ನನಗೆ ನೀ ಆಧಾರ ವೈಧ್ಯನು
ನನ್ನ ರೋಗವೆಲ್ಲ ನೀ ಬಲ್ಲೆಯಾ
ಆತ್ಮದ ರೋಗ ವಾಕ್ಯದರೋಗ
ದಿಂದೆನ್ನನ್ನು ಗುಣಪಡಿಸು  || ನನಗೆ ನೀ ||

ಆತ್ಮೀಕವಾದ ಜೀವನ
ಮನುಜನಿಗೆ ಅವಶ್ಯವು
ಇಹಲೋಕ ವೈಭವವು
ಮನುಜರನ್ನು ಗುಣಪಡಿಸದು        || ನನಗೆ ನೀ ||

ಕುರುಡರು ಜೀವಿಸುವಹಾಗೆ
ನಿನ್ನ ವಾಕ್ಯ ತಿಳಿಯದಿರುವ
ಸಂತೋಷವೇ ಸಂಭ್ರಮವೇ
ನಿನ್ನ ವಾಕ್ಯ ತಿಳಿದ್ರೆ ಮಾತ್ರ          || ನನಗೆ ನೀ ||

* * *

ವಿಜಯರಾಜನೇ
ಸುಜನ ಗ್ರಾಜನೇ
ಯೇಸುವೇ ನೀನೇ         || ವಿಜಯರಾಜನೇ ||

ಅದ್ಭುತ ಸ್ವರೂಪನೇ
ಪರ್ವತ ಪ್ರಸಂಗದೊಳ್
ಅದ್ಭುತ ಮಾಡಿದವನೇ     || ವಿಜಯರಾಜನೇ ||

ಐದು ರೊಟ್ಟಿ ಎರಡು ಮೀನು
ಐದು ಸಾವಿರ ಮಂದಿಗೆ ಹಂಚಿ
ಅದ್ಭುತ ಮಾಡಿದವನೇ     || ವಿಜಯರಾಜನೇ ||

ಧರಣಿಯ ಭಾಸ್ಕರನೇ
ಪರಮ ಸುಧಾರಕನೇ
ಸಂತೋಷದಾಯಕನೇ    || ವಿಜಯರಾಜನೇ ||

* * *

ಆಲೈಸು ನನ್ನ ಪ್ರಾರ್ಥನೇ
ಆಲೈಸಿ, ನಿವಾರಿಸು ಪ್ರಭು
ಕರುಣೆಯಿಂ ಪ್ರೀತಿಸಿ
ನನ್ನನ್ನು ನೀ ನಡಿಸಿದ್ದೀ     || ಆಲೈಸು ||

ದೇವರ ಮಕ್ಕಳಿಗೆ
ಇದೇ ಜೀವದ ವಾಕ್ಯವು
ಆತನ ನಂಬಿದವರು
ನಾಶವಾಗರು ಎಂದಿಗೂ   || ಆಲೈಸು ||

ಸತ್ಯವನ್ನು ಹಿಂಬಾಲಿಸಿ
ನ್ಯಾಯವ ಕಾಪಾಡಿರಿ
ದೇವರ ಮಾತಿದ್ದು
ಭೂಜನರ ಯಾತ್ರೆಗೆ       || ಆಲೈಸು ||

* * *

ಕುಂಬಾರನೇ ನನ್ನ ಕುಂಬಾರನೇ
ಜೇಡಿಮಣ್ಣಾದ ನನ್ನನ್ನು
ಪರಿಶುದ್ಧವಾಗಿ ಮಾರ್ಪಡಿಸು
ಈ ಪಾತ್ರೆಯನ್ನು ನಿನ್ನದಾಗಿ
ಬಳಸಿಕೊಂಡು ನಡಿಸಯ್ಯಾ         || ಕುಂಬಾರನೇ ||

ಒಳಗಿನ ಭಾಗದ ಪಾತ್ರೆಯನ್ನು
ಶುದ್ಧವಾಗಿ ಬಳಸಯ್ಯಾ
ಹೊರಗಿನ ಭಾಗದ ಪಾತ್ರೆಯನ್ನು
ಲೋಕದ ಮನುಜರೇ
ಶುದ್ಧಪಡಿಸಿ ಕೊಳ್ಳುವರು   || ಕುಂಬಾರನೇ ||

ಧರಣಿಯ ಜನರೆಲ್ಲಾ
ನಿನ್ನ ನಂಬಿ ಜೀವಿಸಲು
ಈ ಪಾತ್ರೆಯೆಂಬ ಆತ್ಮವನ್ನು
ನಿನ್ನಗೊಪ್ಪಿಸಿ ನಡೆಯುವಂತೆ
ನೀನಾಡಿಸು ನನ್ನೇಸುವೇ  || ಕುಂಬಾರನೇ ||

* * *

ಯೇಸುವೇ ಈ ಮನುಜರಲ್ಲಿ
ಜನಿಸಿದ ಬಾಲನೇ
ಪಾಪಕ್ಷಮೆ ನೀಡಲೆಂದು
ಧರಣಿಗಿಳಿದನು
ನಮ್ಮ ಹೃದಯ ಬಾಲನೇ  || ಯೇಸುವೇ ||

ಪಾಪದ ಹೊರೆ ಹೊತ್ತು ಮನುಜರೇ
ಬನ್ನಿರಿ ನನ್ನ ಬಳಿಗೆ
ಎಂದು ಹೇಳಿದ ನನ್ನ ಯೇಸುವೇ
ಪರಮದಾಯನಾಗಿ ಬಂದ
ನನ್ನ ಯೇಸುವೇ
ದೂರ್ತನಂತೆ ಕಾಯಲು ಬಂದ
ನನ್ನ ಯೇಸುವೇ  || ಯೇಸುವೇ ||

* * *

ಸದ್ಗುಣ ಶಿರೋಮಣಿಯೇ
ನವರತ್ನ ಮಾಣಿಕ್ಯವೇ
ನನ್ನೇಸುವೇ ನನ್ನೇಸುವೇ
ಕಾಯುವ ನನ್ನೇಸುವೇ     || ಸದ್ಗುಣ ||

ಬಡವರನ್ನು ದಿಕ್ಕಿಲ್ಲದವರ
ಮೊರೆಯನ್ನು ಆಲೈಸುವ
ನೀತಿಯನ್ನು ಹಿಂಬಾಲಿಸುವ
ಮನುಜರೇ ಧನ್ಯರು        || ಸದ್ಗುಣ ||

ಪಾಪಿಯ ಕರುಣಿಸಿ
ಪಾಪವ ಕ್ಷಮಿಸುತ್ತಾ
ಮನುಜರ ಕರುಣಿಸು
ನನ್ನೇಸುವೇ ನನ್ನ || ಸದ್ಗುಣ ||

* * *

ದೈವ ತಂದೆ ನನ್ನೀ ಬಳಿಯಿರಲು
ತಾಳ್ಮೆ ಪ್ರೀತಿ ತುಂಬಿಹುದು
ಪರಿಶುದ್ಧಾತ್ಮಾನು ನನ್ನ ನಡೆಸುವನು
ಯಾರಿಗೆ ವರವುಂಟು ಅವರಿಗೇ      || ದೈವ ||

ಆತ್ಮನು ನನ್ನನ್ನು ವಂಚಿಸದೇ
ನನ್ನ ಕಾಲ್ಗಳನ್ನು ನಡೆಸುವುದು
ನಿನೇ ಯಿಂದ್ದಂತೆಯೇ ಈ ದಿನವೂ
ನೀನೆನ್ನೀ ಬಳಿಯಿದ್ದು ಕಾಪಾಡುವೇ  || ದೈವ ||

ಹಗೆಯವರೆ ದುರಲ್ಲಿ ಜಾತಣವ
ನನಗಾಗಿ ನೀ ನೇರ್ಪಡಿಸಿ
ನನ್ನ ಶಿರಕ್ಕೆಂದೇ ಕೈಲವನ್ನೂ
ಹಚ್ಚಿಸಿ ನನಗಭಿಶೇಕಿಸುವೇ          || ದೈವ ||

ನನ್ನಯುಶ್ಕಾಲವ ಸಂಪೂರ್ಣದಿಂ
ನಿನ್ನಶಿರ್ವಾದವು ತುಂಬಿರಲು
ನೀ ನನ್ನಾತ್ಮದೊಳ್ ನೆಲೆಸಿರಲು
ನಿರಂತ್ರವಾಗಿ ವಾಸಿಸಯ್ಯಾ         || ದೈವ ||

* * *

ತೀರ್ಪುಕೊಡುವ ತಂದೆಯಿರಲು
ಕೊರತೆ ಏತಕೆ
ಘನಮಾನ ಪಾತ್ರನೇ      || ತೀರ್ಪು ||

ದೈವತಂದೆ ಕರುಣೆಯಿಂದ
ಕಳುಹಿದತಾನ
ಅವನಲ್ಲಿ ಸ್ತುತಿಸಿರಿ         || ತೀರ್ಪು ||

ಹೊಸ ಹೊಸ ದಿವಸವನ್ನು ತಂದ
ಧ್ರುವ ತಂದೆಯಲ್ಲಿ
ನಿನ್ನ ಕೃಪೆಯ ತೋರಿಸು   || ತೀರ್ಪು ||

ಕ್ರಿಸ್ತ ನನ್ನು ಹರ್ಷದಿಂದ
ಸ್ತುತಿಸಿ ಹಾಡುವ
ಅವನ ಕೃಪೆಯ ಕಾಣುವ   || ತೀರ್ಪು ||

* * *

ನಿತ್ಯ ಸುರಾಜ ನಿರ್ಮಲರಾಜ
ನಿನ್ನ ಪಾದಕ್ಕೆರಗುವೆ ದೇವ
ನಿನ್ನ ಪಾದಕ್ಕೆರಗುವೆ ದೇವ
ನನ್ನ ಮನ ರಾಜ್ಯದಲ್ಲಿ
ನನ್ನ ಮನಸ್ಯಾಳುವಂತ
ರಾಜಾದಿ ರಾಜನಿಗೆ ಸ್ತೋತ್ರ
ಯೇಸು ಮಹರಾಜನಿಗೆ ಸ್ತೋತ್ರ     || ನಿತ್ಯ ||

ತೂಕಡಿಸದೆ ಎನ್ನನ್ನು
ಕಣ್ಣಿಡೆ ಯಂತೆನ್ನನ್ನು
ಕಾಪಾಡಿದವನಿಗೆ ಸ್ತೋತ್ರ
ಎಚ್ಚರಿಕೆಯಿಂದೆ ನೀನ್ನಾ
ಕಣ್ಮಣಿಯಂತೆ ನಾನಿಲ್ಲಿ
ಭೋದಿಸ ಬಂದೇಸುವಿಗೆ ಸ್ತೋತ್ರ   || ನಿತ್ಯ ||

ಹಗಲೆನಾದೆನ್ನನ್ನು
ಉದಯಿಸಿದ ಸೂರ್ಯನಂತೆ
ಇಮ್ಮಾಮವೇವುನೇ ಸ್ತೋತ್ರ
ನಿನ್ನಲ್ಲಿ ನಾನಿರಲು
ನನ್ನಲ್ಲಿ ನೀರಲು
ವಾಸಿಸುವ ದಿನಕ್ಕಾಗಿ ಸ್ತೋತ್ರ      || ನಿತ್ಯ ||

* * *

ದೇವರ ನೀನು ನಂಬು
ಆತ ನೊಡುವ ಪ್ರೀತಿಯ ಆತ್ಮ
ಬಾ ನನ್ನೇಸುವಿಲ್ ನೀನು
ಎಂದು ಪ್ರೀತಿಸ ಬಾ ಓ ಮನವೇ    || ದೇವರ ||

ಆಲೋಚನೆ ಎಂಬ ಭಾರವನ್ನು
ಬಾಳಿನಲ್ಲಿ ನೀ ಹೊರುವಾಗ
ಪ್ರೀತಿಯಿಂದಿರಿಸು ಎನ್ನನ್ನ
ಆದರಿಸುವ ನೀ ನಂಬಿದರೆ || ದೇವರ ||

ಪಾಪಿಯಾಗಿದ್ದರೂ ನಿನ್ನ
ಅವನೇ ನಿನ್ನನ್ನು ಆಧರಿಸಿ
ಜೀವನವನ್ನು ಸುಖದಿಂದ
ಸಾಗಿಸುವ ನಿನ್ನಾತ್ಮಾವ   || ದೇವರ ||

* * *

ನನ್ನೀತಂದೆ ನನ್ನ ಬಳಿಯಿರಲು
ನನಗೇನು ಕೊರತೆಯುಂಟು
ಹೇಳಾತ್ಮಾನೇ   || ನನ್ನ ತಂದೆ ||

ನನ್ನಾತ್ಮಾ ಕಾಯಲು ತನ್ನ ಜೀವ ಕೊಟ್ಟು
ನನ್ನೊಡ ನಿಂತು ಭಯವೇ ಇಲ್ಲ
ಭೂಯಾತ್ರೆಯಲ್ಲಿ ಜನಿಸಿದ ರಾಜ
ಮಿತ್ರನೇ ನೀನೇ ನನ್ನ ಸಹಾಯಕ   || ನನ್ನ ತಂದೆ ||

ಆದಿಯಿಂದಲೂ ಬೆಳಕಾಗಿ ಉದಯಿಸಿದ
ಪರದಲ್ಲಿ ನನಗಾಗಿ ಪ್ರಾರ್ಥಿಸುವ
ಮೋಸವ ತ್ಯಜಿಸಿ ಮುಂದೆಗಾವನು
ಮೋಕ್ಷಕ್ಕೆ ದಾರಿಯ ಮಾಡುವನು    || ನನ್ನ ತಂದೆ ||

ಚಿಂತೆ ನಿವಾರಿಸಿ ಕಣ್ಣೀರ ಒರೆಸಿ
ಕಡೆಯವರೆಗೂ ಕೈಬಿಡದೇ ಕಾಯ್ವ
ಪಾಪ ಕ್ಷಮಿಸೆನಗೆ ಭಾಗ್ಯವ ನೀಡ್ವನು
ಒಂಟಿಯಾದೆನ್ನನ್ನು ಜತೆ ನಡೆವ     || ನನ್ನ ತಂದೆ ||

* * *

ಯೇಸು ಎಂಬ ನಾಮವು
ಶ್ರೇಷ್ಠವು ಅತಿ ಶ್ರೇಷ್ಠವು
ದೈವ ಜ್ಞಾನವ ನಂಬಿದ್ರೆ
ದುಃಖವೆಲ್ಲ ಮಾಯವೇ     || ಯೇಸು ||

ಪಾಪತುಂಬಿದ ಮನುಜರನ್ನು
ದೇವ ಕೃಪೆಯ ತುಂಬಿದ
ತಂದೆ ಅವನೇ ತಾಯಿ ಅವನೇ
ನಮ್ಮನ್ನಾಳುವ ಕುರುಬನೇ
ಪರರ ದಂತೆ ಅಲ್ಲವೇ      || ಯೇಸು ||

ಕನ್ಯಾ ಮರಿಯಳ ಕುವರನೆಂದ
ಕಾಯಬಂದನು ಸತ್ಯದ
ದೈವ ಬರುವ ದೈವಾಶಿರ್ವಾದ
ತಂದು ನಮ್ಮನ್ನು ಕಾಯುವ
ಆತ್ಮಾದಿ ಅವನ ಸ್ತುತಿಸುವ          || ಯೇಸು ||

* * *

ಪರಲೋಕದ ತಂದೆಯೇ
ನಿನ್ನನ್ನು ಭಜಿಸುವೆವು
ಹಗಲೂ ಇರುಳೂ
ಪ್ರತಿಕ್ಷಣ ಕ್ಷಣದಲ್ಲಿಯೂ     || ಪರಲೋಕದ ||

ದೇವರೇ ನೀ ನನ್ನ
ಪ್ರಾರ್ಥನೆ ಕೇಳಿದಿ
ಕೆಡುಕನ ಕೇಡಿನಿಂದ
ನಮ್ಮನ್ನು ಬಿಡಿಸಿದಿ         || ಪರಲೋಕದ ||

ಕೇಳಿರಿ ಜನತೆಯೇ
ಯೇಸುವ ಸ್ತುತಿಸಿರಿ
ಮೋಕ್ಷವ ಮಾರ್ಗವನ್ನು
ಆತನೇ ತೋರುವನು      || ಪರಲೋಕದ ||

* * *

ನಿನ್ನ ಜೀವಿತ ಕಾಲವು
ನಿನ್ನ ಜೀವಿ ಅಂತ್ಯವೂ
ನೀ ಜೀವಿಸ ಓ ಮಾನವಾ  || ನಿನ್ನ ||

ಜೀವಿನವು ಒಂದು ಸಮುದ್ರವೇ
ಸಮುದ್ರದ ಒಂದು ಬಿಂದುವೇ
ಅದು ಹೇಗೆ ಜೀವಿಸಿದರೇನು
ಆ ವೇಳೆ ಕಳೆಯುವ ಮುನ್ನವೇ      || ನಿನ್ನ ||

ಅಲಾಯುಶ್ಯ ಮನುಜನ
ಅಲ್ಪವೇ ಸಮಯದೊಳು
ಪ್ರಭುಯೇಸು ಕ್ರಿಸ್ತನು
ನಿತ್ಯ ಜೀವ ಕೊಟ್ಟು ಕಾಯುವನು    || ನಿನ್ನ ||

* * *

ನಿನ್ನ ಕೃಪೆಯೇ ಸಾಕೆನಗೆ ಪ್ರಭುವೇ
ನಿನ್ನ ಕೃಪೆಯೇ ಸಾಕೆನಗೆ ಕ್ಷಣವು
ನಿನ್ನ ಕೃಪೆಯೇ ಸಾಕೆನಗೆ ನನ್ದೇವಾ || ನಿನ್ನ ಕೃಪೆಯೇ ||

ವ್ಯಾದಿಯಿಂದ ನಾ ಬಳಲಿದೆನು
ಚಿಂತೆ ದುಃಖಗಳಾವರಿಸಿದೆ
ಕರುಣೆ ತುಂಬಿದ ನಿನ್ನ ಕೃಪೆ
ನಿನ್ನ ಕೃಪೆಯಿಂದ ನಾ ಜೀವಿಸುವೆ   || ನಿನ್ನ ಕೃಪೆಯೇ ||

ಒಂದಾಗಳಾಶ್ರಯ ಕ್ಷಣ ಮಾತ್ರ
ನಾನವರೆಲ್ಲರ ನಂಬಲೊಲ್ಲೆ
ಕರುಣಾಶೀಲ ನಿನ್ನ ಕೃಪೆ ಸಾಕು
ನಿನ್ನ ಕೃಪೆಯಿಂದ ನಾ ಜೀವಿಸುವೆ   || ನಿನ್ನ ಕೃಪೆಯೇ ||

* * *

ದೇವರೇ ನೀನೇನ್ನಾ ಆಶ್ರಯವು
ದೇವರೇ ನೀನೆನ್ನ ಶರಣನೇ
ಯೆಹೋವನೇ ನೀನೆನ್ನಾ ರಕ್ಷಸೆ
ಪ್ರಭುವೇ ನೀನೇ ನನ್ನಶ್ರಯವು      || ದೇವರೇ ||

ಕರುಣಿಸು ದೇವಾ ಕರುಣಾಳುವೇ
ನಿನ್ನ ವಿರೋದ್ರಿ ಅಪರಾದಿಯ
ಪಾಪಿಗೆ ನೀ ಆಶ್ರಯವು
ನೀನೆನ್ನ ಅರುಣೋದಯವು          || ದೇವರೇ ||

ರಾಜಾಧಿರಾಜಾ ಘನಮಾನ ಮಿತ್ರನೇ
ನಿನ್ನ ನಾಮವ ನಾ ಸ್ತುತಿಸುವೆ
ಮಹೋನಾತನೇ ನಿನ್ನಾ ನಾಮವಂ
ನೀನ್ನಾ ನೀತಿಯ ಕೊನೆಯವರೆಗೂ  || ದೇವರೇ ||

* * *

ನಾ ಪಾಪಿಯೇ ಪ್ರಭುವೇ
ನನ್ನನ್ನು ಕಾಯೋ ದೇವಾ  || ನಾ ಪಾಪಿಯೇ ||

ಶ್ರೀ ಯೇಸುಸ್ವಾಮಿ ನನ್ನಪರಾದ
ಹುಟ್ಟಿಸಿದೆ ಘೋರಭಾದೆ
ದುರಿತಗಳೆಲ್ಲವ ಪರಿಹರಿಸುತಲಿ
ಮರಣದಿಂ ರಕ್ಷಿಸಿ ಕಾಪಾಡಯ್ಯಾ
ರಕ್ಷಿಸಯ್ಯಾ ಕ್ಷಮಿಸಯ್ಯಾ   || ನಾ ಪಾಪಿಯೇ ||

ಆಶೆಯೆಂಬ ದುರಿತಮಾರ್ಗವನ್ನು
ಬಿಡಿಸಿ ನನ್ನನ್ನು ಕ್ಷಮಿಸಯ್ಯ
ನಾಶಕ್ಕೆ ಗುರಿಯಾದ ನನ್ನನ್ನು ರಕ್ಷಿಸಿ
ಪಾಪಿಯಾದೆ ನನ್ನ ವಿಮೋಚಿಸು
ವಿಮೋಚಿಸಿ ಹರ್ಷಗೊಳಿಸು          || ನಾ ಪಾಪಿಯೇ ||

ಉದಯದೊಳು ನಿನ್ನ ಪ್ರಾರ್ಥಿಸಿ
ನಿನ್ನನ್ನು ಬೇಡುವೆ ನನ್ನಾತ್ಮಕ್ಕಾಗಿ
ದಯವಿಟ್ಟು ಸ್ವೀಕರಿಸಿ ನನ್ನನ್ನು
ಕಾಯ್ದು ಸ್ವೀಕರಿಸಿ ಪ್ರೀತಿಯು
ರಕ್ಷಿಸಯ್ಯಾ ಹರ್ಷಗೊಳಿಸಯ್ಯ       || ನಾ ಪಾಪಿಯೇ ||

* * *

ಉಪ್ಪಿನಲ್ಲಿಯೋ ಸಾಯುವಿಯೋ
ನಿನ್ನಲ್ಲಿ ಜೀವ ಕಣ್ಣೀರಿಲ್ಲಯ್ಯೋ
ನಿನ್ನಗೆಂದು ಲಾಭವಿಲ್ಲಯ್ಯ || ಉಪ್ಪಿ ||

ಜೀವ ಕ್ರಿಮಿ ಕೀಟ ಬಾಳುವುದಿಲ್ಲ
ನೀನೆಂದು ಓಡಿ ರಕ್ಷಣೆವಿಲ್ಲವೆಂದ್ರೆ
ಸಾಕ್ಷಿಯಿಂದ ಜೀವಿಸಲು ಆತ್ಮಾ
ನಿನ್ನ ಆತ್ಮವೆಂದು ಅಗುಲುವವರೆ,
ಅನಾವಶ್ಯನಾದ ಜೀವವನ್ನು ತೊರೆ  || ಉಪ್ಪಿ ||

ಜೀವ ನದಿಯಾಗಿ ಯೇಸು ಕ್ರಿಸ್ತನಲ್ಲಿ
ನಿನ್ನಲ್ಲಿರುವ ಆಶಾಪಾಶವ ತೊರೆದು
ಭೂ ಯಾತ್ರೆಯ ಚಿಂತೆಯನ್ನೆ ಬಿಟ್ಟು
ನಿನ್ನ ಸಾವು ಇಂದೇ ಸಂಭವಿಸ ನಿಶ್ಚಯವು
ಬೇಕಾದ ಹೃದಯ ನಿನಗೆ ಇಂದೇ    || ಉಪ್ಪಿ ||

* * *

ದಿನವೂ ನಾ ನಿನ್ನ ಸ್ತುತಿಸಿ ಹಾಡಿ
ಸಹಾಯಕನೇ ನನ್ನ ಏಕದೇವನೇ
ಆತ್ಮವು ಬಳಲಿ ಬಾಯಾರಿದೆ ತಂದೆ
ಕರುಣಿಸಿ ಕರುಣೆಯಾ ಪಾಲಿಸಯ್ಯಾ || ದಿನವೂ ||

ಪರಿಶುದ್ಧಾತ್ಮನೇ ಪರಲೋಕದ ತಂದೆ
ಆದಿಯಿಂದಲೂ ನೀನೆನ್ನ ಪರಲೋಕದಾತ
ಮರಳಿವನನ್ನು ನೀನೇ ಕರುಣಿಸು ರಾಜ
ಮಹಿಮೆ ಧರಿಸಿದ ಮಹತ್ವ ರಾಜ    || ದಿನವೂ ||

ಸತ್ತೇನಾದರೂ ಜೀವ ತಂದಾಲೈಸಿ
ಪಾಪಿಯಾದೆನ್ಮೈಏಲೇ ತೀರ್ತವ ಧರಿಸಿ
ಮತ್ತೇ ನನಗಾಗಿ ಜೀವವ ನೀಡಿದೆ
ಒಂದ ಶೋಧನೆಯಿಂದ ನನ್ನನ್ನು ಕಾಯ್ದೆ      || ದಿನವೂ ||

ಮಾಡಿದ ಪಾಪವ ಕ್ಷಮಿಸಲು ಬಾರೈ
ಮಾಡಿದ ಪಾಪವ ಮರೆಯಲು ನನ್ನ
ಆತ್ಮಾವ ಕಾಯೋ ಕಡೆಯಲ್ಲಿ ನಿನ್ನನ್ನೇ ಸೇರು
ನನಗಾದಾರಕನಾಗಿರು ತಂದೆ       || ದಿನವೂ ||