ಆಕಾಶವು ದೇವರ ಪ್ರಭಾವವನ್ನು
ಪ್ರಚುರ ಪಡಿಸುತ್ತಿರುವುದು
ಗಗನವು ಆತನ ಕೈಕೆಲಸವನ್ನು
ತಿಳಿಸುತ್ತಾ ದಿನದಿನ ಮುಂದೆ ಸಾಗುವುದು
ರಾತ್ರಿಯುರಾತ್ರಿಗೆ ಅರುಹುತ್ತದೆ
ಶಬ್ದವಿಲ್ಲ ಮಾತಿಲ್ಲದರ ಕೇಳಿಸದು || ಆಕಾಶವು ||
ಆದರೂ ಅವುಗಳ ಪ್ರಭುತ್ವವು
ಭೂಮಿಯ ಮೇಲೆಲ್ಲಾ ಪ್ರಸರಿಸಿದೆ
ಅವುಗಳ ನುಡಿಗಳು ಲೋಕದ ಕಟ್ಟಕಡೆ
ವರೆಗೂ ವ್ಯಾಪಿಸಿದೆ ಹೌದೇಸುವೇ
ಸೂರ್ಯನಿಗಾಗಿ ಗುಡಾರವ ಏರ್ಪಡಿಸಿ
ಮಂಟಪದೊಳ ಬರುವನ್ನು ವಾದರಿಂಗನು || ಆಕಾಶವು ||
ಯೆ ಹೋವನ ಧರ್ಮಶಾಸ್ತ್ರ ಲೋಪವಿಲ್ಲದ್ದು
ಅದು ಪ್ರಾಣವನುಜ್ಜೀವಿಸ ಮಾಡುವಂಥದ್ದು
ಯೆಹೋವನ ಕಟ್ಟಳೆ ನಂಬಿಕೆ ಯೋಗ್ಯವಾದ್ದು
ಯೆಹೋವನ ಆಜ್ಞೆ ಪವಿತ್ರವಾದದ್ದು
ಆತನ ವಿಧಿಗಳು ಅಪರಂಜಿಗಿಂತಲೂ ಪವಿತ್ರವೇ
ಯೆಹೋವನ ಭಯ ಪರಿಶುದ್ಧವಾದದ್ದು || ಆಕಾಶವು ||
* * *
ಯೆಹೋವನೆನ್ನ ಕುರುಬನು
ನಾಕೊರತೆ ಪಡೆನೆಂದಿಗೂ
ಹಸುರುಗಾವಲಿನಲ್ಲೆನ್ನನ್ನು ತಂಗಿಸುವ
ವಿಶ್ರಾಂತಿಕರವಾದ ನೀರು ಕೊಡ್ವನು || ಯೆ ಹೋವನೆನ್ನ ||
ನನ್ನ ಪ್ರಾಣ ಉಜ್ಜೀವಿಸ ಮಾಡುವ
ನೀತಿ ಮಾರ್ಗದಲ್ಲೆನೇನ್ನು ನಡಿಸುವ
ಕಾರ್ಗತ್ತಲೆಂಬ ಕೆಣಿವೆಯಲ್ಲಿ
ನಡೆಯುವಾಗ ನಾ ಹೆದರೆನು || ಯೆ ಹೋವನೆನ್ನ ||
ನೀ ಹತ್ತಿರವಿರುವುದರಿಂದ
ನಾನೆಂದು ಕೇಡಿಗೆ ಹೆದರೆನು
ನಿನ್ನ ದೊಣ್ಣೆಯೂ ನಿನ್ನ ಕೋಲು
ನನಗೆ ಧೈರ್ಯವ ಕೊಡುವುದು || ಯೆ ಹೋವನೆನ್ನ ||
ವೈರಿಗಳೆದುರಿನಲ್ಲೆನಗೆ
ನನಗಾಗಿ ಔತಣವೇರ್ಪಡಿಸುವೆ
ನನ್ನ ಜೀವಮಾನದೆಲ್ಲಿಯೇ
ನಿನ್ನ ಶುಭವೂ ಕೃಪೆಯೂ ಹಿಂಬಾಲಿಸುವುದು || ಯೆ ಹೋವನೆನ್ನ ||
* * *
ನನ್ನದೇವರೆ ನನ್ನ ದೇವರೇ
ಯಾಕೆನ್ನ ಕೈ ಬಿಟ್ಟಿ ಬಿಟ್ಟಿದ್ದೀ
ಎನಗೆ ಸಹಾಯ ಮಾಡದೆಯೂ
ಎನ್ನ ಕೂಗ ಕೇಳದೇ ದೂರವಿದ್ದೀ || ನನ್ನ ದೇವರೇ ||
ಹಗಲಿನಲ್ಲೆನ್ನ ಮೊರೆ ಕೇಳಿಸದೇ
ಇರುಳಿನಲ್ಲೆನಗೆ ಉಪಶಮನವಿಲ್ಲ
ಇಸ್ರಾಯೇತ ಸ್ತೋತ್ರಸಿಂಹಾನದಲ್ಲಿ
ನೀನು ಪವಿತ್ರ ಸ್ವರೂಪನೇ || || ನನ್ನ ದೇವರೇ ||
ನಮ್ಮ ಪೂರ್ವಿಕರು ನಿನ್ನಲ್ಲಿ
ಭರವಸವಿಟ್ಟು ನಂಬಿ ಉದ್ಧಾರವಾದರೂ
ನಿನಗೆ ಮೊರೆಯಿಟ್ಟು ಪ್ರಾರ್ಥಿಸಿ
ವಿಮುಕ್ತರಾದರು ಹಲ್ಲೋಲೂಯ || ನನ್ನ ದೇವರೇ ||
* * *
ದೇವರೇ ಬಾಯಾರಿದ ಜಿಂಕೆಯಂತೆಯೇ
ನನ್ನ ಮನವು ನಿನ್ನ ಬಯಸುತ್ತಿದೆ
ನನ್ನ ಮನಸ್ಸು ದೇವರಿಗಾಗಿ ಹಂಬಲಿಸ್ವುದು
ನಾನೆಂದು ದೇವರ ಸನ್ನಿಧಿ ಸೇರ್ವೆನೋ || ದೇವರೇ ||
ನಿನ್ನ ದೇವರೆಲ್ಲೆಂದು ಜನರಿಂದ ನಿಂಧನೆ
ಹಗಲಿರುಳಿನ್ನು ಕಣ್ಣೀರೆ ಆಹಾರವು
ಜನಸಮೂಹದೊಡನೆ ಹರ್ಷದ್ವನಿಯಿಂ
ಸ್ತೋತ್ರ ಪದ ಹಾಡುತ್ತಾ ಸ್ತುತಿಸುವೆನು || ದೇವರೇ ||
ನನ್ನ ದೇವರೇ ನನ್ನ ಪ್ರಾಣ ಕುಗ್ಗಿದೆ
ಯೋರ್ದನ್ ಹೊಳೆದೇಶ ಹೆರ್ಯೊನ್ನಿಂದ
ಮಿಸಾರ್ ಬೆಟ್ಟಾ ಇವುಗಳಲ್ಲಿರುವಂತೆ
ನಿನ್ನನ್ನು ಸ್ಮರಿಸಿ ಹಾಡುವೆನು || ದೇವರೇ ||
ರಾತ್ರಿ ವೇಳೆಯಲ್ಲಿಯೂ ಆತನ ಕೀರ್ತನೆ
ನನ್ನಲ್ಲು ಅಟಾತನ ಕೀರ್ತಿಸಿ ಹಾಡುವೆನು
ನನ್ನ ಶರಣನೇ ನೀನಲ್ಲದೇ ಬೇರೆಯಾರು
ಈ ಭೂಲೋದಲ್ಲೆನಗೆ ಸಹಾಯಕರು || ದೇವರೇ ||
* * *
ದೇವರೇ ನ್ಯಾಯವ ದಯಪಾಲಿಸು
ಎನಗಾಗಿ ವ್ಯಾಚ್ಯವನ್ನು ಪದರಿಂದ
ನಿರ್ದಯ ಜನಾಂಗದಿಂ ತಪ್ಪಿಸು
ದುರಾಚಾರಿ ಮೋಸಗಾರರಿಂತಪ್ಪಿಸು || ದೇವರೇ ||
ಶತ್ರು ಬಾಧೇಯಿಂದೇಕೆ ಅಲೆಯಲಿ ನಾ
ವಿಕಾರಿಯಾಗಿ ಅಲೆಯಲಿನಾ
ನಿನ್ನ ಸತ್ಯ ಪ್ರಸನ್ನತೆ ದೂತನಂತೆ
ಸಹಾಯಕನಾಗಿ ಕಳುಹಿಸು || ದೇವರೇ ||
ನಿನ್ನ ಪರಿಶುದ್ಧಪರ್ವತಕ್ಕೆ
ಎನ್ನನ್ನು ಕರೆದೊಯ್ಯಿ ಕರ್ತನೇ
ದೇವರೇ ನನ್ನ ದೇವರೇ ಎನ್ನ ಕೂಗನ್ನು
ಆಲೈಸಿ ಆನಂದದಿಂ ಸೇರಿಸು || ದೇವರೇ ||
* * *
ನನ್ನ ದೇವರೇ ಶತ್ರುಗಳಿಂದೆನ್ನ ಬಿಡಿಸು
ಕೆಡುಕರಿಂದೆನ್ನನ್ನು ಕೊಲೆಪಾತಕರಿಂದೆನ್ನ
ರಕ್ಷಿಸು ರಕ್ಷಿಸು || ನನ್ನ ದೇವರೇ ||
ನನ್ನ ಬಲವೇ ನಿನ್ನನ್ನು ನಿರೀಕ್ಷಿಸುವುದು
ನನ್ನ ಆಶ್ರಯದುರ್ಗವು ದೇವರಲ್ಲಿ
ನನ್ನ ದೇವರೆನಗೆ ಪ್ರಸನ್ನನಾಗಿ ಬಂದು
ಎನಗೆ ಸಹಾಯ ಮಾಡುವನು || ನನ್ನ ದೇವರೇ ||
ನನ್ನ ಆತ್ಮವು ನಿನ್ನನ್ನು ಹಿಂಬಾಲಿಸುವುದು
ನಿನ್ನ ಬಲಗೈ ಎನ್ನಗಾಧಾರವಾಗಿರ್ವದು
ನನ್ನ ಜೀವಕ್ಕೆ ಕೇಡು ಕಲ್ಪಿಸುವವಯೋ
ಅದೋ ಲೋಕಕ್ಕಳಿದು ಹೋಗುವರು || ನನ್ನ ದೇವರೇ ||
* * *
ದೇವರೇ ನನ್ನಾರ್ತಸ್ವರನ್ನು ಆಲೈಸು
ಶತ್ರು ಭಯದಿಂ ನನ್ನ ಜೀವ ರಕ್ಷಿಸು
ದುಶ್ಟರ ಒಳಸಂಚಿಗೂ ಕೆಡುಕರ ಕೈಗೂ
ಸಿಕ್ಕ ದಂತೆನ್ನನ್ನು ಕಾಪಾಡು || ದೇವರೇ ||
ದೃಷ್ಕೃತ್ಯೆಕ್ಕಾಗಿ ಮನಸ್ಸನ್ನು ಸರಿಪಡಿಸಿ
ತಮ್ಮೊಳಗೆ ರಹಸ್ಯದಿಂ ಬಲೆಒಡ್ಡುವರು
ನಮ್ಮನ್ನು ನೋಡುವವರ್ಯಾರು ಇಲ್ಲವೆಂದು
ತಿಳಿದು ತಮ್ಮಿಷ್ಠದಂತೆ ನಡೆಯುವುದು || ದೇವರೇ ||
ಅದರಂತರಂಗ ದಾಲೋಚನೆ ಅಶೋದ್ಯವು
ದೇವರಾತನಮೇಲ ಬಾಣವನೆಸೆಯಲು
ಪಕ್ಕನೆ ಅವರಿಗೆ ಗಾಯವಾಗುವದು
ಅವರ ನಾಲಿಗೆಗಳೇ ವಿಘ್ನವಾಗಿರುವುದು || ದೇವರೇ ||
ಇದನ್ನು ತಿಳಿದವರೆಲ್ಲರೂ ಪ್ರತಿ ಮನುಷ್ಯರು
ಭಯಪಟ್ಟಾ ದೇವರ ಕೆಲಸವೆಂದು ತಿಳಿದು
ಆತನ ಕೃತ್ಯಗಳನ್ನಾಲೋಚನೆ ಮಾಡ್ವಾರು
ಯೆಹೋವನಲ್ಲಾನಂದ ಪಟ್ಟರು ಸದ್ಭಕ್ತರು || ದೇವರೇ ||
* * *
ಸರ್ವ ಭೂವಿವಾಸಿಗಳೇ
ಜಯದ್ವನಿ ಮಾಡಿ ದೇವರಿಗೆ
ಆತನ ಪ್ರಭಾವ ವರ್ಣಿಸಿರಿ
ದೇವರ ನಾಮವ ಕೊಂಡಾಡಿರಿ || ಸರ್ವಭೂವಿ ||
ನಿನ್ನ ಪರಾಕ್ರಮ ಮಹತ್ತಿನಿಂ
ಶತ್ರುಗಳೆಲ್ಲಾ ಲಯ ಹೊಂದ್ವರು
ನಿನ್ನ ನಾಮವನ್ನು ಕೀರ್ತಿಸುತ್ತಾ
ಶತ್ರುಗಳ ಮುಂದೆ ಕುಣಿಯುವರು || ಸರ್ವಭೂವಿ ||
ಬನ್ನಿರಾತನ ಕಾರ್ಯ ನೋಡಿ
ಸಮುದ್ರ ಒಣನೆಲವಾಗುವಂತೆ
ಜನರೆಲ್ಲ ಅದನ್ನು ದಾಟುವಂತೆ
ಅದಕ್ಕಾಗಿ ಆತನಲ್ಲಾನಂದಿಸೋಣ || ಸರ್ವಭೂವಿ ||
ಇಸ್ರಾಯೇಲ್ಯರನ್ನು ರಕ್ಷಿಸಿದ
ಮೋಶೆಯ ಸಂಗಡ ಪ್ರಯಾಣ
ಮಾಡಿದ ಜನರೆಲ್ಲ ಒಂದಾದರೂ
ಕರ್ತನ ಸ್ತುತಿಸುತ್ತಾ ಸಾಗಿದರು || ಸರ್ವಭೂವಿ ||
* * *
ಯೆಹೋವನೇ ನಿನ್ನ ಮರೆ ಹೊಕ್ಕಿರುವೆ
ಎಂದಿಗೂ ಆಶಾಭಂಗ ಪಡಿಸದೆ
ನೀತಿ ಸ್ಥಾಪಕನಾದ ದೇವರೇ
ಎನ್ನ ಪ್ರಾರ್ಥನೆಗೆ ಕಿವಿಗೊಟ್ಟು ಆಲೈಸು || ಯೆಹೋವನೇ ||
ಕರ್ತನೇ ನನ್ನ ಬಾಲ್ಯದಿಂದಲೂ
ನನ್ನ ನಿರೀಕ್ಷೆ ನೀನೆ ಅಲ್ಲವೇ
ಹುಟ್ಟಿದಂದಿನಿಂದಲೂ
ನಿನ್ನನ್ನೇ ಆಶುಕೊಂಡಿರುವೆ || ಯೆಹೋವನೇ ||
ತಾಯಿ ಹೆತ್ತಂದಿನಿಂದೆನ್ನ ಉದ್ದಾರಕ
ನೀನೇ ಅಲ್ಲವೇ ಯಾವಾಗಲೂ
ನಿನ್ನಲ್ಲಿಯೇ ನನ್ನಾತ್ಮ ಹಿಗ್ಗುವುದು
ನಿನ್ನ ಸ್ತೋತ್ರವಲ್ಲದೇ ಬೇರೊಂದಿಲ್ಲ || ಯೆಹೋವನೇ ||
ವೃಧ್ಯಾಪ್ಯದಲ್ಲೆನ್ನನ್ನು ದಿಕ್ಕರಿಸದೇ
ನನ್ನ ಬಲಕುಂದಿದಾಗ ಕೈಬಿಡದೇ
ನಾನಿನ್ನನ್ನೇ ನಿರೀಕ್ಷಿಸಿ ಕೊಂಡೇ ಇರುವೆನು
ನೀನೊಬ್ಬನ ನೀತಿಯ ಪ್ರಕಟಿಸುವೆನು || ಯೆಹೋವನೇ ||
* * *
ನಾ ನಿನ್ನ ನಿರೀಕ್ಷೆಯಿಂದಲೇ
ನಿನ್ನ ನಧಿಕವಾಗಿ ಸುತಿಸುವೆ
ನನ್ನ ಬಾಯಿ ನಿನ್ನ ನೀತಿ ರಕ್ಷಣೆಯನ್ನು
ಹಗಲೂರಾತ್ರಿ ವರ್ಣಿಸುವೆನು || ನಾ ನಿನ್ನ ||
ನನ್ನ ಬಾಲ್ಯದಿಂದಲೂ ನೀನೆನ್ನ
ಉಪದೇಶಿಸುತ್ತಾ ನಡಿಸಿದ್ದೀ
ನಿನ್ನ ಬದ್ದತಕೃತ್ಯಗಳನೆಂದಿಗೂ
ಪಚುರಪಡಿಸುವೆನು || ನಾ ನಿನ್ನ ||
ನಾ ನೆರೆಯ ಮುದುಕಳಾದರೂ
ನೀನೆನ್ನ ಕೈ ಬಿಡದೆ ನಡಿಸು
ನಿನ್ನ ಭುಜಬಲವನ್ನು
ಮುಂದಿನ ಕಲೆಯವರಿಗೆ ಸಾರುವೆನು || ನಾ ನಿನ್ನ ||
ಸ್ವರ ಮಂಡಲದಿಂದ ನಿನ್ನ ಸಂಕೀರ್ತಿಸಿ
ಕಿನ್ನಾರಿಯನ್ನು ನುಡಿಸುತ್ತಾ ನಿನ್ನ ಭಜಿಸುವೆ
ನನ್ನ ದೇವರೇ ನಿನ್ನ ಸತ್ಯಕೆ ಸ್ಮರಿಸುವೆ
ಅಭಿಮುಖನಾಗಿ ಸಂತೈಸು ನನ್ನನ್ನು || ನಾ ನಿನ್ನ ||
* * *
ತನು ಮನ ಧನ ಕ್ಷಯಿಸಿದರೂ
ನನ್ನ ಆತ್ಮಕ್ಕೆ ಶರಣನು ನೀನಲ್ಲವೇ
ನಿನ್ನನ್ನು ಬಿಟ್ಟವರು ನಾಶವಾಗುವರು
ನನಗಾದರೂ ದೇವರ ಸಾನ್ನಿಧ್ಯ ಭಾಗ್ಯವು || ತನು ಮನ ||
ನಿನ್ನ ಒಡಂಬಡಿಕೆಯ ಲಕ್ಷ್ಯಕ್ಕೆ ತಾ
ದುಃಖತರೋ ಬಡವರೂ ನಿನ್ನ ಕೀರ್ತಿಸಲಿ
ನಿನ್ನ ನಾಮ ಮಹತ್ವ ಸಮೀಪವಾಗಿದೆ
ಹೌದೇಸುವೇ ನಿರಂತ್ರವಾಗಿ ಬಾಳೇಸುವೆ || ತನು ಮನ ||
ಜಲರಾಶಿಗಳೆಲ್ಲ ನಿನ್ನನ್ನು ಕಂಡವು
ಮೇಘಮಂಡಲ ಮಳೆ ಸುರಿಸಿತು
ಸಮುದ್ರ ಮಾರ್ಗ ನೀನೇ ಮಾಡಿದ್ದೀ
ಮೋಶೆ ಆರೋನರು ನಿನ್ನ ಪ್ರಜೆ ಕರೆದೊಯ್ದಿ || ತನು ಮನ ||
ಕುರುಬನು ಕುರಿಹಿಂಡನ್ನು ಹೇಗೆ
ಕಾಯುವಂತೆ ನೀನೆ ನಮ್ಮನ್ನು ಕಾಯುತ್ತಿದ್ದೀ
ಮಹಾ ಜಲರಾಶಿಗಳನ್ನು ದಾಟಿರುವೆ
ನಿನ್ನ ಹೆಜ್ಜೆಯ ಗುರುತು ಕಾಣಲಸಾಧ್ಯವು || ತನು ಮನ ||
* * *
ಆತನು ತನ್ನ ಭಕ್ತರಿಗೆ
ಸಮಾದಾನ ವಾಕ್ಯವ ಹೇಳುವನು
ಭಯ ಭಕ್ತಿಯುಳ್ಳ ಜನರಿಗೆ
ಆತನ ರಕ್ಷಣೆ ಇದೆ ಸತ್ಯ || ಆತನು ತನ್ನ ||
ಇರಿಂದಾತನ ಮಹಿಮೆಯು
ನಮ್ಮ ದೇಶದಿ ನೆಲೆಸುವುದು
ಕೃಪೆಯೂ ಸತ್ಯವೂ
ಒಂದಕ್ಕೊಂದು ಕೂಡಿರುವುದು || ಆತನು ತನ್ನ ||
ನೀತಿಯೂ ಸಮಾಧಾನವೂ
ಮುದ್ದಿಟ್ಟು ಕೊಳ್ಳುವುದು
ನೀತಿಯು ಸತ್ಯವೂ
ಭೂಮಿಯಿಂದ ಹುಟ್ಟುವುದು || ಆತನು ತನ್ನ ||
ನಿಜಕ್ಕೂ ಯೆಹೋವನು
ಒಳ್ಳೆಯ ಡಮಗ್ರಹಿಸುವನು
ದೇಶವು ಬೆಳೆಯನ್ನು ಕೊಡುವುದು
ನಿಜಕ್ಕೂ ಶಾಶ್ವತ ಪ್ರೇಮ ಪಾಲಿಸು || ಆತನು ತನ್ನ ||
* * *
ಯೆಹೋವನೇ ಗಗನವು ನಿನ್ನ ಮಹತ್ತನ್ನು
ಪ್ರಸಿದ್ಧಿಪಡಿಸುವುದು
ನಿನ್ನ ಸತ್ಯತೆಯನ್ನು ಪರಿಶುದ್ಧರ
ಸಭೆಯಲ್ಲಿ ಕೀರ್ತಿಸುವುದು || ಯೆಹೋವನೇ ||
ಮೇಗಮಂಡಲದೊಳ್
ನಿನಗೆ ಸಮಾನರಾರಿರ್ವರು
ದೇವ ದೂತರಲ್ಲಿ
ಯೆಹೋವನಿಗೆ ಸಮಾನರು ಯಾರು ? || ಯೆಹೋವನೇ ||
ಪರಿಶುದ್ಧಾ ಸಭೆಯೊಳು
ಭಯಂಕರನಾದ ದೇವರು
ತನ್ನ ಎಲ್ಲಾ ಪರಿವಾರಕ್ಕಿಂತ
ಭೀಕರನಾದ ದೇವರು ಯೆಹೋವನೇ
ಸೇನಾಧೀಶ್ವರನೇ ಓ ದೇವರೇ
ನಿನಗೆ ಸಮಾನರು ಯಾರಿರ್ವರು
ಯಾಹವೇ ನೀನೇ ಶಕ್ತನು
ಸತ್ಯತೆಯಿಂದಾರಿಸಲ್ಪಟ್ಟವನು ಯೆಹೋವನೇ
* * *
ಸಮುದ್ರದಲ್ಲೇ ಕಲ್ಲೋಲಗಳನ್ನು
ಅಂಕೆಯಲ್ಲಿಟ್ಟಿರುವವನು ನೀನೇ
ತೆರೆಗಳು ಏಳಲು ತಡೆಯುವವ ನೀನೇ
ರಹಬನ್ನು ಛೇಧಿಸಿ ಸಾಯಿಸಿದವ ನೀನೇ || ಸಮುದ್ರ ||
ಆಕಾಶವು ನಿನ್ನದೇ ಭೂಮಿಯೂ ನಿನ್ನದೇ
ಲೋಕದಲ್ಲಿರುವುದೆಲ್ಲವ ನಿರ್ಮಿಸಿದ ನೀನೇ
ದಕ್ಷಿಣೊತ್ತಗಳನುಂಟು ಮಾಡಿದ ನೀನು
ಶುಭಕೋರುತ್ತೆ ತೇಬೋರ್ ಹೆರ್ಯೊನ್ ಪರ್ವತ || ಸಮುದ್ರ ||
ನಿನ್ನ ಭುಜವು ಮಹಾಬಲವುಳ್ಳದ್ದು
ನಿನ್ನ ಹಸ್ತವು ಶಕ್ತಿಯುಳ್ಳದ್ದು
ನಿನ್ನ ಬಲಯ ಮರುತ್ತನ್ನು ನಡಿಸ್ವದು
ನಿನ್ನ ಸಿಂಹಾಸನ ದಸ್ತಿವಾರ ನೀತಿ ನ್ಯಾಯವೇ || ಸಮುದ್ರ ||
ಪ್ರೀತಿ ಸತ್ಯತೆಗಳೇ ನಿನ್ನ ಸಾನೀದ್ಯದೂತರು
ಇದ ಕೇಳಿದ ಜನರು ಎಷ್ಟೋ ಧನ್ಯರು
ನಿನ್ನ ಕರುಣಾಕಟಾಕ್ಷದಿ ಆಶಿರ್ವದಿಸಲ್ಪಟ್ಟರು
ಇಸ್ರಾಯಲ್ ಸದಮಲ್ ಸ್ವಾಮಿಗೆ ಶುಭವು || ಸಮುದ್ರ ||
* * *
ನಿನ್ನ ಭಕ್ತರಿಗೆ ಆಕಾಲದಲ್ಲಿ
ದರ್ಶನ ಕೊಟ್ಟು ಹೇಳಿದ ಮಾತಿದು
ಶೂರನೊಬ್ಬನಿಗೆ ರಕ್ಷ ಬಲವನ್ನು
ಅನುಗ್ರಹಿಸಿರುವೆನೆಂದು ಹೇಳಿದಿ || ನಿನ್ನ ಭಕ್ತರಿಗೆ ||
ಪ್ರಜೆಗಳಲ್ಲೊಬ್ಬ ಯೌವನಸ್ತನೇ
ನಿನ್ನನ್ನು ಆರಿಸಿ ಉನ್ನತ ಸ್ಥಾನದಲ್ಲಿ
ನನ್ನ ಸೇವಕನಾದ ದಾವೀದನೇ
ಪರಿಶುದ್ಧತ್ಕಲರಿ ಅಭಿಷ್ಠೇಕಿಸಿದೆ || ನಿನ್ನ ಭಕ್ತರಿಗೆ ||
ಆತನ ಹಸ್ತವು ಆತನ ಮೇಲೆ
ಸ್ಥಿರವಾಗಿ ಭುಜವು ಬಲಪಡಿಸುವುದು
ವೈರಿಯ ಕುತಂತ್ರ ಸಾಗದವನಲ್ಲಿ
ಕೆಡುಕನ್ಯಾರವನನ್ನು ಕುಗ್ಗಿಸಲಾರ || ನಿನ್ನ ಭಕ್ತರಿಗೆ ||
ವಿರೋಧಿಗಳನವನ ಮುಂದೆಯೇ
ಜಜ್ಜಿ ಹಾಕುವನು, ದ್ವೇಷಗಳನ್ನು
ಅಧಿಕಾರ ಪಾಲಿಸಿ ಆತನಿಗೆ
ತನ್ನಾಶಿರ್ವಾದ ನೀಡಿದನು || ನಿನ್ನ ಭಕ್ತರಿಗೆ ||
* * *
ಕರ್ತನೇ ತಲತಲಾಂತರಗಳಿಂದೆಮ್ಮ ವಾಸಸಾನ ನೀನೇ
ಬೆಟ್ಟಗಳು ಭೂಮಿ ಅದರ ದೇಶ ನಿರ್ಮಾಣವಾಗುವ
ಮುಮಚಿನಿಂದಲೂ, ಯುಗ ಯುಗಾಂತರಗಳಲಿಯೂ
ನೀನೇ ನಮ್ಮ ದೇವರು ನೀನೇ ನಮ್ಮ ದೇವರು || ಕರ್ತನೇ ||
ಸಾವಿರ ವರುಷಗಳೂ ನಿನ್ನ ದೃಷ್ಠಿಯೊಳು
ಗತಿಸಿದ ನಿನ್ನೇ ದಿನದಂತೆ ರಾತ್ರಿಯ ಜಾವದಂತೆ
ಮನುಷ್ಯರ ಆಯುಶ್ಕಾಲವೂ ಅಲ್ವೇ
ನಿನ್ನ ದೃಷ್ಟಿಯಲ್ಲಿ ಎಲ್ಲವೂ ಸತ್ಯವೇ || ಕರ್ತನೇ ||
ಪ್ರವಾಹದಂತೆ ಮನುಷ್ಯರು ಬಡಕೊಂಡೊಯ್ವರು
ಹೊತ್ತಾರೆಯಲ್ಲಿ ಚಿಗುರುವ ಹುಲ್ಲಿನಹಾಗಿರ್ವರು
ಉದಯದಲ್ಲಿ ಬೆಳೆದು ಹೂ ಬಿಡುವುದು
ಸಂಜೆ ಕೊಯ್ಯಲ್ಪಟ್ಟು ಬಾಡಿ ಹೋಗುವುದು || ಕರ್ತನೇ ||
ನಮ್ಮಾಯುಷ್ಕಾಲವು ಎಪ್ಪತೇ ವರುಷವೇ
ಬಲ ಹೆಚ್ಚಿದರೆಂದರೆ ಎಂಬತೇ ವರುಷವು
ಕಷ್ಠ ಸಂಕಟಗಳೇ ನಮ್ಮ ಆಡಂಬರವು
ಬೇಗನೇ ಗತಿಸುವುದು ದಾವುಹಾರಿ ಹೋಗ್ವೆವು || ಕರ್ತನೇ ||
Leave A Comment