ಪರಾತ್ಪರನೇ ನಿನ್ನ ಮರೆಹೊಕ್ಕಿರುವ ಮನುಜನು
ಸುರಕ್ಷಿತರಾಗಿ ಜೀವಿಸುವರು
ನೀನೇನ್ನ ಶರಣನೇ ನನ್ನ ದುರ್ಗವು
ನಾ ಭರವಸವಿಟ್ಟಿ ಬೇಡುವ ದೇವರು ನೀನೇ  || ಪರಾತ್ಪರನೇ ||

ಮರಣಕರ ವ್ಯಾದಿಯಿಂದಲೂ
ಬೇಟೆಗರನ ಒಲೆಯಿಂದಲೂ
ತನ್ನ ರೆಕ್ಕೆಗಳಿಂದ ಹೊದಗಿಸುವನು
ಆತನ ಪಕ್ಕೆಗಳ ಮರೆಯನ್ನು ಆಶ್ರಯಿಸುವೆ   || ಪರಾತ್ಪರನೇ ||

ಇರುಳಲ್ಲಿ ಭಯಹುಟ್ಟಿಸುವ ಯಾವುದೇ
ಹಗಲಲ್ಲಿ ಹಾರಿ ಬರುವ ಬಾಣಕ್ಕೂ
ಕತ್ತಲೆಯಲ್ಲಿ ಸಂಚರಿಸುವ ವಿಪತ್ತಿಗೂ
ಹಾನಿಕರವಾದ ಮಧ್ಯಾಹ್ನ ಕೇಡಿಗೂ ಅಂಜೆನು          || ಪರಾತ್ಪರನೇ ||

ಪರಾತ್ಪರನ ವಾಸಸ್ಥನ ನನಗಾಗಿ
ನನ್ನ ಕಾಲು ಕಲ್ಲಿಗೆ ತಗಲಿದಂತೆಯೂ
ಸಿಂಹ ಸರ್ಪಗಳ ಮೇಲೆ ನಡೆದರೂ
ಪ್ರಾಯದ ಸಿಂಗ ಘಟಸರ್ಪವ ತುಳಿಯುವರು || ಪರಾತ್ಪರನೇ ||

* * *

ಯೆಹೋವನೇ ನಿನ್ನ ಕೊಂಡಾಡ್ವದೂ
ನಿನ್ನ ನಾಮವ ಕೀರ್ತಿಸುವುದೂ
ಕಿನ್ನರಿಯ ಘನಸ್ವರದಿಂದಲೂ
ನಿನ್ನ ಪ್ರೇಮವನ್ನು ಹೊತ್ತಾರೆಯಲ್ಲೂ
ರಾತ್ರಿಯಲ್ಲಿ ಸತ್ಯತೆ ವರ್ಣಿಸುವೆ     || ಯೆಹೋವನೇ ||

ನಿನ್ನಾಲೋಚನೆ ಅಶೋಧ್ಯವಾಗಿದೆ
ನಿನ್ನ ಕ್ರಿಯೆಗಳಂದೆನಗೆ ಸಂತೋಷವೇ
ನಿನ್ನ ಕೆಲಸಗಳಿಂದುತ್ಸಾಹ ಮಾಡುವೆನು
ನಿನ್ನ ಕೃತ್ಯಗಳೆಷ್ಠೋ ಶ್ರೇಷ್ಠವು
ಪಶುಪ್ರಾಯನು ಅರಿಯೆನು, ಹುಚ್ಚನು ತಿಳಿಯನು      || ಯೆಹೋವನೇ ||

ದುಷ್ಠನು ಹುಲ್ಲಿನಂತೆ ಬೆಳೆಯುವದೂ
ನೀತಿವಂತರು ಖರ್ಜೂರದ ಮರದಂತೆ
ತಿಬನೊವಿನ ದೇವದಾರು ವೃಕ್ಷದಂತೆ
ನಮ್ಮ ದೇವರ ಅಂಗಳದಲ್ಲಿ ಬೆಳೆಯುವರು,
ಆತನೇ ನನ್ನ ಬಂಡೆಯೂ ನಿರ್ವಂಚಕನು     || ಯೆಹೋವನೇ ||

* * *

ಯೆಹೋವನೇ ರಾಜ್ಯಾದಿಕಾರನೇ
ಮಹಿಮಾವಸ್ತ್ರಪದರಿಸಿದವನೇ
ಶೌರ್ಯವನ್ನು ನಡುವಿಗೆ ಕಟ್ಟಿರುವ
ಭೂಲೋಕವು ನ್ದಿರವಾಗಿ ಕದಲದು   || ಯೆಹೋವನೇ ||

ಪೂರ್ವದಿಂದ ಸ್ಥಿರವಾದ ಸಿಂಹಾಸನ
ಅನಾದಿಯಿಂದ ನೀನು ಇದ್ದೀ
ನಾವಿಗಳು ಮೊರೆದವು ನದಿಗಳು ಬೋರಿಟ್ಟವು
ಜಲರಾಶಿಗಳು ಘೋಷಕ್ಕಿಂತಲೂ
ಯಹೋವನ ಮಹಿಮೆ ಗಾಂಭಿರ್ಯವು        || ಯೆಹೋವನೇ ||

ಹೆಯೋವನಾಜ್ಞೆ ಬಹುಖಂಡಿತವಾಗಿದೆ
ನಿನ್ನ ಮನೆಗೆ ಯೋಗ್ಯವಾದದ್ದು ಪರಿಶುದ್ಧಾತ್ಮವೇ
ಆತನೇ ನಮ್ಮ ಪರಿಶುದ್ಧ ದೇವರು
ಸಾಷ್ಠಾಂಗವೆರಗಿ ಆರಾಧಿಸೋಣವೇ || ಯೆಹೋವನೇ ||

* * *

ಹೊಸ ಕೀರ್ತನೆ ಹಾಡಿ ಹೋವನಿಗೆ
ಅದ್ಭುತ ಕಾರ್ಯವನಾತ ನಡಿಸಿರುವ
ಬಲಗೈ ಪರಿಶುದ್ಧ ಬಾಹುವು
ಜಯವನ್ನುಂಟು ಮಾಡಿದೆ  || ಹೊಸ ಕೀರ್ತನೆ ||

ತನ್ನ ರಕ್ಷಣೆಯ ಪ್ರಕಟಿಸಿದ
ನೀತಿಯ ತೋರ್ಪಡಿಸಿ ಜನರಿಗೆ
ಪ್ರೀತಿ ಸತ್ಯತೆಯ ನೆನಸುವನು
ಎಲ್ಲರೂ ಅರಿಯುವರಾತನ ರಕ್ಷಣೆಯ         || ಹೊಸ ಕೀರ್ತನೆ ||

ಜಯಘೋಷ ಮಾಡಿರಿ ಸಮಸ್ತ ಭೂವಿ ವಾಸಿಗಳೇ
ಹರ್ಷದಿ ಉತ್ಸಾಹದ್ವನಿ ಮಾಡಿ ಹಾಡಿರಿ
ಕಿನ್ನರಿಯೊಡನೆ ಆತನ ಸ್ತುತಿಸಿರಿ
ತುತೂರಿ ಕೊಂಬನ್ನೂದುತ್ತಾ ಹಾಡಿರಿ         || ಹೊಸ ಕೀರ್ತನೆ ||

ನದಿಗಳು ಚಪ್ಪಾಳೆ ಹೊಡೆಯುತ್ತಾ
ಪರ್ವತ ಉತ್ಸಾಹ ಧ್ವನಿಮಾಡುತ್ತಾ
ನ್ಯಾಯ ತೀರಸಲಿಕ್ಕೆ ಬರುವನು
ಯೆಕಾರ್ತವಾಗಿ ತೀರ್ಪು ಕೊಡುವನು         || ಹೊಸ ಕೀರ್ತನೆ ||

* * *

ಕೆರೂಬಿಯರ ಮಧ್ಯದೊಳ್ ವಾಸಿಸುವ
ಆಸೀನನಾಗಿರುವಾತನು ಆಳುವನು
ಭೂಮಿಯು ಕಂಪಿಸಲಿ
ಬಿಯೋನಿನಲ್ಲಿರುವ ಯೆಹೋವನೇ || ಕೆರೂಬಿ ||

ಆತನು ಪರಿಶುದ್ಧನೇ ನೀತಿಯು ಆತನ ಬಲವೇ
ಯಥಾರ್ಧವಾದ ದನ್ನತನ್ನು ಸ್ಥಾಪಿಸಿದವನು
ಯಾಕೋಬ್ಯರಲ್ಲಿ ನ್ಯಾಯನೀತಿ ತಂದವ
ಯೇಹೋನ ದೇವರನ್ನು ಘನಪಡಿಸಿರಿ         || ಕೆರೂಬಿ ||

ಆತನ ಯಾಜಕರು ಮೋಶೆ ಆರೋನರು
ಆತನ ಹೆಸರಲ್ಲಿ ಪ್ರಾರ್ಥಿಸುವ ಸಮಯವೇಲನೂ
ಅವರ ಪ್ರಾರ್ಥನೆಗೆ ಸದ್ಭಕ್ತರ ಪಾಲಿಸುತ್ತಿದ್ದು
ಮೇಗಸ್ತಂಬದಿಂದವರೊಡನೆ ಮಾತಾಡ್ವನು   || ಕೆರೂಬಿ ||

ಆತನ ವಿಧಿನಿಯಮಗಳನ್ನು ಕೈಕೊಂಡರು
ಯೆಹೋವದೇವರೇ ಉತ್ತರ ಕೊಟ್ಟಾವ ನೀನಲ್ಲವೇ
ದುಷ್ಕೃತ್ಯಕ್ಕಾಗಿ ಅವರನ್ನು ದಂಡಿಸಿದರೂ
ಕ್ಷಮಿಸಿ ಆತನು ಅವರನ್ನು ಪ್ರೀತಿಸುತ್ತಿದ್ದ       || ಕೆರೂಬಿ ||

* * *

ನನ್ನ ಮನವೇ ಯೆಹೋವನ ಕೊಂಡಾಡು
ಆತನ ಪವಿತ್ರನಾಮವನ್ನು ಕೀರ್ತಿಸಿರಿ
ನನ್ನ ಮನವೇ ಯೆಹೋವನ ಕೊಂಡಾಡು
ಆತನು ಮಾಡಿದುಪಕಾರವದೊಳು
ಒಂದನ್ನು ಮರೆಯದೆ ಸ್ತೋತ್ರ ಸಲ್ಲಿಸಲಿ       || ನನ್ನ ಮನವೇ ||

ನಿನ್ನಪರಾಧವನ್ನೆಲ್ಲ ಕ್ಷಮಿಸುವವನು
ಸಮಸ್ತ ರೋಗಗಳನ್ನು ವಾಸಿ ಮಾಡುವವನು
ನಾಶದಿಂದೆನ್ನ ಜೀವ ತಪ್ಪಿಸುವನು
ಪ್ರೀತಿಕೃಪೆಗಳಿಂಬ ಕಿರೀಟದಿಂ ಶೃಂಗರಿಸುವ
ಶ್ರೇಷ್ಠವರಗಳಿಂದೆನ್ನಾಶೆ ಪೂರ್ತಿಗೊಳಿಸುವನು         || ನನ್ನ ಮನವೇ ||

ಹದ್ದಿಗೆ ಬಿರುವಂತೆಯೆ ನಿನ್ನಯೌವನವನ್ನು
ತಿರಿಗಿ ಬರಯಾಡ್ವನು ನೀತಿ ಸಾದಿಸುವ
ಮೋಶೆಗೆ ಬೋಧಿಸಿದ ಮಾರ್ಗವನ್ನು
ಇಸ್ರಾಯೇಲ್ಯರಿಗೆ ತನ್ನ ಕೃತ್ಯ ಪ್ರಕಟಿಸಿದ
ದೀರ್ಘಶಾಂತಿಯೂ ಪೂರ್ಣಪ್ರೀತಿಯೂ ಉಳ್ಳವನು    || ನನ್ನ ಮನವೇ ||

* * *

ಹಾ ಎಂತಾ ಭಾಗ್ಯ ಸಿಕ್ಕಿತೆನಗೆ
ನಿನ್ನ ನ್ನಾರಾಧಿಸುವ ವೇಳೆಯು
ಈ ವೇಳೆಯಲ್ಲಿ ನಿನ್ನ ಸಮುಖ
ಸಂತೋಷವೇ ಸಂತೋಷವೇ       || ಹಾ ಎಂಥಾ ||

ಪ್ರತಿಕ್ಷಣ ನಿನ್ನ ದರ್ಶನ
ನನ್ನತ್ಮಾದಲ್ಲಿ ನೋಡುವೆನು
ನಾ ಕಂಡುಕೊಂಡೆ ಮಹತ್ವದ
ನೀ ನೆನ್ನ ಬಳಿಯೇ ವಾಸಿಸು         || ಹಾ ಎಂಥಾ ||

ಅನಾಥನಲ್ಲಿ ನಿನ್ನ ನಂಬಿರುವೆ
ನಂಬಿಕೆಯಿಂದ ಜೀವಿಸಲು
ನಿನ್ನ ವಾಕ್ಯದಿಂದ ಜೀವಿಸುವೆ
ಹೌದೇಸುವೇ ಹೌದೇಸುವೇ         || ಹಾ ಎಂಥಾ ||

* * *

ಅಬ್ರಾಮ ದೇವರೇ
ಕೈ ಬಿಡದೆ ನನ್ನನ್ನು
ಈ ಭೂಯಾತ್ರೆಯೊಳು
ನಡಿಸಯ್ಯಾ ನಡಿಸಯ್ಯಾ   || ಅಬ್ರಾಮ ||

ಹಗಲಲ್ಲಿ ನಿನ್ನ ಭಯಾವು
ರಾತ್ರಿಯಲ್ಲಿ ನಿನ್ನ ಕೃಪೆಯು
ನನ್ನ ನ್ನಾವರಿಸಿರುವುದು
ಭಯವಿಲ್ಲದೇ ನಾ ಜೀವಿಸುವೆ        || ಅಬ್ರಾಮ ||

ಓ ಕರ್ತನೇ ಕರುಣಿಸೆನ್ನನ್ನು
ನಿನ್ನ ಹಸ್ತ ನನ್ನ ಹಿಡಿದಿದೆ
ನಾ ಯಾರಿಗೂ ಭಯಪಡದೆ
ಜೀವಿಸುವೇ ರಕ್ಷಕನೇ      || ಅಬ್ರಾಮ ||

* * *

ಅನಾಥನಾಥನೇ ಓ ಯೇಸುವೇ
ಅನಾಥರಿಗೆ ಆಧಾರಕ ಓ ಯೇಸುವೇ
ಪಾಪಿಗಳಿಗೆ ರಕ್ಷಕನೇ ಓ ಯೇಸುವೇ
ನೀನೆಮ್ಮನ್ನು ರಕ್ಷಿಸ ಬಾ ಓ ಯೇಸುವೇ       || ಅನಾಥನಾಥನೇ ||

ಧರ್ಮನಿಂದಕರು ಪಾಪಿಷ್ಠರು
ನಿನ್ನೆದುರಿನಲ್ಲಿ ಅಪಾತ್ರರೇ
ನೀತಿವಂತರು ರಕ್ಷಣೆ ಹೊಂದ್ವರು
ಹೌದಲ್ಲವೇ ಓ ಯೇಸುವೇ           || ಅನಾಥನಾಥನೇ ||

ಕೊಲೆಗಾರರು ವ್ಯಭಿಚಾರರು
ಚಾರರು, ಉಗ್ರಗಾಮಿಗಳು
ನಿನ್ನ ಮುಂದೆಯೇ ನಿಲ್ಲರಾರರು
ಹೌದಲ್ಲವೇ ಓ ಯೇಸುವೇ || ಅನಾಥನಾಥನೇ ||

* * *

ಸಂಪೂರ್ಣ ಶಾಂತಿ ದೊರಕಿತು
ನನ್ನೇಸು ಬಳಿಯಿದ್ದು ನೀಡಿದ
ಕರುಣಾಳುವೇ ನನ್ನೇಸುವೇ
ಇಕ್ಕಟ್ಟಿನಿಂದ ಪಾರುಮಾಡಿ          || ಸಂಪೂರ್ಣ ||

ಜಯ ಜಯ ವೆನ್ನುತ್ತಲೀ
ಸಂಗೀ ಹಾಡುತ್ತಿರುವೆ
ಜಯ ಘೋಷದಿಂ ಹಾಡುವೆ
ನಿತ್ಯವೂ ಸ್ತುತಿಸುವೆನು    || ಸಂಪೂರ್ಣ ||

ದೀನರ ಮೊರೆಯನ್ನು
ಆಲೈಸುವ ಯೇಸುವು
ಎಂದೆಂದಿಗೂ ಜೀವಿಸುವ
ನನ್ನ ಯೇಸುವಿನೊಂದಿಗೇ           || ಸಂಪೂರ್ಣ ||

* * *

ಸಮುವೇಲನ ಸಂಗಡ
ಮಾತಾಡಿದ ದೇವರೇ
ನಿನ್ನ ಸಂಗಡವೂ ಪ್ರಾರ್ಥಿಸಿದೆ
ಎನಗೆ ಉತ್ತರ ನೀಡಯ್ಯ   || ಸಮುವೇಲ ||

ಮೋಶೆಯ ಪ್ರಾರ್ಥನೆಗೆ ಉತ್ತರ ನೀಡಿದೆ
ಅಬ್ರಾಮ, ಯಾಕೋಬನ ಪ್ರಾರ್ಥನೆಗೆ
ಉತ್ತರ ನೀಡಿದೆ ಓ ಯೇಸುವೇ
ನನ್ನ ಪ್ರಾರ್ಥನೆಗೂ ಉತ್ತರ ನೀಡಯ್ಯಾ       || ಸಮುವೇಲ ||

ಸೊಲೋಮನ ಪ್ರಾರ್ಥನೆ ಕೇಳಿದ ತಂದೆಯೇ
ಯಾಬೇಚನ ಪ್ರಾರ್ಥನೆಗೆ ಉತ್ತರ ನೀಡಿದೆ
ಎಸ್ತೇರಳ ಪ್ರಾರ್ಥನೆಗೆ ಉತ್ತರ ನೀಡಿದೆ
ಯೆಹೆಚ್ಚೇಲನ ಪ್ರಾರ್ಥನೆಗೆ ಉತ್ತರ ನೀಡಿದೆ   || ಸಮುವೇಲ ||

ಯೋಬನ ಸಂಗಡ ಮಾತಾಡಿದೆ ಯೇಸುವೇ
ಇಸಾಕನೊಟ್ಟಿಗೆ ಮಾತಾಡಿದ ಯೇಸುವೇ
ಹನ್ಯಳ ಪ್ರಾರ್ಥನೆಗೆ ಉತ್ತರ ನೀಡಿದೆ
ನನ್ನ ಪ್ರಾರ್ಥನೆಗೆ ಉತ್ತರ ನೀಡಯ್ಯಾ         || ಸಮುವೇಲ ||

* * *

ದಿವ್ಯವಾದ ದರ್ಶನ
ಅಮೂಲ್ಯವಾದ ದರ್ಶನ
ಸಿಗಲಾರದು ಸಿಗಲಾರದು || ದಿವ್ಯವಾದ ||

ಪಾಪಿನೀ ಮನಮರುಗಿ
ಪಶ್ಚಾತ್ತಾಪ ದಿಂದಾತನನ್ನು
ಕಣ್ಣೀರಿನಿಂದ ಬಳಲುತ್ತಾ
ಆತನ ಸನ್ನಿಧಿಗೆ ಬಾ       || ದಿವ್ಯವಾದ ||

ಓ ಪಾಪಿಯೇ ನಿನ್ನಾಶೆಯ
ತ್ಯಜಿಸಿ ನೀ ಬಿಟ್ಟು ಬಾ
ಆತನ ದರ್ಶನ ಸಿಗುವುದು
ತಡ ಮಾಡದೇ ಮುಂದೆ ಬಾ        || ದಿವ್ಯವಾದ ||

* * *

ಓ ಯೇಸುವೇ ನಿನ್ನ ಪ್ರೀತಿಯು
ನಮ್ಮ ಮೇಲೆ ಸುರಿಸು ಈಗಲೇ
ನೀ ಬಿಟ್ಟರೆ ಆನಾಥನೇ ನಾ
ನನ್ನ ಕರುಣಿಸಿ ಕರ ನೀಡು ಬಾ      || ಓ ಯೇಸುವೇ ||

ಜಕ್ಕಯನೊಟ್ಟಿಗೆ ಮಾತಾಡಿದೆ
ಆತನ ಪಾಪವ ಕ್ಷಮಿಸಿದೆ
ಮಗ್ದಲ ವಾರಿಯಳ ಸಂತೈಸಿದೆ
ಆಕೆಯ ಪಾಪ ಕ್ಷಮಿಸಿ ಮಾತಾಡಿದೆ || ಓ ಯೇಸುವೇ ||

ಲಾಜಿರನನ್ನು ಕರೆದು ಮಾತಾಡಿದೆ
ಮಾರ್ಧ ವಾರಿಯಲ ಸಂತೈಸಿದೆ
ಇಹಲೋಕದಲ್ಲಿ ನೀನಲ್ಲದೇ
ಬೇರಾರು ಅವಶ್ಯವಿಲ್ಲವು   || ಓ ಯೇಸುವೇ ||

* * *

ಪೇತ್ರ ಸೀಮೋನ ಪೌಲರು
ನಿನ್ನ ಶಿಷ್ಯರು ನಿನ್ನ ಹಿಂಬಾಲಿಸಿ
ನಿನ್ನ ವಾಕ್ಯವ ಮೀರದೆ ನಡೆದರು   || ಪೇತ್ರ ||

ಅದೇಮಾರ್ಗ ನಾವು ಹಿಡಿಯುವಂತೆ
ನಮ್ಮನ್ನು ಕರುಣಿಸಿ ಜ್ಞಾನ ನೀಡಯ್ಯಾ
ನಿನ್ನ ಪ್ರೀತಿಯು ವಾಧಾರವಾದದ್ದು
ನಿನ್ನ ವಾಕ್ಯವು ಜೀವವಾದದ್ದು        || ಪೇತ್ರ ||

ಅಂದ್ರೇಯ ಕೋಮ ಯಾಕೋಬ
ನಿನ್ನ ಮಾರ್ಗವ ಭೋದಿಸಿದರು
ಹನ್ನೆರಡು ಮಂದಿ ಶಿಷ್ಯರನ್ನು
ಭೋದಕರಾಗಿ ಸುವಾರ್ತೆ ಸಾರಿದರು         || ಪೇತ್ರ ||

* * *

ಜೀವವಾಕ್ಯ ಸತ್ಯವಾಕ್ಯ
ಆ ವಾಕ್ಯವು ಬೆಳಕಾಗಿತ್ತು
ಆ ಬೆಳಕೇ ಯೇಸುಸ್ವಾಮಿಯು
ನರನಾಗಿ ಜಿವಿಸಿದ ಯೇಸುವು       || ಜೀವವಾಕ್ಯ ||

ಲೋಕದ ಜನರಿಗೆ ಬೆಳಕನ್ನು
ಪಾಲಿಸ ಬಂದೇನು ಸ್ವಾಮಿಯು
ನಂಬಿದ ಜನರನ್ನು
ಪಾಪದಿಂ ರಕ್ಷಿಸ ಬಂದನು || ಜೀವವಾಕ್ಯ ||

ಕರುಣೆ ಪ್ರೀತಿ ಕೃಪೆಗಳನು
ಯೇಸುವೇ ತಿಳಿಸಿದನು
ಆತನನ್ನು ಹಿಂಬಾಲಿಸಿ
ನಡೆದವರೇ ಧನ್ಯರು       || ಜೀವವಾಕ್ಯ ||

* * *

ಧರಣಿಯೊಳಂದು ಮೊದಲು
ಪರಲೋಕದಿಂದ ಬೆಳಕು
ತಂದಿಹುದು ವಿಮೋಚನೆಯ
ನನ್ನೇಸು ರಕ್ಷಿಸ ಬಂದ     || ಧರಣಿ ||

ಪಾಪ ವಿಮೋಚನೆ ಕೊಡಲು
ಕಿಸ್ತೇಸು ಜೀವಿಸ ಬಂದ
ರಕ್ಷಣೆಯ ನೀಡುತಲಿ
ನನಗಾಗಿ ಜೀವಿಸುತ್ತಿರುವ  || ಧರಣಿ ||

ಈ ಲೋಕದ ನರರೆಲ್ಲಾ
ಕಂಡು ಕೊಂಡವರೆಲ್ಲಾ
ಪರಲೋಕ ವಾಸಿಗಳಾಗಿ
ಜೀವಿಸ ಬಲ್ಲರು ಇಲ್ಲೇ      || ಧರಣಿ ||

* * *

ಈ ಶುಭದಿನ ಈ ಸಂಭ್ರಮ
ಎಲ್ಲಿಂದ ನನಗೆ ಸಿಗ್ವದು
ನಾ ಜೀವಿಸುವೆ ನನ್ನೇಸುವಲ್ಲೇ
ಈ ಸಂಭ್ರಮ ಬಲ್ಲೆನು      || ಈ ಶುಭದಿನ ||

ಕರ್ತನಾ ನೀಡುವ ಪ್ರತಿದಿನವೂ
ಆತನೇ ಪಾತ್ರನಾಗಿರುವ
ಒಂದೊಂದು ಕ್ಷಣವೂ ಆತನೇ
ಕಾಯುವನು ನನ್ನ ಕಾಯುವನು     || ಈ ಶುಭದಿನ ||

ಜನಿಸಿದ ದಿನದಿಂದಲೂ
ಸಾಯುವ ಕ್ಷಣದಲ್ಲೂ
ಆತನೇ ನನ್ನ ಸಹಾಯಕನು
ಅಂತ್ಯದವರೆಗೆನ್ನ ಕಾಯುವನು      || ಈ ಶುಭದಿನ ||

* * *

ಸಮಾಧಾನ ವಾಕ್ಯವು
ಸಂತೋಷ ವಾಕ್ಯವು
ಆವಾಕ್ಯ ನಂಬಿದರೆ
ಸಿಗುತ್ತೆ ಸಂತಸ  || ಸಮಾಧಾನ ||

ಧರಣಿಯ ಜನರೆಲ್ಲರೂ
ಜೀವಿಸುತ್ತಾ ನಂಬಿರಿ
ನಂಬಿದ ಮಾತ್ರಕ್ಕೆ
ಸಿಗುವುದು ರಕ್ಷಣೆ || ಸಮಾಧಾನ ||

ರಕ್ಷಿಸಲ್ಪಟ್ಟಾವರು
ಆತನ ಕಾಣವರು
ಈ ಶುಭ ವಾರ್ತೆಯ
ನಂಬಿರಿ ಮನುಜರೇ        || ಸಮಾಧಾನ ||

* * *

ಯೇಸುವಿನ ನಾಮವು
ಜೇನಿಗಿಂತಲೂ ಅತಿ ಮಧುರವಾದದ್ದು
ಧ್ಯಾನಮಾಡಿ ಆತನ ಹಿಂಬಾಲಿಸುವ || ಯೇಸುವಿನ ||

ಶರೀರ ಭಾಗವು ಕಂಪಿಸುವುದು
ಆತನ ನಾಮ ಉಚ್ಚರಿಸಿದರೆ
ಖಂಡಿತ ಶಾಂತಿ ಸಿಗುವುದು         || ಯೇಸುವಿನ ||

ಆತನ ನಾಮವು ಹರಿತವಾದದ್ದು
ಆತನ ನಾಮವೇ ಜೀವಕ ನನ್ನದ್ದು
ಜೀವಿಸ ಭಾಗ್ಯ ವೀಯುವುದು        || ಯೇಸುವಿನ ||