ನಾ ಪಾಡುವೆ ಎನ್ನ ಪ್ರಾಣವಿರುವತನಕ
ತಾಪಹರನ ಪ್ರೀತಿ ಈ ಮಹಿಯೊಳಗೆ
ಆ ಪುಣ್ಯಾತ್ಮನು ಎನ್ನ ತಾಪದೇಹವ ತಾಳಿ
ಈ ಪರಿ ಎನಗಾಗಿ ಆಪತಿಗೀಡಾದ   || ನಾ ಪಾಡುವೆ ||

ಹಲವರಾತನ ದಾರಿಯಲಿ ವಸ್ತುಗಳರಡಿ
ಬಲವಾಗಿ ಹೊಗಳಿದರ್ ಹೊಸನ್ನು ಎನ್ನುತ
ಕೆಲವರು ಶಿಲುಬೆಗೆ ಬೇಗನೇ ಹಾಕಿರಿ
ಎಂದು ಕೂಗಾಡುವರೇ ಛಲದಿಂ ದೇವಾ      || ನಾ ಪಾಡುವೆ ||

ಧರ್ಮದ ಅರಸನಂ ನಿರ್ಮೂಲ ಮಾಡಲು
ಕರ್ಮಿಯಾದೊರ್ವನಂ ಬಿಡಿಸಿದರೈ
ದುರ್ಮಾರ್ಗಿಗಳ ಪೆರೆಯೆ ಮರನ ಹೊಂದುವೆನೆಂದು
ಧರ್ಮಪ್ರಭುವು ತಾನೇ ಸಮ್ಮತಿಸಿ ಹೋದ   || ನಾ ಪಾಡುವೆ ||

ಇರಲೊಂದು ನೆಲೆಯಿಲ್ಲ ಮರೆಯಾಗೆ ಮನೆಯಿಲ್ಲ
ಮರಣಕಾಲದಿ ಸ್ವಂತ ಗೋರಿಯೊಂದಿಲ್ಲ
ಪರಮಾಶ್ಚರ್ಯವಿದೀಗ ಪರವೇ ಮನೆಯಾಗಿರಲು
ಪರನೇಕ ಸೆರೆಯಾದ ಮೂರುದಿನ ಗೋರಿಯೊಳ್      || ನಾ ಪಾಡುವೆ ||

* * *

ಪರಿಶುದ್ಧನೇ ನಿತ್ಯದೇವರೇ
ನಿನ್ನ ಮುಂದೆ ನಾನು ಬಂದೆ
ನನ್ನ ಪಾಪ ಭಾರ ತಂದೆ
ನಾನಯೋಗ್ಯನು ಕೆಟ್ಟದಾಸನು      || ಪರಿಶುದ್ಧನೇ ||

ನುಡಿ ನಡೆಯು ಇಚ್ಛೆಯಾಶೆಯು
ಎಲ್ಲಾ ಕೇಡಿಗೊಳಗಾಗಿ
ಘೋರ ಪಾಪ ಮಯವಾಗಿ
ನಿನ್ನ ಹತ್ರವೂ ಸಲ್ಲಲಾರವು          || ಪರಿಶುದ್ಧನೇ ||

ನನ್ನ ಮನಸ್ಸು ಬರೀ ಕತ್ತಲು
ಅದರಲ್ಲಿ ದೇವ ಪ್ರೀತಿ
ಶುದ್ಧಗುಣ ನ್ಯಾಯ-ನೀತಿ
ಕಾಣಲೊಲ್ಲವು – ಎಲ್ಲಾ ಸ್ವೇಚ್ಚೆಯು  || ಪರಿಶುದ್ಧನೇ ||

ಪಾಪ ನನಗೆ ಭಯಂಕರವೇ
ನನ್ನ ಹೇಸಿಕೊಳ್ಳುತ್ತೇನೆ
ಧೂಳಿಗಂಟಿ ಕೊಂಡಿದ್ದೇನೆ
ನಾ ಪಾಪಿಷ್ಠನು ನೋಡು ನನ್ನನ್ನು   || ಪರಿಶುದ್ಧನೇ ||

* * *

ಹೃದಯವನ್ನು ಮಗನೇ
ನನಗೆ ಕೊಡೆಂದು
ಪರಮತಂದೆ ಹೀಗೆ
ಅಪ್ಪಣೆ ಕೊಟ್ಟನು || ಹೃದಯವನ್ನು ||

ಓ ತಂದೆ ನನ್ನ ಹೃದಯ
ನಾ ಕೊಡ ಬಂದೆನು
ನೀನದನ್ನು ನಿರಂತರ
ತಕ್ಕೊಂಡು ರಕ್ಷಿಸು         || ಹೃದಯವನ್ನು ||

ಈ ಮೊದಲು ಕರ್ತಾ
ಸ್ವೇಚ್ಛೆಯ ಬಿಟ್ಟೆನು
ನಿನ್ನ ಪವಿತ್ರವಾದ
ಚಿತ್ತವ ಈಡೇರಿಸುವೆನು    || ಹೃದಯವನ್ನು ||

ದೇಹಾತ್ಮ ಸೊತ್ತು ಯಾವತ್ತು
ನನ್ನ ಸ್ವಾಮಿಗೆ ಕೊಡುವೆ
ಸದ್ಭಕ್ತನಾಗುತ್ತೇನೆಂದು
ಪ್ರಮಾಣ ಮಾಡುವೆ        || ಹೃದಯವನ್ನು ||

* * *

ಪ್ರಿಯ ಮಿತ್ರ ಪಾಪದಿ ನರಳುತ್ತಾ
ಆಧಾರವೆನಗೆ ಕೊಡುವ ವೈದ್ಯನು
ಯೇಸು ಜತೆಯಿರುವನು ಭಯವೇಕೆ
ನನ್ನೇಸುವೇ ಬಳಿ ಬರುವ ಚಿಂತೆಯೇಕೆ       || ಪ್ರಿಯ ||

ಲಕ್ಷಾಂತ್ರ ಧನವ ಅರ್ಪಿಸಿದರೂ
ಪಾಪಿಠ ಮನಶುದ್ಧಿ ಹೊಂದಲಾಗದು
ಕಿಸ್ತೇಸು ತಾನೇ ಸಾಕಾದ ಯಜ್ಞ
ಅಮೂಲ್ಯ ರಕ್ತದಿಂದಲೇ ನಮ್ಮನ್ನು ಕೊಂಡನು          || ಪ್ರಿಯ ||

ನಿನ್ನನ್ನು ನಂಬುವೇ ಓ ದಿವ್ಯ ಹೊಸೆಯೇ
ಅಘೋರವಾದ ಪಾಪಿಗೆ ಆಶ್ರಯವು ನೀನೇ
ರಕ್ಷಣೆ ಮಾಡಿದ್ದೀ ಪ್ರಪಂಚಕ್ಕಾಗಿಯೇ
ನನ್ನಾತ್ಮಾದಾಪ್ತನಾಗಿದ್ದೀ ಓ ಪ್ರಾಣ ಪ್ರಿಯನೇ          || ಪ್ರಿಯ ||

* * *

ಇನ್ನೊಂದು ವರ್ಷ ಸಮಾಪ್ತವಾಯಿತು
ಈ ಮೆರೆ ನಮ್ಮ ಆಯಸ್ಸು ಮುಗಿದೋಗ್ವದು
ಒಂದೊಂದು ವರ್ಷವು ನಮ್ಮನ್ನು ದಾಟಲು
ಜೀವಮಾನಾಂತ್ಯ ಕಾಲವು ಸಮೀಪಿಸುವುದು || ಇನ್ನೊಂದು ||

ತತ್ಕಾಲ ಮಾತ್ರವೇ ಎನ್‌ಸ್ವಂತವಾದದ್ದು
ಈಕಾಲ ನಷ್ಠವಾದರೇ ನಾ ಹುಚ್ಚನಾದೆನು
ಅಪಾರ ಸಂಪತ್ತು ಈಡಾಗಿ ಕೊಟ್ಟರೂ
ಸಂದ್ಹೇದಕಾಲ ಯಾರಿಗೂ ಎಂದೆಂದೂ ಸಿಕ್ಕದು        || ಇನ್ನೊಂದು ||

ತತ್ಕಾಲ ನನಗೆ ಅಮೂಲ್ಯವಾದದ್ದು
ಸುಜೀವ ಹೊಂದಿ ಈಗಲೇತಕ್ಕಾಂತ ವೇಳೆಯೂ
ಓ ದೇವರಾತ್ಮನೇ ಈ ದೊಡ್ಡ ನೆನವಪು
ಎಲ್ಲರ ಆತ್ಮದೊಳಗೆ ಬೇರೂರ ಮಾಡಿಸು     || ಇನ್ನೊಂದು ||

* * *

ಕರ್ತನ ನಿವಾಸವು
ಎಷ್ಠೋ ಪ್ರಿಯವಾದದ್ದು
ಆತನ ಮಂದಿರವು
ಧಾನ್ಯಕ್ಕೆ ಯೋಗ್ಯವು       || ಕರ್ತನ ||

ದೇವರು ತೇಜೋಮಯಿ
ಆತನೆಲ್ಲೆಲ್ಲೂ ದೃಷ್ಠಿಸುವ
ಆತನ ಗುಣಾತಿಶಯ
ಅತಿ ಪ್ರಿಯವಾದದ್ದು        || ಕರ್ತನ ||

ದೈವ ಪ್ರಭಾವವನ್ನು
ಪರಿಪೂರ್ಣತೆಯನ್ನು
ಪರಿಶುದ್ಧತೆಯಿಂದಲೂ
ಆತಗಾಗಿ ಕಾದಿರುವ       || ಕರ್ತನ ||

* * *

ಸಂಸಾರವೆಂಬ ಸಾಗರದಲ್ಲಿ
ನಿನ್ನ ಪಾತ್ರವೇನಾಗಿದೆ ?
ನಿನ್ನ ಭೂಯಾತ್ರೆ ಚಿಂತೆಯನ್ನು
ಆತಗೊಪ್ಪಿಸಿ ಕಾದಿರು      || ಸಂಸಾರ ||

ಆತನೆ ಸಂಸಾರ ಸಾಗಿಸುವ
ಓ ಮನುಜನೇ ಸೋಲ ಕಾಣದೇ
ನನ್ನೇಸುವನ್ನು ನಂಬಿ ಮುನ್ನಡೆ
ಆ ವಾಕ್ಯ ಸತ್ಯವೂ ನನ್ನೇಸುವ ಹೇಳಿದ       || ಸಂಸಾರ ||

ನಂಬಿಕೆ ಪ್ರೀತಿ ನಿರೀಕ್ಷೆಯಿಂದ
ನಿನ್ನ ಸಂಸಾರ ಸಾಗಿಸು
ಆತನನ್ನೇ ನಂಬಿ ಪ್ರಾರ್ಥಿಸತಾ
ಭರವಸೆಯಿಂದ ಕಾದಿರು   || ಸಂಸಾರ ||

* * *

ಕೋಟಿ ಶತಕೋಟಿ ನಾಲಿಗೆನಗೆ
ಕೋಟಿ ಶತಕೋಟಿ ಬಾಯ್ಗಳಿದ್ದರೆ
ಕೃತಜ್ಞನಾಗಿ ನಿನ್ನನ್ನು ವಂದಿಸಿ
ನನ್ನ ಜೀವಮಾನವೆಲ್ಲ
ನಿನ್ನ ಮಹಿಮೆ ಪ್ರಭಾವವನ್ನು
ವರ್ಣಿಸಿ ಹಾಡುತ್ತಿರುವೆ     || ಕೋಟಿ ||

ನನ್ನಾತ್ಮನೇ ನನ್ನಿಂದ ಸ್ತೋತ್ರ ಕೇಳನೋ
ಸ್ತುತಿ ಸ್ತೋತ್ರವನ್ನು ಬಾಯಿಂದಲಿ
ಹಾಡುತ್ತಾ ನಿನ್ನನ್ನು ಕೊಂಡಾಡುವೆ
ನಿನ್ನ ಅದ್ಭುತಕ್ಕೆಲ್ಲ ಲೆಕ್ಕವಿಲ್ಲದ್ದು
ಅದ ವರ್ಣಿಸಲೆನಗೆ ಶಕ್ತಿಸಾಲದು
ಸಮಸ್ತ ಭೂನಿವಾಸಿಯೇ ದೇವರ ಸ್ತುತಿಸುವ  || ಕೋಟಿ ||

* * *

ಮೇಘಗಳೊಡನೆ ನನ್ನೇಸು
ಬರಲಿಲ್ಲ ಕಾರಣವೇನು ?
ತಡಮಾಡಲು ಕಾರಣವೇನು ?
ಸ್ವಾಮಿ ಬೇಗನೇ ಬಾ      || ಮೇಘ ||

ನನ್ನೇಸು ಬರುವನೆಂದು
ಆತ್ಮವ ಆದಾಯಪಡಿಸಿ
ಆತನ ಬರುವಿಕೆಗಾಗಿ
ಎದುರುನೋಡಿ ಕಾಯುತ್ತಿರುವೆ      || ಮೇಘ ||

ಪರರೆಲ್ಲರೂ ನನ್ನನ್ನು ನೋಡಿ
ಪರಿಹಾಸ್ಯದಿಂದ ನಗುತ್ತಾ
ಪ್ರಶ್ನೆ ಹಾಕುತ್ತಲಿರುವರು
ನಿಶ್ಚಯ ಬರುವಿಯೆಂದು ಕಾದಿಹೆ    || ಮೇಘ ||

* * *

ಅಬ್ರಾಮ ದೇವರೇ
ಇಸಾಕನ ದೇವರೇ
ಅಂದಿನಿಂದಲೂ ನೀನೇ
ಎಂದೆಂದಿಗೂ ನೀನೇ      || ಅಬ್ರಾಮ ||

ವಾಕ್ಯದ ಜೀವವನ್ನು
ತಿಳಿಯಪಡಿಸಿದವನು
ಅದರ ರಹಸ್ಯವನ್ನು
ಇತರರಿಗೆ ಸಾರಿದನು      || ಅಬ್ರಾಮ ||

ನಿನ್ನನ್ನು ನಂಬಿದ ಜನರನ್ನು
ಕೈ ಬಿಡದೆ ನಡಿಸುವನು
ನೀನೆಲ್ಲ ಪರಿಶೋಧಿಸಿ
ನ್ಯಾಯವ ತೀರಿಸುವೆ      || ಅಬ್ರಾಮ ||

ಜಗದೊಡೆಯ ರಕ್ಷಕನೇ
ಪರಿಪೂರ್ಣ ಪಾಲನೇ
ವಂದನೇ ಸದಾಕಾಲವು
ಸಲ್ಲಿಸಿ ಜೀವಂತ್ಯ ಕಾಲದವರೆಗೂ    || ಅಬ್ರಾಮ ||

* * *

ಮಾನವರನ್ನು ಭೋದಿಸ ಬಂದ
ನನ್ನೇಸುರಾಜ ರಾಜಾದಿರಾಜ
ದೈವಕುವರ ಸುಕುಮಾರ
ಯೇಸುವೇ ನನ್ನ ದಿವ್ಯ ಮಿತ್ರನೇ    || ಮಾನವ ||

ಸಾಗರದಲ್ಲಿ ನೀರನ್ನುಂಟು ಮಾಡಿ
ನಾನು ದಾಹದಿ ಜೀವಿಸದಂತೆ
ಸಾಗರವೆಂದೂ ಬತ್ತಿ ಹೋಗದಂತೆ
ನನ್ನ ದಾಹವ ನೀಗಿಸ ನೀಡಿದನು    || ಮಾನವ ||

ಗಾಯದಿಂ ನೊಂದ ಕರಗಳಿಂದ
ನನ್ನನ್ನು ಆಧರಿಸಿ ಪ್ರೀತಿಸಿದನು
ಓ ಜಗದ್ರಕ್ಷಕನೇ ನನ್ನೇಸುವೇ
ನೀನೆನ್ನ ಜೀವಿಸ ಕೃಪೆ ತೋರಿದೆ    || ಮಾನವ ||

ನೀ ನೀಡಿದ ನೀರಿನಿಂದ ನನಗೆಂದೂ
ನೀರಡಿಕೆ ಇಲ್ಲವು ಸತ್ಯವಾದ
ಜೀವಜಲ ನಿನ್ನಿಂದಲೇ ದೊರಕಿತು
ಆ ಜೀವಜಲವೇ ಯೇಸು ಕರ್ತನು   || ಮಾನವ ||

* * *

ಅಪ್ಪಾ ತಂದೆಯೇ ನನ್ನ ನಡತೆಯಾ
ಪರಿಶೋಧಿಸಿ ಪರಿಶೀಲಿಸು ಕರ್ತನೇ
ನಿನ್ನ ಸೇವೆಯಲ್ಲಿ ನಿರತರಾಗಿರುವ
ಭಕ್ತರನ್ನೆಲ್ಲ ಆಶೀರ್ವದಿಸಿದ್ದೀ         || ಅಪ್ಪಾ ||

ಎಲೀಷಾನ ಸೇವಕನು ಗೆಹಜಿಯಂತೆ
ಮೋಸಗಾರ ರಾಗದಂತೆ ನಡಿಸಯ್ಯಾ
ವಾಮಾನನಂತೆ ವಿದೇಯತೆಯನ್ನು
ಪರಿಪಾಲಿಸುವಂತೆ ನಮಗನುಗ್ರಹಿಸು         || ಅಪ್ಪಾ ||

ಮುರಿದ ಮನಸ್ಸುಳವರನ್ನು ಸಂತೈಸಲು
ರೋಗಿಗಳನ್ನು ವಾಸಿ ಮಾಡುವುದಕ್ಕೂ
ಸತ್ತವರನ್ನು ಎಬ್ಬಿಸುವುದಕ್ಕಾಗಿಯೇ
ಯೇಸು ಈ ಲೋಕಕ್ಕೆ ಬಂದನು     || ಅಪ್ಪಾ ||

ಹಿಜೀಯನ ಮೊರೆಯನ್ನು ಆಲೈಸಿದ ದೇವರು
ಅಭಿಮಲೇಕನಿಗಾಗಿ ಪ್ರಾರ್ಥಿಸಲು
ಅಬ್ರಾಮ್ ಇವರಿಗಾಗಿ ಮೊರೆಯಿಡಲು
ದೇವರು ಈತನ ಪ್ರಾರ್ಥನೆ ಆಲೈಸಿದ        || ಅಪ್ಪಾ ||

* * *

ಮನುಜರೆಲ್ಲ ಈ ಲೋಕದಲ್ಲಿ
ಅವರವರ ಶಿಲುಬೆಯನ್ನು
ಖಂಡಿತವಾಗಿ ಹೊರಲೇಬೇಕು
ಪ್ರತಿಯೊಬ್ಬರಿಗೂ ಈ ವಾಗ್ದಾನವುಂಟು       || ಮನುಜ ||

ಶಿಲುಬೆಯೆಂದರೆ ಅದನ್ನು
ಅದಲು ಬದಲು ಮಾಡಲಸಾಧ್ಯವು
ಈ ಶಿಲುಬೆಯ ಮೂಲಕವೇ
ಒಬ್ಬನು ಸ್ವರ್ಗವನ್ನು ಸೇರುವನು    || ಮನುಜ ||

ಶಿಲುಬೆಯೆಂದರೆ ಇಹಲೋಕ
ಚಿಂತೆ ದುಃಖ ಬಾರ ಸಮಸ್ಯೆ
ಇದೆಲ್ಲವನ್ನು ಲೋಕದಯಾತ್ರೆಯಲ್ಲಿ
ಸರ್ವಶಕ್ತನಾದ ದೇವರು ನಡಿಸುವ  || ಮನುಜ ||

ಆತನು ನಂಬಿಗಸ್ತನಾದುದರಿಂದ
ಈ ಲೋಕದ ಯಾತ್ರೆಯಲ್ಲಿ
ಮಾರ್ಗದರ್ಶನ ನೀಡುತ್ತಾ
ನಮ್ಮನ್ನು ಸಮಾಧಾನಪಡಿಸಿ ನಡಿಸುವ       || ಮನುಜ ||

* * *

ಇಂದಿನ ದಿನಗಳಲ್ಲಿ
ಸೈತಾನನೊಂದಿಗೆ ನಾವು
ಆತ್ಮೀಯ ಹೋರಾಟವನ್ನು
ಮಾಡಬೇಕಾಗಿರುವುದು    || ಇಂದಿನ ||

ರಕ್ತಮಾಂಸವನ್ನು ಹೊಂದಿರುವ
ಮನುಷ್ಯ ಮಾತ್ರ ಸಂಗಡವಲ್ಲ
ರಾಜತ್ವಗಳ ಮೇಲೆಯೂ
ಅಧಿಕಾರಿಗಳ ಮೇಲೆ ಹೋರಾಟವು  || ಇಂದಿನ ||

ಈ ಅಂಧಕಾರದ ಲೋಕಾಧಿಪತಿ
ಆಕಾಶ ಮಂಡಲದ ದುರಾತ್ಮ
ಇವುಗಳ ಮೇಲೆ ಹೋರಾಟವೇ
ಪ್ರಾರ್ಥನೆಯಿಂದ ಜೈಸಬೇಕು       || ಇಂದಿನ ||

ದೇವರು ನಮಗೆ ಜಯ ಕೊಟ್ಟಾ
ನಾವು ನಮ್ಮ ಚಿಂತಾಭಾರವನ್ನು
ಆತನ ಮೇಲೆ ಹಾಕಿ ಆತನನುಗ್ರಹಿಸಿ
ಶಾಸ್ತ್ರಸ್ತ್ರಾಗಳನ್ನು ಧರಿಸಿಕೊಂಡು ಜೈಸುವ   || ಇಂದಿನ ||

* * *

ದೇವರು ಸಮಾದಾನ ಕರ್ತನು
ನಮ್ಮ ಚಿಂತಾಭಾರ ಆತನಲ್ಲೆಸೆದು
ನಿಶ್ಚಿಂತರಾಗಿ ಬೇಡಿಕೊಳ್ಳುವ
ದೇವರ ಉದ್ದೇಶವೇ ಬೇರೆ

ಮನುಷ್ಯನಾದ್ದೇಶವೇ ಬೇರೆ
ಬೇಡಿದ್ದು ನಮಗೆ ಸಿಗದಿರಲು
ಚಿಂತಿಸಂದೆ ಸಂತೋಷದಿ ಸ್ತುತಿಸುವ         || ದೇವರು ||

ತನಗೆ ನೋವನ್ನುಂಟು ಮಾಡುವ
ಮುಳ್ಳನ್ನು ತೆಗೆಯಬೇಕಾಗಿ
ಪೌಲನು ಮೂರು ಸಾರಿ ಬೇಡಿಕೊಂಡರೂ
ಆದರೆ ದೇವರವನಿಗೆ ಮುಳ್ಳನ್ನು
ತೆಗೆಯಲಾರದೆ ಬಲಹೀನತೆಯಲ್ಲಿ
ಒಲವು ಸಾರ್ಥಕವೇ ಎಂದು
ನನ್ನ ಕೃಪೆಯೇ ನಿನಗೆ ಸಾಕೆಂದು ಹೇಳಿದ    || ದೇವರು ||

* * *

ಪೌಲನ ಜೀವಿತದಲ್ಲಿ ದೇವರು
ಪೌಲನ ತಗ್ಗಿಸಲು ಮುಳ್ಳೊಂದು
ಇರುವುದವಶ್ಯಕವೆಂದು
ದೇವರು ಆಲೋಚಿಸಿದನು
ಅದ್ವಿತೀಯವಾದ ಪ್ರಕಟಣೆ
ಹೊಂದಿಕೊಳ್ಳುವಂತದ್ದಾರಿಂದ
ಗರ್ವಪಡಬಹುದೆಂದು ಮುಳ್ಳನ್ನು ತೆಗೆಯಲಿಲ್ಲ          || ದೇವರು ||

ನಮಗೆ ಬರುವ ಶೋಧನೆಗಳಲ್ಲಿ
ಮರಣವಾಗುವಷ್ಠರ ಮಟ್ಟಿಗೆ
ಶೋಧನೆಗಲು ಬರಲಾರದು
ಎಂಬ ವಾಗ್ದಾನ ನಮಗೆ ಉಂಟು
ಆತನ ಕೃಪೆಯೇ ನಮಗೆ ಸಾಕು
ಪೂರ್ಣ ಮನಸ್ಸಿನಿಂದ ನಾವೆಲ್ಲರೂ
ದೇವರ ಹುಡುಕಿದರೆ ಅಗತ್ಯತೆ ಪೂರೈಸುವ   || ದೇವರು ||