ರೊಟ್ಟಿಯನ್ನು ಕೇಳುವಲ್ಲಿ ಮಕ್ಕಳಿಗೆ ಕಲ್ಲನ್ನೇ
ಕೆಟ್ಟನರಜಾತಿಯಲ್ಲಿ ತಂದೆಯೊಬ್ಬ ಕೊಡುವನೇ
ಒಳ್ಳೇ ತಂದೆಯಾದ ನೀ ನಮ್ಮ ಮೊರೆ ಕೇಳುವೇ
ಆತ್ಮನಾದ ನಂಗೆ ದಯಪಾಲಿಸಿ ಕಟಾಕ್ಷಿಸಯ್ಯ || ರೊಟ್ಟಿಯನ್ನು ||
ಇಹ ಬಿಟ್ಟ ಸ್ವರ್ಗವನ್ನು ಐದಿದಾಗ ನಿಮಗೆ
ತಂದೆಯಿಂದ ವರವನ್ನು ಪಡಕೊಂಡು ಹಂಚುವೆ
ಎಂದುಕೊಟ್ಟಿ ಭಾಷೆಯ ನೆರವೇರಿಸೊಡೆಯಾ
ಸತ್ಯವಾದ ಆತ್ಮವನ್ನು ಕೊಟ್ಟು ಆದರಿಸೆನ್ನನ್ನು || ರೊಟ್ಟಿಯನ್ನು ||
ಬಲಹೀನರಿಂಗೆ ಕ್ಷೇಮ ದ್ವೇಷಯಯ್ಯಲೋಕಕ್ಕೆ
ಪ್ರೀತಿ ಎಂಬ ದಿವ್ಯನೇಮ ಒದಗಿಸುವಾತ್ಮನೇ
ನಿನ್ನ ಗೃಹ ನಾನಲಾ ತೀಜಪ್ರದನಾಗಿ ಬಾ
ಪಾಪವೆಲ್ಲಾ ಹೊರಗೆ ಮಾಡು ಶುದ್ಧಹೃದವ ಮಾಡಿಸು || ರೊಟ್ಟಿಯನ್ನು ||
* * *
ಹಾಡಲೋ ಮನವೇ
ಯೇಸುವನ್ನೆ ಕೊಂಡಾಡಲೇ || ಹಾಡಲೋ ||
ನನ್ನೇಸುವನ್ನೇ ಕೊಂಡಾಡಲು
ದೊರೆತ ಈ ಸಮಯದೊಳು
ಕೃತಜ್ಞತ ಸ್ತುತಿಯಿಂದ
ಅರ್ಪಿಸಿ ಬೇಡುವೆವು || ಹಾಡಲೋ ||
ನಿನ್ನ ಸನ್ನಿಧಿಯೋಳು
ಬೇಡಲು ಬಂದಿರುವ
ಆತ್ಮಗಳನ್ನು ರಕ್ಷಿಸು
ನನ್ನೇಸುವೇ ನೀನೊಬ್ಬನೇ || ಹಾಡಲೋ ||
* * *
ಸರ್ವಲೋಕ ಸುಂದರನೇ
ಆಲೈಸು ನಮ್ಮ ಮೊರೆಯನ್ನು
ಹೀನಮಾನವರಾದ ನಮ್ಮನ್ನು
ದೃಷ್ಠಿಸಿ ಕರುಣಿಸಯ್ಯಾ || ಸರ್ವಲೋಕ ||
ಅರುಣೋದಯನೇ ನೀ ಬಾರೈ
ಹರುಷವ ತಾರೈ ಮನದೊಳು
ಸಾವು ಚಿಂತೆಗಳನ್ನು
ಬಂದಿಸಬಾರೈ ನನ್ನೇಸುವೇ || ಸರ್ವಲೋಕ ||
ವಿಜಯರಾಜನೇ ನಿನ್ನವರಿಗೆ
ಜೀವದ್ವಾರವ ತೋರಿಸೈ
ದೇವಾಭದ್ರಗೊಳಿಸು
ಜೀವಲೋಕದ ಪಥವನ್ನು || ಸರ್ವಲೋಕ ||
* * *
ಮೇಘರೂಢನಾಗಿ ಹೋದ ಕ್ರಿಸ್ತನು
ಮೇಘರೂಢನಾಗಿ ಬರುವನು
ಲೋಕ್ಕಳಿದು ಬರುವನು
ಹಲ್ಲೇಲೂಯಾ ಹಲ್ಲೇಲೂಯಾ || ಮೇಘರೂಢ ||
ದೂತಸೈನ್ಯ ಸಹಿತವಾಗಿ ಪ್ರಭುವು
ಮಹಾನೀತಿ ನ್ಯಾಯದಿಂ ಬರುವನು
ಕೊಳಲು ಶಬ್ದದಿಂದ ದೂತರೆರಗಿ ಬರುವರು
ಧ್ವನಿ ತಿಳಿದಸತ್ತ ಜನರೆಲ್ಲರೆದ್ದು ನಿಲ್ವರು || ಮೇಘರೂಢ ||
ನಿಂತುಕೊಂಡ ಜನರನ್ನು ದಿವ್ಯದೂತರು
ಕುರುಬರಂತೆಂಟು ಭಾಗವಾಗಿವಿಂಗಡಿಸ್ವರು
ಸುಜನರ ಕೋಟಿಸಮೂಹ ಸ್ವಾಮಿ ಬಲಕೆ
ಇತರ ಜನ ಕೋಟಿ ಸಮೂಹ ಎಡಕೆ ನಿಲ್ವರು || ಮೇಘರೂಢ ||
ಎಡಕೆ ನಿಂತ ದುಷ್ಠರೆಲ್ಲಾ ದುಃಖಗೊಳ್ವರು
ಬಲಕೆನಿಂತ ಭಕ್ತರು ಸಂಭ್ರಮಿಸುವರು
ಬುದ್ದಿಯುಳ್ಳ ಜನರೇ ನೀವು ತಿಳಿಯಿರಿ
ಬೇಗಸಿದ್ಧವಾಗಿ ಇಂದೇ ಯೇಸುವನ್ನು ನಂಬಿರಿ || ಮೇಘರೂಢ ||
* * *
ಏಳು ಜಿಯೋನೇ ಪ್ರಕಾಶಿಸು
ನನ್ನ ತಂದೆಯೇ ನಿರೀಕ್ಷಿಸು
ನಿನ್ನ ಭಕ್ತರ ಮೊರೆಯನ್ನು
ಯೆಹೋವನ ಕಾಂತಿಯನ್ನು || ಏಳು ||
ಕತ್ತಲು ಭೂವಿಯ ಮುಚ್ಚಿಯದೆ
ಕಾರ್ಗತಲ್ಲು ಜನರೊಳು ಹೆಚ್ಚಿಯದೆ
ಸುತ್ತನೋಡು ಜನ ಮಾರ್ಗವಕಾಣದೆ
ಸತ್ತು ಬೀಳುವುದನು ದೃಷ್ಠಿಸು ನೀ || ಏಳು ||
ನಿನ್ನ ಕಾಂತಿಯನು ನೋಡುವರು
ನಿತ್ಯವೂ ನಿನ್ನನ್ನಾಪೇಕ್ಷಿಸಿ ಸೇರುವರು
ರಾಜರೆಲ್ಲ ಮಾನಮಾಡುತ ನಿನ್ನ ಸೇರುವರು
ಮಾನವರೆಲ್ಲ ನಿನ್ನಸೇವಿಸ ಕೂಡುವರು || ಏಳು ||
* * *
ಯೋಗ್ಯರೆಲ್ಲರು ಬರಲಿ ನಿನ್ನೆಡೆಗೆ
ನಿನ್ನ ಬಳಿಗೆ ನೀನಾದಾಗ್ಯೂ ಸೇರಿಸಿಕೋ
ಶುದ್ಧತ್ವ ನೀಡ್ವದೆಮಗೆ ಕೋಡಿದೆಮಗೆ
ನೀನಶುದ್ಧತೆ ಯೋಡಿಸುದಯದಿ ನಮಗೆ || ಯೋಗ್ಯ ||
ರೊಟ್ಟಿಯನ್ನು ಉಣ್ಣುವಾಗ ತಿನ್ನುವಾಗ
ಮನದಿ ಹುಟ್ಟಿಸು ಗಾಯದಿ ನೆನಪನ್ನು
ಪಾನ ಮಾಡುವಾಗ ದ್ರಾಕ್ಷಾರಸವ ನಮ್ಮ
ದ್ಯಾನದೊಳ್ಳಿರಿಸು ರಕ್ತದ ಘನವ || ಯೋಗ್ಯ ||
ಪಾಪವಿಮೋಚಿಸಲು ಘಾಯದಪಟ್ಟಿ
ಘಾಸಿಪಟ್ಟಿ ಘೋರಶಾಪಹರಿಸಲೆಂದು
ದುಷ್ಠರ ಶಿಕ್ಷೆಯ ಹೊತ್ತೆ ತಾಪ ಹೊತ್ತೇ
ಕಷ್ಠವಾದ ಕ್ರೂಜೆಯ ಮೇಲೆ ಸತ್ತೇ || ಯೋಗ್ಯ ||
* * *
ಮುಂದೆ ಕಾಣುವ ನಿತ್ಯಕಾಲವು
ಶ್ರೇಷ್ಠವಾಗಿದೆ ನೋಡಿರಿ
ಸಂದು ಹೋಗುವ ದರೆಯ
ಚಿಂತೆಯ ಬಿಟ್ಟು ಯೋಚನೆ ಮಾಡಿರಿ || ಮುಂದೆ ||
ಸತ್ಯ ವಾಕ್ಕಿದು ಧರೆಯ ತೊಂದರೆ
ಬೇಗ ಪೋಪುದು ಕೇಳಿರಿ
ನಿತ್ಯ ಕಾಲವು ಬೇಗಬರುವುದು
ತಿಳಿದು ಯೋಚನೆ ಮಾಡಿರಿ || ಮುಂದೆ ||
ಇಂದು ತುಮಬಿದ ಭಾಗ್ಯ ನಾಳೆಗೆ
ಮಾಯವಪ್ಪುದು ತಿಳಿಯಿರಿ
ಸಂದು ಹೋಗದ ನಿತ್ಯಕಾಲದ
ಭಾಗ್ಯ ಮುಂದಿಡ ಕಲಿಯಿರಿ || ಮುಂದೆ ||
ಸಾವು ಬಂದರೆ ನಿತ್ಯಕಾಲವು
ಉದಯವಪ್ಪುದು ಅರಿಯಿರಿ
ಯಾವ ಸ್ಥಿತಿಯೊಳು ನಮ್ಮ ಆತ್ಮವ
ಕಂಡುಕೊಳ್ಳುದು ತಿಳಿಯಿರಿ || ಮುಂದೆ ||
* * *
ಲೋಕದಲ್ಲಿ ಹುಟ್ಟಿ ಬಾಳುವ ಎಲ್ಲರೂ
ಸ್ವಲ್ಪಕಾಲ ಮಾತ್ರದಿದ್ದು ಪೋಪರು
ಪೂವಿನಂತೆ ಕೊಯ್ಯಲ್ಪಟ್ಟು ಬಾಗಿ ಪೋಪರು
ಚಾಯೆಯಂತೆ ತ್ವರೆಯಾಗಿ ಹಾರ್ವರು || ಲೋಕ ||
ಹಬೆಯಂತೆ ಅಲ್ಪಹೊತ್ತು ತೋರಿಲಿವರು
ಬೇಗ ಕಣ್ಮರೆಯಾಗಿ ಹೋಗ್ವರು
ದೇಹಕ್ಕಿಲೆಸೀಗ ಮನ ಕುಂದಿಹೋದರೂ
ಯೇಸು ಹತ್ರವಿದ್ದು ಧೈರ್ಯವೀವನು || ಲೋಕ ||
ನಿದ್ದೆ ಹೋದವರಿಗಾಗಿ ದುಃಖಪಡಲು
ದೇವ ಪ್ರಿತಿಯನ್ನಾಶ್ರಯಿಸಿ ನಂಬಿರು
ಯೇಸುವೇ ಪುನರುದ್ಧಾನ ಜೀವದಾಯಕ
ತನ್ನ ನಂಬಿ ಸತ್ತವರ ಜೀವಿಪ || ಲೋಕ ||
* * *
ಓ ಪ್ರಪಂಚದ್ವನಿಯೇ
ಅದು ರಾತ್ರಿಹಗಲೂ
ಸುಮ್ಮನಿರದೆ ರಾತ್ರಿಹಗಲೂ
ಗದ್ದಲುಂಟು ಮಾಡುತ್ತೆ
ಓ ಪ್ರಪಂಚದಾಟವೇ
ಎಷ್ಠು ಭ್ರಮೆ ಭ್ರಾಂತಿಯು
ಉಂಟುಮಾಡುತ್ತಾ ಇದೆ
ಎಲ್ಲಾದೇಶಸ್ತರಿಗೂ
ಆದರೊಂದಾಯೋಚನೆ ಶ್ರೇಷ್ಠವು
ಅದು ಯಾವುದೆಂದರೆ
ನಿತ್ಯತ್ವವು ನಿತ್ಯತ್ವವು || ಓ ಪ್ರಪಂಚ ||
ಓ ಪ್ರಪಂಚಭ್ರಮೆಯೇ
ಸ್ಥಿರ ನಿಲ್ಲಲಾರದು
ಬೇಗ ಸ್ವಪ್ನದಂತೆಯೇ
ಮಾಯವಾಗಿ ಪೋಪುದು
ಸ್ವರ್ಗಲೋಕವೊಂದೇ
ಅಮರತ್ವವುಳ್ಳದ್ದು
ಹಾಸಂತೃಪ್ತಿ ಅಲ್ಲಿಯೇ
ಎಂದೆಂದಿಗೂ ಎಂದೆಂದಿಗೂ || ಓ ಪ್ರಪಂಚ ||
* * *
ಕ್ರೈಸ್ತರಾದ ನಮ್ಮ ಮೇಲೆ
ಬಿದ್ದು ಬಾರವು
ದೊಡ್ಡದೆಂದು ಧ್ಯಾನಮಾಡು
ರಾತ್ರಿ ಹಗಲು
ಭ್ರಾತರಾದ ಅನ್ಯಜನರನ್ನು
ನಾವು ಪ್ರೀತಿಸಿ
ರಕ್ಷಕನ ಹತ್ರತರ್ವ ಹಂಗು ನಮ್ಮದು || ಕ್ರೈಸ್ತರಾದ ||
ನಿನ್ನ ಭ್ರಾತ ಎಲ್ಲಿಗೋದ
ನೆಂದು ದೇವರು
ಪ್ರಶ್ನೆ ಕೇಳುವಲ್ಲಿ ಯಾವ ಉತ್ತರ ಕೊಡ್ವೆ
ನೀನು ಇರುವ ಪ್ರತಿಸ್ವಾದಲ್ಲಿಯೂ
ಯೇಸುವಿನ ಮಾತು
ಕೇಳಿ ನಿತ್ಯ ವರ್ತಿಸು || ಕ್ರೈಸ್ತರಾದ ||
ಸಾವಿರಾರು ಜನನಿತ್ಯ ಸಾಯುತ್ತಿರಲು
ಎಚ್ಚರಿಕೆ ವಾಕ್ಯ ಕೇಳಿ
ಪ್ರಾಣ ಕಾಪಾಡು
ಪಾಪಿಯನ್ನು ರಕ್ಷಿಸುವ ಪ್ರತಯೊಬ್ಬನೂ
ಜ್ಯೋತಿಯಂತೆ ಶೋಭಿಸುವ
ಮಾನ ಹೊಂದ್ವನು || ಕ್ರೈಸ್ತರಾದ ||
* * *
ಕ್ರಿಸ್ತ ನಿನ್ನ ಭಕ್ತರನ್ನು
ಪ್ರೀತಿಯಿಂದ ಪಾಲಿಸು
ಪ್ರೀತಿಯಲ್ಲಿ ಸಭೆಯನ್ನು
ಪೂರ್ಣ ದೃಢಪಡಿಸು || ಕ್ರಿಸ್ತ ನಿನ್ನ ||
ನಿನ್ನ ಪ್ರೀತಿ ಸಭ್ಯರನು
ಐಕ್ಯದೊಳಗಿಡಲಿ
ಅಹಂಕಾರವೆಲ್ಲವನ್ನು
ಅದು ಸುಟ್ಟು ಬಿಡಲಿ || ಕ್ರಿಸ್ತ ನಿನ್ನ ||
ನಮ್ಮ ಸಭೆ ಒಂದೇ ವಂಶ
ನಿನ್ನ ವಂಶ ಯೇಸುವೇ
ಒಂದೇ ರಕ್ತ ಒಂದೇ ಮಾಂಸ
ಒಂದೇ ಜೀವ ನಮಗೆ || ಕ್ರಿಸ್ತ ನಿನ್ನ ||
ದಿವ್ಯಪ್ರೀತಿ ಸಭೆಯಲ್ಲಿ
ವಾಸ ಮಾಡು ನಿತ್ಯಕು
ನಿನ್ನ ಸ್ವರ್ಗ ರಾಜ್ಯದಲ್ಲಿ
ನಮ್ಮನ್ನೆಲ್ಲ ಸೇರಿಸು || ಕ್ರಿಸ್ತ ನಿನ್ನ ||
* * *
ಸಹೋದರ ಪ್ರೀತಿಯು
ಎಷ್ಠೊರಮ್ಯವಾದದ್ದು
ಪರಸ್ಪರ ಪ್ರೀತಿಯು
ಭಕ್ತರಲಂಕಾರವು || ಸಹೋದರ ||
ಯಾವ ಗುಣವಿದ್ದರೂ
ಪ್ರೀತಿ ಇಲ್ಲದಿದ್ದರೆ
ನಾನೂ ಏನೂ ಅಲ್ಲವು
ನಿನ್ನ ಮುಂದೆ ದೇವರೇ || ಸಹೋದರ ||
ಪ್ರೀತಿಯುಳ್ಳ ದೇವರೇ
ದೇವರಿಂದ ಹುಟ್ಟುತ್ತ
ಇಂಥಾ ದಿವ್ಯಗುಣವು
ನನ್ನಲ್ಲಿಡು ಕರ್ತನೇ || ಸಹೋದರ ||
ದೇವಸಭಾ ಶಿರಸ್ಸೇ
ನಿನ್ನ ಜನರೆಲ್ಲರೂ
ಪೂರ್ಣ ಪ್ರೀತಿಯಿಂದಲೇ
ನಡಕೊಳ್ಳ ಭೋದಿಸು || ಸಹೋದರ ||
* * *
ಪಾಪ ದುಃಖ ಪರಿಹಾರ
ಆತನಿಂದ ಮಾತ್ರವೇ
ನಿರಾನಂದ ಸಮಾಧಾನ
ಹೊಂದುವಂತವರಿಗೆ || ಪಾಪ ||
ಮನದಲ್ಲಿ ಕುಗ್ಗದಂತೆ
ಜಪ ಮಾಡುತ್ತಿರುವೆ
ನನ್ನ ದುಃಖವೆಲ್ಲವನ್ನು
ಆಡುಕೊಳ್ಳುತ್ತಿರುವ || ಪಾಪ ||
ಯೇಸುಸ್ವಾಮಿ ನಿತ್ಯಾಶ್ರಯ
ಬೇಡಿಕೊಳ್ಳುತ್ತಿರುವೆ
ಭಯ, ಚಿಂತೆ ಕಳವಳ
ಸರ್ವಶಕ್ತನ ಆಧಾರ || ಪಾಪ ||
ಮಿತ್ರನಾದ ಯೇಸುವೇ
ಬಂಡೆಯಾಗಿರೆನಗೆ
ಬಿರುಗಾಳಿ ಬೀಸಲು
ಕಾದು ನಿನ್ನ ಹಸ್ತದೊಳ್ || ಪಾಪ ||
* * *
ಯೇಸು ಹತ್ರವಿರುವಲ್ಲಿ
ತಾಪತ್ರಯ ಬಂದರೂ
ದೃಷ್ಠಿಯಿಟ್ಟು ಆತನಲ್ಲಿ
ಶಾಂತಿ ಹೊಂದುತ್ತಿರ್ವೆನು || ಯೇಸು ||
ಹೊತ್ತು ಕೊಳಲಾರದಂತ
ಭಾರ ನನಗಿರಲು
ಆಪ್ತಮಿತ್ರ ನೆರವಾಗು
ನೀನೆ ನನ್ನ ಶರಣು || ಯೇಸು ||
ನಾನು ಬಲಹೀನನೆಂದು
ನೀನೇ ತಿಳಿದಾತನು
ನನ್ನಗೆನ್ನ ಕೃಪೆಸಾಕು
ಎಂದೂ ಬಲಪಡಿಸು || ಯೇಸು ||
ಯೇಸು ಸ್ವಾಮಿಯೇ
ಜೀವಬುಗ್ಗೆ ಎನಗೆ
ಏಕಾಪೇಕ್ಷೆಯಿದ್ದು ಮನ
ಲೋಕದಾಶೆ ಬಿಡಲಿ || ಯೇಸು ||
* * *
ನಿನ್ನ ಮೇಲೆ ನನ್ನಪೇಕ್ಷೆ
ಉಂಟು ಪ್ರಿಯ ಕರ್ತನೇ
ನಿತ್ಯವೂ ನನ್ನಭಿಲಾಷೆ
ನೀನೇ ದಿವ್ಯ ಮಿತ್ರನೇ || ನಿನ್ನ ||
ನನ್ನ ದಿವ್ಯ ಯಜಮಾನ
ನಾನು ಕಂಡುಕೊಂಡೆನು
ಆತ ಭೋದಿಸುವ ಜ್ಞಾನ
ಹೊಂದಿ ತೃಪ್ತಿಯಾಗಿದೆ || ನಿನ್ನ ||
ಏಕಾಪೇಕ್ಷೆಯಿದ್ದು ಮನ
ಲೋಕದಾಶೆ ಬಿಡಲಿ
ಕ್ರಿಸ್ತನಲ್ಲಿ ಸ್ಥಿರಧ್ಯಾನ
ನನ್ನ ಆತ್ಮವಿರಲಿ || ನಿನ್ನ ||
ಯೇಸುಸ್ವಾಮಿ ಜೀವಬುಗ್ಗೆ
ಯಮತೆ ನನಗಿರಲು
ಯೇಸು ನನ್ನ ನಿತ್ಯ ಭಾಗ್ಯ
ಆತ ನನ್ನನಂದವು || ನಿನ್ನ ||
* * *
ನೂರು ಕುರಿ ಇರಲೊಂದು ತಪ್ಪಿಹೋಯಿತು
ಅದ ರಕ್ಷಿಪೆನೆಂದು ಕಾಯುವವನೆಂದನು
ತಪ್ಪಿ ಹೋದ ಕುರಿ ಅತಿ ಅಲ್ಪವಾದದ್ದು
ಒಂದು ಕುರಿಯಾದರೂ ನಶಿಸಲಿಕ್ಕೊಪ್ಪನು || ನೂರು ||
ಕುರಿ ಕಾಯುವವ ಕಾಡಿನಲ್ಲಿ ಅಲೆದಲೆದು
ಕಲ್ಲು ಮುಳ್ಳು ತುಳಿದು ಕುರಿ ಹುಡುಕಿದನು
ಕುರಿಗಾಗಿ ಆತ ಹೀಗೆ ಶ್ರಮಪಡಲು
ಅದ ಕಮಡಹಿಡಿದೆತ್ತಿ ಹೊತ್ತುಕೊಂಡನು || ನೂರು ||
ಕುರೀಮಂದೆ ಸೇರಿಸಿ ಮೇವು ನೀರುತೋರಿಸಿ
ಕುರಿ ಬಂತು ಎಂತಂದು ಅತಿ ಹರ್ಷಿಸಿದನು
ನಾನೇ ಕೆಟ್ಟಕುರಿಯು ಯೇಸುಕಾಯುವಾತನು
ಕುರಿಗಾಗಿ ಆತನು ಎಷ್ಠು ಶ್ರಮಪಟ್ಟನು || ನೂರು ||
ಕರ್ತ ನಿನ್ನ ಶ್ರಮೆಯ ಜ್ಞದ್ತಿಮಾಡಿಕೊಳ್ಳುತ್ತ
ನಿನ್ನ ಮುಂದೆ ಯಲ್ಲಿಯೇ ಎಂದು ಇದ್ದುಕೊಳ್ಳುವೆ
ನೀನೆನ್ನನ್ನು ಕೈಬಿಡದೆ ಕುರಿ ಮೇಲೆ ತೋರಿದ ಪ್ರೀತಿಯ
ನನ್ನ ಮೇಲೆ ತೋರಿಸಿ ರಕ್ಷಿಸು ನನ್ನೇಸುವೆ || ನೂರು ||
* * *
ಬುದ್ಧಿಹೀನ ಕುರಿಯಂತೆ ನಾನು ಹೆದ್ದಿಬಿಟ್ಟೆನು
ಮಾರ್ಗತಪ್ಪಿ ಹೋಗಿ ಬಿಟ್ಟೆ ಮೋಸದಲ್ಲಿ ಬಿದ್ದೆನು
ಹೀಗೆ ಬಹುಕಾಲದಿಂದಲೆಯುತ ಶೋಧಕನ ಮೋಸದಿಂ
ನಶಿಸಿ ಹೋಗುತ್ತಿದ್ದೆನು || ಬುದ್ಧಿಹೀನ ||
ಯೇಸು ನೀನಿನ್ನ ಕಷ್ಠಕಂಡು
ನನ್ನ ಬಿಟ್ಟುಬಿಡದೆ ಬಡಕುರಿ ಹೋಯಿತೆಂದು
ನನ್ನ ಹುಡಕ ಬಂದೆ ನಿನ್ನ ಅತಿಕೃಪೆಯಿಂದ
ಜ್ಞಾನ ಬೋಧೆಯೊಂದಿದೆ ಓಡಿ ಬಹುಭ್ರಾಂತಿಯಿಂದ
ನಿನ್ನ ಹಟ್ಟಿಯ ಸೇರಿ ಜೀವಿಸಿದೆ || ಬುದ್ಧಿಹೀನ ||
ಅಂದಿನಿಂದ ಎಷ್ಟೋ ಆನಂದ
ನಿನ್ನ ಹತ್ರ ಹೊಂದಿದೆ ನಿನ್ನ ಪ್ರೀತಿ ಮುಖದಿಂದ
ಸಮಾಧಾನವಾಗುತ್ತೆ ಇನ್ನು ಸ್ವಂತ ಬುದ್ಧಿಯನ್ನು
ನಂಬದಂತೆ ಇನ್ನು ನನ್ನ ಕಾಯುತ್ತಾ ಇರು
ನೀನೇ ನನ್ನ ಸರ್ವಶಕ್ತ ವಿಮೋಚಕನು || ಬುದ್ಧಿಹೀನ ||
Leave A Comment