ಭಾರತ ಬಹುಭಾಷಾ ದೇಶ. ನೂರಾರು ಭಾಷೆಗಳು ಸಾವಿರಾರು ವರ್ಷಗಳಿಂದ ಸಹಬಾಳ್ವೆ ನಡೆಸುತ್ತಿವೆ. ಜೊತೆಗೆ ಹೊರದೇಶಗಳಿಂದ ಬಂದ ಭಾಷೆಗಳು ಸಹ ಭಾರತೀಯ ಭಾಷೆಗಳ ನಡುವೆ ಹೊಂದಾಣಿಕೆ ಮಾಡಿಕೊಂಡು ಜನನಾಡಿಗಳಾಗಿವೆ. ಇಲ್ಲಿ 139 ಭಾಷೆಗಳೂ 544 ಉಪಭಾಷೆಗಳೂ ಇವೆಯೆಂದು 1929 ರಲ್ಲಿ ಗ್ರಿಯರ್ಸನ್ ಮೊಟ್ಟಮೊದಲ ಭಾಷಾ ಪರಿವೀಕ್ಷಣೆ ಗುರುತಿಸಿದರೆ 1961ರ ಜನಗಣತಿಯು 1652 ವರ್ಗೀಕೃತ ಭಾಷೆಗಳೂ 184 ಅವರ್ಗೀಕೃತ ಭಾಷೆಗಳೂ ಇವೆಯೆಂದೂ ಗುರುತಿಸುತ್ತವೆ. ಇವುಗಳ ಕುಟುಂಬವಾರು ವರ್ಗೀಕರಣ ಹೀಗಿದೆ.

ಕುಟುಂಬವಾರು ಭಾಷೆಗಳನ್ನಾಡುವವರು ಪ್ರಮಾಣ (1981) ಈ ಮುಂದಿನಂತಿದೆ. 1. ಇಂಡೋ ಆರ್ಯನ್ 74.24% 2. ದ್ರವಿಡಿಯನ್ 23.86% 3. ಆಸ್ಟ್ರೋ ಏಸಿಯಾಟಿಕ್ 1.16% 4. ಟಿಬೇಟೋ-ಬರ್ಮೀಸ್ 0.62%

ಇಷ್ಟು ಈ ಭಾಷಾ ಕುಟುಂಬಗಳ ಭಾಷೆಗಳಲ್ಲಿ 22 ಭಾಷೆಗಳನ್ನು ಮಾತ್ರ ಭಾರತದ ಸಂವಿಧಾನದ ಎಂಟನೆಯ ಅನುಸೂಚಿಯ ಭಾಷೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಮೊದಲು 1956ರಲ್ಲಿ ಸಂವಿಧಾನವನ್ನು ಅಂಗೀಕರಿಸಿದಾಗ ಅದರಲ್ಲಿ ಅಸ್ಸಾಮಿ, ಒರಿಯಾ, ಬಂಗಾಲಿ, ಗುಜರಾತಿ, ಹಿಂದಿ, ಕನ್ನಡ, ಕಾಶ್ಮೀರಿ, ಮಲಯಾಳಂ, ತಮಿಳು, ತೆಲುಗು, ಮರಾಠಿ, ಸಂಸ್ಕೃತ, ಪಂಜಾಬಿ, ಉರ್ದು ಭಾಷೆಗಳು (14 ಭಾಷೆಗಳು) ಇದ್ದವು. ಈ ಅನುಸೂಚಿಗೆ ಸಿಂಧಿ ಭಾಷೆಯನ್ನು 1967 ರಲ್ಲಿ, ಕೊಂಕಣಿ, ಮಣಿಪುರಿ ಮತ್ತು ನೇಪಾಳಿ ಭಾಷೆಗಳನ್ನು 1992 ರಲ್ಲಿ ಸೇರಿಸಲಾಯಿತು. ಈಚೆಗೆ ಈ ಅನುಸೂಚಿಗೆ ಮೈಥಿಲಿ, ಬೋಡೋ, ಸಂತಾಲಿ ಮತ್ತು ಡೋಗ್ರಿ ಸೇರಿವೆ.

ಈ ಅನುಸೂಚಿತ ಭಾಷೆಗಳನ್ನು ಮಾತನಾಡುವವರ ಅಂಕಿ ಅಂಶಗಳು ಹೀಗಿವೆ.

ಕ್ರ.ಸಂ. ಭಾಷೆಯ ಹೆಸರು 1961 ಜನಗಣತಿ 1971 ಜನಗಣತಿ 1981 ಜನಗಣತಿ
1. ಅಸ್ಸಾಮಿ 68,03,465 89,58,933 70,525
2. ಬಂಗಾಲಿ 3,38,88,405 4,47,92,722 515,03,085
3. ಗುಜರಾತಿ 2,03,04,464 2,58,75,252 331,89,039
4. ಹಿಂದಿ 13,34,35,360 16,25,77,612 2,641,89,057
5. ಕನ್ನಡ 1,74,15,827 2,17,07,918 268,83,837
6. ಕಾಶ್ಮೀರಿ 19,56,115 24,38,360 31,74,684
7. ಮಲಯಾಳಂ 1,70,15,782 2,19,38,231 25,9,52,966
8. ಮರಾಠಿ 3,32,85,771 4,22,51,207 494,24,847
9. ಒರಿಯಾ 1,57,19,398 1,98,55,450 228,81,053
10. ಪಂಜಾಬಿ 1,09,50,826 1,64,49,573 1,85,88,400
11. ಸಂಸ್ಕೃತ 2,544 2,212 2,946
12. ತಮಿಳು 3,05,62,706 3,76,90,020 447,30,389
13. ತೆಲುಗು 3,76,68,132 4,43,52,926 542,26,227
14. ಉರ್ದು 2,33,23,518 2,86,03,874 353,23,282
15. ಸಿಂಧಿ 13,71,932 16,76,728 15,84,063
16. ಕೊಂಕಣಿ 13,32,134 90,08,353
17. ಮಣಿಪುರಿ 62,21,244 6,04,353
18. ನೇಪಾಲಿ 5,25,284 12,52,444

ದೇಶದ ಶೇಕಡ 96.16 ರಷ್ಟು ಜನ ಈ ಅನುಸೂಚಿತ ಭಾಷೆಗಳಿಗೆ ಸೇರಿದವರಾಗಿದ್ದಾರೆ. ಅನುಸೂಚಿತವಲ್ಲದ ಭಾಷೆಗಳನ್ನಾಡುವವರ ಪ್ರಮಾಣ ದಶಕದಿಂದ ದಶಕಕ್ಕೆ ಕಡಿಮೆಯಾಗುತ್ತಿದೆ. ಅದು 1971 ರಲ್ಲಿ 4.63 ಇದ್ದರೆ 1981ರಲ್ಲಿ 3.84 ಕ್ಕೆ ಇಳಿಯಿತು.

ದ್ವಿಭಾಷಿಕತೆ

ಭಾರತದಲ್ಲಿ ಬಹುಭಾಷೆಗಳು ಬಳಕೆಯಲ್ಲಿರುವುದರಿಂದ ಒಂದಕ್ಕಿಂತ ಹೆಚ್ಚು ಭಾಷೆಗಳು ಒಂದೇ ಸಮುದಾಯದಲ್ಲಿ ಹಲವೊಮ್ಮೆ ಬೇರೆ ಬೇರೆ ಉದ್ದೇಶಗಳಿಗೆ ಬಳಕೆಗೊಳ್ಳುವುದರಿಂದ ದ್ವಿಭಾಷಿಕರು, ಬಹುಭಾಷಿಕರು ಅಂದರೆ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ಬಲ್ಲವರ ಸಂಖ್ಯೆಯೂ ಇಲ್ಲಿ ಸಾಕಷ್ಟು ಪ್ರಮಾಣದಲ್ಲಿದೆ. ದ್ವಿಭಾಷಿಕರ ಸಂಖ್ಯೆಯೂ ದಶಕದಿಂದ ದಶಕಕ್ಕೆ ಹೆಚ್ಚಾಗುತ್ತಿದೆ. ದ್ವಿಭಾಷಿಕರ ಶೇಕಡವಾರು ಪ್ರಮಾಣ 1961 ರಲ್ಲಿ 9.70 ರಷ್ಟಿದ್ದುದು 1971ರಲ್ಲಿ 13.04 ರಷ್ಟು 1981 ರಲ್ಲಿ 13.34 ರಷ್ಟು ಆಯಿತು.

ಭಾರತದಲ್ಲಿ ಎಂಟನೆಯ ಅನುಸೂಚಿಯ ಪ್ರಕಾರ ಭಾಷೆಗಳನ್ನಾಡುವ ದ್ವಿಭಾಷಿಕರ ಪರಿಮಾಣ 1981ರ ಜನಗಣತಿ ಪ್ರಕಾರ ಈ ಕೆಳಗಿನಂತಿದೆ.

ಮಾತೃಭಾಷೆ ಪರಿಮಾಣ
1. ಅಸ್ಸಾಮಿ 53.10%
2. ಬಂಗಾಲಿ 5.61%
3. ಗುಜರಾತಿ 19.42%
4. ಹಿಂದಿ 4.76%
5. ಕನ್ನಡ 15.24%
6. ಕಾಶ್ಮೀರಿ 24.16%
7. ಮಲಯಾಳಂ 20.02%
8. ಮರಾಠಿ 23.02%
9. ಒರಿಯಾ 9.56%
10. ಪಂಜಾಬಿ 30.55%
11. ಸಂಸ್ಕೃತ 66.79%
12. ಸಿಂಧಿ 57.16%
13. ತಮಿಳು 49.56%
14. ತೆಲುಗು 13.25%
15. ಉರ್ದು 29.42%
16. ಕೊಂಕಣಿ 68.37%
17. ನೇಪಾಳಿ 30.25%
18. ಮಣಿಪುರಿ 19.83%

ಬುಡಕಟ್ಟು ಭಾಷೆಗಳು

ಭಾರತದ ಭಾಷಾ ಸಂಪತ್ತಿಗೆ ಬುಡಕಟ್ಟು ಭಾಷೆಗಳ ಕೊಡುಗೆ ಅಮೂಲ್ಯವಾದುದು. ಭಾರತದ ಜನತೆ ಪೀಪಲ್ ಆಫ್ ಇಂಡಿಯಾ ಅಧ್ಯಯನವು 623 ಬುಡಕಟ್ಟು ಜನಾಂಗಗಳ ಅಧ್ಯಯನವನ್ನು ಮಾಡಿ ಅದರಲ್ಲಿ 123 ಸಮುದಾಯಗಳು 19.74 ಏಕಭಾಷೀಯವೆಂದು ಉಳಿದ 500 ಸಮುದಾಯಗಳು 80.26 ದ್ವಿಭಾಷಿಕವೂ ಎಂದು ತಿಳಿಸುತ್ತದೆ. ಸಾಮಾನ್ಯವಾಗಿ ಬುಡಕಟ್ಟು ಸಮುದಾಯವು ತನ್ನೊಳಗಿನ ಸಂಪರ್ಕಕ್ಕೆ ತನ್ನದೇ ಆದ ಬುಡಕಟ್ಟು ಭಾಷೆಯನ್ನು ಇತರರೊಟ್ಟಿಗಿನ ಸಂಪರ್ಕಕ್ಕೆ ಮತ್ತೊಂದು ಭಾಷೆಯನ್ನು ಬಳಸುತ್ತದೆ.

ಐವತ್ತು ಸಾವಿರಕ್ಕಿಂತಲೂ ಹೆಚ್ಚು ಜನಸಂಖ್ಯೆಯನ್ನು ಹೊಂದಿರುವ ಬುಡಕಟ್ಟು ಭಾಷೆಗಳು ಸುಮಾರು 25.

ಅವುಗಳ ಹೆಸರು ಮತ್ತು ಮಾತನಾಡುವವರ ಸಂಖ್ಯೆ ಕೆಳಗಿನಂತಿದೆ.

ಕ್ರ.ಸಂ. ಭಾಷೆಯ ಹೆಸರು 1961 1971 1981
1. ಆವೋ 57,745 75,381 1,02,321
2. ಭಿಲಿ 24,39,611 33,99,285 42,93,314
3. ಭುಮಿಜ್ 1,42,003 51,651 50,384
4. ಬೋಡೋ 3,61,801 5,56,536 28,619
5. ಗಾರೋ 3,07,040 4,11,731 4,17,888
6. ಗೊಂಡಿ 15,01,431 16,88,284 19,13,262
7. ಹೋ 6,48,359 7,51,389 7,83,301
8. ಖಾಡಿಯಾ 1,77,159 1,91,421 2,12,605
9. ಖಾಸಿ 3,64,063 4,79,028 6,78,846
10. ಖೊಂಡ 1,68,027 1,96,316 1,95,793
11. ಕಿಸನ್ 50,378 73,847 1,59,327
12. ಕೊಲಾಯಿ 51,055 66,868 83,690
13. ಕೊನ್ಸಾಕ್ 57,119 72,338 76,092
14. ಕೋರ್ಕು 3,30,242 3,07,434 3,43,661
15. ಕೋಯ 1,40,777 2,11,877 2,40,245
16. ಕಡುಕ್ 11,41,804 1,235,665 1,333,670
17. ಲುಶಾಯ್ / ಮಿಜೋ 2,22,202 271,554 3,84,528
18. ಮಿಕಿರ್ 1,94,893 1,99,121 12,600
19. ಮಿಲಿ 1,36,598
20. ಮುಂಡ / ಅವರ್ಗೀಕೃತ 2,61,653 3,09,293 3,77,492
21. ಮುಂಡಾರಿ 7,37,037 7,71,253 7,42,739
22. ಪರ್ಜಿ 1,09,401 33,912 35,758
23. ಸಂತಾಲಿ 32,47,058 37,86,899 43,32,511
24. ಸವರ 2,65,721 2,22,018 2,09,092
25. ಘ್ರಿಪುರಿ 2,99,643 3,72,579 5,02,067

 

ಜನಜೀವನದ ಪ್ರಧಾನ ಕ್ಷೇತ್ರಗಳಾದ ಶಿಕ್ಷಣ, ಆಡಳಿತ ಮುಂತಾದವು ಗಳಲ್ಲಿ ಹಲವಾರು ಭಾಷೆಗಳ ಕಲಿಕೆ ಮತ್ತು ಬಳಕೆಗೆ ಬಹುಭಾಷಾ ಭಾರತ ದಲ್ಲಿ ಅವಕಾಶ ಮಾಡಿಕೊಡಲಾಗಿದೆ. ಇಂದು ದೇಶದ ಯಾವ ಮೂಲೆಯಲ್ಲಿ ಬೇಕಾದರೂ ಸುಮಾರು ಮಾಧ್ಯಮಗಳ ಮೂಲಕ ಹಲವಾರು ಭಾಷೆಗಳ ಕಾರ್ಯಕ್ರಮಗಳನ್ನು ಕೇಳ / ನೋಡಬಹುದು. ದೇಶ ಹೇಗೆ ಬಹುಭಾಷಿಕವೋ ಹಾಗೆಯೇ ಬಹುತೇಕ ಎಲ್ಲ ರಾಜ್ಯಗಳು ಬಹುಭಾಷಿಕ ರಾಜ್ಯಗಳು.

ಶೈಕ್ಷಣಿಕ ಕ್ಷೇತ್ರ

ಭಾರತದ ವಿಶಿಷ್ಟ ಭಾಷಾ ಪರಿಸ್ಥಿತಿಯನ್ನು ಗಣನೆಗೆ ತೆಗೆದುಕೊಂಡು ಶಿಕ್ಷಣದಲ್ಲಿ ಕಲಿಸಬೇಕಾಗಿರುವ ಭಾಷೆಗಳ ಬಗ್ಗೆ ನಿರ್ಧಾರವನ್ನು ತೆಗೆದು ಕೊಳ್ಳಲಾಗಿದೆ. ಈ ನಿರ್ಧಾರವೇ ತ್ರಿಭಾಷಾ ಸೂತ್ರ. ಪರಿಷ್ಕೃತ ಪ್ರಚಲಿತ ತ್ರಿಭಾಷಾ ಸೂತ್ರದ ಪ್ರಕಾರ 1 ಮೊದಲನೆಯ ಭಾಷೆಯಾಗಿ ಒಂದನೆಯ ತರಗತಿಯಿಂದ ಹತ್ತನೆ ತರಗತಿವರೆಗೆ ಮಗುವಿನ ಮಾತೃಭಾಷೆ ಅಥವಾ ಪ್ರಾದೇಶಿಕ ಭಾಷೆಯನ್ನು ಕಲಿಸಬೇಕು. 2. ಎರಡನೆಯ ಭಾಷೆಯಾಗಿ ಇಂಗ್ಲಿಶ್ ಅಥವಾ ಹಿಂದಿಯನ್ನು ಕಲಿಸಬೇಕು. ಅದು 5ನೇ ತರಗತಿಯಿಂದ 10ನೇ ತರಗತಿಯವರೆಗೆ ಕಡ್ಡಾಯ. ಈ ಹಂತದಲ್ಲಿ ವಿದ್ಯಾರ್ಥಿಯು ಹಿಂದಿ ಅಥವಾ ಇಂಗ್ಲಿಶ (ಯಾವುದನ್ನು ಕಡ್ಡಾಯವಾಗಿ ಆಯ್ಕೆ ಮಾಡಿಕೊಂಡಿಲ್ಲವೋ ಅದನ್ನು) ಐಚ್ಛಿಕವಾಗಿ ಅಧ್ಯಯನ ಮಾಡಬಹುದು. 3. ಮೂರನೆಯ ಭಾಷೆಯಾಗಿ ಎಂಟನೆ ತರಗತಿಯಿಂದ ಹತ್ತನೆ ತರಗತಿವರೆಗೆ ಹಿಂದಿ ಅಥವಾ ಇಂಗ್ಲಿಶ್ (ಹಿಂದೆ ಯಾವುದನ್ನು ಆರಿಸಿಕೊಂಡಿಲ್ಲವೋ ಅದನ್ನು ಕಲಿಸಬೇಕು. ಈ ಮೂರು ಭಾಷೆಗಳಲ್ಲಿ ವಿದ್ಯಾರ್ಥಿಯು ಒಂದು ಅಥವಾ ಅದಕ್ಕಿಂತ ಹೆಚ್ಚು ಆಧುನಿಕ ಭಾರತೀಯ ಭಾಷೆಗಳನ್ನು ಐಚ್ಛಿಕವಾಗಿ ಅಧ್ಯಯನ ಮಾಡಬಹುದು.

ಆದರೆ ಈ ಸೂತ್ರದ ಜಾರಿ ತೃಪ್ತಿಕರವಾಗಿಲ್ಲ ಎಂದು ರಾಷ್ಟ್ರೀಯ ಶಿಕ್ಷಣನೀತಿ 1986 ಒಪ್ಪಿಕೊಂಡಿದೆ. ವಿವಿಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಬೋಧಿಸಲಾಗುತ್ತಿರುವ ಭಾಷೆಗಳು ಹೀಗಿವೆ.

1. ಆಂಧ್ರಪ್ರದೇಶ ಮೊದಲ ಭಾಷೆ ತೆಲುಗು / ಉರ್ದು
ಎರಡನೆ ಭಾಷೆ ತೆಲುಗು / ಹಿಂದಿ
ಮೂರನೆ ಭಾಷೆ ಇಂಗ್ಲಿಶ್
2. ಅರುಣಾಚಲ ಪ್ರದೇಶ ಮೊದಲ ಭಾಷೆ ಇಂಗ್ಲಿಶ್
ಎರಡನೆ ಭಾಷೆ ಹಿಂದಿ
ಮೂರನೆ ಭಾಷೆ ಅಸ್ಸಾಮಿ / ಸಂಸ್ಕೃತ
3. ಅಸ್ಸಾಂ ಮೊದಲ ಭಾಷೆ ಅಸ್ಸಾಮಿ / ಹಿಂದಿ / ಬೆಂಗಾಲಿ / ಬೋಡೋ / ಮಣಿಪುರಿ
ಎರಡನೆ ಭಾಷೆ ಹಿಂದಿ/(ಹಿಂದಿ ಮೊದಲ ಭಾಷೆಯಲ್ಲದ ವಿದ್ಯಾರ್ಥಿಗಳಿಗೆ) ಸಂಸ್ಕೃತ (ಹಿಂದಿ ವಿದ್ಯಾರ್ಥಿಗಳಿಗೆ)
ಮೂರನೆ ಭಾಷೆ ಇಂಗ್ಲಿಶ್
4. ಬಿಹಾರ್ ಮೊದಲ ಭಾಷೆ ಹಿಂದಿ / ಉರ್ದು / ಬೆಂಗಾಲಿ / ಓರಿಯ / ಮೈಥಿಲಿ / ಸಂತಾಲಿ
ಎರಡನೆ ಭಾಷೆ ಹಿಂದಿ/(ಹಿಂದಿ ಮೊದಲ ಭಾಷೆಯಲ್ಲದ ವಿದ್ಯಾರ್ಥಿಗಳಿಗೆ) ಸಂಸ್ಕೃತ (ಹಿಂದಿ ವಿದ್ಯಾರ್ಥಿಗಳಿಗೆ)
ಮೂರನೆ ಭಾಷೆ ಇಂಗ್ಲಿಶ್
5. ಚತ್ತೀಸ್‌ಘಡ್ ಮೊದಲ ಭಾಷೆ ಹಿಂದಿ
6. ಗೋವ ಮೊದಲ ಭಾಷೆ ಹಿಂದಿ / ಉರ್ದು / ಮರಾಠಿ / ಕೊಂಕಣಿ / ಇಂಗ್ಲಿಶ್
ಎರಡನೆ ಭಾಷೆ ಹಿಂದಿ ಮತ್ತು ಕ್ಲಾಸಿಕಲ್ ಭಾಷೆ/ಮರಾಠಿ/ಕೊಂಕಣಿ/ಇಂಗ್ಲಿಶ್
ಮೂರನೆ ಭಾಷೆ ಹಿಂದಿ (ಮರಾಠಿ) ಕೊಂಕಣಿ / ಗುಜರಾತಿ / ಕನ್ನಡ / ಉರ್ದು ಸಂಸ್ಕೃತ/ಅರ್ಯಾಬಿಕ್/ಲ್ಯಾಟಿನ್/ ಜರ್ಮನ್/ಫ್ರೆಂಚ್/ಪೋರ್ಚುಗೀಸ್
7. ಗುಜರಾತ್ ಮೊದಲ ಭಾಷೆ ಗುಜರಾತಿ
ಎರಡನೆ ಭಾಷೆ ಹಿಂದಿ
ಮೂರನೆ ಭಾಷೆ ಇಂಗ್ಲಿಶ್
8. ಹರ್ಯಾಣ ಮೊದಲ ಭಾಷೆ ಹಿಂದಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ತೆಲುಗು / ಸಂಸ್ಕೃತ / ಪಂಜಾಬಿ / ಹಿಂದಿ
9. ಹಿಮಾಚಲ ಪ್ರದೇಶ ಮೊದಲ ಭಾಷೆ ಹಿಂದಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಉರ್ದು / ತೆಲುಗು / ತಮಿಳು
10. ಜಮ್ಮು ಮತ್ತು ಕಾಶ್ಮೀರ ಮೊದಲ ಭಾಷೆ ಉರ್ದು / ಹಿಂದಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ / ಉರ್ದು / ಪಂಜಾಬಿ (ಐಚ್ಛಿಕ)
11. ಜಾರ್ಖಂಡ್ ಮೊದಲ ಭಾಷೆ ಹಿಂದಿ
12. ಕರ್ನಾಟಕ ಮೊದಲ ಭಾಷೆ ಕನ್ನಡ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ
13. ಕೇರಳ ಮೊದಲ ಭಾಷೆ ಮಲಯಾಳಂ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ
14. ಮಧ್ಯಪ್ರದೇಶ ಮೊದಲ ಭಾಷೆ ಪ್ರಾಥಮಿಕ ಹಂತದಲ್ಲಿ ಮಾತೃ ಭಾಷೆ, ಮಾಧ್ಯಮಿಕ ಹಂತದಲ್ಲಿ ಮಾತೃಭಾಷೆ ಅಥವಾ ಇಂಗ್ಲಿಶ್, ಪ್ರೌಢಶಾಲಾ ಹಂತದಲ್ಲಿ ಹಿಂದಿ, ಇಂಗ್ಲಿಶ್, ಮರಾಠಿ, ಉರ್ದು ಪಂಜಾಬಿ, ಸಿಂಧಿ, ಬಂಗಾಲಿ, ಗುಜರಾತಿ, ತಮಿಳು, ತೆಲುಗು, ಮಲಯಾಳಂ ಇವುಗಳಲ್ಲಿ ಯಾವುದಾದರೂ ಒಂದು.
ಎರಡನೆ ಭಾಷೆ ಸಂಸ್ಕೃತ / ಹಿಂದಿ / ಇಂಗ್ಲಿಶ್
ಮೂರನೆ ಭಾಷೆ ಇಂಗ್ಲಿಶ್/ಸಂಸ್ಕೃತ/ಹಿಂದಿ/ಮರಾಠಿ/ಉರ್ದು/ಪಂಜಾಬಿ/ಸಿಂಧಿ/ ಬೆಂಗಾಲಿ/ಗುಜರಾತಿ/ತೆಲುಗು/ಅರ್ಯಾಬಿಕ್/ಪರ್ಸಿಯನ್/ಫ್ರೆಂಚ್
15. ಮಹಾರಾಷ್ಟ್ರ ಮೊದಲ ಭಾಷೆ ಮರಾಠಿ/ಹಿಂದಿ/ಉರ್ದು/ಇಂಗ್ಲಿಶ್/ಸಿಂಧಿ/ಗುಜರಾತಿ/ಕನ್ನಡ/ತೆಲುಗು /ಬೆಂಗಾಲಿ
ಎರಡನೆ ಭಾಷೆ ಹಿಂದಿ / ಮರಾಠಿ / ಉರ್ದು
ಮೂರನೆ ಭಾಷೆ ಹಿಂದಿ /ಇಂಗ್ಲೀಶ್
16. ಮಣಿಪುರ್ ಮೊದಲ ಭಾಷೆ ಮಣಿಪುರಿ (ಅಂಗೀಕೃತ ಸ್ಥಳೀಯ ಉಪಭಾಷೆ)
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ
17. ಮೇಘಾಲಯ ಮೊದಲ ಭಾಷೆ ಮಾತೃಭಾಷೆ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಖಾಸಿ / ಹಿಂದಿ / ಗಾರೋ / ಅಸ್ಸಾಮಿ / ಬೆಂಗಾಲಿ
18. ಮಿಜೋರಾಂ ಮೊದಲ ಭಾಷೆ ಮಿಜೋ / ಇಂಗ್ಲಿಶ್
ಎರಡನೆ ಭಾಷೆ ಇಂಗ್ಲಿಶ್ / ಮಿಜೋ
ಮೂರನೆ ಭಾಷೆ ಹಿಂದಿ
19. ನಾಗಾಲ್ಯಾಂಡ್ ಮೊದಲ ಭಾಷೆ ಸ್ಥಳೀಯ ಉಪಭಾಷೆ ಇಂಗ್ಲಿಶ್
ಎರಡನೆ ಭಾಷೆ ಇಂಗ್ಲಿಶ್ / ಸ್ಥಳೀಯ ಉಪಭಾಷೆ ಹಿಂದಿ
ಮೂರನೆ ಭಾಷೆ ಹಿಂದಿ
20. ಒರಿಸ್ಸಾ ಮೊದಲ ಭಾಷೆ ಒರಿಯಾ/ಹಿಂದಿ/ಬೆಂಗಾಲಿ/ತೆಲುಗು/ಉರ್ದು/ಇಂಗ್ಲಿಶ್
ಎರಡನೆ ಭಾಷೆ ಇಂಗ್ಲಿಶ್ / ಹಿಂದಿ
ಮೂರನೆ ಭಾಷೆ ಹಿಂದಿ / ಒರಿಯಾ
21. ಪಂಜಾಬ್ ಮೊದಲ ಭಾಷೆ ಪಂಜಾಬಿ
ಎರಡನೆ ಭಾಷೆ ಹಿಂದಿ
ಮೂರನೆ ಭಾಷೆ ಇಂಗ್ಲಿಶ್
22. ರಾಜಸ್ಥಾನ್ ಮೊದಲ ಭಾಷೆ ಹಿಂದಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಉರ್ದು/ಪಂಜಾಬಿ/ಬಂಗಾಲಿ/ ಸಂಸ್ಕೃತ/ಗುಜರಾತಿ/ಮಲಯಾಳಂ/ಮರಾಠಿ
23. ಸಿಕ್ಕಿಂ ಮೊದಲ ಭಾಷೆ ಇಂಗ್ಲಿಶ್
ಎರಡನೆ ಭಾಷೆ ನೇಪಾಳಿ / ಭೂತಿಯಾ / ಲೆಪ್ಜಾ / ಲಿಂಜೋ / ಹಿಂದಿ
ಮೂರನೆ ಭಾಷೆ ಎರಡನೆ ಭಾಷೆಗಳಂತೆ.
24. ಉತ್ತರಖಂಡ ಮೊದಲ ಭಾಷೆ ಹಿಂದಿ
25. ತಮಿಳುನಾಡು ಮೊದಲ ಭಾಷೆ ತಮಿಳು ಅಥವಾ ಮಾತೃಭಾಷೆ
ಎರಡನೆ ಭಾಷೆ ಇಂಗ್ಲಿಶ್ ಅಥವಾ ಯಾವುದಾದರೂ ಭಾರತೀಯ ಭಾಷೆ
26. ತ್ರಿಪುರ ಮೊದಲ ಭಾಷೆ ಬೆಂಗಾಲಿ / ಕೋಕ್ ಬರೋಕ್ /ಉಶಾಯಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ
27. ಉತ್ತರ ಪ್ರದೇಶ ಮೊದಲ ಭಾಷೆ ಹಿಂದಿ / ಉರ್ದು / ಇಂಗ್ಲಿಶ್
ಎರಡನೆ ಭಾಷೆ ಇಂಗ್ಲಿಶ್ / ಹಿಂದಿ
ಮೂರನೆ ಭಾಷೆ ಸಂಸ್ಕೃತ / ಉರ್ದು ಅಥವಾ  ಯಾವುದಾದರೂ ಒಂದು ಇತರ ಆಧುನಿಕ ಭಾರತೀಯ ಭಾಷೆ
28. ಪಶ್ಚಿಮ ಬಂಗಾಳ ಮೊದಲ ಭಾಷೆ ಬಂಗಾಲಿ ಅಥವಾ ಮಾತೃಭಾಷೆ
ಎರಡನೆ ಭಾಷೆ ಇಂಗ್ಲಿಶ್ / ಬಂಗಾಲಿ / ನೇಪಾಲಿ (ಯಾವುದಾದರೂ ಒಂದು)
ಮೂರನೆ ಭಾಷೆ ಬಂಗಾಲಿ/ಹಿಂದಿ/ಸಂಸ್ಕೃತ/ಪರ್ಷಿಯನ್/ಅರ್ಯಾಬಿಕ್/ ಲ್ಯಾಟೀನ್/ಗ್ರೀಕ್/ಫ್ರೆಂಚ್/ಜರ್ಮನ್/ಸ್ಪ್ಯಾನಿಷ್/ಇಟಾಲಿಯನ್
29. ಅಂಡಮಾನ್ ಮತ್ತು ನಿಕೋಬಾರ್ ಮೊದಲ ಭಾಷೆ ಬಂಗಾಲಿ/ಹಿಂದಿ/ಇಂಗ್ಲಿಶ್/ನಿಕೋಬರ್ ತಮಿಳು/ಮಲಯಾಳಂ/ಕೊರಿಯನ್/ ನಿಕೋಬಾರಿ
ಎರಡನೆ ಭಾಷೆ ಹಿಂದಿ
ಮೂರನೆ ಭಾಷೆ ಹಿಂದಿ/ತೆಲುಗು/ಬೆಂಗಾಲಿ/ಮಲಯಾಳಂ/ಉರ್ದು/ಸಂಸ್ಕೃತ
30. ಚಂಡೀಗಢ ಮೊದಲ ಭಾಷೆ ಹಿಂದಿ/ಪಂಜಾಬಿ/ಇಂಗ್ಲಿಶ್ (ಪ್ರೌಢಹಂತದಲ್ಲಿ ಇಂಗ್ಲಿಶ್)
ಎರಡನೆ ಭಾಷೆ ಪಂಜಾಬಿ / ಹಿಂದಿ
ಮೂರನೆ ಭಾಷೆ ಇಂಗ್ಲಿಶ್/ಪಂಜಾಬಿ/ಹಿಂದಿ (ಹಿಂದಿ ಅಥವಾ ಪಂಜಾಬಿ ಪ್ರೌಢ ಹಂತದಲ್ಲಿ ಮಾತ್ರ)
31. ದಾದ್ರಾ ಮತ್ತು ನಗರ ಹವೇಲಿ ಮೊದಲ ಭಾಷೆ ಗುಜರಾತಿ
ಎರಡನೆ ಭಾಷೆ ಹಿಂದಿ
ಮೂರನೆ ಭಾಷೆ ಇಂಗ್ಲಿಶ್
32. ಡಾಮನ್ ಮತ್ತು ದಿಯೂ ಮೊದಲ ಭಾಷೆ ಮಾತೃಭಾಷೆ ಇಂಗ್ಲಿಶ್/ಮರಾಠಿ/ಉರ್ದು/ಹಿಂದಿ
ಎರಡನೆ ಭಾಷೆ ಹಿಂದಿ/ಮರಾಠಿ/ಕೊಂಕಣಿ/ಇಂಗ್ಲಿಶ್
ಮೂರನೆ ಭಾಷೆ ಎರಡನೆಯ ಭಾಷೆಯ ಪಟ್ಟಿಯ ಜೊತೆಗೆ ಲ್ಯಾಟಿನ್/ಜರ್ಮನ/ಫ್ರೆಂಚ್/ಪೋರ್ಚುಗೀಸ್
33. ದೆಹಲಿ ಮೊದಲ ಭಾಷೆ ಸಾಮಾನ್ಯವಾಗಿ ಹಿಂದಿ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಸಂಸ್ಕೃತ/ಪಂಜಾಬಿ/ಉರ್ದು/ ಬೆಂಗಾಲಿ/ಸಿಂಧಿ/ಗುಜರಾತಿ/ ತಮಿಳು/ತೆಲುಗು/ಕನ್ನಡ/ಮರಾಠಿ/ಪರ್ಸಿಯನ್/ಅರ್ಯಾಬಿಕ್
34. ಲಕ್ಷದ್ವೀಪ ಮೊದಲ ಭಾಷೆ ಮಲಯಾಳಂ
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ
35. ಪಾಂಡಿಚೆರಿ ಮೊದಲ ಭಾಷೆ ತಮಿಳು / ಮಲಯಾಳಂ / ತೆಲುಗು
ಎರಡನೆ ಭಾಷೆ ಇಂಗ್ಲಿಶ್
ಮೂರನೆ ಭಾಷೆ ಹಿಂದಿ

ಶಿಕ್ಷಣ ಮಾಧ್ಯಮ

ಶಿಕ್ಷಣ ತಜ್ಞರು ಮಗುವಿನ ಮಾತೃಭಾಷೆ ಪ್ರಾಥಮಿಕ ಶಾಲಾ ಹಂತದಲ್ಲಿ ಶಿಕ್ಷಣ ಮಾಧ್ಯಮವಾಗಿರಬೇಕು ಎನ್ನುತ್ತಾರೆ. ಭಾರತದ ಸಂವಿಧಾನವು ಭಾಷಾ ಅಲ್ಪಸಂಖ್ಯಾತರ ಗುಂಪಿಗೆ ಸೇರಿದ ಮಕ್ಕಳಿಗೆ ಪ್ರಾಥಮಿಕ ಶಾಲಾ ಹಂತದಲ್ಲಿ ಅವರ ಮಾತೃಭಾಷೆಯಲ್ಲಿಯೇ ಶಿಕ್ಷಣವನ್ನು ಒದಗಿಸಲು ರಾಜ್ಯ ಅಥವಾ ಸ್ಥಳೀಯ ಸಂಸ್ಥೆಗಳು ಎಲ್ಲ ಪ್ರಯತ್ನವನ್ನು ಮಾಡಬೇಕು ಎಂದು ತಿಳಿಸುತ್ತದೆ. ದೇಶದಲ್ಲಿ ನಡೆದ ಐದನೆಯ ಶಿಕ್ಷಣ ಸರ್ವೇಕ್ಷಣೆಯೂ ಪ್ರಾಥಮಿಕ ಹಂತದಲ್ಲಿ 43 ಭಾಷೆಗಳು, ಮಾಧ್ಯಮಿಕ ಹಂತದಲ್ಲಿ 31 ಭಾಷೆಗಳೂ, ಪ್ರೌಢ ಹಂತದಲ್ಲಿ 22 ಭಾಷೆಗಳು, ಹೈಯರ್ ಸೆಕೆಂಡರಿ ಹಂತದಲ್ಲಿ 20 ಭಾಷೆಗಳು ಶಿಕ್ಷಣ ಮಾಧ್ಯಮಗಳಾಗಿವೆ ಎಂದು ಗುರುತಿಸಿದೆ. ಅಂದರೆ ಪ್ರಾಥಮಿಕ ಹಂತದಲ್ಲಿ ಅತಿ ಹೆಚ್ಚು ಭಾಷೆಗಳು, ಶಿಕ್ಷಣದಲ್ಲಿ ಮುಂದಕ್ಕೆ  ಹೋದಂತೆ ಕಡಿಮೆ ಭಾಷೆಗಳು ಶಿಕ್ಷಣ ಮಾಧ್ಯಮಗಳಾಗಿವೆ.

ವಿವಿಧ ಭಾಷೆಗಳನ್ನು ಶಿಕ್ಷಣ ಮಾಧ್ಯಮಗಳನ್ನಾಗಿ ಹೊಂದಿರುವ ಶಾಲೆಗಳ ಸಂಖ್ಯೆ ಈ ರೀತಿ ಇದೆ.

ಕ್ರ.. ಭಾಷೆ ಪ್ರಾಥಮಿಕ ಮಾಧ್ಯಮಿಕ ಪ್ರೌಢ ಹೈಯರ್ ಸೆಕೆಂಡರಿ
1. ಅಸ್ಸಾಮಿ 21,684 4,800 2,158 308
2. ಬಂಗಾಲಿ 54,282 10,460 6,133 1,198
3. ಗುಜರಾತಿ 28,191 16,398 4,730 1,231
4. ಹಿಂದಿ 2.61,062 72,412 21,074 7,437
5. ಕನ್ನಡ 33,620 13,127 3,945 761
6. ಕಾಶ್ಮೀರಿ 60 11 2 0
7. ಮಲಯಾಳಂ 9,821 5,395 2,457 107
8. ಮರಾಠಿ 53,629 22,016 7,520 1,345
9. ಒರಿಯಾ 37,926 9,078 3,920 6
10. ಪಂಜಾಬಿ 13,323 4,037 2,580 293
11. ಸಂಸ್ಕೃತ 6 1 1 0
12. ಸಿಂಧಿ 125 93 34 6
13. ತಮಿಳು 34,871 9,921 4,089 1,579
14. ತೆಲುಗು 50,314 10,487 5,205 561
15. ಉರ್ದು 21,483 6,311 1,764 285
16. ಭಾರತೀಯ ಇತರ ಭಾಷೆಗಳು 15,083 2,534 559 22
17. ಇಂಗ್ಲಿಶ್ 8,100 6,673 5,491 2,306

ಆಡಳಿತ

ಭಾರತದ ಸಂವಿಧಾನದಲ್ಲಿ ಹೇಳಿರುವಂತೆ ಕೇಂದ್ರ ಹಾಗೂ ರಾಜ್ಯ ಸರಕಾರಗಳು ತಮ್ಮ ಆಡಳಿತವನ್ನು ನಡೆಸಲು ಸೂಕ್ತ ಭಾಷೆಗಳನ್ನು ಆಯ್ಕೆ ಮಾಡಿಕೊಂಡಿವೆ. ಹೀಗಾಗಿ ಕೇಂದ್ರ ಸರ್ಕಾರದ ಆಡಳಿತ ಭಾಷೆ ದೇವನಾಗರಿ ಲಿಪಿಯ ಹಿಂದಿ. ಇಂಗ್ಲಿಶ್ ಸಹ ಆಡಳಿತ ಭಾಷೆಯಾಗಿ ಸಂಸತ್ತು ಬಯಸುವವರೆಗೆ ಮುಂದುವರಿಯುತ್ತದೆ.

ಹಾಗೆಯೇ ಬೇರೆ ಬೇರೆ ರಾಜ್ಯಗಳು ಒಂದು ಅಥವಾ ಒಂದಕ್ಕಿಂತ ಹೆಚ್ಚು ಭಾಷೆಗಳನ್ನು ತಮ್ಮ ಆಡಳಿತ ಭಾಷೆಯನ್ನಾಗಿ ಆಯ್ಕೆ ಮಾಡಿಕೊಂಡಿವೆ.

ಕ್ರ.ಸಂ. ರಾಜ್ಯ/ಕೇಂದ್ರಾಡಳಿತ ಪ್ರದೇಶ ಭಾಷೆ
1. 

 

ಆಂಧ್ರಪ್ರದೇಶ ತೆಲುಗು
ಉರ್ದು (ತೆಲಂಗಾಣದಲ್ಲಿ ಮತ್ತು ಇತರ 3 ಜಿಲ್ಲೆಗಳಲ್ಲಿ ಹೆಚ್ಚುವರಿ ಆಡಳಿತ ಭಾಷೆ)
2. ಅರುಣಾಚಲ ಪ್ರದೇಶ ಇಂಗ್ಲಿಶ್
3. ಅಸ್ಸಾಂ ಅಸ್ಸಾಮಿ, ಬಂಗಾಲಿ (ಕಚಾರ್ ಜಿಲ್ಲೆಯಲ್ಲಿ)
4. ಬಿಹಾರ್ ಹಿಂದಿ, ಉರ್ದು (15 ಜಿಲ್ಲೆಗಳಲ್ಲಿ ಹೆಚ್ಚುವರಿ ಆಡಳಿತ ಭಾಷೆ)
5. ಗೋವಾ ಕೊಂಕಣಿ (ದೇವನಾಗರಿ ಲಿಪಿ) ಮರಾಠಿ (ಹೆಚ್ಚುವರಿ ಆಡಳಿತ ಭಾಷೆ)
6. 

 

ಗುಜರಾತ್ ಗುಜರಾತಿ
ಹಿಂದಿ (ಹೆಚ್ಚುವರಿ ಆಡಳಿತ ಭಾಷೆ)
7. ಹರ್ಯಾಣ ಹಿಂದಿ
8. ಹಿಮಾಚಲ ಪ್ರದೇಶ ಹಿಂದಿ
9. ಜಮ್ಮು ಮತ್ತು ಕಾಶ್ಮೀರ್ ಉರ್ದು
10. ಕರ್ನಾಟಕ ಕನ್ನಡ
11. ಕೇರಳ ಮಲಯಾಳಂ, ಇಂಗ್ಲಿಶ್
12. ಮಧ್ಯಪ್ರದೇಶ ಹಿಂದಿ
13. ಮಹಾರಾಷ್ಟ್ರ ಮರಾಠಿ
14. ಮಣಿಪುರಿ ಮಣಿಪುರಿ
15. ಮೇಘಾಲಯ ಇಂಗ್ಲಿಶ್
16. ಮಿಜೋರಾಂ ಮಿಜೋ, ಇಂಗ್ಲಿಶ್
17. ನಾಗಾಲ್ಯಾಂಡ್ ಇಂಗ್ಲಿಶ್
18. ಒರಿಸ್ಸಾ ಒರಿಯಾ
19. ಪಂಜಾಬ್ ಪಂಜಾಬಿ
20. ರಾಜಸ್ಥಾನ ಹಿಂದಿ
21. ಸಿಕ್ಕಿಂ ನೇಪಾಲಿ (ದೇವನಾಗರಿ ಲಿಪಿ) ಭೂತಯಾ, ಲೆಪ್ಚಾ, ಲಿಂಬು
22. ತಮಿಳುನಾಡು ತಮಿಳು
23. ಘ್ರಿಪುರ ಬಂಗಾಲಿ
24. 

 

 

ಉತ್ತರ ಪ್ರದೇಶ ಹಿಂದಿ
ಉರ್ದು ಹೆಚ್ಚುವರಿ ಆಡಳಿತ ಭಾಷೆ, ಬಂಗಾಲಿ,  ನೇಪಾಲಿ
ದಾರ್ಜಿಲಿಂಗ್ ಜಿಲ್ಲೆಯ ಮೂರು ಗುಡ್ಡಗಾಡು ಉಪ ವಿಭಾಗದಲ್ಲಿ
25. ಅಂಡಮಾನ್ ಮತ್ತು ನಿಕೋಬಾರ್ ಹಿಂದಿ, ಇಂಗ್ಲಿಶ್
26. ಚಂಡಿಗಢ ಇಂಗ್ಲಿಶ್
27. ದಾದ್ರಾ ನಗರ ಹವೇಲಿ ಇಂಗ್ಲಿಶ್
28. ದೆಹಲಿ ಹಿಂದಿ ಇಂಗ್ಲಿಶ್
29. ದಾಮನ್ ಮತ್ತು ದಿಯು ಇಂಗ್ಲಿಶ್
30. ಲಕ್ಷದ್ವೀಪ್ ಮಲಯಾಳಂ ಮತ್ತು ಇಂಗ್ಲಿಶ್
31. 

 

ಪಾಂಡಿಚೆರಿ ತಮಿಳು, ಇಂಗ್ಲಿಶ್, ಫ್ರೆಂಚ್, ಮಾಹೆ ಭಾಗದಲ್ಲಿ ಮಲಯಾಳಂ
ಯಾನಂನಲ್ಲಿ ತಮಿಳಿನ ಬದಲಾಗಿ ತೆಲುಗು

ಆದರೂ ದೇಶದ ಭಾಷಾ ಪರಿಸ್ಥಿತಿ ಬಹುಭಾಷಾ ನೆಲೆಯನ್ನು ಹೊಂದಿರುವುದರಿಂದ ಭಾರತದ ಪ್ರಜೆಗಳು ಕೇಂದ್ರ ಅಥವಾ ರಾಜ್ಯ ಸರ್ಕಾರಕ್ಕೆ ತಮ್ಮ ಕುಂದುಕೊರತೆಯನ್ನು ಹೇಳಿಕೊಳ್ಳುವ, ಅರ್ಜಿಯನ್ನು ಕೇಂದ್ರ ಅಥವಾ ರಾಜ್ಯದಲ್ಲಿ ಬಳಕೆಯಲ್ಲಿರುವ ಯಾವ ಭಾಷೆಯಲ್ಲಿ ಬೇಕಾದರೂ ಸಲ್ಲಿಸಬಹುದು. ಭಾಷಾ ಅಲ್ಪಸಂಖ್ಯಾತರು ತಮ್ಮ ಭಾಷೆ, ಲಿಪಿ ಅಥವಾ ಸಂಸ್ಕೃತಿಯನ್ನು ಸಂರಕ್ಷಿಸಿಕೊಳ್ಳುವ ಹಕ್ಕನ್ನೂ ಹೊಂದಿದ್ದಾರೆ. ಯಾರಿಗೂ ಸಹ ಧರ್ಮ, ಜಾತಿ ಭಾಷೆಯ ಆಧಾರದ ಮೇಲೆ ರಾಜ್ಯ ಸರ್ಕಾರ ನಡೆಸುವ ಅಥವಾ ರಾಜ್ಯ ಸರ್ಕಾರದಿಂದ ಅನುದಾನ ಪಡೆಯುವ ಶಿಕ್ಷಣ ಸಂಸ್ಥೆಗೆ ಪ್ರವೇಶವನ್ನು ನಿರಾಕರಿಸಲಾಗದು.

ಸಂಸತ್ ಸದಸ್ಯರು ಹಿಂದಿ ಅಥವಾ ಇಂಗ್ಲಿಶಿನಲ್ಲಿ ಸಮರ್ಪಕವಾಗಿ ಅಭಿವ್ಯಕ್ತಿಸಲಾಗದಿದ್ದರೆ ಅವರು ತಮ್ಮ ಮಾತೃಭಾಷೆಯಲ್ಲಿ ಸದನವನ್ನು ಉದ್ದೇಶಿಸಿ ಮಾತಾನಾಡಲು ಸಭಾಧ್ಯಕ್ಷರು ಅನುಮತಿಯನ್ನು ಕೊಡಬಹುದು. ಹಾಗೆಯೇ ವಿಧಾನಸಭೆ, ವಿಧಾನಪರಿಷತ್ತಿನ ಸದಸ್ಯರೂ ಸಹ ಆಯಾ ರಾಜ್ಯದ ಆಡಳಿತ ಭಾಷೆ ಅಥವಾ ಇಂಗ್ಲಿಶ್ ಅಥವಾ ಹಿಂದಿಯಲ್ಲಿ ಮಾತನಾಡಲಾರದವ ರಾಗಿದ್ದರೆ ಅವರೂ ಸಹ ಸಭೆಯನ್ನು ತಮ್ಮ ಮಾತೃಭಾಷೆಯಲ್ಲಿ ಸದನವನ್ನು ಉದ್ದೇಶಿಸಿ ಮಾತನಾಡಲು ಸಭಾಧ್ಯಕ್ಷರು ಅನುಮತಿಯನ್ನು ಕೊಡಬಹುದಾಗಿದೆ.

ಹೀಗೆ ಯಾವ ಭಾಷಿಕರೂ ಬಹುಭಾಷಾ ಭಾರತದಲ್ಲಿ ತನ್ನ ನಿತ್ಯ ಜೀವನವನ್ನು ಎಡರು ತೊಡರುಗಳಿಲ್ಲದೆ ನಡೆಸುವಂತಹ ಭಾಷಾ ಸಾಮರಸ್ಯದ ಸ್ಥಿತಿ ನಿರ್ಮಾಣವಾಗಿದೆ.