ಯೇಸುವೇ ನಿನ್ನ ನಂಬಿದೆ
ಕೃಪೆ ನೀಡಿ ರಕ್ಷಿಸು
ಅಲುಗಾಡದಂತೆ ನನ್ನಾತ್ಮವ
ತಪ್ಪಿಸು ಕೇಡಿನಿಂದ        || ಯೇಸುವೇ ||

ಹೆಜ್ಜೆಯಾನ್ನಿಡಲು ಸುಗಮವಾಗಿ
ಸೈತಾನನೆಂಬ ಶೋಧನೆಯಿಂದ
ರಕ್ಷಿಸಿ ಕಾಪಾಡಿ ನಡಿಸಯ್ಯಾ
ನಿನ್ನ ರಕ್ಷಣೆ ಎನಗವಶ್ಯವು  || ಯೇಸುವೇ ||

ಸೈತಾನನ್ನು ನಿನ್ನುಸಿರಿನಿಂದ
ನಾಶಮಾಡುಲು ಶಕ್ತನೇ
ನೀನೊಬ್ಬನೇ ನಿನ್ನಿಂದಲೇ
ಆಗಲೇಬೇಕಾದ ಕಾರ್ಯವು         || ಯೇಸುವೇ ||

* * *

ಹಲ್ಲೆಲೂಯ ಹಲ್ಲೆಲೂಯ
ಸ್ತುತಿಸಿ ಹಾಡಿರಿ ಆತನ ಕೊಂಡಾಡಿರಿ
ನಮ್ಮ ಬಲದಿಂದಲೂ
ನನ್ನ ದಿನಚರಿ ನಿನ್ನ ನಾಮವೇ       || ಹಲ್ಲೆಲೂಯ ||

ಪರಲೋಕ ಮಹಿಮೆಯನ್ನು
ಭೂಲೋಕದಲ್ಲಿಯೂ
ಸೆರವೇರುವಂತೆಯೂ
ನಿನ್ನನ್ನು ಬೇಡುವೆ || ಹಲ್ಲೆಲೂಯ ||

ಆಸೀನನಾಗಿ ಕುಳಿತಿರುವೆ
ನನ್ನನ್ನು ದೃಷ್ಠಿಸಿ ನೋಡುತ್ತಾ
ನಿನ್ನ ಪರಿಶುದ್ಧತೆಯ
ನಾಡಿಸಿ ಕಾಪಾಡಯಾ     || ಹಲ್ಲೆಲೂಯ ||

* * *

ಉತ್ತರ ದಕ್ಷಿಣ ಪೂರ್ವ ಪಶ್ಚಿಮ
ದಿಕ್ಕುಗಳಾವುದು ಆತನ ಭಕ್ತರಿಗೆ
ಯಾವುದು ಇಲ್ಲವು ಯೇಸುವಿನ
ಭಕ್ತರಿಗೆ ಇದ್ಯಾವುದಿಲ್ಲವು   || ಉತ್ತರ ||

ಆತನೇ ಹಾಕಿದ ಅಸ್ತಿವಾರ
ಸತ್ಯ ನೀತಿ ಎಂಬುದೇ
ನಂಬಿಕೆ ವಿಶ್ವಾಸ ಪ್ರೀತಿ ಎಂಬ
ಸಾಲವು ನಮಗಿರ‍್ವದು      || ಉತ್ತರ ||

ಬಡವ ಐಶ್ವರ್ಯವಂತರು
ಆತನ ಎಣಿಕೆಯಲ್ಲಿಲ್ಲವು
ನ್ಯಾಯ ನೀತಿ ಎಂಬ ಸಾಲ
ನಮ್ಮಗೆ ತಿಳಿಸಿದನು       || ಉತ್ತರ ||

* * *

ತಾಮಸವೇಕೆ ಚಿಂತೆಯೇಕೆ
ನಾ ನಂಬಿದಾತ ತೂಕಡಿಸ
ಹಗಲಿರಲಿ ಇರುಳಿರಲಿ
ನನ್ನ ಜತೆ ಇದ್ದು ಕಾಯುವನು       || ತಾಮಸವೇಕೆ ||

ಇಸ್ರಾಯೇಲ್ ಜನರನ್ನು
ಮೇಘದ ಸ್ತಂಬದಿಂ
ಬೆಳಕನ್ನು ತೋರಿಸಿ
ಮಾರ್ಗವ ತೋರಿಸಿದ     || ತಾಮಸವೇಕೆ ||

ನಲವತ್ತು ವರುಷ
ಮೋಶೆಯ ಜತೆಯಲಿ
ಇರಸಾಯೇಲ್ ಜತೆಯಲ್ಲಿ
ಜೀವಿತ ಸಾಗಿಸಿದ          || ತಾಮಸವೇಕೆ ||

ಐದುಪ್ತ ದೇಶದಿಂದ
ಕಾವಾನ್ ದೇಶಕ್ಕೆ
ವಾಗ್ದಾನದಂತೆ ಆತನು
ನಡೆಸಿದ ದೇವರು || ತಾಮಸವೇಕೆ ||

* * *

ತಂದೆ ಮಗ ಪರಿಶುದ್ಧಾತ್ಮ
ನಿನ್ನ ದಯೆಯನ್ನು ತೋರಿಸು
ನಿನ್ನ ಸಹವಾಸ ಅದ್ಭುತವು
ಮಹಿಮೆಯುಳ್ಳ ಅರಸನೇ  || ತಂದೆ ||

ಸಿಂಹದ ಗವಿಯಲ್ಲಿ ದಾನಿಯೇಲನು
ಶದ್ರಕ್ ಮ್ಯಶಕ್ ಅಬೆದ್ಯಾಗೋ ಬೆಂಕಿ ಜ್ವಾಲೆಯಲ್ಲಿಯೂ
ಇವರ ಜೊತೆ ಜೀವಿಸಿದಾತನೇ
ಹಾಗೆಯೇ ನಮ್ಮೊಡನೆ ಜೀವಿಸು     || ತಂದೆ ||

ಇಸ್ರಾಯೇಲ್ಯರಿಗೆ ಮನ್ನಾ ಕೊಟ್ಟಂತೆ
ಬಂಡೆ ಹೊಡೆದು ನೀರನ್ನು ಕೊಟ್ಟಿ
ದಾಹ ತೀರಿಸಿದಾತನೇ
ಹಾಗೆಯೇ ನನ್ನ ದಾಹ ತೀರಿಸು     || ತಂದೆ ||

* * *

ಯೇಸು ತನ್ನ ಭಕ್ತರ ಸಂಗಡ
ವಾದ ಮಾಡುವನು
ನಿನ್ನ ಸಮಯವ ಪೋಲು ಮಾಡದೇ
ಆತನಿಗೆಂದೇ ಅರ್ಪಿಸುವ  || ಯೇಸು ತನ್ನ ||

ನಿನ್ನ ವಾಕ್ಯವ ಧ್ಯಾನಿಸಲು
ಸಮಯ ವಿಲ್ಲವು
ಲೌಕೀಕ ಜೀವನ ಸಾಗುತ್ತ
ಸಮಯ ಕಳೆದೆನು         || ಯೇಸು ತನ್ನ ||

ಪರಿಶುದ್ಧವಾದ ಜೀವನ
ಯೇಸು ನೆಲಸಿದ್ರೆ
ಹಾ ಭಾಗ್ಯವು ನಿತ್ಯವು
ಶುಭವನ್ನು ಕೋರುವೆ      || ಯೇಸು ತನ್ನ ||

* * *

ಆಲಯ ಅಂಗಳದಲ್ಲಿಯೂ
ಆತನ ಸೇವೆ ಮಾಡುವರೇ
ಆತನ ಸ್ತುರಿಸಿರಿ
ಆತನು ಒಳ್ಳೆಯವನು      || ಆಲಯ ||

ಆತನ ಕೃಪೆಯು ಶಾಶ್ವತವು
ಕೃತಜ್ಞತ ಸ್ತುತಿ ಮಾಡಿರಿ
ಜ್ಯೋತಿರ್ಮಂಡಲಗಳ ಸೃಷ್ಠಿಸಿದ
ಆತನ ಕೃಪೆ ಶಾಶ್ವತವು    || ಆಲಯ ||

ಸೂರ್ಯನು ಹಗಲನ್ನಾಳ್ವನು
ಆತನ ಕೃಪೆ ಶಾಶ್ವತವು
ಚಂದ್ರ ನಕ್ಷತ್ರ ರಾತ್ರಿಯನ್ನಾಳ್ವದು
ಆತನ ಕೃಪೆಯು ಶಾಶ್ವತವು         || ಆಲಯ ||

* * *

ಮುರಿದ ಮನಸ್ಸುಳ್ಳ ಮನುಜರೇ
ಆತನು ಅನಾಥರಿಗೂ ವಿಧವೆಯರಿಗೂ
ಆಧಾರವಾಗಿರುವ          || ಮುರಿದ ||

ಬೆಟ್ಟಗಳಲ್ಲಿ ಹುಲ್ಲನ್ನು ಬೆಳೆಯಿಸಿ
ಭೂಮಿಗೋಸ್ಕರ ಮಳೆ ಸುರಿಸಿ
ಪಶುಗಳಿಗೂ ಕೂಗುವ ಪಕ್ಷಿಗೂ
ಬೇಕಾದ ಆಹಾರ ನೀಡುವನು       || ಮುರಿದ ||

ಕುದುರೆಯ ಶಕ್ತಿ ಆಳಿನ ಬಲ
ಆತನು ಮೆಚ್ಚುವುದಿಲ್ಲ
ಆತನು ಆನಂದಿಸುವುದು
ತನ್ನ ಕೃಪೆ ನಿರೀಕ್ಷಿಸುವ ಭಕ್ತರಲ್ಲೇ   || ಮುರಿದ ||

* * *

ಯೆಹೋವನು ದಯೆಯೂ
ಕನಿಕರ ವುಳ್ಳವನ್ನೇ
ದೀರ್ಘಶಾಂತನೂ ಪ್ರೀತಿಪೂರ್ಣನೂ
ಸರ್ವೋಪಕಾರಿಯು ಆತನು         || ಯೆಹೋವನು ||

ನಿನ್ನ ಸೃಷ್ಠಿ ನಿನ್ನನ್ನು ಸ್ತುತಿಸುವುದು
ನಿನ್ನ ಭಕ್ತರು ನಿನ್ನನ್ನು ಕೊಂಡಾಡ್ವರು
ನಿನ್ನ ರಾಜ್ಯ ಮಹತ್ತನ್ನು ಪ್ರಸಿದ್ಧಿಪಡಿಸುವರು
ನಿನ್ನ ಪ್ರತಾಪ ವರ್ಣಿಸುವರು         || ಯೆಹೋವನು ||

ನಿನ್ನ ಶೂರ‍್ಯಕೃತ್ಯಗಳನ್ನು
ನಿನ್ನ ರಾಜ್ಯ ಮಹಾ ಪ್ರಭಾವವನ್ನು
ನಿನ್ನ ರಾಜ್ಯವೂ ಶಾಶ್ವತವಾಗಿದೆ
ನಿನ್ನ ಆಳ್ವಿಕೆ ತಲತಲಾಂತರಕ್ಕು ಇರ‍್ವದು     || ಯೆಹೋವನು ||

* * *

ಯೆಹೋವನನ್ನು ಸ್ತುತಿಸು, ನನ್ನ ಮನವೇ
ಪ್ರಾಣವಿರುವವರೆಗೂ ಸ್ತುತಿಸುವೆನು
ಜೀವಮಾನವೆಲ್ಲಾ ಕೊಂಡಾಡುವೆನು
ಪ್ರಭುಗಳಲ್ಲಿ ಭರವಸವಿಡದೇ
ದೇವರನ್ನೇ ನಂಬಿ ಶಾಂತರಾರಿಗಿ   || ಯೆಹೋವ ||

ಮಾನವರನ್ನು ನೆಚ್ಚದೇಡಿ
ಸಹಾಯಮಾಡಲು ಶಕ್ತನಲ್ಲ
ಆತನ ಸಹಾಯ ವ್ಯರ್ಥವೇ
ದೇವರ ಸಹಾಯ ಸಾರ್ಥಕವು       || ಯೆಹೋವ ||

ಯಾಕೋಬನ ದೇವರು
ಯಾರಿಗೆ ಸಹಾಯಕನೋ
ದೇವರಾದೆಹೋವನ ನಂಬಿರ‍್ವನೋ
ಅವನೇ ಧನ್ಯನು  || ಯೆಹೋವ ||

* * *

ಯೆಹೋವನು ಕಟ್ಟಿಸುವನು
ಯೆರೂಸಲೇಮ್ ನಗರವನ್ನು
ಚದರಿದ ಇಸ್ಲಾಯೇಲ್ಯರನ್ನು
ಒಂದಾಗಿ ಕೂಡಿಸುವನು   || ಯೆಹೋವನು ||

ನಕ್ಷತ್ರಗಳ ಸಂಖ್ಯೆಯನ್ನು
ಗೊತ್ತು ಮಾಡಿರುವನು
ಪ್ರತಿಯೊಂದಕ್ಕೂ ಹೆಸರಿಟ್ಟು
ಗೊತ್ತು ಮಾಡಿ ಕರೆದಿರುವನು        || ಯೆಹೋವನು ||

ತನ್ನ ನಿಯಮ ವಿಧಿಗಳನ್ನು
ಇಸ್ರಾಯೇಲ್ಯರಿಗೆ ಪ್ರಕಟಿಸಿದ
ಬೇರೆ ಯಾವ ಜನಾಂಗಕ್ಕೂ
ಹೀಗೆ ಮಾಡಲಿಲ್ಲ || ಯೆಹೋವನು ||

* * *

ನೂತನ ಕೀರ್ತನೆ ಹಾಡಿರಿ
ನನ್ನೆ ಹೋವನಿಗೆ
ಭಕ್ತ ಸಭೆಯಲ್ಲಿ ಆತನಸ್ತುತಿಸಿರಿ
ಚಿಯೋಸಿನಲ್ಲಿ ಸ್ತುತಿಸಲಿ   || ನೂತನ ||

ಹಾಸಿಗೆ ಮೇಲಿರುವಾಗಲೂ
ಉತ್ಸಾಹ ಧ್ವನಿ ಮಾಡುತ್ತಾ
ಸದಾಕಾಲವೂ ಯೆಹೋವನ
ಕೊಂಡಾಡುತ್ತಾ ಸ್ತುತಿಸಿರಿ  || ನೂತನ ||

ನಂಬಿದವರ ಬಾಯಲ್ಲಿಯೂ
ಯೆಹೋವನ ಸ್ತೋತ್ರವು
ಕೈಯಲ್ಲಿ ಬ್ಬಾಯಿ ಕತ್ತಿಯೂ
ಅನ್ಯಜವಗಳನ್ನು ದಂಡಿಸುವರು     || ನೂತನ ||

* * *

ಆತ್ಮದೊಳ್ ಬಡವರು
ಪರಲೋಕ ರಾಜ್ಯ ಅವರದ್ದೇ
ದುಃಖ ಪಡುವವರು
ಸಮಾಧಾನ ಹೊಂದ್ವರು   || ಆತ್ಮದೊಳ್ ||

ಶಾಂತರು ಧನ್ಯರು
ಭೂಮಿಗೆ ಬಾದ್ಯರಾ
ನೀತಿಗೆ ಹಸಿದು ಬಾಯಾರಿದ
ಅವರಿಗೆ ತೃಪ್ತಿಯಾಗ್ವದು   || ಆತ್ಮದೊಳ್ ||

ಕರುಣೆಯುಳ್ಳವರು
ಕರುಣೆ ಹೊಂದುವರು
ನಿರ್ಮಲ ಚಿತ್ತರು
ದೇವರ ನೋಡುವರು      || ಆತ್ಮದೊಳ್ ||

ಸಮಾದಾನಪಡಿಸ್ವರು
ದೇವರ ಮಕ್ಕಳು
ನೀತಿ ನಿಮಿತ್ತ ಹಿಂಸೆ ತಾಳಾರು
ಪರಲೋಕ ರಾಜ್ಯ ಅವರದೇ        || ಆತ್ಮದೊಳ್ ||

* * *

ಜನರು ನೋಡಲೆಂದು ನಿನ್ನ ಕಾರ್ಯವ
ನಿನ್ನ ದರ್ಪ ಮಾಡದೇ ಜನಕ್ಕೆ ಮೆಚ್ಚಿಸುವ
ಪರದಲ್ಲಿ ನೋಡುವ ಸಕಲ ಕಾರ್ಯಕ್ಕೂ
ನಿನ್ನ ತಂದೆಯಿಂದ ಸಲದೊರೆಯದು          || ಜನರು ||

ಧರ್ಮನೀಡುವಾಗ ಕೊಂಬೂದಿಸದೇ
ಜನರಿಂದ ಹೊಗಳಿಸಬೇಕಾಗಿಲ್ಲ
ಕಪಟಿಗಳಂತೆ ಸಭಾಮಂದಿರದೊಳ್
ಬೀದಿಯಲ್ಲಿ ಹಾಗೆ ಮಾಡುವರು
ತಂದೆಯಿಂದ ತಮಗೆ ಬರತಕ್ಕ
ಫಲವು ಸಿಕ್ಕಿತೆಂದು ತಿಳಿಯುವರು   || ಜನರು ||

ನಿನ್ನ ತಂದೆಯಿಂ ನಿನಗೆ ಫಲ ದೊರೆಯಲು
ನಿನ್ನತ್ಮಾವನಾತನಿಗೊಪ್ಪಿಸಿ ಜೀವಿಸುತ್ತಾ
ಬಲಕೈಲಿ ಮಾಡಿದ ಧರ್ಮವನ್ನು
ಎಡದ ಕೈಗೂ ಅರಿಯದಂತೆ
ನಿನ್ನಾತ್ಮಾದ ಕರ್ತನೊಬ್ಬನಿಗೆ ತಿಳಿಯುವಂತೆ
ನಿನ್ನ ಕರ್ತವ್ಯ ಮಾಡಲು ಜರಿಯದಿರು        || ಜನರು ||

* * *

ಪರಲೋಕ ತಂದೆಯೇ
ನಿನ್ನ ನಾಮ ಪರಿಶುದ್ಧವೇ
ನಿನ್ನ ರಾಜ್ಯವೂ ಬರಲಿ
ನಿನ್ನ ಚಿತ್ತಪರದಲ್ಲಿಂದ್ದಂತೆಯೇ
ಭೂಲೋಕದಲ್ಲಿ ನೆರವೇರಲಿ ನೆರವೇರಲಿ      || ಪರಲೋಕ ||

ನಮ್ಮ ಅನುದಿನವೂ ಆಹಾರವನ್ನು
ನಿನ್ನ ವಾಕ್ಯವ ಬೆಳಕನ್ನು
ಈ ಹೊತ್ತು ದಯಪಾಲಿಸು
ನಿನ್ನ ಚಇತ್ತ ಪರದಲ್ಲಿಂತೆಯೇ
ಭೂಲೋಕದಲ್ಲಿ ನೆರವೇರಲಿ – ನೇರವೇರಲಿ  || ಪರಲೋಕ ||

ನಮಗೆ ತಪ್ಪು ಮಾಡಿದವರನ್ನು
ನಾವು ಕ್ಷಮಿಸಿದಂತೆ ನಮ್ಮ ತಪ್ಪು ಕ್ಷಮಿಸು
ಶೋಧನೆಯಲ್ಲಿ ಸೇರಿಸದೆ ಕೇಡಿನಿಂ ತಪ್ಪಿಸು
ರಾಜ್ಯವು ಬಲವೂ ಸದಾಕಾಲ
ಯಾವಾಗಲೂ ನಿನ್ನದೇ ಎಂದೆಂದಿಗೂ        || ಪರಲೋಕ ||

* * *

ಕಣ್ಣು ದೇಹಕ್ಕೆ ದೀಪವು
ನಿನ್ನ ಕಣ್ಣೆ ನೆಟ್ಟಾಗಿದ್ದರೆ
ದೇಹವೆಲ್ಲ ಬೆಳಕಾಗ್ವದು
ನಿನ್ನ ಕಣ್ಣು ಕೆಟ್ಟಿದಾದರೆ
ದೇಹವೆಲ್ಲ ಕತ್ತಲೆಯೇ      || ಕಣ್ಣು ದೇಹಕ್ಕೆ ||

ಯಾರಾಗಲೀ ಇಬ್ಬರು
ಯಜಮಾನರಿಗೆ ಸೇವೆ ಮಾಡರು
ಒಬ್ಬನ ದ್ವೇಷಿಸಿ ಒಬ್ಬನ ಪ್ರೀತಿಸಿ
ಒಬ್ಬನ ಹೊಂದಿಕೊಂಡು
ಮತ್ತೊಬ್ಬರ ತಾತ್ಸಾರ ಮಾಡುವನು || ಕಣ್ಣು ದೇಹಕ್ಕೆ ||

ದೇವರನ್ನು ದನವನ್ನೂ ದೇವಿಸಕಾರನು
ಏನು ಕುಡಿಯಲು ಊಟ ಮಾಡಲು
ದೇಹರಕ್ಷಣೆಗಾಗಿ ಹೊದ್ದುಕೊಳ್ಳಲು
ಬಿರಕೆ ಮಾಡಬಾರದು, ಎಂದು
ದೇವರ ವಾಕ್ಯ ಸಾರುತ್ತಿದೆ || ಕಣ್ಣು ದೇಹಕ್ಕೆ ||

* * *

ಅಲ್ಲಕಲ್ಲೋಲವಾದ ದೋಣಿಯಲ್ಲಿ
ತೆರೆಗಳಿಂದ ಮುಚಿ ಹೋಯಿತು
ಶಿಷ್ಯರ ಜೊತೆ ಯೇಸು ಪ್ರಯಾಣ
ಮಾಡಲು ನಿದ್ರೆ ಮಾಡುತ್ತಿದ್ದಾನು    || ಅಲ್ಲಕಲ್ಲೋಲ ||

ಶಿಷ್ಯರೆಲ್ಲರೂ ಭಯಭ್ರಾಂತರಾಗಿ
ಸ್ವಾಮಿ ಕಾಪಾಡು ಸಾಯುತ್ತೇವೆಂದರು
ಅಲ್ಪವಿರ್ಶವಾಸಿಗಳೇ ಧೈರ್ಯಗೆಡುವರೇಕೆ
ಗಾಳಿಯನ್ನು ಸಮುದ್ರವನ್ನು
ಗದರಿಸಲು, ಯೇಸುವು
ಎಲ್ಲ ಶಾಂತವಾಯಿತು     || ಅಲ್ಲಕಲ್ಲೋಲ ||

ಆಜನರೆಲ್ಲರೂ ಬೆರಗಾಗಿ ಹೋದರು
ಈ ತನು ಎಂಥವನಾಗಿರಬಹುದು
ಎಂದು ಆಲೋಚಿಸಿಕೊಂಡರು
ಗಾಳಿಯೂ ಸಮುದ್ರವೂ ಈತನು
ಯೇಸುವಿನ ಮಾತಿನಂತೆ
ಶಾಂತವಾಯಿತಲ್ಲ ಎಂದಾಶ್ಚರ್ಯಪಟ್ಟರು    || ಅಲ್ಲಕಲ್ಲೋಲ ||

* * *

ಯೇಸು ತನ್ನ ಹನ್ನೆರಡು ಶಿಷ್ಯರನ್ನು ಕರೆದು
ದೆವ್ವಗಳನ್ನು ಬಿಡಿಸಲು ರೋಗವಾಸಿ ಮಾಡಲು
ಎಲ್ಲಾ ಬೇನೆಗಳ ವಾಸಿಮಾಡಲು
ಅವರಿಗೆ ಅಧಿಕಾರ ಕೊಟ್ಟಾನು       || ಯೇಸು ||

ಆತನು ಕಳುಹಿದ ಹನ್ನೆರಡು
ಅಪೋಸ್ಲತರೆಂಬ ಶಿಷ್ಯರು
ಪೇತ್ರನೆಂಬವನು ಸಿಮೋನ
ಅವನ ತಮ್ಮ ನಾದಂದ್ರೇಯ
ಚೆಬೆದಾಯನ ಮಗ ಯಾಕೋಬ
ಅವನ ತಮ್ಮ ಯೋಹಾನನು        || ಯೇಸು ||

ಪಿಲಿಪ್ಪ ಬಾರ್ತಲೋಮಾಯ
ತೋಮ ಸುಂಕದ ಮತ್ತಾಯ
ಅಲ್ವಾಯನ ಮಗ ನಾಯಾಕೋಬ
ತದ್ದಾಯ ಮಾತಾಬಿಮಾನಿ ಎಂದು
ಹೆಸರುಗೊಂಡ ಸೀಮೋನ
ಯೇಸುವನ್ನು ಹಿಡಿಕೊಟ್ಟ ಇನ್ನಿರಿಯೋತಯಾದ         || ಯೇಸು ||