ದಶಾಜ್ಞೆ ಕೊಟ್ಟ ಸ್ವಾಮಿಗೆ ಸ್ತೋತ್ರ
ದಶಾಜ್ಞೆ ಪಾಲಿಸಲು ಜ್ಞಾನಪಾಲಿಸು
ಯೆಹೋವನೆಂಬ ದೇವರು ಒಬ್ಬನೇ
ಆತನಲ್ಲದೇ ಬೇರಾರು ಇಲ್ಲವು
ಆಕಾಶದಲ್ಲಾಗಲ್ಲೀ ಭೂಮಿಯಲ್ಲಾಗಲೀ
ಬೇರಾವ ಮೂರ್ತಿಗಳಿರಬಾರದು
ಆತನಿಗೆ ಸಲ್ಲತಕ್ಕ ಗೌರವ ಯಾರಿಗೂ ಸಲ್ಲದು
ದೇವರ ಹೆಸರನ್ನು ಅಯೋಗ್ಯಕಾರ್ಯಕ್ಕಾಗಿ
ಉಪಯೋಗಿಸಬಾರದು || ದಶಾಜ್ಞೆ ||
ಸಬ್ಬಕ್ ದಿನವನ್ನು ಪರಿಶುದ್ಧ ದಿನವು
ಆರು ದಿನದಲ್ಲಿ ದುಡಿದು ಮಾಡಬೇಕು
ಏಳನೆಯ ದಿನವು ದೇವರಿಗೆ ಮೀಸಲು
ನಿನ್ನ ತಂದೆ ತಾಯಿಯ ಸನ್ಮಾನಿಸು
ನರಹತ್ಯೆ ಮಾಡದೆ, ವ್ಯಭಿಚಾರ ಮಾಡದೆ,
ಕದಿಯಬಾರದು ಮೆತ್ತೊಬ್ಬನ ಮೇಲೆ, ಸಾಕ್ಷಿ
ಸುಳ್ಳಾಗಿಯೂ ಮತ್ತೊಬ್ಬನ ಆಶಿಸಬಾರದು || ದಶಾಜ್ಞೆ ||
* * *
ಕೆಟ್ಟವರನ್ನನುಸರಿಸದೆ
ದುರಾಚಾರಿಗಳಿಗೋಸ್ಕಾರ
ಹೊಟ್ಟೇಕಿಚ್ಚು ಪಡದೆ ಇರು
ಹುಲ್ಲಿನಂತೆ ಬೇಗ ಒಣಗಿ ಹೋಗ್ವರು || ಕೆಟ್ಟವರನ್ನು ||
ಆದರೂ ಯೆಹೋವನಲ್ಲಿ ನಂಬಿ,
ಭರವಸೆವಿಟ್ಟು ಒಳ್ಳೇದನ್ನೇ ಮಾಡು
ದೇಶದಲ್ಲಿ ವಾಸಿಸಿ ಜೀವಿಸು
ನಂಬಿಕೆಯನ್ನನುಸರಿಸು || ಕೆಟ್ಟವರನ್ನು ||
ಆಗಯೆ ಹೋವನಲ್ಲಿ ಸಂತೋಷಿಸುವೆ
ನಿನ್ನ ಇಷ್ಟಾರ್ಥವನ್ನು ನೆರವೇರಿಸುವನು
ನಿನ್ನ ಭೂಯಾತ್ರೆಯ ಚಿತೆಯನ್ನು
ಕರ್ತಗೊಪ್ಪಿಸಿ ನಿಶ್ಚಿಂತೆಯಿಂದಿರು || ಕೆಟ್ಟವರನ್ನು ||
ಆತ ನಿನ್ನ ನೀತಿ ನ್ಯಾಯವನ್ನು
ಉದಯದ ಬೆಳಕಿನಂತೆಯೂ
ಮಧ್ಯಾಹ್ನದ ತೇಜಸ್ಸಿನಂತೆಯೂ
ಪ್ರಕಾಶಗೊಳಿಸುವನು || ಕೆಟ್ಟವರನ್ನು ||
* * *
ಪ್ರೀತಿ ಸತ್ಯತೆಗಳು
ನಿನ್ನನ್ನು ಬಿಡದಿರಲಿ
ಕೊರಳಿಗೆ ಕಟ್ಟದನ್ನು
ನಿನ್ನ ಹೃದಯದ ಹಲಗೆಯಲ್ಲಿ ಬರೆ || ಪ್ರೀತಿ ||
ದೇವರ ಮನುಷ್ಯರ
ದಯೆಯನ್ನೂ
ಸಮ್ಮತಿಯನ್ನೂ
ಪಡೆಯುವೆನು || ಪ್ರೀತಿ ||
ಆತನೇ ನಿನ್ನ ಮಾರ್ಗವನ್ನು
ಸರಾಗ ಮಾಡುವನು
ನೀನೇ ಬುದ್ಧಿವಂತನೆಣೆಸಾದೆ
ಯೆಹೊವನಿಗೆ ಭಯಪಡು || ಪ್ರೀತಿ ||
ಇದರಿಂದ ದೇಹಕ್ಕೆ ಆರೋಗ್ಯವು
ಎಲುಬುಗಳಿಗೆ ಸಾರವೂ
ಆದಾಯದಿಂದಲೂ
ಯೆಹೋವನ ಸನ್ಮಾನಿಸು || ಪ್ರೀತಿ ||
* * *
ಬನ್ನಿರಿ ವಾದಿಸುವ
ಎಂದಹೋವ ಕರೆಯುತ್ತಾನೆ
ನಿಮ್ಮ ಪಾಪ ಕಡು ಕೆಂಪಾದರೂ
ಹಿಮದಂತೆ ಬೆಳ್ಳಗಾಗ್ವರು || ಬನ್ನಿರಿ ||
ಕಿರುಮಂಜೆ ಬಣ್ಣವಾದರೂ
ಉಣ್ಣೆಯಂತೆ ಬೆಳ್ಳಗಾಗ್ವದು
ನೀವು ವಿದೇಯರಾದರೇ
ದೇಶದ ಮೇಲನ್ನು ಅನುಭವಿಸ್ವಿರಿ || ಬನ್ನಿರಿ ||
ಲೆಕ್ಕವಿಲ್ಲದ ಯಜ್ಞ ಹೋಮವು
ಇದೆಲ್ಲಾ ಸಾಕಾಯಿತು
ವ್ಯರ್ಥನೈವೇದ್ಯ ದೂಪವು
ಸಬ್ಬತ್ ದಿನ ಬೇಡವೇ ಬೇಡಾ || ಬನ್ನಿರಿ ||
ಅಧರ್ಮದಿಂ ಕೂಡಿದ ಕೂಟವು
ಅವವಾಸ್ಯ ಉತ್ಸವದಿನಗಳನ್ನು
ನಮ್ಮ ಪ್ರಾರ್ಥನೆ ಕೇಳನು
ನಮ್ಮ ಕೈಗಳ ಶುದ್ಧಾದಿಂ ತುಂಬಿದೆ || ಬನ್ನಿರಿ ||
* * *
ಒಂದು ಮಗು ನಮಗಾಗಿ ಜನಿಸಿದೆ
ವರದ ಮಗನಮಗೆ ದೊರೆತನು
ಆಡಳಿತದ ರಾಜ್ಯವು ಅವನದೇ
ಅವನ ಬಾಹುವಿನ ಪೇಲಿರ್ವದು || ಒಂದು ||
ಆತನೇ ಅದ್ಭುತ ಸ್ವರೂಪನು
ಆಲೋಚನಾಕರ್ತನು
ಪರಾಕ್ರಮಿಯಾದ ದೇವರು
ನಿತ್ಯನಾದ ತಂದೆ ಸಮಾಧಾನಪ್ರಭು || ಒಂದು ||
ದಾವೀದನ ಸಿಂಹಾಸನವು
ಅದರ ಆಡಳಿತವು
ಅಭಿವೃದ್ಧಿ ಹೊಂದ್ವುವದು
ದಾವೀದನ ರಾಜ್ಯದಲ್ಲಿ || ಒಂದು ||
ನಿತ್ಯ ಸಮಾದಾನವೂ
ನೀತಿ ನ್ಯಾಯದ ಮೂಲಕ
ಸ್ಥಿರಗೊಳ್ಳುವದು
ಮೋಹವನಿದನ್ನು ನೆರವೇರಿಸುವ || ಒಂದು ||
* * *
ಇಕ್ಷಿಯನ ಬುಡದಿಂದೊಂದು
ಚಿಗುರು ಒಡೆಯುತ್ತಲಿ
ಅದರ ಚೀರಿನಿಂದ ಹೊರಟ
ತಳಿರು ಫಲಿಸುವುದು || ಇಕ್ಷಿಯನ ||
ಆ ಅಂಕುರದ ಮೇಲೆ
ಜ್ಞಾನ ವಿವೇಕದಾಯಕಾತ್ಮ
ಆಲೊಚನ ಪರಾಕ್ರಮ
ಹುಟ್ಟಿಸುವ ಆತ್ಮ || ಇಕ್ಷಿಯನ ||
ತಿಳಿವಳಿಕೆ ಯೆಹೋವನಭಯ
ಉಂಟು ಮಾಡುವ ಆತ್ಮ
ಯೆಹೋವನ ಆತ್ಮವೇ
ನೆಲೆಗೊಮಡಿರುವದು || ಇಕ್ಷಿಯನ ||
ಯೆಹೋವನ ಭಯವು
ಪರಿಮಳಿಸುವುದು
ಅವನ ತೀರ್ಪು ನ್ಯಾಯವಾದದ್ದು
ಲೋಕದ ದೀನರಿಗೆ || ಇಕ್ಷಿಯನ ||
* * *
ಯೆಹೋವನೇ ಕೃತಜ್ಞತೆ ಸಲ್ಲಿಸುವೆ
ನನ್ನ ಮೇಲೆ ನೀ ಕೋಪಗೊಂಡರೂ
ನಿನ್ನ ಕೋಪ ಪರಿಹಾರಕ್ಕಾಗಿಯೇ
ನನ್ನ ಸಂತೈಸುತ್ತೀಯಲ್ಲವೇ || ಯೆಹೋವನೇ ||
ದೇವರೇ ನನೆ ರಕ್ಷಣೆ
ನಾ ಹೆದರದೆ ಭರವಸಪಡುವೆ
ನನ್ನ ಬಲ ಯಾಹುಯೇ ಹೋವನೇ
ಆತನೇ ನನಗೆ ರಕ್ಷಕನು || ಯೆಹೋವನೇ ||
ಆತನ ನಾಮ ಮಹತ್ವವನ್ನು
ಆತನ ಕೃತ್ಯಪ್ರಸಿದ್ದಿಪಡಿಸಿ
ಆತನ ನಾಮವು ಉನ್ನತೋವೃತವು
ಯೆಹೋವನ ಗಾನದಿಂ ಸ್ತುತಿಸುವೆ || ಯೆಹೋವನೇ ||
ಆತನು ಮಹಿಮ ಕಾರ್ಯಮಾಡಿ
ಭೂಮಂಡಲವೆಲ್ಲ ತಿಳಿಯಲಿ
ಚಿಯೋನಿನಿವಾಸಿ ಉತ್ಸಾಹ ಮಾಡಿರಿ
ಇಸ್ರಾಯೇಲ್ ಸದಮಲ ಸ್ವಾಮಿಯನ್ನು || ಯೆಹೋವನೇ ||
* * *
ರಕ್ಷಣೆಯನ್ನು ಕೋಟೆಯಂತೆ
ಹೊರಪೌಳಿಯನ್ನಾಗಿ ಮಾಡಿದ್ದಾನೆ
ಬಾಗಿಲನ್ನು ತೆರೆಯಿರಿ
ಧರ್ಮಸತ್ಯವು ತುಂಬಿದ
ಜನರು ಪ್ರವೇಶಿಸಲಿ ನಿತ್ಯವೊ || ರಕ್ಷಣೆ ||
ಸ್ಥಿರಚಿತ್ತನನ್ನು ಶಾಂತಿಯಲ್ಲಿ
ನಲೆಗೊಳಿಸಿ ಕಾಯುವೆ
ಅವನಿಗೆ ನಿನ್ನಲೆ ಭರವಸವುಂಟು
ಯೆಹೋವನಲ್ಲಿ ಸದಾ ಭರವಸವಿಡಿ || ರಕ್ಷಣೆ ||
ಯೆಹೋವನು ಶಾಶ್ವತಾಶ್ರಯಗಿರಿಯು
ಆತನ ಹಿಂಬಾಲಿಸಿ ಪಾಲಿಸಿ
ಆತನೇ ನಮ್ಮ ಕೋಟೆಯು
ಆತನೇ ನಮ್ಮ ಆಶ್ರಯವು || ರಕ್ಷಣೆ ||
* * *
ಯೆಹೋವನಾದ ನಾನು ತೋಟಗಾರನು
ಕ್ಷಣ ಕ್ಷಣವೂ ನೀರು ಯೊಯ್ಯವೆನು
ಯೆಹೋವನಾದ ತೋಟಗಾರನು
ಹಗಲಿರುಳು ಯಾರು ಮುಟ್ಟದಂತೆ
ಕಾವಲಿದ್ದು ಕಾಯುವೆನು || ಯೆಹೋವ ||
ಕೋಪವು ಆತನಲ್ಲಿ ಇಲ್ಲವು
ಮುಳ್ಳು ಎದುರಾದರೆ ಅವುಗಳ
ವಿರೋಧವಾಗಿ ಆತನೆ ಬಂದು
ಒಟ್ಟಿಗೆ ಸುಟ್ಟು ಬಿಡುವನು || ಯೆಹೋವ ||
ಬೇಡವಾದರೆ ಆ ಶತ್ರುಗಳ
ಶರಣು ಹೊಂದಲಿ ಹಾಗೆ
ಸಮಾಧಾನಕ್ಕೆ ಬರಲಿ
ಎಂದೆಹೋವ ಹೇಳುವನು || ಯೆಹೋವ ||
* * *
ನಾನೇನು ಹೇಳಲಿ ತಂದೆಯೇ
ನನ್ನ ಆತ್ಮಕ್ಕೆ ಸಂಬವಿಸಿದ
ದುಃಖವ ಸ್ಮರಿಸುತ್ತಾ
ಜೀವಮಾನ ಕಳೆಯುವೆನು || ನಾನೇನು ||
ಯೆಹೋವನೇ ಇಂಥಾ ಸಂಭವದಿಂದ
ಮನುಷ್ಯರು ಬದುಕುತ್ತಾರೆ
ಅವುಗಳಿಂದೆನ್ಮಾತ್ಮ ಜೀವಿಸುವುದು
ಈಗೆನಗೆ ಸಹಾಯ ಮಾಡು ತಂದೆ || ನಾನೇನು ||
ನನ್ನ ಆತ್ಮವ ರಕ್ಷಿಸಿದ್ದು ನಿನ್ನ ಪ್ರೀತಿಯೇ
ನನ್ನ ಪಾಪವನ್ನೆಲ್ಲಾ ನಿನ್ನ ಬೆನ್ನ ಹಿಂದೆ
ಮರೆಮಾಡಿ ಆಶೀರ್ವದಿಸಿದ್ದೀ
ಪಾತಾಳದವರು ನಿನ್ನನ್ನು ಸ್ತುತಿಸರು || ನಾನೇನು ||
ಸತ್ತವರು ನಿನ್ನನ್ನು ಕೀರ್ತಿಸರು
ಅಹೋಲೋಕಕ್ಕಿಳಿದವರು ಕೀರ್ತಿಸರು
ಸತ್ಯಸಂಧತೆಯನ್ನು ಆಶ್ರಯಿಸಲಾರರು
ಹೌದು ಜೀವಂತನಾದ ನಾನೇ ನಿನ್ನ ಹೊಗಳುವೆನು || ನಾನೇನು ||
* * *
ನನ್ನ ತಂದೆ ನನ್ನ ಬಳಿಯಿರಲು
ನನಗೇನು ಕೊರತೆ ಯುಂಟು ಹೇಳೇತ್ಮಾನೇ
ನಿತ್ಯವೂ ತಾನೇ ಕಾಯುವನವನು
ಆತ್ಮ ಪರಿಪಾಲಕ ಆದರ್ಶದಾಯಕ
ಅನುದಿನವೂ ನನ್ನ ನಡಿಸುವ ನಾತ
ಜೀವದಿಂದಿರುವನು ಸದಾಕಾಲವೂ
ಆತನ ಕರುಣೆ ಪ್ರೀತಿಯು ತುಂಬಿದೆ
ಸಕಲ ಸೌಭಾಗ್ಯದಿಂ ನಡಿಸುವನು
* * *
ಇಂಥಾ ಸಮಯ ಒಳ್ಳೆಯ ಸಮಯ
ಕರ್ತನು ಪಾಲಿಸಿದ ಸಮಯ
ಅಳುವ ಸಮಯ ನಗುವ ಸಮಯ
ಕಾಲಕ್ಕೆ ಎಂದೂ ಕೊರತೆಯಾರದೋ ? || ಇಂಥಾ ಸಮಯ ||
ಆತನು ನಮಗೆ ಕೊಟ್ಟಾ ಸಮಯ
ದೇವರಿಗೆಂದು ಅರ್ಪಿತ ಸಮಯ
ಕೆಲಸಕ್ಕೆಂದು ಕೊಟ್ಟಾ ಸಮಯ
ಕಾಲಕ್ಕೆ ಎಂದೂ ಬೇಧವೂ ಇಲ್ಲ || ಇಂಥಾ ಸಮಯ ||
ಅಸ್ಪಸ್ತೆ ಸಮಯ ದುಃಖದ ಸಮಯ
ನೆಡುವ ಸಮಯ ಕೀಳುವ ಸಮಯ
ಇದೆಲ್ಲಾ ಆತನೇ ನೀಡಿದ ಸಮಯ
ಎಂದೆಂದಿಗೂ ಸ್ತೋತ್ರ ಸಲ್ಲಿಸುವ ಸಮಯ || ಇಂಥಾ ಸಮಯ ||
ಪ್ರಾರ್ಥನೆ ಸಮಯ ಓಡುವ ಸಮಯ
ಕೂರುವ ಸಮಯ ಮಲಗುವ ಸಮಯ
ಹೀಗೆಂದು ದೇವರು ಕೊಟ್ಟಾ ಸಮಯ
ಆತನಿಗಾಗಿ ಸಮಯವನ್ನು ಅರ್ಪಿಸಿ ನಡೆಯುವ || ಇಂಥಾ ಸಮಯ ||
* * *
ಕರ್ತನೇ ನೀನೆಷ್ಠು ಕರುಣಾಶಾಲಿಯು
ನಿನ್ನ ಪ್ರೀತಿ ಸತ್ಯ ನಿತ್ಯವಾದದ್ದು
ಅದುವೇ ನಮ್ಮನ್ನು ಕಾಯುವುದು
ಹೌದೇಸುವೇ ನನ್ನ ಯೇಸುವೇ || ಕರ್ತನೇ ||
ಧರ್ಮಕರ್ಮಗಳೆಲ್ಲವೂ ನಿಷ್ಪಲ
ಆತನ ಮಾರ್ಗ ಅನುಸರಿಸಿರಿ
ಆತನ ಹಿಂದೆ ಸಾಗುತ ನಡೆಯುತ
ಭಕ್ತರೆಲ್ಲರೂ ಜೀವಿಸಿರಿ || ಕರ್ತನೇ ||
ನೀ ಬಿಟ್ಟು ಹೋದ ಶಾಂತಿಯನ್ನು
ಅನುಸರಿಸಿ ನಡೆಯಲು ಕೃಪೆತೋರು
ನನ್ನೇಸುವೇ ನಿನ್ನ ನಂಬಿದೆ
ಜೀವಿಸಲು ಕೃಪೆತೋರು ನಿತ್ಯವೂ || ಕರ್ತನೇ ||
* * *
ಧೀನನಾಗಿ ಬಂದಿರುವ
ಬಾಗಿಲಲ್ಲಿ ನಿಂತಿರುವ
ಯೇಸುವನ್ನು ಸ್ವೀಕರಿಸು
ಓ ಮಾನವನೇ || ಧೀನನಾಗಿ ||
ತಡಮಾಡದೇ ಸ್ವೀಕರಿಸು
ಈ ಕ್ಷಣದೇ ಮಾತ್ರದಲ್ಲಿ
ಆತ ನೀಡುವ ಆತ್ಮಶಾಂತಿ
ಸ್ವೀಕರಿಸಿ ಸ್ವೀಕರಿಸಿರಿ || ಧೀನನಾಗಿ ||
ಆಯಾಸದಿಂದ ಬಳಲಿ
ಬಾಗಿಲಲ್ಲಿ ನಿಂತಿರಲು
ತಾಮಸ ಮಾಡುತ್ತಿರುವೆ
ಬೇಗನೇ ಸ್ವೀಕರಿಸು || ಧೀನನಾಗಿ ||
* * *
ಧನ್ಯನಾದೆ ನಾ ಯೇಸುವ ನಂಬಿ
ಆತನ ಆಶ್ರಯ ಎಷ್ಟೋ ಸಂತಸ
ಆತನ ಕರದಲ್ಲಿ ಉಂಟೋ ಶಾಂತಿ
ಜೀವಿತ ಆತನಿಗಾಗಿ ಅರ್ಪಿಸಿರಿ || ಧನ್ಯನಾದೆ ||
ಕತ್ತಲೆ ಬೆಳಕೂ ಎರಡೂ ಒಂದೇ
ನರಕ ಸ್ವರ್ಗ ಎರಡೂ ಒಂದೇ
ಆತನೇ ಸೃಷ್ಠಿ ಮಾಡಿದ ದೇವರು
ನೀರ್ವವಾದ ದೇವರು ಜೀವಿಸುವ || ಧನ್ಯನಾದೆ ||
ದುಃಖ ಚಿಂತೆ ಎರಡೂ ಒಂದೇ
ಜನನ ಮರಣ ಎರಡೂ ಒಂದೇ
ಆತನೇ ಸೃಷ್ಟಿ ಮಾಡಿದ ದೇವರು
ನಮ್ಮಲ್ಲಿ ಆತನೇ ಜೀವಿಸುವ || ಧನ್ಯನಾದೆ ||
* * *
ಆಕಾಶವೆಲ್ಲ ಪ್ರಕಾಶಿಸುತ್ತಾ
ಭೂಲೋಕವೆಲ್ಲ ಕೀರ್ತಿಸುತ್ತಾ
ಸ್ವಾಗತ ಬಯಸುತ್ತಿದೆ
ನನ್ನೇಸುವಿನ ಆಗಮನ || ಆಕಾಶವೆಲ್ಲ ||
ಹಕ್ಕಿ ಜಲಚರ ಕುಣಿದಾಡುತ
ಚಂದ್ರ ಸೂರ್ಯ ಪ್ರಕಾಶಿಸುತ್ತಾ
ಇರುಳಿನ್ನದೆ ಹಗಲೆನ್ನದೆ
ಆತನ ಆಗಮನ ಕಾಯುವರು || ಆಕಾಶವೆಲ್ಲ ||
ಫಲ ಪುಷ್ಪಗಳೆಲ್ಲಾ ನಗೆಯಾಡುತ
ಮಾನವರೆಲ್ಲ ಕುಣಿದಾಡುತ
ಚಪ್ಪಾಳೆ ಹೊಡೆಯುತ್ತಾ ಸಂತಸದಿ
ಆತನ ಆಗಮನ ಕಾಯುವರು || ಆಕಾಶವೆಲ್ಲ ||
* * *
ಧರ್ಮವ ಮೀರಿ ನಡೆಯುವ ಮನುಜರೇ
ನನ್ನನ್ನು ಬಿಟ್ಟು ತೊಲಗಿರಿ ಎಂದು
ಯೇಸು ಹೇಳಿದ ಮಾತಿದು || ಧರ್ಮವ ||
ದಶಾಜ್ಞೆ ತೊರೆದು ಮನುಜರ ಹಿಂದೆ
ಹಿಂಬಾಲಿಸುವರೆಲ್ಲಾ ನಿರಾಶರೇ
ದೇವರ ಮಾತನ್ನು ಹಿಂಬಾಲಿಸುವರೇ
ಸಕಲ ವೈಭವದಿಂ ಜೀವಿಸುವರು || ಧರ್ಮವ ||
ಅನಾಥ ವಿಧವೆಯರ ಕೊರತೆಗಳನ್ನು
ನ್ಯಾಯವ ನೀಡಿ ವಾದಿಸಿರಿ
ಆತನ ಕೃಪೆಯನು ಕಾಪಾಡಿರಿ
ಕೃಪೆಯಿಂದೆಂದೂ ಅಗಲದಿರಿ || ಧರ್ಮವ ||
* * *
ಸಮವಾದ ದಾರಿಯಲ್ಲಿ
ನನ್ನನ್ನು ನಡಿಸು ಪ್ರಭು
ಹಿಂದೆ ನೋಡದೇ ಹಿಂಜರಿಯದೆ
ಕೈಹಿಡಿದು ನಡಿಸು ದೇವಾ || ಸಮವಾದ ||
ಕರಗಳನ್ನು ಚಾಚುತ್ತಲೀ
ಕರೆಯುತ್ತಾ ಓಡಿ ಬಂದೆ
ಪ್ರಾರ್ಥಿಸಿದೆ ನಿನ್ನಾದೃಷ್ಠಿಸಿ
ಎನಗೆ ನೀ ಉತ್ತರ ನೀಡಿದೆ || ಸಮವಾದ ||
ಚಿಂತೆ ದುಃಖ ಕಣ್ಣೀರನು
ಒರೆಸಿ ನೀನನ್ನನ್ನು ಆಧರಿಸಿ
ಕರಗಳಿಂದೆನ್ನನ್ನು ಸ್ವೀಕರಿಸಿದೆ
ಹಲ್ಲೆಲೂಯ ಹಲ್ಲೆಲೂಯ || ಸಮವಾದ ||
Leave A Comment