ಬಲವ ನೀಡು
ನನ್ನನ್ನಾಳ್ವು ದೇವನೇ
ಹಗಲು ಇರುಳು
ದಯಮಾಡು ಕರ್ತನೇ     || ಬಲವ ||

ಪರಿಶುದ್ಧಾತ್ಮನ
ಬಲವೊಂದೇ ಸಾಕೆನಗೆ
ಸುಖವ ನೀಡು
ನಿನ್ನಾಶೀರ್ವಾದದಿಂದ     || ಬಲವ ||

ಪರಲೋಕದಲ್ಲಿ
ನೀನಿರುವ ಧೈರ್ಯವೇ
ಸಾಕೆನಗೆ ಪ್ರಭುವೇ
ವಂದನೆ ಬಾ ಯೇಸುವೇ   || ಬಲವ ||

ದೀನರಾದೆಮ್ಮನ್ನು
ಕರುಣಿಸಿ ಕಾದಿದೈ
ದುರುಳರ ಮಾರ್ಗವ
ಸರಿಪಡಿಸೆನ್ನಾತ್ಮನೇ       || ಬಲವ ||

* * *

ಮಂಗಳದ ಕಾರ್ಯವು
ನನ್ನೇಸು ಕರ್ತನವು
ಎಂದೆಂದೂ ಶುಭವು
ತುಂಬಿಹುದು ಎಂದಿಗೂ    || ಮಂಗಳದ ||

ಆತನೇ ಕಾರ್ಯಕರ್ತನು
ಸಹಿಸುವ ಬಿಂದುವು
ಸಕಲ ಕಾರ್ಯವನು
ನಡಿಸುವಾತನವನೇ       || ಮಂಗಳದ ||

ಒಳ್ಳೆಯ ಕಾರ್ಯಕ್ಕೆ
ಆತನೇ ಕಾರಣನು
ಸಲ್ಲದ ಕಾರ್ಯಕ್ಕೆ
ಆತನು ಕಾರಣನಲ್ಲ        || ಮಂಗಳದ ||

* * *

ದೇವರು ಒಳ್ಳೆಯವನು
ಆತನು ಮಾಡುವುದೆಲ್ಲವು
ಒಳ್ಳೆಯದೇ ಒಳ್ಳೇಯದಕ್ಕೆ
ನಂಬಿರಿ ವಿಶ್ವಾಸಿಸಿರಿ       || ದೇವರು ||

ನಂಬಿದವರು ಧನ್ಯರೇ
ನಂಬದಿರುವವರು
ಶಾಪಗ್ರಸ್ತರೇ ಸರಿ
ಆತನ ನಂಬಿ ಹಿಂಬಾಲಿಸಿ  || ದೇವರು ||

ಸಕಲ ಒಳ್ಳೆಯ ಕಾರ್ಯವನ್ನೇ
ನಡೆಯುವುದಾತನ ಚಿತ್ತವೇ
ನಂಬಿರಿ ಇದ ನಂಬಿರಿ
ಮನುಜರೇ ನಂಬಿ ಬನ್ನಿ    || ದೇವರು ||

* * *

ನಾ ನಿನ್ನ ಬೇಡಲು
ನೀನೆನ್ನ ಬೇಡ್ಯವು
ನನ್ನಿ ಗುರಾಣಿಯೂ
ನೀನೇ ನನ್ನ ಖಡ್ಗವು        || ನಾ ನಿನ್ನ ||

ಹೌದೇಸುವೇ ನಿತ್ಯ
ನಿನ್ನೀ ವಾಕ್ಯವು ಸತ್ಯ
ನಾ ನಿನ್ನ ಬಿಡಲಾರೆನು
ನೀನೆನ್ನ ಕಾವಲು || ನಾ ನಿನ್ನ ||

ಕಡಲೆಂಬ ಆಳದಲ್ಲಿ
ಜೀವಿಸ ಪಾಪಿಯ
ಕರುಣಿಸು ಪಾಪಿಯ
ರಕ್ಷಣೆ ನೀಡೆಯಾ || ನಾ ನಿನ್ನ ||

* * *

ಕಾಯೋ ಪರಮೇಶನೇ
ವಂದಪುತ್ರ ನಾನೇಸುವೇ
ನಿನ್ನವರ ದಾನವಾಗಿ
ನೀಡು ಪ್ರಭು ಪ್ರಭುವೇ     || ಕಾಯೋ ||

ಧರಣಿಯ ಧರೆಯೊಳ್
ನಿನ್ನೀ ಚಿತ್ತದೊಳ್
ನಡೆಯುವ ಭಕ್ತರೊಳ್
ನೆಲೆಯಾಗಿ ಜೀವಿಸು       || ಕಾಯೋ ||

ನಿನ್ನಗಿಷ್ಠವಾದ
ಆತ್ಮವನ್ನು ಅರ್ಪಿಸುತ್ತಾ
ನಿನ್ನನೇ ಆರಿತುಕೊಂಡು
ಬೇಡುತ್ತಿರುವೆವು  || ಕಾಯೋ ||

ಸೈತಾನ ನೆಲೆಯನ್ನು
ನಾಶಗೊಳಿಸು ಪ್ರಭು
ನಿನ್ನ ನೆಲೆ ನನ್ನಾತ್ಮವೇ
ಮಿಗಲಾದ ಬೇರಿಲ್ಲವೇ     || ಕಾಯೋ ||

* * *

ಜೀವವಾಕ್ಯದ
ಗಾನವನ್ನು
ಇಂಪಾಗಿ ಹಾಡುತ್ತಾ
ನಿನ್ನನ್ನು ಸ್ತುತಿಸುವೆ        || ಜೀವವಾಕ್ಯದ ||

ಹಗಲಿರುಳು
ನಿನ್ನ ಸತ್ಯವು
ನೆಲೆಯಲ್ಲವೇ
ಹಲ್ಲೇಲೂಯಾ    || ಜೀವವಾಕ್ಯದ ||

ದೀನ ಬಂದುವೇ
ಕರುಣಾಸಾಗರನೇ
ಪರಮ ಪ್ರೀಯನೇ
ದಿವ್ಯ ಮಿತ್ರನೇ    || ಜೀವವಾಕ್ಯದ ||

ಸುಂದರಮೂರ್ತಿಯೇ
ಸತ್ಯಮೂರ್ತಿಯೇ
ಬಾನಮ್ಮಲ್ಲಿಯೇ
ನೆಲೆಯಾಗಿಯೇ  || ಜೀವವಾಕ್ಯದ ||

* * *

ಕಲ್ಲಾರಿ ಶಿಲುಬೆಯನು
ದೃಷ್ಠಿಸ ಯಾರಿಹರು
ಅವರೇ ಕ್ರಿಸ್ತನರಿತರು
ಹೌದು ನನ್ನೇಸುವನ್ನು      || ಕಲ್ಲಾರಿ ||

ಶಿಲುಬೆಯ ಹೊತ್ತುಕೊಂಡು
ಸಾಗುತ್ತ ಮನುಜನೇ ಬಾ
ಕುಣಿಯುತ್ತ ಹರ್ಷದಿಂದ
ಶಿಲುಬೆಯ ಹೊತ್ತು ಬಾ    || ಕಲ್ಲಾರಿ ||

ಆತನ ಶಿಲುಬೆ ಹಗುರ
ಎಂಥಾ ಮಹಿಮೆಯುಂಟು
ಹೌರವಾದದ್ದು ಹಗುರವಾದದದು
ಆತನ ಶಿಲುಬೆಯ ಮಹಿಮೆ || ಕಲ್ಲಾರಿ ||

ಹೌರವಾದ ಶಿಲುಬೆಯ
ಹೊತ್ತರೇ ಸಂತೋಷವು
ಈ ಲೋಕದ ಸಂಪತ
ಬರೀ ಹುಟ್ಟಾಟವೇ         || ಕಲ್ಲಾರಿ ||

* * *

ಶುದ್ಧ ಯೇಸುವನ್ನು ಬೇಡಿದೆ
ಪರಿಶೋಧಿಸುತಾಡವಿಲ್ಲದೇ
ಭಕ್ತರ ಮಾರ್ಗವ ಭೋದಿಸಿ
ನಡಿಸು ಪರಿಶುದ್ಧ ಮಾರ್ಗವನ್ನು     || ಶುದ್ಧ ಯೇಸು ||

ಆದಿಕಾಲದಿಂದಲೂ
ಇಂದಿನ ವರೆವಿಗೂ
ನೀನೆನ್ನ ದೃಷ್ಠಿಸಿದ್ದಿ
ಹೌದು ಪ್ರಭುವೇ  || ಶುದ್ಧ ಯೇಸು ||

ಮೆಯಾದದ್ದೊಂದಿಲ್ಲ
ನಿರ್ಭಯದಿಂದೆನ್ನಾ
ಜೀವಿಸ ನಿನ್ನ ಕೃಪೆ
ಸಾಕು ಸಾಕೆನಗೆ  || ಶುದ್ಧ ಯೇಸು ||

ಶುದ್ಧರಾದ ನಿನ್ನಮಾರ್ಗವ
ಹಿಡಿದ ಸಜ್ಜನರನ್ನು
ಕಾಪಾಡಿಸಡಿಸಯ್ಯಾ
ಸತ್ಯವಾದ ಮಿತ್ರನೇ       || ಶುದ್ಧ ಯೇಸು ||

* * *

ಆಕಾಶದಲ್ಲಿ ಹಾರವ ಹಕ್ಕಿಗೂ
ಗೂಡುಂಟು ಆದರೆ ನನ್ನೇಸು
ಕ್ರಿಸ್ತನಿಗೆ ತಲೆ ಇಡಲು
ಸ್ಥಳವಿಲ್ಲ ಎಂದೇಸು ಹೇಳಿದ         || ಆಕಾಶ ||

ಕೈಯಿಂದ ಕಟ್ಟುಲ್ಪಡದ
ದೇಗುದಲ್ಲಿಯೇ
ಪ್ರದಾನಯಾಜಕನಿರುವನು
ನರಸ್ವಭಾವ ಆತನೇ       || ಆಕಾಶ ||

ಉಪದ್ರಶ್ರಮೆ ನಮಗುಂಟಾದರೂ
ಮೇಲಿರುವ ಸ್ನೇಹಿತ ಬಲ್ಲನು
ಕೃಪಾಸನದ ಬಳಿಸೇರೋಣ
ಯೇಹೋವ ಪ್ರಾರ್ಥನೆ ಕೇಳಿದು     || ಆಕಾಶ ||

* * *

ಇಮ್ಮಾನುವೇಲ ಪಟ್ಟಾಕಷ್ಠವು
ಎಷ್ಠೋ ಓ ಸಭೆಯೇ
ನಿರಂತ್ರವಾಗಾಭಟಿಸು
ನೀ ಬಾಳು ಯೇಸುವೇ     || ಇಮ್ಮಾನುವೇಲ್ ||

ಮಹತ್ತಿನಲ್ಲಿ ಯೇಸುವು
ಪ್ರತ್ಯಕ್ಷನಾಗುವ
ಆಗ ಪ್ರಧಾನದೂತನು
ತುತೂರಿ ಊದುವ         || ಇಮ್ಮಾನುವೇಲ್ ||

ಸತ್ತವರೆಲ್ಲಾ ಕ್ಷಣವೇ
ಎಬ್ಬಿಸಲ್ಪಡರು
ಜೀವಿತರೆಲ್ಲಾ ಆಗಲೇ
ರೂಪಾಂತ್ರರಾಗ್ವರು        || ಇಮ್ಮಾನುವೇಲ್ ||

* * *

ಬಾಳೇಸುವೇ ರಾಜಾಧಿರಾಜನೇ
ರಕ್ಷಕನೇ ನೀತಿಯ ಪ್ರಭುವೇ
ಪ್ರೀತಿಯ ಗುರುವೇ ಪಾಪಿಯ ಮಿತ್ರನೇ
ನೀನೇಸುವೇ     || ಬಾಳೇಸುವೇ ||

ಉನ್ನತಾನನ ಬಿಟ್ಟು ಬಿಟ್ಟಿಳಿದ
ದಿವ್ಯಪ್ತನೇ ಜಗತ್ತಿಗೋಸ್ಕಾರ
ರಕ್ತವ ಚೆಲ್ಲಿದ ಪೂರ್ಣವಿಮೋಚಕ
ಬಾಳೇಸುವೇ     || ಬಾಳೇಸುವೇ ||

ಭೂಲೋಕದ ಮಹತ್ವವು
ಗತಿಸಿ ಹೋಗುವಂಥದ್ದು
ಕ್ರಿಸ್ತನರಾಜ್ಯ ಎಂದೆಂದಿಗೂ
ನಾಶವಾಗದು    || ಬಾಳೇಸುವೇ ||

* * *

ಯೇಸುವಿನ ರಾಜ್ಯ ಮೇರುದದ್ದು
ಯುದ್ಧಗಳ ಶಬ್ದ ಅದರ ಅಲ್ಲವು
ಖಡ್ಗ ಒಲ್ಲೆ ಬಾಣ ಇನ್ನು ಸಿಕ್ಕವು
ಯುದ್ದಾದಿಂದ ಇನ್ನು ಬೇಕಿಲ್ಲವು      || ಯೇಸುವಿನ ||

ತೋಳ ಕುರಿಯೊಂದಿಗೆ ಸ್ನೇಹದಿಂ ಮಲಗಿ
ಮೇಕೆಯ ಹುಲಿಯ ಜತೆ ನಡೆದು
ಕರು ಹೋರಿ ಸಿಂಹವು ಕೂಡಿ ವಾಸಿಸುವವು
ಸರ್ಪದ್ಹತ್ರ ಬಾಲನು ಆಡಲು ಅಂಜನು        || ಯೇಸುವಿನ ||

ಸರ್ವರಲ್ಲಿ ಪ್ರೀತಿಯು ತುಂಬಾವಾನಿಸ್ವದು
ಪತಿಗೃಹದಲ್ಲಿ ಸಮಾಧಾನ ವಿರ್ವದು
ಪರಸ್ಪರ ಸ್ನೇಹ ಎಲ್ಲಾ ಕಡೆಯಲ್ಲೂ
ಸರ್ವಜನರೊಳಗೂ ಹುಟ್ಟಿ ಹರಿಯುವುದು     || ಯೇಸುವಿನ ||

* * *

ಘೊರತಾಪ ನಿನ್ನೊಳುದಿಸಿ
ಭೂರಿಚಿಂತೆ ತುಂಬ ಹೆಚ್ಚಿ
ಬೇರನೇಕ ಕಷ್ಟ ಬಂದರೂ
ದಾರಿ ತೋರಿಸುವನೇಸು  || ಘೊರತಾಪ ||

ಮಿತ್ರ ಜನರು ಕೆಡಿಸಿದರೂ
ಹತ್ರವಿರುವವೆಂದು ನಂಬು
ಶತ್ರು ಜನರು ಕೆಡಿಸಿದಾಗೂ
ಪಿತೃದೇವರಿರುವನೆಂದು ನಂಬು     || ಘೊರತಾಪ ||

ದಿಕ್ಕು ದೆಸೆಯ ಕಾಣದಂತೆ
ದುಃಖ ಮನವ ತುಂಬಿರಲು
ಧಿಕ್ಕರಿಸದೆ ನೀಡಿ ಕೃಪೆಯ
ಪಕ್ಕದಲ್ಲಿ ಇದ್ದು ಕಾಯ್ವ     || ಘೊರತಾಪ ||

ಜೀವ ಬಿಡುವ ಕಾಲದಲ್ಲಿ
ದೇವ ಭಕ್ತನಾಗಿ ಸತ್ತು
ಆವಭಯವು ಹೋಗಿ
ನಿತ್ಯ ಜೀವ ಪಡೆದು ಬಾಳ್ವೆನೆಂದು   || ಘೊರತಾಪ ||

* * *

ತಂದೆ ಮಗ ಪರಿಶುದ್ಧಾತ್ಮನೇ
ಆದಿಯಲ್ಲಿದ್ದಂತೆಯೇ
ಈಗಲೂ ಯಾವಾಗಲೂ
ಮಹಿಮೆಯಾಗಲೀ          || ತಂದೆ ||

ಯೇಸುರಕ್ಷಕನು ನಿನ್ನೆ
ಕಾಪಾಡಿದಂತೆಯೇ ಸದಾ
ಸುಖದಿಂದಲೂ ಜೀವಿಸಲು
ಕಾರಣನು ಆತನೇ         || ತಂದೆ ||

ಪರಿಶುದ್ಧನು ಪರಿಶುದ್ಧನು
ಆತನು ಪರಿಶುದ್ಧಾ ಆತ್ಮನು
ಸದಾಕಾಲವೂ ಕಾಯುವನು
ಯುಗದ ಸಮಾಪ್ತಿಯವರೆವಿಗ       || ತಂದೆ ||

* * *

ಜಗನಿರ್ಮಾನಕರ್ತನೇ
ಆಗಿರುವ ದೇವರಾತ್ಮಾನೀ
ಕಾದಿರುವ ಭಕ್ತರೊಳಗೆ
ಆನಂದ ಸೃಷ್ಠಿಸುರಿಸು      || ಜಗನಿರ್ಮಾಣ ||

ತಂದೆ ವಾಗ್ದಾನ ಮಾಡಿದ
ಸಹಾಯಕ ತೇಜೋನಿಧಿ
ಶುಚಿಯಗೈವ ಬೆಂಕಿಯ
ಸ್ನಾನದ ಕರ್ತೃವಾಗಿದ್ದೀ    || ಜಗನಿರ್ಮಾಣ ||

ಸರ್ವಾದಿಕಾರಿ ಪಿತನೇ
ಶಾಶ್ವತಮಾನ ಹೊಂದಲಿ
ಸ್ವಪ್ರಾಣದಾತ ಪುತ್ರನೇ
ನಿತ್ಯವು ಸ್ತುತಿಯ್ಯದಲಿ      || ಜಗನಿರ್ಮಾಣ ||

* * *

ಬಾ ನನ್ನಲ್ಲಿ ದೇವರಾತ್ಮ
ನಿನ್ನ ಶಾಂತಿ ತೋರಿಸು
ದಿವ್ಯಜ್ಞಾನದ ಪ್ರಕಾಶ
ಈಗ ದಯಪಾಲಿಸು        || ಬಾ ನನ್ನಲ್ಲಿ ||

ನಮ್ಮ ಕೆಟ್ಟಾ ಗುಣವನ್ನು
ದಯಮಾಡಿ ತೆಗೆದು
ಅಪವಿತ್ರ ವಾದದ್ದನ್ನು
ಪೂರ್ಣವಾಗಿ ಶುಚಿಸು      || ಬಾ ನನ್ನಲ್ಲಿ ||

ದೇವಪ್ರೀತಿ ಹೆಚ್ಚೆಚ್ಚಾಗಿ
ಎದೆಯಲ್ಲಿ ಕಾಂಬಿಸು
ದೇವಸೇವೆ ಚುರುಕಾಗಿ
ಮಾಡಲು ಬಲಪಡಿಸು      || ಬಾ ನನ್ನಲ್ಲಿ ||

* * *

ಪರಿಶುದ್ಧ ಆತ್ಮನೇ
ಯಾತ್ರೆಗಾರನೊಂದಿಗೆ
ಇದ್ದು ಹಸ್ತದಿಂದಲೇ
ನಡಿಸೆಂದೂ ಮೋಕ್ಷಕ್ಕೆ     || ಪರಿಶುದ್ಧ ||

ಕಾಡಿನಲ್ಲಿ ಪಯಣ
ಮಾಡುವಾಗ ಧೈರ್ಯವ
ಕೊಡುತ್ತೇನೆಂದೇಸುವು
ಅಂದ ಮಾತು ಕೇಳಿಸು    || ಪರಿಶುದ್ಧ ||

ಸತ್ಯಮಿತ್ರ ಸರ್ವತ್ರ
ಕುಂದು ಕಲೆ ಸರ್ವವ
ಪರಿಹಾರ ಮಾಡಿಸು
ಭಯಶಂಕೆ ಓಡಿಸು         || ಪರಿಶುದ್ಧ ||

ನಾನು ಕತ್ತಲಲ್ಲಿಯೂ
ತಡವ್ಯಾಡಿ ನೋಡಲು
ಇರುತ್ತೇನೆಂದೇಸುವು
ಅಂದ ಮಾತು ಕೇಳಿಸು    || ಪರಿಶುದ್ಧ ||

* * *

ಕರ್ತ ದಿವ್ಯದೃಷ್ಠಿಯನ್ನು
ಮೇಲಿನಿಂದ ಸುರಿಸು
ಒಣನೆಲದಂಥ ನನ್ನ
ಹೃದಯವನ್ನು ನೆನೆಸು     || ಕರ್ತ ||

ನಿನ್ನ ಆತ್ಮವೇ ದೇವರೇ
ಇಷ್ಠವಾದ ಮಳೆಯೇ
ಆತ್ಮದೃಷ್ಟಿ ಬಿದ್ದಮನ
ನಿಂಗೆ ಪುಷ್ಠ ನೀವವಾನ    || ಕರ್ತ ||

ದಿವ್ಯಸದ್ಗುಣಗಳಿಂದ
ನನ್ನನ್ನಾಲಂಕರಿಸಿ
ಆತ್ಮದಲ್ಲಿ ಸತ್ಯದಿಂದ
ಜೀವಿಸುವಂತೆ ಪಾಲಿಸು   || ಕರ್ತ ||