ಬೆತ್ಲೆಹೇಮಿನೊಳು
ಒಬ್ಬರಾಜನು ಜನಿಸಿದನು
ಆತನೇ ಲೋಕ ರಕ್ಷಕನು
ಜಗದ್ರಕ್ಷಕನೇ ಜಗದ್ರಕ್ಷಕನೇ         || ಬೆತ್ರೆ ಹೇಮಿನೊಳು ||

ಇಂತ ರಾಜನ ಪಡೆಯಲು
ನಾನೆಂತ ಅದೃಷ್ಟನೋ?
ಈ ರಾಜನೇ ನನ್ನಾತ್ಮವ
ಆಳಲೆಂದೇ ಬಂದನು      || ಬೆತ್ರೆ ಹೇಮಿನೊಳು ||

ಈತನು ಹುಟ್ಟಿದ ವರುಷದಿಂದ
ಶಾಂತಿ ಸಮಾಧಾನ ನೆಲಸಿತ್ತು
ಜನರಲ್ಲಿ ಯಾವ ಗಲಭೆಯು
ಇಲ್ಲದೇ ರಾಜ್ಯವು ಶಾಂತವಾಗಿತ್ತು || ಬೆತ್ರೆ ಹೇಮಿನೊಳು ||

ಈ ರಾಜನ್ಯಾರು ಯೇಸುಕ್ರಿಸ್ತನೇ
ಕರುಣಾಳು ಮೂರ್ತಿಯಲ್ಲವೇ
ಹರುಷದಿ ಈತನ ವಂದಿಸಿ
ನಾವು ಪಾದಕ್ಕೆರಗೋಣ   || ಬೆತ್ರೆ ಹೇಮಿನೊಳು ||

* * *

ಎಷ್ಟೆಂದು ವರ್ಣಿಸುವೆ ಕರ್ತ
ನಿನ್ನ ಪ್ರೀತಿಯನ್ನು ಹೇಗೆಂದು ವರ್ಣಿಸಲಿ      || ಎಷ್ಟೆಂದು ವರ್ನಿಸಲ್ಲಿ ||

ನಂಬಿದ ಜನರಿಗೆ ಮಾರ್ಗವ ತಿಳಿಸಿದ
ನಂಬಿತಾನೇ ಆತನ ಹಿಂಬಾಲಿಸಿ
ಅಂತರಂಗವನ್ನೆಲ್ಲಿ ಬಲ್ಲವನಾತ
ಅಂತರಂಗದ ಕೊರತೆ ನೀಗಿಸುವ   || ಎಷ್ಟೆಂದು ವರ್ನಿಸಲ್ಲಿ ||

ದುರ್ಮಾಗ ತಿಳಿದವ ನಾಶ ಹೊಂದುವನು
ಹಂಬಲದಿಂದ ದೈವ ಹಿಂಬಾಲಿಸು
ಹೀಗೆ ನಡೆದರೆ ನೀ ಪಾವನ ಹೊಂದುವೆ
ಹೀಗೆ ನಡೆದರೆ ನಾ ಪಾವನ ಹೊಂದುವೆ

* * *

ಎಷ್ಟೆಂದು ವರ್ಣಿಸಲಿ ದೇವ
ನಿನ್ನ ಪ್ರೀತಿ ಕೃಪೆ ಹೇಗೆಂದು ವರ್ಣಿಸಲಿ
ನೆನೆದು ನೆನೆದು ನಿನ್ನ ಪ್ರೀತಿ ಕೃಪೆಯನ್ನು
ಬಳಲಿ ಹೋದೆ ನಾನು ದಾರುಣಿಯಲ್ಲಿ         || ಎಷ್ಟೆಂದು ವರ್ಣಿಸಲಿ ||

ನಿನ್ನ ಮಾರ್ಗವನ್ನು ನಂಬಿದ ಜನರಿಗೆ
ನಿನ್ನ ತಿಳಿದ ಜನ ಮುಕ್ತಿ ಪಡೆವರು
ನಿನ್ನನ್ನು ತಿಳಿದವ ಎಡವುದಸಾಧ್ಯ
ನಿನ್ನ ಕರುಣೆಯನ್ನು ತೋರ್ಪಡಿಸಯ್ಯ         || ಎಷ್ಟೆಂದು ವರ್ಣಿಸಲಿ ||

ದಾರುಣಿಯಲ್ಲಿ ಮನುಜನ ಮಾರ್ಗ
ಇಚ್ಚೆಯಿಂದೆಲ್ಲ ಬಳಲಿ ಹೋದರು
ಬಳಲಿದ ಜನರೇ ಬಾಯಾರಿದವರೇ
ಬನ್ನಿರಿ ಆತನ ಮಾರ್ಗವ ಪಡೆಯಿರೀ          || ಎಷ್ಟೆಂದು ವರ್ಣಿಸಲಿ ||

* * *

ಯೇಸು ರಕ್ಷಕನೇ ನನ್ನನ್ನು ದೃಷ್ಟಿಸಿ ನೋಡಯ್ಯಾ
ಪಾಪದ ಹೊರೆ ಹೊತ್ತು ಮನುಜರಿಗಾಗಿ
ತ್ಯಾಗವ ಮಾಡಿದೆಯಾ    || ಯೇಸು ರಕ್ಷಕನೇ ||

ಕುಂಟರನ್ನು ಕಂಡು ಕೈಯ್ಯಿಂದ ಮುಟ್ಟಿ ನಡೆಯುವಂತೆ
ನಡೆದಾಡುವಂತೆ ಅದ್ಭುತ ಮಾಡಿದ ರಕ್ಷಕ ನೀನಲ್ಲವೇ
ರಕ್ಷಕ ನೀನಲ್ಲವೇ           || ಯೇಸು ರಕ್ಷಕನೇ ||

ಕುಷ್ಠರೋಗಿಯನ್ನು ಮುಟ್ಟಿ ಸ್ವಸ್ಥಮಾಡಿದೆಯಲ್ಲ
ಕುರುಡನನ್ನು ಕಂಡು ದೃಷ್ಠಿಯ ಕೊಟ್ಟ ಯೇಸು ನೀನಲ್ಲವೇ
ಯೇಸು ನೀನಲ್ಲವೇ        || ಯೇಸು ರಕ್ಷಕನೇ ||

ಸತ್ತ ಲಾಜರನನ್ನು ಬದುಕಿಸಿದವನಲ್ಲವೇ
ಐದು ರೊಟ್ಟಿ ಎರಡು ಮೀನನ್ನು ಐದು ಸಾವಿರದ ಮಂದಿಗೆ ಹಂಚಿ
ತೃಪ್ತಿ ಪಡಿಸಿದನಲ್ಲವೇ      || ಯೇಸು ರಕ್ಷಕನೇ ||

* * *

ಆಕಾಶವು ಪ್ರಕಾಶಿಸಲಿ
ಭೂಲೊಕವು ಕೀರ್ತಿಸಲು
ನನ್ನ ಯೇಸು ಬರುವ ಸಮಯ
ನಾನೆಂದಿಗೂ ಹಾಡುವೆನು           || ಆಕಾಶ ಪ್ರಕಾಶಿಸಲಿ ||

ಕರುಕಟ್ಟಿದ ಕೊಟ್ಟಿಗೆಯೊಳ್
ಯೇಸು ರಾಜನು ಜನಿಸಿದನು
ಆತ ನೋಡುವನು ನನ್ನ ಶಿಕ್ಷಿಸುವನು
ದುರ್ಮಾರ್ಗವ ತ್ಯಜಿಸಿ ನಡೆಯೋಣ || ಆಕಾಶ ಪ್ರಕಾಶಿಸಲಿ ||

ಇಂತ ಪ್ರೀತಿಯ ಕಾಣಿಕೆಗೆ
ಬದಲೇನನು ಕೊಡುವೆ ನಾ
ನನ್ನ ಹೃದಯವನ್ನು ಆತನಿಗೆ ಅರ್ಪಿಸಿ
ಹಗಲೂ ಇರುಳು ಸ್ತುತಿಸೋಣ      || ಆಕಾಶ ಪ್ರಕಾಶಿಸಲಿ ||

* * *

ಪಾಪಿಯ ಮನಸ್ಸು ಬದಲಾಗುವಂತೆ ಕಾಯುವಾತ್ಮನೇ
ಘನಮಾನ ಸ್ತೋತ್ರನೇ ಘನಮಾನ ಪಾತ್ರನೇ          || ಪಾಪಿಯ ||

ಹೊಸದು ಆಸೆ ಹೊಸದು ಚಿಂತೆ ನೀಡಬಲ್ಲವ
ದಿನ ಸ್ತುತಿಸಿ ಹಾಡುವ ನಿತ್ಯಸ್ತುತಿಸಿ ಹಾಡುವ || ಪಾಪಿಯ ||

ಕರುಣೆಯನ್ನು ನೀಡಿದಂತ ದಿವ್ಯ ರಕ್ಷಕನೇ
ಹೊಸ ಜೀವನಪಾಲಿಸು ಹೊಸ ಜೀವನಪಾಲಿಸು       || ಪಾಪಿಯ ||

ಕಷ್ಠ ದುಃಖ ಚಿಂತೆಯನ್ನು ಪರಿಹರಿಸುವವನೇ
ನನ್ನ ಪರಮ ಮಿತ್ರನೇ ನನ್ನ ದೇವ ಪಾಲಕನೇ         || ಪಾಪಿಯ ||

* * *

ವಂದಿಸುವೆ ನಿನ್ನ ವಂದಿಸುವೆ
ನನ್ನ ಕರದಿಂದಲೂ ನನ್ನ ಮನದಿಂದಲೂ
ನನ್ನೇಸುರಾಜನಂ ವಂದಿಸುವೆ       || ವಂದಿಸುವೆ ನಿನ್ನ ವಂದಿಸುವೆ ||

ಅದ್ಭುತರಾಜನ ಕೃಪೆಯಿಂದಲಿ
ಚರದಲ್ಲಿ ಸಾಗುತೆ ಜೀವಿತವು
ಜೀವಿತ ಕಾಲದ ಅಂತ್ಯದೊಳು
ಕಾಣುವೆ ಆತನ ಆಶೀರ್ವಾದ        || ವಂದಿಸುವೆ ||

ಹರುಷದ ಜೀವಿತ ನೀಡಿದನು
ಸಮಾಧಾನ್ಯಷ್ವರ್ಯ್ಯ ನೀಡಿದನು
ಕರ್ತನ ಕೃಪೆಯೇ ಸಾಕು ಎನಗೆ
ಆತಾನಾಶೀರ್ವಾದ ಸಾಕೆನಗೆ       || ಪಾಪಿಯ ||

* * *

ಹಾಡಲೇ ನನ್ನ ಮನವೇ
ನಾ ಹೇಳಲೇ ನಿನ್ನ ವರ್ಣನೇ
ಯೇಸುವೇ ಉದ್ಧಾರಕ
ಯೇಸುವೇ ಮೆಸ್ಸೀಯನು  || ಹಾಡಲೇ ||

ಜಕ್ಕಾಯನಂತ ಹೃದಯವನ್ನು
ನನಗಾರು ದಯಪಾಲಿಸು
ಲೌಕೀಕ ಜೀವನ ತ್ಯಜಿಸಿ ಆತನು
ನಿನ್ನೆಡೆ ಬರದಲ್ಲಿ ಸಾಗಿದನು         || ಹಾಡಲೇ ||

ನಿನ್ನನ್ನು ಹಿಂಬಾಲಿಸಿ ನಡೆಯುವ
ನಿನ್ನ ಕೃಪೆಯನ್ನು ವರ್ಣಿಸಲು
ಅಸಾಧ್ಯವೇ ಅಸಾಧ್ಯವು
ಪರಮಪಾಲಕ ನೀನಲ್ಲವೇ || ಹಾಡಲೇ ||

* * *

ಇನ್ನಾರು ನನಗೆ ಅವಶ್ಯವೂ
ಈ ಲೋಕದಲ್ಲಿ ನೀನಲ್ಲದೇ
ಹೋಗುವಾಗಲೂ ಬರುವಾಗಲೂ
ಕಾಯುವ ರಕ್ಷಕ ಯೇಸುವೇ         || ಇನ್ನಾರು ನನಗೆ ||

ಆಕಾಸದಲ್ಲಿ ಹಾರೋಣವೆಂದರೆ
ಅಲ್ಲೂ ನಿನ್ನ ಕೈ ನನ್ನನಾವರಿಸಿದೆ
ಭೂಗರ್ಭದಲ್ಲಿ ಸೇರೋಣವೆಂದರೆ
ಅಲ್ಲೂ ನಿನ್ನ ಕೈ ನನ್ನನಾವರಿಸಿದೆ
ಓ ರಕ್ಷಕಾ ಓ ರಕ್ಷಕಾ ಓ ರಕ್ಷಕಾ      || ಇನ್ನಾರು ನನಗೆ ||

ನಿನ್ನ ಕಣ್ಣಿಗೆ ಮರೆಯಾಗಿ ನಾನು
ಎಲ್ಲಿ ಹೋಗಿ ಜೀವಿಸಲಿ
ನಿನ್ನ ಆಶ್ರಯ ಬಿಟ್ಟು ಎಲ್ಲಿ ಹೋದರೂ
ನಿನ್ನ ಕೃಪೆ ನನ್ನನ್ನಾವರಿಸಿದೆ
ಓ ಯೇಸುವೇ ನನ್ನ ರಕ್ಷಕನೇ        || ಇನ್ನಾರು ನನಗೆ ||

* * *

ಪ್ರೀತಿಯೆಂಬ ಶ್ರೇಷ್ಠತೆ
ಯಾರಲ್ಲುಂಟು ಅವನೇ ಧನ್ಯನು
ಪ್ರೀತಿ ಇಲ್ಲದ ಮನುಜನು
ದೈವ ವರಕ್ಕೆ ಅಪಾತ್ರನು  || ಪ್ರೀತಿಯೆಂಬ ||

ಪ್ರೀತಿ ಇರುವಲ್ಲಿ ದೈವ ನೆಲೆಯುಂಟು
ನಿನ್ನ ನೆರೆಯವನನ್ನು ನಿನ್ನಂತೆಯೇ
ಪ್ರೀತಿಸೆಂಬ ವಾಕ್ಯವನ್ನು
ಯೇಸು ಹೇಳಿದ ಮನುಜರಿಗೆ        || ಪ್ರೀತಿಯೆಂಬ ||

ಪ್ರೀತಿಯುಂಟೋ ನನ್ನಲ್ಲಿ
ನಾನು ನನ್ನ ದೇವರನ್ನು ಪ್ರೀತಿಸಿದಂತೆ
ಪರರನ್ನು ಹಾಗೆ ಪ್ರೀತಿಸುವೆ
ಯೇಸು ಹೇಳಿದ ಮನುಜರಿಗೆ        || ಪ್ರೀತಿಯೆಂಬ ||

* * *

ನೀ ತಂದಾಶಿರ್ವಾದ ಸಾಕೆನಗೆ
ಸಂಸಾರ ಕ್ಷೇಮ ಬಾಳಿಕೆಯಾ
ನೀಡುವ ರಕ್ಷಕ ನೀನಲ್ಲವ || ನೀ ತಂದಾ ||

ನೀ ಜೀವಿಸುವ ದೇವರೇ
ನೀ ನಿರಂತ್ರವಾಗಿ ಜೀವಿಸುವ
ನನ್ನ ದೇವರೇ ಓ ಯೇಸುವೇ        || ನೀ ತಂದಾ ||

ನೀ ಜೀವಿಸುವ ಚರಿಸುವನೇ
ಒಂದೊಂದು ಆತ್ಮಾದಲ್ಲಿಯೂ
ಜೀವಿಸುವ ದೇವರೇ ಓ ಯೇಸುವೇ || ನೀ ತಂದಾ ||

ಗುಣಶೀಲನೇ ಪರಿಶುದ್ಧನೇ
ನನ್ನನ್ನು ಪರಿಶೀಲಿಸಿದ್ದೀ
ನನ್ನ ಕಾಯಲು ನನಗಾಗಿ ಜೀವಿಸಿದ್ಧೀ         || ನೀ ತಂದಾ ||

* * *

ಭೂಮಿಯಾ ಅದರಲ್ಲಿರುವ
ಸಮಸ್ತವು ದೇವರದೇ
ಲೋಕವು ಅದರ ನಿವಾಸಿಗಳು
ಆತನವೇ ಆತನದರಸ್ತಿಬಾರವನ್ನು
ಸಾಗರದ ಮೇಲೆ ಹಾಡಿದವನು
ಯೆಹೋವನ ಪರ್ವತವನ್ನು
ಹತ್ತತಕ್ಕವನೆಂತವನಾಗಿರುವ
ಅಯೋಗ್ಯ ಕಾರ್ಯ ನಡೆಸದೆ
ಮೋಸ ಪ್ರಮಾಣ ಮಾಡದೇ
ಶುದ್ಧಾ ಹಸ್ತ ನಿರ್ಮಲಮನಸ್ಸುಂಟೋ
ಆತನೇ ಯೋಗ್ಯನು ಆತನೇ ಯೋಗ್ಯನು     || ಭೂಮಿಯೂ ||

ಯೆಹೋವನಿಂದ ನೀತಿ ಫಲವನ್ನು
ರಕ್ಷಕನಾದ ದೇವರಿಂದ ಶುಭವನ್ನು
ಪಡೆಯುವನು ಇಂತವರೇ ದೇವರನ್ನು
ಆತನ ದರ್ಶನ ಪಡೆಯುವರು
ಯಾಕೊಬ್ಯ ದೇವರೇ ನಿನ್ನ ಸಾನಿಧ್ಯವ
ಸೇರುವವರು ಇಂತವರೇ  || ಭೂಮಿಯೂ ||

* * *

ಯೆಹೋವನಲ್ಲಿ ನಿನ್ನನ್ನೇ ನಂಬಿರುವೆ
ನನಗಾಶಾಭಂಗ ಪಡಿಸದೆ
ಶತ್ರುಗಳುತ್ಸಾಹ ಪಡದೆಂತೆ
ಆಸ್ಪದ ಮಾಡಬೇಡ

ನಿನ್ನ ನಿರೀಕ್ಷಿಸಿದವರಿಗೆ
ಎಂದಿಗೂ ಆಗಬಾರದು
ಯೆಹೋವನೇ ನಿನ್ನ ಮಾರ್ಗವ
ನೀ ಒಪ್ಪವ ದಾರಿಯನ್ನು ತೋರಿಸು            || ಯೆಹೋವನೇ ||

ಆದಿಯಿಂದಲೂ ನನ್ನನ್ನು ಕರುಣಿಸಿ
ನೀ ಮಾಡಿದದುಪಕಾರವ ನೆನಸಿ
ನಿನಗೆಷ್ಠೋ ಅಪಕಾರವ ನಡೆಸಿದರೂ
ನನ್ನನ್ನು ಕ್ಷಮಿಸಿ ಜೀವಿಸ ಮಾಡಿದೆ   || ಯೆಹೋವನೇ ||

* * *

ನೀನೇ ನನ್ನ ಬಂಡೆಯೂ
ಕೋಟೆಯೂ ಆಗಿರುವೆ
ನಿನ್ನ ನಿಮಿತ್ತ ದಾರಿತೋರಿಸಿ
ನನ್ನನ್ನು ನಡೆಸಯ್ಯಾ       || ನೀನೇ ನನ್ನ ||

ಕಷ್ಟದ ಕಾಲದಲ್ಲಿಯೂ
ನೀನೇ ನನಗೆ ಆಧಾರವು
ನಂಬಿಕೆಯುಳ್ಳ ದೇವರೇ
ನನ್ನನ್ನು ವಿಮೋಚಿಸಿದ್ದೀ    || ನೀನೇ ನನ್ನ ||

ಸುಳ್ಳಾದ ವಿಗ್ರಹಗಳನ್ನು
ಅವಲಂಬಿಸಿದವರನ್ನು
ನಾನು ದ್ವೇಷಿಸುತ್ತೇನಲ್ಲವೋ
ನಾ ನಿನ್ನಲ್ಲೇ ಭರವಸವಿಟ್ಟಿರುವೆ     || ನೀನೇ ನನ್ನ ||

* * *

ಯೆಯೋವನೇ ನಾವಾದರೂ
ನಿನ್ನಲ್ಲೇ ನಂಬಿರುವೇ
ನೀನೇ ನನ್ನ ದೇವರೆಂದು
ಹೇಳಿಕೊಂಡು ಜೀವಿಸುವೆ || ಯೆ ಹೋವನೇ ||

ನನ್ನಾಯುಷ್ಯಾಲವು ನಿನ್ನ ಕೈಯ್ಯಲ್ಲಿದೆ
ಹಿಂದಟ್ಟಾವ ಶತ್ರುಗಳ ಬಾದೆಯಿಂದ
ನನ್ನನ್ನು ತಪ್ಪಿಸಿ ಕಾಪಾಡಯ್ಯಾ
ಪ್ರಸನ್ನ ಮುಖದಿಂ ನನ್ನನ್ನೇ ನೋಡು
ಪ್ರೀತಿಯಿಂದೆನ್ನನ್ನು ರಕ್ಷಿಸಯ್ಯಾ     || ಯೆ ಹೋವನೇ ||

ನಿನ್ನಾಶ್ರಿತರಿಗೋಸ್ಕರ ನೀನೆಲ್ಲರ ಮುಂದೆ
ಇಟ್ಟಿರುವ ಮೇಲೂ ಎಷ್ಠೋ ವಿಶೇಷವು
ಮನುಷ್ಯರ ಒಳ ಸಂಚುಗಳಿಂದ
ಹಾನಿಯೂಂಟಾಗದಂತೆನ್ನ ಕಾಪಾಡು
ಯೆಹೋವನ ಭಕ್ತರೇ ಆತನ ಪ್ರೀತಿಸಿರಿ       || ಯೆ ಹೋವನೇ ||

* * *

ನನ್ನೆ ಹೋವನನ್ನು ಎಡೆಬಿಡದೇ
ಆತನ ನಾಮವಕೊಂಡಾಡುವೆ
ಆತನ ಸ್ತೋತ್ರವೂ ಯಾವಾಗಲೂ
ನನ್ನ ಬಾಯಲ್ಲಿರುವುದು

ನನ್ನ ಆತ್ಮ ಹಿಗ್ಗುವುದು
ದೀನರು ಕೇಳಿ ಸಂತೋಷ ಪಡ್ವರು
ನನ್ನೊಡನೇ ಯೆಹೋವನ ಕೊಂಡಾಡಿರಿ
ನಾವೆಲ್ಲರೂ ಸೇರಿ ಆತನ ಘನಪಡಿಸುವ      || ನನ್ನೆ ಹೋವನನ್ನು ||

ಆತನನ್ನು ದೃಷ್ಟಿಸಿದವರು
ಪ್ರಕಾಶ ಹೊಂದುವರು
ಅವರ ಮುಖವು ಲಜ್ಜೆಯಿಂ ಕೆಡಲಾರದು
ಯೆಹೋವನೇ ಸವೋತ್ತಮನೆಂದು ತಿಳಿಯಿರಿ          || ನನ್ನೆ ಹೋವನನ್ನು ||

* * *

ನಿನ್ನ ನೀತಿಯೂ ದಿವ್ಯಪರ್ವತ
ನಿನ್ನ ನ್ಯಾಯವೂ ಮಹಾಸಾಗರ
ನಿನ್ನ ಮಂದಿರವೂ ಸಮೃದ್ಧಿಯಾಗಿದೆ
ನಿನ್ನ ಸಂಭ್ರಮ ಪ್ರವಾಹದಲ್ಲಿ
ಪಾನ ಮಾಡಿಸುತ್ತಿ         || ನಿನ್ನ ನೀತಿಯೂ ||

ನಿನ್ನ ಬಳಿಯಲ್ಲಿ ಜೀವ ಬುಗ್ಗೆ ಉಂಟ್ಯಾ
ನಿನ್ನ ತೇಜಸ್ಸು ನಮಗೆ ಬೆಳಕು
ನಿನ್ನ ನರಿತವರಿಗೆ ನಿನ್ನಾ ಪ್ರೀತಿ ಉಂಟು
ನಿನ್ನ ನಂಬಿಗಸ್ತಿಕೆ ಮೇಘಮಾರ್ಗ ಮುಟ್ಟುತ್ತೆ   || ನಿನ್ನ ನೀತಿಯೂ ||

ನಿನ್ನ ನ್ಯಾಯವು ತೇಜಸ್ಸಿನಂತಿದೆ
ನಿನ್ನ ದರ್ಶನ ಕೋರುವರೆಲ್ಲರೂ
ನಿನ್ನ ಜಯದಲ್ಲಿ ಆನಂದಿಸುವರು
ನಿನ್ನ ಸನ್ನಿಧಿ ಶಾಶ್ವತವಾಗಿದೆ        || ನಿನ್ನ ನೀತಿಯೂ ||

* * *

ನೀನೆಲ್ಲಾ ಮನುಷ್ಯರಿಗಿಂತಲೆ ಸುಂದರನೇ
ನಿನ್ನ ಮಾತುಗಳು ಅತಿ ಮಧುರವೇ           || ನೀನೆಲ್ಲಾ ||

ನಿನ್ನ ರಾಜದಂಡವು ನ್ಯಾಯಸ್ಥಾಪಕವೇ
ನೀನು ಧರ್ಮವ ಪ್ರೀತಿಸಿ ಅಧರ್ಮತ್ಯಜಿಸಿದಿ,
ನಿನ್ನ ದಿವ್ಯಾಂಬರ ರಕ್ತಬೋಳ ಅಗರು ಚಂದನ
ಗಳಿಂದೆಷ್ಟೋ ಸುವಾಸನೆ ಯುಳ್ಳವುಗಳಾಗಿವೆ         || ನೀನೆಲ್ಲಾ ||

ನೀನೆನ್ನೆ ಸ್ವಾಸ್ಥ್ಯವನ್ನು ಭದ್ರಗೊಳಿಸುವಿ
ಎನಗೆ ಪ್ರಾಪ್ತವಾದ ಸ್ವಾಸ್ತ್ಯವು ರಮಣೀಯವೇ
ಅದೆನಗೆ ಸಂತೃಪ್ತಿಕರವಾಗಿದೆ
ನಾನೆ ಹೋವನನ್ನು ನನ್ನೆದುರಿನಲ್ಲಿರುಸಿರುವೆ           || ನೀನೆಲ್ಲಾ ||

* * *

ಯೆಹೋವನೆನ್ನೆ ಬಂಡೆಯೂ
ಕೋಟೆಯೂ ನನ್ನ ವಿಮೋಚಕನು
ನನ್ನ ದೇವರೆನ್ನಾಶ್ರಯ ಗಿರಿಯೂ
ನನ್ನ ಗುರಾಣಿಯೂ ನನ್ನ ರಕ್ಷಣೆಯೂ
ಎನ್ನ ಕೊಂಬು ದುರ್ಗವೂ ಆಗಿರುವ  || ಯೆ ಹೋವನೆನ್ನ ||

ಯೆಹೋವನು ಎನ್ನ ಸ್ತೋತ್ರಕ್ಕೆರ್ಹನು
ಮೊರೆಯಿಡಲು ಆತನೆನ್ನನ್ನು ರಕ್ಷಿಸುವ
ನನ್ನ ವೈರಿಗಳಿಂದ ರಕ್ಷಿಸಿ ಕಾಪಾಡುವ
ಮೃತ್ಯುಪಾಶಗಳೆನ್ನನ್ನು ಸುತ್ತಿಕೊಂಡರೂ
ನಾಶಪ್ರವಾಹದಿಂದನ್ನೆನ್ನು ಕಾಪಾಡಿದ         || ಯೆ ಹೋವನೆನ್ನ ||

ಮರಣಕರವಾದ ಉರುಲಿನಿಂದಲೂ
ನನ್ನನ್ನು ಕಾಪಾಡಿ ರಕ್ಷಿಸಿದನು
ಆತನಿಗೆ ನಾ ಪ್ರಾರ್ಥಿಸಿದೆ ತನ್ನ ಮಂದಿರದಿಂದೆನ್ನ
ಕೂಗನ್ನು ಆಲೈಸಿ ನನ್ನನ್ನು ರಕ್ಷಿಸಿದ
ಇದೆಂತಹ ಆಶ್ಚರ್ಯ ಹಲ್ಲೆಲೂಯ ಹಾಡಿರಿ    || ಯೆ ಹೋವನೆನ್ನ ||