ಸ್ತ್ರೀಮುಕ್ತಿ ಎಂದರೆ ಏನು?

ಸ್ತ್ರೀ-ಮುಕ್ತಿ ಎಂಬ ಶಬ್ದವು ಇಂದು ಅಪರಿಚಿತವಾಗೇನು ಉಳಿದಿಲ್ಲ. ಸ್ತ್ರೀ- ಸ್ವಾತಂತ್ರ್ಯವನ್ನು ವಿರೋಧಿಸುವವರು ಕೂಡ ಅದನ್ನು ಸಂಕುಚಿತ ಅರ್ಧದಲ್ಲಿ ಮಾನ್ಯ ಮಾಡುವಂಥ ಭೂಮಿಕೆಯನ್ನು ಸ್ವೀಕರಿಸಿರುವುದು ಕಂಡುಬರುತ್ತದೆ. ಈ ಕಾರಣ ವಾಗಿಯಾದರೂ ಸ್ತ್ರೀಯರ ಮೇಲೆ ಆಗುತ್ತಿರುವ ಅನ್ಯಾಯದ ಬಗ್ಗೆ ಮಾತನಾಡುವ ಪ್ರಯತ್ನಗಳೂ ನಡೆಯುತ್ತಿವೆ. ಒಟ್ಟಾರೆ ಸಮಾಜದ ಹಿನ್ನೆಲೆಯಲ್ಲಿ ವಿಚಾರ ಮಾಡುವುದಾದರೆ, ಮಿತಿಯ ಅರ್ಧದಲ್ಲಿಯಾದರೂ ಹೆದರುತ್ತಾ ಹೆದರುತ್ತಾ ತೀರಾ ಗಂಭೀರವಾಗಿ ಅಲ್ಲದಿದ್ದರೂ ಸ್ತ್ರೀ-ಮುಕ್ತಿಯ ಬಗ್ಗೆ ವಾಚ್ಯವಾಗಿ ಅಭಿಪ್ರಾಯಗಳನ್ನು ವ್ಯಕ್ತಪಡಿಸುವ ಪ್ರಯತ್ನಗಳು ಆಗುತ್ತಿವೆ. ಆ ದಿಶೆಯಲ್ಲಿ ಸಮಾವೇಶಗಳು, ಸಮ್ಮೇಳನಗಳು ಮತ್ತು ಚರ್ಚಾಕೂಟಗಳನ್ನು ಆಯೋಜನೆ ಮಾಡಲಾಗುತ್ತಿದೆ. ಸ್ತ್ರೀಯರ ಪ್ರಶ್ನೆಗಳ ಬಗ್ಗೆ ಅರಿವನ್ನು ಉಂಟುಮಾಡುವ ದೃಷ್ಟಿಯಿಂದ ಅವು ಉಪಯುಕ್ತವಾದುವುಗಳು, ಆದರೆ ಸ್ತ್ರೀ-ಮುಕ್ತಿಯ ಆಶಯ, ಆ ದಿಶೆಯಲ್ಲಿ ಕಾರ್ಯಶೀಲಗೊಳಿಸಬೇಕಾದ ವೈಚಾರಿಕ ರೂಪು-ರೇಷೆಗಳು, ಸಾಮಾಜಿಕ ಪರಿವರ್ತನೆಯ ಮಾರ್ಗಗಳು, ಸ್ತ್ರೀ-ಪುರುಷರ ಮನೋ ಭೂಮಿಕೆಯನ್ನು ರೂಪಿಸುವ ವ್ಯವಸ್ಥೆ ಮತ್ತು ಸಾಧನೆಗಳೇ ಮೊದಲದಾದುವನ್ನು ಇಂದಿಗೂ ಹೇಳಿಕೊಳ್ಳುವಷ್ಟರ ಮಟ್ಟಿನಲ್ಲಿ ಸಾಧ್ಯವಾಗಿಸಿಲ್ಲ. ಅದಲ್ಲದೆ ಈ ಸಂಬಂಧವಾಗಿ ವ್ಯವಸ್ಥಿತ ವಿಚಾರಗಳು ಸಾಧ್ಯವಾಗಿಲ್ಲದೆ ಇರುವುದರಿಂದ ಇದು ಒಂದು ರೀತಿಯಲ್ಲಿ ಸಂಭ್ರಮವನ್ನು ನಿರ್ಮಾಣ ಮಾಡುವಂತಾಹ ದ್ದಾಗಿಯೂ ಕಂಡುಬರುತ್ತದೆ.

ಅಂದರೆ ಸ್ತ್ರೀ-ಮುಕ್ತಿ ಎಂಬುದು ಕಾಲಬದ್ಧವಾದ ವಿಕಾಸದ ಯೋಜನೆಯಲ್ಲ; ಅಥವಾ ಹಣವು ಲಭ್ಯವಾದೊಡನೆ ಯಶಸ್ಸುಗೊಳಿಸುವುದಕ್ಕೆ ಬರುವಂಥದ್ದಲ್ಲ. ಇಂದು ಮಂಡಿಸಿದ ವಿಚಾರಗಳು ಬದಲಾಗುತ್ತಿರುವ ಕಾಲ ಮತ್ತು ಗತಿಶೀಲ ಸಮಾಜ ವ್ಯವಸ್ಥೆಯಲ್ಲಿ ಸ್ವಲ್ಪ ಅವಧಿಯಲ್ಲೇ ಇವು ಕಾಲಬಾಹ್ಯವಾದುವುಗಳೂ ಆಗಿಬಿಡಬಹುದು. ಅಲ್ಲದೆ ಆ ವಿಚಾರದಲ್ಲಿನ ಕೊರತೆಗಳೂ ಮನವರಿಕೆಯಾಗಬಹುದು. ಅಂದರೆ ಸ್ತ್ರೀಯರು ಈ ವಿಷಯದಲ್ಲಿ ತಮ್ಮ ಮನಸ್ಸು ವಿಚಾರ ಮತ್ತು ಕೃತಿಗಳನ್ನು ಬದಲಿಸಿಕೊಳ್ಳದೆ ಇದ್ದರೆ ಸ್ತ್ರೀ-ಸ್ವಾತಂತ್ರ್ಯದ ಹೆಜ್ಜೆ ದೃಢವಾಗುವುದಿಲ್ಲ. ಅಲ್ಲದೆ ಪ್ರಮುಖವಾಗಿ ಸುಶಿಕ್ಷಿತರು ಮತ್ತು ಆರ್ಥಿಕ ದೃಷ್ಟಿಯಿಂದ ಸ್ವಾವಲಂಬಿಗಳು ಆಗಿರುವ ಸ್ತ್ರೀಯರು ಇದರಲ್ಲಿ ಮುಂದಾಳತ್ವ ವಹಿಸಬೇಕು. ಸ್ತ್ರೀ-ಮುಕ್ತಿ ವಿಚಾರವಾಗಿ ಉದಾಸೀನರಾಗಿರುವಂಥ ಸ್ತ್ರೀಯರ ಮನಸ್ಸಿನಲ್ಲಿ ಕೆಲವಾರು ತಪ್ಪು ತಿಳಿವಳಿಕೆಗಳು ಇರುವಂತೆ ಕಾಣುತ್ತದೆ.

ಸ್ತ್ರೀ-ಮುಕ್ತಿ ವಿಚಾರವನ್ನು ವಿರೋಧಿಸುವವರು ಮತ್ತು ಈ ಬಗ್ಗೆ ಮೂಗು ಮುರಿಯುವಂತೆ ಮಾತನಾಡುವ ಮಹಿಳೆಯರು ಈ ಪ್ರಶ್ನೆಗಳನ್ನು ಪೂರ್ಣವಾಗಿ ವಿಚಾರಿಸಿ ಅರ್ಧಮಾಡಿಕೊಂಡ ಹಾಗೆ ಕಾಣುವುದಿಲ್ಲ. ಸ್ತ್ರೀ-ಮುಕ್ತಿಯ ಅಥವಾ ಸ್ವಾತಂತ್ರ್ಯದ ಅರ್ಧವನ್ನು ಸಂಕುಚಿತ ವಾಗಿಯೂ ಮತ್ತು ವಿಶೇಷವಾದ ಜ್ಞಾನವಿಲ್ಲದ ನೆಲೆಯಲ್ಲಿಯೂ ಹೇಳದೆ ಮೇಲ್ನೋಟದಲ್ಲಿಯೇ ಉಳಿಸಲಾಗಿದೆ. ಸ್ತ್ರೀ-ಸ್ವಾತಂತ್ರ್ಯದ ಬಗ್ಗೆ ಅನೇಕರ ಮನಸ್ಸಿನಲ್ಲಿ ವೈಚಾರಿಕ ಗೊಂದಲ, ಮಾನಸಿಕ ಸಂಕುಚಿತ ಮತ್ತು ಕೃತಿಯಲ್ಲಿ ಅಸಂಗತತೆಗಳು  ನಿಮಾರ್ಣವಾಗುತ್ತಿವೆ. ಸ್ತ್ರೀ-ಸ್ವಾತಂತ್ರ್ಯದ ಬಗ್ಗೆ ಉಂಟಾಗಿರುವ ತಪ್ಪು ತಿಳಿವಳಿಕೆ ಮತ್ತು ಚಳವಳಿಯ ಬಗ್ಗೆ ಸುಶಿಕ್ಷಿತ ಮಹಿಳೆಯರ ಆಲಿಪ್ತತೆಯು ಅಜ್ಞಾನದಿಂದ ಹುಟ್ಟಿಕೊಂಡಿರು ವಂಥವು ಎಂದೇ ಹೇಳಬೇಕಾಗುತ್ತದೆ.

ಕಾರಣ ಈ ಚಳವಳಿಯು ದೊಡ್ಡ ನಗರಗಳ ಮಟ್ಟಿಗೆ ಮತ್ತು ವಿಶಿಷ್ಟ ಘಟಕಗಳ ಮಟ್ಟಿಗಷ್ಟೇ ಸೀಮಿತಗೊಂಡಿವೆ. ಅವುಗಳನ್ನು ವಿಸ್ತರಿಸುವ ಪ್ರಯತ್ನ ತುರ್ತಾಗಿ ಆಗಬೇಕಾಗಿದೆ. ಸ್ತ್ರೀ-ಮುಕ್ತಿಯು ಏತಕ್ಕಾಗಿ ಅವಶ್ಯ? ಅದರ ಮುಖ್ಯ ಅಶಯಗಳು ಯಾವುವು? ಅದಕ್ಕಾಗಿ ಆಗಬೇಕಾದ ಸಾಮಾಜಿಕ ಪರಿವರ್ತನೆಯ ಮಾರ್ಗಗಳಾವುವು? ಈ ಮೊದಲಾದುವನ್ನು ಗಮನಿಸಬೇಕಾದ್ದು ಅಗತ್ಯ.