ಪವಿತ್ರಾತ್ಮನಾದಾತನು
ಕರೆದೊಯ್ಯಾವನು
ನನ್ನತ್ಮಾ ದಾಪ್ತಾನು
ಯೇಸುವಿನ ಬಳಿಗೆ         || ಯೇಸುವು ||

ಪವಿತ್ರಾತ್ಮಾನಾದವನು
ನನ್ನಾತ್ಮದಾಪ್ತನಾ
ಯೇಸುವಿನ ಔತಣಕ್ಕೆ
ನಡೆಸುವನಾಗಿರುವನು     || ಯೇಸುವು ||

ಅದಕ್ಕಾಗಿಯೇ ನಮ್ಮಾತ್ಮವ
ಸಿದ್ಧಪಡಿಸಿಕೊಳ್ಳುವ
ಯಜ್ಞದ ಔತಣಕ್ಕೆ
ಕರೆಸಿಕೊಂಡವರೇ ಧನ್ಯರು || ಯೇಸುವು ||

* * *

ಧನ್ಯಳಾದೆ ಪ್ರಭುವೇ
ಪ್ರೀತಿಸ್ವರೂಪ ಕರುಣಾಕರ
ಪರಲೋಕವಾಗಿ ನೀನಲ್ಲವೇ
ನೀನೇ ನಮ್ಮ ಸತ್ಯಸ್ವರೂಪನು      || ಧನ್ಯಳಾದೆ ||

ನಿನ್ನ ಆಶೀರ್ವಾದವೇ ಸಾಕು
ನೀ ನೀಡಿದ ಹಸ್ತದಿಂ
ಈ ಭೂಯಾತ್ರೆಯೊಳು
ಸಾಗಿಸು ಸಂತೋಷದಿ     || ಧನ್ಯಳಾದೆ ||

ಓ ಮಹಾ ಪ್ರಭು ಯೇಸುವೇ
ನಿನ್ನ ಬಿಟ್ಟು ಬಾಳಲಸಾಧ್ಯ
ಪ್ರೀತಿಯ ತೋರಿ ಕಾಪಾಡುತ್ತಿರುವೆ
ಸೂರ್ಯನ ಕಿರಣ ತೋರಿದಂತೆ     || ಧನ್ಯಳಾದೆ ||

* * *

ಕರ್ತನನ್ನು ನೆನೆದರೆ
ಆತ ನೆನ್ನನ್ನು ನೆನೆಯುವ
ಆತನಾಶೀರ್ವಾದವೇ
ಅಪಾರವಾದದ್ದು  || ಕರ್ತನನ್ನು ||

ಮನುಜನ ನಂಬಿದರೇನು ಫಲ
ಆತನಲ್ಲೇಕೆ ಭರವಸೆವಿಟ್ಟು
ನಿನ್ನ ಸಕಲಚಿಂತೆಯನ್ನು
ಆತನೇ ಸಕಲ ಸುಧಾರಿಸುವ        || ಕರ್ತನನ್ನು ||

ದೇವದೂತರಿಗಿಂತ ಮಿಗಿಲಾದವ
ಮನುಜರಲ್ಲೇಕೆ ಭರವಸವಿಟ್ಟು
ಆತನ ಸಹಾಯ ಅಲ್ಪವೇ
ಕರ್ತನ ಸಹಾಯ ಅಪಾರವು        || ಕರ್ತನನ್ನು ||

* * *

ಕುರಿಗಳ ಕಾಯುವ ಕುರುಬನ ಕಾಣದೇ
ಹಿಂಡೆಲ್ಲಾ ಚದರಿ ಹೋಗುತ್ತಿದೆ
ಮನ ಬಂದ ಸ್ಥಳದಲ್ಲಿ ಮೇಯುತ್ತ
ಕುಣಿಯುತ್ತ ದುಷ್ಠನ ಹಿಂಡನ್ನು ಸೇರುತ್ತಿದೆ

ಹಿಂಡನ್ನು ಕಾಯುವ ಕುರುಬನು
ದುಃಖದಿಂದ ಮನಮರುಗಿದನು
ಕುರಿಗಳ ಹಿಂಡನ್ನು ಕೂಡಿಸಲು
ಒಳ್ಳೆ ಕುರುಬನ ಕಳುಹಿಸಿದ          || ಆತನೇ ಯೇಸುಕ್ರಿಸ್ತ ||

ಕುರುಬನ ಸ್ವರಕ್ಕೆ ಕಿವಿಗೊಟ್ಟರೂ
ಕುರುಬನ ಮಾತನ್ನು ಅಲಕ್ಷಿಸಿತು
ಹಸುರು ಗಾವಲೆಂಬ ಹುಲ್ಲಿನಲ್ಲಿ
ಮೇವನ್ನು ಕೊಟ್ಟು ಕಾಪಾಡಿದ       || ಆತನೇ ಯೇಸುಕ್ರಿಸ್ತ ||

ಕೆಲವು ಕುರಿಗಳು ಕುರುಬನ ಸ್ವರ ಕೇಳಿ
ಕುರುಬನ ಹಿಂಡನ್ನು ಸೇರಿದವು
ದುಷ್ಠನ ಹಿಂಡನ್ನು ಸೇರಿದ ಕುರಿಗಳು
ಮುಳ್ಳಿನ ಪೊದೆಯಲ್ಲಿ ಸೇರಿದವು     || ಆತನೇ ಯೇಸುಕ್ರಿಸ್ತ ||

ಓ ಕುರುಬನೇ ಕೊರತೆ ಪಡೆನು ನಾ
ನಿನ್ನ ಸವರಕ್ಕೆ ಕಿವಿಗೊಟ್ಟು ಹಟ್ಟಿಯ ಸೇರಿ
ದುಷ್ಠನ ಹಿಂಡಿಂದ ಕಾಪಾಡೆಂದು
ಕುರುಬನ ಮೊರೆಯಿಟ್ಟು ಬೇಡಿದವು  || ಆತನೇ ಯೇಸುಕ್ರಿಸ್ತ ||

* * *

ಜಯ ಜ ನಾಯಕನೇ
ಯೇಸು ಕ್ರಿಸ್ತನಿಗೇ
ಶುಭವಾಗಲೆಂದು
ಹಾರೈಸಿ ಬೇಡುವೆನು

ನನಗಾಗಿ ನನ್ನೇಸು ಜನಿಸಿದನು
ಆತನ ಜನದಿಂ ಶಾಂತಿ ತಂದ
ಆತನ ರಾಜ್ಯದೊಳ್ ಸಂತೋಷವೇ
ಮಹಿಮರಾಜನ ಹೊಗಳುವೆವು      || ಜಯ ||

ಇಹದಲ್ಲಿ ಕಣೇ ಸಂಕಟವೇ
ದುಷ್ಠನ ರಾಜ್ಯ ಕ್ಷಣಿಕವೇ
ನಮಗಾಗಿ ನನ್ನೇಸು ಕಾಯುವನು
ಜೀವವೆಂಬ ಜಯಮಾಲೆ ನೀಡುವನು         || ಜಯ ||

* * *

ಧರಣಿಗೆ ನಿನ್ನಪಾದ ಮುಟ್ಟಿದವೇಳೆ
ಮನುಜರ ಪಾಪ ಪರಿಹಾರವೇ
ಇಂತಹಯೇ ಬೇರಾರು ಇಲ್ಲ
ನನ್ನ ಸತ್ಯ ದೇವಾ ನನ್ನ ಯೇಸು

ಸೂರ್ಯನ ಬೆಳಕು ಬೇಕಿಲ್ಲವು
ಕ್ರಿಸ್ತನ ಪಾದವೇ ಬೆಳಕು
ಯಾವುದಕ್ಕೆ ಸಾಟಿ ಮನುಜನೇ
ನನ್ನೇಸುವಿನ ಮುದ್ದಾದ ಪಾದ

ತಂದೆಯ ಬಳಿಯಲ್ಲಿ ನನ್ನೇಸುವು
ಬಿಡಾರ ಮಾಡಿತ್ತಿರುವನು
ಮುದ್ದಾದ ಹಸ್ತದಿಂ ಆಶೀರ್ವದಿಸಿ
ನನ್ನನ್ನು ಕಾಪಾಡುತ್ತಿರುವನು

ರಾತ್ರಿಯ ವೇಳೆಯಲ್ಲಿಯೂ
ನನ್ನೇಸು ಬಳಿಯಿರುವನು
ಬೆಳಗಿನ ಜಾವದಲ್ಲಿಯೂ
ಮುದ್ದಾದ ಸ್ವರದಿಂದ ಕೂಗುವನು

* * *

ಇಂಪಾದ ಗಾಳಿಯು ಹಾಡನ್ನು ಹಾಡುತ
ಯೇಸುವನ್ನು ಹೊಗಳುತ್ತ ಸ್ತೋತ್ರ ಹಾಡ್ವೆವು
ಚಂದ್ರಸೂರ್ಯ ತಾರೆಗಳೆಲ್ಲಾ ಆತನನ್ನು
ಪ್ರತಿ ದಿನವೂ ಹೊಗಳುತ್ತ ಹಾಡುವುವು       || ಇಂಪಾದ ||

ತುಂಬಿದ ಹೃದಯದಿಂ ಯೇಸುವನ್ನೇ
ಕೂಡಿದ ಮನುಜರು ಯೇಸುವನ್ನೇ
ಕರುಣಾಕರನೆಂದು ಯೇಸುವನ್ನೇ
ಕರ್ತನು ಆತನ ನಾಮವು ಯೇಸುವೇ        || ಇಂಪಾದ ||

ಪಾಪಿಗಳ ಸಂಗಡ ನಡೆದಾಡಿದನು
ಪ್ರೀತಿಯಿಂದವರನ್ನು ಆಧರಿಸಿದನು
ತಂಗಾಳಿ ಬೀಸುತ್ತ ಹೇಳುತ್ತಿದೇ
ಯೇಸುವೇ ಜಗದ್ರಕ್ಷಕನೆಂದು        || ಇಂಪಾದ ||

* * *

ಆತನೆನ್ನ ಸಕಲವು
ಆತನೆನ್ನ ಸರ್ವಸ್ವವು
ಆತನೆನ್ನ ಭಾಗ್ಯವು
ಆತನೆನ್ನ ಜೀವವನು       || ಆತನೆನ್ನ ||

ನನಗಾಗಿ ತನ್ನನ್ನರ್ಪ್ಪಿಸಿದ
ನನಗಾಗಿ ಹೊಸದು ಮಾಡಿದನು
ಆತನೆನ್ನ ಸರ್ವ ಭಾಗ್ಯವು
ಆತನೆನ್ನ ಐಶ್ವರ್ಯವು      || ಆತನೆನ್ನ ||

ಜೇನಿನ ರುಚಿಯಂತೆಯೇ
ಆತನ ನಾಮವು
ಯೇಸುವ ರುಚಿ ನೋಡಿರಿ
ಬಹಳ ಇಂಪಾದದ್ದು        || ಆತನೆನ್ನ ||

* * *

ರಾಜಾಧಿರಾಜ ನನ್ನೇಸುವೇ
ಪ್ರತಿ ದಿನವೂ ಕಾಪಾಡುತ್ತೀ
ಅಂಧಕಾರ ದೀ ಲೋಕದೋಳ್
ಸರ್ವರನ್ನು ಕಾಪಾಡುವನು || ರಾಜಾಧಿರಾಜ ||

ಶಾಶ್ವತವಲ್ಲ ಇಹಲೋಕವು
ಸತ್ಯವೇದವನ್ನು ಅರಿತವನು
ಜ್ಞಾನಿಯೆಂದೆಣಿಸಲ್ಪಡುವ
ಆತನೇ ಆದಿ ಅಂತ್ಯವೂ   || ರಾಜಾಧಿರಾಜ ||

ಕೂಡಿಟ್ಟು ಆಸ್ತಿಯು
ಪರರ ಪಾಲಾಗುವುದು
ಯೇಸುವ ನಂಬುವವನು
ನಿತ್ಯ ಜೀವ ಪಡೆಯುವ     || ರಾಜಾಧಿರಾಜ ||

* * *

ಕರ್ತನಲ್ಲಿ ಸಂತೋಷಿಸುವ
ನಿನ್ನ ರಾಜ್ಯದಲ್ಲಿ ನನಗಾಗಿಯೇ
ಸ್ಥಳವನ್ನು ಸಿದ್ಧ ಮಾಡಿದ್ದೀ
ನನ್ನೇಸುವೇ ಹಲ್ಲೇಲೂಯ || ಕರ್ತನಲ್ಲಿ ||

ಪರಲೋಕ ವಾಸದಲ್ಲಿ
ಕೆರೂಬಿ ಸೆರಾಫಿಯರು
ಪರಿಶುದ್ಧನು ಪರಿಶುದ್ಧನು
ಎನ್ನುತ್ತ ಹೊಗಳುತ್ತಿರ‍್ವರು  || ಕರ್ತನಲ್ಲಿ ||

ಪ್ರೀತಿ ಸ್ವರೂಪನು ಆತನೇ
ಶಾಂತ ಸ್ವರೂಪನು ಆತನೇ
ದಯ ಕಾರುಣ್ಯತೆ ತುಂಬಿದೆ
ಕರ್ತನು ನಮ್ಮನು ಕಾಯುವನು     || ಕರ್ತನಲ್ಲಿ ||

* * *

ಯೇಸು ಸುನಾಮವ
ಭಜಿಸುತ ಜೀವಿಸುವ
ಹರುಷದಿಂ ಕೀರ್ತನೆಯ
ಸಂಗೀತ ಹಾಡೋಣವೇ   || ಯೇಸು ||

ಕೈಯಿಂದ ಚಪ್ಪಾಳೆ ಹೊಡೆಯಿರಿ
ಕಿನ್ನರಿ ದಮ್ಮಡಿ ಕೊಳಲಿಂದ
ಆತನ ನಾಮವ ಭಜಿಸಿರ
ತುಂಬಿದ ಹೃದಯದಿ ಭಜಿಸಿರ       || ಯೇಸು ||

ಕರ್ತನ ನಾಮವು ಪರಿಶುದ್ಧವು
ಬಾಯಿಂದ ಹೇಳುವಾಗಲೇ
ಆತನ ಮಹಿಮೆಯು
ನಮ್ಮಲ್ಲಿ ಪ್ರಜ್ವಲಿಸುವುದು  || ಯೇಸು ||

* * *

ನನಗುಂಟು ಒಂದು ಭಲವು
ಆ ಭಲವೇ ಯೇಸುವೇ ಯೇಸುವು
ಇಹಲೋಕ ಶಕ್ತಿ ಯಾವುದು
ವ್ಯರ್ಥವೇ ಸಮಸ್ತವೂ ವ್ಯರ್ಥವೇ    || ನನಗುಂಟು ||

ಜೇಡಿ ಮಣ್ಣಿನ ಈ ಶರೀರವು
ಯೇಸು ಕ್ರಿಸ್ತನೇ ಆಧಾರವು
ಆತ್ಮಕ್ಕೆ ಬೆಳಕಾಗಿರುವ
ಶರೀರಕ್ಕೆ ಆರೋಗ್ಯ ಕೊಡುವನು    || ನನಗುಂಟು ||

ಯೇಸುವ ನಂಬಿ ಜೀವಿಸಿದರೆ
ರೋಗವೆಲ್ಲ ಗುಣ ಹೊಂದುವುದು
ಪರಿಶುದ್ಧ ಜೀವನ ಸಾರ್ಥಕವೇ
ಆತನೆನ್ನಲ್ಲಿ ಜೀವಿಸುವನು  || ನನಗುಂಟು ||

* * *

ಇನ್ನೆಷ್ಠ ಕಾಲ ಬೇಕು ನಿನಗೆ
ನನ್ನಾತ್ಮವ ಶೋಧಿಸಲು
ನೀನೆಷ್ಠ ಶೋಧಿಸಿದರೂ
ನಿನ್ನನ್ನೆ ನಂಬಿ ನಾ ಜೀವಿಸುವೆ       || ಇನ್ನೆಷ್ಠ ||

ದುಷ್ಟನ ಶೋಧನೆ ಬಂದರೂ
ಬಿಡದೆ ನಾ ನಿನ್ನನ್ನು ಪ್ರಾರ್ಥಿಸುವೇ
ಹಗಲೂ ಇರುಳು ನಿನ್ನನ್ನೇ
ಆತುಕೊಂಡು ಬಾಳುವೆನು || ಇನ್ನೆಷ್ಠ ||

ಕ್ಷಣಕ್ಷಣ ಮಾತ್ರ ಸೈತಾನನು
ಸಿಂಹದೋಪಾದಿಯಲ್ಲಿ
ಕಾಯು ನನ್ನನ್ನು ಭಾದಿಸುವನು
ನಿನ್ನ ವಾಕ್ಯ ನಂಬಿ ಬಾಳುವೆ         || ಇನ್ನೆಷ್ಠ ||

* * *

ವಿಜಯ ರಾಜ ನನ್ನೇಸುವೇ
ಮರಣವ ಜೈಸಿದನು
ಶೋಧನೆ ಜೈಸಿದ ಯೇಸುವು
ಈ ಲೋಕವನ್ನೇ ಜೈಸಿದ  || ವಿಜಯ ||

ಆಸೀನನಾಗಿ ಪರಲೋಕದಲ್ಲಿ
ಶಾಶ್ವತನಾಗಿ ಇರುವನು
ತನ್ನ ಪ್ರಭಾವ ಬೀರುತ
ಪ್ರಕಾಶ ತೋರುತ್ತಿರುವನು || ವಿಜಯ ||

ಮರಣವ ಜೈಸಿದ ವೀರ
ರಾಜಾಧಿರಾಜ ನನ್ನೇಸುವೇ
ಈತನಿಗಿಂತ ಬೇರೊಬ್ಬರಿಲ್ಲವು
ಅದ್ಭುತ ರಾಜ ನನ್ನೇಸುವೆ || ವಿಜಯ ||

* * *

ನಾ ಮುಂದೆ ಸಾಗಲು ಕರ್ತನೇ
ಮುಂಬಲವಾಗಿರುವೇ
ಇಸ್ರಾಯೇಲ್ ದೇವರೇ
ಹಿಂಬಲವಾಗಿರುವನು      || ನಾ ಮುಂದೆ ||

ಮಾರ್ಗದರ್ಶಕನಾಗಿ ನಡೆಯುವೆ
ರಕ್ಷಕನು ನನ್ನ ಹಿಂದೆ ಬರುವ
ಹಲ್ಲೇಲೂಯ ಹಲ್ಲೇಲೂಯ
ಕರ್ತನ ನಾಮಕ್ಕೆ ಮಹಿಮೆಯಾಗಲಿ || ನಾ ಮುಂದೆ ||

ಯುಗದ ಸಮಾಪ್ತಿವರೆಗೂ
ಆತನು ನಮ್ಮೊಂದಿಗೆ ಇರುವ
ಆತನೇ ನಮ್ಮ ಮಾರ್ಗದರ್ಶಕ
ಈತನಿಗಿಂತ ಬೇರೊಬ್ಬರಿಲ್ಲವು       || ನಾ ಮುಂದೆ ||

* * *

ಘನಮಾನ ಮಹಿಮೆ ಎಲ್ಲಾ
ನನ್ನೇಸು ರಾಜನಿಗೆ
ಸ್ತುತಿಗೀತೆ ಸ್ತೋತ್ರವೆಲ್ಲಾ
ನನ್ನೇಸುವಿಗೆ ಮಾತ್ರ       || ಘನಮಾನ ||

ದೂತರೆಲ್ಲ ಸ್ತುತಿಸಿರಿ
ಸೂರ್ಯಚಂದ್ರ ಸ್ತುತಿಸಿರಿ
ನಕ್ಷತ್ರಗಳೆಲ್ಲಾ ಸ್ತುತಿಸಿರಿ
ಆತನ ಮಹಿಮೆ ಪ್ರಭಾವವನ್ನು       || ಘನಮಾನ ||

ಆಕಾಶ ಮಂಡಲವೇ ಸ್ತುತಿಸಿರಿ
ಭೂಲೋಕವೆಲ್ಲ ಸ್ತುತಿಸಿರಿ
ಕಣ್ಣೀರ ಅಲೆಗಳೆ ಸ್ತುತಿಸಿರಿ
ಸಮುದ್ರದಲೆಗಳೇ ಸ್ತುತಿಸಿರಿ         || ಘನಮಾನ ||

ಯೌವನ ಮಕ್ಕಳೇ ಸ್ತುತಿಸಿರಿ
ವಯಸ್ಸಾದ ಮುದಿಯರೇ ಸ್ತುತಿಸಿರಿ
ಬಾಲ್ಯ ಪ್ರಾಯದವರೆಲ್ಲ ಸ್ತುರಿಸಿರಿ
ಯೇಸುವನೆಂದೆದೂ ಸ್ತುತಿಸಿರಿ       || ಘನಮಾನ ||

* * *

ಭಯಪಡದೆ ಮುಂದೆ ನಡೆಯೋಣ
ಕ್ರಿಸ್ತನ ಹಾದಿಯಲ್ಲಿ
ಅದಿಯಲ್ಲಿದ್ದಾತನು
ವಾಕ್ಯ ವಾದಾತನು        || ಭಯಪಡದೆ ||

ಜೀವಿಸುತ್ತಿರುವವ ನಾತನೇ
ವರ್ತಮಾನ ಕಾಲದಲ್ಲಾತನೇ
ಭೂತಕಾಲದಲ್ಲಾತನೇ
ಭವಿಷ್ಯಕಾಲದಲ್ಲಿರುವಾತನೇ         || ಭಯಪಡದೆ ||

ಆತನೊಬ್ಬನೆಮ್ಮನ್ನು ಸಂತೈಸುವ
ಮೊದಲನೆಯವನು ಆತನೇ
ಸದಾ ಜೀವಿಸುವವನಾತನೇ
ಸದಾಕಾಲ ವಿಮೋಚಿಸುವಾತನೇ   || ಭಯಪಡದೆ ||

* * *

ನಿತ್ಯ ಸ್ವರೂಪನೇ
ನನ್ನೊಳು ನೀ ನೆಲೆಸು
ಸೂರ್ಯನಿಗಿಂತಲೂ
ಪ್ರಕಾಶವುಳ್ಳವನೇ          || ನಿತ್ಯ ||

ಪಾಪಿಗೆ ಆಶ್ರಯ
ರೋಗಿಗೆ ವೈದ್ಯನು
ದುಷ್ಠನ ಜೈಸಲು
ನೀನೆಮಗಾಶ್ರಯ || ನಿತ್ಯ ||

ಹೊತ್ತಾರೆಯಲ್ಲಿಯೂ
ನೀತಿ ಸೂರ್ಯನೇ
ಸಂಜೆ ವೇಳೆಯಲ್ಲೂ
ಹೊಂಬಿಸಿಲು ನೀನೇ       || ನಿತ್ಯ ||

ಪರಮ ಪುನೀತನೇ
ಪರಮ ಭೋಧಕನೇ
ನೀನಿದ್ದರೆ ನಮ್ಮೊಳು
ಸಕಲವೂ ವೈಭವವೇ      || ನಿತ್ಯ ||

ರಾತ್ರಿಯ ಕಾಲದಲ್ಲೂ
ಬೆಳದಿಂಗಳ ಬೆಳಕೇ
ಯೇಸುಕ್ರಿಸ್ತನೇ
ಸಕಲವು ಆತನೇ ಹಲ್ಲೇಲೂಯಾ    || ನಿತ್ಯ ||