಕಾರಿತ್ವದ ಸಾಮಂತಶಾಹಿ ಸಂಸ್ಕೃತಿಯ ಮಾದರಿಯದಲ್ಲ ; ಪ್ರಕೃತಿ ಪುರಷ ಸಮಾಗಮ ಜನ್ಯಾತ್ಮಕ ಗಣಸಮಾಜದ ಜನಾಂಗ ಮುಂದುವರಿಕೆಯ ಕಲ್ಪನೆ.

ಕೊಡದಕುಣಿತ, ಪುಗಡಿಕುಣಿತಗಳು ಕೃಷ್ಣ-ರಾಧಾ ಉಪಾಸನೆಯಿಂದ ಲೌಕಿಕಕ್ಕೆ ಸಿಡಿದು ಬಂದ ಕಲೆಗಳಂತೆ ಕಾಣುತ್ತವೆ. ಇವು ಮತ್ತು ಗುಮಟೆ, ದುಡಿ ಕುಣಿತಗಳು ಸ್ತ್ರೀಫಲಪ್ರದಾಯಕ ಕುಣಿತಗಳು. ಸುಗ್ಗಿ, ನಾಮಕರಣ, ಮದುವೆಗಳಂಥ ಸನ್ನಿವೇಷದಲ್ಲಿ ಪ್ರಕಟಗೊಳ್ಳುವ ಮೂಲಕ ಇವು ತಮ್ಮ ಸೃಷ್ಟ್ಯಾತ್ಮಕ ಮೂಲ ಕಲ್ಪನೆಯನ್ನು ಶೃತಪಡಿಸುತ್ತವೆ. ಕೋಲಾಟ ಕುಣಿತದ ಅರ್ಥಾತ್ಮಕ ತಿಳುವಳಿಕೆಯಿಂದ ಈ ಎಲ್ಲ ಅಂಶಗಳನ್ನು ಸ್ಪಷ್ಟಪಡಿಸಬಹುದು.

ಕುಣಿತ :

ಹೆಸರು ಕೋಲಾಟ
ವಸ್ತು “ಫಲಪ್ರದಾಯಕತೆ”
ವೇಷ ಗಂಡು
ಕುಣಿತ ವೀರತ್ವದ ಪ್ರದರ್ಶನ
ನಡವಳಿಕೆ ಹೆಣ್ಣಿಗೆ ಆಹ್ವಾನ
ಮುನ್ನಡೆ ಹೆಣ್ಣು ಗಂಡುತನದ ಆಚರಣೆ

ಕೋಲಾಟ ಪ್ರಪಂಚದಾದ್ಯಂತ ಕಂಡುಬರುವ ನೃತ್ಯಕಲೆ. ಇದರ ಉದ್ದೇಶ ವೀರತ್ವದ ತಯಾರಿ. ಇದು ಪುರಾತನ ಗಣತಂತ್ರದ ಸಾಮೂಹಿಕ ಯುದ್ಧವಿಧಾನ. ಸಾಪೇಕ್ಷ ಸಮಾಜವೊಂದರ ಯುದ್ಧ ಮತ್ತು ಬದುಕಿನ ಸಾವಯವಸಂಬಂಧ ಇಲ್ಲಿ ಅಭಿವ್ಯಕ್ತಗೊಂಡಿವೆ. ದೊಣ್ಣೆ ವರಸೆ ಇದರ ಜನ್ಯಾತ್ಮಕ ಸಂಬಂಧಿ ಕಲೆ. ನಪುಂಸಕವಲ್ಲದ ಬಯಕೆಯಾಗಿ ವ್ಯಕ್ತವಾಗುವ ಇದರ ಸಾಂಕೇತಿಕತೆಯಿಂದಾಗಿ ಹೆಣ್ಣು ಮಕ್ಕಳು ಕೂಡ ಕೋಲಾಟದಲ್ಲಿ ಪಾಲುಪಡೆಯುತ್ತಾರೆ. ವೀರತ್ವ ಸತ್ವಯುತ ನಡವಳಿಕೆಯೆ ಹೊರತು ಗಂಡಿನ ವೀರ್ಯತ್ವಕ್ಕೆ ಸಂಬಂಧಿಸಿದುದಲ್ಲ ಎಂಬುದನ್ನು ಕೋಲಾಟ ಹೇಳುತ್ತದೆ. ಅಧಿಕಾರಶಾಹಿ, ಸಾಮ್ರಾಟಶಾಹಿ ಮತ್ತು ಸಾಮಂತಶಾಹಿ ವೀರತ್ವ ಬೇರೊಂದು ಪ್ರತಿಸ್ಪರ್ಧಿ ಸಮಾಜದ ವೀರತ್ವ ಮತ್ತು ಅದರ ವೀರ್ಯವನ್ನು ನಾಶಪಡಿಸುತ್ತದೆ ಪ್ರಕೃತಿ-ಪುರಷ ಸಮಾನತೆಯ ಕೋಲಾಟದ ಆಶಯದಲ್ಲಿ ಇರುವ ವೀರತ್ವ ಸಾಮೂಹಿಕ ಫಲವತ್ತತೆಯನ್ನು ಪ್ರಕೀರ್ತಿಸುತ್ತದೆ.

ವೀರತ್ವ ಈಗ ಒಂದು ವೃತ್ತಿಯಾಗಿರುವುದರಿಂದ ಕೋಲಾಟದ ಮೂಲಕ್ರಿಯೆ ಮೋಹಕ ಮನರಂಜನೆಯಾಗಿ ಮಾರ್ಪಟ್ಟಿದೆ. ಜನಪದನೃತ್ಯಗಳ ಸೃಷ್ಟಿ-ಪುನರ್ ಸೃಷ್ಟಿಯ ಪರಂಪರೆಯಲ್ಲಿ ಈ ರೀತಿ ಕಾರ್ಯಾಂತರವಾಗುವುದು ಸಹಜ. ಆದ ಕಾರಣವೆ ಕೋಲಾದಲ್ಲಿ ವೀರಗೀತೆಗಳೂ ಹೆಚ್ಚು ಪ್ರಣಯಗೀತೆಗಳಾಗಿ, ಕಾಮ-ಪ್ರೇಮ, ಶೋಕ, ವಿಡಂಬನೆ, ಭಕ್ತಿ, ಪ್ರಾರ್ಥನೆ ಮತ್ತು ಕುಟುಂಬಸಂಬಂಧಿ ಹಾಡುಗಳು ಸೇರಿವೆ.

ಎರವರಕುಣಿತ, ಬೇಡರ ಕುಣಿತಗಳು ಜನಾಂಗಹಿನ್ನೆಲೆಗೆ ಬದ್ಧವಾದ ಕುಣಿತಗಳು. ಸಂಗ್ರಾಮಕುಣಿತ, ವಾಲಗತಾಟ್, ಚೆನ್ನುಕುಣಿತ ಮತ್ತು ಕೆಲವು ಸಾಂದರ್ಭಿಕ ಕುಣಿತಗಳು. ಸಾಮಾನ್ಯವಾಗಿ ಸಾಂದರ್ಭಿಕ ಕುಣಿತಗಳು ಉತ್ಪತ್ತಿಯನ್ನು ಶೋಧಿಸುವ, ಅದನ್ನು ಆಚರಿಸುವ ಸಂದರ್ಭಗಳು. ರಂಗದ ಕುಣಿತ, ಸುಗ್ಗಿ ಕುಣಿತ ಈ ಮುಂತಾದವುಗಳ ಹಿನ್ನೆಲೆಯಲ್ಲಿ ಇದನ್ನು ಗುರುತಿಸಬಹುದು.

ದೈವಸಂಬಂಧಿ ಕುಣಿತಗಳಲ್ಲಿ ಭಕ್ತಿ ಬಡಾಯ, ಭಿಕ್ಷೆ ಮತ್ತು ಶೋಷಣೆಯ ಮಾರ್ಗಗಳಾಗಿ ಪರಿವರ್ತಿತವಾಗಿದ್ದ ಕಡೆ ರಂಜನೆ ಕಾರ್ಯಪ್ರವೃತ್ತವಾಗುತ್ತದೆ. ಗೂಡೆ ಮಾರ್ಯಮ್ಮನ ಕುಣಿತ, ಪೂಜಾಕುಣಿತ, ಕೊಡದ ಕುಣಿತ ಮೊದಲಾದುವನ್ನು ಇಲ್ಲಿ ಉದಾಹರಿಸಬಹುದು.[3]

ಜನರಂಜನಾ ಕುಣಿತಗಳು
(ಉದ್ದೇಶ ಪಟ್ಟಿ)

 ಆಂಜಯ್ಯನ ಕುಣಿತ :

ಹುಲಿಕುಣಿತ

ಪಾಳ್ಳೇಗಾರನ ಕುಣಿತ


ಗಾರುಡಿಗನ ಕುಣಿತ


(ಉದ್ದೇಶ ಪಟ್ಟಿ)

ಕೋಲಾಟ

ಕರಡಿ ಕುಣಿತ

ಜನರಂಜನಾ ಕುಣಿತಗಳ

(ವೇಷಪಟ್ಟಿ)

. ಹುಲಿವೇಷ
. ಗೇರ್ಕಳ್ಳವೇಷ

. ಕೋತಿವೇಷ
. ಕರಡಿವೇಷ

ಕೀಲುಕುದುರೆ ವೇಷ

(೧ ಗಂಡು + ೨ ಹೆಣ್ಣು)

. ಆಂಜಯ್ಯನ ವೆಷ

. ಹನುಮಂತ

ಪಾಳ್ಳೇಗಾರನ ವೇಷ

 

 

ಪೋಟಿವೇಷ

 

(ಸಂಖ್ಯಾಗೊಂದಲ / ಚುಕ್ಕಿ ಚಿಹ್ನೆಯ ಗೊಂದಲ ಇರುವುದರಿಂದ ಈ ಅಧ್ಯಾಯದ ಕೆಲವು ಅಡಿಟಿಪ್ಪಣಿಗಳನ್ನು ನಮೂದಿಸಿಲ್ಲ)[1]        ಮಹಾರಾಷ್ಟ್ರದ ದಿರ್ ನೃತ್ಯ ಯುದ್ಧದಲ್ಲಿ ಆಕಸ್ಮಿಕವಾಗಿ ಮಡಿದವರಿಗೆ-ಎದುರಾಳಿಯನ್ನು ನಿಗ್ರಹಿಸುವ ಚಲನವಲನಗಳು ಮತ್ತು ನೆಗೆತದ ಕುಣಿತ.

[2]        ಪೂರ್ವ ಭಾರತದ ನಾಗಾಗಳಲ್ಲಿ ಅನೇಕ ಯುದ್ಧ ನೃತ್ಯಗಳಿವೆ. ಭರ್ಚಿನೃತ್ಯ ಅಂಥವುಗಳಲ್ಲಿ ಒಂದು. ಭಿಲ್ ಆದಿವಾಸಿಗಳಲ್ಲಿ ಕೂಡ ಯುದ್ಧ ನೃತ್ಯಗಳಿವೆ.

[3]        ಕರ್ನಾಟಕದ ಲಂಬಾಣಿ ಕುಣಿತ, ಕೇರಳದ ಕೈಕೊಟ್ಟಿ ಕಾಳಿ, ತುಳುನಾಡಿನ ಕುಮ್ಮಿ, ಗುಜರಾತ್‌ನ ಪಿಪ್ಪಾನಿ (Tippani) ಹೆಂಗಸರ ಕೋಲಾಟದ ಮಾದರಿಗಳು.