ನೋಹನ ಕಾಲದಲ್ಲಿ ಸತ್ತಂತ ಆತ್ಮಕ್ಕೆ
ಪಾತಾಳ ಲೋಕದಲ್ಲಿ ಯೇಸು ಕರ್ತನೇ
ಸುವಾರ್ತೆ ಸಾರಿದನು ಸುವಾರ್ತೆ ಸಾರಿದನು
ಆವಾಕ್ಯವೇ ಸತ್ಯವೇದವು  || ನೋಹನ ||

ಆ ವಾಕ್ಯ ತಿಳಿದಂತ ಆತ್ಮಗಳು
ಪರಲೋಕಕ್ಕೆ ಹೊದಾರು
ಧೈರ್ಯ ನೀಡುವ ವಾಕ್ಯವು
ಜೀವಿಸುವಂತ ವಾಕ್ಯ      || ನೋಹನ ||

ಮುಂದೆ ಬರುವ ದೇವರ ರಾಜ್ಯಕ್ಕಾಗಿ
ತವಕಪಡಿರಿ ಎಂದು ಹೇಳಿದ ಯೇಸು
ದೇವರ ವಾಕ್ಯ ಬಿಡದೆ ಧ್ಯಾನಿಸಿ
ಪರಲೋಕ ದಾಶ್ರಾಯ ಪಡೆಯಿರಿ   || ನೋಹನ ||

* * *

ಆಶ್ಚರ್ಯವಾದ ನಕ್ಷತ್ರವು
ಪ್ರಕಾಶವುಳ್ಳದ್ದು
ಅದ್ಭುತವಾದ ನಕ್ಷತ್ರವು
ವರ್ಣಿಸಲಸಾಧ್ಯವು         || ಆಶ್ಚರ್ಯ ||

ಯೇಸುವಿನ ಜನನವನ್ನು
ತಿಳಿಸಲುದಯಿಸಿದ ತಾರೇ
ಬೆತ್ಲೆಹೇ ದಾರಿಯ ತೋರಲು
ಕುರುಬರಿಗೆ ಕಾಣಿಸಿತು     || ಆಶ್ಚರ್ಯ ||

ಇಂತ ಒಳ್ಳೆರಾಜನು ಎಲ್ಲಿಹನು
ಜನಿಸಿರುವನ್ನೆಂದು ಪಂಡಿತರು
ರುಕ್ತ ಭೊಳರೂಪ ತಂದು
ರಾಜಾದಿ ರಾಜನ ವಂದಿಸಿದರು      || ಆಶ್ಚರ್ಯ ||

ವನದ ಪ್ರಾಣಿ ಪಶುಗಳೆಲ್ಲ
ರಕ್ಷಕನ ನೋಡಲು ಬಂದವು
ಸತ್ಯರಾಜ ಪಾಪಿಗಾಗಿಯೇ
ಜನಿಸಿದನೆಂದು ಅರಿತರು  || ಆಶ್ಚರ್ಯ ||

ಜಗದ್ರಕ್ಷಕ ಓ ರಾಜನೇ
ನಿನಗೆ ವಂದನೆ ಎಂದೇಳುತ
ಕುರುಬರು ಧಾವಿಸಿ ಬಂದರು
ಆತನ ನೋಡಿ ಸ್ತುತಿಸಿದರು         || ಆಶ್ಚರ್ಯ ||

* * *

ಜನಿಸಿದ ದಿನದಿಂದಲೂ
ಈ ದಿವಸದವರೆವಿಗೂ
ನನ್ನನ್ನು ಕಾದು ಕಾಪಾಡಿದ್ದೀ
ವಂದನೆ ಶುಭವಂದನೆ ಯೇಸುವಿಗೆ  || ಜನಿಸಿದ ||

ಕೂಸಾಗಿ ನಿಶ್ಚಿಂತೆಯಿಂದಲಿ
ತಾಯಿಯ ಬಳಿಯಲ್ಲಿಯೇ
ಗಂಡಾಂತ ತಪ್ಪಿಸಿ ನನ್ನನ್ನು
ಕಾದವನು ನನ್ನೇಸುವೇ    || ಜನಿಸಿದ ||

ಬಾಲ್ಯದಲ್ಲಿಯೂ ಆಡುವಾಗಲೂ
ನನ್ನ ನೆರಳಾಗಿ ನೀ ಕಾಪಾಡಿದ್ದೀ
ನಿನ್ನಾನ್ನೆ ದೃಷ್ಟಿಸಿ ಜೀವಿಸಿದೆ
ಓ ಯೇಸುವೇ ನಿನ್ನನ್ನೇ ದೃಷ್ಠಿಸಿದೆ   || ಜನಿಸಿದ ||

ಯೌವನದ ಜೀವಿತದೊಳ ನೀನೆನ್ನನ್ನು
ಎಡವದಂತೆನ್ನನ್ನು ಕಾಪಾಡಿದ್ದಿ
ದುಷ್ಠನ ಶೋಧನೆ ಜೈಸಿದೆ ಯೇಸುವೇ
ನೀ ಪಕ್ಕದಲ್ಲಿದ್ದು ಕಾಪಾಡಿದ್ದೀ        || ಜನಿಸಿದ ||

ಸಂಸಾರ ಜೀವನ ಬೇಸರವಿರಲು
ಸಂತೊಷ ವಿಲ್ಲದೇ ಇರುವಾಗ ನೀನೇ
ನನ್ನ ಆತ್ಮಕ್ಕೆ ಸಂತೋಷ ಪಾಲಿಸಿದೇ
ನಿನಗೆ ವಂದನೇ ನನ್ನೇಸುವೇ       || ಜನಿಸಿದ ||

* * *

ಗತಿಸಿದ ವೇಳೆಯಲ್ಲೂ
ಗತಿಸಿದ ದಿನಗಳಲ್ಲೂ
ನೀ ನನ್ನ ನೆರಳಾಗಿರುವೆ
ಓ ನನ್ನ ಯೇಸುವೇ        || ಗತಿಸಿದ ||

ಒಲದಲ್ಲಿ ಒಂದಾದ ಕೋಟೆಯಂತೆ
ದೂತರ ಕಾವಿಟ್ಟು
ಭಯ ಭಕ್ತಿಯಿಂ ಜೀವಿಸಲು
ನನಗೆ ನೀ ರಕ್ಷಣೆ ನೀಡಿದಿ  || ಗತಿಸಿದ ||

ಓ ದಿವ್ಯಮಿತ್ರನೇ ಬಾ ಬೇಗನೇ
ಪರಲೋಕದ ಬಾಗಿಲನು
ನನಗಾಗಿ ತೆರೆದು ಸಿದ್ಧ ಮಾಡುವೆ
ನನ್ನ ಯೇಸುವೇ ನನ್ನ ಮಿತ್ರನೇ     || ಗತಿಸಿದ ||

* * *

ಮುಂದೆ ಮುಂದೆ ಸಾಗುತ್ತಿರು
ಹಿಂದೇಕೆ ನೋಡುವೆ ಮನುಜನೇ
ಮುಂದಿನ ಹಾದಿ ನೇರವಾಗಿರಲು
ಹಿಂದೇ ನೋಡದೆ ಸಾಗುತ್ತಿರು       || ಮುಂದೆ ||

ಲೋಟತ ಹೆಂಡತಿಯಂತೆ
ಹಿಂದಕ್ಕೆ ನೋಡಿದರೆ
ಉಪ್ಪಿನ ಸ್ತಂಭವಾಗುವೆ
ದೇವರ ಮಾತನ್ನು ಕೇಳದೇ         || ಮುಂದೆ ||

ಅದಿದೇಯಳಾದಳು
ಕ್ಷಣವೇ ಸ್ತಂಭವಾದಳು
ವಿಧೇಯತೆ ಮನುಜನಿಗೆ
ಮುಖ್ಯವಾದ ಮೂಲೆಗಲ್ಲು  || ಮುಂದೆ ||

ದೇವರ ರಾಜ್ಯ ಸೇರಲಿಕ್ಕೆ
ವಿದೇಯತ್ವವೇ ಮುಖ್ಯವು
ಪರಿಶುದ್ಧ ಜೀವನವು
ಇಂದೇ ಅವಶ್ಯವು || ಮುಂದೆ ||

* * *

ಗಟ್ಯಾದ ಬಂಡೆಯಂತೆ
ಕಿಸ್ತನ ವಾಕ್ಯವು
ಬೀರುಗಾಳಿ ಬೀಸಿದರೂ
ಬಂಡೆಗೆ ತಗಲದು          || ಗಟ್ಯಾದ ||

ಶರೀರದಲ್ಲಿ ಸ್ವಸ್ವತೆ
ಉಂಟಗುವುದು
ಕ್ರಿಸ್ತನ ವಾಕ್ಯ ತಿಳಿದರೆ
ಎಂತಾ ವಾಕ್ಯವು ಪರಿಶುದ್ಧವು       || ಗಟ್ಯಾದ ||

ಲೋಕದೊಳೇನು ವೈಭವ
ನಮ್ಮೊಂದಿರಲಾರದು
ಹುಟ್ಟುವಾಗಲೇ ನನ್ನು ಕಾರಲಿಲ್ಲವೇ
ನಿನ್ನ ಬಳಿ ಬರಲು ಆತ್ಮ ಕೊಡುವೆ   || ಗಟ್ಯಾದ ||

ನಾ ಸಾವಿಗೀಡಾದರೂ
ಭಯಪಡೆನು ಎಂದಿಗೂ
ನೀ ಜತೆ ಜೀವಿಸಲು
ಭಯವೇಕೆ ಯೇಸುವೇ     || ಗಟ್ಯಾದ ||

* * *

ತಾಯಿಯ ಗರ್ಭದೊಳು
ರೂಪಿಸಲ್ಪಡುವಾಗಲೇ
ನನ್ನೇಸು ನನ್ನನ್ನು ಅರಿತಿರುವ
ಹಾ ಹಲ್ಲೇಲೂಯ ಹಲ್ಲೇಲೂ         || ತಾಯಿಯ ||

ಎಲೆಮರೆ ಕಾಯಿಯಂತೆ
ನನ್ನನ್ನು ಕಾಪಾಡಿದಂತೆ
ಕಣ್ಣೀರಿನಲ್ಲಿಯೂ
ನನ್ನನ್ನು ಸಹಿಸಿದನು       || ತಾಯಿಯ ||

ರೋಗಗಳಂಟದಂತೆ
ಜೀವಮಾನವೆಲ್ಲವೂ
ಸಾಕಿ ಸಲಹಿದನು
ನನ್ನೇಸುವೇ ನನ್ನೇಸುವೆ   || ತಾಯಿಯ ||

* * *

ಕರ್ತನ ಮಾತನ್ನು ತಿರಸ್ಕರಿಸಿ
ಆತನ ದಯೆಯೂ ನನ್ನಲ್ಲಿದೆ
ಓ ಶುದ್ಧನೇ ಪರಿಶುದ್ಧನೇ
ನಿನ್ನ ನಂಬಿದ ಈ ದಾನಿಯನ್ನು      || ಕರ್ತನ ||

ಮನುಜರ ಪಾಪವ ಹೊತ್ತು
ಭೂಲೋಕವನ್ನಳಿದೆ
ನಿನಗೆ ಶುಭವಾಗಲೀ
ನನ್ನ ತಂದೆಯೇ ನನ್ನೇಸುವೇ       || ಕರ್ತನ ||

ಎಂಥಾ ಅಮೂಲ್ಯ ಮಿತ್ರನು
ನಮ್ಮೆಲ್ಲರಿಗೆ ದೊರೆತನು
ನರಕ ಮಾರ್ಗವನು
ತಪ್ಪಿಸುವ ಈತನೇ         || ಕರ್ತನ ||

* * *

ಕರ್ತನ ಭಯವೇ ಜ್ಞಾನವು
ದುಷ್ಠತ್ವ ಬಿಡುವುದೇ ವಿವೇಕವು
ಕರ್ತನ ಭಯದಲ್ಲಿ ಬೆಳೆಯೋಣವೇ
ನಿರಂತ್ರ ಆಶೀರ್ವದಿಸುವನಲ್ಲವೇ    || ಕರ್ತನ ||

ಹರ್ಷದಿಂ ನಿನ್ನನ್ನು ಸ್ತುತಿಸುವೆ
ಸಂಭ್ರಮದಿಂ ನಿನ್ನ ಕೊಂಡಾಡುವೆ
ನಿನ್ನ ಕೃಪೆ ವರ್ಣಿಸಿ ಕೊಂಡಾಡುವೆ
ನನ್ನೇಸುವೇ ನನ್ನೇಸುವೇ  || ಕರ್ತನ ||

ಪರರಿಗೆ ನಿನ್ನ ಕೃಪೆಯನ್ನು
ವರ್ಣಿಸಿ ಹೇಳಿ ಹೊಗಳುವೇನು
ನೀನವರನ್ನು ನೀಡಿದಾಶಿರ್ವಾದ
ಅತಿಯಾಗಿಯೇ ಆಶಿರ್ವದಿಸಿದ್ದೀ     || ಕರ್ತನ ||

* * *

ಕೃಪೆಯೂ ಸತ್ಯವೂ
ಯೇಸು ಕ್ರಿಸ್ತನೇ
ಆತಿನಿಂದಲೇ
ಕಂಡುಕೊಂಡೆವು  || ಕೃಪೆಯೂ ||

ದೀನಾವಸ್ತೆಯಲ್ಲಿದ್ದ ನಮ್ಮನ್ನು
ಆತನು ನೆನಪು ಮಾಡಿದನು
ದೇವರ ಪಾಲಿಸಿರುವ
ಸರ್ವಾಯುಧಗಳ ಧರಿಸಿರಿ || ಕೃಪೆಯೂ ||

ಸತ್ಯವೆಂಬ ನಡುಕಟ್ಟಿರಿ
ಇಬ್ಬಾಯಿ ಕತ್ತಿಯೆಂಬ ವಾಕ್ಯ
ನಿಮ್ಮಲ್ಲಿ ನೆಲೆಯಾಗಿರಲಿ
ಇದರಿಂದ ಅಗಲಿಸಲು ಅಸಾಧ್ಯವೇ  || ಕೃಪೆಯೂ ||

* * *

ಸಮುವೇಲನಂತೆ
ಬಾಲ್ಯದ ಜೀವನ
ದೇವರಿಗೆ ಮುಡಿಪು
ಇದು ಸತ್ಯವು     || ಸಮುವೇಲ ||

ನಿನ್ನನ್ನು ಆತುಕೊಂಡ
ಯುವಕ ಯುವತಿಯರು
ಯೌವನ ನಿನಗಾಗಿ
ಅರ್ಪಿಸಿ ಜೀವಿಸುವರು      || ಸಮುವೇಲ ||

ಅವರ ಜೀವಿತ ಮಾರ್ಗವನ್ನು
ಹೆಚ್ಚಾಗಿ ಆಶೀರ್ವದಿಸು
ನೀನೇ ಕಾಪಾಡಿ ನಡಿಸು
ನಿನ್ನನ್ನು ಹಿಂಬಾಲಿಸುವ    || ಸಮುವೇಲ ||

* * *

ಕರ್ತನು ಆಶ್ರಯವು
ಆಶಾಭಂಗವಾಗದು
ಆತನೇ ನನ್ನ ಆಧಾರವು
ಆತನೆನ್ನ ಕೈ ಬಿಡೆನು       || ಕರ್ತನು ||

ನನ್ನ ಭರವಸೆ ಆತನಲ್ಲಿ
ಸ್ಥಿರವಾಗಿ ತುಂಬಿದೆ
ಪರರೆಲ್ಲ ನೋಡಿ ಕರುಬಿದರೂ
ನನಗೇನೂ ಕೇಡು ಆಗದು || ಕರ್ತನು ||

ಆತನ ನೆರಳಲ್ಲಿರುವರು ಸದಾ
ನಿಶ್ಚಿಂತರಾಗಿರುವರು
ನಿಶ್ಚಯವಾಗೆಂದು ಸೋಲಿಲ್ಲ
ಜಯವಾದ ಜೀವಿತ ಕಾಣುವೆವು     || ಕರ್ತನು ||

* * *

ನಿನ್ನ ಕೃಪಾತಿಶಯವು
ಬಹು ಅಪಾರವಾದದ್ದು
ನನ್ನನ್ನು ಮೇಲೆತ್ತಿ ಕಾದಿದ್ದೀ
ರಕ್ಷಿಸಿ ಕಾಪಾಡಿದ್ದೀ         || ನಿನ್ನ ||

ಅಲೆಗಳ ನಡುವಿನಲ್ಲಿ
ನೆರಳಂತೆ ನೀನಿರುವಿ
ಬಿರುಗಾಳಿ ಮಧ್ಯದಲ್ಲಿ
ತಂಗಾಳಿಯಂತಿರುವೆ      || ನಿನ್ನ ||

ನಿನ್ನನ್ನು ತೊರೆದರೆ
ನಷ್ಠ ಅಪಾರವು
ನೀನೆನ್ನ ಅರಿತಿರುವೇ
ನನ್ನೇಸು ರಕ್ಷಕನೇ         || ನಿನ್ನ ||

ಬರುಡಾದ ಬಾಳಿನಲ್ಲಿ
ನಿಲುಕದ ದೋಣಿಯನ್ನು
ದಡ ಸೇರಿಸುವ ನಾವಿಕ
ನೀನಾಗಿ ನನಗಿರಲು       || ನಿನ್ನ ||

* * *

ಸುಂದರ ರಕ್ಷಕನೇ
ನೀನೇ ವಿಮೋಚಕನೇ
ವಂದಿಪೆ ಸನ್ನ ನಾಮವನೇ
ಹೌದೇಸುವೇ ಹೌದೇಸುವೇ         || ಸುಂದರ ||

ಅದ್ಭುತಕೆಲ್ಲ ಲೆಕ್ಕವಿಲ್ಲ
ವರ್ಣಿಸಲಿಕ್ಕೆ ಸಾಧ್ಯವಿಲ್ಲ
ನನ್ನಲ್ಪ ಶಕ್ತಿ ಸಾಲದಿಲ್ಲಿ
ನಿನ್ನ ನಾಮ ವರ್ಣಿಸಲು    || ಸುಂದರ ||

ನಾ ನಿನ್ನ ಹರ್ಷದಿಂ ಸದಾ
ಕೊಂಡಾಡ ಬೇಕಲ್ಲವೇ
ಸತ್ತೋಗೋ ಗತಿಯಲ್ಲಿಯು
ನಿಶ್ಚಿಂತನಾಗಬಲ್ಲೆನು       || ಸುಂದರ ||

* * *

ಪಾತಕನಾಗಿ ನಾ ನೆಲಸಿರುವೆ
ಪಾಪಿ ಎಂದು ತಿಳಿಯದೆ ನಾ
ಯೇಸು ನನ್ನ ಪಾಪ ಪರಿಹರಿಸಿದ    || ಪಾತಕ ||

ನನ್ನ ಪಾಪ ಕಡುಕೆಂಪಾದರೂ
ತಿಳಿಯದೆ ನಾ ಬಾರವ ಹೊತ್ತು
ಪಾಪವೆಮಬ ಬಾರವ ಹೊರಲಾದೆ
ಪಾಪಿಗೆ ಕ್ಷಮೆಯುಂಟ್ಟು ಯೇಸುವಲ್ಲೇ         || ಪಾತಕ ||

ಯೇಸುವಿನಾಶ್ರಯ ಪಡೆದಂತೆ
ಕರುಣೆಯು ದೊರೆವುದು ಆತನಿಂದ
ಪ್ರೀತಿ ಕೃಪೆಗಳೆಂಬ ಬಾಷ್ಪದಿಂದ
ನನಗೆ ಧರಿಸುವನೆಂದು ನಂಬಿರುವೆ || ಪಾತಕ ||

* * *

ಸಂತೋಷದಿ ನೀಡು ಧಾನವನ್ನು
ಸಂತೋಷದಿ ನಿನ್ನ ಹರಸುವನು
ಸಂತಷದಿಂದಲ್ಲಿ ಜೀವಿಸುವೆ
ಸಂತೋಷ ಆತನು ಪಾಲಿಸುವನು  || ಸಂತೋಷ ||

ಆತನ ಕಾರ್ಯವ ಧ್ಯಾನಿಸು ನೀ
ಚಿಂತಿಸದೆ ಅನಂತರವೂ
ಸದಾಕಾಲ ಜೀವನ ತುಂಬಿದೆ
ಸಂತೋಷದಿಂದಲಿ ಜೀವಿಸುವೆ      || ಸಂತೋಷ ||

ಜೀವನದಲ್ಲಾತನ ಬಿಟ್ಟರೆ ನೀ
ಚಿಂತೆಗಳೊಳಗೆ ನಿಲುಕುವೇ ನೀ
ಸಂತೋಷ ಪರಮಾನಂದದ
ಜೀವನ ನೀಡುವನು        || ಸಂತೋಷ ||

* * *

ವಿರೋಧವಾಗಿ ಎದ್ದರು
ನೂರಾರು ವೈರಿ ಜನರು
ನಾವೊಂದು ಚಿಕ್ಕಮಂದೆಯು
ಹೋರಾಡ ಶಕ್ತಿ ಸಾಲದು   || ವಿರೋಧ ||

ನಮ್ಮೆಲ್ಲ ತ್ರಾಣ ವ್ಯರ್ಥವು
ಪ್ರಯತ್ನ ಫಲವಿಲ್ಲದ್ದು
ಈ ಮೂಢಭಕ್ತಿ ಪರ್ವತ
ಯಾವಾತ ಕಿತ್ತು ಹಾಕುವ  || ವಿರೋಧ ||

ಸುವಾರ್ತೆ ಕೇಳಲೊಲ್ಲರು
ಕರ್ತನಾ ಸೇರಿಕೊಳ್ಳರಾ
ಭೋರ್ಗಲ್ಲಿನಂಥ ಹೃದಯಾ
ಯಾರೊಡ್ಡೆದ್ಹಾಕಿ ಬಿಡುವ   || ವಿರೋಧ ||

ನಾವಂತು ಅಂಜಲೊಲ್ಲೆವು
ನಮ್ಮಿಂಗನನ್ನು ಬಲ್ಲೆವು
ಇಮ್ಮಾನುವ್ಯಾಲನಾತನಾ
ನಮ್ಮೊಡನೆ ಶ್ರೀದೇವರು   || ವಿರೋಧ ||

* * *

ಒಕ್ಕಲಿಗನು ತನ್ನ ಭೂಮಿಯ
ಅಕ್ಕರದಿಂ ಹಸನುಮಾಡಿ ಬಿತ್ತುವುದಕ್ಕೆ
ಬಿತ್ತುವಾಗ ಕೆಲವು ಬೀಜ ದಾರಿಮಗ್ಗಾಲೊಳ್
ಬಿತ್ತು ಹಕ್ಕಿ ಬಂದು ಬೇಗ ತಿಂದುಬಿಟ್ಟವು      || ಒಕ್ಕಲಿಗನು ||

ಕೆಲವು ಬೀಜ ಬಂಡೆನೆಂದ ಮೇಲೆ ಬಿದ್ದವು
ಮೊಳೆತು ಬಿಸಿಲು ಬರಲು ಎಲ್ಲ ಬಾಡಿಹೋದವು
ಕೆಲವು ಬೀಜ ಮುಳ್ಳುಗಿಡಗಳಲ್ಲಿ ಬಿದ್ದವು
ಬೆಳೆದು ಮುಳ್ಳು ಅವುಗಳನ್ನು ಅಡಗಿಸಿಟ್ಟಾವು || ಒಕ್ಕಲಿಗನು ||

ಕೆಲವು ಬೀಜ ಒಳ್ಳೆ ಭೂಮಿಯಲ್ಲಿ ಬಿದ್ದವು
ಫಲದ ಕಾಲದಲ್ಲಿ ಬಹಳ ಫಲವ ಕೊಟ್ಟಾವು
ಒಳ್ಳೇ ಹೃದಯದಲ್ಲಿ ಬಿದ್ದಾ ದೇವ ವಾಕ್ಯವು
ಒಳ್ಳೇ ಫಲವ ಬಹಳವಾಗಿ ಕೊಡುತಲಿರ‍್ವದು   || ಒಕ್ಕಲಿಗನು ||