ಧರ್ಮ ಮಹಾಮಾತ್ರರ ನೇಮಕ

ಅಶೋಕನ ೫ನೆಯ, ೧೨ನೆಯ ಬಂಡೆಶಾಸನ ಹಾಗೂ ೭ನೆಯ ಸ್ಥಂಭ ಶಾಸನಗಳು ಧಮ್ಮ ಮಹಾಮಾತ್ರರು ಅಥವಾ ಧರ್ಮ ಮಾಹಮಾತ್ರರ ಕುರಿತು ವಿವರಣೆ ನೀಡುತ್ತವೆ. ಅವುಗಳಂತೆ,

ಒಳ್ಳೇ ಕೆಲಸಗಳನ್ನು ಮಾಡುವುದು ಕಷ್ಟಕರ, ನನ್ನಿಂದ ಅನೇಕ ಒಳ್ಳೆಯ ಕೆಲಸಗಳಾಗಿವೆ, ನನ್ನ ವಂಶಸ್ಥರು ಮುಂದೆ ಜಗತ್ತಿರುವವರೆಗೂ ಒಳ್ಳೆಯ ಕೆಲಸ ಮಾಡುತ್ತಾರೆ. ಆದರೆ ಯಾರು ನಿರ್ಲಕ್ಷ ಮಾಡುತ್ತಾರೆ. ಅವರು ಕೆಟ್ಟ ಕೆಲಸ ಮಾಡುತ್ತಾರೆ ಮತ್ತು ಪಾಪ ಮಾಡುತ್ತಾರೆ. ನಾನು ಅಧಿಕಾರಕ್ಕೆ ಬರುವುದಕ್ಕೆ ಪೂರ್ವದಲ್ಲಿ ಧರ್ಮ ಮಹಾಮಾತ್ರರು ಇರಲಿಲ್ಲ. ಅವರು ಈಗ ನನ್ನಿಂದ ನೇಮಕವಾಗಿದ್ದಾರೆ. ಇವರಲ್ಲಿ ಬ್ರಾಹ್ಮಣರು, ವೇತನ ಪಡೆಯುವವರು, ಶ್ರೀಮಂತರು, ನಿರ್ಗತಿಕರು, ವೃದ್ಧರು, ಕಾಂಬೋಜರು, ಗಾಂಧಾರರು, ಯವನರು, ಪಶ್ಚಿಮ ಗಡಿ ಭಾಗದವರು, ನನ್ನ ಸಹೋದರರ ಸಹೋದರಿಯರು, ಸಂಬಂಧಿಕರು, ಇಬಿಯಾಗಳು ಕ್ಷತ್ರಿಯಾ ಇದ್ದಾರೆ.

ಧರ್ಮ ಮಹಾಮಾತ್ರರ ಕಾರ್ಯಗಳು ಈ ಕೆಳಗಿನಂತಿದ್ದವು.

ಅ. ಧರ್ಮದ ಸ್ಥಾಪನೆ ಹಾಗೂ ಬೆಳೆಸುವುದು

ಆ. ಧರ್ಮದ ಆರಾಧಕರ ಯೋಗಕ್ಷೇಮ ನೋಡಿಕೊಳ್ಳುವುದು

ಇ. ಬ್ರಾಹ್ಮಣರು, ಶ್ರಮಣರು ಸೇರಿದಂತೆ ಎಲ್ಲಾ ವರ್ಗದ ವೃದ್ಧ ಹಾಗೂ ನಿರ್ಗತಿಕರ ಯೋಗಕ್ಷೇಮ ನೋಡಿಕೊಳ್ಳುವುದು.

ಈ. ಖೈದಿಗಳ ಕುಟುಂಬದವರಿಗೆ ಹಣಕಾಸಿನ ಸಹಾಯ ಮಾಡುವುದು ಹಾಗೂ ಆಶಕ್ತ, ವೃದ್ಧ ಖೈದಿಗಳ ಬಿಡುಗಡೆ ಮಾಡಲು ಕ್ರಮಕ್ಕೆಗೊಳ್ಳುವುದು.

ಉ. ಪಾಟಲೀಪುತ್ರ ಹಾಗೂ ಅದರ ಹೊರಗೆ ಇರುವ ಎಲ್ಲಾ ಪ್ರಜೆಗಳು ಧರ್ಮ ಪಾಲಿಸುತ್ತಿದ್ದಾರೆಯೇ? ಅಥವಾ ಇಲ್ಲವೇ? ಎಂಬುದನ್ನು ಪರೀಕ್ಷಿಸಿ ನೋಡುವುದು, ಅವರು ರಾಣಿಯರು ರಾಜನ ಸೋದರಿ-ಸೋದರರನ್ನು ಪರೀಕ್ಷಿಸುತ್ತಿದ್ದರು.

ಊ. ಎಲ್ಲ ಧರ್ಮಗಳ ಸಾರವನ್ನು ವೃದ್ಧಿ ಪಡಿಸುವುದು ಆ ಮೂಲಕ ಎಲ್ಲರ ಮಧ್ಯೆ ಪರಸ್ಪರ ಹೊಂದಾಣಿಕೆ ಮಾಡಿಸುವುದು.

ಋ.  ಬೌದ್ಧ ಸಂಘಗಳ ಉಸ್ತುವಾರಿ ನೋಡಿಕೊಳ್ಳುವುದು.

ೠ. ಬ್ರಹ್ಮಣರು, ಜೈನರು, ಅಜೀವಕರು ಹಾಗೂ ಇನ್ನಿತರ ಪಂಥಗಳ ಉಸ್ತುವಾರಿ ನೋಡಿಕೊಳ್ಳುವುದು.

ಎ. ರಾಜ ಪರಿವಾರದವರನ್ನು ದಾನ-ಧರ್ಮ ಮಾಡುವಂತೆ ಪ್ರೇರೇಪಿಸುವುದು.

ಈ. ರೀತಿ ಧರ್ಮ ಮಹಾಮಾತ್ರರು ಪ್ರಜೆಗಳ ಆಧ್ಯಾತ್ಮಿಕ ಯೋಗಕ್ಷೇಮ ಮತ್ತು ಭೌತಿಕ ಸಂತೋಷವನ್ನು ಕಾಪಾಡುತ್ತಿದ್ದರು.

ಧರ್ಮಯಾತ್ರೆಗಳು

ಅಶೋಕನು ಧರ್ಮ, ನೈತಿಕತೆ ಹಾಗೂ ಧಾರ್ಮಿಕ ಸಹಿಷ್ಣುತೆ ಬೆಳೆಸುವ ಉದ್ದೇಶದಿಂದ ಧರ್ಮಯಾತ್ರೆಗಳನ್ನು ಕೈಗೊಂಡನು. ಆ ಕುರಿತು ಗಿರಿನಾರ್ನ ೮ನೆಯ ಬಂಡೆ ಶಾಸನ ವಿವರಣೆ ನೀಡುತ್ತದೆ. ಇದರಂತೆ ಅಶೋಕನು ತನ್ನಾಡಳಿತದ ೧೦ನೆಯ ವರ್ಷದಲ್ಲಿ ಬೋಧ್‌ಗಯಾವನ್ನು ಸಂದರ್ಶಿಸಿದನು ಹಾಗೂ ಈ ಯಾತ್ರೆಗಳ ಸಮಯದಲ್ಲಿ ಬ್ರಾಹ್ಮಣರನ್ನು, ಜೈನರನ್ನು ಭೇಟಿ ಮಾಡಿ ಅವರಿಗೆ ದಾನ-ದತ್ತಿ ನೀಡಿದನು. ಇದೇ ರೀತಿ ವೃದ್ಧರನ್ನು ತನ್ನ ಪ್ರಜೆಗಳನ್ನು ಭೇಟಿ ಮಾಡಿ ಧರ್ಮದ ಕುರಿತು ಅವರಿಗೆ ತಿಳಿಹೇಳಿದನು ಹಾಗೂ ಧರ್ಮದ ಕುರಿತು ಅವರೊಂದಿಗೆ ಚರ್ಚೆ ಮಾಡುತ್ತಿದ್ದನು. ಅಂದರೆ ಆಶೋಕನು ವಿಹಾರ ಯಾತ್ರೆಗಳ ಬದಲಾಗಿ ಧರ್ಮಯಾತ್ರೆ ಕೈಗೊಂಡು ಜನರಿಗೆ ಕರುಣೆ, ಪ್ರೀತಿ, ಧರ್ಮವನ್ನು ಬೋಧಿಸುತ್ತ, ದಾನ-ದತ್ತಿ ಹಾಗೂ ಸಂಪತ್ತನ್ನು ಹೇರಳವಾಗಿ ದಾನ ಮಾಡಿದನು.

ಇದೇ ರೀತಿ ಬೌದ್ಧರ ಪವಿತ್ರ ಸ್ಥಳಗಲಾದ ಲುಂಬುನಿ, ಕಪಿಲ, ಕುಶಿನಗರ, ಸಾರನಾಥ ಮುಂತಾದ ಸ್ಥಳಗಳನ್ನು ಸಂದರ್ಶಿಸಿದನು.

ಧಾರ್ಮಿಕ ಸಹಿಷ್ಣುತೆ

ಅಶೋಕನು ಎಲ್ಲಾ ಧಾರ್ಮಿಕ ಪಂಥಗಳನ್ನು ಸಮಾನವಾಗಿ ಕಾಣುತ್ತಿದ್ದನು ಹಾಗೂ ಅವುಗಳ ಮಧ್ಯೆ ಸೌಹಾರ್ದತೆಯನ್ನು ಏರ್ಪಡಿಸಲು ಪ್ರಯತ್ನಿಸುತ್ತಿದ್ದನು. ಅದರ ಕುರಿತು ೧೨ನೆಯ ಬಂಡೆ ಶಾಸನ ಈ ರೀತಿ ವಿವರಣೆ ನೀಡುತ್ತದೆ.

ಅ. ರಾಜನು ಸನ್ಯಾಸಿಗಳನ್ನು ಹಾಗೂ ಎಲ್ಲಾ ಪಂಥದವನ್ನು ಗೌರವಿಸುತ್ತಾ ಅವರಿಗೆ ಕಾಣಿಕೆಗಳನ್ನು ನೀಡುತ್ತಿದ್ದನು.

ಆ. ಎಲ್ಲಾ ಧಾರ್ಮಿಕ ಪಂಗಡಗಳ ಧರ್ಮದ ಸಾರ ವೃದ್ಧಿಸಲು ಆಸಕ್ತಿ ಹೊಂದಿದ್ದನು.

ಇ. ಯಾರೂ ತಮ್ಮ ಧರ್ಮವನ್ನು ಮಾತ್ರ ಶ್ರೇಷ್ಠವೆಂದು ಪರಿಗಣಿಸಿ ಇರತೆ ಧರ್ಮಗಳನ್ನು ದೂಷಿಸಬಾರದು ಎಂದು ಆದೇಶಿಸಿದ್ದನು.

ಈ. ಹೊಗಳಿಗೆ ಮತ್ತು ತೆಗಳಿಕೆಗಳು ಮೃದುವಾಗಿದ್ದು ಧರ್ಮದ ಬೆಳವಣಿಗೆಗೆ ಪೂರಕವಾಗಿರ ಬೇಕು ಎಂದು ಆದೇಶಿಸಿದನು.

ಉ. ಎಲ್ಲ ಪಂಥಗಳನ್ನು ಗೌರವಿಸಬೇಕು.

ಊ. ತನ್ನ ಧರ್ಮವನ್ನು ಬೆಳೆಸುವುದರ ಜೋತೆಗೆ ಬೇರೆ ಧರ್ಮವು ಬೆಳೆಯುವುದಕ್ಕೆ ಕಾರಣರಾಗಬೇಕು.

ಋ. ತನ್ನ ಧರ್ಮ ಮಾತ್ರ ಶ್ರೇಷ್ಠವೆಂದು, ಇತರೆ ಧರ್ಮವನ್ನು ವಿರೋಧಿಸುವವರು ತನ್ನ ಧರ್ಮಕ್ಕೆ ಹಾನಿ ಉಂಟು ಮಾಡಿದಂತಾಗುತ್ತದೆ.

ೠ. ಪ್ರಜೆಗಳು ಎಲ್ಲಾ ಧರ್ಮಗಳ ಸಾರವನ್ನು ಅರಿತುಕೊಳ್ಳಬೇಕು.

ಎ. ವ್ಯಕ್ತಿಗಳು ಎಲ್ಲಾ ಧರ್ಮಗಳ ತತ್ವಗಳನ್ನು ತಿಳಿದುಕೊಂಡು ಒಳ್ಳೆಯ ಕಾರ್ಯಗಳನ್ನು ಮಾಡಬೇಕು ಮುಂತಾದವುಗಳು.

ಬೌದ್ಧ ಧರ್ಮದ ಪ್ರಚಾರ

ಅಶೋಕ ಚಕ್ರವರ್ತಿಯು ಕಳಿಂಗ ಯುದ್ಧದ ತರುವಾಯ ಸುಮಾರು ಕ್ರಿ.ಪೂ. ೨೬೦ರಲ್ಲಿ ಬೌದ್ಧ ಮತಾವಲಂಬಿಯಾಗುತ್ತಾನೆ. ಆನಂತರ ಬೌದ್ಧ ಧರ್ಮವನ್ನು ದೇಶ- ವಿದೇಶಗಳಲ್ಲಿ ಹರಡಲು ಕಾರಣವಾಗುತ್ತಾನೆ. ಈ ಕುರಿತಾಗಿ ವಾದವಿವಾದಗಳಿವೆ.

ಅ. ಅಶೋಕನು ಬೌದ್ಧ ಧರ್ಮಕ್ಕೆ ಸ್ವತಃ ಮತಾಂತರ ಹೊಂದುತ್ತಾನೆ. ಹಾಗೂ ಬೌದ್ಧ ಸಂಘಗಳ ಸದಸ್ಯನಾಗುತ್ತಾನೆ. ಮತ್ತು ೨೫೬ ರಾತ್ರಿಗಳು ಬೌದ್ಧ ಧರ್ಮ ಪ್ರಾರ್ಥನೆ ಮಾಡಿರುತ್ತಾನೆ. ಬೌದ್ಧ ಧರ್ಮವು ಹಂತ ಹಂತವಾಗಿ ಹೇಗೆ ಬೆಳವಣಿಗೆಯಾಯಿತು ಎಂಬುದನ್ನು ರೂಪನಾಥ ಗೌಣ ಶಿಲಾಶಾಸನದಲ್ಲಿ ವಿವರಿಸಿದ್ದಾನೆ. ಮುಂದೆ ನನ್ನಿಂದ ಬೌದ್ಧ ಧರ್ಮ ವೃದ್ಧಿಯಾಗುತ್ತದೆ. ಎಂದು ಸಹ ಸ್ವತಃ ಅಶೋಕನೆ ಹೇಳಿಕೊಂಡಿದ್ದನು. ಬೌದ್ಧ ಧರ್ಮದ ಉಪಾಸಕ ಅಂದರೆ ಸಾಮಾನ್ಯ ಆರಾಧಕ ನಾಗುತ್ತಾನೆ. ಬೌದ್ಧ ಸಂಘಗಳ ಐಕ್ಯತೆಗಾಗಿ ಬೋದಗಯ, ಲುಂಬುನಿ ಬೌದ್ದ ಕೂನಕಾಮನ್ ಮುಂತಾದ ಸ್ಥಳಗಳನ್ನು ಸಂದರ್ಶಿಸುತ್ತಾನೆ.

ಆ. ಬೌದ್ಧ ಧರ್ಮದ ಬೆಳವಣಿಗೆಗಾಗಿ ಧರ್ಮಸ್ತಂಭಗಳನ್ನು, ಆಲದ ಮರಗಳನ್ನು, ಸ್ಥೂಪಗಳನ್ನು, ಬೌದ್ಧ ಚೈತ್ಯಾಲಯಗಳನ್ನು, ಬೌದ್ಧ ವಿಹಾರಗಳನ್ನು ನಿರ್ಮಿಸುತ್ತಾನೆ. ಲುಂಭಣಿ ಸ್ತಂಭಶಾಸನ ತಿಳಿಸುವಂತೆ “ಅಶೋಕನು ಬುದ್ಧನ ಜನ್ಮಸ್ಥಳವಾದ ಲುಂಬುಣಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿ ಶಿಲಾಸ್ತಂಭ ನಿರ್ಮಿಸಿ, ಲುಂಬುಣಿ ಪ್ರದೇಶಕ್ಕೆ ತೆರಿಗೆ ವಿನಾಯಿತಿ ನೀಡಿದನು.” ನಿಗಲಿಸಾಗರ ಸ್ತಂಭಶಾಸನ ಈ ರೀತಿ ತಿಳಿಸುತ್ತದೆ. “ಅಶೋಕನು ಕನಕಮುನಿ ಸ್ಥೂಪಕ್ಕೆ ಪಟ್ಟಾಭಿಷೇಕವಾದ ೧೪ನೆಯ ವರ್ಷದಲ್ಲಿ ಭೇಟಿನೀಡಿ ಬೌದ್ಧ ಕನಕಮುನಿ ಸ್ಥೂಪವನ್ನು ಜೀರ್ಣೋದ್ಧಾರ ಮಾಡಿ ಆ ಸ್ಥೂಪವನ್ನು ಮತ್ತಷ್ಟು ವಿಶಾಲವಾಗಿ ಕಟ್ಟಿಸಿದನು. ಹಾಗೂ ಶಿಲಾಶಾಸನ ಸ್ಥಾಪಿಸಿದನು.” ಮಹಾಸ್ಥಾನ ಶಿಲಾಶಾಸನದ ಪ್ರಕಾರ ಅಶೋಕನು “ಪಂಚವರ್ಗಿಯಾ ಬೌದ್ಧ ಭಿಕ್ಷುಗಳಿಗೆ ಉದಾರವಾಗಿ ದಾನ-ದತ್ತಿ ನೀಡಿದನು.” ಅವರಿಗೆ ಖಜಾನೆಯಲ್ಲಿ ಸಂಪತ್ತು. ಕಣಜದಲ್ಲಿ ಆಹಾರ ಧಾನ್ಯಗಳನ್ನು ಕೊಡಿಸಿದನು. ಸಾಂಚಿ, ಕೌಸಾಂಬಿ, ಸಾರನಾಥ, ರಾಜಗೃಹ ಮುಂತಾದ ಕಡೆ ಪ್ರಪಂಚ ಪ್ರಸಿದ್ದ ಬೌದ್ಧ ಧರ್ಮಸ್ತಂಬ, ಸ್ಥೂಪ, ಚೈತ್ಯ ಹಾಗೂ ವಿಹಾರಗಳನ್ನು ನಿರ್ಮಿಸಿದನು.

ಇ.       ಬೌದ್ಧ ಸಂಘಗಳಿಗೆ ಪ್ರೋತ್ಸಾಹ ನೀಡಿ ಅವುಗಳನ್ನು ಪುನರ್‌ಸಂಘಟಿಸಿದನು. ಅಶೋಕನು ಸ್ವತಃ ಬೌದ್ಧ ಸಂಘದ ಸದಸ್ಯನಾಗಿದ್ದನು. ೩ನೆಯ ಗೌಣಶಿಲಾಶಾಸನದಲ್ಲಿ ಬೌದ್ಧ ಭಿಕ್ಕು-ಬಿಕ್ಕುಣಿಯನ್ನು ತನ್ನ ಪ್ರೀತಿಯ ಮಕ್ಕಳು ಎಂದು ಕರೆದುಕೊಂಡಿದ್ದಾರೆ. ಬಾಬ್ರು ಶಿಲಾಶಾಸನವು ಅಶೋಕನು ಬೌದ್ಧ ಧರ್ಮದೊಂದಿಗಿದ್ದ ಬದ್ಧತೆ ಹಾಗೂ ಬಿಕ್ಕು- ಬಿಕ್ಕುಣಿಯರಿಗೆ ಜಾರಿಗೊಳಿಸಿದ ನೀತಿ-ನಿಯಮಗಳ ಕುರಿತು ವವರವಾದ ಮಾಹಿತಿ ನೀಡುತ್ತದೆ. ಅದರ ಸಾರಾಂಶ ಇಂತಿದೆ. “ಅಶೋಕನು ಬೌದ್ಧ ಧರ್ಮ ಮತ್ತು ಸಂಘದಲ್ಲಿ ಸಂಪೂರ್ಣ ನಂಬಿಕೆಯಿಟ್ಟಿದ್ದನು. ನಿಜವಾದ ಧರ್ಮ ಶಾಶ್ವತವಾಗಿರುತ್ತದೆ. ಬೌದ್ಧ ಬಿಕ್ಕು ಬಕ್ಕುಣಿಯರು ಸಾಮನ್ಯ ಆರಾಧಕರಂತೆ ಬೌದ್ಧ ಧರ್ಮಬೋಧನೆಗಳನ್ನು ಆಗಾಗ ಕೇಳಬೇಕು ಮತ್ತು ಅವರಿಗೆ ಈ ಕೆಳಕಂಡ ಬೌದ್ಧ ಸಾಹಿತ್ಯ ಅಧ್ಯಯನ ಮಾಡುವಂತೆ ಆಜ್ಞಾಪಿಸಿದ್ದನು”

೧. ವಿನಯಸಮುಖಸ – ಇದರಲ್ಲಿ ದೀರ್ಘನಿಕಾಯದ ವಿನಯ ಪೀಟಕದ ಬೋಧನೆಗಳಿವೆ.

೨. ಅಂಗುತ್ತರ ನಶಾಯದ ಅಲಯಾವಸ

೩. ಅಂಗುತ್ತರ ನಿಕಾಯದ ಅನಗತಭಾಷ್ಯ

೪. ಸುತ್ತನಪಟದ ಮುನಿಗಥೆಗಳು

೫. ಅಂಗುತ್ತರ ನಿಕಾಯದಮನಿಸುತ್ತ

೬. ಸುತ್ತನಿಪಟನ ಉಪತಿಸಪಾಸಿನ

೭. ಮಜ್ಜಿಮ ನಿಕಾಯದ ಲಘುಲೊವದ

ಇದೇ ರೀತಿ ಬೌದ್ದ ಧರ್ಮದಲ್ಲಿ ಮತಭೇದ ಮಾಡುವವರ ವಿರುದ್ದ ನಿಲಿಸಾಗರ, ಸಾರನಾಥ ಸ್ತಂಭ ಶಾಸನಗಳಲ್ಲಿ ಈ ಕೆಳಕಂಡ ಆಜ್ಣೆಗಳನ್ನು ಹೊರಡಿಸಿದ್ದನು.

೧. ದೇವನಾಂಪ್ರಿಯ ಆಜ್ಞಾಪಿಸುವಂತೆ ಸಂಘದಲ್ಲಿ ಒಡಕು ಉಂಟುಮಾಡುವವರಿಗೆ ಸಂಘದಲ್ಲಿ ಪ್ರವೇಶವಲ್ಲ.

೨. ಸಂಘವನ್ನು ಇಬ್ಬಾಗ ಮಾಡುವವರನ್ನು ಬಿಳಿಯ ಬಟ್ಟೆಯ ಮೇಲಿಟ್ಟು ಊರಿಂದ ಹೊರಗೆ ಇಡಲಾಗುವುದು.

೩. ಯಾರೂ ಸಹಿತ ಸಂಘವನ್ನು ಒಡೆಯಬಾರದು.

೪. ಇದು ಇತರೆ ಸಂಘದ ಬೌದ್ದ ಬಿಕ್ಕುಗಳಿಗೆ ಮತ್ತು ಭಿಕ್ಕುಣಿಯರಿಗೆ ತಿಳಿಸಬೇಕು.

೫. ಧರ್ಮ ಮಹಾಮಾತ್ರರು ತಮ್ಮ ಕಛೇರಿಯಲ್ಲಿ ಇದರ ಒಂದು ಪ್ರತಿಯನ್ನಿಟ್ಟುಕೊಳ್ಳಬೇಕು ಹಾಗೂ ಮತ್ತೊಂದು ಪ್ರತಿಯನ್ನು ಸಾಮಾನ್ಯ ಬೌದ್ದ ಆರಾಧಕರಿಗೆ ಕೊಡಬೇಕು.

ಈ ರೀತಿಯಾಗಿ ಅಶೊಕನು ಬೌದ್ದ ಸಂಘಗಳ ಬೆಳವಣಿಗೆ ಹಾಗೂ ಏಕ್ಯದತೆಗಾಗಿ ಶ್ರಮಿಸಿದನು.

ಧರ್ಮಪ್ರಚಾರ

ಅ. ಧರ್ಮ ಮಹಾತ್ರರು ಧರ್ಮದ ಉಸ್ತುವಾರಿ ಹಾಗೂ ಪ್ರಚಾರವನ್ನು ಮಾಡುವುದಕ್ಕಾಗಿ ನೇಮಿಸಿದ್ದನು. ಇವರನ್ನು ಎಲ್ಲಾಧರ್ಮದವರಿಂದಲೂ ನೇಮಕ ಮಾಡಿಕೊಂಡಿದ್ದುರೂ ಸಹಿತ ೧೩ನೇ ಶಿಲಾಶಾಸನ ತಿಳಿಸುವಂತೆ ಅವರು ಬೌದ್ದ ಧರ್ಮದ ಪ್ರಚಾರದ ಉಸ್ತುವಾರಿಯನ್ನು ಸಾಮಾನ್ಯವಾಗಿ ನಿರ್ವಹಿಸಬೇಕಿತ್ತು. ಹಾಗೂ ಇವರು ಬೌದ್ದ ಸಂಘದಲ್ಲಿ ಒಡಕುಂಟಾಗದಂತೆ ನೊಡಿಕೊಳ್ಳಬೇಕಾಗಿತ್ತು. ಧರ್ಮದ ತತ್ವಗಳು ಸರಿಯಾಗಿ ಜಾರಿಗೊಳ್ಳುತ್ತಿವೆಯೇ? ಎಂಬುದನ್ನುನಿಗಾವಹಿಸಿ ಗಮನಿಸಬೇಕಾಗಿತ್ತು.

ಆ. ಅಶೋಕನು ಧರ್ಮ ಪ್ರಚಾರಕರನ್ನು ನೇಮಕ ಮಾಡಿ ಅವರನ್ನು ಅನೇಕ ರಾಜ್ಯಗಳಿಗೆ ಧರ್ಮ ಪ್ರಚಾರಕ್ಕಾಗಿ ಕಳಹಿಸಿದನು. ೨ನೆಯ ೫ನೆಯ ಹಾಗೂ ೧೩ನೆಯ ಶಿಲಾಶಾಸನಗಳು ತಿಳಿಸುವಂತೆ ಈ ಕೆಳಕಂಡ ರಾಜ್ಯಗಳಿಗೆ ಧರ್ಮಪ್ರಚಾರಕರನ್ನು ಕಳುಹಿಸಿದ್ದನು.

೧. ಆಂಧ್ರ

೨. ಬೋಜರ ರಾಜ್ಯ

೩. ಚೋಳ

೪. ಗಾಂಧಾರ೫

೫. ಕಾಂಬೋಜ

೬. ಕೇರಳ ಪುತ್ತ

೭. ನಭಪಂಕ್ತಿ

೮. ಪಾಂಡ್ಯ

೯. ಪರಿಂದ

೧೦. ತಾಮ್ರಪಣಿ

೧೧. ಗ್ರೀಕ್

೧೨. ೨ನೇ ಅಂಟಿಕೋಸ್ನ ಸಿರಿಯಾ

೧೩. ಈಜಿಪ್ಟನ ಟಾಲಮಿ ಫಿಲಿಡಲ್ಪಸ್ನರಾಜ್ಯ

೧೪. ಮೆಸಿಡೊನಯಾದ ಅಂಟಿಗೊನಸ್ ರಾಜ್ಯ

೧೫. ಎಪಿರಸ್‌ನ ಅಲೆಗ್ಸಾಂಡರ್ ರಾಜ್ಯ ಮುಂತಾದವು.

ಈ ಕಾಲದ ಪ್ರಮುಖ ಧರ್ಮ ಪ್ರಚಾರಕರು ಹಾಗೂ ಅವರು ಪ್ರಚಾರ ಮಾಡಿದ ಪ್ರದೇಶಗಳು ಇಂತಿವೆ.

೧. ಮಹೇಂದ್ರ-ಸಂಗಮಿತ್ರೆ(ಅಶೋಕನ ಮಕ್ಕಳು)-ತಾಮ್ರಪಣಿ(ಶ್ರೀಲಂಕಾ)

೨. ಸೋನಾಮತ್ತು ಉತ್ತರ – ಬರ್ಮ

೩. ಮಹದೇವ- ಮಹಿಷ ಮಂಡಲ(ಮೈಸೂರು)

೪. ಮಹಾರಕ್ಷಿತ-ಗ್ರಿಕ್ ದೇಶ

೫. ರಕ್ಷಿತ- ಬನವಾಸಿ

೬. ಮಜ್ಜಂಟಿಕ-ಕಾಶ್ಮೀರ ಮತ್ತು ಗಾಂಧರ

೭. ಮಜ್ಜೀಮ-ಹಿಮಾಲಯ ಪ್ರದೇಶ

೮. ಮಹಾಧರ್ಮ ರಕ್ಷಿತ-ಮಹಾರಾಷ್ಟ್ರ

ಇ. ಅಶೋಕನು ಬೌದ್ದ ಧರ್ಮವನ್ನು ಮತ್ತಷ್ಟು ವಿಸ್ತರಿಸುವ ಉದ್ದೇಶದಿಂದ ತನ್ನ ರಾಜಧಾನಿಯಾದ ಪಾಟಲೀಪುತ್ರದಲ್ಲಿ ೩ನೆಯ ಬೌದ್ದ ಸಮ್ಮೇಳನವನ್ನು ಕ್ರಿ.ಪೂ. ೨೩೪ರಲ್ಲಿ ಏರ್ಪಡಿಸಿದ್ದನು. ಇದರ ಅಧ್ಯಕ್ಷತೆಯನ್ನು ಸುಪ್ರಸಿದ್ದ ಬೌದ್ದ ತತ್ವ ಜ್ಣಾನಿಯಾದ ಮೊಗಲ್ಗಲಿಪತ್ತತಿಸ್ಸನು ವಹಿಸಿಕೊಂಡಿದ್ದನು. ಕಥಾವಸ್ತುವನ್ನು ರಚಿಸಿ ಅಭಿಧಮ್ಮ ಪಿಟಕಕ್ಕೆ ಸೇರಿಸಲಾಯಿದತು. ಹಾಗೂ ಬೌದ್ದ ಧರ್ಮದಲ್ಲಿದ್ದ ಆಂತರಿಕ ಮತಭೇದವನ್ನು ಸರಿಪಡಿಸಲು ತೀರ್ಮಾನ ಕ್ಯಗೊಳ್ಳಲಾಯಿತು. ಇದಕ್ಕೆ ಪೂರಕವಾಗಿ ಅಶೋಕನು ಅಗತ್ಯವಾದ ಶಿಲಾಶಾಸನ ಹೊರಡಿಸಿದನು.

ಒಟ್ಟಾರೆ ಅಶೋಕನ ರಾಜ್ಯವು ಧರ್ಮ ವಿಜಯದಿಂದ ಕೂಡಿತ್ತು. ಆದರೆ ಅಶೋಕ ಬೌದ್ದ ಧರ್ಮಕ್ಕೆ ಮತಾಂತರ ಹೊಂದಿದ್ದುರು ಕೂಡ ಸಂಪೂರ್ಣವಾಗಿ ಬೌದ್ದ ಧರ್ಮದ ತತ್ವಗಳನ್ನೇ ಜಾರಿಗೊಳಿಸದೆ ಎಲ್ಲಾ ಧರ್ಮಿಕ ಪಂಥಗಳಿಗೂ ಪ್ರೋತ್ಸಾಹ ನೀಡಿದ್ದನು.‘ಅಶೋಕನು ಜಾರಿಗೊಳಿಸಿದ್ದು ಕೇವಲ ಬೌದ್ದ ಧರ್ಮವಾಗಿರದೆ ಅದು ರಾಜನ ಧರ್ಮವಾಗಿತ್ತು.

ಅಶೋಕ ಮತ್ತು ಬೌದ್ದ ಧರ್ಮ

ಅಶೋಕ ಚಕ್ರವರ್ತಿಯು ಕಳಿಂಗ ಯುದ್ದದ ತರುವಾಯ ಸುಮಾರು ಕ್ರಿ.ಪೂ.೨೬೦ರಲ್ಲಿ ಬೌದ್ದ ಮತಾವಲಂಬಿಯಾಗುತ್ತಾನೆ. ಆನಂತರ ಬೌದ್ದ ಧರ್ಮವನ್ನು ದೇಶದೇಶಗಳಲ್ಲಿ  ಹರಡಲು ಕಾರಣವಾಗುತ್ತಾನೆ. ಈ ಕುರಿತಾಗಿ ವಾದ ವಿವಾದಗಳಿವೆ:

ಅ. ಅಶೋಕನು ಬೌದ್ದ ಧರ್ಮಕ್ಕೆ ಸ್ವತಃ ಮತಾಂತರ ಹೊಂದುತ್ತಾನೆ. ಹಾಗೂ ಬೌದ್ದ ಸಂಘಗಳ  ಸದಸ್ಯನಾಗುತ್ತಾನೆ ಆವನು ೨೫೬ ರಾತ್ರಿಗಳು ಬೌದ್ದ ಧರ್ಮ ಪ್ರಾರ್ಥನೆ ಮಾಡಿರುತ್ತಾನೆ. ಬೌದ್ದ ಧರ್ಮವು ಹಂತ ಹಂತವಾಗಿ ಹೇಗೆ ಬೆಳವಣಿಗೆಯಾಯಿತು ಎಂಬುದನ್ನು ರೂಪನಾಥ ಗೌಣ ಶಿಲಶಾಸನದಲ್ಲಿ ವಿವರಿಸಿದ್ದಾನೆ. ಮುಂದೆ ತನ್ನಿಂದ ಬೌದ್ದ ಧರ್ಮ ವೃದ್ದಿಯಾಗುತ್ತದೆ ಎಂದು ಸಹ ಸ್ವತಃ ಅಶೋಕನೇ ಹೇಳಿಕೊಂಡಿದ್ದನು. ಬೌದ್ದಧರ್ಮದ ಉಪಾಸಕ ಅಂದರೆ ಸಾಮಾನ್ಯ ಆರಾಧಕನಾಗುತ್ತಾನೆ. ಬೌದ್ದ ಸಂಘಗಳ ಏಕ್ಯತೆಗಾಗಿ ಬೋದಗಯ, ಲುಂಬಣಿ, ಬೌದ್ದ ಕೂನಕಾಮನ್ ಮಂತದ ಸ್ಥಳಗಳನ್ನು ಸಂದರ್ಶಿಸುತ್ತಾನೆ.

ಆ. ಬೌದ್ದ ಧರ್ಮದ ಬೆಳವಣಿಗೆಗಾಗಿ ಧರ್ಮಸ್ತಂಭಗಳನ್ನು, ಆಲದ ಮರಗಳನ್ನು, ಸ್ಥೂಪಗಳನ್ನು, ಬೌದ್ದ ಚೈತ್ಯಾಲಯಗಳನ್ನು, ಬೌದ್ದ ವಿಹಾರಗಳನ್ನು ನಿರ್ಮಸುತ್ತಾನೆ. ಲುಂಬಿನಿ ಸ್ತಂಭಶಾಸನ ತಿಳಿಸುಂತೆ “ಅಶೋಕನು ಬುದ್ದನ ಜನ್ಮ ಸ್ಥಳವಾದ ಲುಂಬುಣಿಗೆ ಭೇಟಿ ನೀಡಿ ಪ್ರಾರ್ಥನೆ ಸಲ್ಲಸಿ ಶಿಲಾಸ್ತಂಭ ನಿರ್ಮಿಸಿ, ಲುಂಬುಣಿ ಪ್ರದೇಶಕ್ಕೆ ತೆರಿಗೆ ವಿನಾಯಿತಿ ನೀಡಿದನು.” ನಿಗಲಿಸಾಗರ ಸ್ತಂಭಶಾಸನ ಈ ರೀತಿ ತಿಳಿಸುತ್ತದೆ:

ಅಶೋಕನು ಪಟ್ಟಾಭಿಷೇಕವಾದ ೧೪ನೇ ವರ್ಷದಲ್ಲಿ ಕನಲಮುನಿ ಸ್ತೂಪಕ್ಕೆ ಭೇಟಿ ನೀಡಿ ಬೌದ್ದ  ಕನಕಮುನಿ ಸ್ತೂಪವನ್ನು ಜೀರ್ಣೋದ್ದಾರ ಮಾಡಿ ಸ್ತೂಪವನ್ನು ಮತ್ತಷ್ಟುವಿಶಾಲವಾಗಿ ಕಟ್ಟಸಿದನು ಹಾಗೂ ಶಿಲಾಶಾಸನ ಸ್ಥಾಪಿಸಿದನು.

ಮಹಾಸ್ಥಾನ ಶಿಲಾಶಾಸನದ ಪ್ರಕಾರ ಅಶೋಕನು “ಪಂಚವರ್ಗೀಯ ಬೌದ್ದ ಭಿಕ್ಷುಗಳಿಗೆ ಉಧಾರವಾಗಿ ದಾನದತ್ತಿ ನೀಡಿದನು.” ಅವರಿಗೆ ಖಜಾನೆಯಲ್ಲಿ ಸಂಪತ್ತು, ಕಣಜದಲ್ಲಿ ಆಹಾರ ಧಾನ್ಯಗಳನ್ನು ಕೊಡಿಸಿದನು. ಸಾಂಚಿ, ಕೌಸಾಂಬಿ, ಸಾರನಾಥ, ರಾಜಗೃಹ ಮುಂತಾದ ಕಡೆ ಪ್ರಪಂಚ ಪ್ರಸಿದ್ದ ಬೌದ್ದ ಧರ್ಮಸ್ತಂಭ, ಸ್ತೂಪ, ಚ್ಯತ್ಯ ಹಾಗೂ ವಿಹಾರಗಳನ್ನು ನಿರ್ಮಿಸಿದನು.

ಇ. ಬೌದ್ದ ಸಂಘಗಳಿಗೆ ಪ್ರೋತ್ಸಾಹ ನೀಡಿ ಅವುಗಳನ್ನು ಪುನರ್ ಸಂಘಟಿಸಿದನು. ಅಶೋಕನು ಸ್ವತ: ಬೌದ್ದ ಸಂಘದ ಸದಸ್ಯನಾಗಿದ್ದನು. ೩ನೆಯ ಗೌಣಶಿಲಾಶಾಸನದಲ್ಲಿ ಬೌದ್ದ ಭಿಕ್ಕುಬಿಕ್ಕುಣಿಯನ್ನು ತನ್ನ ಪ್ರೀತಿಯ ಮಕ್ಕಳು ಎಂದು ಕರೆದುಕೊಂಡಿದ್ದಾರೆ. ಬಾಬ್ರುಶಿಲಾಲಾಸನವು ಅಶೋಕನು ಬೌದ್ದ ಧರ್ಮದೊಂದಿಗಿದ್ದ ಬದ್ದತೆ ಹಾಗೂ ಭಿಕ್ಕುಭಕ್ಕುಣಿಯರಿಗೆ ಜಾರಿಗೊಳಿಸಿದ ನೀತಿನಿಯಮಗಳ ಕುರಿತು ವಿವರವಾದ ಮಾಹಿತಿ ನೀಡುತ್ತದೆ. ಅದರ ಸಾರಾಂಶ ಇಂತಿದೆ. “ಅಶೋಕನು ಬೌದ್ದ ಧರ್ಮ ಮತ್ತು ಸಂಘದಲ್ಲಿ ಸಂಪೂರ್ಣ ನಂಬಿಕೆ ಇಟ್ಟಿದ್ದನು. ನಿಜವಾದ ಧರ್ಮ ಶಾಶ್ವತವಾಗಿರುತ್ತದೆ. ಬೌದ್ದ ಭಿಕ್ಕುಬಿಕ್ಕುಣಿಯರು ಸಾಮಾನ್ಯ ಆರಾಧಕರಂತೆ ಬೌದ್ದ ಧರ್ಮಬೋಧನೆಗಳನ್ನು ಆಗಾಗ ಕೇಳಬೇಕು ಮತ್ತು ಅವರಿಗೆ ಕೆಳಕಂಡಬೌದ್ದ ಸಾಹಿತ್ಯ ಅಧ್ಯಯನ ಮಾಡುವಂತೆ ಆಜ್ಣಾಪಿಸಿದ್ದನು.”

೧. ವಿನಯಸಮುಖಸ-ಇದರಲ್ಲಿ ದೀರ್ಘನಿಕಾಯದ ವಿನಯ ಪೀಟಕದ ಬೋಧನೆಗಳಿವೆ.

೨. ಅಂಗುತ್ತರ ನಿಕಾಯದ ಅಲಿಯಾವಸ

೩. ಅಂಗುತ್ತರ ನಿಕಾಯದ ಅನಗತಭಾಷ್ಯ

೪. ಸುತ್ತನಿಪಟದ ಮುನಿಗಥೆಗಳು

೫. ಅಂಗುತ್ತರ ನಿಕಾಯದ ಮನಿಸುತ್ತ

೬. ಸುತ್ತನಿಪಟನ ಉಪತಿಸಪಾಸಿನ

೭. ಮಜ್ಜಿಮ ನಿಕಾಯದ ಲಘುಲೊವದ

ಇದೇ ರೀತಿ ಬೌದ್ದ ಧರ್ಮದಲ್ಲಿ ಮತಭೇದ ಮಾಡುವವರ ವಿರುದ್ದ ನಿಗಲಿಸಾಗರ, ಸಾರನಾತ ಸ್ತಂಭ ಶಾಸನಗಳಲ್ಲಿ ಈ ಕೆಳಕಂಡ ಆಜ್ಞೆಗಳನ್ನು ಹೊರಡಿಸಿದ್ದನು:

೧. ದೇವನಾಂಪ್ರಿಯ ಅಜ್ಞಾಪಿಸುವಂತೆ ಸಂಘದಲ್ಲಿ ಒಡಕು ಉಂಟುಮಾಡುವವರಿಗೆ ಸಂಘದಲ್ಲಿ ಪ್ರವೇಶವಿಲ್ಲ.

೨. ಸಂಘವನ್ನು ಇಬ್ಬಾಗ ಮಾಡುವವರನ್ನು ಬಿಳಿಯ ಬಟ್ಟೆಯನ್ನು ಉಡಿಸಿ ಊರಿಂದ ಹೊರಗೆ ಇಡಲಾಗುವುದು.

೩. ಯಾರೂ  ಸಹಿತ ಸಂಘವನ್ನು ಒಡೆಯಬಾರದು.

೪. ಇದು ಇತರೆ ಸಂಗದ ಬೌದ್ಧ ಭಿಕ್ಕುಗಳಿಗೆ ಮತ್ತು ಭಕ್ಕುಣಿಯರಿಗೆ ತಿಳಿಸಬೇಕು.

೫. ಧರ್ಮ ಮಗಾಮಾತ್ರರು ತಮ್ಮ ಕಛೇರಿಯಲ್ಲಿ ಇದರ ಒಂದು ಪ್ರತಿಯನ್ನಿಟ್ಟುಕೊಳ್ಳಬೇಕು ಹಾಗೂ ಮತ್ತೊಂದು ಪ್ರತಿಯನ್ನು ಸಾಮನ್ಯ ಬೌದ್ಧ ಆರಾಧಕರಿಗೆ ಕೊಡಬೇಕು.

ಈ ರೀತಿಯಾಗಿ ಅಶೋಕನು ಬೌದ್ಧ ಸಂಘಗಳ ಬೆಳವಣಿಗೆ ಹಾಗೂ ಐಕ್ಯತೆಗಾಗಿ ಶ್ರಮಿಸಿದನು.