ಭಾಷೆಯೊಂದು ವ್ಯವಸ್ಥೆ. ಅದರಲ್ಲಿ ಹಲವಾರು ಅಂಗಾಂಗಗಳಿದ್ದು ಅವೆಲ್ಲವೂ ಖಚಿತ ನಿಯಮಗಳಿಗನುಗುಣವಾಗಿ ಕಾರ್ಯ ನಿರ್ವಹಿಸುತ್ತಿರುತ್ತವೆ. ವ್ಯವಸ್ಥೆಯ ಸಂಯೋಜನೆಯನ್ನು ಅರಿಯಲು ಪ್ರಯತ್ನಗಳು ಬಹು ಹಿಂದಿನಿಂದಲೂ ನಡೆದು ಬಂದಿವೆ. ಭಾಷೆಯ ಮೂರ್ತ ಮತ್ತು ಅಮೂರ್ತ ನೆಲೆಗಳ ಸಂಬಂಧವನ್ನು ವಿವರಿಸುವ ಹಲವು ಮಾದರಿಗಳು ಬಳಕೆಯಲ್ಲಿವೆ. ಮಾತಾಡುವ ನಮಗೆ ಧ್ವನಿಗಳು, ಪದಗಳು ಹೆಚ್ಚೆಂದರೆ ವಾಕ್ಯಗಳು ಗೋಚರಿಸುತ್ತವೆ. ಆದರೆ ಗೋಚರ ಘಟಕಗಳ ಹಿಂದಿರುವ ರಚನೆಯ ನಿಯಮಗಳನ್ನು ನಾವು ಬಳಸುತ್ತೇವೆ. ಆದರೂ ನಿಯಮಗಳೇನೆಂಬುದು ನಮಗೆ ಗೊತ್ತಿಲ್ಲ. ಅಗೋಚರ ನೆಲೆಯನ್ನು ವಿವರಿಸುವ ಲೇಖನಗಳು ಭಾಗದಲ್ಲಿವೆ.