ಭಾಷೆಗಳು ಸಾವಿರಾರು. ಅವುಗಳನ್ನಾಡುವ ಭಾಷಿಕರು ಭಾಷೆಗಳನ್ನು ವಿವಿಧ ಉದ್ದೇಶಗಳಿಗಾಗಿ ಬಳಸುತ್ತಿದ್ದಾರೆ. ನೂರಾರು ಬಗೆಯ ವ್ಯವಹಾರಗಳಿಗಾಗಿ ಭಾಷೆಯನ್ನು ಒಗ್ಗಿಸುತ್ತಿದ್ದಾರೆ. ಹಿಂದೆಂದೂ ತಿಳಿಯದಿದ್ದ ರೀತಿಯ ಭಾಷಾ ವ್ಯಾಪಾರಗಳು ಸಾಧ್ಯವಾಗುತ್ತಿದೆ. ಏಕ ಭಾಷಾ ಸಮುದಾಯಗಳು ಮರೆಯಾಗಿ ಬಹುಭಾಷಾ ಸಮುದಾಯಗಳು ರೂಪುಗೊಳ್ಳುತ್ತಿದೆ. ಭಾಷೆಗಳಲ್ಲಿ ಕೆಲವು ಯಜಮಾನ ಭಾಷೆಗಳು ಮತ್ತೆ ಕೆಲವು ರಾಜಕೀಯವಾಗಿ ದುರ್ಬಲವಾಗಿರುವ ಸಮುದಾಯದ ಭಾಷೆಗಳು. ಅಲ್ಪ ಸಂಖ್ಯಾತರ ಭಾಷೆಗಳು ಹಲವು ಬಗೆ ಇಕ್ಕಟ್ಟುಗಳನ್ನು ಅನುಭವಿಸುತ್ತಿವೆ. ಅಂದರೆ ಭಾಷೆ ಕೇವಲ ಸಾಧನವಲ್ಲ. ಅದೀಗ ರಾಜಕೀಯ ಪ್ರಕ್ರಿಯೆಯ ಒಂದು ಮುಖ್ಯ ಭಾಗ.

ಎಲ್ಲ ಸಂಗತಿಗಳನ್ನು ವಿವರಿಸುವ ಲೇಖನಗಳು ಭಾಗದಲ್ಲಿವೆ.