ಭಾಷೆಯು ಬಳಕೆಯಲ್ಲಿ ಎರಡು ಕೌಶಲಗಳೆಂದರೆ ಮಾತಾಡುವುದು ಮತ್ತು ಕೇಳುವುದು. ಮಾತಾಡುವ ಕೌಶಲ್ಯಕ್ಕೆ ನೆರವಾಗಲು ಮನುಷ್ಯರ ದೇಹ ರಚನೆಯಲ್ಲಿ ಧ್ವನ್ಯಂಗಗಳಿವೆ. ಇವುಗಳ ಜೈವಿಕ ರಚನೆ, ಧ್ವನಿ ಉತ್ಪಾದನೆಯಲ್ಲಿ ಇವು ಭಾಗವಹಿಸುವ ವಿಧಾನ ಇತ್ಯಾದಿಗಳನ್ನು ವಿವರಿಸುವುದು ಸಾಧ್ಯವಾಗಿದೆ. ಕಿವಿಗಳಿರುವುದು ಕೇಳಿಸಿಕೊಳ್ಳುವುದಕ್ಕೆ ಎಂಬುದು ನಿಜ. ಹೀಗೆ ಕೇಳಿಸಿಕೊಳ್ಳುವುದು ಕೇವಲ ಮಾತನ್ನಷ್ಟೇ ಅಲ್ಲ. ಎಲ್ಲಾ ಬಗೆಯ ಸದ್ದುಗಳನ್ನು ಕಿವಿಯಿಂದ ಕೇಳಿಸಿಕೊಳ್ಳುತ್ತೇವೆ. ಕಿವಿಯ ರಚನೆ ಕೇಳಿಸಿಕೊಳ್ಳುವ ಕ್ರಿಯೆಯ ಸ್ವರೂಪ ಇವೆಲ್ಲವೂ ನಮ್ಮ ಅರಿವಿನ ವ್ಯಾಪ್ತಿಗೆ ಬಂದಿವೆ.

ಧ್ವನಿಗಳ ಉತ್ಪಾದನೆ ಮಾತಿನ ಧ್ವನಿಗಳ ಸ್ವರೂಪ, ಧ್ವನ್ಯಂಗಗಳ ರಚನೆ, ಅವುಗಳ ಕಾರ್ಯ ನಿರ್ವಹಣೆ, ಶ್ರವಣ ವ್ಯವಸ್ಥೆ, ಶ್ರವಣಕ್ರಿಯೆಯ ಸ್ವರೂಪ ಇವೆಲ್ಲವನ್ನು ವಿವರಿಸುವ ಲೇಖನಗಳು ಭಾಗದಲ್ಲಿವೆ.