ಜಗತ್ತಿನಲ್ಲಿರುವ ಭಾಷೆಗಳ ಸಂಖ್ಯೆ ಖಚಿತವಾಗಿ ತಿಳಿದಿಲ್ಲ. ಇವೆಲ್ಲವೂ ಒಂದರಿಂದ ಒಂದು ಭಿನ್ನ. ಆದರೆ ಅವುಗಳ ನಡುವೆ ರಾಚನಿಕವಾದ ಕೆಲವು ಸಮಾನ ಅಂಶಗಳಿವೆ. ಅಲ್ಲದೆ ವಿವಿಧ ಭಾಷೆಗಳು ಹಲವು ಕುಟುಂಬಗಳಾಗಿಯೂ ಒಗ್ಗೂಡಬಲ್ಲವು. ಭಾಷಾ ಸಮುದಾಯಗಳು ಪರಸ್ಪರ ಸಂಪರ್ಕಕ್ಕೆ ಒಳಗಾಗುವ ಮೂಲಕ ಜ್ಞಾತಿ ಭಾಷೆಗಳು, ಜ್ಞಾತಿಗಳಲ್ಲಿನ ಭಾಷೆಗಳು ಬಗೆಬಗೆಯ ಪರಿವರ್ತನೆಗಳಿಗೆ ಒಳಗಾಗಿವೆ. ಎಲ್ಲ ಸಂಗತಿಗಳನ್ನು ವಿವರಿಸುವ ಲೇಖನಗಳು ವಿಭಾಗದಲ್ಲಿವೆ.