ಭೂ ಪರವನ್ನು ಸೃಷ್ಠಿಸಿ
ನನ್ನನ್ನು ನಿನ್ನ ಸೇವೆಗೆ
ಕರೆದ ನನ್ನ ಯೇಸುವೇ
ಸಾಷ್ಠಾಂಗ ವೆರಗಿ ವಂದಿಪೆ

ಕರುಣೆಯಿಂದ ಕರವನ್ನು
ಚಾಚಿದ ನನ್ನ ಯೇಸುವೇ
ನಿನ್ನ ಕೃಪೆಯಿಂ ಜೀವಿಸಲು
ದಯೆಯ ತೋರು ಯೇಸುವೇ

ನಿರಂತ್ರ ಬಾಳು ಕರ್ತನೇ
ನಾ ನಿನ್ನ ಸೇವೆಗಾಗಿಯೇ
ಬಾಳುವೆನೆಂದು ನಿರ್ಧರಿಸಿ
ಜೀವಿಸ ದಾರಿ ತೋರಿಸು

* * *

ಅದ್ಭುತ ಸ್ವರೂಪ ದೇವನೇ
ನಿನ್ನ ಕಾರ್ಯ ವೆಲ್ಲಿವೂ
ಅಧ್ಯಾತದಿಂದ ನಡೆದಿದ್ದೀ
ಆಶ್ಚರ್ಯವೇ ಆಶ್ಚರ್ಯವೇ

ಆಲೋಚನಾ ಪರನಾಗಿದ್ದೀ
ನನ್ನನ್ನು ಸೃಷ್ಠಿಸಿದ ನೀ
ಆಲೋಚನೇಯಿಂದಲೇ
ನೀನೆನ್ನನ್ನು ಆಧರಿಸಿದ್ದೀ

ನಿನ್ನನ್ನು ಹೋಲುವಂತೆಯೇ
ನರರನ್ನೆಲ್ಲ ಸೃಷ್ಠಿಸಿದ್ಧೀ
ನಿತ್ಯನಾದ ನನ್ನ ತಂದೆಯಲ್ಲಿ
ನಿತ್ಯವೂ ನನ್ನಲ್ಲಿ ಜೀವಿಸು

ಸಮಾಧಾನದ ಪ್ರಭುವೇ
ನಿತ್ಯವೂ ಸಮಾಧಾನದಿಂ
ಜೀವಿಸಲು, ಮಾರ್ಗತೋರಿಸು
ಪರಾಕ್ರಮಶಾಲಿಯಾದ ಯೇಸುವೇ

* * *

ಆದಾಮ ಹವ್ವಳ ತಂದೆಯೇ
ಭೂಚರಗಳ ಸೃಷ್ಠಿಕರ್ತನೇ
ಆದಿಯಲ್ಲಿದ್ದ ಹಾಗೆಯೇ
ಈಗಲೂ ನಡೆಯ ಪ್ರಾರ್ಥಿಪೆ

ಅಬ್ರಾಮನ ದೇವರೇ
ಯಾಕೋಬನ ದೇವರೇ
ಇಸಾಕನ ದೇವರೇ
ಅವನನ್ನು ಕಾಯ್ದಂತೆಯೇ
ನನ್ನನ್ನು ಕಾಯವೆಯಾ

ದಾನಿಯೇಲನ ದೇವರೇ
ದಾವೀದನ ದೇವರೇ
ಮೋಶೆಯ ದೇವರೇ
ಅದರ ಜಕೆ ಯಿದ್ದಾತನೇ
ನನ್ನೊಟ್ಟಿಗೆ ಜೀವಿಸು

* * *

ನನ್ನೇಸುವೇ ನನ್ನ ರಾಜನೇ
ನನ್ನ ಬಲಹೀನತೆ ಬಲ್ಲಾತನೇ
ನಿನ್ನ ವಾಕ್ಯದ ಬಲದಿಂದಿಲೇ
ಜೀವಿಸ ಕೃಪೆ ತೋರಯ್ಯ

ನೀನಿದ್ದರೆನ್ನ ಜೀವಿತವು
ಸುಖದಿಂದ ಸಾಗುವುದು
ಲೌಕೀಕ ಜೀವಿತದಿಂದ
ಅತ್ರುಪ್ತಿ ಜೀವಿತವು

ಸಂಕೋಚದೇ ತಡಮಾಡದೇ
ಬಂದೆನ್ನ ಕಾಪಾಡಯ್ಯಾ
ನೀನೆನ್ನ ಸರ್ವಸ್ವ
ನಿನ್ನಿಂದಲೇ ಜೀವಿಸುವೆ

* * *

ದಿನವೊ ನಾನಿನ್ನ ಹಾಡಿ ಸ್ತುತಿಸಿದೆ
ಸಹಾಯಕನಾಗಿ ನನ್ನೇಕ ದೇವರೇ
ಮನದೊಳನೇಕ ದುರ್ಬಲದಿಂದ ಸಿಲುಕಿ
ನರಳಿ ಜೀವಿತದೊಳು ಸಾಕು ಸಾಕಯ್ಯ       || ದಿನವೂ ||

ಪರಲೋಕ ದೇವನೇ ಆಕಾಶ ದೀಪವೇ
ಆದಿಯಿಂದ ನೀನು ಬೆಳಕಾಗಿರುವೆ
ಮತ್ತೆ ನನ್ನ ಪಾಪ ಹೊರಲು ನೀ ಜನಿಸಿದೆ
ನಿನ್ನ ನಂಬಿದರೆನ್ನ ದಾರಿ ಸುಗಮವೇ         || ದಿನವೂ ||

ದೀನನಾಗಿ ಬಂದೆ ದೀನನಾಗಿ ಜೀವಿಸಿ
ನಿನ್ನನ್ನೇ ನೀನು ತಗ್ಗಿಸಿ ಬಾಳಿದೆ
ನಿನ್ನನ್ನರಿಯದೇ ಈ ಪಾಪಿಗಳೆಲ್ಲಾ
ದೂಷಿಸಿ ನಿಂದಿಸಿ ನಿನ್ನನ್ನರಿಯದೇ   || ದಿನವೂ ||

* * *

ದಿಕ್ಕಿಲ್ಲದ ಸಮಯ ಪಕ್ಕದಲ್ಲಿ ನೀನಿದ್ದೀ
ಆರೂವ ಸಮಯದಲ್ಲೂ ಕಾಯುವ ನೀನಲ್ಲವೇ || ದಿಕ್ಕಿಲ್ಲದ ||
ಚಿಂತೆ ನನ್ನ ನಾವರಿಸಿರಲು
ಅಭಯವ ನೀನ ನೀಡುವೆ
ನಿಶ್ಚಿಂತೆಯಿಂ ಜೀವಿಸುವೆ
ನನ್ನೇಸು ಜತೆಯಿರಲು     || ದಿಕ್ಕಿಲ್ಲದ ||

ನಿನ್ನೆಯಿರುವಂತೆಯೂ
ಇಂದಿಗೂ ಜತೆ ಇರುವೆ
ಸಂಜೆಯಲ್ಲೂ ಹಗಲಲ್ಲಿಯೂ
ನಿನನ್ನ ಜತೆಯಿರುವೆ       || ದಿಕ್ಕಿಲ್ಲದ ||

* * *

ಅನುದಿನವೂ ನಿನ್ನನ್ನು ಪ್ರಾರ್ಥಿಸಿದೆ
ನಿನ್ನನುಗ್ರಹ ಕೊಡಬೇಕಯ್ಯಾ
ನನ್ನಿಂದೆಲ್ಲಾ ಸಾಧ್ಯವಿಲ್ಲ
ನಿನ್ನಿಂದೆಲ್ಲಾವೂ ಸಾಧ್ಯ

ನನ್ನ ಜ್ಞಾನ ಶಕ್ತಿ ಎಲ್ಲ ಒಂದಿಲ್ಲದ ಕಸದಂತೆಯೇ
ನನ್ನ ನೀತಿ ನ್ಯಾಯಾವೆಲ್ಲ ಕೊಳಕಾದದೃಷ್ಠಿ
ಸ್ವೀಕರಿಸೆನ್ನ ನನ್ನೇಸುವೆ   || ಅನುದಿನವು ||

ನೀ ನೆನ್ನ ಸ್ವೀಕರಿಸಿದರೆ ರಕ್ಷಿಸಲ್ಪಡುವೆ
ನಿನ್ನಯ ರಾಜ್ಯಕ್ಕೆ ತವಕಪಡವ
ಸ್ವೀಕರಿಸೆನ್ನ ನನ್ನೇಸುವೆ   || ಅನುದಿನವು ||

* * *

ಅದ್ಭುತರಾಜನು ಯೇಸುವ ನಂಬಿದರೆ
ಅದ್ಭುತದಿಂದಿ ಕಾರ್ಯಗಳೆಲ್ಲ ನಡೆಯುವುದು

ಅದ್ಭುತದಿಂದ ಪ್ರಸಂಗವಮಾಡಿ
ಆತ್ಮವರಕ್ಷಿಸಿ ಬಲಪಡಿಸಿ
ಜೀವಿಸುವ ಮನುಜ ಜೀವಿತದಿಂದ
ಕರುಣಾಳು ಯೇಸುವ ಹಿಂಬಾಲಿಸಿ || ಅದ್ಭುತ ||

ಪರ್ವತ ಪ್ರಸಂಗದೊಳ್
ಆತನ ವಾಕ್ಯವು ಸಾರುತ
ಜನರಿಗೆ ಉಪದೇಶಿಸಿ
ಬಡವರು ದೀನರು ಹಿಂಬಾಲಿಸಿ      || ಅದ್ಭುತ ||

* * *

ಮೇಘದೂತರೊಡನೆ
ಯೇಸು ಬರುವ ದಿನವೆಂದೋ ಇಂದೋ
ಸಂದಿಸ ಭಾಗ್ಯವು ಎಂದೋ ?
ಹಲ್ಲೆಲೂಯ ಹಲ್ಲೆಲೂಯ

ನಿದ್ರೆಯಿಂದೆಚ್ಚರ ಗೊಂಡರೂ ನಾ
ಕರ್ತನಪಾದವ ಕಾಣಲೆಂದೇ
ನಿದ್ರೆಯ ಬಿಟ್ಟಾ ಆತನನ್ನು
ಹಲ್ಲೆಲೂಯ ಎಂದು ಸ್ತುತಿಸುವೆನು   || ಮೇಘದೂತ ||

ವಿಶ್ವಾಸ ನಂಬಿಕೆ ಕವಚವನ್ನು
ಧರಿಸಿಕೊಂಡೆ ಜೀವಿಸುವೆ
ಅರ್ಪಿಸಿದೇ ನನ್ನ ಆತ್ಮವನ್ನು
ಹಲ್ಲೆಲೂಯ ಎಂದು ಸ್ತುತಿಸುವೆನು   || ಮೇಘದೂತ ||

* * *

ಮಾಣಿಕ್ಯ ತೊಟ್ಟಿಲ್ ಇಲ್ಲ ನಿನಗೆಂದು
ಹಸುವಿನ ಕೊಟ್ಟಿಗೆಯಲ್ಲಿ ನಿನ್ನಮನೆ
ಕಾಣಿಕೆಯಾಗಿ ನಾ ತಂದೆ ಹೃದಯ
ಸ್ವೀಕರಿಸೋ ನನ್ನ ಬಾಲಕ ಎಂದು  || ಮಾಣಿಕ್ಯ ತೊಟ್ಟಿಲ್ ||

ಮೇಲ್ಲೋಕ ದೂತರು ಹಾಡಿದರು
ಪರಲೋಕ ದೂತ ಸಿಂಹಾಸನದಿಂ
ಪಾಪಿ ನಾ ನಿನ್ನ ಹಾಡಿ ಹರಸಿ
ಬಾಯಿಂದ ಹರಸುವೆ ಆರಿರಾರೋ
ಆರಿರೋ…. ಆರಿರೋ….. || ಮಾಣಿಕ್ಯ ತೊಟ್ಟಿಲ್ ||

ಕುರುಬರು ಅರಸರು ನೋಡಲೆಂದೇ
ಶಾಸ್ತ್ರಿಗಳು ನಿನ್ನ ನೋಡಲೆಂದೇ
ಧಾವಿಸಿ ಬಂದು ಬೆತ್ಲೆಹೇಮಿಗೆ
ಬಾಯಿಂದ ಹರಸಲು ಆರಿರಾರೋ
ಆರಿರೋ…. ಆರಿರೋ…..  || ಮಾಣಿಕ್ಯ ತೊಟ್ಟಿಲ್ ||

* * *

ಬರುವಾ ಕ್ರಿಸ್ತ
ನನ್ನಾತ್ಮ ರಕ್ಷಿಸ
ಪರದೊಳ್ ಬಿಟ್ಟಾ
ಭೂಲ್ಲೋಕ ಸೇರಿದ        || ಬರುವಾ ಕ್ರಿಸ್ತ ||

ಅಂದು ಇಂದು
ಕಾಯುವವನವನೇ
ನಾಳೆ ಯುಗಾಂತ್ಯ
ಜೀವಿಸುವವ ನವನೇ       || ಬರುವಾ ಕ್ರಿಸ್ತ ||

ಪಾಪ ಧರ್ಮ
ಕರ್ಮವೆಲ್ಲವನ್ನೂ
ಶಾಪ ದಿಂದೆನ್ನ
ನೀಗಿಸಿ ದವನವನೇ        || ಬರುವಾ ಕ್ರಿಸ್ತ ||

* * *

ಯೆಹೋವಕಾಶವೂ ಹೊಳೆಯುವ ತಾರೆಗಳೂ
ಮಹಿಮಾ ಪ್ರಭಾವವು ಪ್ರಚುರಪಡಿಸುವುದು
ವರ್ಣಿಸುತ್ತಿರುವುದು; ನಿನ್ನಾ ಕೈ ಕೆಲಸವ
ಮಾಡ್ದೆನಾ ಸ್ತೋತ್ರವ      || ಯೆ ಹೋವ ||

ಉನ್ನತಾಕಾಶದೊಳು ಸಿಂಹಾಸನದೊಳು
ಆಸೀನನಾಗಿದ್ದೀ ರಾಜ್ಯದ ಸ್ಥಾಪಿಸಿದ್ದೀ
ಲೋಕದಿಳುತ್ತಿದ್ದೀ ಜ್ಯೋತಿಯ ಬೀರಿದ್ದೀ
ವಂದನೆ ಮಾಡ್ವೆವಾ        || ಯೆ ಹೋವ ||

ಶುದ್ಧಾ ಶುದ್ಧಾನೆಂದು ಪವಿತ್ರ ಲೋಕದೊಳು
ಸುತ್ತು ಮುತ್ತಲಿರುವ ಸೆರಾಫಿಯ
ಕೂಗಿದರು ಘನಮನ ಸಲ್ಲಿಸುತ
ಸಾಷ್ಠಾಂಗ ಬೀಳ್ವರು ಮಾಡ್ವರುಸ್ತೋತ್ರವ    || ಯೆ ಹೋವ ||

ಯೆ ಹೋವ ಈ ಲೋಕದ ಪ್ರೇರಿಸಿ ನಿನ್ನಯ
ಏಕೈಕ ಪತ್ರವನ್ನು ಕಳುಹಿದ ಮುಕ್ತಿಗಾಗಿ
ಪಾಪಿಯ ಕ್ಷಮಿಸದೈ ರಕ್ಷಣೆಯಪಾಲಿಸಿದ್ಯ
ಜೀವ ವಮಗ್ರಹಿಸಿದ್ದಾ || ಯೆ ಹೋವ ||

* * *

ದಯೆತೋರು ಸ್ವಾಮಿ
ನಾನಿನ್ನ ಸೇರಲು ಸ್ವೀಕರಿಸ
ಮಾಡುವುದೆಲ್ಲ ನಿನ್ನ ಚಿತ್ತವೇ
ನಿನಡಿಸುವುದೆಲ್ಲಿ ನಿನ್ನ ಕೃಪೆಯೇ

ಧಾರಿಣಿಯೊಳಿಲ ಭಯದಿಂದ ಜೀವಿಸಲು
ಸೈತಾನ ಮಾರ್ಗದಿ ರಕ್ಷಿಸ ನೀ ಬಂದಿಹೆ
ನಿನ್ನ ಹಸ್ತವ ಚಾಚಿ ನನ್ನೆಡೆಗೆ
ನನ್ನ ಮಾರ್ಗ ಸರಿಪಡಿಸ ಬಂದೆ ನೀ || ದಯೆತೋರು ||

ಹಾ ಭಾಗ್ಯವೇ ನಿನ್ನಹಸ್ತ ನನ್ನಿಡಿದಿರಲು
ಹಾ ಯೇಸುವೇ ನಿನ್ನ ನಾಮ ಒಂದೇ ಸಾಕು
ನಿನ್ನ ನಾಮದಲ್ಲಿ ಮಹಿಮೆ ಉಂಟು
ಅದೊಂದೇ ಸಾಕೆನ್ನ ಜೀವನದೊಳು || ದಯೆತೋರು ||

* * *

ಪಶ್ಚಾತ್ತಾಪ ದಿಂದೆನ್ನ ಮನವು
ನೊಂದು ಬೆರಡಾಯಿತು
ಓ ದೇವರೇ ನಿರೀಕ್ಷಿಯಿಂ
ನನ್ನ ಪಾಪ ಕೊಳೆದವನೇ
ದೇವೀದನ ಮೊರೆಯಂತೆಯೇ       || ಪಶ್ಚಾತ್ತಾಪದಿಂದೆನ್ನ ||

ಕರಣಿಸಿ ಕಾಯೋ ದೇವರೇ
ಜಜ್ಜೀ ಹೋದಂತ ಈ ಮನಸ್ಸನ್ನು
ಸ್ವೀಕರಿಸು ಸ್ವೀಕರಿಸು ಸ್ವೀಕರಿಸು   || ಪಶ್ಚಾತ್ತಾಪದಿಂದೆನ್ನ ||

ಅಂತರಂಗವನ್ನೇ ನೋಡುವಾತನೇ
ಪ್ರೀತಿ ಸ್ವರೂಪನೇ ಕಾರುಣ್ಯನಿಧಿಯೇ
ಸ್ವೀಕರಿಸು ಸ್ವೀಕರಿಸು ಸ್ವೀಕರಿಸು   || ಪಶ್ಚಾತ್ತಾಪದಿಂದೆನ್ನ ||

* * *

ದುಷ್ಟರಾಲೋಚನೆಯಂತೆಯೇ
ನಡೆಯದೇ ಇರುವವನು
ಪಾಪಾತ್ಮರ ಮಾರ್ಗದಲ್ಲಿ
ಕುಳಿತುಕೊಳ್ಳದಿರುವವನು
ಧನ್ಯನು ಧನ್ಯನು ಧನ್ಯನು

ಧರ್ಮವರಿಯದಿರುವವರು
ಸದಾಕಾಲವೂ ದೇವರ ವಾಕ್ಯವನ್ನು
ಹಿಂಬಾಲಿಸಿ ನಡೆಯುವವರು
ನೀರಿನ ಕಾಲುವೆ ಬಳಿಯಲ್ಲಿ
ಇರುವಂತ ವೃಕ್ಷದಂತೇಯೇ
ಫಲಿಸುವರು ಫಲಿಸುವರು

ಕರ್ತನ ಸದಾಕಾಲವೂ
ಧ್ಯಾನಿಸಿ ನಡೆಯುವವರು
ಪರಲೋಕದಲ್ಲಿ ಸೌಭಾಗ್ಯದಿಂದ
ರಾಜ್ಯವನಾಳುವರು ದೇವರ ಕಾಣವರು
ಈ ಮಾತು ಸತ್ಯವೇ ಹೌಹೌದು ಸತ್ಯವೇ
ಸತ್ಯವೇ ಸತ್ಯವೇ

* * *

ನಿನ್ನ ಭೂಯಾತ್ರೆಯ ಚಿಂತೆಯನ್ನು
ಕರ್ತನಿಗೆ ಒಪ್ಪಿಸಿ ಮುನ್ನಡೆ
ಆತನೇ ನಿನ್ನಭಾರ ಹೊತ್ತು
ನಡೆಸುವನು ನಡೆಸುವನು || ನಿನ್ನ ಭೂ ಯಾತ್ರೆಯ ||

ಮನುಜನಾಗಿ ಜನಿಸಿದ ಯೇಸು
ಮನಕುಲಕ್ಕಾಗಿ ಮರುಗಿದನು
ಈ ಯೇಸು ನಮ್ಮ ರಕ್ಷಕನಲ್ಲಿ
ನಮ್ಮ ಪಾಪ ಹೊತ್ತು ಜೀವಿಸಿದನು || ನಿನ್ನ ಭೂ ಯಾತ್ರೆಯ ||

ಹೌದೇನು ನಿನ್ನಲ್ಲಿಯೇ ನಾ ಭದ್ರವಾದೆನು
ನನ್ನನ್ನು ಅಲುಗಾಡಿಸಲ್ಯಾರಿಂದಲೂ
ಅಸಾಧ್ಯವೇ ಹೊರತೂ ನಾ ಭದ್ರವಾಗಿರಲು
ನನ್ನೇಸುವೇ ಜೀವಿಸುವ ನನ್ನಾತ್ಮದೊಳ್     || ನಿನ್ನ ಭೂ ಯಾತ್ರೆಯ ||

* * *

ನನ್ನೇಸುವಿನ ಶಿಲುಬೆಯನ್ನು
ನಾ ಹೊತ್ತು ನಡೆಯುವೆನು
ಈ ಭೂಲೋಕದೊಳು
ನಿಶ್ಚಿಂತೆಯಾಗಿ ಜೀವಿಸುವೆ || ನನ್ನೇಸುವಿನ ||

ಆತನ ಮೂರ್ಹಗಳೆಲ್ಲವೂ
ಪರಿಶುದ್ಧವಾದದ್ದು
ನೆನ್ನ ಮಾರ್ಗವೆಲ್ಲವೂ
ನಶ್ವರವಾದದ್ದು   || ನನ್ನೇಸುವಿನ ||

ಶಿಲೆಯಯನ್ನೆ ಕಂಡೆನಾ
ಆ ಶಿಲುಬೆಯ ಮಹಿಮೆ
ಹುಚ್ಚಾಟವಾದದ್ದು
ಹೌದೇನಂವೇ ನನ್ನೇಸುವೇ         || ನನ್ನೇಸುವಿನ ||

* * *

ಕರ್ತನೀನೇನ್ನನ್ನು ಕೈಹಿಡಿದು ನಡಿಸಯ್ಯಾ
ನಿನ್ನನ್ನೆ ನಂಬಿ ನಾ ಸಾಗುವೇ
ನೀ ಎತ್ತ ತಿರುಗಿದರೂ ನೀ ಎತ್ತ ಹೋದರೂ
ನಾ ನಿನ್ನ ಹಿಂಬಾಲಿಸುವೆ

ನಿನ್ನ ಕರುಣೆ ಪ್ರೀತಿ ಕೃಪೆಯನ್ನು
ತೋರಿಸಿ ನಡಿಸಯ್ಯಾ
ನಿನ್ನ ಆಶಿರ್ವಾದಕ್ಕಾಗಿ ಬಳಲಿ ಹೋದೆನು
ಬಳಲಿ ಹೋದೆನು…..      || ಕರ್ತ ನೀನೆ ||

ನೀನೇ ಸತ್ಯ ನೀನೆ ನಿತ್ಯ ಎಂದು ತಿಳಿದಿಹೆ
ನಿನ್ನ ಬಿಟ್ಟರೆನ್ನ ಜೀವಿತ
ಬರುಡಾದ ಜೀವನ ಹೌದೇಸುವೇ
ಹೌದೇಸುವೇ….. || ಕರ್ತ ನೀನೆ ||

* * *

ನಾನೇನು ನಿನಗೆ ಸಲ್ಲಿಸಲಿ
ನೆನ್ನನ್ನುಂಟು ಮಾಡಿದ ಕರ್ತನೇ
ನನ್ನ ಕ್ರಿಯೆಯೋ ನನ್ನ ತಾಪೋ
ನಿನ್ನ ಗರ್ವಿಸಿ ಜೀವಿಸುವೆ

ನಿನಗೆಂತೆ ಕಾಣಿಕೆ ಸರಿಯಾಗಿದೆ
ನಿನಗೆಂತ ಮನೆ ಜೀವಿಸಲು
ಆಕಾಶವೇ ನಿನ್ನ ಸಿಂಹಾಸನ
ಭೂಲೋಕವೇ ನಿನ್ನ ಪಾದ ಪೀಠವು
ಹೀಗೆಂದು ಹೇಳಿದೆ ನಿನ್ನ ವಾಕ್ಯವು   || ನಾನೇನು ನಿನಗೆ ||

ಹೌದೇಸುವೇ ನಿನ್ನ ಕೃಪೆಯನು
ಹಿಂಬಾಲಿಸಿ ನಡೆಯಲೆನ್ನ
ಜ್ಞಾನ ತಿಳುವಳಿಕೆ ತಿಳಿಸಯ್ಯ
ಹೌದೇಸುವೇ ನೀನೆನ್ನ ಬಳಿ ಜೀವಿಸು
ನನ್ನತ್ಮಾವೇ ನಿನ್ನ ಮನೆಯಾಗಿ ಜೀವಿಸು     || ನಾನೇನು ನಿನಗೆ ||

* * *

ಮಹಾಸುಧಿನ ಎಂತ ದೈವಸುದಿನ
ನೀಡುವಂತ ದೈವಕೃಪೆಯು ದೇವರ ದಿನ     || ಮಹಾಸುಧಿನ ||

ದಾನ ಧರ್ಮ ಕರ್ಮವೆಲ್ಲ ಬೇಡವಾದದ್ದು
ನಿತ್ಯ ಪ್ರೀತಿ ಶಾಂತಿ ಎಲ್ಲ ದೇವರ ಒಲವು     || ಮಹಾಸುಧಿನ ||

ಮಾನವನ ಇಚ್ಛೆ ಎಲ್ಲ ದುರ್ಬಲವಾದದ್ದು
ದೈವ ಇಚ್ಚೆ ನೇರವೇರಲು ಬಲವಾಗಿರುವದಾ || ಮಹಾಸುಧಿನ ||

ತಾಳ್ಮೆ, ಪ್ರೀತಿ ಸಹನೆ ಮಾರ್ಗ ದೈವಮಾರ್ಗವು
ಕೋಪ ಕ್ರೋಧ ಜಗಳವೆಲ್ಲ ಮಾನವೀಯವು || ಮಹಾಸುಧಿನ ||