ಹಾಸ್ಯಂ : ಕೊಡುವವನು ಸಾಕಷ್ಟು ಹಣ ಕೊಡದಿದ್ದರೆ ದಕ್ಷಿಣ ದಿಕ್ಕಿಗೆ ಮುಖಮಾಡೇ ಬರೆಯುವುದು.

ಭಾಮೆ : ಪಶ್ಚಿಮಕ್ಕೆ ಮುಖ ಮಾಡಿ ಕುಳಿತುಕೊಳ್ಳುವಿಯಾ… ಚನ್ನಾಗಿ ಬರೆಯುವವನು ಎಡಬದಿಯಲ್ಲಿ ವಿದ್ವಾಂಸರಿರಲು ಪಶ್ಚಿಮಕ್ಕೆ ಮುಖ ಮಾಡಿ ಬರೆಯುವುದು ಪ್ರಶಸ್ತಿ ಅಲ್ಲ.

ಹಾಸ್ಯಂ : ಆಲಸಿ ಲೇಖಕ ಅಥವಾ ಶೀಘ್ರ ಲೇಖಕನಿಗೆ, ಸಾಕಷ್ಟು ಹಣ ಕೊಡದಿದ್ದರೆ, ಕಷ್ಟ ಕೊಟ್ಟಾರೆ, ಪಶ್ಚಿಮಕ್ಕೆ ಮುಖ…

ಭಾಮೆ : ಓ ಮರಿವಂತ ಮಾಧವಿ, ಉತ್ತರಾಭಿಮುಖಮಾಡಿ ಕುಳಿತುಕೊಳ್ಳಲಾಗದು, ಉತ್ತರಾಭಿಮುಖ ಮಾಡಿ ಬರೆದರೆ, ತೊಂದರೆಯಮ್ಮಾ ತೊಂದರೆ, ಮನಕ್ಕೆ ರಂಜನೆ ಇಲ್ಲ, ಕಾರ್ಯ ನಿಧಾನ, ಉತ್ತರಕ್ಕೆ ಮುಖಬೇಡ.

ಹಾಸ್ಯಂ : ನಿರಾಸಕ್ತ ಸಮಯದಲ್ಲಿ ಚಿತ್ರಭ್ರಮೆಯಾದ ವೇಳೆಯಲ್ಲಿ ನಿಧಾನವಾಗಿ ಬರೆಯಲು ಉತ್ತರಾಭಿಮುಖವೇ ಉಚಿತವು…

ಭಾಮೆ : ನನಗೆ ಬೇಸರ ಮಾಡಬೇಡ, ಪೂರ್ವ ದಿಕ್ಕಿಗೆ ಮುಖಮಾಡಿ ಕುಳಿತುಕೋ. ವಿದ್ವಾಂಸರು, ಪರಿಣಿತರು, ಮನಸ್ವಾಸ್ಥ್ಯಯಿಲ್ಲದಿದ್ದರೂ ಧೈರ್ಯವಿಲ್ಲದಿದ್ದರೂ ಪೂರ್ವಕ್ಕೆ ಮುಖಮಾಡಿ ಬರೆದ ಅದಕ್ಕೆ ಜಗದಲ್ಲಿ ಪ್ರಶಸ್ತಿ ಉಂಟಮ್ಮ ಮಾಧವಿ…

ಹಾಸ್ಯಂ : ಯುದ್ಧ ಸಮಯದಲ್ಲಾದರೂ, ತಲೆನೋವು ಬಂದಗ್ಯೂ ಧೈರ್ಯ ಇಲ್ಲದಿದ್ದರೂ ಪೂರ್ವಕ್ಕೆ ಮುಖಮಾಡಿ ಬರೆದರೆ ಲೇಖನಕ್ಕೆ ಅಂತ್ಯವೇ ಇಲ್ಲ.

ಭಾಮೆ : ಓಯಮ್ಮಾ ಹೇಳುವೆ ಬರೆಯಮ್ಮ

ಶ್ರೀಮದ್ ರತ್ನಾಕರ ಪುತ್ರಿಕ, ಮುಖಾರವಿಂದ, ಮಕರಂದ ಪಾನಃ ವಿನಿಶಿತಮಿಳಿಂದಾಯಮಾನ, ನಂದನಂದನ, ಮುಚಕುಂದ ವರದನ್ ಮಂದ ರೋದ್ಧಾರ ಪರಿಹಸಿತ್ ರಾಕಾ ಸುಧಾಕರ, ಸುಂದರ ವದನಾರವಿಂದಡಗು ಶ್ರೀ ರಾಜಗೋಪಾಲಸ್ವಾಮಿವಾರಿ ಚರಣಾರವಿಂದಂಬಲಕು :

ಸತ್ಯಭಾಮ ನಿಟಿಲ ತಟಿಷಟಿತ ಕರಕಮಲಮೈ ಅನೇಕ ಸಾಷ್ಟಾಂಗ ದಂಡ ಪ್ರಾಮಾಣಂಬುಲು ಅಚರಿಂಚೆ, ಚೈಯಂಗಲ ವಿಜ್ಞಾಪನಮುಲು, ಮಂಜನ ಕುಂಡಗು ಸತ್ರಜಿತ್ತನನ್ನು ಮೀಕೀಚಿ ವಿವಾಹಂಬುವನರಂಚಿನ ಪ್ರಭುತಿ ವಜ್ರವೈಢೂರ್ಯ, ನೀಲಭೋಮೋದಿಕ ಪುಷ್ಪರಾಗ ಸ್ಥಗಿತ, ಪದ್ಮರಾಗ, ಮರಕತ. ಮಹಾಬಲಾದಿ ಸಕಲ ವಿಕಲ್ಪಿತ ನಾನವಿಧ ಚಿತ್ರವಿಚಿತ್ರ ಜಾಂಬೂನದ ರತ್ನನಿರ್ಮತಂಬುಗು ಹಂಸತೂರಿಕಾತಲ್ಪಂಬುನ ದಿವ್ಯಮಂಗಳ ವಿಗ್ರಹಾಕಾರುಲೈ ಘಾಡಾಲಿಂಗನಂ ವನಚ್ಚಿಯುಪರತಿ. ಸಮರತುಲನ್ ತೇಲಚ್ಚು ಆಹ್ಲಾದಂಬು ಉಂದು ಚುನ್ನ ತಮಚಿತ್ತೆಂಬು ರುಕ್ಮಣೀಸತಿಯಂದು ಸಂಪೂರ್ಣವಂಬುಗಾ ಉನಿಚಿ ಪ್ರಾಣಸಖಿನಗು ನಾಯಂದು ನಿರ್ದಯತ್ವಮುನಾ ಕಠಿಣಮನಸ್ಕಲೈ ವಿಡನಾಡಿ ಉನ್ನನಾಟಿನುಂಡೀ ಮಾರುಂಡು ಕ್ರೂರುಂಡಯ್ಯ ನಿಶಿತ ಕುಸುವಶರ ಘಾತಂಬುಲು ಹೃದಯಂಬು ಭಿನಾಂಬುಗಾ ನೋನರ್ಚೆಕೀರಂಬುಲು ಕ್ರೂರಂಬುಲೈ, ಅವ್ವಾರಿತಂಬುಗಾ ನದಂಬುಲುಚೈಚೂಡೆ ಸುಕಪಿಕ ನಿಕರಂಬುಲು ವಕಿಂಚುಕ ಕರುಣಿಂಜಿಕ ಕುವಯಾದೊಡಗೆ ತಮ್ಮಂದಲು ತಲೆದಿಮ್ಮಪುಟ್ಟಿಂಚೆ ಚಂದ್ರುಡು ನಲುಂಡಾಯೊ ಮಲಯಾನಿಲವುಂಡು ಕಾಲಾಂತ ಕುಂಡಾಯೆ. ನನ್ನೀಕ್ರೂರತ್ಮುಲ ಭಾರೀನ್ ಬಡದ್ರೋಶಿ, ಮನ್ಮಮಂದಿರ ಮುಲಕನ್ ವಿಚ್ಛೇಯಕಾ ನಾವಂಟಿಯ ಬಲಯಡ ಚಲಮು ಪೂನಟಿ ಧಮಣಬು ಕಾದು  ತಾವುನನನ್ನು ಕರುಣಿಂಚಿ ಇಟುಕು ಪ್ರಾರ್ಥಿಯಿಣಿ ಮಕರ ಕೇತನ ಕೇಳಿನ್ ತನಿಸಿ ಸಂತಸಂಬುವನರಿಂಪ ಪ್ರಾರ್ಥಿತು ರಾಲ; ಚಿತ್ತಜುನಿ ಬಾರಿಕೋರ್ವಕ  ತತ್ತರಪಡಿ ವ್ರಾಸಿನಾನು ತಪ್ಪೊಪ್ಪೊ ಚಿತ್ತಮುನ ಕೋಪಮಯಂಚಕ ಇತ್ತರಿ ಪ್ರೊವಂಗ ರಾವೇಯಿವಿಯೇ ಪ್ರಾಣತುಲ್ ಚಿತ್ತಗಿಂಚಲವನು ಇಟ್ಲು ಪ್ರಾಣಿಸಖಿ ಸತ್ಯಬಾಮ ಶ್ರೀಮದ್ ರತ್ನಾಕರಪುತ್ರ, ಮುಖಕಮಲದಿಂದೊಡಗೂಡಿದ, ನಂದನತಯ ಮುಚಕುಂದನ ವಂಶೋದ್ಧಾರಮಾಡಿದ, ಸುಂದರ ಮುಖಹೊಂದಿದ ಶ್ರೀ ರಾಜಗೋಪಾಲ ಸ್ವಾಮಿಯವರ ಚರಣಾರವಿಂದಗಳಲ್ಲಿ ಎರಡೂ ಕೈ ಮುಗಿದು ಅನೇಕ ಶಿರಸಾಷ್ಟಾಂಗ ನಮಸ್ಕಾರಗಳನ್ನು ಹಾಕಿ ಸತ್ಯಭಾಮೆಯ ವಿಜ್ಞಾಪನವೇನಂದರೆ; ಮಂಗಲ ಸ್ನಾನಮಾಡಿ ಸತ್ರಾಜಿತ ಪುತ್ರಿಯಾದ ನನ್ನನ್ನು ವರಸಿದ ಸ್ವಾಮಿಯೇ, ವಜ್ರವೈಡೂರ್ಯ ಪುಷ್ಪರಾಗ, ಪದ್ಮರಾಗ, ಮರಕರ, ನಾನಾ ಚಿತ್ರವಿಚಿತ್ರ ರತ್ನಂಗಳಿಂದ ಕೂಡಿದ ಹಂಸತೂಲಿಕಾ ಕಲ್ಪದ ಮೇಲೆ, ದಿವ್ಯ ಮಂಗಳ ಆಕಾರ ಹೊಂದಿದ ತಾವು ಗಾಢಾಲಿಂಗನವನ್ನು ಕೊಟ್ಟು  ರತಿಕೇಳಿಯಲ್ಲಿ ವಿಹರಿಸಿ ಆಹ್ಲಾದವನ್ನುಂಟು ಮಾಡುವ ತಾವು, ನಿರ್ದಯರಾಗಿ ರುಕ್ಮಿಣಿ ಸತಿಯೊಡನಿದ್ದು, ಪ್ರಾಣ ಸಖಿಯಾದ ನನ್ನನ್ನು ನಿರ್ದಯರಾಗಿ, ಕಠಿಣ ಮನಸ್ಸಿನವರಾಗಿ, ಮಾರನ ಕ್ರೂರ ಅಂಬುಗಳ ಹೊಡೆತದಿಂದ ಜರ್ಜರಿತಳಾದ, ಕುಸುಮ ಶರನಿಂದ ಘಾತವಾದ ಹೃದಯ ಹೊಂದಿದ ನನಗೆ ಗಿಣಿಯ ಕೂಗು ಕ್ರೂರವಾಗಿದೆ, ಕರುಣಿಸೆಯಾ? ದುಂಬಿಯ ಝೇಣ್ಕಾರ ತಲೆದಿಮ್ಮೆನಿಸಿದೆ, ಚಂದ್ರನ ತಂಬೆಳಕು, ಮಂದ ಮಾರುತ ಒವೆನಗೆ ಯಮವಾಗಿ ನಿಂತಿವೆ ಸ್ವಾಮಿ, ಕಿಂಚಿತ ಕರುಣೆಯಿಂದ ಈ ಕಿಂಕರ ಪತ್ನಿಯನ್ನು ಕಾಯಬೇಕು. ಮನ್ಮಥ ಕೇಳಿಯಲ್ಲಿ ನನ್ನನ್ನು ಸಂತೈಯಿಸಿ ಪ್ರಾಣಹೋಗುವ ಮೂದಲೇ ಬಂದು, ಪ್ರಾಣಸಖಿಯನ್ನು ಉಳಿಸಿ… ಈ ವಿರಹಾಗ್ನಿ ತಡೆಯಲಾರೆನು ನಾನು, ಬಾ ಓಡಿ ಬಾ, ರಾಜ ನನ್ನ ರಾಜಗೋಪಾಲಾ ಇಂತು ತಮ್ಮ ಪ್ರಾಣಸಖಿ- ಸತ್ಯಭಾಮಾ.

ಹಾಸ್ಯಂ : ಕ್ಷುತ್ತನ ಪೊಂದೆಲೆ ಬಾಧಕು
ಕತ್ತರಿ ಪಡಿ ಪ್ರಾಸಿನಾನು ತಪ್ರೊಯಪ್ಪೆ
ಚಿತ್ತಮನ ಕೋಪಮುಯಾಂಚಕ್
ನೆತ್ತಿಲ ಧಕ್ಷಾಲಂಗಪಾ ನೇರ್ಪುನ ತೆಂಮ್ಮಾ ಇಟ್ಲು ಮಿತ್ರುಡು-ತಿಂಡಿಬೊಟ್ಲುವಾಲು
ಹಾ-ಹಾ-ತಿಂಡಿಯೇ ಮನದಲ್ಲಿ ಕೋಪಿಸದೆ
ಮಂಕರಿಮಂಕರಿಯಾಗಿ ನನ್ನ ಮುಂದೆ ಬೇಗನೆ
ಬನ್ನಿರೋ ಇಂತು ಮಿತ್ರ ತಿಂಡಿಪೋತ

ಭಾಮೆ : (ಕಾಂಬೋಜಿ ರಾಗತಿಶ್ರಚಾಪದಲ್ಲಿ)-ವಾದಬೇಡ ನತ್ತು ಕೊಡುವೆ- (ಎಂಬ ನೃತ್ಯದ ನಂತರ ) ಓಯಮ್ಮಾ ದಾರಿನೋಡಿಕೊಳ್ಳಮ್ಮಾ- ಶಕುನ ಚೆನ್ನಾಗಿದೆ

ಹಾಸ್ಯಂ : ಇಬ್ಬರು ಸುವಾಸಿನಿಯರು ಬರತಾ ಇದಾರೆ –

ಭಾಮೆ : ಹೌದಮಮ್ಮಾ ಸುವಾಸಿನಿಯರು, ತುಂಬಿದ ಕೊಡ, ಬ್ರಾಹ್ಮಣ, ಹಕ್ಕಿಯ ಉರಿಮೆ, ಎತ್ತಿನ ಗಂಟೆಯ ಸರದ ನಾದ-ಇವೆಲ್ಲಾ ಶುಭ ಶಕುನಗಳಮ್ಮಾ

ಹಾಸ್ಯಂ : ಹೌದಮ್ಮಾ (ಪೋದಮ್ ವಸ್ತವಾ-ಪದ್ದಿಬೊಟ್ಲು ಪೂದಂ ವಸ್ತಾವಾ) ಲಡ್ದು, ಕೋಡಬಳೆ, ನಿಪ್ಪಟ್ಟು ಇವೆಲ್ಲ ಎದುರಿಗೆ ಬಂದರೆ ಶುಭ ಶಕುನಗಳಮ್ಮ್…

(ಭಾಮಾ ಮತ್ತು ಹಾಸ್ಯಂ-ಇವರಿಂದ ಚಂದ್ರದೂಷಣ, ಮನ್ಮಥದೂಷಣ, ಸಾಂಗವಾಗಿ ಸವಿಸ್ತಾರವಾಗಿ ಸಾಗಿ ಮಂದುಲಪಟ್ಟು ಪ್ರಾರಂಭವಾಗುತ್ತದೆ.

ಮನ್ಮಥದೂಷಣದಲ್ಲಿ ಪಂಚಶರಗಳ ಪ್ರತಿಬಾಣದ ವರ್ಣನೆ, ಪದ ಲಾಲಿತ್ಯ ಅತ್ಯಂತ ಅಮೋಘವಾಗಿದೆ. ಲಯಬದ್ಧ ನೃತ್ಯ ನಯನ ಮನೋಹರ…

ಇಲ್ಲಿಯವರೆಗಿನ ಬಿಗುಮಾನದ ಭಾಮೆ ತನ್ನ ಗತಕಾಲದ ವರ್ತನೆಯನ್ನು ಜ್ಞಾಪಿಸಿಕೊಳ್ಳುತ್ತಾ..)

ಭಾಮೆ : ರಾಜಗೋಪಾಲನ ಪಾದಗಳನ್ನು ಒತ್ತಲಿಲ್ಲ, ಅವರಿಗೆ ಸ್ತನಗಳನ್ನು ಅರ್ಪಿಸಲಿಲ್ಲ, ಆಲಂಗಿಸಲಿಲ್ಲ- ನಾನು ಮೋಸಹೋದೆ- ಅಮ್ಮಾ ನಾನು ಮೋಸ ಹೋದೆ – ಆ ಮಾಟಗಾತಿ ರುಕ್ಮಿಣಿ ಮದ್ದು ಹಾಕಿದ್ದಾಳಮ್ಮಾ ನನ್ನ ಸ್ವಾಮಿಗೆ-ಅಯ್ಯೋ ನನ್ನ ಸ್ವಾಮಿ ಬಂಗರದಂತವರು.

ಹಾಸ್ಯಂ : ಅವಳು ಮದ್ದು ಕೊಡಲಿ, ಕೊಟ್ಟರೂ ಈತ ಹೇಗೆ ತಿಂದ ಅಂತಾ…

ಭಾಮೆ : ಎಲೆಯಡಿಕೆಯಲ್ಲಿ ಪಚ್ಚಕರ್ಪೂರದೊಂದಿಗೆ ಚಿಗುರು ಎಲೆಗಳಲ್ಲಿ ಅಡಗಿಸಿ ಕೊಟ್ಟಿದ್ದಾಳಮ್ಮಾ ಆ ನನ್ನ ಸವತಿ…

ಹಾಸ್ಯಂ : ಅಂಥಾ ಪಾಪವನ್ನೇಕೆ ಮಾಡಿದರೋ ? ಯಾರವಳೋ…?

ಭಾಮೆ : ಆ ರಾಧೆ, ರುಕ್ಮಿಣಿ, ಮಿತ್ರರಿಂದ, ಜಾಂಬುವತಿ-, ಸುನಂದ, ಲಕ್ಷ್ಮಣ ಭದ್ರ ಕಾಳಿಂದಿ. ಓಯಮ್ಮಾ ಮದ್ದು ಹಾಕುವ ವಿಧಾನವು ನಿನಗೇನಾದರೂ ಗೊತ್ತೇನಮ್ಮಾ

ಹಾಸ್ಯಂ : ನನಗೆ ಗೊತ್ತಿಲ್ಲ ತಾಯಿ. ನನಗೆ ಅಂತಹ ಪ್ರಸಂಗವೇ ಬಂದಿಲ್ಲ… ನಮ್ಮವರು ನನ್ನ ಬಿಟ್ಟು ಅತ್ತ ಇತ್ತ ಕೂಡ ಹೋಗೋದಿಲ್ಲ- ಯಾರನ್ನೂ ನೋಡೋದಿಲ್ಲ- ನಾ

ಹೇಳಿದಂಗ ಕೇಳತಾರ, ಕೂತಕೋ ಅಂದ್ರೆ ಕೂತಕೋತಾರೆ; ನಿಂತಕೋ ಅಂದ್ರ ನಿಂತಕೋತಾರ. ಗಟ್ಟಿಯಾಗಿ ಅವರ ಜುಟ್ಟು ನನ್ನ ಕೈಯಲ್ಲಿಯೇ ಇದೆ. ನಿನ್ನಂತ ಮೂರ್ಖಳು ನಾನಲ್ಲ…

ಭಾಮೆ : (ಜಿಲ್ಲಿಡು ಮೊಗ್ಗ ಶಂಖಪಡೆ ಜೀಲಗ ಪತ್ರರಸಂಬು ಪುಪ್ಪುಡಿದಿನ್ ನಲ್ಲಿನಿ ಜೀಲಗರ ನವನಾರಿಜ ಬೇರನು ಶುಂಠಿ ಮಿರ್ಯಮುಲ್ ಚಲತೋನೂರಿ ನಾ ಸವತಿ ಚಾಟುಗ ವೀಡಮನುಂಚಿ ಇಚ್ಚನೇ ಎಲ್ಲಭುನನ್ನು ಕೊಲ್ಪಡಿಕೆ ವಾನಿಕಿ ಏನುಪಾಯಮೇ ಚಲಿ..) ಮಾಧವಿ–ಜೀರಿಗೆ. ಶಂಖುಪಡೆಯ ಚೂರ್ಣವನ್ನು ಕಪ್ಪು ಮೆಣಸು ನವನಾರಿಜದ ಬೇರು, ಶುಂಠಿ ಇವುಗಳಿಂದ ಮಾಡಿದ ಮದ್ದನ್ನು, ನನ್ನ ಸವತಿ ಕೊಟ್ಟಿದ್ದಾಳೆ… ಮಾಧವೀ ಇದಕ್ಕೇನುಪಾಯವೇ? ನನ್ನ ಪ್ರಾಣಸಖನ ತಲೆಗೇರಿದ ಮದ್ದು ನಿನಗೇನದರೂ ಗೊತ್ತುಂಟಾ? ರುಕ್ಮಿಣಿಯವರಂತವರು ಪ್ರಪಂಚದಲ್ಲಿ ಇರಲು ನಾನು ಬಾಳಲೆಂತು? ಸಿದ್ದೇಂದ್ರವಾಸಾ, ಸ್ವಾಮಿಗೆ ರತಿಕೇಳಿಯ ಸಮಯದಲ್ಲಿ ವೀಳೆಯದೊಂದಿಗೆ ಮದ್ದು ಕೊಟ್ಟಿದ್ದಾಳೆ ಆ ನನ್ನ ಸವತಿ-. ನಾನೇನು ಮಾಡಲಿ ಪ್ರತಿ ಮದ್ದು ಗೊತ್ತುಂಟಾ?

ಹಾಸ್ಯಂ : ನನಗೆ ಗೊತ್ತಿಲ್ಲಮ್ಮಾ… ನನ್ನ ಭಾವನ ಹೆಂಡತಿ ಹೇಳಿದ್ದು…ಬಳಿಚೂರಿನ ಹುಡಿ, ಒಂದು ಸೇರು ಎಣ್ಣಿ , ಕೆಂಪು ಮದ್ದು , ಗನ್ನೇರು ಕಾಯಿ , ಬೆಲ್ಲ ಎಲ್ಲಾ ಸೇರಿಸಿ ಮಿಶ್ರಮಾಡಿ-

ಭಾಮೆ : ಓಯಮ್ಮಾ ಎಂಥ ಧೈರ್ಯಶಾಲಿಯೇ ನೀನು , ವಶೀಕರಣ ತಿಳಿಯದೇನಮ್ಮಾ–ಗರೀಕೆ ಬೇರು , ನಿಂಬೆ ಎಲೆ , ಕರ್ಪೂರ , ಶುಂಠಿ , ದಾಳೀಂಬೆ ಹೂ, ಚೂರ್ಣ ಮಾಡಿ , ತೆನೆಯಲ್ಲಿ ಸೇರಿಸಿ ಅರ್ಕ ತೆಗೆದುಕೊಂಡು ತಲೆಯ ಮೇಲೆ ಚಲ್ಲಿದರೆ ಕೋರಿಕೆಯು ಪೂರೈಯಿಸುತ್ತದಂತಮ್ಮಾ-ನನ್ನ ಸ್ವಾಮಿಗೆ ; ನನ್ನ ಕೊನೆಯ ಮಾತನ್ನು ಹೇಳಮ್ಮಾ- ಅವರು ಬಾರದಿದ್ದರೆ ನಾನು ಸತ್ತೇ ಹೋಗುವೆ , ಪಚ್ಚಕರ್ಪೂರ ತಿಂದು ಎದೆಗೆ ತಿವಿದುಕೊಳ್ಳುವೆ–ಬೆಳದಿಂಗಳಲ್ಲಿ ಮಲಗಿ ಸತ್ತು ಹೋಗುವೆ- ಹೆಣ್ಣು ಜನ್ಮ ಬಹಳ ಕೆಟ್ಟದ್ದು- ಬಹಳ ಕೆಟ್ಟದ್ದು ಕೊರಗಿ , ಕೊರಗಿ ಸತ್ತು ಹೋಗುವೆ- ರಾಜಗೋಪಾಲನಿಗೆ ನನ್ನ ವಿರಹವನ್ನು ಸಾದ್ಯಂತ  ತಿಳಿಸಮ್ಮಾ ಮಾಧವಿ–

(ಮಿಶ್ರಛಾಪು ತಾಳದ ತೋಡಿ ರಾಗದಲ್ಲಿ ವಿರಹದ ವರ್ಣನೆ ಭಾಮೆಯ ನೃತ್ಯದೊಂದಿಗೆ)

(ಇ ದೃಶ್ಯದಲ್ಲಿ ಕೃಷ್ಣನು ನರ್ತಿಸುತ್ತಾನೆ…ಕೃಷ್ಣನ ಆಗಮನವನ್ನು ಭಾಗವತನು ಕೇದಾರ ರಾಗದಲ್ಲಿ ನಂತರ ಕ್ಷೇತ್ರಯ್ಯ ಕವಿ ವಿರಚಿತ ಹಂಸಧ್ವನಿ

ರಾಗದಲ್ಲಿಯ ಹಾಡನ್ನು ಹಾಡುವನು… ಹಾಡು ಸಾಗಿದಣ್ತೆ ಕೃಷ್ಣನ ಪ್ರವೇಶ ಮತ್ತು ಕುಣಿತ)

ಕೈಯಲ್ಲಿ ಕಂಕನಗಳು ನಾದ ಮಾಡುತ್ತಿರಲು ,
ಕೌಸ್ತುಭಮಣಿ ಎದೆಯ ಮೇಲೆ ಮೆರೆಯುತ್ತಿರಲು
ಕಿವಿಯಲ್ಲಿಯ ಕರ್ಣಕುಂಡಲಗಳು ಪ್ರಕಾಶಮಾನವಾಗಿ ಹೊಳೆಯುತ್ತಿರಲು
ರಾಜಗೋಪಾಲನು ದಯಮಾಡಿಸುತ್ತಾ ಇದಾನೆ…

 

ಭಾಮೆಯ ವೇಷ-ಭೂಷಣ

ಕಿರೀಟದಲ್ಲಿಯ ವಜ್ರಗಳು ಥಳಿಥಳಿಸುತ್ತಿರುವ

ಎರಡೂ ಬಾಹುಗಳು ಭುಜಕಿರೀಟಗಳು ಮಿಂಚುತ್ತಿರುವ
ಶಾಂತ ಸ್ವರೂಪನು , ಸಿಂಧೂರ ತಿಲಕ ಧರಿಸಿದ
ಪೀತಾಂಬರಧಾರಿಯಾದ ಕುಚೀಲಪುರಿ
ರಾಜಗೋಪಾಲನು ದಯಮಾಡಿಸುತ್ತಾ ಇದಾನೆ….
ನಾರದ ಬಂದನೇಕೋ ! ಪಾರಿಜಾತವ ಕೊಟ್ಟನೇಕೋ
ಮಾನಿನಿ ರುಕ್ಮಿಣಿಗೆ ಅದನ್ನು ಕೊಡಲು ಯಾಕೆ ಹೇಳಿದನೋ
ನನಗೂ ಭಾಮೆಗೂ ವಿರಹವನ್ನು ತಂದಿಟ್ಟನೇಕೋ
ಆ ಕಪಟ ಬ್ರಹ್ಮಚಾ…
ಎಂದು ನಾನವಳನ್ನು ಕಾಣುವೆನೋ
ಅವಳನ್ನು ಕೂಡಲು ಮನಸ್ಸು ತಲ್ಲಣಿಸುತ್ತಿದೆ
ಆ ವಯ್ಯಾರಿ-ಎಂದು ಎದಿಗೆ ಆಲಂಗಿಸುವಳೋ
ಅವಳ ಕಪೋಲಗಳನ್ನು ಮುದ್ದಾಡುವುದೆಂದೋ
ಮುಖದ ಮೇಲೆ ಮುಖವಿಟ್ಟು ಅಧರಾಮೃತವನ್ನು
ಈಂಟುವುದೆಂದೋ…ಎಷ್ಟೂ ಸಲ ನನ್ನ
ಅವಳ ಮನಸ್ಸು ಒಂದುಗೂಡಿ ಕಾಮಶಾಸ್ತ್ರ ಓದಿ
ಕಥೆ ಹೇಳಿದ , ಕೇಳಿದ , ಆ ಕಾಮಿನಿ… ಭರದಿಂದ
ನನ್ನನ್ನು ಆಲಂಗಿಸುವುದೆಂದೋ…ಎಂದೋ…

[ಜೋಡುಗೂಡಿ ತೋಡಿರಾಗಮು ಪಾಡುಚು
ಮೇಡಪೈನುಂಡಿ ಮೇಲ ಮೇಲ ಮೇಲನುಚು
ವೇಡುಕತೋ ದಾನಿವಿಡುವಕ ಏತ್ವಡು
ತೋಡಾಬಂಗಾರು ತೂಗಿ ಉಯ್ಯಾಲಿ ಊಗೇದಿ
ಎನ್ನಿಟಿಗೋ ತೂಗು ಉಯ್ಯಾಲ ಊಗೇದಿ]

ಇಬ್ಬರೂ ಕೂಡಿ ಒಂದೇ ರಾಗವನ್ನು ಹಾಡುತ್ತ ಮೇಲುಪ್ಪರಿಗೆ ಸೇರಿ ತುಗು ಮಂಚದಲ್ಲಿ ಭಾಮೆಯನ್ನು ತೂಗುವುದು ಎಂದೋ…

ಹಾಸ್ಯಂ : (ದಂಡಮಯ ವಿಶ್ವಂಭರ
ದಂಡಮಯ ಪುಂಡರೀಕದಳನೇತ್ರ ಹರಿ
ದಂಡಮಯ ಇಪ್ಪಡು ನೀಕು ದಂಡಮು ಕೃಷ್ಣಾ… (ಪೋತನ)
ವಿಶ್ವಂಧರ ನಿನಗೆ ವಂದನೆ , ಪುಂಡರೀಕಾಕ್ಷನೆ ನಿನಗೆ ವಂದನೆ, ಕರುಣ
ನಿಧಿಯೇ ನಿನಗೆ ವಂದನೆ, ಇಂದು ನಿನಗೆ ನಮೋನಮೋ…

ಕೃಷ್ಣ : ಮಾಧವಿ…ಏನಿಲ್ಲ…ಸತ್ಯಭಾಮೆಯು ಚನಾಗಿದ್ದಾಳೆಯೇ…

ಹಾಸ್ಯಂ : ಸ್ವಾಮಿ… ಈ ಮಾತನ್ನು ತಾವು ಹೇಳುವಿರಾ… ಎಷ್ಟು ದಿನವಾಗಿದೆ ಆ ಮಾತು ಕೇಳಿ… ಅಂಥ ಭಾಗ್ಯ ಕೂಡ ಸತ್ಯಭಾಮೆಗಿಲ್ಲ. ನೀವು… ಆ ದಿನ ಕೋಪಿಸಿಕೊಂಡು ಬಂದ ದಿನದಿಂದ ಅನ್ನ ಆಹಾರದಿಗಳಿಲ್ಲ… ಕಿರಿ ಬೆರಳಿನ ಉಂಗುರವನ್ನೇ ಭಾಮೆ ಈಗ ಒಡ್ಯಾಣವಾಗಿ ಹಾಕಿಕೊಳ್ಳುತ್ತಿದ್ದಾಳೆ.

ಸ್ವಾಮಿ, ನಿಮಗೆ ಶುಭ ಲೇಖ ಕಳಿಸಿದ್ದಾಳೆ… ಆದರೆ… ಈ ವೇಳೆಗಗಲೇ ಅವಳಿಗೇನಾಗಿ ದೆಯೋ ತಿಳಿಯದು…

ಕೃಷ್ಣ : ಮಧುರವಾಣಿ ಮೌನವೇತಕೆ ಮಾತಾಡು ಮೃದುವಾದ ಮೈಯುಳ್ಳವಳೇ ನನ್ನ ಸುಳಿದಾಟವೇ ಇಲ್ಲವಲ್ಲ ಮೂಗವನ್ನೇ ತೋರಿಸಲಿಲ್ಲವಲ್ಲ :

ಅಬ್ಜಪಾಣಿಯೇ… ನಿನ್ನನ್ನು ನಂಬಿದ ನನ್ನನ್ನು ಕಡೆಗಾಣಿಸಿದೆಯಾ? ಶೃಂಗಾರ ಖಣಿಯೇ-ಕಾಮನ ಕೊರಂಬಿನಂತಿರುವ ನೀನು, ಯಾವ ತಪ್ಪನ್ನೂ ಮಾಡದ

ನನ್ನ ಮೇಲೆ ಕರುಣಿಸು… ಕರುಣಿಸು…

(ಮುದ್ದುಪಳನಿ)

(ಭಾಮೆಯ ಪ್ರವೇಶ)

ಭಾಮೆ : ಅವರಾರೇ.

ಹಾಸ್ಯಂ : ಅವರೇ ನಿಮ್ಮವರು…

ಭಾಮೆ : ನಮ್ಮವರೇ…

ಹಾಸ್ಯಂ : ಹೌದಮ್ಮಾ…ರುಕ್ಮಿಣಿ ಮನೆಯಲ್ಲಿ ಹೂ ಪತ್ರಿ ಅದು ಇದು ದಿನಾ ತಂದು ಕೊಡುತ್ತಿರುವ ನಿಷ್ಕಪಟಿಯೇ ಇವರು… ಉದ್ದವಾಗಿದ್ದಾರೆ ರಾಧಾ, ತಮ್ಮ ಬಳಿಗೆ ಕಳಿಸಿದ್ದಾಳೆ…ಬಂದಿದ್ದಾರೆ…

ಭಾಮೆ : ದೇವಕಿತನಯನು ಇವರೇನಾ ?! ವಾಸುದೇವಾತ್ಮನು ಇವರೇನಾ ! ಬಲರಾಮನ ತಮ್ಮನು ಇವರೇನಾ ! ಸಾತ್ಯಕಿಯಣ್ಣ ಇವರೇನಾ ! (ಅವಡು ಗಚ್ಚಿ) ಅಲ್ಲ… ಅಲ್ಲವೇ  ಅಲ್ಲ… ನನ್ನ ಸ್ವಾಮಿಯೇ ಅಲ್ಲ. ಮುಖವೇ ಕಳೆಗಟ್ಟಿದೆ … ಗುರ್ತು ಹತ್ತಲೊಲ್ಲದು…

ಹಾಸ್ಯಂ : ಚಿಂತೆಯಿಂದ ಮುಖಕಳೆಗಟ್ಟಿದೆ ಸೌಂದರ್ಯವು ಹಾಳಗಿದೆ

ಭಾಮೆ : ಕಣ್ಣು ಕೆಂಪಾಗಿವೆಯಲ್ಲ ಏಕೆ …?

ಹಾಸ್ಯಂ : ರಾತ್ರಿ ನಿದ್ರೆ ಇದ್ದರೆ ತಾನೆ…ಯಾವಾಗಲೂ ಸತ್ಯಭಾಮಾ, ಸತ್ಯಭಾಮಾ ಸತ್ಯಭಾಮಾ ಅಂತ ಚಿಂತೆ ಮಾಡೋದೋ ರಾತ್ರಿ ನಿದ್ರೆ ಇಲ್ಲಾ ಯಾವಾಗಲೂ ಒಂದೇ ಸ್ಮರಣೆ-ಸತ್ಯಭಾ.

ಭಾಮೆ : ಓಯಮ್ಮಾ… ತುಟಿ ಹೇಗಿವೆಯಲ್ಲಾ…

ಹಾಸ್ಯಂ : ಯಾವಾಗಲೂ ಕಾಡುಮೇಡುಗಳಲ್ಲಿ ಓಡಾಡುವುದೇ ಈತನ ಕೆಲಸ, ಅವಳು ಇದಾಳಲ್ಲ ಕರಡಿ – ಜಾಂಬುವತಿ…ಜಾತಿ ಚೇಷ್ಟೆಯೇನಾದರೂ ಹೋದಿತೇ…

ಭಾಮೆ : ಭುಜಗಳು ಹೇಗಾಗಿವೆಯಲ್ಲ…

ಹಾಸ್ಯಂ : ಚಿಕ್ಕಂದಿನಿಂದ ಭಾರ ಎತ್ತುವ ರೂಢಿ ಇಲ್ಲ ಇವರಿಗೆ… ಈಗ ಕಾವಾಡಿಯಲ್ಲಿ ಎರಡೂ ಹೊತ್ತು ತಂಗಳನ್ನು ತಿಂದು ಹೊರುತ್ತಿದ್ದಾರೆ ಆದ್ದರಿಂದ ಭುಜಗಳು…

ಭಾಮೆ : ಎದೆ ಹೇಗಿದೆಯಲ್ಲಾ…

ಹಾಸ್ಯಂ : ಒಬ್ಬರೋ ಇಬ್ಬರೋ ಪಟ್ಟದರಸಿಯರು, ಅಷ್ಟ ಭಾರ್ಯರು, ಮತ್ತು ಹದಿನಾರು ಸಹಸ್ರ ಗೋಪಿಯರು… ಸದಾ ವೇಣು ಊದೊದೆ ಊದೊದೆ…ನಮ್ಮ ಗೋಪಾಲ…

ಭಾಮೆ : ಯಾವಾಗಲೂ ಬಾರದ ನೀವು ಇಂದೇಕೆ-ಬಂದಿರಿ, ಏನು ಕಾರ್ಯ, ನನ್ನ ಮೇಲೆ ಕೋಪಿಸಿಕೊಂಡಿದ್ದೆಯಲ್ಲಾ  ಈಗ ಪ್ರೇಮ ಹುಟ್ಟಿತೆ ?

ಬಾಲ್ಯದಿಂದ ನಾವಾಡಿದ ಆಟಗಳು ಈಗ ಜ್ಞಾಪಕಕ್ಕೆ ಬಂದವೇ? ನಿನ್ನ ವಿಜ್ಞಾಪನ ಬೇಡ…ಎಲ್ಲವನ್ನೂ ಸಾದ್ಯಂತವಾಗಿ ಸವಿಸ್ತಾರವಾಗಿ ಹೇಳೆನಗೆ…

ಕೃಷ್ಣ : ಎಷ್ಟೂ ಸಲ ಹಾಸ್ಯಕ್ಕಾಗಿ ಆಡಿದ ಆಟ… ನನಗೆ ಅಂಜಿಕೆ ತೋರಿಸುವೆಯಾ? ನನ್ನಿಂದ ತೊಂದರೆಯೇ? ನಾನೇನು ನಿನ್ನ ಶತೃವೇ… ನಿಮಿಷವಾದರೂ ದಯದಿಂದ ನೋಡದಿದ್ದರೆ ನಾನಿರಲಾರೆ… ಬದುಕಿ ಉಳಿಯಲಾರೆ (ಮಕ್ಕು ತಿಮ್ಮನ್ನ )

ಖಮಾಜ ಆದಿ ತಾಳದಲ್ಲಿ ;

ನನ್ನ ಮೇಲೆ ನಿನಗೇಕೆ ಕೋಪ ||ಪ||
ರಾಜಗೋಪಾಲನ ಮೇಲೆ ಕೋಪವೇಕೆ ||ಅನುಪಲ್ಲವಿ||
ನಿನ್ನ ಬಿಟ್ಟು ನಾನಿರಲಾರೆ | ಕಾಲ ಕಳೆಯದು |
ಮನ್ಮಥನ ಶರದಿಂದ ಜರ್ಜಿರಿತನಾಗಿರುವೆ |
ತಾಳಲೇನು ನಾನು ಈ ವಿರಹವ |
ಕರುಣದಿಂದ ಸಂತೈಯಿಸಿ ಬಿಗಿದಪ್ಪು ನನ್ನರಸಿ |
ರಾಜಗೋಪಾಲನ ಮೇಲೆ ಕೋಪವೇಕೆ ? ||
(ಕೋಪಮೇಲನೆ-ಕೋಮಲಿನಾಪೈನಾ   | ಕೋಪ್ | (ಅಲ್ಲ)
ರಾಜಗೋಪಾಲುಡ ರಾಜವದನಾಫೈನಾ  | ಕೋಪ | ಅ.ಪಲ್ಲ |
ಬಾಳೆನೇಂತೋ ತರುಣಿಯೀವೇಳೆ
ತಾಳಲೇನು ನಾಪೈದಯದಾಚಿನ ಮೇಲಾ
ಬಾಲನನ್ನು ಕರುಣಿಂಚು ಲೀಲಾ
ಏಲುಕೊಮ್ಮಂಟೆ ಈ ಜಾಗು ಲೀಲಾ
ಕೋಪಮೇಲನೆ ಕೋಮಿಲೆ ನಾಪೈನಾ (ಕ್ಷೇತ್ರಯ್ಯ)

ಭಾಮೆ : ಅಬ್ಬಾ…ಏನೇನ ಕಿಲಾಡಿತನ ಇದೆ ಗೊತ್ತುಂಟಾ ?

ನಿನ್ನ ತಾಯಿ ನಿನಗೆ ಎದೆ ಹಾಲು ಕೊಡದೆ ಬೇರೆ ಮನೆಗೆ ನಿನ್ನ ಕಳಿಸಿದಳು. ನಿನ್ನ ತಂದೆ, ನೀತಿ ನಿಯಮಗಳಿಲ್ಲದ ನಿನ್ನ ತಂದೆ ಬಲಿಯಾಗಲೆಂದು ಎಲ್ಲಾ ಹಸುಗೊಸುಗಳನ್ನು ಕಂಸನಿಗೆ ಕೊಟ್ಟಿದ್ದಾನೆ.

ನಿನ್ನ ಅಣ್ಣ ಬಲರಾಮ, ಕರಿಗಂಜಿ ಶರಧಿಯಲ್ಲಿಳಿದವ…
ನಿನ್ನ ತಂಗಿ ಸುಭದ್ರಾ… ನೆರಜಾಣ ಸನ್ಯಾಸಿ ಪೂಜಿಸಿ ಅವನೊಂದಿಗೆ ನಿರ್ಗಮಿಸಿದ ನೀಲವೇಣಿ-
ಅಂಥಾ ವಂಶದಲ್ಲಿ ಹುಟ್ಟಿದ ನೀನು… ನೀನು
ನಿನ್ನ ಮಾತೆಲ್ಲಾ ಇಲ್ಲೇ ಮನಸ್ಸೆಲ್ಲಾ ಅಲ್ಲೇ
ನಿನ್ನನ್ನು ಅನ್ನುವುದೇಕೆ ? ಎಲ್ಲಾ ನನ್ನ ಹಣೆಯ ಬರಹ…

ಕೃಷ್ಣ : ದಂದ ಹೊಂದುವವನಿರುವಾಗ ಅಪರಾಧ ಪರಿಶೋಧನೆ ಏಕೆ ? ಏ ಬಾಲೆ, ಅಪರಾಧಿಯಾದ ನನ್ನನ್ನು ನಿನ್ನ ಲತಾಬಾಹುಗಳಿಂದ ಬಂಧಿಸು, ಬಿಗಿದಪ್ಪು, ಅಪರಾಧಿಗೆ ಶಿಕ್ಷೆ ಕೊಡುವ ಅಧಿಕಾರ ವಹಿಸಿಕೊಂಡು ನೀತಿಗೆಟ್ಟವನನ್ನು ತಿದ್ದುವ ಕಾರ್ಯದಂತೆ-ನೀನು ನಿನ್ನ ಅಧರಾಮೃತದಿಂದ ನನ್ನನ್ನು ಪುನೀತನನ್ನಾಗಿ ಮಾಡು… ನೀನು ಹೇಳುವ ಕಾರ್ಯ ಮಾಡಲು ನಾನು ತಪ್ಪಿದಲ್ಲಿ, ನಿನ್ನ ಸ್ತನಗಳಿಂದ ನನಗೆ ಶಿಕ್ಷೆಕೊಡು, ಕೋಮಲಾಂಗಿ…

ನನಗೆ ಮರ್ಯಾದೆ ಇಲ್ಲ, ಬದಕುವ ಯೋಗ್ಯತೆ ಇಲ್ಲದ ನನಗೆ ರತಿಕೇಳಿಯ ಶಿಕ್ಷೆ ಕೊಡು… ಶಿಕ್ಷೆ ಕೊಡು… ಎಳೆ ಮಾವಿನ ಎಲೆಯ ಚೂರಿನಿಂದ, ಮಲ್ಲಿಗೆಯ ರೇಕಿನಿಂದ, ಸಂತೋಷದಿಂದ, ಅಶೋಕವನದ ಲತಾಕುಂಜದಲ್ಲಿ ನನಗೆ ಇವೆಲ್ಲವುಗಳಿಂದ ಶಿಕ್ಷೆ ಕೊಡು…

ಭಾಮೆ : ಎಷ್ಟೂಂದು ಕಲಿತಿದ್ದೀಯಾ…ರಾಜಗೋಪಾಲಾ
ರಾಧಾ, ರುಕ್ಮಿಣಿ , ಜಾಂಬವತಿ… ನನ್ನಲ್ಲಿಗೆ
ಬರಲು ನಿನ್ನ ಕೈ ಬಿಟ್ಟರೆ…
ಏನೇನು ಮಾಡಿದರು… ನಿಜ ಹೇಳು, ಸುಳ್ಳು ಬೇಡ
ನನ್ನತ್ತೆಯ ಮಗನೆ ಮುತ್ತಿನ ಚಂಡೇ

ಕೃಷ್ಣ : ಸತ್ರಾಜಿತಿ-ಇಲ್ಲಿ ನೋಡು… ನಿನ್ನ ಮಾತಿನ ವೈಭವ ಎಲ್ಲರಿಗೂ ಹುಚ್ಚು ಹಿಡಿಸುವಂತಹದು…

(ಅಲಕುಲೋನೈನಾಸಿ ಪಲುಕುಲುವಿನಂತ
ರುಕ್ಮಿಣಿ ಪಲುಕುಲು ರೋಡ ಬುಟ್ಟೇ
ಮೂತಿವಿರುಪುಲ ನೀ ಮುಖಮು ಚೂರ್ಜಿ ಎಂತಾ
ರಾಧನ ಚೊಡಾ ಚಿರಾಕುಬುಟ್ಟೇ
ಅರುಣಮಯಿಯಿನ್ನ ನೀಹರಿಣಾಕ್ಷಮುಲ ಚೂಡ
ಭದ್ರಸು ಚೂಜಿನ ವಾಂತಿ ಬುಟ್ಟೇ
ಔಡುಗರಚಿನ ನೀ ಅಧರಮುನ ಗನಿಮಿತ್ರ
ವಿಂದನ ಚೂಡಂಗ ವೆಗಟಿ ಬುಟ್ಟೆ)

(ಮೇಲಿನ ಶೀಸಪದ್ಯದ ನಂತರ ಈ ಹಾಡು ನೃತ್ಯದೊಂದಿಗೆ)

ಓ ಸತ್ಯಭಾಮಾ…
ಹದಿನಾರು ಸಹಸ್ರ ಗೋಪಿಯರು ನಿನ್ನ ಉಗುರು ಸಮಾನರಲ್ಲ,
ಪ್ರಾಮಾಣ ಮಾಡುವೆ… ನಾನೇ ಈಶ, ಭಾಮಾ ನನ್ನ
ಹತ್ತಿರ ಬಾ… ಸರಸವಾಡು…, ನಾನು ಹೇಳಿದ್ದೆಲ್ಲಾ ನಿಜ ಅಂದರೆ…,

ಭಾಮೆ : ಆಹಾಹಾ… ನಿಜ ಹೇಳುವುದರಲ್ಲಿ ನಂಬರ ಒಂದನೆಯವರೇ.
ಸತ್ಯ ಸಂದರ ಸಾಲಿನಲ್ಲಿ ನಿಮ್ಮನ್ನು ಮೊದಲಿಗನನ್ನಾಗಿ ನಿಲ್ಲಿಸಬೇಕು.
ಮದುವೆ ಸಮಯದಲ್ಲಿ ಮಾಡಿದ ಎಲ್ಲಾ ಪ್ರಮಾಣಗಳೂ ನೆನಪು ಹಾರಿದವೆ ?
ಅದು ಹೋಗ್ಲೀ, ಮಾಂಗಲ್ಯ ಕಟ್ಟುವಾಗ ಹೇಳಿದ ವಚನಗಳೆಲ್ಲಾ ಗಾಳಿಗೆ ಹಾರಿಹೋದವೇ ?
ಪ್ರಾಮಾಣ ವಚನಗಳನ್ನು ಸುಳ್ಳುಮಾಡುವುದು ನಿನಗೆ ಯೋಗ್ಯವೇ ?

ಕೃಷ್ಣ : ಸಾಮಾನ್ಯ ಹೂವಿಗಾಗಿ ಹೊಡೆದಾಡಿದಿಯಲ್ಲ ನೀನು…
ಕೋಮಲಾಂಗಿ…ಪೂಜೆ ಹೊಂದಿದ ನಾರದರು ಪಾರಿಜಾತವನ್ನು ರುಕ್ಮಿಣಿಗೆ ಕೊಡಲು ಹೇಳಿದ್ದರಿಂದ…

ಭಾಮೆ : ಓಯಮ್ಮಾ.. ಎಂಥ ಪಕ್ಷಪಾತಿಗಳು ನೀವು…

ಹಾಸ್ಯಂ : ಓಹೋ ಎಂಥ ಮಾತು… ಮದ್ದು ತಲೆಗೇರಿದ್ದರಿಂದ ಈಗ ಹೇಗೆ ಮಾತಾಡುತ್ತಿದ್ದಾನೆ…ನನ್ನ ಮಾತು ಕೇಳಲಿಲ್ಲ…

ಭಾಮೆ : ಹೌದಮ್ಮಾ ಕೇಳಲಿಲ್ಲ….
ನಾನು ಕೆಳಮಟ್ಟದವಳೇ… ನನಗೆ ತಿಳುವಳಿಕೆ ಇಲ್ಲವಂತೆ…

ಹೆಂಗಸರಲ್ಲಿ ರುಕ್ಮಿಣಿಯೇ ಜಾಣೆ, ಅವಳ ಪ್ರತಾಪ ವರ್ಣಿಸುವುದು ಎಲ್ಲರಿಗೂ ಗೊತ್ತುಂಟು….ಸವತಿ. ಆ ಗಯ್ಯಾಳಿಯ ಬಗ್ಗೆ ಹೆಂಗಸರ ಮೇಲಿನ ನಿನ್ನ ಪಕ್ಷಪಾತ ನ್ಯೂನತೆಯಿಂದ ಕೊಡಿದೆ… ಇಂಥ ಭವಿಷ್ಯ ನನಗೆ ಬರುತ್ತೆ ಅಂತ ಗೊತ್ತಿರಲಿಲ್ಲವಮ್ಮಾ. ರುಕ್ಮಿಣಿ ಜಂಬಾ ಹೊಡಿತಿದಾಳೆ… ಅದು ನನಗೆ ನಾಚಿಕೆಯಲ್ಲವೇನಮ್ಮಾ? ಎಂತಹ ಗಯ್ಯಾಳಿ… (ನಟಿಕೆ ಮುರಿದು…) ಗಾರುಡಿ…ಅವಳು ಆಡಿಸಿದಂತೆ ನೀನು ಮಂತ್ರಮುಗ್ಧನಾಗಿ ಆಡುವ್ವಿ… ಅವಳಿಗೆ ನೀನು, ನಿನಗೆ ಅವಳು …,ಬ್ರಹ್ಮ ಸರಿಯಾಗಿ ಗಂಟು ಹಾಕಿದ್ದಾನೆ… ನಿಂದೆ ಬರುವುದು ನನಗೆ, ನಿನ್ನ ಪ್ರೀತಿ- ಆ ಕೋಮಲೆಯತ್ತ, ಗಲಾಟೆಗೆಲ್ಲಾ ನಾನು… ಕೇಳಿಗೆಲ್ಲಾ ಅವಳು… , ಜಾಗರಣೆ ಅಲ್ಲಿ, ಕದನ ಇಲ್ಲಿ. ಅಯ್ಯೋ… ನನ್ನ ವಿಧಿ ಬರಹ ಎಂಥಹುದು… ಯಾರssದೂರಿ ಫಲವೇನು…  ಅಯ್ಯೋ ನನ್ನ ಮನೆಯವರೇ ಒಪ್ಪದಿರಲು ಇತರರ ಮಾತೇನು…, ವಿಧಿ ಬರಹ ಇಂತಿರಲು ಯಾರ ದೂರಿ ಫಲವೇನು?

(ಆನಂದ ಭೈರವಿ ಖಂಡಛಾಪ ತಾಳ)

ಭಾಮನಾ ಸತ್ಯ ಭಾಮನಾ  ||
ಭಾಮನಾ ನಾಪೇರು ಅಲ್ಲ  | ಭಾಮ ರುಕ್ಮಿಣೀಯನುಡು ನೀ
ಯಭಿಮಾನಮುನು ತೇಯಂಚಿ ನಲುಗುರಿ ಲೋನಕಾ
ದನಿಪಿಂಚು ಕುಂಟೇ  ||  ಭಾಮಾ  ||
ಎಂದುಕುರಾ ತಿಳಿರಾ ನಿನೀಮಂದುರ ಆ ಮಿತ್ರವಿಂದ
ತಂತ್ರಮುಲು ತಲಿರೆಕ್ಕನವನಿ ಪದಿಮಂದಿಸೆ ಫಲಿಕಿಂಚಕುಂಟೇ   || ಭಾಮಾ  ||
ಪೂದ್ದುಪದ್ದು ಲೇಕಯಾ- ಬದ್ರಮಾಟಿಲುವಿನ್ನ ನಿನ್ನು
ಬುಗ್ಗಲು ನುಲುಮಿಂಟಿ ನೀಕಿದಿ ಬುದ್ದಿಕಾದ ನೀವೆಂಚಿಕೊಂಟೇ…

ಭಾಮೆ : (ಅತ್ಯಂತ ಬಿಂಕದ ಮತ್ತು ವಯ್ಯಾರಿತನಕ ಈ ಪದ್ಯ ನೃತ್ಯಗಳಿಂದ ನಿರೂಪಿತವಾಗುತ್ತದೆ)

ಆನಂದ ಭೈರವಿ ಖಂಡಜಾಪು ತಾಳ
(ಭಾಮನಾ-ಸತ್ಯಭಾಮನಾ-  || ಭಾ ||
ಭಾಮನಾ ನಾಪೇರು ಅಲ್ಲ ಭಾಮ ರುಕ್ಮಿಣೀಯನುಡು
ನೀ ಅಭಿಮಾನವನು ತೇಯಿಂಚಿ ನಲುಗುರಿಲೋನ
ಕಾದಿನಿಪಿಂಚುಕುಂಟೇ…  || ಅನು ಪಲ್ಲವಿ ||
ರುಕ್ಮಿಣಿಯೇ ನಲ್ಕಾರು ಜನರೆದುರು ನಿನ್ನನ್ನು ಅವಮಾನಿಸದಿದ್ದರೆ

ನನ್ನ ಹೆಸರು ಸತ್ಯಭಾಮೆಯೇ ಅಲ್ಲ ;

ನಿನ್ನನ್ನು ದೂಷಿಸಿ ಪ್ರಯೋಜನವೇನು? ಮಿತ್ರವಿಂದಳ ತಂತ್ರದಿಂದಲೇ ಹೀಗಾಗಿರಬೇಕು… ನಿನ್ನನ್ನು ಅಂದರೇನು ಪ್ರಯೋಜನ? ಲಕ್ಷ್ಮಣ ಹೇಳಿದಂತೆ

ನಡೆಯುವ ಹೇ ಭದ್ರೆ, ನಿನ್ನನ್ನು ಕೋಪದಿಂದ, ಎಲ್ಲಾ ಸ್ರೀಯರೆದುರು ನನ್ನ ಮಾರುದ್ದ ವೇಣಿಯಿಂದ ತಾಡಿಸದಿದ್ದರೆ ನನ್ನ ಹೆಸರು ಭಾಮೆಯೇ ಅಲ್ಲ !!

ಕೃಷ್ಣ : ಹೇ ಸುಂದರಾಂಗಿ, ಸೇವಕ ಎಷ್ಟೇ ತಪ್ಪು ಮಾಡಿದರೂ ಯಜಮಾನ ಕ್ಷಮಿಸಿದರೆ, ಎಲ್ಲಾ ಸರಿ ಹೋಗುತ್ತದೆ. ಸುಂದರಿ, ನನಗೆ ನೋವು ಕೋಡಬೇಡಾ

ಕ್ಷಮಿಸು, ಕೈ ಮುಗಿದು ಕೇಳುವೆ…

ಭಾಮೆ : ಕಪಟಿಯೇ…

ಕೃಷ್ಣ : ಗೋಪಾಲರೊಡಗೊಡಿ ಹಸು ಮೇಯಿಸಿದ್ದು, ನೀರಾಟವಾಡಿದ್ದು, ರಾಸಕ್ರೀಡೆಯಾಡಿದ್ದು ಆ ದಿನದ ಸರಸ, ರುಕ್ಮಿಣಿಯನ್ನು ಕರೆತರುವ ಸಮಯದಲ್ಲಿ ನೀನು

ಸಲ್ಲಿಸಿದ ಸಹಾಯ ಇಷ್ಟೆಲ್ಲವನ್ನೂ ಮರೆತೆಯಾ ದೇವಿ…

ಗಿಳಿವಿಂಡು ಪಾಡುತ್ತಿರಲು, ಲತಾಕುಂಜದಲ್ಲಿ ಆಡಿದ ಕ್ರೀಡೆಯು ನೆನಪಿದೆಯಾ ? ಅಂದು ಜೀರಿಗೆ ಬೆಲ್ಲ ಒಬ್ಬರಿಗೊಬ್ಬರು ಎರೆಯವಾಗ ನೀನು ಬಿಂಕದಿಂದ ಕೊಸರಿದ್ದು ನೆನಪುಂಟಾ ? ದೇವಾನು ದೇವತೆಯರೊಡಗೂಡಿ ನರ್ಮ್ಮಿರ್ವರಿಗೆ ಶುಸುರಾಕ್ಷಿ ಹಾಕಿದ್ದು ನೆನಪುಂಟಾ? ವಯ್ಯಾರಿ? ಇಂದು ನಾನು ಕಳಾಹೀನನಾಗಿದ್ದೇನೆ, ನಿನ್ನನ್ನು ತೊರೆದದ್ದರಿಂದ್, ಕಾರಣ ಹೇ ಸತ್ರಾಜಿತೆ ಬಾ… ನನ್ನೂಡನೆ ರಮಿಸು ; ನೀನು ಎಷ್ಟೇ ಕೋಪಿಸಿಕೊಂದರೂ ನನಗೆ ಬೇಸರವಿಲ್ಲ…

ಆದರೆ…

ಎಳೆ ಚಿಗುರಿನಂದದಿ ಇರುವ ನಿನ್ನ ಪಾದದಿಂದ ನನ್ನನ್ನು ತಾಡಿಸಿದಾಗ ನನಗೆ ನೋವಿಲ್ಲ ರಾಣಿ, ಆದರೆ ನನ್ನ ಮೈಮೇಲಿನ ಒರಟು ರೋಮ ನಿನ್ನ ಕಾಲಿಗೆ

ನೋವನ್ನುಂಟು ಮಾಡಿರಬೇಕೆಂಬುವುದೇ ನನ್ನ ಕಾತರತೆಯ ಕಾರಣ.

ಇನ್ನು ಕೋಪ ಬೇಡ ರಮಣಿ… ಹೇ ಸರ್ಪವೇಣಿ

ನಾನು ಪ್ರಮಾಣ ಮಾಡಿ ಹೇಳುವೆ, ನಾನು ಬೇರೆ ನಾರಿಯರೊಂದಿಗೆ ಬೆರೆಯಲಿಲ್ಲ… ಮಾತಾಡಲಿಲ್ಲ… ನಿನಗಾಗಿ ನಾನು ಕೈಯಲ್ಲಿ ಅಗ್ನಿ ಹಿಡಿದು ಪ್ರಮಾಣ

ಮಾಡಬಲ್ಲೆ …

ಭಾಮೆ : ಅಗ್ನಿ ಪ್ರಮಾಣ, ಅಯ್ಯೋ… ಕಾಡಿನ ದಾವಾಗ್ನಿಯನ್ನೇ ನುಂಗುವ ನಿನ್ನ ಅಗ್ನಿ ಪ್ರಮಾಣ ವೆಂಥದು…. ಕೈಯಲ್ಲಿ ಬೆಂಕಿ ಹಿಡಿಯುವುದೇನು ಮಹಾ ನಿನಗೆ …

ಕೃಷ್ಣ : ವನಜಾಕ್ಷಿ, ಗೋವು ಮುಟ್ಟಿ ಪ್ರಮಾನ ಮಾಡುವೆss

ಭಾಮೆ : ಎಲ್ಲಾ ಸಮಯದಲ್ಲಿ ಗೋವಿನೋಂದೆಗೇ ಬೆಳೆದ ನೀನು ಗೋವಿನ ಮೇಲೆ ಪ್ರಮಾಣ ಮಾಡುವುದೆಂದರೇನು ?

ಕೃಷ್ಣ  : ಹೇ ಕಲಕಂಠಿಯೇ, ಹಾವಿನ ಮೇಲೆ ಪ್ರಮಾಣ ಮಾಡಲೇ ?

ಭಾಮೆ : ಹಾ-ಹಾ- ಹಾವಿನಮೇಲೆಯೇ ಗರಡಿಮಾಡುವ ಶೇಷಾಶಯನನು ನೀನು ; ಹಾವಿನ ಮೇಲೆ ಪ್ರಮಾಣಮಾಡುವುದೆಂದರೇನು?

ಕೃಷ್ಣ : ಹಾಗೇನು ರಮಣಿ…ದೇವರ ಗುಡಿಹೊಕ್ಕು ಪ್ರಮಾಣ ಮಾಡುವೆ

ಭಾಮೆ : ದೇವರಗುಡಿ, ದೇವಾಲಯ ಹೊಕ್ಕೆ? ಜಾತ್ರೆ ಯಜ್ಞಗಳಲ್ಲಿ ಅಗ್ನಿ ಸಮರ್ಪಿತ ಹವಿಸ್ಸನ್ನು ನುಂಗುವ ನಿಮಗೆ ದೇವರದೇನು ಲೆಕ್ಕ?

ಕೃಷ್ಣ : ನನ್ನ ತಲೆಯನ್ನು ನಿನ್ನಲ್ಲಿಟ್ಟು ಪ್ರಮಾಣಮಾಡುವೆ. ಅಂದರೂ ನೀನು ನಂಬಲಿಲ್ಲಾ ನಾನೇನು ಮಾಡಲಿ …

ಭಾಮೆ : ನಿಮ್ಮನ್ನೆಂತು ನಂಬುವುದು? ಎದೆಹಾಲು ಕುಡಿಯುವೆ ಎಂದು ಹೇಳಿ ಪ್ರಾಣವನ್ನೇ ಹೀರಿದ ನಿನ್ನನ್ನು ನಾನು ನಂಬುವುದೆಂತು?

ಕೃಷ್ಣ : ಹೇ ನೀಲಲೋಚನೇ, ದಪ್ಪವಾದ ಕಪ್ಪುವೇಣಿಯನ್ನು ಹೊಂದಿದ ನನ್ನ ರೂಪಸಿಯೇ.. ನನ್ನರಸಿಯೇ ಇಟ್ಟಿಷ್ಟು ಮಾತಿಗೆ ಯಾಕೆ ಹೀಗಾಡುವಿ.

ಹೂವಿಗಾಗಿ ಕೋಪವೇ, ಕೇಳಿ ರಮಣಿ…

ನಾನೀಗಲೇ ದೇವಲೋಕಕ್ಕೆ ಹೋಗಿ…ಯುದ್ಧಕ್ಕೆ ಸ್ವತ ; ಇಂದ್ರನೇ ಬಂದರೂ ಆತನನ್ನು ಲೆಕ್ಕಿಸದೆ, ಎದುರಿಸಿ, ಸೋಲಿಸಿ, ಆ ಪಾರಿಜಾತ ವೃಕ್ಷವನ್ನೇ ತಂದು ನಿನ್ನ ಅರಮನೆಯ ಲತಕುಂಜದ ಬಳಿಯಲ್ಲಿ, ಸರಸಕರ್ಪೂರ ಕದಳಿಕಾ ತರುಗಳ ಮಧ್ಯದಲ್ಲಿ ನಾಟುವೆ..

ಭಾಮೆ : ಓಯಮ್ಮಾ… ಎಂಥ್ ಬಂಗಾರದಂತಹ ಸ್ವಾಮಿ ನನ್ನ ಸ್ವಾಮಿ… ಬಾರೇ, ಚಿನ್ನದ ಹೂಗಳಿಂದ ಸ್ವಾಮಿಯನ್ನು ಈಗಲೇ ಪೂಜಿಸೋಣ ಬಾರೇ…

ಬಂಗಾರ ಹೂಗಳಿಂದ ಪೂಜಿಪೆ
ಶೃಂಗಾರದಿಂದ ಕಣ್ಣರಳಿಸಿ ನಿಟ್ಟಿಸಿ,
ನೋಡುತಾ ಚಂಗಲ ಹಾರಗಳನ್ನು ಹಾಕುವೆ..
ಕೂಚಿಪುಡಿ ರಾಜಗೋಪಾಲನನ್ನು ಪೂಜಿಪೆ (ತೆರೆ )

– – ಮಂಗಳಂ – –