ನನ್ನ ಇಷ್ಠದಂತೆಯೇ ನಾ ಮಂದೆ ಬಿಟ್ಟೆನು
ನಾ ಕುರುಬನ ಕೇಳದೆ ಅಲೆಯುತ್ತಿರಲು
ನಾ ಹುಚ್ಚನಾಗಿದ್ದು ನನ್ ಮನೆ ಬಿಟ್ಟೆನು
ನನ್ ತಂದೆ ಆಜ್ಞೆ ತೊರೆದು ನಾ ದೂರ ಹೋದೆನು     || ನನ್ನಿಷ್ಠ ||

ನನ್ನನ್ನು ಸ್ನೇಹಿಸಿ ನನ್ನ ತಂದೆ ದಿವ್ಯಮಿತ್ರನು
ಘೋರಾರಣ್ಯದಲ್ಲಿಯೂ ಹುಡುಕುತ್ತಿದ್ದನು
ಧಣಿದು ಸಾಯುತ್ತಾ ಬಿದ್ದಿದ್ದ ನನ್ನನ್ನು
ಕೈಯ್ಯಲ್ಲಿ ಎತ್ತಿ ಪೋಷಿಸಿ ಆದರಿಸಿದನು       || ನನ್ನಿಷ್ಠ ||

ಕ್ರಿಸ್ತನೆನ್ ಕುರುಬ ನನ್ನಾತ್ಮ ಪ್ರಿಯನು
ಸ್ವರಕ್ತದಿಂದೆನ್ನನ್ನು ವಿಮೋಚಿಸಿದನು
ಓ ಯೇಸು ನನ್ನನ್ನು ನಿನ್ನತ್ರ ಸೇರಿಸಿ
ನಿನ್ನಾಶಿರ್ವಾದ ಪಾಲಿಸಿ ಕಾಪಾಡುತ್ತಾ ಇದ್ದೀ || ನನ್ನಿಷ್ಠ ||

ಹಟ್ಟಿಯು ತೊಲಗಿ ನಾನ್ ಎಲ್ಲೂ ಹೋಗದೆ
ನನ್ನ ಕುರುಬನ ಶಬ್ದಕ್ಕೆ ನಾ ಕಿವಿಗೊಡುವೆ
ಎನ್ ಸ್ವಂತ ಮನವ ಎಂದೆಂದೂ ಬಿಡದೆ
ಮೇಲಿಂದ ತಂದೆಯಾಜ್ಞೆಯ ಆಲೈಸುತ್ತಿರುವೆನು        || ನನ್ನಿಷ್ಠ ||

* * *

ತನುವಿನ ಬಾಳು ನೆಲೆಯಾದುದಲ್ಲ
ಅನುಭವದಿಂದಲರಿಯಲಿಲ್ಲವೇ ಭೂ
ಕವಕವಸ್ತು ವಾಹನಗಳು ಕೂಡ
ಕನಸಿನಿಂದದಲಿ ಇಹದಲ್ಲವೇ ನೀನು || ತನುವಿನ ||

ನೀತಿಯ ಬೆಳಕು ಪ್ರಜ್ವಲಿಸುತ್ತಿದೆ
ಪ್ರೀತಿಯು ಸನಿಹದಿ ಕಾಣುತಿದೆ ಬಹು
ಜ್ಯೋತಿಯಾದ ಸತ್ಯದಾತ್ಮಾನು ನಿನಗೆ
ನುತನ ಭಾವವ ಪಾಲಿಪನು ಜ್ಞಾನ
ದಾತನನ್ನು ಸೇರಿ ನಡೆ ಮನವೇ ಬಹು
ಪೂತ ಭಾವಿಂದಿರು ಮನವೇ        || ತನುವಿನ ||

ನಿನ್ನ ಕರುಣಿಸುವ ರಕ್ಷಕನೇಸುವು
ಇನ್ನೂ ಕರೆಯುತಲೇ ನಿಂತಿಹನು ಆತ
ಮನ್ನಿಸಿ ನಿನ್ನಯ ಪಾಪಗಳನ್ನೆಲ್ಲ
ಉನ್ನ ವರಗಳನ್ನಿಯಲು ನೀನು
ಇನ್ನು ತಾಮಸವನು ಮಾಡದಿರು ಬೇಗ
ಸನ್ನುತಾತ್ಮನ ನೆಳಲ ಸೇರು        || ತನುವಿನ ||

* * *

ಪಾಪತಾಪದೊಳು ಬದುಕಿರಲೇಕೆ
ಶಾಪದೆಡೆಯೊಳಗೆ ತಂಗಿರಲೇಕೆ
ಭೂಪನೇಸು ಚರಣವ ಪಿಡಿದಿರು
ಮನವೇ ನರಪಾಪಿ ಮನವೇ        || ಪಾಪತಾಪ ||

ಕರಣ ಪಾಶದೊಳು ಕಲೆತಿರಬೇಡ
ಸುರನ ಕರುಣೆಗಳನಳಿಸಿಕೋಬೇಡಾ
ವರ ಯೇಸು ಚರಣವ ಪಿಡಿದಿರು
ಮನವೇ ನರಪಾಪಿ ಮನವೇ        || ಪಾಪತಾಪ ||

ದುರಳರ ಸಂಗವನೊಳಿದಿರಬೇಡ
ಮರುಳುತನವ ಮೆಚ್ಚಿ ಭ್ರಮಿನಿರಬೇಡ
ಗುರು ಯೇಸು ಚರಣವ ಪಿಡಿದಿರು
ಮನವೇ ನರಪಾಪಿ ಮನವೇ        || ಪಾಪತಾಪ ||

ದಿನ ದಿನ ದೇವರ ವಾಕ್ಯವ ಕೇಳಿ
ಅನುದಿನ ಜಪವನು ಮಾಡುತ
ಪೊಗಳಿ ಘನವಾದೇಸು ಚರಣವ ಪಿಡಿದಿರು
ಮನವೇ ನರಪಾಪಿ ಮನವೇ        || ಪಾಪತಾಪ ||

* * *

ವಂದಿಸುವೆ ನಾ ವಂದಿಸುವೆ
ಸದಾ ನಂದನ ಚಂದದಿ ವಂದಿಸುವೆ || ವಂದಿಸುವೆ ||

ತ್ರಯೈಕ ದೇವರನ್ನು ವಂದಿಸುವೆ
ನನ್ನ ಕ್ರಿಯೆ ನಡಿ ನುಡಿಯಿಂದ ವಂದಿಸುವೆ
ನೀತಿಯುಳ್ಳ ದೇವರನ್ನು ವಂದಿಸುವೆ
ಮಹಾ ಜ್ಯೋತಿಯುಳ್ಳ ಸ್ವಾಮಿಯನ್ನು ವಂದಿಸುವೆ     || ವಂದಿಸುವೆ ||

ಪುತ್ರರನ್ನು ಕಾವನನ್ನು ವಂದಿಸುವೆ
ನನ್ನ ಶತ್ರುಗಳ ಮಧ್ಯದಲ್ಲಿ ವಂದಿಸುವೆ
ಮೋಕ್ಷವನ್ನು ತಂದವನ ವಂದಿಸುವೆ
ದೈವಸಾಕ್ಷಿಯಿಂದ ಬಂದವನ ವಂದಿಸುವೆ     || ವಂದಿಸುವೆ ||

ಜೀವವುಳ್ಳ ದೇವರನ್ನು ವಂದಿಸುವೆ
ಸತ್ಯ ನಾವೆಯೆಂಬ ದೇವರನ್ನು ವಂದಿಸುವೆ
ಪಾಪಕ್ಕಾಗಿ ಬಂದವನ ವಂದಿಸುವೆ
ನನ್ನ ಶಾಪಕ್ಕಾಗಿ ಸತ್ತವನ ವಂದಿಸುವೆ        || ವಂದಿಸುವೆ ||

ಶುದ್ಧ ಶುದ್ಧಾನೆಂದು ವಂದಿಸುವೆ
ಪಾಪ ನಿದ್ದೆಯಿಂದ ಎದ್ದು ಈಗ ವಂದಿಸುವೆ
ಹಲ್ಲೆಲೂಯ ಪಾಡಿಕೊಂಡು ವಂದಿಸುವೆ
ಲೋಕದಲ್ಲೆಲ್ಲಿಯೂ ಸಾರಿಕೊಂಡು ವಂದಿಸುವೆ         || ವಂದಿಸುವೆ ||

* * *

ಹರ್ಷದಿಂದ ಹಾಡುವೆ
ನನ್ನೇಸು ನಾಮವ
ಆತನಲ್ಲೆನ್ನಾತ್ಮವು
ಹರ್ಷಿಸುತಿರಲು   || ಹರ್ಷದಿಂದ ||

ದೀನ ದಯಾಳು ನೀನೇ
ಕರುಣಾ ಕೃಪಾಳು ನೀನೇ
ಸತ್ಯಶೀಲ ನೀನೇ
ಸರ್ವವ್ಯಾಪಿ ಸುಂದರನೇ  || ಹರ್ಷದಿಂದ ||

ಬಾದೆ ಪಟ್ಟವ ನೀನೇ
ರಕ್ತ ಸುರಿಸಿದವ ನೀನೇ
ನನ್ನ ಪಾಪಕ್ಕಾಗಿಯೂ
ನನ್ನೇಸು ರಾಜನೇ         || ಹರ್ಷದಿಂದ ||

* * *

ಸತ್ಯಶೀಲ ಪರಮದೇವ
ಕೈ ಬಿಡದೆನ್ನನ್ನು ನಡೆಸು ನೀ
ಕುಜನರ ಸಂಗ ಸೇರದೇ
ಕಾಪಾಡೆನ್ನ ದೇವನೇ      || ಸತ್ಯಶೀಲ ||

ನನ್ನ ಹೃದಯದಿಂ ಯೇಸುವನ್ನೇ
ನಮಿಸುವೇ ನಿನ್ನ ಮಾತ್ರವೇ
ಸ್ತೋತ್ರಕ್ಕೆ ಪಾತ್ರನು ನೀನೊಬ್ಬನೇ
ನಿತ್ಯದೇವನು ನೀನೊಬ್ಬನೇ         || ಸತ್ಯಶೀಲ ||

ಅದ್ಭುತ ಸ್ವರೂಪ ನೀನಲ್ಲವೇ
ಆಲೋಚನಾಕರ್ತ ನೀನಲ್ಲವೇ
ನಿತ್ಯ ಸ್ವರೂಪ ನೀನಲ್ಲವೇ
ಸಮಾಧಾನ ಪರಾಕ್ರಮ ನೀನಲ್ಲವೇ || ಸತ್ಯಶೀಲ ||

* * *

ಸ್ತೋತ್ರಕ್ಕೆ ಪಾತ್ರ ನನ್ನೇಸುವೇ
ಸತ್ಯಸ್ವರೂಪ ನನ್ನೇಸುವೇ
ಜಯ ಜಯವೆಂದು ಹಾಡುವೆ
ಮುಂದೆ ಸಾಗುವೆ ನಾ ಮುಂದೆ ಸಾಗುವೆ     || ಸ್ತೋತ್ರಕ್ಕೆ ||

ದೀನದರಿದ್ರರೊಂದಿಗೆ
ಯೇಸು ಸಂಚರಿಸಿದ
ಪಾಪಿಗಳೆನ್ನದೆ ಪ್ರೀತಿಸಿದ
ಈತನೇ ರಕ್ಷಕ ಸ್ತೋತ್ರಕ್ಕೆ ಪಾತ್ರನು || ಸ್ತೋತ್ರಕ್ಕೆ ||

ಕರುಣೆ ಪ್ರೀತಿಯಿಂ ಮನುಜರನ್ನು
ಪ್ರೀತಿಯಿಂದಪ್ಪಿದನು
ಪಾಪದಿಂ ತುಂಬಿದ ಮನುಜರನ್ನು
ಪ್ರೀತಿಯಿಂ ಸಲಹಿದನು    || ಸ್ತೋತ್ರಕ್ಕೆ ||

* * *

ದೇವರಾದು ಕೊಂಡ ಮನುಜರು
ದೇವರ ಮಕ್ಕಳಾಗುವರು
ಇದು ಸತ್ಯವೋ ? ಮನುಜನೇ
ತಿಳಿದು ನಡೆದುಕೊಂಡೆಯಾ         || ದೇವರಾದು ||

ಕರ್ತನ ಕೋಪಕ್ಕೆ ಗುರಿಯಾಗದೇ
ಅಗ್ನಿ ನರಕಕ್ಕೆ ಗುರಿಯಾಗದೇ
ಆತನನ್ನಾದುಕೊಂಡು ನೀ
ಜೀವನ ಸಾಗಿಸು ಮನುಜನೇ       || ದೇವರಾದು ||

ದುಷ್ಠನ ಬಲೆಗೆ ಬೀಳದೆ
ಜೀವನ ಸಾಗಿಸು ನೀ
ದೈವಿಕ ಬಲವು ಬೇಕಾಗಿದೆ
ಅದು ನಿತ್ಯ ಜೀವದ ಒಲವು          || ದೇವರಾದು ||

* * *

ಭೂಪರ ಲೊಕ ದೊಡೆಯ ನಾದೇಸುವೆ
ನಿನಗೆ ಸ್ತೋತ್ರ ಮಾಡುವೆ ಇಂಪಾದ ಗೀತೆಯು
ಇದುವರೆಗೆನ್ನನ್ನು ಕಾಪಾಡಿದಾತ ಯೇಸುವೇ
ನಿನಗೆ ಸ್ತೋತ್ರ ಮಾಡುವೆ ಯೇಸುವೇ        || ಭೂಪರ ||

ನಿನ್ನ ಕರಿಣಗಳಂದೆನ್ನನ್ನು ಭದ್ರವಾಗಿರಿಸಿದ್ದೀ
ನಿನ್ನ ರೆಕ್ಕೆಗಳಿಂದೆನ್ನನ್ನು ಕಾದು ಕಾಪಾಡಿದ್ದೀ
ನಿನ್ನ ನೆರಳೆನ್ನನ್ನಾವರಿಸಿ ಮುಚ್ಚಿಕೊಂಡಿದೆ
ನಿನಗೆ ಸ್ತೋತ್ರ ಮಾಡುಎ ನನ್ನೇಸುವೇ       || ಭೂಪರ ||

ನಿನ್ನ ಜ್ಞಾನದಿಂದೆನ್ನನ್ನು ಜೀವಿಸ ಕೃಪೆತೋರು
ಇಹಲೊಕ ಸಂಪತ್ತು ಐಶ್ವರ್ಯಜ್ಞಾನ
ಕಸವೆಂದೆಣಿಸುವೆ ನಾ ಹೌದೇಸುವೆ
ನಿನ್ನ ಕೃಪೆತೊರೆಂದು ಸದಾ ಬೇಡುವೆ         || ಭೂಪರ ||

* * *

ಕುಂಬಾರನಾದ ನನ್ನೇಸುವೇ
ನನ್ನನ್ನು ಸೃಷ್ಠಿಸಿದಾತನೇ
ಜೇಡಿಮಣ್ಣಿನಿಂದೆನ್ನನ್ನು
ಉತ್ಪತ್ತಿ ಮಾಡಿದಾತನೇ   || ಕುಂಬಾರ ||

ನಿನ್ನ ಕೆಲಸಕ್ಕೆ ಬಾರದ
ಈ ಪಾತ್ರೆಯನ್ನು ನಿನ್ನ
ಕೆಲಸಕ್ಕಾಗಿ ಉಪಯೋಗಿಸು
ನನ್ನೇಸುವೇ ಈ ಪಾತ್ರೆಯ || ಕುಂಬಾರ ||

ಇಹಲೋಕ ಚಿಂತೆ ಪರಿಹರಿಸು
ಕೊಳಕಾದ ಈ ಪಾತ್ರೆಯನ್ನು
ಶುದ್ಧಪಡಿಸೆನ್ನಾತ್ಮಾನೇ
ಉತ್ತಮವಾಗಿ ಬಳಸಯ್ಯ  || ಕುಂಬಾರ ||

ಕುಂಬಾರ ನಾದುಕೊಂಡ ಪಾತ್ರೆ
ನಾನಾಗ ಬಾರದೇ ಯೇಸುವೇ
ನನ್ನನ್ನು ಪರಿವರ್ತಿಸು
ನೀ ನೆನ್ನೆ ಸೃಷ್ಠಿಕರ್ತನೊಬ್ಬನೇ      || ಕುಂಬಾರ ||

* * *

ಎಂಥಾ ಹಾಡನು ಹಾಡುವೆನು
ದೇವಾ ನಿನ್ನನ್ನು ಸ್ತುತಿಸಲೋ
ನನ್ನ ಪಾಪಕ್ಕಾಗಿ ಹಾಡಲೋ
ನಿನ್ನ ಜನನಕ್ಕಾಗಿ ಹಾಡಲೋ       || ಎಂಥಾ ||

ಪ್ರತಿ ನಿತ್ಯವೂ ಸ್ತುತಿಗೀತೆ ಹಾಡಲೇ
ನಿನ್ನ ಮಹಿಮೆ ವರ್ಣಿಸಿ ಹಾಡಲೇ
ಧೂಪಯಜ್ಞ ಬೇಡದ ಸತ್ಯದೇವನೇ
ನನ್ನ ಪಾಪ ಕ್ಷಮಿಸೆಂದು ಬೇಡಿ ಹಾಡುವೇ    || ಎಂಥಾ ||

ಪುನರುಥಾನವೋ ಮರಣದಿನವೋ
ಗೀತೆ ಹಾಡಲು ಸಂಜೆ ಮುಂಜಾನೆಯೋ
ನರರವಾಸ ಬೇಕಿಲ್ಲ ಎನಗೆ ದೇವಾ
ಸಾಕು ಸಾಕಯ್ಯಾ ನಿನ್ನ ಪಾದವೊಂದೇ       || ಎಂಥಾ ||

ಪಾಪಕ್ಕಾಗಿಯೇ ಜನಿಸಿದಾತನೇ
ಹಪೋಲ್ಲಾಸ ಗೀತೆ ಹಾಡಲೇ
ಮನವು ದುಃಖದಿಂ ತುಂಬಿರಲು
ಆತ್ಮವ ಸ್ವೀಕರಿಸೆಂದು ಹಾಡುವೆ    || ಎಂಥಾ ||

* * *

ಯೇಸು ನನ್ನನ್ನು ಪ್ರೀತಿಯಿಂದ
ಕಡಿವಾಣ ಹಾಕಿ ಎತ್ತ ನೋಡದಂತೆ
ನನ್ನನ್ನು ಮೈಲೆತ್ತಿದನು
ಹಾ ಹಲ್ಲೆಲೂಯ  || ಯೇಸು ||

ಕರವನ್ನು ಚಾಚಿ ನನ್ನನ್ನು ಕರೆದು
ಸಂತೋಷ ನೀಡುವನು
ಎನ್ನಾತ್ಮಾಕ್ಕಾದ ಆನಂದವು
ಎಷ್ಟೆಂದು ಹೇಳಲಾಗದು   || ಯೇಸು ||

ಸ್ತುತಿಗೆ ಪಾತ್ರನಾದೆನ್ನೇಸುವೇ
ನಿನ್ನೆನ್ನ ಆಧಾರವಲ್ಲವೇ
ಹೀಗೆನ್ನ ಜೀವನದಲ್ಲಿ ನೀನು
ಒಂದು ನೆಲೆಯಾಗಿರು      || ಯೇಸು ||

* * *

ಹಾ ನನ್ನ ಭಾಗ್ಯ ಯೇಸುವೇ
ಆತನೆನ್ನ ಉಲ್ಲಾಸವೇ
ಆ ಜೀವನ ಬಹುಪಾವನ
ಎಂದೆಂದೂ ಇರುವುದವನಲ್ಲೇ       || ಹಾ ನನ್ನ ||

ದುಷ್ಠನ ಶೋಧನೆ ಬಂದರೂ
ಆತನೆನ್ನನ್ನು ಕಾಯುವ
ಕರುಣಾಳು ದಯೆತೋರಿ ನಿಂತಿಹ
ಭಯಪಡೆನು ನಾನೆಂದಿಗೂ          || ಹಾ ನನ್ನ ||

ದುಷ್ಠನೆನ್ನನ್ನು ನುಂಗಲು
ಕಾದಿರುವ ಕ್ಷಣದಲ್ಲೇ
ಯೇಸುವನ್ನು ಪ್ರಾರ್ಥಿಸಲು
ಉತ್ತರ ಕೊಟ್ಟೆನ್ನನ್ನಾದರಿಸಿದ        || ಹಾ ನನ್ನ ||

* * *

ಪಾಪದ ಮಾರ್ಗ ಸರಿಪಡಿಸಲು
ನನ್ನೇಸು ನಮಗಾಗಿ ಜನಿಸಿದ
ಇಹದಲ್ಲಿ ಅವನೆನ್ನ ಜತೆಯಿರಲು
ನನಗೇನು ಕೊರತೆಯುಂಟು         || ಪಾಪದ ||

ಆತನ ವಾಕ್ಯ ಬೆಳಕಾಗಿರಲು
ನಾ ಮಾರ್ಗ ತಪ್ಪಲಾರೆನು
ಆತನ ವಾಕ್ಯ ನನ್ನೊಳಿರಲು
ನಿಜವಾದ ಮಾರ್ಗ ಆತನೇ          || ಪಾಪದ ||

ಮನುಜನ ಪ್ರೀತಿ ಬೇರಕಿಲ್ಲವು
ಕರ್ತನ ಪ್ರೀತಿಯೇ ಮಿಗಿಲಾದದು
ಇಹದಲ್ಲಿ ಎಲ್ಲಾ ನಿಗಲಾರದು
ಪರದಲ್ಲೇ ಎಂದೂ ಸಿಕ್ಕುವುದು      || ಪಾಪದ ||

* * *

ಪರಲೋಕ ತಂದೆ ಶಾಶ್ವತವು
ಭೂಲೋಕ ತಂದೆ ಕ್ಷಣಮಾತ್ರವು
ಆತನೆನ್ನ ನೆಷ್ಠರವರೆಗೂ ಕಾಪಾಡುವ
ಪರಲೋಕ ತಂದೆ ಅಂತ್ಯವರೆಗೂ ಕಾಪಾಡುವ         || ಪರಲೋಕ ||

ಇಹದಲ್ಲಿ ಒಂದು ಕ್ಷಣ ಮಾತ್ರವು
ತಂದೆ ತಾಯಿ ಕ್ಷಣ ಮಾತ್ರವೂ
ಸಹೋದರ ಸಹೋದರಿಯರೆಲ್ಲ
ಕ್ಷಣದಲ್ಲಿ ಮಾಯವಾಗುವರು         ಪರಲೋಕ

ನನ್ನನ್ನು ಸೃಷ್ಠಿಸಿದಾತನು
ನನಗಾಗಿ ಕಾದುಕೊಂಡಿರುವನು
ನಾನೆಲ್ಲ ತ್ಯಜಿಸಿ ಆತನ ಹಿಂದೆ
ಹಿಂಬಾಲಿಸ ಒಲಪಡಿಸೆನ್ನಾತ್ಮನೇ   ಪರಲೋಕ

* * *

ಆಧಾರಕನೇ ದೂರವಾಗಿರದೇ
ಬಂದೆನ್ನನ್ನು ಆಧರಿಸು
ನನ್ನೇಸುವೇ ನೀನೆನ್ನನ್ನು
ಕೈಬಿಡದೇ ಮುಂದೆ ಸಾಗಿಸು        || ಆಧಾರಕನೇ ||

ಸಂತೋಷದಲ್ಲಿಯೂ
ದುಃಖದಲ್ಲಿಯೂ
ನಿನ್ನನ್ನು ಮರೆಯುವೆನೇ ?
ಎಂದೆಂದೂ ಇಲ್ಲವೂ       || ಆಧಾರಕನೇ ||

ನೀನೆನ್ನ ನೆರಳಾಗಿರುವೆ
ನನ್ನನ್ನು ದಿನ ನಿತ್ಯಕಾಯುವೆ
ನಿನ್ನನ್ನು ನಂಬಿದವರು
ರಕ್ಷಣೆ ಹೊಂದುವರು       || ಆಧಾರಕನೇ ||

* * *

ಓ ಕರ್ತನೇ ನಡಿಸೆನ್ನನ್ನು
ನಿನ್ನ ಮಾರ್ಗದೊಳು
ಬಿಡಿಸೆನ್ನನ್ನು ದುರ್ನೀತಿಯ
ಮನುಜರ ಮಧ್ಯದಿಂದ     || ಓ ಕರ್ತನೇ ||

ನನ್ನೇಸು ನಾವಿಕನಾಗಿ
ದೋಣಿಯ ಮುಂದೆ ಸಾಗಿಸು
ಅಭಯ ದಿಂದಿರುವೆನು
ನನ್ನೇಸು ಜತೆಯಿರಲು     || ಓ ಕರ್ತನೇ ||

ಅಲೆಗಳು ಬಂದರೂ
ನನ್ನೇಸು ಕಡೆಯುವನು
ದೋಣಿಯು ಮುಳುಗಲು
ನನ್ನೇಸು ಕಾಪಾಡುವ      || ಓ ಕರ್ತನೇ ||

* * *

ಕರುಣಾಳು ದೇವಾ ರಕ್ಷಕ ನೀನೇ
ಕರುಣಾಳು ಸ್ವಾಮಿ ಶ್ರೀ ಯೇಸು ಸ್ವಾಮೀ    || ಕರುಣಾಳು ||

ನನ್ನನ್ನಷ್ಟೋ ಪ್ರೀತಿಸಿದ್ದೀ
ನಿನ್ನ ಪ್ರೀತಿಗೆ ನಾಪಾತ್ರನಲ್ಲವೇ
ನಿನ್ನ ಪ್ರೀತಿಯು ಸತ್ಯವಾದದ್ದು
ನಿನ್ನ ನೀತಿಯು ಶಕ್ತವಾದದ್ದು        || ಕರುಣಾಳು ||

ಪರಿಮಳ ತುಂಬಿದೆ
ನನ್ನೇಸು ನಾಮವು
ಎಷ್ಠೆಂದು ವರ್ಣಿಸಲಿ
ನನ್ನೇಸುವಿನ ನಾಮವನು  || ಕರುಣಾಳು ||

ಹಸಿವಿನಿಂ ದಾಹದಿಂ
ಬಳಲಿದರೂ ಯೇಸು
ನಾಮ ಪರಿಹರಿಸ್ವದು
ಶ್ರೀ ಯೇಸುವೇ ನಿನ್ನನಾಮವು       || ಕರುಣಾಳು ||