ಪೂರ್ಣ ಕೌಟುಂಬಿಕ ಸುಖಕ್ಕಾಗಿ

ಸ್ತ್ರೀ-ಸ್ವಾತಂತ್ರ್ಯ ಎಂಬುದಕ್ಕೆ ಪಾಶ್ಚಾತ್ಯ ಸಂಸ್ಕೃತಿಯ ಅನುಕರಣೆ ಎಂಬ ಅರ್ಧವನ್ನು ನಾವು ಅನ್ವಯಿಸುತ್ತಿದ್ದೇವೆ. ಅದು ಕೂಡಾ ಅತ್ಯಂತ ಮೇಲುಮೇಲಿನ, ತಳಸ್ಪರ್ಶಿಯಲ್ಲದ ಮತ್ತು ತರ್ಕಸಂಗತಿ ವಿಚಾರಗಳನ್ನು ಅಧಾರಗಳಿಲ್ಲದಂಥ ರೀತಿಯಲ್ಲಿ ಬಳಸಲಾಗುತ್ತಿದೆ. ಕೆಲವಾರು ವಿಚಾರವಂತರು ಮತ್ತು ಉಚ್ಚಶಿಕ್ಷಿತ ಸ್ತ್ರೀಯರೂ ಹೀಗೆಯೇ ಭಾವಿಸುತ್ತಾರೆ. ಸ್ತ್ರೀ-ಮುಕ್ತಿ ಎಂಬುದು ನಮ್ಮ ಸಂಸ್ಕೃತಿಗೆ ಕಪ್ಪುಮಸಿ ಬಳಿಯುವಂತಹ ಒಂದು ವಿಚಾರ. ಮತ್ತು ವಿವಾಹ ಸಂಸ್ಥೆಯನ್ನು ಒಡೆಯುವುದಕ್ಕೆಂದು ನೋಡತ್ತಿರುವ ಕೆಲವು ವಿಶಿಷ್ಟ ವರ್ಗದವರು ನೇತೃತ್ವವಹಿಸಿರುವ ಒಂದು ಫಂಡ್ ಆಗಿದೆ. ಸ್ತ್ರೀಯರಿಗೆ ಸ್ವಾತಂತ್ರ್ಯ ಸಿಕ್ಕಿತು ಎಂದರೆ ಅವರು ವಿವಾಹ ಬಂಧನದಲ್ಲಿ ಉಳಿಯಲಾರರು. ಪಾಶ್ಚಾತ್ಯ ದೇಶಗಳಲ್ಲಿ ಹೇಗೆ ವಿವಾಹವು ಒಂದು ಕರಾರಾಗಿದೆಯೋ ಮತ್ತು ವಿಚ್ಛೇದನವು ದಿನೇ ದಿನೇ ಹೆಚ್ಚಾಗುತ್ತಿದೆಯೋ ಹಾಗೆಯೇ ನಮ್ಮ ದೇಶದಲ್ಲಿಯೂ ಸ್ತ್ರೀ-ಸ್ವಾತಂತ್ರ್ಯದ ಕಾರಣವಾಗಿ ಕಾಯಾ, ವಾಚಾ, ಮನಸಾ ಪಪರಾಯಣ ಮಾಡುವಂತಹ ಕುಟುಂಬ ಸಂಸ್ಥೆಯು ಒಡೆದು ನಾಶವಾಗುತ್ತದೆ. ತ್ಯಾಗ, ವಾತ್ಸಲ್ಯ, ಕಷ್ಟಪಡುವ ಹುಮ್ಮಸ್ಸು, ತಿಳಿವಳಿಕೆ ಮತ್ತು ಸಹನಶೀಲತೆಗಳಂಥ ಸಂಸ್ಕಾರಗಳಿಂದ ಸ್ತ್ರೀಯರಲ್ಲಿ ಕಾಣುತ್ತಿರುವ ಗುಣಗಳಿಂದಾಗಿಯೇ ಕುಟುಂಬ ಸಂಸ್ಥೆಯು ಉಳಿದಿರುವುದು.

ಕೌಟುಂಬಿಕ ಅಕ್ಕರೆಯು ಬಂಧುವೆನಿಸಿರುವ ತಾಯಿಯಿಂದಾಗಿ ವಿಶಿಷ್ಟವಾಗಿ ರೂಢಿಸಿದಂತೆ ಕಾಣುತ್ತದೆ. ಸ್ತ್ರೀ-ಸ್ವಾತಂತ್ರ್ಯವು ಈ ಪವಿತ್ರವಾದ ಕುಟುಂಬ ಸಂಸ್ಥೆಯ ಮೇಲೆ ಮಾಡುವ ಒಂದು ಪ್ರಹಾರ. ಇಂಥ ವಿವಾಹಗಳು ಅಯಶಸ್ವಿಯಾಗುತ್ತವೆ, ಹೆಚ್ಚಾಗಿ ವಿಚ್ಛೇದನ ಪ್ರವತ್ತಿಯು ಕಾಣಿಸಿಕೊಳ್ಳುತ್ತದೆ. ಆದರೆ ಸ್ತ್ರೀ-ಸ್ವಾತಂತ್ರ್ಯಕ್ಕೋಸ್ಕರ ವಿವಾಹ ಅಯಶಸ್ವಿ ಯಾಗುವುದು, ವಿಚ್ಛೇದನ ಪ್ರಮಾಣಗಳು ಹೆಚ್ಚಾಗುವುದು, ಕುಟುಂಬ ಸಂಸ್ಥೆ ಭಗ್ನವಾಗುವುದು ಇತ್ಯಾದಿ ಘಟಿಸುತ್ತವೆ ಎಂದು ಹೇಳುತ್ತಿರುವುದು ಮಾತ್ರ ತಪ್ಪು ನಿರ್ಣಯವೇ ಸರಿ. ನಗರೀಕರಣ, ಆರ್ಥಿಕ ತೊಂದರೆಗಳು, ವೈಯಕ್ತಿಕ ಸ್ವಾತಂತ್ರ್ಯ, ಸುತ್ತಲಿನ ಪರಿಸ್ಥಿತಿ, ಸಾಮಾಜಿಕ ವಾತಾವರಣ, ವೈಚಾರಿಕ ಸ್ಥಿತ್ಯಂತರಗಳೇ ಮೊದಲಾದವುಗಳ ಕಾರಣಗಳಿಂದಾಗಿ ಕೌಟುಂಬಿಕ ಕಲಿಕೆ ಮತ್ತು ಪರಂಪರಾಗತ ಸಾಂಸ್ಕೃತಿಕ ಮೌಲ್ಯಗಳು ನಿರುಪಯುಕ್ತವಾಗಿ ನಿರ್ಧರಿತವಾಗುತ್ತಲಿವೆ. ಆದರೆ ಸ್ತ್ರೀ-ಸ್ವಾತಂತ್ರ್ಯವನ್ನು  ನಿರಾಕರಿಸಿ ಕೌಟುಂಬಿಕ ವಿಘಟನೆ, ವಿವಾಹ ಬಂಧನಗಳ ಸ್ವರೂಪವನ್ನು ಉಳಿಸಿ ಶಾಶ್ವತತೆಯನ್ನು ತರುವುದಕ್ಕೆ ಸಾಧ್ಯವೇ ಎಂಬುದರ ಬಗೆಯೂ ವಿಚಾರ ಮಾಡುವುದು ಆವಶ್ಯಕ.

ಪಾಶ್ಚಾತ್ಯ ದೇಶಗಳಲ್ಲಿ ಬಲಾತ್ಕಾರ, ಕೊಲೆ, ವಿಚ್ಛೇದನ, ಕುಟುಂಬ ಸಂಸ್ಥೆಯಲ್ಲಿ ಉಂಟಾದ ಅವನತಿ, ತಾಯಿ-ತಂದೆ ಮತ್ತು ಮಕ್ಕಳುಗಳಲ್ಲಿ ಹಣದ ಅಧಿಷ್ಠತೆ ಹಾಗೂ ಯಾಂತ್ರಿಕ ಸಂಬಂಧಗಳು, ನೀತಿಮತ್ತೆಗಳ ಅಧಃಪತನ, ಆತ್ಮೀಯತೆಯ ಅಭಾವ ಮತ್ತು ಕೃತ್ರಿಮತೆಯ ಒಳಪ್ರವೇಶ ಇತ್ಯಾದಿ ಸಾಮಾಜಿಕ ವೈಶಿಷ್ಟ್ಯಗಳು ಉಂಟಾಗಿವೆ. ಇದರಿಂದಾಗಿ ಅಲ್ಲಿ ಸಾಮಾಜಿಕ, ಸಾಂಸ್ಕೃತಿಕ, ನೈತಿಕವೇ ಮೊದಲಾದ ಗಂಭೀರ ಪ್ರಶ್ನೆಗಳು ಹುಟ್ಟು ಕೊಳ್ಳುತ್ತಿವೆ. ಆದರೆ ಅದು ಕೇವಲ ಸ್ತ್ರೀ-ಸ್ವಾತಂತ್ರ್ಯದ ಕಾರಣವಾಗಿಯೇ ನಿರ್ಮಾಣವಾದುವು ಎಂದು ತಿಳಿಯುವುದು ಸಾಮಾನ್ಯ. ಅಲ್ಲದೆ ಅಂಥ ಸಾಮಾನ್ಯ ಅರ್ಧದಲ್ಲಿಯೇ ನಮ್ಮ ದೇಶದಲ್ಲಿ ಅಂಥ ಚಳವಳಿಗಳೂ ಉಂಟಾದರೆ ಧರ್ಮ, ಸಂಸ್ಕೃತಿಗಳು ನಾಶವಾಗುತ್ತವೆ; ಸ್ತ್ರೀ-ಜೀವನ ನಿರರ್ಧಕವೆನಿಸುತ್ತದೆ; ಸಾಮಾಜಿಕ ಅಧಃಪತನ ಉಂಟಾಗುತ್ತದೆ- ಎಂಬಿವೇ ಮೊದಲಾದ ಕೂಗುಗಳೇಳುತ್ತವೆ. ಸ್ತ್ರೀ-ಸ್ವಾತಂತ್ರ್ಯ ಎಂದರೆ ವ್ಯಭಿಚಾರಿ, ಪಾಪಕಲ್ಪನೆಯಂತೆ ಭಾವಿಸಿ ನಾವು ವಿರೋಧಿಸುತ್ತಿರುವುದು ಒಂದು ರೀತಿಯಲ್ಲಿ ಕಾಡು ಪ್ರವೃತ್ತಿ, ಹುಂಬತನ, ಅತಿರೇಕತೆ ಮತ್ತು ಅನಾವಶ್ಯಕವಾಗಿಯೇ ಕಾಣಿಸುತ್ತದೆ.

ಸ್ತ್ರೀ-ಸ್ವಾತಂತ್ರ್ಯದಿಂದಾಗಿ ವಿವಾಹದ ನಿಜವಾದ ಅರ್ಧ ಮತ್ತು ಆನಂದದ ಉಪಭೋಗತೆಯು ಸಾಧ್ಯವಾಗುತ್ತದೆ. ಸಂಶಯ ಮತ್ತು ತಪ್ಪು ತಿಳಿವಳಿಕೆಗಳಿಂದಾಗಿ ಪತಿ-ಪತ್ನಿಯರಲ್ಲಿ ಉಂಟಾಗುವ ಮಾನಸಿಕ ಸಂಘರ್ಷ ಮತ್ತು ಅದರ ಪರಿಣಾಮವಾಗಿ ಮನಃಸ್ವಾಸ್ಥ್ಯವೂ ಕಡಿಮೆಯಾಗಬಹುದು. ಅವರಿಬ್ಬರ ಸ್ಥಾನ-ಮಾನಗಳು ಸಮಾನತೆ ಮತ್ತು ಸ್ವಾತಂತ್ರ್ಯಗಳನ್ನು ಆಧರಿಸಿರುವುದರಿಂದ ಒತ್ತಡದ ವಾತಾವರಣವಿಲ್ಲದೆ ಸಮಾಧಾನದಿಂದ ಸಾಮಾಜಿಕ ಸಹಭಾಗಿತ್ವದ ಆನಂದವನ್ನು ಯಧೇಚ್ಚವಾಗಿ ಪಡೆಯಬಹುದು. ಇದರಿಂದ ಬೌದ್ದಿಕ ಹಸಿವನ್ನು ಇಂಗಿಸಿಕೊಳ್ಳುವ ಸಾಮರ್ಥ್ಯ ಸ್ತ್ರೀಯರಿಗೆ ಸಾಧ್ಯವಾಗುತ್ತದೆ. ಸ್ವಾತಂತ್ರ್ಯವಿರುವುದರಿಂದ ಸ್ತ್ರೀಯರ ವ್ಯಕ್ತಿತ್ವದಲ್ಲಿಯೂ ವಿಕಸನವುಂಟಾಗಿ ನಿಜವಾದ ಅರ್ಧದಲ್ಲಿ ಆ ಕುಟುಂಬದಲ್ಲಿ ಸರ್ವರಿಗೂ ಸಿಕ್ಕುತ್ತದೆ ಅದರ ಸಂಪೂರ್ಣ ಲಾಭ. ಅದೇ ರೀತಿಯಲ್ಲಿ ಸ್ತ್ರೀಯರ ಕೌಟುಂಬಿಕ ಸ್ಥಾನ ಮತ್ತು ದರ್ಜೆಯು ಬೆಳೆದಂತೆ  ಅವರ ಮತ್ತು ಅವರೊಂದಿಗೆ ಕುಟುಂಬಕ್ಕೂ ಸಾಮಾಜಿಕ ಸ್ಥಾನಮಾನ ಹಾಗೂ ಪ್ರತಿಷ್ಠೆಯು ಬರಬಹುದಾಗಿದೆ.