ಯೇಸುವಿನ ಪಾದ ಶುದ್ಧವು
ದೇವರ ಪರಿಶುದ್ಧಾತ್ಮವು
ಭೂಲೋಕದ ಜನ ಅರಿಯರು
ಅರಿಯರು ಆತನ ಅರಿಯರು        || ಯೇಸುವಿ ||

ಕಾರ್ಗತ್ತಲೆ ಯಾಳು ಕಾಯುವ ಬೆಳಕು
ಯಾವುದನ್ನು ತಡೆಯ ಶಕ್ತಿಯುಂಟು
ಪರಿಶುದ್ಧಾತ್ಮನವನೇ       || ಯೇಸುವಿ ||

ತಟ್ಟಿರಿ ತೆರೆವುದು ಎಂದು ಹೇಳಿದ
ಕೇಳಿರಿ ಸಿಗುವುದು ಎಂದು ಹೇಳಿದ
ಪಾಪಿ ಯಾದೆನ್ನನ್ನು ರಕ್ಷಿಸು ಎಂದು ಹಾಡೋಣ        || ಯೇಸುವಿ ||

* * *

ಕರಗದೋ ಹೃದಯವೇ
ಕ್ರೂಜೆಯಲ್ಲಿ ದೃಷ್ಟಿಸು
ಕೈ ಕಾಲ್ಗಳಲ್ಲಿ ಮೊಳೆ ಜಡಿದ
ಪಾದವೆಲ್ಲ ನೋವಿನಿಂದ   || ಕರಗದೇ ||

ಮನುಜರನ್ನು ಕಾಯಲೆಂದೇ
ತನ್ನ ಜೀವ ಅರ್ಪಿಸಿದ
ಇನ್ನು ತನ್ನ ಜೀವವನ್ನು
ಪಾಪಿಗಳಿಗೆಂದೇ ಅರ್ಪಿಸಿದ
ಹಾಗೆ ತನ್ನ ಪ್ರಾಣವನ್ನು
ನೊಂದ ಪಾದದಿಂ ಸಾಗಿದ
ಏಕ ತಂದೆ ನಮಗಾಗಿ
ಎಷ್ಟೆಂದು ಭಾಧೆಪಡುವನು || ಕರಗದೇ ||

ಭೂಪರಲೋಕದ ಆಳಲೆಂದು
ಬಂದವನನ್ನು ಹೀಸೈಸಿದರು
ಮೂರು ಮೊಳೆಯಿಂದಾತನನ್ನು
ಶಿಲುಬೆಯೊಳ್ಳು ಜಡಿದರು
ಸೈತಾನನೆಂಬ ಶತ್ರುವನ್ನು
ಜೈಸಲೆಂದು ಭೂಲೋಕಕ್ಕೆ
ಪರಲೋಕವನ್ನೇ ತ್ಯಜಿಸಿದು
ಭೂಲೋಕವನ್ನೇ ಜೈಸಿ ಆತನು     || ಕರಗದೇ ||

* * *

ಸ್ತುತಿ ಹಾಡು ಸ್ತುತಿಸಿ ಗೀತೆಯ ಹಾಡಿ
ಅವವಾಶೀರ್ವಾದವ ಪಡೆಯಿರಿ
ಬರುವನು ಸಹಾಯಕನಾಗಿಯೇ
ಕಷ್ಮನೀಗಿಸ ಬರುವನ್ನು
ಪರಿಶುದ್ಧನಾಗಿ ಬರುವನ್ನು ಬರುವನು         || ಸ್ತುತಿ ಹಾಡು ||

ಹಿಬ್ಬನಿಯ ಸುರಿದ ಗಾಡಿವಿಲಲ್ಲಿ
ಕರುವನ್ನು ಕಟ್ಟಿದ ಕೊಟ್ಟಿಗೆಯೊಳು
ಮರಿಯಳ ಮಗುವಾಗಿ ಜನಿಸಿದನು
ಪರಿಶುದ್ಧಾ ದಿನನೊಳು ಬರುವನು, ಬರುವನು          || ಸ್ತುತಿ ಹಾಡು ||

ಪರಿಶುದ್ಧಾ ಹೃದಯ ಸ್ತುತಿ ಹಾಡಿರಿ
ಪಾಪವ ಕ್ಷಮಿಸಿ ನಿನ್ನನ್ನು ಕಾಯ್ವ
ಆತನ ಹುಡುಕಿ ಪಡೆಯಿರಿ ಬೇಗ
ಪರಿಶುದ್ಧ ದಿನವನ್ನು ಏರ್ಪಡಿಸಿ      || ಸ್ತುತಿ ಹಾಡು ||

* * *

ನನ್ನ ಜೀವವ ಕೊಡುವೆನು
ದೇವಾದಿ ದೇವಾ
ಜೀವವ ಕೊಡುವೆನು ನಾನೇ         || ನನ್ನ ಜೀವವ ||

ಹಾಡುವ ಪಕ್ಷಿ ಕಾಣದೇ ಹೋಗ್ವದು
ಮನೆಯು ಕೊಟವು ಕಾಣದಾಗುವದು
ಸೌಂದರ್ಯ ಮುಖದಿಂ ಮರೆಯುವುದೆಲ್ಲ
ಲೋಕ ಸೌಂದರ್ಯವು ಮರೆಯುವುದು       || ನನ್ನ ಜೀವವ ||

ಆಶ್ತಿ ಆಭರಣ ಅಳಿದೋಗುವುದು
ಸಮುದ್ರದಲೆಗಳು ಅಳಿದೇ ಹೋಗುವುದು
ನನ್ನ ಪಾಪವು ಇಲ್ಲೇ ಇರುವುದು
ಈ ಶರೀರವು ಮಣ್ಣಾಗುವುದು        || ನನ್ನ ಜೀವವ ||

* * *

ಯೇಸುವೇ ಈ ಮನುಜರೊಳು
ಜನಿಸಿದ ದೇವಾ
ಪಾಪವನ್ನು ತೊಳೆಯಲೆಂದು
ಜನಿಸಿದನಾತ ನಮ್ಮ ಹೃದಯದೇವನೇ       || ಯೇಸುವೇ ||

ಪಾಪಿಗಳೇ ಪಾಪದ ಹೊರೆ ಹೊತ್ತ ಮನುಜರೇ
ನೀವೆಲ್ಲರೂ ನನ್ನ ಬಳಿಗೆ ಬನ್ನಿರೆಂದು ಕರೆದನು
ಆತನ ಸನ್ನಿಧಿಯೊಳ್ ಸೇರ ಹಿಂದೆ ಜರಿದರು
ಹಸುವಿನ ಕೊಟಿಟಗೆಯೊಳ್ ಜನಿಸಿದಾತನಲ್ಲವೇ       || ಯೇಸುವೇ ||

ಮರಿಯಳ ಮಡಿಲ್ಲಲ್ಲಿ ಬೆಳೆದ ದಿವ್ಯಜ್ಯೋತಿಯೇ
ಪ್ರತಿಕೃಪೆಗಳೆಂಬ ಕಿರೀಟದಿಂದ ನಿನ್ನ ವಂದಿಸುವೆ
ಬೆಟ್ಟದಂತ ಪಾಪದಿಂದ ನನ್ನ ರಕ್ಷಿಸು
ಮನಸ್ನಿನೊಳು ನೆಲೆಸಿರುವ ದಿವ್ಯ ರಕ್ಷಕನೇ   || ಯೇಸುವೇ ||

* * *

ಕ್ರೂಜೆಯೊಳ್ ತನ್ನ ರಕ್ತ ಸುರಿಸಿದ
ಹೊಲ್ಲಥಾ ಬೆಟ್ಟದೊಳ್
ನನ್ನ ಗುರು ಯೇಸುಸ್ವಾಮಿ
ಕೊಡುವನು ಜೀವವ
ಪಾಪಿಗಳಿಗಾಗಿ    || ಕ್ರೂಜೆಯೊಳ್ ||

ಪಾಪಿಯ ನಡುವೆ ಆತನ ನಿಲ್ಲಿಸಿ
ನ್ಯಾಯವ ಮಾಡಿದರೂ
ಇನ್ನೂ ಆತನ ಭೈದು ಹೊಡೆದು ಉಗುಳಿ
ಹಿಂಸೆ ಮಾಡಿದರು         || ಕ್ರೂಜೆಯೊಳ್ ||

ತಲೆಯೊಳು ಮುಳ್ಳಿನ ಕಿರೀಟವ ಧರಿಸಿ
ಹಾಸ್ಯವ ಮಾಡಿದರೂ
ಕೆಂಪುವಲ್ಲಿಯ ಧರಿಸಿ ಆತನ ಹೊಗಳಿ
ಹಾಸ್ಯದಿ ಹಾಡಿದರು        || ಕ್ರೂಜೆಯೊಳ್ ||

ಈಟಿಯಿಂದಾತನ ಪಕ್ಕೆಗೆ ತಿವಿದು
ರಕ್ತವ ಸುರಿಸಿದರೂ
ಅವರು ನೆನಸಿದ ಹಾಗೆ ಆತನ
ಹಿಂಸೆ ಮಾಡಿ ನಗುತ್ತಿದ್ದರು || ಕ್ರೂಜೆಯೊಳ್ ||

ಚಂದ್ರನು ಸೂರ್ಯನು ಸಕಲ ತಾರೆಗಳು
ಸಹಿಸದ ಸಾಕ್ಷಿಯನು ದೈವರಕ್ಷಕನಾದ ಯೇಸುವ ತನ್ನ
ಪ್ರಾಣವ ಬಿಡುವುದನು ನೋಡಿ ಮರುಗಿದರು  || ಕ್ರೂಜೆಯೊಳ್ ||

* * *

ಕಲ್ವಾರಿ ಶಿಲುಬೆಯಲಿ
ಗಾಯವಾದ ಉತ್ತಮನೇ
ಕರುಣೆಯಾ ನದಿಯೇ
ಯೇಸುವೇ ರಕ್ಷಕನೇ
ಯೇಸು ರಕ್ಷಕನೇ ಪಾಪಿಯನ್ನು ರಕ್ಷಿಸಲು
ಲೋಕಕ್ಕೆ ಬಂದವನೇ      || ಯೇಸು ||

ಬೆಲೆಯುಳ್ಳ ಮಾಣಿಕ್ಯವೇ
ಪಾಪವ ಹೊತ್ತವನೇ
ವಂಚನೆಗೆ ಕಾಲವಿದು
ಇದಕ್ಕಾಗಿ ನೀ ಪಟ್ಟ ಭಾದೆಯಿದು    || ಯೇಸು ||

ಶಿಲುಭೆಯೊಳ ಹಾಕಿದರು
ನಿನ್ನ ಹಿಂಸೆಯ ಮಾಡಿದರು
ಪವಿತ್ರಾತ್ಮನ ಪಡೆದವನೇ
ರಕ್ಷಕನೇ ನಮ್ಮ ಪರಮತಂದೆ       || ಯೇಸು ||

* * *

ಹರ್ಷದಿಂದ ಹಾಡುವೆ
ನನ್ನೇಸು ನಾಮವ
ಆತನಲ್ಲೇನ್ನಾತ್ಮವ
ಹರ್ಷಿಸುತ್ತಿರಲು   || ಹರ್ಷದಿಂದ ||

ದೀನದಯಾಳು ನೀನೇ
ಕರುಣಾ ಕೃಪಾಳು ನೀನೇ
ಸತ್ಯಶೀಲ ನೀನೇ
ಸರ್ವವ್ಯಾಪಿ ಸುಂದರನೇ  || ಹರ್ಷದಿಂದ ||

ಬಾಧೆಪಟ್ಟವ ನೀನೇ
ರಕ್ತ ಸುರಿಸಿದವ ನೀನೇ
ನನ್ನ ಪಾಪಕ್ಕಾಗಿಯೇ
ನನ್ನೇಸು ರಾಜನೇ         || ಹರ್ಷದಿಂದ ||

* * *

ಸತ್ಯಶೀಲ ಪರಮದೇವ
ಕೈ ಬಿಡದೆನ್ನನ್ನು ನಡೆಸುನೀ
ಕುಜಿನಕ ಸಂಗಸೇರದೇ
ಕಾಪಾಡೆನ್ನ ದೇವನೇ      || ಸತ್ಯಶೀಲ ||

ಆರಾಧಿಸೇಸುವೇ ನನ್ನ ಹೃದಯದಿಂ
ನಮಿಸುವೇ ನಿನ್ನ ಮಾತ್ರವೇ
ಸ್ತೋತ್ರಕ್ಕೆ ಪಾತ್ರನು ನೀನೊಬ್ಬನೇ
ನಿತ್ಯ ದೇವನೇ ನೀನೊಬ್ಬನೇ        || ಸತ್ಯಶೀಲ ||

ಅದ್ಭುತ ಸ್ವರೂಪನು ನೀನೋಬ್ಬನೇ
ಆಲೋಚನಾಕರ್ತ ನೀನೊಬ್ಬನೇ
ನಿತ್ಯ ಸ್ವರೂಪನೇ ಸಮಾಧಾನ ಸ್ವರೂಪನು
ಪರಾಕತ್ರಮಶಾಲಿಯು ನೀನೊಬ್ಬನೇ         || ಸತ್ಯಶೀಲ ||

* * *

ಸ್ತೋತ್ರಕ್ಕೆ ಪಾತ್ರನು ಯೇಸುವೇ
ಸತ್ಯ ಸ್ವರೂಪನು ಯೇಸುವೇ
ಜಯ ಜಯ ಜಯವೆಂದು ಹಾಡುವೇ
ಮುಂದೆ ಸಾಗುವೆ ಮುಂದೆ ಸಾಗುವೇ         || ಸ್ತೋತ್ರಕ್ಕೆ ||

ದೀನ ದರಿದ್ರರೊಂದಿಗೆ
ಯೇಸು ಸಂಚರಿಸಿದ
ಪಾಪಿಗಳೆನ್ನದೆ ಮುಂದೆ ಸಾಗಿದ
ಇವನೇ ಲೋಕದ ರಕ್ಷಕನು || ಸ್ತೋತ್ರಕ್ಕೆ ||

ಮನುಜರಿಗೆ ತನ್ನ ಪ್ರೀತಿ ಕರಣೆ
ತೋರಿ ಪ್ರೀತಿಯಿಂದಪ್ಪಿದನು
ಪಾಪದಿಂ ತುಂಬಿದ ಮನುಜರನ್ನು
ಪ್ರೀತಿಯಿಂದ ಸಲಹಿದನು  || ಸ್ತೋತ್ರಕ್ಕೆ ||

* * *

ದೇವರಾದುಕೊಂಡು ಜನರು
ದೇವರ ಮಕ್ಕಳಾಗುವರು
ಇದು ಸತ್ಯವೇ ಮನುಜನೇ
ತಿಳಿದು ನಡೆದುಕೊಂಡೆಯಾ         || ದೇವರಾದು ||

ಕರ್ತನ ಕೋಪಕ್ಕೆ ಗುರಿಯಾಗದೇ
ಆಗ್ನಿ ನರಕಕ್ಕೆ ಗುರಿಯಾಗದೇ
ಆತನ ಆರಿತುಕೊಂಡಿರುನೀ
ಜೀವನ ಸಾಗಿಸು ಮನುಜನೇ       || ದೇವರಾದು ||

ದುಷ್ಟನ ಬಲೆಗೆ ಬೀಳದೇ
ಜೀವನ ಸಾಗಿಸು ನೀ
ದೈವೀಕ ಒಲವು ಬೇಕಾಗಿದೆ
ಅದೇ ನಿತ್ಯ ಜೀವದ ಒಲವು         || ದೇವರಾದು ||

ಆತ ಚಿತ್ತದಂತೆ ನಡೆದ
ಮನುಜನು ಧನ್ಯನು
ಧನ್ಯರೆನಿಸಿ ಕೊಳ್ಳುವರು
ಇದು ಸತ್ಯವೇದದ ವಾಕ್ಯವು         || ದೇವರಾದು ||

* * *

ಸತ್ಯಕ್ಕೆ ನಿಲ್ಲುವ ಒಬ್ಬ ವ್ಯಕ್ತಿಯನ್ನು
ದೇವರು ಹುಡುಕುತಲಿರುವವನು
ಜನರಿಗೆ ಹೆದರದೆ ದೇವಗೆ ಹೆದರುವ
ಆ ಒಬ್ಬ ವ್ಯಕ್ತಿ ನೀನಾಗಿರುವೆಯಾ ? || ಸತ್ಯಕ್ಕೆ ||

ನೋಹನು ಸತ್ಯಕ್ಕೆ ನಿಂತವನು
ಜನರ ಹಾಸ್ಯಕ್ಕೆ ಗುರಿಯಾದನು
ಎಲಿಯನು ಸತ್ಯಕ್ಕೆ ನಿಂತವನೇ
ದೇವರ ಮೆಚ್ಚಿಕೆ ಪಡೆದವನು         || ಸತ್ಯಕ್ಕೆ ||

ದಾನಿಯೇಲ್ ಸತ್ಯಕ್ಕೆ ನಿಂತವನೇ
ವೈರಿಯ ತಂತ್ರಕ್ಕೆ ಗುರಿಯಾದನು
ಸ್ನಾನಿಕ ಯೋಹಾನ ಇಂಥವನೇ
ಆದ್ದರಿಮದ ರಕ್ತ ಸಾಕ್ಷಿಯಾದ        || ಸತ್ಯಕ್ಕೆ ||

ಪೌಲನು ಸತ್ಯಕ್ಕೆ ನಿಂತವನು
ನಂಬಿಕೆಯ ಕಾಪಾಡಿಕೊಂಡವನು
ಯೇಸುವೂ ಸತ್ಯಕ್ಕೆ ಬಂದವನು
ಆತನ ಹೆಜ್ಜೆ ಜಾಡಿನಲ್ಲಿ ನಡೆಯುವಿರೋ       || ಸತ್ಯಕ್ಕೆ ||

* * *

ನಿನ್ನನ್ನಾರಾಧಿಸಿ ಪ್ರತಿ ನಿತ್ಯವೂ
ನಿನ್ನ ಕೃಪೆಯ ಪಾಲಿಸೆಂದು
ನೀನ್ನೆ ಪ್ರೀತಿಯ ಕರಗಳಿಂದ
ನೀನೆನ್ನ ನ್ನಾವವರಿಸಿರುವೆ || ನಿನ್ನನ್ನಾರಾಧಿಸಿ ||

ನಾನೆಂದಿಗೂ ಕದಲೆನು ದೇವಾ
ನಿನ್ನ ಪ್ರೀತಿಯಿರುವರೆಗೂ
ಆಧರಿಸಿ ಸ್ವೀಕರಿಸು ಪ್ರಭು
ನಿಶ್ಚಿಂತೆಯಿಂದಲೇ ನಾ ಜೀವಿಸುವೆ || ನಿನ್ನನ್ನಾರಾಧಿಸಿ ||

ಘನಮಾನ ಸ್ತುತಿ ಪಾತ್ರನೇ
ಕುರಿ ಮರಿಯಂತೆ ಸ್ವಾಮಿ
ಯೇಸು ನೀನೇ ರಕ್ಷಕನು
ಹೌದೇಸುವೇ ನನ್ನೇಸುವೆ  || ನಿನ್ನನ್ನಾರಾಧಿಸಿ ||

* * *

ನಿನ್ನ ಪ್ರೀತಿ ಹನಿಗಳು ಎಷ್ಟೋ ಮಧುರವು
ಹಿಮದಂತೆ ನನ್ನನ್ನು ಆವರಿಸಿದೆ
ನಾ ಹೋಗುವಾಗಲೂ ಮಲಗುವಾಗಲೂ
ನಿನ್ನ ಹಸ್ತ ನನ್ನನ್ನು ಹಿಡಿದಿರುವುದು  || ನಿನ್ನ ಪ್ರೀತಿ ||

ನಿನ್ನ ನಾಮವನ್ನೇ ಹೇಳಿಕೊಂಡು
ಜೀವಿತ ಕಾಲ ಕಳೆಯುವೆನು
ಕ್ಷಣ ಕ್ಷಣವೂ ನಿನ್ನ ದ್ಯಾನವೇ
ನನ್ನ ಆನಂದ ಬಾಷ್ಪವು    || ನಿನ್ನ ಪ್ರೀತಿ ||

ಹಾಸಿಗೆಯಲ್ಲಿ ಮಲಗಿರಲು
ನಿನ್ನನ್ನೇ ದ್ಯಾನಿಸಿ ನಿದ್ರಿಸುವೆ
ನನ್ನ ಬಾಳಿನೊಳು ನಿನ್ನ ಹೊರತು
ಬೇರಾರು ಬಾಳಲಸಾಧ್ಯವು          || ನಿನ್ನ ಪ್ರೀತಿ ||

* * *

ಸ್ತುತಿಗೆ ಸ್ತೋತ್ರಕ್ಕೆ ಪಾತ್ರನೇ
ನಿನ್ನನ್ನು ಸ್ತುತಿಸುವುದೇ ಅಂದ
ನನ್ನ ಮನಶ್ಶಾಂತಿ ಯೇಸುವಿನಿಂದ
ಹರ್ಷವೇ ಉಲ್ಲಾಸವೇ ನಿನ್ನಿಂದ     || ಸ್ತುತಿಗೆ ||

ದಿನವೂ ಪ್ರತಿ ವೇಳೆಯಲ್ಲಿಯೂ
ಸ್ತುತಿ ಸ್ತೋತ್ರ ಮಾಡಿ ಜೀವಿಸುವೆ
ನಿನ್ನ ಸೃಷ್ಠಿ ಅಂದಚಂದಕ್ಕೆ ಸ್ತೋತ್ರ
ಎಂತಾಗಾಳಿ ಬೆಳಕಾ ನೀಡಿದೆಮಗೆ
ಸ್ತೋತ್ರಪ್ಪ ತಂದೆಯೇ ಸ್ತೋತ್ರ      || ಸ್ತುತಿಗೆ ||

ನಮ್ಮಾರೋಗ್ಯ ಬಲಕ್ಕಾಗಿಯೂ
ನೀಡಿದಾತ ನೀನಲ್ಲವೇ
ಶ್ವಾಸಕೋಶವುಂಟು ಮಾಡಿದಾತನೇ
ದಿನನಿತ್ಯ ಆಹಾರಕ್ಕೆ ನೀಡಿದವನೇ
ಸ್ತೋತ್ರಪ್ಪ ತಂದೆಯೇ ಸ್ತೋತ್ರ      || ಸ್ತುತಿಗೆ ||

* * *

ನಿನ್ನ ಪ್ರೀತಿ ಹನಿಗಳು
ಎಷ್ಠೋ ಮಧುರವು
ನಿನ್ನ ಮಾತುಗಳಲ್ಲಿ
ನಂಬಿಕೆ ಉಂಟು ದೇವನೇ || ನಿನ್ನ ಪ್ರೀತಿ ||

ಸಾಗರ ಹಾಕಿಸಿ ನೀರು ಹೊಯ್ದಿ
ಗುಮ್ಮಟವನ್ನು ಉಂಟು ಮಾಡಿ
ಪರ್ವತವನ್ನು ಕಟ್ಟಿಸಿ
ತಾರೆಗಳನ್ನು ಸೃಷ್ಠಿಸಿದೆ    ನಿನ್ನ ಪ್ರೀತಿ

ಮನುಜ ಕುಲದವರೆಲ್ಲಾ
ಆಳಲಿಕ್ಕಾಗಿ ಜಲಚರ ಸೃಷ್ಠಿಸಿದೆ
ಪ್ರಾಣಿಗಳನು ಮನುಜರೆಲ್ಲಾ
ಆಳೆಯುವಂತೆ ಸೃಷ್ಠಿಸಿದ ನೀನೇ    ನಿನ್ನ ಪ್ರೀತಿ

ನಿನ್ನ ಪ್ರೀತಿ ಚಿಹ್ನೆ ಹೇಗೆಂದು ತಿಳಿಯಲಿ
ಹೌದೇಸುವೇ ನೀ ಮಾಡಿದ ಸೃಷ್ಟಿ
ಇದರಲ್ಲೇ ನಾನ್ನರಿತುಕೊಳ್ಳುವೇ
ಸ್ತೋತ್ರ ನಿನಗೆ ಓ ತಂದೆಯೇ       ನಿನ್ನ ಪ್ರೀತಿ

* * *

ಅಭಿಷೇಕಿಸು ನನ್ನನ್ನಭಿಷೇಕಿಸು
ನನ್ನ ತಂದೆಯೇ ನಿನ್ನ ತೈಲದಿಂದ
ಪಾಪದ ಜೀವಿತ ಸಾಕಾಯಿತು
ಈ ಲೋಕದಲ್ಲಿ ನೀನಲ್ಲದೇ || ಅಭಿಷೇಕಿಸು ||

ಸೈತಾನ ಶೋಧನೆಯಿಂದೆಮ್ಮನು
ತಪ್ಪಿಸಿ ನಡಿಸು ನಿನ್ನ ಮಾರ್ಗದೊಳ್
ನಿನ್ನ ವಾಕ್ಯದ ನೆರಳಲ್ಲಿಯೇ
ಅಭಿಷೇಕಿಸಿ ನನ್ನ ನಡಿಸಯ್ಯಾ       || ಅಭಿಷೇಕಿಸು ||

ವಾಕ್ಯವೆಂಬ ಇಬ್ಬಾಯಿಕತ್ತಿಯನ್ನು
ನಡುವಸ್ತ್ರವೆಂಬ ಸತ್ಯವನ್ನು
ಹಿಂಬಾಲಿಸಿ ನಡೆಯಲೆನ್ನು
ಆತ್ಮವನ್ನು ಅಭಿಷೇಕಿಸಿ ನಡಿಸಯ್ಯ  || ಅಭಿಷೇಕಿಸು ||

* * *

ಬಲಿಪೀಠದಲ್ಲಿ ಜನನೀ ಸರ್ವೇಶ
ಜಗಬ್ದಲ ರಕ್ಷಕ ದೇವಾ ಶರಣಂ
ದಿನಚರಿಯೆಂದೆ ನನ್ನ ಬಳಿ ನೀ
ಜೀವಿಸಿ ನನ್ನ ನಾಶೀರ್ವದಿಸ್ಯ        || ಬಲಿಪೀಠ ||

ನರರ ಮಾರ್ಗವನ್ನು ತಿಳಿದೈ ನೀನು
ನಿನ್ನ ಕೃಪೆಯನ್ನು ಪಾಲಿಸಯ್ಯಾ
ನಿತ್ಯ ಜೀವವನ್ನು ಪಾಲಿಸೆನ್ನೇಸು
ನಿರಂತರ ಜೀವಸೆನ್ನಾತ್ಮದೊಳ್ ನೀನೆ       || ಬಲಿಪೀಠ ||

ಕರುಣೆಯ ಮೂರ್ತಿ ನೀನೇ ಸದಾ
ಭೂಪರ ಲೋಕಗಳೊಡೆಯನು ನೀನೇ
ನಿರ್ಮಲನಾತನು ನೀನೇ ಯೇಸುವೇ
ನರರ ಪಾಪ ಪರಿಹರಿಸೈ ದೇವಾ    || ಬಲಿಪೀಠ ||