ಸ್ತ್ರೀಯ ಜನಮವಿದಕೆ  | ಹಾಕಬೇಡವೊ ಸಖಾ ಹರಿ

ರಾತ್ರಿ ಇಲ್ಲ ಹಗಲು  | ಪರರದ್ದೇ ತಾಬೆದಾರಿ
ಕುಣಿದಾಡುವ ಹೊಟ್ಟು  | ಇಲ್ಲ ಆವುದೂ ಕೆಲಸದ ಹೊರೆ
ಕೊಡಬೇಡವೊ  | ಹೆಣ್ಣು ಜನುಮವನು ರಾಮ  ||

ಗ್ರಾಮೀಣ ಸ್ತ್ರೀಯರಿಗೆ ಸ್ತ್ರೀಯಾಗಿ ಜನುಮವೇ ಬೇಡ ಎನ್ನುವಷ್ಟು ಪರಿಸ್ಥಿತಿ ಬಿಗಿಡಾಯಿಸಿ ಹೋಗಿದೆ. ಸಂಸಾರವು ಸುಖ-ದುಃಖಗಳ ಒಟ್ಟು ಮಿಶ್ರಣ; ಅಮೃತ ಮತ್ತು ವಿಷಗಳೆರಡರ ಪ್ರಾಶನವೂ ಇಲ್ಲಿ ಇರುವುದು. ಆದರೆ ಗ್ರಾಮೀಣ ಸ್ತ್ರೀಯರ ಪಾಲಿಗೆ ಬಂದಿರುವುದು ಮಾತ್ರ ಬರಿಯ ದುಃಖ ಮಾತ್ರ. ಅವರ ಬದುಕು ಬಹಳ ನಾಚಿಕೆಗೇಡಿನದ್ದು ಎಂಬಂತಾಗಿ ಹೋಗಿದೆ. ಉಪೇಕ್ಷೆ ಮತ್ತು ಕನಿಷ್ಠ ದರ್ಜೆ ಇವುಗಳಲ್ಲಿಯೇ ಅವರೆಲ್ಲ ಬಂಧಿಸಲ್ಪಟ್ಟಿದ್ದಾರೆ. ನಿಟ್ಟುಸಿರು, ದುಃಖದ ನೈವೇದ್ಯ, ಆಯುಷ್ಯದ ವಿಲಕ್ಷಣ ಸಂಗತಿಗಳು ಇವೇ ಅವರ ಪಾಲಿಗಿರುವ ಸಂಪತ್ತು. ರಾತ್ರಿಯೂ ಹಗಲೂ ಬರಿಯ ಕಷ್ಟಗಳು. ಅವರೆಲ್ಲ ಅಜ್ಞಾನದ ಅಂಧಃಕಾರದಿಂದ ಆವರಿಸಿಬಿಟ್ಟಿದ್ದಾರೆ, ಸಿಲುಕಿಯೂ ಇದ್ದಾರೆ ಪೂರ್ಣವಾಗಿ ಅಂಧಃಶ್ರದ್ಧೆಯೊಳಗೆ. ಹೆಣ್ಣುಮಗು ಹುಟ್ಟಿದಂದಿನಿಂದಲೇ ಕುಟುಂಬದಲ್ಲಿ ವ್ಯಕ್ತವಾಗುವ ಮೂಲಭೂತ ಕಾಳಜಿ, ಅವಳು ಪರರ ಸ್ವತ್ತು ಎಂಬಂತೆಯೇ ಅವಳನ್ನು ನೋಡುವ ಸಂಸ್ಕಾರ ಪ್ರಜ್ಞೆ. ಹುಡುಗಿ ಬೆಳೆಯಲಾರಂಭಿಸಿದಳೋ ತಂದೆ-ತಾಯಿಗಳಲ್ಲಿ ಆನಂದಕ್ಕಿಂತ ಅವಳ ಬಗ್ಗೆ ಚಿಂತೆಯೇ ಅಧಿಕವಾಗಿ ಕಾಡಿಸಲಾರಂಭಿಸುತ್ತದೆ. ಅದನ್ನು ಹೀಗೆ ಶಬ್ದಗಳಲ್ಲಿ ಹೇಳಲಾಗಿದೆ:

ಹುಡುಗಿ ಬೆಳೆವಳು  | ಕೋರೈಸುವ ಚಂದ್ರಮನಂತೆ  |
ಅಂತರಂಗದೊಳು  | ತಂದೆಗೆ ಆವರಿಸುವುದು ಘೋರಚಿಂತೆ  ||

ಗ್ರಾಮೀಣ ಭಾಗದಲ್ಲಿ ಹೆಣ್ಣುಮಕ್ಕಳ ವಿವಾಹವು ಬಹಳ ತ್ವರಿತಗತಿಯಲ್ಲಿ ನಡೆಯುತ್ತದೆ. ೧೮ ವರುಷಗಳ ನಂತರ ಹೆಣ್ಣುಮಕ್ಕಳು ವಿವಾಹವಾಗಬೇಕು ಎಂಬುದಾಗಿ ಕಾನೂನಿದೆ. ಆದರೆ ಅದು ಬರಿಯ ಕಾಗದದ ಮೇಲಷ್ಟೇ ಉಳಿದುಬಿಟ್ಟಿದೆ. ಹುಡುಗಿ ತೊಳೆಯುವ, ಬಳಿಯುವ ವಯಸ್ಸಿಗೆ ಬರುತ್ತಿದ್ದಂತೆಯೇ ಅವಳ ಲಗ್ನದ ಬಗ್ಗೆ ಗಡಿಬಿಡಿ. ಮದುವೆಯ ಅರ್ಧ, ಆನಂತರದ ಜವಾಬ್ದಾರಿಗಳು, ಗರ್ಭಿಣಿಯಾಗುವುದು, ಬಾಣಂತಿತನ, ಮಕ್ಕಳ ಪಾಲನೆ-ಪೋಷಣೆಯ ಬಗ್ಗೆ ತಿಳಿದುಕೊಳ್ಳುವಷ್ಟು ಮಾನಸಿಕ, ಬೌದ್ದಿಕ ಮತ್ತು ಶಾರೀರಿಕ ಶಕ್ತಿ ಆ ವಯಸ್ಸಿಗೆ ಹೆಣ್ಣುಮಕ್ಕಳಲ್ಲಿ ಇರುವುದಿಲ್ಲ. ಹಾಗಿರುವಾಗ ಅವರ ಮೇಲೆ ಸಾಮಾಜಿಕ ಒತ್ತಾಯವನ್ನು ಹೇರುವಂತಹ ಕೌಟುಂಬಿಕ ನೀತಿಯು ಬಹಳ ಅಶಾಸ್ತ್ರೀಯ ಮತ್ತು ಅಮಾನುಷವಾದುದಾಗಿದೆ ಎಂದು ಹೇಳಬೇಕಾಗುತ್ತದೆ.

ಮಾವನ ಮನೆಯ ವಾಸ ಮತ್ತು ಹಿಂಸೆ

ಮಾವನ ಮಾತು ಎಂಬುದು ಹಾಗಲಕಾಯಿಯ ಬಳ್ಳಿ, ರೇಶಿಮೆಯ ಗಂಟು, ಮಹಡಿಯ ಮೇಲೆ ಬರುವಾಗ, ಹೋಗುವಾಗ ಬಡಿಯುವ ತೊಲೆ, ಸಟಸಟ ಎಂದು ಬರುವ ನೀರಿನ ಶಬ್ದ, ಮೆಣಸಿನಕಾಯಿಯ ಘಾಟು, ಮುಳ್ಳಿನ ಗೊಂಚಲು ಮತ್ತು ವಿಷದ ಗುಟುಕು ಮೊದಲಾಗಿ ಯಾವ ಉಪಮೆಯಲ್ಲಿ ಹೇಳುವುದು? ಆದರೆ ಇಂಥ ಕಟು ಅನುಭವವನ್ನು ಗ್ರಾಮೀಣ ಸ್ತ್ರೀಯು ಏಕೆ ಅನುಭವಿಸುತ್ತಿದ್ದಾಳೆ? ಎಲ್ಲ ಕಟು ಮಾತುಗಳನ್ನು ಮೂಕಳಾಗಿ ಸಹಿಸಿಕೊಂಡಿದ್ದಾಳೆ? ತನ್ನ ತಂದೆ-ತಾಯಿಗಳ ಹೆಸರಿಗೆ ಚ್ಯುತಿ ಬರಬಾರದು ಎಂಬ ಕಾರಣದಿಂದ:

ಮಾವನ ಮಾತು | ಕಟು ವಿಷದ ಗುಟುಕು |
ತಾಯಿತಂದೆಯರೆ ನಿಮಗಾಗಿ ಮಾಡಿರುವೆ ಸಿಹಿಯೊಂದನು ||
ಅತ್ತೆಯೊಡನೆ ವಾಸ | ಅಳುವನೆ ತರಿಸುತಿದೆ ಹೆಜ್ಜೆ ಹೆಜ್ಜೆಗೂ |
ಮಗಳು ದೊಡ್ಡವರೊಡನೆ ಆಡಳು | ಅಂತೆ ಯಾರೊಡನೆ ಎಂದಿಗೂ ||
ಮಾವನ ಮಾತು | ಮುಳ್ಳು ಗೊಂಚಲಿನಂತೆ |
ಹೇಳುವಳು ತಾಯಿ | ಶೀಲವಂತರ ಮಗಳು ಇರು ಸೈರಿಸುತ ||

ಮಾವನ ಮನೆಯ ವಾಸದ ಸಂಗತಿ, ಇದು ಬಿಡಲಾಗದ ಬಂಧ ಎಂದು ಹೆಣ್ಣುಮಗಳ ಮನಸ್ಸಿನಲ್ಲಿ ಚಿಕ್ಕ ವಯಸ್ಸಿನಿಂದಲೂ ಬೇರೂರಿಸಲಾಗಿರುತ್ತದೆ. ಅದನ್ನು ಸಹಿಸಿಕೊಳ್ಳಲೇಬೇಕು ಅವಳು. ಮಳೆಯ ಜಡಿತ ಮತ್ತು ಗಂಡನ ಬಡಿತ ಇವುಗಳಿಗೆ ತಕರಾರು ಮಾಡುವುದಾದರೂ ಯಾರಲ್ಲಿ? ಹಾಗೆ ಮಾಡಲು ಬರುವುದಿಲ್ಲ ಅವುಗಳ ವಿಷಯದಲ್ಲಿ. ಕೊಟ್ಟ ಮನೆಯಲ್ಲಿ ಪ್ರಾಣಬಿಟ್ಟರೂ ನಡೆಯುತ್ತದೆ; ಆದರೆ ತವರಿಗೆ ಹಿಂತಿರುಗಿ ಬರುವ ಕೆಲಸವು ಮಾತ್ರ ಬೇಡ! ಇದು ನಿರಂತರ ನಡೆದು ಬಂದಿರುವ ದಂಡಕ. ನಮ್ಮ ದೇಶದ ಗ್ರಾಮೀಣ ಪ್ರದೇಶಗಳಲ್ಲಿನ ಹೆಣ್ಣುಮಕ್ಕಳ ಮದುವೆಯ ಸರಾಸರಿ ವಯಸ್ಸು ೧೫. ೩ ವರ್ಷಗಳು. ಅಂದರೆ ಇಷ್ಟು ಚಿಕ್ಕ ವಯಸ್ಸಿನಲ್ಲಿ ಮಾವನ ಮನೆಯ ಕಷ್ಟವನ್ನೆಲ್ಲ ಅನುಭವಿಸಬೇಕು, ಬೈಗುಳಗಳು ಮತ್ತು ಹೊಡೆತ ಬಡಿತಗಳನ್ನು ಸಹಿಸಬೇಕು. ಹಸಿವಾಗುತ್ತದೆ, ಆದರೆ ಯಾರೊಡನೆ ಹೇಳುವುದು? ಕೇವಲ ಮನಸ್ಸಿನಲ್ಲಿ ಅಂದುಕೊಳ್ಳುವುದಷ್ಟೆ!

ಹಸಿವು ಕುಣಿಯುತಿದೆ ನನ್ನ ಹೊಟ್ಟೆಯೊಳಗೆ |
ಹಾಕುವೆ ರುಬ್ಬು ಗಂಟ್ಟಿಕ್ಕುವೆ ಸೀರೆಯಿಂದ
ತಂದೆಯೇ ಇದೆಲ್ಲವು | ನಿನ್ನೆಯ ಹೆಸರಿನ ಕಾರಣಕಾಗಿ ||

ಮಾವನ ಮನೆಯಲ್ಲಿ ಮಾತನಾಡುವವರೆ ಎಲ್ಲರು. ಅತ್ತೆ, ಮಾವ, ಮೈದುನ, ನಾದಿನಿ ಎಲ್ಲರಿಗೂ ಅಧಿಕಾರ ಉಂಟು ಮಾತನಾಡುವುದಕ್ಕೆ. ಇನ್ನು ಹೊಡೆತ, ಬಡಿತಗಳು ತಪ್ಪುವುದಿಲ್ಲ. ಗ್ರಾಮೀಣ ಭಾಗದಲ್ಲಿ ವ್ಯವಸಾಯವೇ ಪ್ರಮುಖ ಉದ್ಯೋಗ. ಬಿಸಿಲು-ಮಳೆ; ಚಳಿ-ಗಾಳಿ ಯಾವುದನ್ನೂ ಲೆಕ್ಕಿಸದೆ ಪಶುಗಳಂತೆ ದುಡಿಯುವ ಗ್ರಾಮೀಣ ಸ್ತ್ರೀಯರನ್ನು ನೋಡಿದಾಗ ಹೀಗೆ ಹೇಳಬೇಕಾಗುತ್ತದೆ:

ಮಾವನ ಮನೆಯ ಜನರು | ಬೇಡವೊ ದೇವನೆ ಇಂತು |
ಬಾಡಿಗೆಯ ಎತ್ತು | ಗಾಣಕೆ ಹೂಡಿರುವರು ||

ಮನೆ ಬಾಗಿಲುಗಳಲ್ಲಿ, ಹೊಲಗದ್ದೆಗಳಲ್ಲಿ ದಿನಗೂಲಿಗಳಂತೆ ದುಡಿದೇ ದುಡಿಯುವುದು ನಿತ್ಯ ಕಾಯಕ. ಇನ್ನು ಬೇಸಗೆಯಲ್ಲಿ ಕುಡಿಯುವ ನೀರಿಗಾಗಿ ಗರಗರ ತಿರುಗುವುದು ಬೇರೆ. ಇಷ್ಟಾಗಿಯೂ ಮನೆಯವರಿಂದ ಒಳ್ಳೆಯ ಮಾತುಗಳನ್ನು ನಿರೀಕ್ಷಿಸುವಂತಿಲ್ಲ. ಬದಲಾಗಿ ಸತತ ಬೈಗುಳ ಮತ್ತು ದೌರ್ಜನ್ಯವನ್ನು ಸಹಿಸಬೇಕು. ತೀರಾ ಸಹಿಸಲಾಗದಿದ್ದರೆ ಬಾವಿಗಳನ್ನು ಹತ್ತಿರ ಮಾಡಿಕೊಳ್ಳುವುದು ಮಾತ್ರ ಮಾರ್ಗವು. ನಾನು ಮಹಿಳಾ ದಕ್ಷತಾ ಸಮಿತಿಯ ಅಧ್ಯಕ್ಷಳಾಗಿದ್ದಾಗ ನಾನು ಇಂಥ ಅನೇಕ ಘಟನೆಗಳನ್ನು ನೋಡಿರುತ್ತೇನೆ. ಪೋಲಿಸರು ಎಂಬ ಭಯವನ್ನು ಮುಂದು ಮಾಡಿಯೋ ಅಥವಾ ತಿಳಿವಳಿಕೆಯ ಮೂಲಕವೋ ಬಹಳಷ್ಟು ಪ್ರಕರಣಗಳನ್ನು ನಿರ್ವಹಿಸಿರುತ್ತೇನೆ. ಆದಾಗ್ಯೂ ಅನೇಕರ ದುರುವಸ್ಥೆ ಇಂದಿಗೂ ಹಾಗೆಯೇ ಇದೆ. ಗ್ರಾಮೀಣ ಸ್ತ್ರೀಯರು ಈ ತೊಂದರೆಯನ್ನು ಅನುಭವಿಸುತ್ತಿದ್ದರೂ ಮಾವನ ಮನೆಯವರ ಬಗ್ಗೆ ತಕರಾರು ಮಾಡುವುದಕ್ಕೆ ಯಾರೂ ಕೂಡಾ ಮುಂದಾಗುವುದಿಲ್ಲ, ಹಾಗಾಗಿ ಇದೊಂದು