ಧರಣಿಯ ಭಾಸ್ಕಾರನೇ ಹೇಗೆ ನಾ ?
ನಿನ್ನನ್ನು ಸ್ತುತಿಸಲಿ
ನಿನಗೊಪ್ಪಿನ ಯಜ್ಞ ಯಾವುದಯ್ಯಾ
ತಿಳಿಸೆನ್ನ ದೇವನೇ || ಧರಣಿಯ ||
ತೈಲದೂಪಾರತಿ ನಿನಗೊಪ್ಪುವದೋ
ತಂತಿ ವಾದ್ಯ ಕೊಳಲು ವೀಣೆಯಿಂದ
ಸೌಮ್ಯವಾದ ಗೀತೆಯಿಂದ
ಮಹಿಮೆ ಪಡಿಸುವೆ ನಿನ್ನ || ಧರಣಿಯ ||
ಸೌಮ್ಯರೂಪನೇ ಕಯಕಾಶೀಲನೇ
ಕುಗಿದ ಮನಸ್ಸೇ ನಿನಗೊಪ್ಪವ ಯಜ್ಞಾ
ಪಶ್ಚಾತ್ತಾಪದಿಂ ಜಜ್ಜಿಹೋದ
ಈ ಮನವನ್ನು ಸ್ವೀಕರಿಸೈ || ಧರಣಿಯ ||
* * *
ಓ ಗುರುವೇ ನಿನ್ನನ್ನು
ಹಿಂಬಾಲಿಸದೇ ಅನಾಥಳಾದೆ
ಇಹದಲ್ಲಿ ನಿನ್ನ ಬಿಟ್ಟು
ಯಾರಿಹರೆನಗೆ ಓ ಗುರುವೇ || ಓ ಗುರುವೇ ||
ಸತ್ಯ ವಾಕ್ಯವ ಭೋದಿಪರಿಲ್ಲ
ನಿಷ್ಠೆಯಿಂದ ಪಾಲಿಪರಿಲ್ಲ
ಮನ ಬಂದಂತೆ ನಡೆವರು ಇಂದು
ದೈವ ಕೋಪಕೆ ಗುರಿಯಾಗ್ವರಂದು || ಓ ಗುರುವೇ ||
ಸತ್ಯವಾಕ್ಯ ವಸಡ್ಡೆ ಮಾಡ್ವನೇ
ಸತ್ಯವಾಕ್ಯವ ನಿಂದೇಸ್ವೀಕರಿಸು
ನಿತ್ಯಜೀವ ಬೇಕಿದ್ದಾರೆಮಗೆ
ಸತ್ಯವಾಕ್ಯವವನನ್ನುಸರಿಸು || ಓ ಗುರುವೇ ||
* * *
ಆತ್ಮ ಸೃಷ್ಠಿಸಿದ ಕರ್ತನ ಸ್ಮರಿಸು
ದೇಹಾತ್ಮದಿಂದ ಸ್ತೋತ್ರ ಸಲ್ಲಿಸು
ಆತನ ಕೃಪೆಯು ಹೇರಳವಾಗಿದೆ
ಆತನಾಶಿರ್ವಾದ ದುಂತುಂಬಿರುವೆ || ಆತ್ಮ ಸೃಷ್ಠಿ ||
ಕರ್ತನ ಹಾದಿ ತಪ್ಪದೆ ನಿತ್ಯವೂ
ಪ್ರಾರ್ಥನೆ ಬಲದಿಂ ತುಂಬಿಸು
ಇಹದ ಚಿಂತೆ ಆತನಲ್ಲಿಟ್ಟು
ನಿಶ್ಚಿಂತೆಯಿಂದ ಜೀವಿಸು || ಆತ್ಮ ಸೃಷ್ಠಿ ||
ದೇಹವೆಂಬ ಬಂಡೆಯಲ್ಲಿ
ಕ್ರಿಸ್ತನು ಜೀವಿಸರಲು
ದುಷ್ಠನ ಶೋಧನೆಗಳ
ಜೈಸಲು ಶಕ್ತಿ ನೀಡುವನು || ಆತ್ಮ ಸೃಷ್ಠಿ ||
* * *
ಯೇಸುವ ನೋಡಲೆಂದು
ದೃಷ್ಠಿಯ ಕೊಟ್ಟ ದೇವನೇ
ನಿನ್ನನ್ನು ಹಾಡಿ ಹರಸಲೆಂದು
ಬಾಯನ್ನು ಕೊಟ್ಟ ದೇವನೇ
ನಿನಗೆ ವಂದನೆ ನಿನಗೆ ವಂದನೇ
ನೀವಾಸ ಮಾಡಲೆಂದು ಹೃದಯ ಪಾಲಿಸಿದೆ
ಅಂದವಾದ ಪುಷ್ಪದ ವಾಸನೆ ಮೂಸಲು
ಮೂಗನು ಪಾಲಿಸಿದೆ ನಿನ್ನ ವಾಕ್ಯ
ಕೇಳಲೆಂದು ಕಿವಿಯನ್ನು ಪಾಲಿಸಿದೆ
ನಿನಗೆ ವಂದನೆ ನಿನಗೆ ವಂದನೇ
ನಿನ್ನ ನಮಸ್ಕರಿಸಲು ಕೈಗಳನು
ಜ್ಞಾನವ ಪಾಲಿಸಿದೆ ನಿನ್ನ ತಿಳಿಯಲು
ನಿನ್ನ ಸುವಾರ್ತೆ ಸಾರಲೆಂದು
ಕಾಲ್ಗಳ ಪಾಲಿಸಿ ಇದರೊಡೆಯನೀನೈ
ನಿನಗೆ ವಂದನೆ ನಿನಗೆ ವಂದನೇ
ಮುಪ್ಪಿನಲ್ಲೂ ನೀನೇ ಆಧಾರಾ
ಸ್ವರವೆತ್ತಿ ನಿನ್ನನ್ನಾರಾಧಿಸುವೆ
ಕರಗಳಂ ನಿನ್ನನ್ನು ವಂದಿಸುವೆ
ಆತ್ಮವ ನಿನ್ನ ಕೈಗೆ ಒಪ್ಪಿಸುವೆ
ನಿನಗೆ ವಂದನೆ ನಿನಗೆ ವಂದನೇ
* * *
ಬಾಯಾರಿದ ಜಿಂಕೆಯಂ
ನೀರಿನ ತೊರೆಗಳನ್ನು ಹೇಗೋ
ಹಾಗೆಯೇ ನನ್ನ ಆತ್ಮವು
ನಿನ್ನನ್ನು ಬಯಸುವುದು || ಬಾಯಾರಿದ ||
ಚೈತನ್ಯ ಸ್ವರೂಪನೇ
ನಿನಗಾಗಿ ಹಾರೈಸುವೇ
ನಿನ್ನ ಸನ್ನಿಧಿಯೊಳ್
ಸೇರ ಬಯಸುವೆ || ಬಾಯಾರಿದ ||
ನೀ ಕುಗ್ಗಿ ಹೋದೆಯಾ
ಹೀಗೆ ವ್ಯಥೆಪಡುವೆನಾ
ಯೇಸುವೇ ನಿರೀಕ್ಷಿಸು
ಆತನೇ ನಿನ್ನರಕ್ಷಕನು || ಬಾಯಾರಿದ ||
* * *
ಆದಿಕಾಂಡ ವಿಮೋಚನಕಾಂಡ
ಯಾಜಿಕಕಾಂಡ ಅರಣ್ಯಕಾಂಡ
ಧರ್ಮೋಪದೇಶ ಯೆಹೋಶುವ
ನ್ಯಾಯಸ್ಥಾಪಕರು ರೂತಳು || ಆದಿಕಾಂಡ ||
ಒಂದು ಸಮಾವೇಲ, ಎರಡು ಸಮಾವೇಲ
ಒಂದನೇ ಅರಸು, ಎರಡನೇ ಅರಸು
ಒಂದು ಪೂರ್ವಕಾಲ ವೃತ್ತಾಂತ
ಎರಡನೇ ಪೂರ್ವಕಾಲ ವೃತ್ತಾಂತ || ಆದಿಕಾಂಡ ||
ಎಜ್ರನು, ಯೆರೆಮಿಯ, ಎಸ್ತೇರಳು
ಯೋಬ, ಕೀರ್ತನೆ, ಜ್ಞಾನೋಕ್ತಿ, ಪ್ರಸಂಗಿ
ಪರಮಗೀತ, ಯೇಶಾಯ, ಯೆರೆವಿರಾಯ
ಪ್ರಲಾಪ, ಎರುಹೆಚ್ಕೇಲ, ದಾನಿಯೇಲ || ಆದಿಕಾಂಡ ||
ಹೋಶೇಯ, ಯೋಪೇಲ, ಆಮೋಷ, ಓಬದ್ಯ
ಯೋನ, ಮಿಕ, ನಹೂಮ ಹಬಕ್ಕೂಕ
ಚೆಫನ್ಯ, ಹಗ್ಗಾಯ, ಚೆಕರ್ಯ
ಮಲಾಕಿಯ, ಶುದ್ಧಾಗ್ರಂಥದ ಪರಿಚಯ || ಆದಿಕಾಂಡ ||
* * *
ಮತ್ತಾಯ, ಮಾರ್ಕ, ಲೂಕ ಯೋಹಾನ
ಅಪೋಸಲಕಕೃತ್ಯೆ ರೋಮಾಪುರದವರಿಗೆ || ಮತ್ತಾಯ ||
ಒಂದು ಕೊರಿಂಥ, ಎರಡನೇ ಕೊರಿಂಥ
ಗಲಾತ್ಯ ಎಫೆಸ, ಪಿಲಿಪ್ತಿ ಕೊಲೊಸ್ಸೆ
ಒಂದು ದೆಸಲೋನಿಕ, ಎರಡನೇ ಥೆಸಲೋನಿಕ
ಒಂದನೇ ತಿಮೋತಿ ಎರಡನೇ ತಿಮೋತಿ || ಮತ್ತಾಯ ||
ತೀತ, ಪಿಲೆಮೋನ ಇಬ್ತಿಯ, ಯಾಕೋಬ
ಒಂದನೇ ಪೇತ್ರ ಎರಡನೇ ಪೇತ್ರ
ಒಂದನೇ ಯೋಹಾನ ಎರಡನೇ ಯೋಹಾನ
ಮೂರನೇ ಯೋಹಾನ, ಯೂದ ಪ್ರಕಟನೆ || ಮತ್ತಾಯ ||
* * *
ಶಿಲುಬೆಯ ದೃಷ್ಟಿಸು ಓ ಮನುಜನೇ
ನಿನ್ನ ಪಾಪ ಪರಿಹಾರವಾಯಿತು
ನಿನ್ನ ಪಾಪ ಕಡುಕೆಂಪಾದರೂ
ಹಿಮದಂರೆಯೇ ಕಂದ್ದಾದಾಗ್ವದು || ಶಿಲುಭೆಯ ||
ಇಂತಾ ಒಳ್ಳೇ ಯೇಸು ಸಿಕ್ಕಿದನೆಮಗೆ
ಪ್ರೀತಿ ಕನಿಕರದಿಂ ರಕ್ತಸುರಿಸಿದನು
ಬಾಸುಂಡೆಯಿಂದೆಮಗೆ ಗುಣವಾಯಿತು
ನಿನ್ನ ದೃಷ್ಠಿ ಶಿಲುಬೆ ಮೇಲಿರಲಿ || ಶಿಲುಭೆಯ ||
ಕೈಕಾಲುಗಳ ಮೊಳೆಯಿಂ ಜಡಿದರು
ರಕ್ತ ಚಿಮ್ಮುತಾ ಪಕ್ಕೆಯಿಂದೊರಬರಲು
ಇಂತಾನೋವನು ನೀನನುಭವಿಸುವಿಯಾ
ಜಗದ್ರಕ್ಷಾಕಾ ಯೇಸು ಅನುಭವಿಸಿದ || ಶಿಲುಭೆಯ ||
* * *
ಯೇಸು ಕರ್ತನು ನನಗಾಗಿಯೂ
ನಿನಗಾಗಿಯೂ ಪರರಿಗಾಗಿಯೂ
ಎಲ್ಲರಿಗಾಗಿಯೂ ಜನಿಸಿದನು
ಇಂತ ಮಿತ್ರನು ಬೇರಾರು ಜನಿಸಿಲ್ಲವು || ಯೇಸು ಕರ್ತನು ||
ಪರಲೋಕ ವೈಭವ ಆಶೆಯನ್ನು
ನಮ್ಮೆಲ್ಲರಿಗಾಗಿ ತ್ಯಜಿಸಿದನು
ಮುಳ್ಳಿನ ಕಿರೀಟ ತಲೆಯಲ್ಲಿ ಧರಿಸಿ
ಬೆದರಂತೆ ರಕ್ತವ ಸುರಿಸಿದನು || ಯೇಸು ಕರ್ತನು ||
ನಿಂದಾಪಮಾನ ಸಹಿಸಿದನು
ಪರಿಹಾರಸ್ಯಕ್ಕೆ ಗುರಿಯಾದನು
ಮುಖದಲ್ಲಿ ಉಗುಳನ್ನು ಸಹಿಸಿದನು
ನನಗಾಗಿ ನೀ ಪಟ್ಟ ಬಾಧೆಯಿದಾ || ಯೇಸು ಕರ್ತನು ||
ರೋಂ ರಾಜ್ಯಧರಸ ವಿಲಾತನ
ಬಳಿಯಲ್ಲಿ ಕೊಂಡೊಯ್ದಾರು
ಜನರೆಲ್ಲ ಅರಸನ ನ್ಯಾಯ ವಿಚಾರಿಸಿ
ಬಿಂಬನ ಬಿಡುಗಡೆ ಮಾಡೆಂದರು || ಯೇಸು ಕರ್ತನು ||
* * *
ದೇವಾದಿ ದೇವಾ
ಸ್ತೋತ್ರಕ್ಕೆ ಪಾತ್ರನೇ
ಕರುಣಾಕರನೇ ನೀನು
ನಿನ್ನ ದಯೆ ಬೇಕೆನಗೆ || ದೇವಾದಿ ದೇವಾ ||
ಧರಣಿಯ ಬಾಋವ ಹೊತ್ತವ ನೀನೇ
ಪಾಪದ ಭಾರವ ಹೊತ್ತ ನೀನೇ
ಈ ಮರ್ಮವರಿಯದ ಮನುಜರು
ತೆಗಳಿದರು ನಿನ್ನ ಪರಿಹಾಸ್ಯದಿ || ದೇವಾದಿ ದೇವಾ ||
ವೈದ್ಯಮ ನೀನೇ ಅರಸನು ನೀನೇ
ನಿನ್ನ ಬಿಟ್ಟರೆ ಬೇರೆ ಮಾರ್ಗವಿಲ್ಲ
ನನಗಾಗಿ ತಾಳಿದ ಶಿಕ್ಷೆ ನನ್ನೇಸು
ಇಂತಹ ಮಿತ್ರನ ನಾನೆಂದೂ ಕಂಡಿಲ್ಲ || ದೇವಾದಿ ದೇವಾ ||
* * *
ಮದಲಿಂಗನು ಎಂಬಂತೆಯೇ
ನನ್ನೇಸು ಬರುವನು
ಮದುಗಿತ್ತಿ ಎಂಬಂತೆ
ನಾ ಸಿದ್ಧಲಾಗಿರುವೆನು || ಮದ ||
ಹತ್ತು ಜನ ಕನ್ಯಯರು
ಮದಲಿಂಗ ನೆದುರಾಗಲೆಂದು
ಎಣ್ಣೆಯ ಸಿದ್ಧಮಾಡಿದರು ದೀಪದಿ
ದೀಪಕ್ಕೆಣ್ಣೆ ಸಾಲದೆಂದರು ಐವರು || ಮದ ||
ದೀಪದಣ್ಣೆ ಇಲ್ಲದ ಐವರು
ಮದಲಿಂಗ ಬರಲಿಕ್ಕೆ
ಸಮಯವಿದೆ ಎಂದು ತಿಳಿದು
ಕನ್ಯರು ತೂಕಡಿಸಿದರು || ಮದ ||
ಮದಲಿಂಗ ಬಂದನೆಂದು ತಿಳಿದ
ಐವರು ಕನ್ಯರು ಸಿದ್ಧವಾಗಿ
ದೀಪದಲ್ಲೆಣ್ಣೆ ಇಲ್ಲದ ಕನ್ಯರು
ಬಳಿಸಾರಿ ಕೇಳಿದಕ್ಕಾವರಿಲ್ಲವೆಂದರು || ಮದ ||
* * *
ಜಗಜ್ಯೋತಿ ಯೇಸುವೇ ರಕ್ಷಕನೇ
ನಮ್ಮನ್ನೆಲ್ಲಾ ಆಧರಿಸುವವನೇ || ಜಗಜ್ಯೋತಿ ||
ಮನುಜರ ಹಿಂಬಾಲಿಸಿ
ಬೆದರಿಕೆ ಮಾತುಗಳಿಂದ
ಸೋಲನ್ನೇಕೆ ಕಾಣಿವೆ
ಸತ್ಯವಾದ ಮಾತಿದು || ಜಗಜ್ಯೋತಿ ||
ಭರವಸೆ ಮನುಜರಲ್ಲಿಟ್ಟಿರೆ
ಚಿಂತೆ ದುಃಖವ ಕಾಣವೆ
ಯೇಸು ನಂಬಿದರೆ
ದುಃಖ ಚಿಂತೆ ಪರಿಹರಿಸುವನು || ಜಗಜ್ಯೋತಿ ||
* * *
ಯೆಹೋವನೇ ನಿನ್ನ ಸಿಂಹಾಸನಾಕಾಶವು
ನಿನ್ನ ಪಾದ ಪೀಠ ಭೂಲೋಕವು
ನಾನೇನು ನಿನಗೆ ಸಲ್ಲಿಸಲಿ
ಭೂಲೋಕವೆಲ್ಲ ನಿನ್ನಾದಾಗಿದೆ || ಯೆಹೋವನೇ ||
ತಾರೆಗಳೆಲ್ಲವು ನಿನ್ನ ಮಹಿಮೆ
ಸೂರ್ಯಚಂದ್ರರು ನಿನ್ನ ಸೃಷ್ಠಿ
ಭೂಪರಲೋಕವೆಲ್ಲ
ನಿನ್ನ ಮಹಿಮೆಗಾಗಿ ಎಲ್ಲವೂ || ಯೆಹೋವನೇ ||
ಸೆರಾಫಿಯರು ಶುದ್ಧ ಶುದ್ಧನೆಂದು
ನಿನ್ನನ್ನು ಹೊಗಳುತ್ತಿರವರು
ನಿನ್ನ ಕೈಕೆಲಸಕ್ಕೆ ಕೊಂಡಾಟ
ಹೇಳುತ್ತ ಸ್ತೋತ್ರಸುವೆನು || ಯೆಹೋವನೇ ||
ಪರಲೋಕದಲ್ಲಿ ಆಸೀನನಾಗಿ
ನನ್ನನ್ನು ನೀ ನೋಡುತ್ತಿರೆ
ನಿನ್ನ ರಾಜ್ಯ ಸ್ಥಾಪಿಸಲೆಂದು
ಭೂಲೋಕಕ್ಕೆಂದು ನೀ ಬರುವೆ || ಯೆಹೋವನೇ ||
* * *
ಜಗವೆಲ್ಲ ನಿದ್ರಿಸುತ್ತಿದೆ
ಏಳು ರಕ್ಷಕನೇ
ತಾಮಸ ವೇತಕೆ ?
ನಿನ್ನ ಬರೋಣಕ್ಕೆ || ಜಗವೆಲ್ಲ ||
ಪಾಪಿಗಳೆಲ್ಲ ನಿನ್ನನಂಬದೆ
ತಿರಸ್ಕಾರದಿಂ ಜೀವಿಸುತ್ತಾ
ಲೌಕೀಕ ಜೀವನವೇ
ಅವರ ಆಡಂಬರವೇ || ಜಗವೆಲ್ಲ ||
ನಿನ್ನ ವಾಕ್ಯ ಕೇಳಿದರೂ
ಕೇಳಿಸದಂತೆ ಇರುತ್ತಾ
ಇಹಲೋಕ ಚಿಂತೆಯಲ್ಲೇ
ಕಳೆಯುವರವರು || ಜಗವೆಲ್ಲ ||
ನಿನ್ನ ಕೋಪದಾಗ್ನಿಯ
ನಮ್ಮ ಮೇಲೆ ತೋರಿಸದೆ
ತಿಳಿಯದೇ ಮಾಡಿದ ಪಾಪ
ಕ್ಷಮಿಸು ವಿಮೋಚಕನೇ || ಜಗವೆಲ್ಲ ||
* * *
ಮೆಸ್ಸೀಯನು ಬರುವನೆಂದು
ಸಮಾರ್ಯ ಸ್ತ್ರೀ ಕಾದಿಹಳು
ಮೆಸ್ಸೀಯನೆಂದು ಬಾರನೇ
ನನ್ನೇಸು ಮೆಸ್ಸೀಯ ಬಂದೇ ಬರುವ || ಮೆಸ್ಸೀಯನು ||
ಸಮಾರ್ಯಸ್ತ್ರೀ ನೀರನ್ನು ಸೇದಲು
ಬಾವಿಯ ಬಳಿ ಬಂದಿಹಳು
ಪರಿಚಯವಿಲ್ಲದ ವ್ಯಕ್ತಿಯು
ಬಾವಿಯ ಬಳಿ ಬಂದು ಕುಳಿತಿಹ || ಮೆಸ್ಸೀಯನು ||
ಆಯಾಸದಿಂ ನೀರಡಿಕೆಯಿಂ
ಆಕೆಗೆ ನೀರನ್ನು ಕೊಡೆಂದನು
ಅಮ್ಮಾ ನನಗೆ ಬಹಳ ಬಾಯಾರಿಕೆ
ಕುಡಿಯಲು ನೀರನ್ನು ತಾ ಎಂದನು || ಮೆಸ್ಸೀಯನು ||
ಸಮಾರ್ಯ ಸ್ತ್ರೀ ನೀನಾರೆಂದು ಕೇಳಲು
ಬರಬೇಕಾದ ಮೆಸ್ಸೀಯನೆಂದನು
ನೀರನ್ನು ಸಂತೋಷದಿಂದ ಕೊಟ್ಟು
ಮೆಸ್ಸೀಯ ಬಂದನೆಂದು ಸಾರಿದಳೂರಲ್ಲಿ || ಮೆಸ್ಸೀಯನು ||
* * *
ನನ್ನೇಸು ಗುರುಯೇಸು
ನಿನಗೆ ಎಂಥ ಹೆಸರು
ನಿನ್ನೆಸರು ಯಾರಿಗೂ ಇರಲಿಲ್ಲ
ಯೇಸು ಎಂಬ ನಾಮ ಪರಿಶುದ್ಧವು || ನನ್ನೇಸು ||
ಧರಣಿಯ ಭಾಸ್ಕಾರ ಎಂದರು
ದಿವ್ಯಕುವರ ಎಂದರು
ನಿತ್ಯರಾಜನೇ ನಿರ್ಮ್ಮಲರಾಜನೇ
ಮೋದಪತಿ ಮೆಸ್ಸೀಯನೇ || ನನ್ನೇಸು ||
ರಬ್ಬೂನಿ ಎಂದರೆ ಗುರುವೇ
ಇಸ್ರಾಯೇಲ್ ಕುಲದವನೇ
ದಾವೀದ ವಂಶದ ಚಿಗುರೇ
ಇಮ್ಮಾನುವೇಲ ನೀನಲ್ಲವೇ || ನನ್ನೇಸು ||
ಕ್ರಿಸ್ತನೇ ಯೇಸುವೇ
ರಕ್ಷಕನೇ ಪರಿಶುದ್ಧಾತ್ಮನೇ
ವಿಜಯರಾಜ ಸುಜನಗ್ರಾಜ
ನನ್ನೇಸು ರಕ್ಷಕ ನೀನಲ್ಲವೇ || ನನ್ನೇಸು ||
* * *
ದೇವರೇ ನಿನ್ನ ದ್ಯಾನವು
ಪವಿತ್ರವೇ ಪವಿತ್ರವು
ನನ್ನ ಸಮಯವೆಲ್ಲವು
ನಿನಗೆ ಅರ್ಪಿಸುವೆನು || ದೇವರೇ ||
ನನ್ನ ಜೊತೆ ನೀ ನೆರಳಿನಂತೆ
ಸದಾಕಾಲವೂ ಜೊತೆ ನೀನಿರುವೆ
ದುಷ್ಠನ ಶೋಧನೆಗೆ
ಬೀಳದಂತೆನ್ನಾ ಕಾಯುವಿ || ದೇವರೇ ||
ಬಾಲ್ಯ ಯೌವ್ವನವೆಲ್ಲವು
ಮಾಯವೇ ಮಾಯವು
ಮುಪ್ಪಿನಲ್ಲಿಯೂ ನೀನೆನ್ನಾಶ್ರಯ
ಫಲಭರಿತವಾದದ್ದು || ದೇವರೇ ||
* * *
ದುಃಖದ ವೇಳೆಯಲ್ಲಿ
ನನ್ನೇಸು ಜೊತೆಯಿರುವ
ಕಣ್ಣೀರ ಒರೆಸಿ ಸಂತೈಸುವ
ಹಾ ಹಲ್ಲೆಲೂಯಾ ಹಲ್ಲೆಲೂಯಾ || ದುಃಖದ ||
ಸಮಾಧಾನ ಪಡೆಯಲು
ಕ್ರಿಸ್ತನ ವಾಕ್ಯವನ್ನು
ನನ್ನೇಸು ನನ್ನನ್ನು
ಸಂತೈಸಿ ಸಮಾಧಾನ ಕೊಡುವ || ದುಃಖದ ||
ನನ್ನ ದುಃಖವನ್ನು ತಿಳಿದಾತ
ನೀನೇ ಹಿತ ರಕ್ಷಕನು
ದುಃಖವ ನೀಗಿಸಿ ನನ್ನನ್ನು
ಆತನೇ ಸಂತೋಷಪಡಿಸುವ || ದುಃಖದ ||
Leave A Comment