ಆತ್ಮೀಕ ಧ್ಯಾನ
ಇಂಪಾದ ಗಾನ
ಕರ್ತನ ಗಾನ
ಸಂತೋಷ ಸುಧಿನ        || ಆತ್ಮೀಕ ||

ನೋಹನ ದಿನಗಳಂತೆ
ಸೋದೋಮ್ ಗೋಮೋರಾ
ಬಾಬಿಲೋನಿನ ಪಾಪಗಳು
ಇಂದು ಜಗತ್ತೆಲ್ಲಾ ತುಂಬಿದೆ         || ಆತ್ಮೀಕ ||

ಪಾಪಗಳ ತುಂಬಿದೀಲೋಕದಲ್ಲಿ
ದೇವರ ಕೋಪರೌದ್ರಗಳು
ಸುರಿಸಲ್ಪಡುವ ದಿನಗಳು
ಸಮೀಪವಾಗಿದೆ ಓ ಮನುಜನೇ     || ಆತ್ಮೀಕ ||

ಶಾರೀರಿಕವಾದ ಚಿಂತೆ ಏಕೆ ?
ಏನನ್ನು ಕುಡಿಯುವುದು ಇಂದು
ತಿನ್ನುವುದೇನೆಂದು ಚಿಂತಿಸದೆ
ಚಿಂತೆ ಏತಕ್ಕೆ ಮನುಜನೇ || ಆತ್ಮೀಕ ||

* * *

ನಿನಗಾಗಿ ಜೀವಿಸುವೆ ನನ್ನೇಸುವೆ
ನಿನ್ನ ವಾಕ್ಯ ಕೇಳಿ ನಿನ್ನವಾಕ್ಯ ನಂಬಿ
ಸಂತೋಷದಿಂದ ಜೀವಿಸುವೆ
ಹೌದೇಸುವೇ ನಿನ್ನಲ್ಲಿಯೇ ಭದ್ರವಾದೆ         || ನಿನಗಾಗಿ ||

ನಿನ್ನಲ್ಲಿ ಸ್ಥಿರವಾದ ಹೃದಯವ
ದುಷ್ಠನು ಹೇಗೆ ನಾಶಪಡಿಸುವ
ನನ್ನ ಬಾಳನ್ನು ಸಾಗಿಸುವನ್ನು ನೀನೇ
ದೃಢವಾದ ನಂಬಿಕೆ ಸತ್ಯವೇ        || ನಿನಗಾಗಿ ||

ನಾ ನಿನ್ನ ಪಾದದ ದೂಳಾಗಿರುವೆ
ವರ್ಣಿಸಲಸಾಧ್ಯ ನಿನ್ನ ಮರೆತರೆ
ಓ ಯೇಸುವೇ ಬಾ ನನ್ನಲ್ಲಿ
ಜೀವಿಸು ಬಾ ಎಂದೆಂದಿಗೂ         || ನಿನಗಾಗಿ ||

* * *

ಓ ಮನುಜನೇ
ನಿನ್ನ ಪಾತ್ರವೇನಾಗಿದೆ
ನನ್ನೇಸು ಬಳಿಯಿರಲು
ಕೊರತೆ ಪಡೆನೆಂದಿಗೂ     || ಓ ಮನುಜನೇ ||

ಒಡ ಹುಟ್ಟಿದವರು ಇಲ್ಲ
ಬಂದು ಬಳಗವು ಇಲ್ಲ
ತಂದೆತಾಯಿಗಳು ಇಲ್ಲ
ಇವರೆಲ್ಲಾ ತೊರೆದರೂ     || ಓ ಮನುಜನೇ ||

ಕ್ರಿಸ್ತನು ಕೊಡುವ ಸಮಾಧಾನ
ಮನುಷ್ಯನ ಬಳಿ ಇಲ್ಲವು
ಇಹಲೋಕ ಸಂತೋಷವು
ಬರುಡಾದ ಜೀವನವೇ     || ಓ ಮನುಜನೇ ||

* * *

ನನ್ನ ಚಿಂತೆ ಮಾರ್ಗವನ್ನು
ಕರ್ತನೇ ಬಲ್ಲನು
ಆತನ ಮಾರ್ಗವು
ಹಗುರವಾದದ್ದು   || ನನ್ನ ||

ನನ್ನ ಮಾರ್ಗವು ಇಕ್ಕಟ್ಟಾದದ್ದು
ಇಹಲೋಕದ ಮಾರ್ಗವು
ಬಲು ಸಂತೋಷ ಕೊಡುವುದು
ಕ್ಷಣ ಮಾತ್ರಕ್ಕೆ ಸಂತೋಷವೇ       || ನನ್ನ ||

ಕರ್ತನ ಮಾರ್ಗ ನಿತ್ಯಜೀವ
ನೀನೆನ್ನ ಮಾರ್ಗ ಬಲ್ಲವನು
ನೀನೆನ್ನಾ ಮಾರ್ಗ ತಿಳಿಸುವನು
ಈ ಲೋಕದ ಯಾತ್ರೆ ಸಾಗಿಸುವ    || ನನ್ನ ||

* * *

ನಿನ್ನ ಕೃಪೆ ಸಾಕೆನಗೆ ಪ್ರಭುವೇ
ನಿನ್ನ ಕೃಪೆ ಸಾಕೆನಗೆ ದೇವಾ
ನಿನ್ನ ಕೃಪೆಯೊಂದೆ ಸಾಕು ದೇವಾ   || ನಿನ್ನ ಕೃಪೆ ||

ರೋಗ ಕಷ್ಠ ಚಿಂತೆಗಳೇನು ?
ಕರ್ತನು ನಿನ್ನನ್ನು ಕಾಯುವನು
ಕರುಣೆಯ ಧೀರ ಕರುಣಕೃಪಾಕರ
ಎನ್ನೊಡೆಯಾ ನೀನೊಬ್ಬನೇ         || ನಿನ್ನ ಕೃಪೆ ||

ಇಹದ ಆಡಂಬರ ಬೇಕಿಲ್ಲವು
ನಿನ್ನ ಧ್ಯಾನ ಮಾತ್ರ ಸಾಕೆನಗೆ
ಸತ್ಯಶೀಲಾ ಕೃಪಾಪೂರ್ಣನೇ
ನನ್ನ ಜೀವನದ ಸಂಗಡ ಸಾಕೆನಗೆ   ನಿನ್ನ ಕೃಪೆ

* * *

ಓ ಮಾನವ ನಿನ್ನನ್ನು ಕರ್ತನ
ರೂಪದಲ್ಲಿ ಸೃಷ್ಠಿ ಮಾಡಿದನು        || ಓ ಮಾನವ ||

ಏದೆನ್ ತೋಟದಲ್ಲಿ ಆದಾಮ ಹವ್ವಳ
ಸೃಷ್ಠಿಸಿ ಜತೆಯಾಗಿ ಕಾಯುತ್ತಿದ್ದಾ
ಸಂಭಾಷಣೆ ಮಾಡುತ ಅವರೊಟ್ಟಿಗೆ
ಆ ಜೀವಿತ ಸಿಗಬಾರದಿತ್ತೆನಗೇ ದೇವಾ        || ಓ ಮಾನವ ||

ಹವ್ವಳು ದುಷ್ಠನ ಮಾತ ಕೇಳಿ
ದೇವರ ಮಾತನ್ನು ಮರೆತಳು
ಆದಾಮ ಪಾಪಕ್ಕೆ ಗುರಿಯಾದನು
ಹವ್ವಳ ಮಾತನು ಕೇಳಿದ್ರಿಂದ       || ಓ ಮಾನವ ||

ದೇವರ ಮನುಜರ ಅಗಲುವಿಕೆ
ಕಾರಣ ಆದಾಮ ಹವ್ವಳ ಪಾಪದಿಂದ
ಈ ವ್ಯತ್ಯಾಸವುಂಟಾದದು ಪಾಪದಿಂದ
ದೇವರಿಗುಂಟಾದ ದುಃಖ ಹೇಳಲಾಗದು      || ಓ ಮಾನವ ||

ದೇವರು ಮನುಜನ ಪಡೆಯಲು ಮತ್ತೆ
ಯೇಸುವೇ ಪರಮ ದಾರಿಮಾರ್ಗ
ಯೇಸುವಿನ ಮಾರ್ಗ ಹಿಂಬಾಲಿಸಿ
ದೇವರ ಸ್ನೇಹ ಸಿಗುವುದಂದಿನಂತೆ  || ಓ ಮಾನವ ||

* * *

ಕೃಪಾಕಾಲವು ನನ್ನ ಮಾನವ ಕುಲಕ್ಕೆ
ಕಳೆದು ಹೋದಂತೆ ತಪ್ಪದೇ ನೀ
ಯೇಸುವ ಹಿಂಬಾಲಿಸು ಆತನೆಮ್ಮ
ಪಾಪವ ಹೊತ್ತು ಶಿಲುಬೆಯೊಳ್ ಜಡಿಯಲ್ಪಟ್ಟಾ        || ಕೃಪಾಕಾಲವು ||

ಇಂದೇ ಕೃಪಾಕಾಲವು
ಸುಪ್ರಸನ್ನತೆ ಕಾಲವು
ಯೇಸುವು ನಮಗೆ ದೊರೆತನು
ಇಂದೇ ಯೇಸುವನ್ನು ಹಿಂಬಾಲಿಸುವ         || ಕೃಪಾಕಾಲವು ||

ಯಜ್ಞದ ಕುರಿ ಮರಿಯೇ
ನನ್ನನ್ನು ಕರುಣಿಸುವನು
ಆತನು ನನ್ನನ್ನು ಕರೆದಿರುವ
ಯಜ್ಞಕ್ಕಾಗಿ ಎನ್ನಾತ್ಮಾವನು         || ಕೃಪಾಕಾಲವು ||

ಆತ್ಮವ ಜೈಸಿದ ವೀರನು
ಮತ್ತೊಮ್ಮೆ ಪಾಪ ಮಾಡನು
ಎಂದೆಂದು ಯೇಸುವನು
ಹಿಂಬಾಲಿಸಿ ನಡೆಯುವ    || ಕೃಪಾಕಾಲವು ||

* * *

ಗಡಿಬಿಡಿಯಿಂದ ಮುಂದೆ ಸಾಗುವ
ಕ್ರಿಸ್ತನ ವಾಕ್ಯವ ಸಾರಲು
ಕ್ರಿಸ್ತನ ನೊಗ ಹೊರಲಪೇಕ್ಷಿಸು
ಓ ಪಾಪಿ ನಿನಗಾಗಿಯೇ    || ಗಡಿಬಿಡಿ ||

ನನಗಾಗಿ ಶಿಲುಬೆ ಹೊತ್ತನು
ಹೊರಲಾರದ ಭಾರದೊಳು
ಕಲ್ವಾರಿ ಶಿಲುಬೆ ಸೃಷ್ಠಿಸಿದ
ಹೀಗೆ ಮುಂದೆ ಭಾರದಿಂ ಸಾಗಿದ    || ಗಡಿಬಿಡಿ ||

ದುಷ್ಠನ ರೋಧನೆ
ಜೈಸಲು ಧೈರ್ಯನೀಡುವ
ಇಹಲೊಕ ಧೈರ್ಯ ಅಲ್ಲಿಯೇ
ಕ್ರಿಸ್ತನ ಧೈರ್ಯ ಶಾಶ್ವತ   || ಗಡಿಬಿಡಿ ||

ಐಶ್ವರ್ಯ ಚಿನ್ನಾ ಬೆಳ್ಳಿಯ
ಗಳಿಸಿದರೇನು ? ಫಲ
ಇಂದೇ ಕ್ರಿಸ್ತನ ಹಿಂಬಾಲಿಸಿ
ಕಲ್ವಾರಿ ಶಿಲುಬೆಯ ದೃಷ್ಠಿಸು         || ಗಡಿಬಿಡಿ ||

* * *

ಅಂತರಂಗವನ್ನು ತಿಳಿದವನೊಬ್ಬ
ವೈದ್ಯನು ನಮಗಾಗಿ ಇರುವ
ನನ್ನ ದುಃಖ ಕಷ್ಟ ಬಲ್ಲವನು
ಆತನೇ ಶ್ರೀ ಯೇಸುಕ್ರಿಸ್ತನು         || ಅಂತರಂಗ ||

ನಾನೆಂದೂ ಹಾದಿತಪ್ಪದಂತೆ
ಬೆಳಕಾಗಿರುವನು ನನ್ನೇಸು
ದುಷ್ಠನ ಸೆಳವಿಗೆ ನಿಗದಂತೆ
ಬಲವಾದ ಕೋಟೆಯಂತಿರುವ       || ಅಂತರಂಗ ||

ಪಾತಾಳ ಸೇರದಂತೆನ್ನಾತ್ಮವನ್ನು
ರಕ್ಷಣೆ ಆತನ ಕೈಯ್ಯಲ್ಲಿಹುದು
ತಪ್ಪಿ ಹೋಗದ ಹಾಗೆ ನನ್ನನ್ನು
ಆಶ್ರಯ ಗಿರಿಯಂತೆ ಇರುವನು      || ಅಂತರಂಗ ||

ಭಯಪಡದೆ ನಾ ಜೀವಿಸುವೆ
ಶ್ರೇಯೇಸುವನ್ನು ನಂಬಿ ನಾ
ಇಹಲೋಕ ಯಾತ್ರೆ ಮುಗಿಯಲು
ನನ್ನೇಸುವಿನ ಬಳಿ ನಾ ಸೇರುವೆ    || ಅಂತರಂಗ ||

* * *

ಎಂತಹ ಪಾದವಿದು
ಪರಿಶುದ್ಧ ಪಾದವು
ಬಂದಿತು ಈ ಧರೆಯಲ್ಲಿ
ಪಾಪಿಗೆ ಮುಕ್ತಿ ಸಿಗಲೆಂದೇ || ಎಂತಹ ||

ಧರೆಯೊಳು ನಡೆದ
ಅಕ್ರಮವನ್ನು ಯೇಸು
ಸರಿಪಡಿಸಲೆಂದು
ನರನಾಗಿ ಬಂದನು        || ಎಂತಹ ||

ಆತನ ಹಾದಿಯನು
ಸಿದ್ಧ ಮಾಡೋಣವೇ
ಆತನಿಗಾಗಿಯೇ
ನಾವು ಜೀವಿಸೋಣವೇ    || ಎಂತಹ ||

ನನಗಾಗಿ ತಾಳಿದನು
ತನ್ನ ಪ್ರೀತಿ ತೋರುತ
ಆತನ ಕೃಪೆಯಿಂದ
ಎಲ್ಲವೂ ಸರಿಹೋಯ್ತು     || ಎಂತಹ ||

* * *

ಓ ಪಾಪಿಯೇ ಕೇಳಿಗಳೇ
ದೇವರು ಕೊಟ್ಟ ವೇಳೆಯನ್ನು
ಆತನಿಗೆಂದೇ ಉಪಯೋಗಿಸು
ಆತನೇ ನಿನ್ನನ್ನು ಕಾಯುವನು       || ಓ ಪಾಪಿ ||

ಹಗಲಿರುಳು ಮುಂಜಾನೆ
ನಿನ್ನ ಸಮಯವ ಜಪದಲ್ಲಿ
ಸತ್ಯವೇದವ ಧ್ಯಾನಿಸು
ಆತನೇ ಮಹಿಮೆಪಡಿಸುವ || ಓ ಪಾಪಿ ||

ಕಾಲಹರಣ ಮಾಡದೇ
ಹರಟೆ ಕುಚೋದ್ಯ ಮಾತನ್ನು
ತ್ಯಜಿಸಿ ನೀ ಉತ್ತಮನಾಗಿರು
ದೈವೀಕ ಕೃಪೆಯ ಹಿಂಬಾಲಿಸು      || ಓ ಪಾಪಿ ||

ದುಷ್ಠನ ಸಂಕಲ್ಪವು
ಲಯವಾಗಿ ಹೋಗಲು
ಕ್ರಿಸ್ತನೇ ಆಶ್ರಯವು
ಸ್ಥಿರವಾದ ಬಂಡೆಯಂತೆ   || ಓ ಪಾಪಿ ||

* * *

ನನ್ನ ಕರ್ತನೇ
ನಿನಗಾಗಿಯೇ
ನನ್ನ ಆತ್ಮವನ್ನು
ಇಂದೇ ಅರ್ಪಿಸುವೆ         || ನನ್ನ ||

ನನ್ನ ಬಾಳಿನ
ದೀಪವಲ್ಲವೇ
ತೋರಿಸೆಂದಿಗೂ
ನನ್ನ ಯೇಸುವೇ  || ನನ್ನ ||

ನಿನ್ನ ಪಾದವ
ಸೇರಲೆನಗೆ
ಅಭಿಷೇಕಿಸು
ನಿನ್ನ ಹಸ್ತದಿ       || ನನ್ನ ||

ಗಾಯದ ಹಸ್ತದಿಂ
ನನ್ನ ಮೇಲಿಟ್ಟು
ಆಶೀರ್ವದಿಸಿ
ಕೃಪೆ ತೋರನೆಗೆ || ನನ್ನ ||

ದಯೆ ತೋರೆನಗೆ
ನನ್ನ ಹಾದಿಯೊಳು
ನಿನ್ನ ಮಾತ್ರವೇ
ಸೇವಿಸಲೆನಗೆ     || ನನ್ನ ||

* * *

ನನ್ನಲ್ಲಿ ಯೇಸು ಜೀವಿಸುವ
ಆತನ ಕೃಪೆಯೂ ನನ್ನಲ್ಲಿಯೇ
ಆತ್ಮವೆಂಬ ಆಲಯದಲ್ಲಿ
ವಾಸಿಸಲು ಸ್ಥಳ ನೀಡುವೆ  || ನನ್ನಲ್ಲಿ ||

ಆತನ ಮಂದಿರದೊಳ್
ಧ್ಯಾನ ಮಾಡಲಿಕ್ಕೆಂದೇ
ಆತನಿಂದ ಸುವರಗಳನ್ನು
ಎದುರು ನೋಡುತ್ತಿರುವೆನು         || ನನ್ನಲ್ಲಿ ||

ಕರ್ತನ ಪ್ರಭಾವವನ್ನು
ದೇವರ ಸ್ವರೂಪವನ್ನು
ಆತನ ಗುಣಗಾನವನ್ನು
ಅನುದಿನವು ಅನುಭವಿಸುವ          || ನನ್ನಲ್ಲಿ ||

ಪೂರ್ಣಮಹಿಮೆಯಿಂದು
ಮದಲಗಿತ್ತಿಯಂತೆ
ನಾವು ಕರೆಯಲ್ಪಟ್ಟಿರಲು
ಆತನಲ್ಲಿ ನಾವು ಜೀವಿಸುವ || ನನ್ನಲ್ಲಿ ||

* * *

ಪರಿಪೂರ್ಣ ಸೌಭಾಗ್ಯವನ್ನು
ಯೇದೂರಸಲೇ ನಿಂದಲೇ
ಕಾಣದ ಭಾಗ್ಯವನ್ನು
ಭರವಸೆಯಿಂದೆದುರು ನೋಡುವ    || ಪರಿಪೂರ್ಣ ||

ಯೆರೂಸಲೇಮೆಂಬ
ಪರಿಶುದ್ಧ ಪಟ್ಟಣವನ್ನು
ನಾವು ಅಪೇಕ್ಷಿಸುವ
ಹೌಹೌದು ನಿಜವಾದ ಮಾತಿದು     || ಪರಿಪೂರ್ಣ ||

ನಮ್ಮ ನಿಜವಾದ
ವಾಸಸ್ಥಾಳವು
ಪರಲೋಕದಲ್ಲುಂಟು
ಹೌದೇಸುವೇ ನಿನ್ನಲ್ಲಿಯೇ  || ಪರಿಪೂರ್ಣ ||

* * *

ನಾನು ಕರ್ತನಲ್ಲಿಯೇ
ಆನಂದ ಪಡುವೆನು
ನನ್ನಾತ್ಮನೇ ಆತನಲ್ಲೇ
ಹಿಗ್ಗುತ್ತಿರುವುದು   || ನಾನು ||

ಆತನ ವಾಕ್ಯವೇ
ನನಗಾಧಾರವು
ನನ್ನಾತ್ಮ ರಕ್ಷಣೆಯು
ಆತನಿಂದಲೇ     || ನಾನು ||

ಸರ್ವೇಶನನ್ನು
ಸ್ತುತಿಸೋಣವೇ
ನನ್ನ ಪ್ರತಿ ಉಸಿರು
ಆಗಿರಲ್ಲಿ ಒಂದು ಗೀತವು   || ನಾನು ||

* * *

ಸಂತೋಷ ಪಡೋಣ
ಉಲ್ಲಾಸ ಪಡೋಣ
ಪರಲೋಕದಲ್ಲಿ
ಬಹಳ ಫಲ ನಿಗ್ವಯ       || ಸಂತೋಷ ||

ಔತಣ ಶಾಲೆ ಎಂಬ
ಸತ್ಯವೇದವು
ಆತ್ಮಗಳ ಜೀವಿಸಲು
ಮಾಡ್ಬದು ಸತ್ಯವೇದವು   || ಸಂತೋಷ ||

ಔತಣ ಶಾಲೆಯೇ
ಜೀವಿಸಲು ಸಾಧ್ಯವಿದೆ
ಪ್ರೀತಿಯ ಧ್ವಜವೆಂಬ
ಹಿಂಬಾಲಿಸು ಸತ್ಯವೇದವ || ಸಂತೋಷ ||

* * *

ಯೇಸು ನನ್ನ ಮೇಲಿಟ್ಟ
ಅಪಾರ ಪ್ರೀತಿಯಿದು
ತನ್ನ ರಕ್ತದೇಹವನ್ನು
ಭೋಜನವಾಗಿ ತಂದನು   || ಯೇಸು ||

ಕ್ರಿಸ್ತನ ಕಲ್ವಾರಿ ಪ್ರೀತಿಯ
ರುಚಿಸಿದ ದೀವ ಜನರನ್ನು
ಆತ್ಮೀಕರಾದ ಜನರನ್ನು
ಔತಣ ಶಾಲೆಗೆ ಕೊಂಡೊಯ್ವುನ    || ಯೇಸು ||

ನಾವೀಗ ಸಂಧಿಸುವ
ಯಜ್ಞದ ಕುರಿಯಾದಾತನ
ವಿವಾಹದ ಔತಣವ
ಹಲ್ಲೆಲೂಯ ಹಲ್ಲೆಲೂಯ   || ಯೇಸು ||