ಮೇಳ  :  ಭಾಗವತ :

ಶ್ರೀ ಸಿದ್ದೇಂಡ್ರ ಮನಃ ಪ್ರಿಯ
ಭಾಸುರ ನಾಟ್ಯದಿ ತ ಭಾಮಾಕಲಾಪ
ಭ್ಯಾಸಾದಿ ಕೂಚಿಪುಡಿ ನಿ
ವಾಸಾ | ಶ್ರೀ ರಾಜಗೋಪಾಲಕೃಷ್ಣ ||

(ಈ ಶ್ಲೋಕ ಕೇಳಿ ಬರುತ್ತಿರುವಂತೆಯೇ ಗುರುಸ್ತುತಿ, ವೇದ ಘೋಷದೊಂದಿಗೆ ರಂಗಪೂಜೆ….ಇಲ್ಲಿ ಸೊಪ್ಪಿನಿಂದ ರಂಗಭೂಮಿಯಲ್ಲೆಲ್ಲಾ ನೀರನ್ನು ಸ್ತ್ರೀಪಾತ್ ಸಿಂಪಡಿಸುತ್ತಾ  ಇನ್ನೂಂದು ಬದಿಯಿಂದ ನೇಪತ್ಯಕ್ಕೆ ಹೋಗುವಳು. ನಂತರ ಧೂಪವನ್ನು ಹಾಕಲಾಗುವುದು. (ರಂಗಶುದ್ಧಿ) ಕುಟಿಲತ ಎಂಬ ವಕ್ರದಂಡದೊಡನೆ ಸೂತ್ರಧಾರನು ಪ್ರವೇಶಿಸಿ ಗಜಾನನನನ್ನು ಸ್ತುತಿಸುತ್ತಾನೆ.)

ಶ್ಲೋಕ:
ಅಗಜಾನನ ಪದ್ಮಾರ್ಕಂ-ಗಜಾನನ ಪಮಾರ್ನಿಶಮ
ಅನೇಕದಂ-ತಂ-ಭಕ್ತಾನಾ ಏಕದಂತಮುಪಾಸ್ಮಹೇ…
ವಕ್ರತುಂಡ ಮಹಾಕಾಯ ಸೂರ್ಯಕೋಟಿ ಸಮಪ್ರಭ
ಅವಿಘ್ನ ಕುರುಮೇದೇವ-ಸರ್ವ ಕಾರ್ಯೇಷು ಸರ್ವದಾ…
ನಾಟಿ ರಾಗ, ತ್ರಿಶ್ರ ಜಾತಿ ತ್ರಿಪುಟ :
ವಿಘ್ನರಾಜಾಯ ತೇ ನಮೋ-ವೇದವೇದ್ಯಾಯ ತೇ ನಮೋ
ವಕ್ರತುಂಡಾಯ ತೇ ನಮೋ ಪಾರ್ವತಿತನಯನ ಮಾನಸ
ವಿಘ್ನರಾಜಾಯ ತೇ ನಮೋ ||

(ಆಗ್ಗೆ ನಾಲ್ಕಡಿ ಎತ್ತರದ ಸಾಂಪ್ರದಾಯಿಕ ವೇಷಭೂಷಣ ಹೊಂದಿದ ಗಜವದನು ಪ್ರವೇಶಿಸುತ್ತಾನೆ… ಆಗ್ಗೆ ದೀವಟಿಗೆ ಉರಿಯುತ್ತಿದ್ದು, ಆಗಾಗ್ಗೆ ರಾಳವನ್ನು ಉಗ್ಗುವುದು ಕಂಡುಬರುತ್ತದೆ…. ನಂತರ ಗಜಾನನ ನಾಟ್ಯ…)

ದಾಂದ ದಾಂದದ-ದಾಂದದಾಂ
ಕಟಿತಕ ದಿಂದದಿಂದದ-ದಿಂದದಿಂ
ತೊದಿಗೆ-ದಂದಂದಾಂ-ತೊದಿಗಿ ದಿಂದಿಂದಿಂ

ಸೂತ್ರಧಾರ : ಲಂಬೋದರಾಯ ತೇ ನಮೋ ರಜತಾದ್ರಿನಿಲಯಾಯ ನಮೋ ನಮೋ

ಸಾಮದೇದಗೀತಾಯ ತೇ ನಮೋ ಸ್ಕಂದಪೂರ್ವಜ ನಮೋ ನಮೊ

ದಂದಂ,ದಂದಂ ದಂದಾಂ
ದಿಂದಿಂ ದಿಂದಿಂ ದಿಂದೊಂ
ತದ್ದಿಕಿತಕ ತೊಪುತಕಿಟತಕ ತಕಧಿಕಿತಕ
ತೊಂಗ್ಡುತಕ ತಧಿಂಗಿಣ ತೊಂ |

ಸೂತ್ರದಾರ : ಮೋದಕ ಪ್ರಿಯಾಯ ತೇನಮೋ ಮೂಷಿಕ ವಾಹನಾಯನಮೋ ಕುಬ್ಜರೂಪಾಯ ತೇನಮೋ ಕೋಟಿರವಿಭಾಸಾಯ

ತೇನಮೋ ನಮೋ ||ವಿಘ್ನ||
ತೊಂಗ್ಡು ತಾಧಾಕಿಟತಕ್-ತತೊಂತತ್
ತೂಂಗ್ಡು ತಾಧಾಕಿಟತಕ್-ತತೊಂತತ್
ತೂಂಗ್ಡು ತಾಧಾಕಿಟತಕ್-ತತೊಂತ ನನ್ನಿಂಕೆಟತಕ

ಸೂತ್ರಧಾರ : ವಾಣಿ ಪರಾಕು, ಸರ್ಪಾಣಿ ಪರಾಕು ವಾಣಿ ವಕ್ಕನಿ ನೀಲವೇಣೀ ಅಂಬಾ ಪರಕು

(ಇತ್ಯಾದಿಯಾಗಿ ಸರಸ್ವತಿಯ ಸ್ತುತಿ-ಪರಕು. ಕೂಚಿಪುಡಿ ಸಿದ್ದೇಂದ್ರಯೋಗಿಗಳ ಆರಾಧ್ಯದೇವತೆ ರಾಜಗೋಪಾಲನ ಸವಿಸ್ತಾರ ಸ್ತುತಿ)

ಜಯ ರಾಜಗೋಪಾಲ-ಜಯ ವಾರ್ಧಿಗಂಬೀರ
ಜಯ ಸಿರದಾಕಾರ-ಜಯ ಮೇರುಧೀರ ||ಜಯ ಜಯ ||
ತಾದೃಅಗುಡುಜಂ-ನಗಜಂ ತಧಿಮಿತತ
ತತ್ತದೃತುಡುಜಂ ನಗಜಂ ತಧಿಮಿತತ
ತಥಿಮಿತತಾ-ತಧಿಮಿತ-ತಧಿಮಿತತಾ
ತಥಿಮಿತತಾ-ತಧಿಮಿತತಕ-ತಧಿಗಿಣತೊಂ
ಜಯಕುಚೇಲಪುರ ವಾಸ-ಜಯ ನಾಟ್ಯಕಳಾವಿಲಾಸ
ಜಯಕೋಟಿರವಿಭಾಸಂ-ಜಯ ಮಂದಪೂಸ||ಜಯ ಜಯ ||
ತಾಂ, ತ್ತಾ, ತ್ತ
ತ್ತತ್ತ ದತ್ತ
ತೊದಿಗಿದಾಂ ತೊದಗಿ ದಂದಂದಾಂ
ದಾಂ ದಂದಂ ದಂದಂದಾಂ
ತಕದಿಕಿತಕ ದವಿಗಿಣತೊಂ
ದಿಗಿದಂ ತೊದಿಗಿ ದಿಂದಿಂದಿಂ…..
… … … …

ನಂತರ ಅಂಬಾಸ್ತುತಿ. ಈ ದೇವತೆಯ ಸ್ಥನಿಕ ದೇವತೆಗಳಲೀಲ್ಲಾ ಅತ್ಯಂತ ಜಾಗೃತಳೆಂದು ಇಂದಿತು ಕೂಚಿಪುಡಿಯ ಕಲಾವಿದರು ನಂಬುತ್ತಾರೆ. )

ಅಂಭೋಜಸನುರಾಣಿ-ಪೂರಿರಾಣಿ ಕೋಲುವ ಓಭ್ರಮರಾಂಬ |
ಶ್ರೀಗಿರಿನಿಲಯನಿ ಶವುನಿ ಪಟ್ಟಪುರಾಣಿ-ಅಂಬ-ಓಭ್ರಮರಾಂಬ…
ಸಾರಸ್ವತ ಸುಜನರು ಈ ಭಾಮಾಕಲಾಪವನ್ನು ಹಂಸಕ್ಷೀರ ನ್ಯಾಯ
ದಂತೆ ಸ್ವೀಕರಿಸಬೇಕೆಂಬ ಕೋರಿಕೆಯೊಂದಿಗೆ ಸಿದ್ದೇಂದ್ರ ವಿರಚಿತಂ
(ಎಂಬಲ್ಲಿಗೆ ಕವಿ ವಾಚನ ಮುಗಿಯುತ್ತದೆ.)

ಗೋಪಾಲಸ್ವಾಮಿಗೆ ಭಕ್ತಿಯಿಂದ ಅರ್ಪಿಸಿದ  ಭಾಮಾಕಲಾಪದ ಮೊದಲನೆಯ ದೃಶ್ಯ ಇಲ್ಲಿಗೆ ಮಂಗಳವಾಗುತ್ತದೆ. ಕವಿಯ ವಿನಯವು ಸೂಚಿತವಾಗಿದೆ. ಪ್ರಾಯಶಃ ಎಲ್ಲಾ ಪ್ರಾಚೀನ ಕವಿಗಳು ಅನುಸರಿಸಿದ ಪರಿಪಾಠ.)

ಹಿಮ್ಮೇಳವು ನಾರದನ ವರ್ಣನೆಯನ್ನು ಮಾಡುತ್ತದೆ.
ಜಟಾಮುಕುಟಧಾರಿ | ಸರ್ವ ಚರಾಚರ ಸಂಚಾರಿ |
ಕಲಹಭೋಕ್ತಾದಿಕಾರಿ ವನಮಾಲಿಧಾರಿ | ಬ್ರಹ್ಮಚಾರಿ | ಅಸ್ಖಲಿತ
ಕೃಷ್ಣಾಜಿನ ದಂಡ ಕಮಂಡಲಧಾರಿ ||

(ಹಾಡಿನ ಕೊನೆಗೆ ನಾರದನ ಪ್ರವೇಶ )

ನಾರದ : ಹಸಿವು…ನನಗೆ ದಸಿವು…ಆಹಾರ ಕೊಡವವರಾರಿದ್ದಾರೆ…ಅಣ್ಣನಿದ್ದೂ ರಾಜ್ಯಭಾರ ಮಾಡುವ ಕೃಷ್ಣ ಶಿಸುಪಾಲರನ್ನು ಸಂಹರಿಸಿದ ಆ ಕೃಷ್ಣ…ದೇವೇಂದ್ರನು ಕೊಟ್ಟ ಈ ಪಾರಿಜಾತವನ್ನು ಆ ಕೃಷ್ಣನಿಗೆ ಕೊಟ್ಟು ನನಗೆ ಬೇಕಾದ ಭಿಕ್ಷೆ ಪಡೆಯುವೆ.

ಜಯಗೋಪಾಲಂ | ರಾಧಾಲೋಲಂ |
ರಾಜಗೋಪಾಲಂ | ರಾಧಾಲೋಲಂ | ಎಂದು ಹಾಡಿ

(ಪುಷ್ಪವನ್ನು ಉದ್ದೇಶಿಸಿ ತನ್ನ ಉದ್ದೇಶವನ್ನು ಪುರೈಯಿಸುವಲ್ಲಿ ಅದು ವರಿಸಬೇಕಾದ ಕಾರ್ಯವನ್ನು ನಿರ್ದೇಶಿಸುತ್ತಾನೆ. )

(ಮುಂದಿನ ದೃಶ್ಯದಲ್ಲಿ  ಕೃಷ್ಣನ ಪ್ರವೇಶ-ಪಾತ್ರ ಪರಿಚಯವನ್ನು ಕವಿಯು ವರ್ಣನೆ ಮತ್ತು ಪರಕುಗಳ ಮೂಲಕ ಹೇಳಿದ್ದಾನೆ… )

ಕೃಷ್ಣ : ಹಾಸ್ಯಂ, ನನ್ನ ತಲಯ ಮೇಲೆ ಹಲ್ಲಿ ಬಿತ್ತು…

 

ಕೂಚಿಪುಡಿ ಎಳೆಯ ಕಲಾವಿದರು

ಹಾಸ್ಯಂ : ಹಲ್ಲಿ ಬಿತ್ತೋ ಅಥವಾ ಯಾರದಾದರೂ ಮನೆಗೆ ಕದಿಯಲು ಹೋದಗ್ಗೆ ಕಲ್ಲು ಬಿತ್ತೋ?  ಮೊದಲೆ ತಿಳಿದಿದ್ದರೆ ಕಲ್ಲಿ ಬೀಳುವ ಸ್ಥಳದಲ್ಲಿ ಕೈ ಒಡ್ಡಬಹುದಾಗಿತ್ತು.

ಕೃಷ್ಣ : ಅಲ್ಲ ಅಲ್ಲ ಮಾಧವಿ ಕಲ್ಲು ಅಲ್ಲ, ಹಲ್ಲಿಯೇ ಬಿದ್ದದ್ದು-ಗೌಳಿ

ಹಾಸ್ಯಂ : ಯಾವ ಹೊತ್ತಿನಲ್ಲಿ ಬಿತ್ತು

ಕೃಷ್ಣ : ನಿನ್ನೆ ಸಾಯಂಕಾಲ ಬಿತ್ತು…

ಹಾಸ್ಯಂ : (ಬೆರಳುಗಳನ್ನು ಎಣಿಕೆ ಮಾಡಿದ ನಂತರ- ) ಇದು ಕದನವನ್ನು ಸೂಚಿಸುತ್ತದೆ.

ಕೃಷ್ಣ : ಕದನ ! ಎಲ್ಲಾ ವೈರಿಗಳನ್ನೂ ಸದೆಬಡೆದಿದ್ದಾಗಿದೆ. ಇನ್ನು ಕಲಹವೆಂದರೆ ನನ್ನ ಮೇಲೆ ಏರಿ ಬರುವವರು ಯಾರಿದ್ದಾರೆ…

ಹಾಸ್ಯಂ : ಗೌಳಿ ಬಿದ್ದ ವೇಳೆ ಸಾಯಂಕಾಲವಾದ್ದರಿಂದ ಇದು ಪ್ರಣಯ ಕಲಹವೇ ವಿನಾ ಬೇರೆ ಯಾವ ಕಲಹವೂ ಅಲ್ಲ.

ಕೃಷ್ಣ : ಸಖನೇ-ಈ ಅನಿಷ್ಟದ ಪರಿಹಾರವೇನಾದರೂ ಉಂಟಾ-

ಹಾಸ್ಯಂ : ಕಂಚಿಗೆ ಹೋಗಿ ಬಂದವರನ್ನು ಮುಟ್ಟುವುದು…

ಕೃಷ್ಣ : ಕಂಚಿಗೆ ಹೋಗಿ ಬಂದವರು ಯಾರದರೂ ಉಂಟಾ

ಹಾಸ್ಯಂ : ನನ್ನ ಅಜ್ಜಿ ಕಂಚಿಗೆ ಹೋಗಿ ಬಂದಿದ್ದಾಳೆ. ನೀವು ಅವಳನ್ನು ಮುಟ್ಟಬಹುದು.

(ಹಾಸ್ಯದ ಹೊನಲು ಸಾಗುತ್ತದೆ-ಅಂತ್ಯದಲ್ಲಿ-

ನಮಃ ಪರಮ ಕಲ್ಯಾಣ | ಸಮಸ್ತ ವಿಶ್ವಮಂಗಳ
ವಾಸುದೇವಾಯ ಶಾಂತಯಾ | ಯದೂನಾಂಪತೆಯೆ ನಮಃ ||

ಎಂಬ ಶ್ಲೋಕದೂಂದಿಗೆ ನಾರದನ ಪ್ರವೇಶ-

ನಮೋ ನಾರಾಯಣ ನಮೋ ಕೃಷ್ಣ.

ಕೃಷ್ಣ : ನಾರದ ಋಷೀಂದ್ರ….ಅಭಿವಾದಮು–ಸ್ವಾಗತಮು. ಈ ಪೀಠವನ್ನು ಅಲಂಕರಿಸಿ… ಜಗತ್ತಿನಲ್ಲಿ  ಧರ್ಮವು ಹೇಗಿದೆ?

ನಾರದ: ಕಲಿಯುಗದಲ್ಲಿ ಧರ್ಮವು ನಾಲ್ಕು ಪಾದದಷ್ಟಿದ್ದು ಎಲ್ಲವೂ ಯಚ್ಛೇತವಾಗಿದೆ. ಭಗವಾನ ಇಂದ್ರನು ಕೊಟ್ಟ ಈ ಪಾರಿಜಾತವು ಅಮೋಘವಾದುದು. ಇದು ತಮ್ಮಂಥವರಲ್ಲಿ ಇರಲು ಯೋಗ್ಯವಾದುದೆಂದು ತಿಳಿದು ತಮಗೆ ಅರ್ಪಿಸಲು ತಂದಿದ್ದೇನೆ. ಸ್ವೀಕರಿಸಿ ನನ್ನನ್ನು ಕೃತಾರ್ಥನನ್ನಾಗಿ ಮಾಡಿ…

ಕೃಷ್ಣ: ಇದನ್ನು ಹೊಂದಲು ಯಾರು ಯೋಗ್ಯರು ಯತೀಂದ್ರ…

ನಾರದ : ಲಕ್ಷೀ, ಶಾರದೆ, ಭವಾನಿ ಈ ಸ್ತೀರತ್ನಗಳು ಇದನ್ನು ಹೊಂಡಲು ಯೋಗ್ಯರು.

ಕೃಷ್ಣ: ನನ್ನ ಅಷ್ಟ ಪಟ್ಟರಾಣಿಯರಲ್ಲಿ ಇದು ಯಾರಿಗೆ ಸಲ್ಲಬೇಕು ನಾರದ

ನಾರದ : (ಹಾಡಿನಿಂದ ಹೂವನ್ನು ವರ್ಣಿಸಿ…) ಕಪಟ ನಾಟಕ ಸೂತ್ರಧಾರಿ ಈ ಮೊದಲೇ ಈ ಪ್ರಶ್ನೆಗೆ ನಿನಗೆ ಉತ್ತರ ದೊರೆತಿದೆ. ಆದರೂ ಮೊದಲಿನಿಂದಲೂ ನಿಮ್ಮ ಹೃದಯದಲ್ಲಿ ವಾಸಿಸುವ ಆ ರುಕ್ಮಿಣಿ ದೇವಿಯವರಿಗೆ ಈ ಪಾರಿಜಾತವು ಸಲ್ಲಬೇಕು, ಇದು ಉಚಿತವಾದುದು.

ಕೃಷ್ಣ : ಮುನೀಂದ್ರ…ನಿಮ್ಮ ಮಾತನ್ನು ಶಿರಸಾವಹಿಸುತ್ತೇನೆ.

ನಾರದ : ಕೃಷ್ಣ ನಾನಿನ್ನು ಬರುವೆ…(ಇಬ್ಬರೂ ನಿರ್ಗಮಿಸುತ್ತಾರೆ…) ಪರದೆಯ ಮೇಲೆ ಈಗ ಜಡೆ ಕಂಡು ಬರುತ್ತದೆ. ಜಡೆಯ ತಯಾರಿಕೆ ವಿಶಿಷ್ಟತೆಯಿಂದ ಕೂಡಿದ್ದು ಕವಿಯ ದೃಷ್ಟಿಯಲ್ಲಿ ಜಡೆಯ ವರ್ಣನೆ ಇಂತಿದೆ:

ಜಡೆಯಲ್ಲಿ ಎಪ್ಪತ್ತೇಳು ಅಂಶಗಳು ಅಡಕವಾಗಿವೆ. ಇವು ಅಶ್ವಿನಿ, ಭರಣಿ, ಇತ್ಯಾದಿ ಇಪ್ಪತ್ತೇಳು ನಕ್ಷತ್ರಗಳ ಸಂಕೇತ, ತಲೆಯ ಮೇಲಿ ಕಾಣುವ ನಾಲ್ಕು ಭಾಗಗಳು ಸಾಮವೇದ, ಋಗ್ವೇದ, ಯಜುರ್ವೇದ ಮತ್ತು ಅಥರ್ವಣ ವೇದಗಳು. ಹಣೆಯ ಒಂದೊಂದೂ ಕಡೆಗೂ ಸೂರ್ಯ ಮತ್ತು ಚಂದ್ರ. ಜಡೆಯ ತುದಿಯಲ್ಲಿಯ ಮೂರು ಕುಚ್ಚುಗಳು, ಭೂಲೋಕ, ಪಾತಾಳ ಮತ್ತು ಸ್ವರ್ಗ ಲೋಕಗಳನ್ನು ಪ್ರತಿ ಕುಚ್ಚಿನಲ್ಲಿಯ ಮೂರು ಉಪ ಕುಚ್ಚು ಒಟ್ಟು ಒಂಭತ್ತು ಇವು ನವಗ್ರಹಗಳ ಸಂಕೇತ. ಜಡೆಯ ಮೇಲ್ಬಾಗದಲ್ಲಿ ಕಾಣುವುದು, ಗಿಣಿಯ ಅಲಂಕಾರದ ನಂತರದ ನಾಗರ ಹೆಡೆ, ಇಲ್ಲಿ ಗಿಣಿ ಜೀವ, ಹೆಡೆ ಜ್ಞಾನದ ಮತ್ತು ಆದಿಶೇಷನ ಕುರುಹು, ಒಟ್ಟಿನಲ್ಲಿ ಭಾರತೀಯರ ಲೋಕಗ್ರಹಿತೆಯ ಬ್ರಹ್ಮಾಂಡವನ್ನೇ ಇಲ್ಲಿ ಕಾಣುತ್ತೇವೆ… (ತೆರೆಯು ಸರಿಯಲು…)

ರಾವೇ ಮಾಧವಿ | ಆ ಮುಕುಂದ ವದನ
ರಾವೇ ಸರೋಜಾನನ | ಓಹೋ ತಕ್ಕಕ ಮಾಯಾಲಾಡಿ

ವಿನವೆ ಓಯಕ್ಕ ಪ್ರಾಣೇಶ್ವರುಂಡು ಈ ವೇಲ… (ಅಂದರೆ ಹೇ ಪ್ರಾಣನಾಥ, ನಿನ್ನನ್ನು ಕಾಣಲು ತವಕಗೊಂಡಿದ್ದೇನೆ-ತಕ್ಷಣ ಪ್ರತ್ಯಕ್ಷನಾಗು, ಪ್ರಾಣಸಖಾ… ಪಾಣಪ್ರೀಯಾ)

ಹಾಸ್ಯಂ : (ಮೇಲಿನ ಹಾಡಿನ ದಾಟಿಯಲ್ಲಿ, ಗತ್ತಿನಲ್ಲಿ…) ರಾವೇ ಅನ್ನಮ್ ತೊಗರಿಬೇಳೆ, ಪಾಯಸ.. ಬನ್ನಿ ಎಲ್ಲಿರುವಿರಿ. ನಿಮ್ಮನ್ನು ಕಾಣಲು ತವಕಗೊಂಡಿದ್ದೇನೆ. ಬೇಗ ಪ್ರತ್ಯಕ್ಷರಾಗಿರಿ ಪ್ರಾಣಪ್ರೀಯ ತಿಂಡಿಗಳಿರಾ– (ಎಂದು ಕುಣಿಯುತ್ತಾನೆ)

(ಭಾಮೆಯು ವಿರಹವನ್ನು, ಮನಸ್ಸಿನ ತೊಳಲಾಟವನ್ನು ಹೊರಸೂಸುತ್ತಾ)

ಭಾಮೆ : ಬೇಗ ಬಾರೋ ನನ್ನ ಪ್ರಾಣಕಾಂತ,

ಹಾಸ್ಯಂ : ಬೇಗ ಬಾರೇ ನನ್ನ ಪ್ರಿಯ ತಿಂಡಿ… (ಜನರಂಜನೆಯನ್ನೂದಗಿಸುತ್ತದೆ ಈ ಭಾಗ)

ಭಾಮನೆ ಸತ್ಯಭಾಮನೆ | ವಯ್ಯಾರಿ ಸತ್ಯಭಾಮನೆ | (ಮಿಶ್ರಛಾಪ ತಾಳದಲ್ಲಿಯ ಈ ನೃತ್ಯ ಅತ್ಯಂತ ಮನಮೋಹಕ– ಈ ನೃತ್ಯಕ್ಕೆ ಪ್ರತಿಯಾಗಿ)

ವಯ್ಯಾರಿ ತಿಂಡಿಯೇ ಬೇಗ ಬಾ | ಎಂಬ ಹಾಸ್ಯದ ನೃತ್ಯ ಅಷ್ಟೇ ಮೋಜಿನದು.

ಭಾಮೆ : ಮಾಧವಿ– ನನ್ನ ಪ್ರಾಣಕಾಂತನಾದ ಆ ಶ್ರೀಕೃಷ್ಣಸ್ವಾಮಿಯನ್ನು ಕಂಡೆಯಾ ?

ಹಾಸ್ಯಂ : ಶ್ರೀಕೃಷ್ಣನೆ-ಯಾವ ಊರಿನವ… ನಖಶಿಖಪರ್ಯಂತ ವರ್ಣಿಸಮ್ಮಾ…

ಭಾಮೆ : ಕಂಡ ಕಂಡಲ್ಲಿ; ಹೀಗೆ ಸೇರಿದಲ್ಲಿ, ಸ್ವಾಮಿಯ ಹೆಸರು ಹೇಳುವುದೇ? ನೀವು ಕೇಳಬಹುದೇ… ಅವರು ಶಂಖಧಾರಿಗಳು ಮನೆಮೆನೆ ತಿರುಗುವ ಜಂಗಮನೇನಮ್ಮ ನಿನ್ನ ಸ್ವಾಮಿ…

ಭಾಮೆ : ಅವರು ಚಕ್ರಧಾರಿಗಳು..

ಹಾಸ್ಯಂ : ಚಕ್ರಧಾರಿಗಳೇ-ತಿಗರಿಯಮೇಲೆ ಮಣ್ಣಿನಿಂದ ಪಾತ್ರೆ ಉದ್ಬವಿಸುವಂತೆ ಮಾಡುವ ಚಕ್ರಪಾಣಿಯೇ ಆ ನಿನ್ನ ಸರಸವಾಣಿ…

ಭಾಮೆ : ಅವರು ವೇಣು ಧಾರಿಗಳು

ಹಾಸ್ಯಂ : ಕೈಯಲ್ಲಿ ವೇಣು ಹಿಡಿದು…ಊದುವ ಗೋಪಾಲಕರೇನಮ್ಮ…

ಭಾಮೆ : ಅವರು ಮಕರ ಕುಂಡಲ ಧಾರಿಗಳು.

ಹಾಸ್ಯಂ : ಹಾ-ಹೌದೇ ರಾರವರು ಮಕರ ಕುಂಡಲ ಧಾರಿಗಳು ನನಗಿ ಹೆಣ್ಣು ಕೊಡಲು ಬಂದವರು ಯಾರದು? (ಅತ್ತಿತ್ತ ಕಣ್ಣಿನಿಂದ ಹುಡುಕಾಟ)

ಭಾಮೆ : ಅವರು ನನ್ನ ಅತ್ತೆಯ ಕುಮಾರುಡಮ್ಮಾ

ಹಾಸ್ಯಂ : ಅತ್ತೆಯ ಮಗ ಮೆತ್ತಗೆ ಬಂದು ಗಪ್ಪನೆ..

ಭಾಮೆ : ಅವರು ನನ್ನ ಮಾವನ ಕುಮಾರರು

ಹಾಸ್ಯಂ : ಹಾ-ಅವರೇ… ಹೆಗಲಮೇಲೆ ನೇಗಿಲನ್ನು ಹೊತ್ತು ತಿರುಗುವವನೇ ರೈತನೆನಮ್ಮ ಆತ…

ಭಾಮೆ : ಅವರು ನನ್ನ ಭಾವ…ಅವರ ತಮ್ಮ…

ಹಾಸ್ಯಂ : ಬಾವ…ಉದ್ದನ ದಾಡಿ ಬಿಟ್ಟಿರುವ ಬಾವಾ..

ಭಾಮೆ : ಅವರೋ…ಬಲರಾಮ ಮತ್ತು ಸಾತ್ಯಕಿ ಇವರ ಮಧ್ಯದವರು

ಹಾಸ್ಯಂ : ಕಪ್ಪಗೆ ಇರುವ ಅವರು ನಿನಗೇನಾಗಬೇಕಮ್ಮಾ…

ಭಾಮೆ : ಅವರು (ನಾಚಿಕೆಯಿಂದ) ಅವ್ರು — ಅ-ವ-ರು ನ-ನನ್ನ-ನನ್ನ-ಆದಿತಾಳ ಮಧ್ಯಮಾವತಿ–ಸಿಗ್ಗೋಯನೋಯಂ ವಾನಿಪೇರು ಚಪ್ಪ

ಸಿಗ್ಗೋಯ ನೋಯಂ ಚಿನ್ನ ನಾಟಿನುಂಡಿ
ವಾನುಪೇರು ಚಪ್ಪ ವಾಡುಕಲೇದಮ್ಮಾ |
ವಸುದೇವ ತನುಯುಡೈ | ವಸುದ ಜನ್ಮಿಂಚಿನಾ
ಪಸುಲಗಾಡರಿಗೊಲ್ಲ | ಬಾಲುನಿ ಪೇರುಚಪ್ಪ ||
ಘಾಟಂಪುರ ತುಲತೇ | ಕಾಟಂಪುನೆಲಕೊನ್ನ
ವಾಲೇರುನೈನನು ವಿಭಜಿಸಿ ಪೇರು ಚಪ್ಪ ||
ಚಕ್ಕನೆ ಮೇದಿ ಚುರುಕ್ಕುನೊಕ್ಕು ಚು
ಮುಕ್ಕುವ ಲೇಚಟಿ ವಿಭೂದಿ ಪೇರು ಚಪ್ಪಾ ||

ವೇಡುತುಕೋ ಮುಚ್ಚಟಾಡಾ ಮನಸೈನ ಚೇಡಿಯಾ ಇಂತ

ಆಡಿವಾರಲೋನ ಶಿಗ್ಗೋಯನೋಯಂ…

ಹಾಸ್ಯಂ : ಎಲ್ಲಿ ಹೋದರು…

ಭಾಮೆ : ಎಲ್ಲಿ ಹೋದರು…ನನ್ನನ್ನು ಮರೆಯಬಹುದೇ ಅವರು…

(ನೃತ್ಯ )

ಆದಿತಾಳ ಆನಂದ ಭೈರವಿ–
ಮದನಾ-ಮ-ದ-ನಾ-ಮದನಾ-ಅನುಚುನು
ಮದನಗೋಪಾಲಾ ಮರುದದೇಲರಾ ಸಮಿ
ಮಾರುನಿ ಶರಮುಲ ಬಾರಿಕೋರ್ವಗ ತೀರಾ|| ಮದನಾ ||
ಚುಕ್ಕಲರಾಯಿಡು ಮುಕ್ಕುಲವೇರಿಡ
ನಿಕ್ಕುಚಿನಾತೋ ಏಕ ಸಕ್ಕೆಮ ಲಾಡೇ ಸಾಮಿ|| ಮದನಾ ||
ರಾಪ್ಪಾ ಜೇಯುಟ ಮೇಲಾ ರಾಜಗೋಪಾಲ
ನೆರಮುಲೆಂಚಕು ನೆರನಂಮ್ಮಿತಿನಿ ಸಾಮಿ|| ಮದನಾ ||
ಮದನಾ-ಮ-ದ-ನಾ-ಮ-ದ-ನಾ ಪನುಮುನು
ವದುಲಲೀದವಾನಿ ವಲಲೇ ಜಿಕ್ಕಿತಿ-
ನೌತಾಳಲೇನ-ಓಯಮ್ಮಾ
ಆದಿ ತಾಳ ತೋಡಿರಾಗ (ನೃತ್ಯ )
ರಂಗುಗನಾ ಮೆಡ ಮಂಗಳ ಸೂತ್ರಮು
ಪೊಂಗುಚುಗಟ್ಟಿನಾ ಸಂಗತಿ ಮರವಕು || ರಂ ||
ಶಯ್ಯಕುರಮ್ಮನಿ ಪಯ್ಯದಲೋಚೇಯಿ
ಪಿಯ್ಯಗವಚ್ಚಿಗ ಸಂಗತಿಮರವಕು || ರ ||
ಅಧರ ಸುಧಾರಸ ಮಧುರಮಂಗ್ರೋಲಗ
ಪ್ರಥಮ ಸಮಾಗಮ ವಿಧಮೆಲ್ಲ ಮರುವಕು || ರಂ ||
ಆಟಪಾಯಮುನ ತೋಟಗಕನ್ನು ಲಕಾಟುಕ
ದಿದ್ದಿನ ಕೂಟಮಿ ಮರವಕು || ರಂಗುಗನಾ ಮೆಡ ||
ಮೇಲಿನ ತೆಲಗು ಭಾಗದ ಸಾರಂಶ ಕನ್ನಡದಲ್ಲಿ ಹೀಗಿದೆ-

ಭಾಮೆ : ಆತನ ಹೆಸರನ್ನು ಹೇಳಲು ನಾಚಿಕೆ-ಹೇಗೆ ಹೇಳಲಿ ?

(ನೃತ್ಯದಲ್ಲಿ )

ವಾಸುದೇವನ ತನುಜ್ | ಜಗದಿ ಹಸುಗಳನ್ನು ಸಂರಕ್ಷಿಸಿದ ನನ್ನ
ಸ್ವಾಮಿಯ ಹೆಸರು ಹೇಳಲು ನಾಚಿಕೆ-| ನನಗೆ ನಾಚಿಕೆಯಮ್ಮಾ ||
ಸಂತೋಷದಿಂದ ನನ್ನೂಡನೆ ಕ್ರೀಡಿಸಿದ
ಸ್ನೇಹಿತನ ಹೆಸರು ಹೇಳಲು ನನಗೆ ನಾಚಿಕೆಯಮ್ಮಾ-

(ನಂತರ ವಿರಹ ಭಾವವನ್ನು ಸೂಚಿಸುವ ಅತ್ಯಂತ ಮೋಹಕ ನೃತ್ಯ)

ಆನಂದ ಭೈರವಿ-ಪಧ್ಯದ ಅರ್ಥ ಇಂತಿದೆ :
ಮದನ ಗೋಪಾಲಾ ರಾಜಗೋಪಾಲಾ ನೀ ಬಾರೋ
ಮಾರನ ಶರದಿಂದ ಜರ್ಜರಿತಳಾಗಿರುವೆ
ಬೇಗನೆ ಬಂದು ಅಪ್ಪು | ತಡವೇಕೆ | ನಿರ್ಲಕ್ಷಿಸಬಹುದೆ ಸ್ವಾಮಿ ||

(ನಂತರ ಹಳೆಯ ನೆನಹುಗಳನ್ನು ಅಶ್ರು ಕಣ್ಣುಗಳಿಂದ ಸೂಚಿಸುತ್ತಾ-)

ರಂಗುರಂಗಿನ ಮಂಗಲಸೂತ್ರವನ್ನು ಉತ್ಸಾಹದಿಂದ ಕಟ್ಟಿದ ಸಂಗತಿ ಮರೆತಿರಾ?
ಶಯ್ಯೆಯಲ್ಲಿ ರಮ್ಮನೆ ಕಮ್ಮಿಸಿದ ಸಂಗತಿಯನ್ನು ಮರೆತಿರಾ ?
ಪ್ರೇಮಕೇಳಿಯಲ್ಲಿ ಕಣ್ಣಿನ ಕಾಡಿಗೆಯನ್ನು ತೀಡಿದ್ದು ಮರೆತಿರ ?
ಹಾ-ವಿರಹಾ-ಹಾ-ವಿರಹ-ಮಾರಹರಣಕ್ಕಾಗಿ ಬೇಗ ಬಾರೋ
ಬೇಗ ಬಾರೋ ರಾಜಗೋಪಾಲ –

ಭಾಮೆ : ಹಾ ಕೃಷ್ಣಾ

ಹಾಸ್ಯಂ : ಹಾ ತಿಂಡಿಯೇ.

ಭಾಮೆ : ಹೇ ದ್ವಾರಕಾವಾಸಾ…

ಹಾಸ್ಯಂ : ಓ ಭಕ್ಷಗಳೇ …

ಭಾಮೆ : ಕಾಶಿಯಾದವ ನಂದನನೇ

ಹಾಸ್ಯಂ : ಸಾರಿನ ಕುವರನೇ

ಭಾಮೆ : ಓಯಮ್ಮಾ ಸ್ತ್ರೀಜನ್ಮವು ಎಂಥ ಪಾಪದ ಜನ್ಮವಮ್ಮಾ

ಹಾಸ್ಯಂ : ಛೀ ಛೀ.. ಅಪದ್ಧಂ, ಸ್ತ್ರೀ ಜನ್ಮ ಪಾಪದ ಜನ್ಮವಲ್ಲವಮ್ಮಾ, ಸ್ತ್ರೀ ಜನ್ಮಕ್ಕಿಂತ ಉತ್ತಮವಾದ ಜನ್ಮ ಇನ್ನಾವುದೆದಿ? ಆಭರಣ ಹಾಕಿಕೊಳ್ಳಬಹುದು, ನಗನಾಣ್ಯಗಳಿಂದ ಗರಿಕೊಳ್ಳಬಹುದು. ಹೆಂಗಸು ಎಲ್ಲರೊಂದಿಗೆ ಎಲ್ಲಲ್ಲೂ ಹೋಗಬಹುದು. ತಾಳಿ ನೋಡಿಕೊಂಡು ನಗುತ್ತಿರಬಹುದು. ಅಮ್ಮಾ ಕೋಪಿಸಿಕೋ ಬೇಡಮ್ಮಾ ಕೃಷ್ಣ ಮನೆಗೆ ಬಾರದಿರುವ ಕಾರಣವೇನಮ್ಮಾ…

ಭಾಮೆ : ಓ, ಆ ವಿಷಯವೇ…ಏಯಮ್ಮಾ… ಒಂದು ದಿನ ಕೇಳಿಕಾ ಗ್ರಹದ ಹಂಸ ತೂಲಿಕತಲ್ಪದಲ್ಲಿ ಇಬ್ಬರೂ ಇರಲು ಎದುರಿನ ದೊಡ್ಡ ನಿಲುಗನ್ನಡಿಯಲ್ಲಿಯ ಪ್ರತಿಬಿಂಬ ನೋಡಿ ಅವರು- ಭಾಮಾ ನೋಡಲ್ಲಿ ನಾನು ಚಲುವನೇ ನೀನು ಚಲುವಿಯೋ…

ಹಾಸ್ಯಂ : ಆ ವೇಳೆಯಲ್ಲಿ ನನ್ನ ಜ್ಞಾಪಕ ಬಂತೇ ನನ್ನ ಕರೆದಿದ್ದರೆ, ಅವರಿಗೆ ಬರೆ ಹಾಕಿ ಉತ್ತಾರಿಸಬಹುದಿತ್ತಾಲಾ…

ಭಾಮೆ : ಆಡ ಬುದ್ಧಿ ಅಪರ ಬುದ್ಧಿ ಕನುಕಾ…ಸ್ತ್ರೀ ಬುದ್ಧಿ ಅಪರಬುದ್ಧಿಯಲ್ಲಾವೇ? ನೀವೇ ಚಲುವಿನ ಖಣಿ ಎಂದೆನಮ್ಮಾ…

ಹಾಸ್ಯಂ : ಒಳ್ಳೇ ಕೆಲಸ ಮಾಡಿದಿರಿ… ಕೃಷ್ಣನ ಬಣ್ಣ ಎಂಥಾದೆಂಬುದನ್ನು ಮರೆತು…

ಭಾಮೆ : ಅವರ ಶರೀರ ಹೂವಿನಿಂದ ಅಲಂಕೃತವಾಗಿತ್ತು. ನಾರದರು ತಂದಿದ್ದ ಪಾರಿಜಾತದ ಪರಿಮಳ ಸೂಸುತ್ತಿತ್ತು…

ಹಾಸ್ಯಂ : ಓಯಮ್ಮಾ ಭಾಮಾ, ಮರೆತು ಹೋಯಿತು ನೋಡಿ… ನಾರದರು ಪಾರಿಜಾತ ತಂದಾಗ್ಗೆ ನಾನಲ್ಲಿದ್ದೆ.  ರುಕ್ಮಿಣಿಗೆ ಕೊಡುವೆ ಎಂದರು ಸ್ವಾಮಿ. ನಾನಿದ್ದು ಸ್ವಾಮೀ ಸತ್ಯಭಾಮಾ ದೇವಿಯವರಿಗೆ ಒಂದು ಹೂ ಕೊಡೀ ಅಂತ ಹೇಳಿದೆ ತಾಯೀ… ನನಗೆ ಹೊಡೆಯಲು ಬಂದರು…

ಭಾಮೆ : ಓ ನನ್ನ ಸ್ವಾಮಿ ಹೀಗೆ ಮಾಡಿದರೆ… ಅವರದು, ಮಾತು ನನ್ನೂಡನೆ; ಮನಸ್ಸು ರುಕ್ಮಿಣಿಯೊಡನೆ. ಅವರು ಕೋಪಿಸಿಕೊಂಡು ಹೊರಟು ಹೋದರು.

ಹಾಸ್ಯಂ : ಅಯ್ಯಯ್ಯೋ ಪಂಡಂಟಿಕಪುರಂ.. ಒಳ್ಳೇ ಮನೆತನ ಒಡೆದು ಹೋಯಿತು ತಾಯೀ… ಸಂಸಾರ ಚೂರುಚೂರು ಆಯಿತು… ಸಂಸಾರ ಒಡೆದು ಹೋಯಿತು.

ಭಾಮೆ : ಸ್ತ್ರೀ ಜನ್ಮದಂತಹ ಪಾಪಿ ಜನ್ಮ ಉಂಟೇ ಓಯಮ್ಮಾ… ಸ್ತ್ರೀ ಜನ್ಮ ಬಾಳೆಯ ಎಲಿಯಂತಹದು.

ಹಾಸ್ಯಂ : ಪುರುಷ ಜನ್ಮ

ಭಾಮೆ : ಪುರುಷ ಜನ್ಮ ಅತೀ ಕಾಠಿಣ್ಯತೆಯಿಂದ ಕೂಡಿದ ಮುಳ್ಳಿನಂತಹದು.

ಹಾಸ್ಯಂ : ಹೀಗಾದರೆ ನಾನೇನು ಹೇಳಲಿ. ಸ್ತ್ರೀ ಜನ್ಮವು ಪೂಪಮು ತಿಂಡಿಯಂತೆ ಪುರುಷ ಜನ್ಮವು ಮಡಿಕೆಯಂತಹುದು.

ಭಾಮೆ : ಓಯಮ್ಮಾ ಬಾಳೆಯ ಎಲಿಯ ಮೇಲೆ ಮುಳ್ಳು ಬಿದ್ದರೂ ಸರಿ, ಮುಳ್ಳಿನ ಮೇಲೆ ಎಲಿ ಬಿದ್ದರೂ ಸರಿ-ಎಲಿಗೇನೇ ತೊಂದರೆ-ಹೇಗಿದ್ದರೂ ಎಲಿಗೇನೆ ತೊಂದರೆಯಮ್ಮಾ…

ಹಾಸ್ಯಂ : (ಸಮಯನೋಡಿ ಮಾತಾಡಬೇಕಿತ್ತು..)

ಭಾಮೆ : ಅರಣ್ಯದಲ್ಲಿ ಬೆಳೆದ ಕುಸುಮ ವ್ಯರ್ಥ, ಕಾಡಿನಿಂದ ಹೂ ತಂದಾರೇನು? ಮುಡಿಯಲ್ಲಿ ಮುಡಿದಾರೇನು? ನನ್ನ ಜನ್ಮವು ವ್ಯರ್ಥವಾಯಿತಲ್ಲಮ್ಮಾ…

ಹಾಸ್ಯಂ : ನಿಜವನ್ನು ಹೇಳದೆ. ಅಡವಿಯ ಹೂ ಮುಡಿದಾರೇನು? ಅಂಗಳದಲ್ಲಿ ಬೆಳೆದ ಹೂವನ್ನೇ ಮುಡಿಯುತ್ತಾರೆ.

ಭಾಮೆ : ರಾತ್ರಿಯಲ್ಲಿ ನಕ್ಷತ್ರಗಳಿರುವುದು ವ್ಯರ್ಥ, ನಕ್ಷತ್ರಗಳಿದ್ದರೂ ಷೋಡಶ ಕಳಾ ಪ್ರಪೂರ್ಣ ಚಂದ್ರನಿಲ್ಲದ ರಾತ್ರಿ ವ್ಯರ್ಥ.

ಹಾಸ್ಯಂ : ಹಾಗನ್ನಕೂಡದು ಚಂದ್ರನಿಲ್ಲದ ರಾತ್ರಿ ಜಾರ, ಚೋರರಿಗೆ ಅತೀ ಅನುಕೂಲವಾದ ರಾತ್ರಿ…

ಭಾಮೆ : (ವೃಥಾ ನಿಷ್ಪಂಡಿತ ಸಭಾ! ಸಭೆಯೆಂದು ಪಂಡಿತ-ಲಂಡಿನಾ ಆ ನಾಟಿ ವಿಧ್ಯಾ ಪ್ರಸಂಗ ಮಲು ರಮ್ಯತಾ ನೇವೆರಗುವುದು ಅದೇ) ಪಂಡಿತರಿಲ್ಲದ ಸಭೆ ವ್ಯರ್ಥ, ಸಭೆಯಲ್ಲಿ ಪಂಡಿತರಿದ್ದರೆ ಈ ನಾಟ ವಿಧ್ಯಾ ಪ್ರಸಂಗದ ರಮ್ಯತೆ ನಿನಗೆ ತಿಳಿಯುವುದು.

ಹಾಸ್ಯಂ : ಊಟಕ್ಕೆ ಮಾತ್ರ ಕರಿಯಲಿಲ್ಲವಲ್ಲ ಬ್ರಾಹ್ಮಣನನ್ನು…ವಿಷ್ಣು ಅಲಂಕಾರಪ್ರಿಯ! ಈಶ್ವರ ಅಭಿಷೇಕ ಪ್ರಿಯ!

ಬ್ರಾಹ್ಮಣೋ ಭೋಜನಪ್ರಿಯ ! ಹೀಗಂತ ದೊಡ್ಡವರು ಹೇಳಿದ್ದಾರೆ.

ಭಾಮೆ : (ವೃಥಾ ನಿಷ್ಕಾಣ್ತ ಯೌವ್ವನಂ | ಮನವಂಟಿಯವ್ವನಮೌನಾ ಸ್ತ್ರೀಲಕು ಪುರುಷಡು ದಗ್ಗರಲೇಕುನ್ನಾ ವೃಥಾಕಾದಟೆ ಓಯಮ್ಮಾ ಪುರುಷರಿಲ್ಲದ ಸ್ತ್ರೀ ಜನ್ಮ ವ್ಯರ್ಥ…

ಹಾಸ್ಯಂ : ಏನಿದು ನನ್ನನ್ನೂ ಸೇರಿಸಿಕೊಂಡು ಇಂಥ ಮಾತು ನನ್ನತ್ರ ಹೇಳಬೇಡಾ… (ಕೋಪದ ಅಭಿನಯ..)

ಭಾಮೆ : ಮಾತಿನಿಂದಲೇ ನಿನಗೆ ಕೋಪವೇ ? ಏನಮಾತು ಬಂದಿದೆ ಅಂತss

ಹಾಸ್ಯಂ : ನಾನು ಸುಮ್ಮನಿದ್ದರೆ ನೀನು ಇನ್ನೊಂದು ಮತ್ತೊಂದು ಹೇಳುತ್ತಾ ಹೋಗುವಿ.

ಭಾಮೆ : ನೀನಗೇಕೆ ಕೋಪ ಮಂದಯಾನಿ

ಹಾಸ್ಯಂ : ಎರಡು ಮಾತಾಯಿತು…ಏನೇನು ಹೇಳುವೆ ಎಲ್ಲಾ ಹೇಳು

ಭಾಮೆ : ಮಂದಯಾನವ್ವತೋ ಮಂದಲಿಡಿ ಮೊಂದಿದಾನಿಂದು ರಾನಿವ್ವಡೆವೂ ಮಂದಯಾನೀ ನೀನಂದಕು ಕೋಪಮು ನೀವಿಂದು ರಾಗದ ರಾವೇ ಮಂದಯಾನೀ…) ಓಯಮ್ಮಾ ನಿನ್ನ ಹೇಸರೇನಮ್ಮಾ

ಹಾಸ್ಯಂ : ನೀಲವೇಣಿ, ಯಾಕಂದ್ರೆ ನನ್ನ ಕೂದಲಿನ ಸೌಂದರ್ಯ ನೋಡಿ ನನ್ನ ಗಂಡ ಪ್ರೇಮದಿಂದ ಈ ಹೆಸರು ಇಟ್ಟಿದ್ದಾರೆ-ನನ್ನ ಕೂದಲ ಎಷ್ಟು ಉದ್ದವಾಗಿದೆಯೆಂದರೆ ಕೂದಲು ಸೊಂಟದಾಟಿ ಮಾರುದ್ಧ ಉದ್ದವಾಗಿದೆ.

ಭಾಮೆ : (ನೀಲವೇಣಿ, ನೀವಿಂದು ರಾವೇ ನೀಲವೇಣಿ ರಾವೇ ಜಾಲಮಿಟು ಸೈಯಕಾ)- ನೀಲವೇಣಿಯೇ ಬಾರೇ ಬಾಲಗೋಪಾಲನನ್ನು ಜೂತೆಯಲ್ಲಿ ಕರೆದುಕೊಂಡು ಬಾ; ಹೋಗು

ಹಾಸ್ಯಂ : ನಾನು ಬರೋದಿಲ್ಲಮ್ಮಾ

ಭಾಮೆ : ಹಾ… ನಾನೇನು ಮಾಡಲಮ್ಮಾ ನಾನೇನು ಮಾಡಲಿ ಅವರು ಬರಲು ರಾಧೆ ಅಡ್ಡಿ ಮಾಡಿದ್ದಾಳೋ, ರುಕ್ಮಿಣಿಯು ಮೋಸಮಾಡಿರುವಳೋ, ಮಿತ್ರಮಿಂದಾ ಓ ವಿಚಿತ್ರವೇನು… ಸುನಂದಾ, ಆನಂದಮೇಮು ಲಕ್ಷಣ… ಅವರು ಕಾಠಿಣ್ಯಗೊಂಡಿದ್ದಾರೆ.  ಈ ವಿರಹಾಗ್ನಿ ತಡೆಯಲಾರೆ,

ಕಿಲಾಡಿ ರುಕ್ಮಿಣಿಯೇ…
ಕಾಮನು ತನ್ನ ಸಹಚರರೂಡನೆ ನನ್ನನ್ನು ಮುತ್ತಿದ್ದಾನೆ
ನನ್ನನ್ನು ಗಾಸಿಗೊಳಿಸಿದ್ದಾನೆ ಏನು ಮಾಡಲಿ… ಏನು ಮಾಡಲಿ-
ಕಾಮಿನಿ ಬಲಮುಲು ಗ್ರಮ್ಮಕುವಚ್ಚೆನು
ತಕಿಟ ಥಿಕಿಟ ತೋಂಗಿಟ ನಾಂಗಿಟ ಝಂಝಂಝಮ್ಮನ
ತುಮ್ಮದಲು
ತಾದಿನ್ನ ತದ್ದಿನ್ನ ತದ್ದಿನ್ನ ತಕದಿನ್ನ
ಕುಹೂ ಕುಹೂ ಎಂದು ಕೂಗುವ ಕೋಗಿಲೆ
ಕಿಚಿ ಕಿಚಿಲಾಡುವ ಗಿಳಿ
ತದ್ಧಿಂಕ ತದ್ಧಿಂತ ತದ್ಧಿಂತ; ಕಾಮನು ತನ್ನ ಪಂಚಬಾಣಗಳಿಂದ ನನ್ನನ್ನು ಗಾಯಗೊಳಿಸಿದ್ದಾನೆ..

ಭೂಮಿಯಲ್ಲಿ ಸ್ತ್ರೀ ಜನ್ಮ ಹೊಂದುವುದು ಎಂಥ ಪಾಪದ ಕಾರ್ಯವಮ್ಮಾ? ಕಾಮನ ಬಾಣದಿಂದ ಜರ್ಜಿರಿತಳಾದ ನಾನೇನು ಹೇಳಲಿ? ನನ್ನ ಹಣೆಯಲ್ಲಿ ಆ ಬ್ರಹ್ಮನು ಏನು ಬರೆದಿರುವುನೋ ತಿಳಿಯದು, ಎಂದು ನಂದಗೋಪಾಲನನ್ನು ರಾಜಗೋಪಾಲನನ್ನು ವಿವಿಧ ರೀತಿಯಲ್ಲಿ ಹಾಡಿ ಹೊಗಳಿ, ಎಂದು ವೇಣುನಾದವು ಕಿವಿಯ ಮೇಲೆ ಬೀಳುವಂತಾಗುವುದೋ, ಕರುಣಿಸು ಪ್ರಾಣಪ್ರಿಯಾ, ನಿಜವಾಗಿಯೂ ನನ್ನ ಮೇಲೆ ನಿನ್ನ ಮನಸ್ಸಿಲ್ಲವೇ… ನನ್ನ ಚಿಂತೆ ಹೋಗುವಂತೆ ನೀನು ನನ್ನ ಕಾಪಾಡು-ರಕ್ಷಿಸು…ಸಿದ್ದೇಂದ್ರು ನಿಪಾಲನ-ಶ್ರೀಧರ; ಈಗಲೇ ಬಂದು ರಕ್ಷಿಸು.

ಹಾಸ್ಯಂ : (ಮೇಲಿನ ನೃತ್ಯಕ್ಕೆ, ಪದ್ಯದ ಪದಗಳಿಗೆ ಸಮಾಂತರವಾಗಿ ತಿಂಡಿಗಳ ಹೆಸರುಗಳನ್ನು ಹೇಳುತ್ತ ಹೆಜ್ಜೆ ಹಾಕುತ್ತಾನೆ..)

ಕಂದಿಪಪ್ಪು ನಿನ್ನ ನೆಗೆನೆಗೆದು ತಿನ್ನುವೆ  ಹೊಟ್ಟೆ ತುಂಬಾ ತಿನ್ನುವೆ ಅಗಿದು ತಿನ್ನುವೆ, ಜಿಗಿದು ತಿನ್ನುವೆ, ಭೋಜನ-ಛಪ್ಪರಿಸಿ… ಗಾರಿಗೆಯ ಹಾರ ಹಾಕಿಕೊಂಡು, ತಿಂಡಿಯ ಗುಡ್ಡೆ ಹಾಕಿಕೊಂಡು ತಿನ್ನುವೆ…ಕುಡಿಯುವೆ ನಾ ಪಾಯಸವ ತಾದಿನ್ನ  ಟಿಕ ಥ ಥ ದಿನ ಥ

ಭಾಮೆ : (ನಮ್ರಳಾಗಿ) ಓಯಮ್ಮಾ ಅಲ್ಲಿಯವರೆಗೆ ಹೋಗಿ ಬಾಮ್ಮಾ,

ಹಾಸ್ಯಂ : (ಹೆಜ್ಜೆ ಹಾಕಿ ಸುತ್ತಿ) ಹೋಗಿದ್ದು ಆಯಿತು-ಬಂದದ್ದೂ ಆಯಿತು.

ಭಾಮೆ : ಅದು ಕಾದಮ್ಮ, ಹಾಗಲ್ಲಮ್ಮಾ… ಸ್ವಾಮಿಯರಲ್ಲಿಗೆ ಹೋಗಿ ಬಾ…

ಹಾಸ್ಯಂ : ಈ ಅರ್ಧ ರಾತ್ರಿಯಲ್ಲಿಯೇ? ಒಲ್ಲೆ ನಮ್ಮವ್ವ…ಒಲ್ಲೆ…ಬಾಗಿಲಾ ಒದ್ದು ಏಳಿಸಲಾರೆ ನನ್ನ ತಾಯಿ…

ಭಾಮೆ : ದ್ವಾರಕಾಕ್ಕೆ ಹೋಗಿ ಬಾ

ಹಾಸ್ಯಂ : ಅಲ್ಲಿ ಉದ್ದನೆಯ ನಾಯಿಗಳು ಕಚ್ಚಿದರೆ ?

ಭಾಮೆ : ಸ್ವಾಮಿಯ ಅನುಸಂಧಾನಕ್ಕಾಗಿ ನೀನು ಹೋಗಿ ಬಾರೆ ರಾಯಭಾರಿಯಾಗಿ ಹೋಗಿ ಬಾರೆ.

ಹಾಸ್ಯಂ : ರಾಯಭಾರಿ…ಅದಾವುದಮ್ಮಾ ನನಗೆ ಗೊತ್ತಿಲ್ಲ.

ಭಾಮೆ : ಓಯಮ್ಮಾ ಮಧವಿ…ಪುಣ್ಯ ಬರುತ್ತೆ ಹೋಗಿ ಬಾ..

ಹಾಸ್ಯಂ : ಆಶೆ ಇದೆ. ಏನಾದರೂ ಪ್ರತಿಫಲ ಉಂಟಾ ?

ಭಾಮೆ : ಎಷ್ಟೋ ಆಭರಣಗಳಿವೆ ಹೊರಲಾರದಷ್ಟು ಇವೆ. .. ವಾರದ ಏಳು ದಿನಗಳಲ್ಲಿ ನಾನು ಬೇರೆ ಬೇರೆ ಆಭರಣಗಳನ್ನೇ ಹಾಕೋದು.

ಹಾಸ್ಯಂ : ಅತ್ತೀಮನಿಯವರು ಇಷ್ಟೂಂದು ಆಭರಣ ಹಾಕತಾರೇನು. ಯಾರರ ನಕ್ಕಾರು ನಿಮ್ಮಪ್ಪ ಶಮಂತಕ ಕಟ್ಲ, ಎಲ್ಲರೂ ದುರಶೆದವರೇ ಈ ದಿನಗಳಲ್ಲಿ.

ಭಾಮೆ : ಓಯಮ್ಮ ಮಾಧವಿ, ನಾನು ಧರಿಸುವ ಚಿನ್ನದ ಒಡವೆಗಳು ಏಳು ಪೆಟ್ಟಿಗೆ ತುಂಬಾ ತುಂಬಿದೆಯಮ್ಮಾ

ಹಾಸ್ಯಂ : ನಮ್ಮನೇಲಿ ತುಂಬಿವೆ ಏಳು ಪೆಟ್ಟಿಗೆಗಳು. ಒಂದರಲ್ಲಿ ಮೆಂತೆ, ಇನ್ನೂಂದರಲ್ಲಿ ಜೀರಿಗೆ, ಮಗದೂಂದರಲ್ಲಿ ಸಾಸವಿ, ಉಪ್ಪು, ಪಪ್ಪು ಬೇಳೆ, ಮೆಂತದ ಪಕ್ಕದಾಗ ಬೆಂಕಿಪೆಟ್ಟಿಗೆ.

ಭಾಮೆ : ಏಳು ಮುಸ್ತಾಬಾದ ಅವss

ಹಾಸ್ಯಂ : ಏಳು ಮುಸ್ತಾಲು ತಾನೆ… ಮುಸ್ತಾಬಾದ-ಹುಮ್ನಾಬಾದ ಹೈದ್ರಾಬಾದ, ಸಿಂಕದ್ರಾಬಾದ, ಕಿರೀಂದ್ರಾಬಾದ, ನಿಜಾಂಬಾದ-ಅಹಮ್ಮದಾಬಾದ

ಭಾಮೆ : ಮಸ್ತಿಬಾ ಅಂದ್ರೆ ಅವಲ್ಲ ಮಾಧವಿ-ಒಂದೂಂದು ವಾರಕ್ಕೆ ಆಯಾ ಗೃಹಕ್ಕೆ ತೃಪ್ತಿಯಾಗುವಂತಹ ಅದಿದೇವತೆಗೆ ಪ್ರತ್ಯಕ್ಷ ದೇವರಿಗೆ ಪ್ರೀತಿಯಾದ ಆಭರಣಗಳು, ಪೀತಾಂಬರಗಳು.

ಹಾಸ್ಯಂ : ನಮ್ಮ ಹೆಂಗಸರೂ ಉಡತಾರ ಅದೇ ಸೀರಿಯನ್ನೇ ಭಾನುವಾರದಿಂದ ಹಿಡಿದು ಶನಿವಾರದವರೆಗೆ ಅದನ್ನೇ ಉಡುತ್ತಾರೆ. ಭಾನುವಾರ ಅದ ಪೀತಾಂಬರ, ಮಂಗಳವಾರನೂ ಅದೇ ಪೀತಾಂಬರ…

ಭಾಮೆ : ಹೋಗಿ ಬಾಮ್ಮ

ಹಾಸ್ಯಂ : ಒಡವೆ ಕೊಟ್ಟರೇನೇ ನಾನು ಹೋಗುವವಳು

ಭಾಮೆ : ಯಾವ ಒಡವೆ ಕೊಡಲಿ ಮಧವಿ; ನನ್ನಲ್ಲಿ ಈಗ ಕೇತಕಿ ರಾಗಿಡಿ, ಚಂದ್ರವಂತ, ತಾಮಲಪಾಕು, ತಿತ್ತುರುಪೂವು ಮೊಗಳಿರೇಖು, ಸೂರ್ಯ ಚಂದ್ರುಲು ಪಾಪಿಡಿ ಬೊಟ್ಟ, ಪಾರ್ಪಿಶಿ ಬಿಂದಿನೀಲು, ರತ್ನಾಲಜಡ,  ಪಚ್ಚಲಪದಕಂ, ಒಡ್ದಾನಂ ಬುಲಾಕಿ, ಮುಕ್ಕಾಪುಡಕ ಮುಂಗೇರ… ಇಷ್ಟೇಲ್ಲ ಇವೆ… ಯಾವುದು ಬೇಕು ಕೇಳು ಮಾಧವಿ…

ಹಾಸ್ಯಂ : ಅದನ್ನ ಕೊಡತೀಯಾ ಅದನ್ನss (ಮೂಗಿನತ್ತ ಬೆರಳು ತೋರಿ) ಆ ನತ್ತನ್ನು ಕೊಟ್ಟರೆ ಒತ್ತಾಯದಿಂದ ಕರೆತರುವೆ.

ಭಾಮೆ : ಹರಿಹರಿ ಎಂಥ ಮಾತಿದು…ನತ್ತು ಕೊಡಲು ಆಗುತ್ತದೆಯೇ? ಅದನ್ನು ಹೇಗೆ ಕೊಡಲಿ ಮಾಧವಿ…

ಹಾಸ್ಯಂ : ಹರಹರ ಹೇಗೆ ಕೊಡಲಿ ಅಂತ ಅಂತೀಯಾ, ಅಷ್ಟಪಟ್ಟದರಾಣಿಯರು ಹದಿನಾರು ಸಹಸ್ರ ಗೋಪಿಯರ ಶಿರೋಭೂಷಣ ಆತ…ಅವರೆಲ್ಲರನ್ನು ತೊರೆದು, ಆತ, ನಿನ್ನಲ್ಲಿಗೆ ಬರುವಂತೆ ಮಾಡುವುದು ಸುಲಭವೆ..?

ಭಾಮೆ : ಮಾಧವಿ,  ಸ್ತ್ರೀ ಇಲ್ಲದ ಮನೆ, ಚತುರಂಗ ಬಲವಿಲ್ಲದ ಅರಸ ವಿದ್ವಾಂಸರ ಮಾತುಕೇಳದ ಮಂತ್ರಿ ಸ್ತ್ರೀ ರಹಿತ ಯೌವ್ವನ ಶಾಂತನಲ್ಲದ ತಪಸ್ವಿ-ಇವು ಹೇಗೆ ವ್ಯರ್ಥವೋ ಹಾಗೆಯೇ ನತ್ತು ಇಲ್ಲದ ಸ್ತ್ರೀ ಶೋಭಿಸಲಾರಳು. ಕಾರಣ ನತ್ತೇ ಭೂಷಣ…

ಹಾಸ್ಯಂ : ಬಿಡುss ಬಿಡುss ಏನು ಬೇಕಾದರೂ ಕೊಡುವೆ ಅನ್ನುವಿ ಕೇಳಿದರೆ; ಅದೇ ಸ್ತ್ರೀ ಗೆ ಭೂಷಣ ಅಂತಾ ಅಂತೀಯಾ, ಕೇಳಿದ್ದೊಂದು ಬಿಟ್ಟು ಉಳಿದದ್ದೆಲ್ಲ ಕೊಡಲೇ ಅನ್ನು ನವೇನು ಮೂರ್ಖರss ನಾವು ಕೇಳಿದ್ದು ಕೊಡೋದಿಲ್ಲ…

ಭಾಮೆ : ಸರಿಯಮ್ಮಾ ಮಾಧವಿ, ನತ್ತೇ ಕೊಡುವೆ, ನಿನಗೊಂದು ನಮಸ್ಕಾರ ಶೀಘ್ರವಾಗಿ ರಾಜಗೋಪಾಲನಲ್ಲಿಗೆ ಹೋಗಿ ಬಾರೇ.

ಹಾಸ್ಯಂ : ತಪ್ಪದೆ, ಹೋಗುವೆ ನೀನು ಹೇಳಿದ್ದು ನನಗೆ ಜ್ಞಾಪಕಹಾರಬಹುದು ಅಂತಾ ಸಂದೇಹ… ನನಗೆ ಮರುವು ಜಾಸ್ತಿ.

ಭಾಮೆ : ಓಯಮ್ಮ, ಪತ್ರಿಕೆ ಬರೆದು ಕೊಡುವೆ

ಹಾಸ್ಯಂ : ಅಂತಹ ಪತ್ರಿಕೆ ಎತ್ತಿಕೊಂಡು ಹೋಗಲು ನಾನೇನು ಮಠದ ಬ್ರಾಹ್ಮಣನೇ ?

ಭಾಮೆ : ಚೀಟಿ ಬರೆದು ಕೊಡುವೆ

ಹಾಸ್ಯಂ : ಅದು ಕೋಮಟಿ ಗುಮಾಸ್ತನ ಕೆಲಸ…

ಭಾಮೆ : ಈ ಮಾತು ಚಿನ್ನಾಗಿದೆ. ನನಗೆ ತೃಪ್ತಿಯಾಗುವಷ್ಟು ತಿಂಡಿ, ದೋಸೆ, ವಡೆ, ಇಡ್ಲಿ ಯಾವುದಾದರೂ ಸರಿ, ಯೋಗ್ಯ ಬಹುಮಾನ ಬಂದರೇನೇ ನಾನು ಕೆಲಸ ಮಾಡೋದು.

ಭಾಮೆ : ಓದಲು, ಬರೆಯಲು ದಕ್ಷಿಣಕ್ಕೆ ಮುಖ ಮಾದುವುದು ಸರಿಯಲ್ಲಮ್ಮಾ; ಶಾರದೆ ಕೂಡ ದಕ್ಷಿಣಕ್ಕೆ ಮುಖ ಮಾಡಿ ಬರೆದರೆ ಬರವಣಿಗೆ ತಪ್ಪೇ ತಪ್ಪುವುದಮ್ಮಾ

(ಅಕ್ಷರವಂತುಡನೈನನು | ಲಕ್ಷಣಮುಗ
ಬ್ರಮಜದೂವರಾದು ಯಮದಿಶಿನ್
ಕಕ್ಷಗಶಾರದಯೈನನು
ಕಕ್ಷಿಣ ಮುಖಮುಗನು ವ್ರಾಯ ತಪ್ಪಲು ವಚ್ಚುನು )