. ಆದಿ ಮಾನವರ ಕಾಲಮಾನ

ವರ್ಷಗಳ ಹಿಂದೆ
೩೨ ಲಕ್ಷ ‘ಲೂಸಿ’ ಆಸ್ಟ್ರಲೋಪಿತೆಕಸ್‌ ಅಪಾರೆನ್ಸಿಸ್‌
೨೬-೧೭ ಲಕ್ಷ ಹೋಮೋ ಹೆಬಿಲಿಸ್‌ನ ಕಾಲ
೨೦ ಲಕ್ಷ ಆಫ್ರಿಕಾದಲ್ಲಿ ಹೋಮೋ ಎರೆಕ್ಟಸ್‌ ಮೊದಲು ಕಂಡುಬಂದುದು
೨೦ ಲಕ್ಷ ಒಲ್ಡೊವನ್‌ ಉಪಕರಣಗಳು, ರಿವತ್‌ (ಪಾಕಿಸ್ತಾನ)
೧೦ ಲಕ್ಷ ಬೆಣಚು ಕಲ್ಲಿನ ಚಕ್ಕೆ ಸಂಸ್ಕೃತಿ, ಪಾಕಿಸ್ತಾನದ ಸೊನ್‌ ಕಣಿವೆಯಲ್ಲಿ
೭ ರಿಂದ ೪ ಲಕ್ಷ ಅಶ್ಯೂಲಿಯನ್‌ ಸಂಸ್ಕೃತಿ, ಪಬ್ಬಿ, ಪರ್ವತ ಶ್ರೇಣಿ (ಪಾಕಿಸ್ತಾನ) ಮತ್ತು ಹಿಮಾಚಲ
೫ ರಿಂದ ೧.೩ಲಕ್ಷ ‘ನರ್ಮದಾ ತಲೆಬುರುಡೆ’ ಹತ್ನೋರ (ವಿಕಾಸಗೊಂಡ ಹೋಮೋ ಎರೆಕ್ಟಸ್‌)
೪ ರಿಂದ ೩ ಲಕ್ಷ ಕೆಳಗಣ ಹಳೆ ಶಿಲಾಯುಗ ಸಂಸ್ಕೃತಿಗಳು, ದಕ್ಷಿಣ ಭಾರತ (ಮದ್ರಾಸ್‌ ಉದ್ಯಮ), ರಾಜಸ್ಥಾನ ಮತ್ತು ಮಧ್ಯ ಭಾರತ
೧೫೦,೦೦೦ ರಿಂದ ೫೦,೦೦೦ ಮಧ್ಯ ಹಳೆ ಶಿಲಾಯುಗ ಸಂಸ್ಕೃತಿಗಳು, ರಾಜಸ್ಥಾನ, ಮಧ್ಯ ಮತ್ತು ದಕ್ಷಿಣ ಭಾರತ
೧೧೫,೦೦೦ ದಕ್ಷಿಣ ಆಫ್ರೀಕಾದಲ್ಲಿ ಹೋಮೋ ಸೆಪಿಯನ್ಸ್‌ ಸೆಪಿಯನ್ಸ್‌ (ಆಧುನಿಕ ಮಾನವ)ನ ಅತಿ ಹಳೆಯ ಪಳೆಯುಳಿಕೆಯ ಕಾಲ
೭೫,೦೦೦ ಭಾರತದಲ್ಲಿ ಆಧುನಿಕ ಮಾನವನ ಆಗಮನ
೬೦,೦೦೦ ಶ್ರೀಲಂಕಾದಲ್ಲಿ ಆಧುನಿಕ ಮಾನವನ ಆಗಮನ
೬೦,೦೦೦ ದಿಂದ ೨೦,೦೦೦ ಮಧ್ಯ ಹಳೆ ಶಿಲಾಯುಗದ ಸಂಸ್ಕೃತಿ, ಪಾಕಿಸ್ತಾನ (ಸೊನ್‌ ಕಣಿವೆ, ರೋಹ್ರಿ ಪರ್ವತ ಶ್ರೇಣಿ)
೫೦,೦೦೦ ದಿಂದ ೩೦,೦೦೦ ಆಫಘಾನಿಸ್ತಾನದಲ್ಲಿ ನಿಯಾನ್‌ಡೆರ್ಥಲ್‌ರು
೩೪,೦೦೦ ಶ್ರೀಲಂಕಾದಲ್ಲಿ ಸಣ್ಣ ಶಿಲಾ ಪರಿಕರಗಳು ಕಂಡುಬಂದ ಕಾಲ
೩೧,೦೦೦ ದಕ್ಷಿಣ ಏಷಿಯಾ (ಶ್ರೀಲಂಕಾ)ದಲ್ಲಿ ಮೊದಲ ಆಧುನಿಕ ಮಾನವನ ಪಳೆಯುಳಿಕೆ
೨೫,೫೦೦ ದಿಂದ ೧೦,೫೦೦ ಮೇಲಣ ಹಳೆ ಶಿಲಾಯುಗದ ಸಂಸ್ಕೃತಿ, ಕರ್ನಾಟಕ ಮತ್ತು ಮಧ್ಯ ಭಾರತ
೨೪,೦೦೦ ಭಾರತದ ಅತಿ ಹಳೆಯ ಸಣ್ಣಶಿಲಾ ಉಪಕರಣಗಳು (ಪಾಟ್ನೇ, ಮಹಾರಾಷ್ಟ್ರ)
೧೦,೦೦೦ ಮಧ್ಯ ಶಿಲಾಯುಗದ ಸಂಸ್ಕೃತಿ, ಸರಾಯ್‌ ನಹರ್ ರಾಯ್‌ ಮತ್ತು ಮಹದಹ (ಉತ್ತರ ಪ್ರದೇಶ)
೮,೦೦೦ ಮಧ್ಯ ಶಿಲಾಯುಗದ ಸಂಸ್ಕೃತಿ, ನರ್ಮದಾ ಕಣಿವೆ

ಈ ವ್ಯವಸ್ಥೆಯಲ್ಲಿ ವರ್ಗೀಕರಣದಲ್ಲಿ ಬೇರೆ ಅಂಶಗಳಿದ್ದಾಗ್ಯೂ, ಪ್ರಧಾನವಾಗಿ ಶಿಲೆಗಳಲ್ಲಿ ಪಳೆಯುಳಿಕೆಯ ರೂಪದಲ್ಲಿ ಸಿಗುವ ಸಾವಯವ ಅಥವಾ ಜೈವಿಕ ಸ್ವರೂಪಗಳ ಮೇಲೆ ಇದು ಅವಲಂಬಿತವಾಗಿದೆ. ಪ್ಲಿಸ್ಟೋಷಿಯನ್‌ ಅಥವಾ ಕೊನೆಯದಕ್ಕೆ ಹಿಂದಿನ (ಹೊಲೊಸಿನ್‌ ಹಿಂದಿನದು) ಶಕದ ವಿಶೇಷವೆಂದರೆ ಈ ಶಕದಲ್ಲಿಯೇ ಮಾನವರಲ್ಲದೆ, ಕುದುರೆಗಳು, ದನಗಳು, ಆನೆಗಳು ಭೂಮಿಯ ಮೇಲೆ ಕಾಣಿಸಿಕೊಳ್ಳುತ್ತವೆ. ಅಯಸ್ಕಾಂತದ ಧೃವಗಳಲ್ಲಿ ಬದಲಾವಣೆಗಳ ಆಧ್ಯಯನಗಳು ಸೂಚಿಸುವಂತೆ ಈ ಅಯಸ್ಕಾಂತ ಧ್ರುವದಲ್ಲಿ ೧೯ ಲಕ್ಷ ವರ್ಷದಿಂದ ೧೮ ಲಕ್ಷ ವರ್ಷಗಳ ಹಿಂದೆ ಬದಲಾವಣೆಯಾಯಿತು (ಇದನ್ನು ‘ಓಲ್ಡುವಾಯ್‌ ಘಟನೆ’ ಎನ್ನಲಾಗಿದೆ) ಈ ಬದಲಾವಣೆ ಜೀವ ಸಂಕುಲಗಳ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲವಾದರೂ ಈ ಬದಲಾವಣೆಯ ಕಾಲವನ್ನು ಪ್ಲಿಸ್ಟೋಶಿಯನ್‌ ಪ್ರಾರಂಭ ಎಂದು ಗುರುತಿಸಲಾಗುತ್ತದೆ.

. ನವ ಶಿಲಾಯುಗ ಕ್ರಾಂತಿಯ ಕಾಲಾನುಕ್ರಮಣಿಕೆ

ಕ್ರಿ.ಪೂ.
೧೦,೦೦೦-೯,೦೦೦ ಪ್ರಾರಂಭಿಕ ನವ ಶಿಲಾಯುಗ ಸಂಸ್ಕೃತಿ, ಪ್ಯಾಲೆಸ್ಟೈನ್‌ ಮತ್ತು ಸಿರಿಯಾದ ನಟುಫಿಯನ್‌
೧೦,೦೦೦-೭,೫೦೦ ನವ ಶಿಲಾಯುಗ ಸಂಸ್ಕೃತಿ, ಉತ್ತರ ಆಫಘಾನಿಸ್ತಾನ ಮಡಕೆ ಪೂರ್ವ
೭,೦೦೦-೫,೦೦೦ ನವ ಶಿಲಾಯುಗ ಸಂಸ್ಕೃತಿ, ಮೆಹರ್ಘಡ್‌, ಕಾಲಮಾನ ಮಡಕೆ ಪೂರ್ವ, ಗೋದಿ, ಬಾರ್ಲಿ ವ್ಯವಸಾಯ
೫,೩೬೫-೨,೬೫೦ ಬಾಗೋರ್ ಮಧ್ಯ ಶಿಲಾಯುಗ, ಕಾಲಮಾನ I; ಮಡಕೆ ಪೂರ್ವ
೫,೦೦೦-೪,೦೦೦ ಚೀನಾ, ವಿಯೆಟ್ನಾಂ, ಥಾಯಲ್ಯಾಂಡ್‌ ಭತ್ತದ ವ್ಯವಸಾಯದ ವಿಸ್ತರಣೆ
೪,೦೦೦-೪,೩೦೦ ಮೆಹರ್ಘಡ್‌, ಕಾಲಮಾನ II; ಕೈಯಿಂದ ಮಾಡಿದ ಮಡಿಕೆ, ಹತ್ತಿಯ ವ್ಯವಸಾಯ
೪,೩೦೦-೩,೮೦೦ ಮೆಹರ್ಘಡ್‌, ಕಾಲಮಾನ III; ತಾಮ್ರ ಕರಗಿಸುವಿಕೆ ತೊಗಾವು ಮಡಿಕೆ
೪,೦೦೦ ಮೆಹರ್ಘಡ್‌ ಕುಂಬಾರ ಚಕ್ರ
೩,೮೦೦-೩,೨೦೦ ನವ ಶಿಲಾಯುಗದ ಕೆಚಿ-ಬೇಗ್‌ ಮತ್ತು ಹಾಕ್ರ ಮಡಕೆ ಸಂಸ್ಕೃತಿಗಳು ಚಕ್ರದಿಂದ ತಯಾರಿಸಿದ ಮಡಕೆ
೩,೩೮೫-೨,೭೮೦ ಬೇಲಾನ್‌ ಮಧ್ಯ ಶಿಲಾಯುಗ ಕೈಯಿಂದ ತಯಾರಿಸಿದ ಮಡಕೆ
೩,೫೦೦-೧,೨೦೦ ವಿಂಧ್ಯಾದ ನವ ಶಿಲಾಯುಗ ಪ್ರಮುಖವಾಗಿ ಕೈಯಿಂದ ಮಾಡಿದ ಮಡಕೆ, ಭತ್ತ ವ್ಯವಸಾಯ
೩,೦೦೦-೨,೧೦೦ ದಕ್ಷಿಣ ಭಾರತದ ನವ ಶಿಲಾಯುಗ ಮುಖ್ಯವಾಗಿ ಕೈಯಿಂದ ತಯಾರಿಸಿದ ಮಡಕೆ
೩,೦೦೦-೧,೯೦೦ ಸ್ವಾಟ್‌ ನವ ಶಿಲಾಯುಗ: ಮಡಕೆ; ಗೋದಿ, ಬಾರ್ಲಿ ವ್ಯವಸಾಯ
೨,೮೦೦-೨,೫೦೦ ಉತ್ತರದ (ಕಾಶ್ಮೀರ) ನವ ಶಿಲಾಯುಗ, ಹಂತ I: ಮಡಕೆ ಪೂರ್ವ
೨,೫೦೦-೨,೦೦೦ ಉತ್ತರದ (ಕಾಶ್ಮೀರ) ನವ ಶಿಲಾಯುಗ, ಹಂತ II: ಕೈಯಿಂದ ಮಾಡಿದ ಮಡಕೆ, ಗೋದಿ, ಬಾರ್ಲಿ ಮತ್ತು ಅವರೆಯಂತಹ ಬೀಜಗಳ ವ್ಯವಸಾಯ
೨,೫೦೦-೨,೦೦೦ ಪೂರ್ವದ ನವ ಶಿಲಾಯುಗ, ಪಾಂಡು ರಾಜರ್ ಧಿಬಿ, ಹಂತ I: ಕೈಯಿಂದ ಮಾಡಿದ ಮಡಕೆ ಭತ್ತ ವ್ಯವಸಾಯ
೨,೧೦೦-೧,೪೦೦ ರಾಂದ್‌ನ ನವಶಿಲಾಯುಗ ಅವಧಿ I: ಕೈಯಿಂದ ಮಾಡಿದ ಮಡಕೆ, ಭತ್ತ ವ್ಯವಸಾಯ

ಕಾರ್ಬನ್‌ ಕಾಲಮಾನಗಳಲ್ಲಿ, ಕೆಲವು ಒಂದರ ಮೇಲೊಂದು ವ್ಯಾಪಿಸಿವೆ, ಈ ಸಮಸ್ಯೆ ಇನ್ನೂ ಪರಿಹಾರವಾಗಿಲ್ಲ. ಅನುಕ್ರಮವು ಸ್ಪಷ್ಟವಾಗಿರುವ ಕಾರಣ ವಿಂಧ್ಯಾ ನವ ಶಿಲಾಯುಗದ ಕೆಲವು ಕಾರ್ಬನ್‌ ಕಾಲಮಾನಗಳು ಹಿಂದಿನ ಕಾಲ ಸೂಚಿಸುತ್ತಿದ್ದಾಗ್ಯೂ ಶಿಲಾಯುಗವನ್ನು ಬೇಲಾನ್‌ ಮಧ್ಯ ಶಿಲಾಯುಗದ ನಂತರ ಇರಿಸಲಾಗಿದೆ.

. ಮರುಭೂಮಿಯ ಕಳೆದುಹೋದ ನದಿ
ಈಗಿರುವ ವಾತಾವರಣ ವ್ಯವಸ್ಥೆ ಭೂಗರ್ಭಶಾಸ್ತ್ರೀಯ ಯುಗವಾದ ಹೊಲೋಸಿನ್‌ನ ಪ್ರಾರಂಭದಿಂದಲೂ ಅಂದರೆ ಸುಮಾರು ೧೦ ಸಾವಿರ ವರ್ಷಗಳ ಹಿಂದಿನಿಂದಲೂ ಇತ್ತೆಂಬ ಬಗ್ಗೆ ಯಾರಿಗೂ ಅನುಮಾನವಿಲ್ಲ. ಈ ವ್ಯವಸ್ಥೆಯಲ್ಲಿ ಮುಖ್ಯವಾಗಿ ಭೂಮಿಗೆ ನೀರು ಕೊಡುವುದು ಮಾನ್ಸೂನ್‌ ಮಳೆ. ಇದರೊಳಗೆ ಬಿಸಿ ಮತ್ತು ತಂಪು ಅಥವಾ ಒಣ ಮತ್ತು ಆರ್ದ್ರ ಕಾಲಗಳು ಇದ್ದವು ಎಂದು ಕೆಲವೊಮ್ಮೆ ಸೂಚಿಸಲಾಗಿದೆ. ಭಾರತಕ್ಕೆ ಸಂಬಂದಪಟ್ಟಂತೆ ಈ ಬಗೆಗಿನ ಹೆಚ್ಚಿನ ಊಹೆಗಳು ೧೯ನೆಯ ಶತಮಾನದಲ್ಲಿ ಮರುಭೂಮಿಯ ಕಳೆದುಹೋದ ನದಿ ಎಂದು ಗುರುತಿಸಿದ, ಸಮಸ್ಯೆಗೆ ಸಂಬಂಧಿಸಿದ್ದವೇ ಆಗಿದ್ದವು. ಈಗ ಇದು ಸರಸ್ವತಿ ನದಿಯ ಪ್ರಶ್ನೆಯಾಗಿ ರೂಪಗೊಂಡಿದೆ.

ಸಟ್ಲೇಜ್‌ ಹಾಗೂ ಯಮುನಾದ ನಡುವೆ ಬಯಲಿಗೆ ಹರಿದು ಬರುವ ನದಿಗಳೆಲ್ಲಾ ಶಿವಾಲಿಕದಲ್ಲಿ ಅಥವಾ ಕೆಳ ಹಿಮಾಲಯದ ಇಳಿಜಾರುಗಳಲ್ಲಿ ಹುಟ್ಟುತ್ತವೆ ಎಂದು ಕಂಡುಬಂದಿದೆ.ದ ಅವುಗಳ ನೀರಿನ ಮೂಲ ಮಳೆಯಿಂದ ಹರಿದು ಬರುವ ನೀರು. ಈ ಝರಿಗಳಲ್ಲಿ ಹೆಚ್ಚಿನವು ಚೌತಾಂಗ್‌ ಮತ್ತು ಘಗ್ಗರ್‌ಎಂಬ ಇಲ್ಲಿಯ ಎರಡು ಮುಖ್ಯ ನದಿಗಳ ಉಪನದಿಗಳು. ಇಂದು ಇವೆರಡೂ ನದಿಗಳೂ ಪಶ್ಚಿಮ ರಾಜಸ್ಥಾನದ ಥಾರ್‌ ಮರುಭೂಮಿಗೆ ಬಹು ಮುಂಚೆಯೇ ಒಣಗಿಹೋಗುತ್ತವೆ. ಚೌತಾಂಗ್‌ನ ಒಣ ಪಾತ್ರವು ಪಶ್ಚಿಮಕ್ಕೆ ಹರಿಯಾಣದಿಂದ ರಾಜಸ್ಥಾನಕ್ಕೆ ಸಾಗುತ್ತದೆ. ಇಲ್ಲಿ ಅದು ಘಗ್ಗರ್‌ನ ಒಣ ಪಾತ್ರವನ್ನು ಸೇರುತ್ತದೆ. ಸರುಸತಿ(ಸರಸ್ವತಿ) ಈ ಘಗ್ಗರ್‌ನ ಉಪನದಿಗಳಲ್ಲಿ ಒಂದು. ಈ ಚೌತಾಂಗ್‌ ಹಾಗೂ ಘಗ್ಗರ್‌ನ ಸಂಯುಕ್ತ ಒಣ ಪಾತ್ರ ಪಶ್ಚಿಮಕ್ಕೆ ಪಾಕಿಸ್ತಾನದ ಬಹವಲ್‌ಪುರ ಜಿಲ್ಲೆಯಲ್ಲಿ ಹರಿದುದ, ಅಲ್ಲಿ ಉತ್ತರದಿಂದ ಬಂದ ಇನ್ನೊಂದು ನದಿಯ ಒಣ ಪಾತ್ರವನ್ನು ಸೇರಿ ಹಾಕ್ರ ಎಂಬ ಹೆಸರು ಪಡೆಯುತ್ತದೆ. ಆ ಜಿಲ್ಲೆಯ ದೇರವಾರ್‌ ಹತ್ತಿರ ಈ ಪಾತ್ರವು ನದಿಗಳು ಮುಖಜ ಭೂಮಿಯಲ್ಲಿ ಕವಲೊಡೆದಂತೆ ಕವಲೊಡೆಯುತ್ತದೆ. ಇದಕ್ಕೂ ಮತ್ಗತು ಸಿಂಧದಲ್ಲಿನ ಪೂರ್ವ ನಾರಕ್ಕೂ ಸಂಬಂಧ ಕಲ್ಪಿಸುವುದಕ್ಕೆ ಯಾವುದೇ ಆಧಾರವಿಲ್ಲ. ಸಿಂಧೂ ನದಿಗೆ ಹತ್ತಿಕೊಂಡು ಹುಟ್ಟುವ ಈ ಪೂರ್ವ ನಾರ ದಕ್ಷಿಣಕ್ಕೆ ಕಚ್‌ನ ರಣ್‌ಗೆ ಹರಿಯುತ್ತದೆ; ಐತಿಹಾಸಿಕ ಕಾಲದಲ್ಲಿ ಈ ನದಿಯು ಸಿಂಧೂನ ಪ್ರವಾಹ ನೀರನ್ನು ಬಸಿಯುವ ಕಾಲುವೆಯಾಗಿ ಕೆಲಸ ಮಾಡುತ್ತಿತ್ತು. ಹಿಂದೆಯೂ ಅದು ಇದೇ ಕೆಲಸವನ್ನು ಮಾಡುತ್ತಿದ್ದಿರಬಹುದು.

ಘಗ್ಗರ್, ಹಾಕ್ರ ಮತ್ತು ನಾರ ನದಿಗಳ ಈ ಒಣ ಪಾತ್ರಗಳಲ್ಲಿ ಸರಸ್ವತಿ ಎಂದು ಗುರುತಿಸಬಹುದಾದ ಒಂದು ಸತತವಾಗಿ ಹರಿಯುತ್ತಿದ್ದ ನದಿಯ ಜಾಡುಗಳು ಸಿಗುತ್ತವೆ ಎಂಬ ವಾದವನ್ನು ಮುಂದಿಡಲಾಗುತ್ತಿದೆ. ಋಗ್ವೇದ ಮಂತ್ರಗಳ ಆಧಾರದ ಮೇಲೆ ಈ ಬೃಹತ್‌ ನದಿಯು ಕಚ್‌ನ ರಣ್‌ಗೆ ಹರಿಯುತ್ತಿತ್ತು. ಎಂದು ವಾದ ಹೊಡಲಾಗುತ್ತಿದೆ. ಸಟ್ಲೇಜ್‌ ಮತ್ತು ಯಮುನಾ ಎರಡೂ ಅಥವಾ ಒಂದರ ನಂತರ ಒಂದು ಈ ಸರಸ್ವತಿ ನದಿಯ ಉಪನದಿಗಳಾಗಿದ್ದರಿಂದ ಇದು ಸಾಧ್ಯವಾಯಿತು ಎಂದು ಹೇಳಲಾಗುತ್ತಿದೆ. ಉಪಗ್ರಹ (ಲ್ಯಾಂಡ್‌ಸಾಟ್‌)ದ ಚಿತ್ರವು ಸಟ್ಲೇಜ್‌ ಮತ್ತು ಯಮುನಾದ ಪ್ರಾಚೀನ ಪಾತ್ರಗಳು ಈಗಿನ ಈ ನದಿಗಳ ಪಾತ್ರಗಳಿಗಿಂತ ಭಿನ್ನವಾಗಿ ಹಾಕ್ರಾದ ಜಲಾನಯನ ಪ್ರದೇಶಕ್ಕೆ ಹರಿಯುತ್ತಿದ್ದವು ಎಂಬ ಕ್ಷೇತ್ರ ಸರ್ವೇಕ್ಷಣೆಯನ್ನು ಆಧರಿಸಿದ ಹಳೆಯ ಸೂಚನೆಗಳಿಗೆ ಬಲ ಕೊಟ್ಟಿದೆ. ದಿಡ್‌ವಾನ ಹಾಗೂ ಇತರ ರಾಜಸ್ಥಾನದ ಉಪ್ಪು ಸರೋವರಗಳನ್ನು ಕುರಿತ ಗುರುದೀಪ್‌ ಸಿಂಗ್‌ರ ಅಧ್ಯಯನಗಳು ಹಿಂದಿನ ಒಂದು ತೀವ್ರ ಒಣ ಹಂತವು ಕ್ರಿ.ಪೂ. ೧೨೦೦೦ಕ್ಕೆ ಅಂತ್ಯವಾಯಿತೆಂತಲೂ, ಕ್ರಿ.ಪೂ. ೪೪೨೦ ಹಾಗೂ ಕ್ರಿ.ಪೂ. ೨೨೩೦ರ ಮಧ್ಯದಲ್ಲಿ ಅರೆ-ಆರ್ದ್ರ ಹಂತವಿತ್ತೆಂದೂ ಸೂಚಿಸಿದೆ. ಈ ಆರ್ದ್ರ ಹಂತಗಳಲ್ಲಿ ಈಗಿನದ್ದಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸಿಹಿ ನೀರು ಲಭ್ಯವಾಗುತ್ತಿದ್ದಿರಬೇಕು, ಅದರಿಂದಾಗಿ ಇಂದಿಗಿಂತ ಹೆಚ್ಚು ಮಳೆಯಿದ್ದಿರಬೇಕು ಎಂದು ವಾದ ಮಾಡಲಾಗುತ್ತದೆ. ಹೆಚ್ಚಿನ ಮಳೆ ನೀರು ದೊರೆಯುತ್ತಿದ್ದುದರಿಂದ ನದಿಗಳಿಗೆ ಹೆಚ್ಚು ನೀರು ಹರಿಯುತ್ತಿದ್ದ ಕಾರಣಕ್ಕೆ ಆ ಆರ್ದ್ರ ಹಂತದಲ್ಲಿ ಸರಸ್ವತಿಯು ಒಂದು ಮಹಾ ನದಿಯಾಗಿ ಹರಿಯುತ್ತಿರಲು ಸಾಧ್ಯವಿತ್ತೆಂದು ತರ್ಕಿಸಲಾಗಿದೆ.

ಈ ವಾದ ಒಪ್ಪಿಕೊಳ್ಳಲು ಹಲವು ದುಸ್ತರವಾದ ಆಕ್ಷೇಪಗಳಿವೆ.  ಸರಸ್ವತಿ (ಮಧ್ಯಕಾಲೀನ ಹಾಗೂ ಆಧುನಿಕ ಸರಸುತಿ) ಶಿವಾಲಿಕದ ಇಳಿಜಾರುಗಳಲ್ಲಿ ಹುಟ್ಟಿ ಹರಿಯಾಣದ ತಾನೇಸರ್‌ ಬಳಿಯಿಂದ ಹರಿಯುವ ಒಂದು ಸಣ್ಣ ನದಿಗೆ ಪ್ರಾಚೀನ ಕಾಲದಿಂದಲೂ ಕೊಟ್ಟ ಹೆಸರು. ಅದು ತಾನಾಗಿಯೇ ಎಂದೂ ಹಿಮಾಲಯದ ಉನ್ನತ ಶ್ರೇಣಿಗಳಿಂದ ಹುಟ್ಟಿ ಬರುವ ನದಿಗಳಿಗೆ ಹೋಲಿಸಬಹುದಾದ ಒಂದು ದೊಡ್ಡ ನದಿಯಾಗಿರಲು ಸಾಧ್ಯವಿರಲಿಕ್ಕಿಲ್ಲ. ಘಗ್ಗರ್‌ ಮತ್ತು ಹಾಕ್ರ ನದಿಯ ಯಾವುದೇ ಒಣ ಪಾತ್ರವನ್ನು ಕೂಡಾ ‘ಸರಸ್ವತಿ’ ಎಂಬ ಹೆಸರಿನಲ್ಲಿ ಕರೆಯುವುದಿಲ್ಲ. ಸಟ್ಲೆಜ್‌ ಅಥವಾ ಯಮುನಾ ಎಂದಾದರೂ ಘಗ್ಗರ್‌ ಅಥವಾ ಹಾಕ್ರದ ಪಾತ್ರಗಳಿಗೆ ಹರಿಯುತ್ತಿದ್ದರೆ ಇಂತಹ ಜಂಟೀ ಪಾತ್ರಕ್ಕೆ ಆ ಎರಡು ನದಿಗಳಲ್ಲೊಂದರ ಹೆಸರು ಇರುತ್ತಿತ್ತೇ ಹೊರತು ಸರಸ್ವತಿ ಎಂಬ ಹೆಸರಿರುತ್ತಿರಲಿಲ್ಲ. ಅಲ್ಲದೆ ಯಮುನಾ ಅದರ ಹಿಂದೆ ಹರಿಯುತ್ತಿದ್ದ ಪಶ್ಚಿಮ ತಟದಲ್ಲಿನಿ ದಿಬ್ಬಗಳಿಗೆ ಹೋಲಿಸಿದಲ್ಲಿ ಇಂದು ಎಷ್ಟು ಆಳವಾದ ಕೊರಕಲಿನಲ್ಲಿ ಹರಿಯುತ್ತಿದೆ ಎಂದರೆ ಅದು ಕನಿಷ್ಟ ಕಳೆದ ಹತ್ತು ಸಾವಿರ ವರ್ಷಗಳೊಳಗೆಯಂತೂ ಘಗ್ಗರ್‌ನ ಜಲಾನಯನ ಪ್ರದೇಶಕ್ಕೆ ಹರಿಯುತ್ತಿದ್ದ ಸಾಧ್ಯತೆ ಕಾಣಿಸುವುದಿಲ್ಲ. ಉಪಗ್ರಹ ಚಿತ್ರದಿಂದ ಘಗ್ಗರ್‌ನ ಒಳಕ್ಕೆ ಹರಿಯುವಂತೆ ಭಾಸವಾಗುವ ಸಟ್ಲೆಜ್‌ ನದಿಯ ಪಾತ್ರ ಇಂದಿನ ನೀರ್ಗಾಲುವೆಗಳ ವ್ಯವಸ್ಥೆಗೆ ಎಷ್ಟು ಭಿನ್ನವಾಗಿದೆಯೆಂದರೆ ಇದು ಕೂಡಾ ಸರಸ್ವತಿ ಮತ್ತು ಘಗ್ಗರ್‌ಗಳೆರಡನ್ನೂ ಒಳಗೊಂಡ ಈಗಿನ ನೀರ್ಗಾಲುವೆ ವ್ಯವಸ್ಥೆ ಸ್ಥಾಪನೆಗೊಂಡ ನಂತರವಂತೂ ಸಕ್ರಿಯವಾಗಿರುವ ಸಾಧ್ಯತೆ ಇಲ್ಲ. ಈಗಿನ ನೀರ್ಗಾಲುವೆ ವ್ಯವಸ್ಥೆ ಪ್ಲಿಸ್ಟೋಸಿನ್‌ ಅವಧಿಯಲ್ಲೆಂದೋ ಸ್ಥಾಪನೆಗೊಂಡಿರಬೇಕು. ಅದರ ಮೊದಲೂ ಆಗಿರಬಹುದು. ಕ್ರಿ.ಪೂ. ೨೨೩೦ರವರೆಗೂ ವಿಪರೀತ ಮಳೆ ಸುರಿದಿರಬಹುದಾದ ದೀರ್ಘ ಅವಧಿಗಳಿದ್ದವು ಎಂದು ವಾದಕ್ಕೆ ಒಪ್ಪಿಕೊಂಡರೂ(ಪಚಪದ್ರ ಉಪ್ಪು ಜಲಾನಯನ ಪ್ರದೇಶಗಳ ಅಧ್ಯಯನಗಳು ಸೂಚಿಸುವಂತೆ ಇದೇನೂ ದೃಢವಾಗಿ ಸ್ಥಾಪಿತವಾಗಿಲ್ಲ), ಹಾಕ್ರದವರೆಗಿನ ಇಂದಿನ ಒಣ ಪಾತ್ರಗಳು ಹೇಗೆ ಉಂಟಾದವು ಎಂದಷ್ಟೇ ಇದು ವಿವರಿಸಬಲ್ಲದು. ಆದರೆ ಇದರಿಂದ ಸರಸ್ವತಿಯನ್ನು ಹಿಮಾಳಯದ ಹಿಮಪೋಷಿತ ನದಿಗಳಿಗಿಂತ ದೊಡ್ಡದು ಎಂದು ಸಾಧಿಸುವುದು ಒತ್ತಟ್ಟಿಗಿರಲಿ, ಆ ವರ್ಗದಲ್ಲಿಯೂ ಅದನ್ನು ಪರಿಗಣಿಸಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆ ಅವಧಿಗಳಲ್ಲಿ ಹಿಮಾಲಯದ ಆ ನದಿಗಳಲ್ಲೂ ಅವುಗಳ ಇನ್ನೂ ಹೆಚ್ಚು ವಿಶಾಲವಾದ ಜಲಾನಯನ ಪ್ರದೇಶದಿಂದಾಗಿ ಹೆಚ್ಚಿನ ನೀರು ಹರಿಯುತ್ತಿದ್ದಿರಬಹುದು.

ಹಾಕ್ರ ನದಿಯು ನವಶಿಲಾಯುಗದ ಕಾಲಕ್ಕೆ (ಕ್ರಿ.ಪೂ.೪ನೆಯ ಸಹಸ್ರಮಾನಂ) ಬಹಾವಲ್‌ಪುರದಲ್ಲಿನ ದೇರವರ್‌ ಆಚೆಗೆ ನೀರನ್ನು ಒಯ್ಯುತ್ತಿರಲಿಲ್ಲ ಎನ್ನಲು ಹಾಕ್ರ ಮಡಿಕೆಗಳ ನಿವೇಶನಗಳೇ ಒಂದು ಆಧಾರ. ನಂತರದ ಸಿಂದೂ ಸಂಸ್ಕೃತಿಯ ನಿವೇಶನಗಳಂತೆ ಈ ನಿವೇಶನಗಳು ದೇರವರ್ನ್ ಸುತ್ತಲಿನ ಅದರ ಮುಖಜ ಪ್ರದೇಶದ ಕವಲುಗಳಲ್ಲೇ ಕೇಂದ್ರೀಕೃತವಾಗಿವೆ. ಬೇರೆ ರೀತಿಯಲ್ಲಿ ಹೇಳುವುದಾದರೆ ಅಂದು ಹಾಕ್ರ ನದಿಯಲ್ಲಿ ನೀರು ಹರಿಯುತ್ತಿತ್ತು. ಆದರೆ ಅದು ಬಹಾವಲ್‌ಪುರದಲ್ಲಿನ ಮರುಭೂಮಿಯವರೆಗೆ ತಲುಪಲು ಮಾತ್ರ ಸಾಕಾಗುತ್ತಿದ್ದು, ಅಲ್ಲಿ ಅದು ಒಣಗಿ ಹೋಗುತ್ತಿತ್ತು.

ಈ ಕಳೆದು ಹೋದ ನದಿಯ ಇಂದಿನ ಒಣ ಪಾತ್ರಗಳಲ್ಲಿ ಒಮ್ಮೆ ನೀರು ಹರಿಯಲು ಹೇಗೆ ಸಾಧ್ಯವಾಗಿತ್ತು. ಎಂದು ಅರಿತುಕೊಳ್ಳಲು, ದೊಡ್ಡ ಮಟ್ಟದ ವಾತಾವರಣ ಬದಲಾವಣೆಯಾಗಿರಬೇಕೆಂದು ಯೋಚಿಸಬೇಕಾಗಿಲ್ಲ, ಮಾನವನ ಕೈಚಳಕದ ಬಗ್ಗೆಯಷ್ಟೆ ಯೋಚಿಸಿದರೆ ಸಾಕು. ಎಷ್ಟರ ಮಟ್ಟಿಗೆ ಮಾನವ ಅರಣ್ಯ ಹಾಗೂ ಗಿಡಗಂಟೆಗಳನ್ನು ಸವರಿದನೋ, ಅಷ್ಟು ಮಣ್ಣಿನ ನೀರು ಹಿಡಿದಿಡುವಿಕೆಯ ಶಕ್ತಿಯು ಕುಗ್ಗಿತು, ಅಷ್ಟೇ ಅಲ್ಲ, ನದಿಯ ನೀರಿನ ಹರಿವಿನ ನಿರಂತರತೆ ಕಡಿಮೆಯಾಯಿತು ಮತ್ತು ಹೆಚ್ಚಿನ ಪ್ರಮಾಣದಲ್ಲಿ ನದಿಯ ನೀರು ಭೂಮಿಯಲ್ಲಿ ಹಿಂಗಿ ನಷ್ಟಗೊಂಡಿತು. ಅಲ್ಲದೆ ಅಧ್ಯಾಯ ೧.೩ ರಲ್ಲಿ ನೋಡಿದಂತೆ ಅರಣ್ಯದ ಹಾಸು ಹಿಂದೆ ಸರಿದಂತೆ ದ್ರವೀಕರಣವೂ ಇಳಿಮುಖಗೊಂಡು ಮಳೆಯೂ ಕಡಿಮೆಯಾಗುತ್ತದೆ. ಕೊನೆಯದಾಗಿ, ಬಹುಶಃ ೩-೪ ಸಾವಿರ ವರ್ಷಗಳಿಂದ ಪೂರ್ವ ಪಂಜಾಬ್ ಹಾಗೂ ಹರಿಯಾಣದಲ್ಲಿ ನೀರಾವರಿಗಾಗಿ ಝರಿಗಳ ಮೇಲೆ, ಪ್ರವಾಹ ಕಾಲುವೆಗಳ ಮೇಲೆ ಏರಿಗಳನ್ನು ನಿರ್ಮಿಸಲಾಗುತ್ತಿದ್ದು ಇದು ಸಹಜವಾಗಿಯೇ ಹಾಕ್ರಾಕ್ಕೆ ನೀರು ಪೂರೈಕೆಯನ್ನು ಮುಚ್ಚಿಬಿಟ್ಟಿತು. ಇಂದು ಏಕೆ ಹಾಕ್ರ ನದಿ ನೀರು ಹೊಂದಿಲ್ಲ, ಆ ಹೆಸರಿನ ಒಂದು ಒಣ ಪಾತ್ರವಾಗಿ ಮಾತ್ರ ಉಳಿದುಕೊಂಡಿದೆ ಎಂಬುದನ್ನು ವಿವರಿಸಲು ಈ ಎಲ್ಲ ಕಾರಣಗಳು ಸಾಕಾಗುತ್ತವೆ.

ಋಗ್ವೇದ ಸರಸ್ವತಿಯ ಬಗೆಗೆ ಹೇಳುವುದಾದರೆ ಅದನ್ನೊಂದು ದೈವಿಕೆ ನದಿ, ಸರಸ್ವತಿ ದೇವಿಯ ನದಿ, ಭೂಮಿಯ ಮೇಲಿನ ನದಿಯಲ್ಲ ಎಂದು ಭಾವಿಸುವುದು ಹೆಚ್ಚು ಸಮಾಧಾನಕರ ಪರಿಹಾರವಾಗಬಹುದು. ಇನ್ನೊಂದು ದೃಷ್ಟಿಕೋನದ ಪ್ರಕಾರ, ಇಂತಹ ಸಂದರ್ಭಗಳಲ್ಲಿ ಸರಸ್ವತಿ ನದಿ ಸರಸುತಿ ಎಂಬ ಹೆಸರಿನಲ್ಲಿ ತಾನೇಶ್ವರ್ ಹತ್ತಿರ ಹರಿಯುವ ಆಧುನಿಕ ಪ್ರವಾಹವಲ್ಲ, ಅದು ಸಿಂಧೂ ನದಿ ಅಥವಾ ಆಫ್ಘಾನಿಸ್ತಾನದಲ್ಲಿನ ಅರ್ಘಂದಾಬ್‌ ಹೆಲ್ಮಂದ್‌ (ಅವೆಸ್ತಾದ ಹರಖ್‌ವೈತಿ = ಸರಸ್ವತಿ, ಸಂಸ್ಕೃತದ ಸ ಅವೆಸ್ತಾದಲ್ಲಿ ಹ್‌/ಖ್‌ ಆಗುತ್ತದೆ) ಕೂಡಾ ಆಗಿರಬಹುದು. ಒಂದೇ ಹೆಸರನ್ನು ಕೆಲವೊಮ್ಮೆ ಬೇರೆ ಬೇರೆ ನದಿಗಳಿಗೆ ಕೊಡಲಾಗಿದೆ. ಉದಾಹರಣೆಗೆ, ಇಂದು ಸರಸ್ವತಿ ಯಾವ ನದಿಯೊಳಗೆ ಹರಿಯುತ್ತದೆಯೋ ಆ ಘಗ್ಗರ್ ನದಿ ಹಾಗೂ ಉತ್ತರ ಪ್ರದೇಶದ ಬಯಲಿನಲ್ಲಿ ಹರಿಯುತ್ತಿರುವ, ಹಿಮಾಲಯದ ನದಿಯಾದ ಘಾಘರ ಎಂಬ ಹೆಸರನ್ನು ಹೋಲಿಸಿ ನೋಡಿ. ಅದೇ ರೀತಿ ಕಾಶ್ಮೀರ ಮತ್ತು ಮಧ್ಯ ಭಾರತದಲ್ಲಿ ಸಿಂಧೂ ಎಂಬ ಹೆಸರಿನ ಸಣ್ಣ ನದಿಗಳಿರುವುದನ್ನು ನಾವು ಗಮನಿಸಬಹುದು. ಋಗ್ವೇದದ ನಂತರದ ಭಾಗಗಳಲ್ಲಿ, ಮಿಶೇಷವಾಗಿ ಹತ್ತನೆಯ ಮಂಡಲದ ನದಿಮಂತ್ರದಲ್ಲಿನ ಸರಸ್ವತಿ ಬಗೆಗಿನ ಉಲ್ಲೇಖ ಆಧುನಿಕ ಸರುಸತಿಗೆ ಸರಿಹೊಂದುವಂತೆ ಕಾಣುತ್ತದೆ. ಏಕೆಂದರೆ ಅಲ್ಲಿ ಅದು ಯಮುನಾ ಮತ್ತು ಶತುದ್ರು ಅಥವಾ ಸಟ್ಲೆಜ್‌ ಮಧ್ಯ ಹರಿಯುವಂತದು ಎನ್ನಲಾಗಿದೆ. ಆದರೆ ಅದರಲ್ಲಿ ಅದೊಂದು ದೊಡ್ಡ ನದಿ ಅಥವಾ ಪವಿತ್ರ ನದಿಯೆಂಬ ಸೂಚನೆಯೇನೂ ಕಾಣುವುದಿಲ್ಲ. ಬೇರೆ ಮಂತ್ರಗಳಲ್ಲಿ ಸಿಂಧೂ ನದಿಯ ಹಿರಿಮೆಯ ಬಗೆಗೂ ಇದೇ ರೀತಿಯ ವರ್ಣನೆ ಮಾಡಲಾಗಿದೆ.

. ಪರಾಮರ್ಶನ ಗ್ರಂಥಗಳ ಕುರಿತ ಟಿಪ್ಪಣಿ

ಪೂರ್ವೇತಿಹಾಸವನ್ನು ಕುರಿತ ಸಾಕ್ಷ್ಯಗಳನ್ನು ಒಂದು ವಿಶ್ವ ಕಣ್ಣೋಟದಿಂದ ಪರಿಶೀಲಿಸುವ ಎರಡು ಮಹತ್ವದ ಸಾರಾಂಶಗಳು ೧೯೯೪ರಲ್ಲಿ ಪ್ರಕಟವಾದವು. ಎಸ್‌. ಜೆ. ಡೆ. ಲೈಟ್‌(ಸಂ), ಹಿಸ್ಟರಿ ಆಫ್‌ಹ್ಯುಮೇನಿಟಿ, ಸಂಪುಟ ೧. ಪ್ರಿಹಿಸ್ಟರಿ ಅಂಡ್‌ ದಿ ಬಿನಿಂಗ್ಸ್‌ ಆಫ್‌ ಸಿವಿಲಿಝೇಶನ್‌, ಯುನೆಸ್ಕೋ, ಪ್ಯಾರಿಸ್‌/ಲಂಡನ್‌, ಇದು ಪ್ರಮುಖವಾಗಿ ಪುರಾತತ್ವ ಪುರಾವೆಗಳನ್ನು ಮುಂದಿಟ್ಟರೆ, ಎಲ್‌. ಎಲ್‌. ಕವಲ್ಲಿ-ಸ್ಫರ್ಝ, ಪಿ. ಮೆನೊಝಿ, ಮತ್ತು ಎ. ಪಿಯಝ, ತಮ್ಮ ಹಿಸ್ಟರಿ ಅಂಡ್‌ ಜಿಯೋಗ್ರಫಿ ಆಫ್‌ ಹ್ಯೂಮನ್‌ ಜೀನ್ಸನಲ್ಲಿ ವಂಶವಾಹಿ ಸಂಬಂಧಿ ಪುರಾವೆಗಳನ್ನು ಮಂಡಿಸಿದರು. ಇವೆರಡೂ ಕೃತಿಗಳು ಜಾಗತಿ ಮಟ್ಟದಲ್ಲಿ ಏನು ನಡೆಯಿತು ಎಂಬುದರ ಒಂದು ತರ್ಕಬದ್ಧ ನೋಟವನ್ನು ರೂಪಿಸಲು ಅಗತ್ಯ. ಆದರೆ ಇವೆರಡನ್ನೂ ಸಮಕಾಲಿಕಗೊಳಿಸುವ ಅಗತ್ಯವಿದೆ. ಏಕೆಂದರೆ ಜಗತ್ತಿನಾದ್ಯಂತ ಹೊಸ ಪುರಾತತ್ವ ವರದಿಗಳು, ಕಾಲಗಣನೆಯಲ್ಲಿ ಹೊಸ ತಂತ್ರವಿಧಾನಗಳ ಅನ್ವಯ, ಹೊಸ ಒಳನೋಟಗಳು ಮತ್ತು ಸಲಹೆ-ಸೂಚನೆಗಳು ಬಂದಿವೆ. ಪೀಟರ್ ಬೋಗುಕಿ, ದಿ ಆರಿಜಿನ್ಸ್‌ ಆಫ್‌ ಹ್ಯೂಮನ್‌ ಸೊಸೈಟಿ, ಆಕ್ಷ್‌ಫರ್ಡ್, ೧೯೯೯,ಒಂದು ಉಪಯೋಗಿ ಪಠ್ಯಪುಸ್ತಕ. ಇದು ಸಮಕಾಲೀನ ಮಾಹಿತಿಗಳನ್ನು ಮತ್ತು ಪ್ರಮುಖ ವಿವಾದಗಳನ್ನು ವಿವೇಚನಾಪೂರ್ಣವಾಗಿ ಕೊಡುತ್ತದೆ. ಅಂಟಿಕ್ವಿಟಿ, ಲಂಡನ್‌ಮತ್ತು ಆರ್ಕಿಯಾಲಜಿ, ನ್ಯೂಯಾರ್ಕ್ ಮುಂತಾದ ಪತ್ರಿಕೆಗಳ ಇತ್ತೀಚಿನ ಸಂಚಿಕೆಗಳನ್ನು ನೋಡಿ ಹೊಸ ಮಾಹಿತಿಗಳು ಮತ್ತು ವ್ಯಾಖ್ಯೆಗಳನ್ನು ತಿಳಿದುಕೊಂಡಿರಬಹುದು. ಸೈಂಟಿಫಿಕ್‌ ಅಮೆರಿಕನ್‌, ಜನವರಿ ೨೦೦೦ ಸಂಚಿಕೆಯಲ್ಲಿ ಪ್ರಕಟವಾದ ಇಯನ್‌ ಟಟ್ಟೆರ್ಸಾಲ್‌ ಅವರ ಒಂದೊಮ್ಮೆ ನಾವು ಒಂಟಿಗಳಾಗಿರಲಿಲ್ಲ ಎಂಬ ಲೇಖನದಲ್ಲಿ ನಮ್ಮ ಸಂಕುಲಗಳು ಈಗ ಲುಪ್ತವಾಗಿರುವ ನರವಾನರ (ಹೊಮಿನಿಡ್‌) ಸಂಕುಲಗಳೊಂದಿಗೆ ಹೊಂದಿರುವ ಸಂಬಂಧಗಳ ಬಗ್ಗೆ ಆಸಕ್ತಿದಾಯಕ ಚರ್ಚೆಯಿದೆ.

ಹೆಚ್‌. ಡಿ. ಸಂಕಾಲಿಯಾ, ಪ್ರಿಹಿಸ್ಟರಿ ಅಂಡ್‌ ಪ್ರೊಟೊಹಿಸ್ಟರಿ ಆಫ್‌ ಇಂಡಿಯ ಅಂಡ್‌ ಪಾಕಿಸ್ತಾನ್‌, ೨ನೇ ಆವೃತ್ತಿ, ಪುಣೆ, ೧೯೭೪ ಒಂದು ವಿವರವಾದ ವರ್ಣನೆಯುಳ್ಳ, ಕೃತಿ, ನಂತರ ನಡೆದಿರುವ ಸಂಶೋಧನೆಗಳು ಮತ್ತು ಉತ್ತಮಗೊಂಡಿರುವ ಕಾಲಾನುಕ್ರಮಣಿಕೆಯಿಂದಾಗಿ ಇದು ಭಾಗಶಃ ಹಳಸಲಾಗಿದೆ. ಬ್ರಿಡ್ಗೆಟ್‌ಮತ್ತು ರೇಮಂಡ್‌ಅಲ್ಚಿನ್‌, ದಿ ರೈಸ್‌ ಆಫ್‌ ಸಿವಿಲಿಝೇಶನ್‌ ಇನ್‌ ಇಂಡಿಯ ಅಂಡ್‌ ಪಾಕಿಸ್ತಾನ್‌, ಭಾರತೀಯ ಆವೃತ್ತಿ, ನವದೆಹಲಿ, ೧೯೮೩, ಸ್ವಲ್ಪ ಹಳೆಯದಾದರೂ ಇನ್ನೂ ಉಪಯುಕ್ತ ಡಿ. ಪಿ. ಅಗರವಾಲ್‌ಅವರ ದಿ ಆರ್ಕಿಯಾಲಜಿ ಆಫ್‌ಇಂಡಿಯಾ, ಲಂಡನ್‌, ೧೯೮೨, ಇದನ್ನು ಕೂಡ ನೋಡಿ. ಬಿ. ಮತ್ತು ಆರ್. ಅಲ್ಚಿನ್‌ತಮ್ಮ ಹಿಂದಿನ ಕೃತಿಯನ್ನು ಒಂದು ಹೊಸದಾದ ಸ್ವಲ್ಪ ಸಣ್ಣದಾದ ಸರ್ವೆ, ಅರಿಜಿನ್ಸ್‌ ಆಫ್‌ ಸಿವಿಲಿಝೇಶನ್‌ ದಿ ಪ್ರಿಹಿಸ್ಟರಿ ಅಂಡ್‌ ಅರ್ಲಿ ಆರ್ಕಿಯಾಲಜಿ ಆಫ್‌ ಸೌತ್‌ ಏಶ್ಯಾ, ನವದೆಹಲಿ, ೧೯೯೭, ಇದರಲ್ಲಿ ಸಮಕಾಲಿಕಗೊಳಿಸಿದ್ದಾರೆ. ಉತ್ತರ ಭಾರತ, ಪಾಕಿಸ್ತಾನ ಮತ್ತು ಅಫಘಾನಿಸ್ತಾನಕ್ಕೆ ಎ. ಹೆಚ್‌. ದಾನಿಯವರ ಸಂಪಾದಕತ್ವದ ಹಿಸ್ಟರಿ ಆಫ್‌ ಸಿವಿಲಿಝೇಶನ್ಸ್‌ ಆಫ್‌ ಸೆಂಟ್ರಲ್‌ ಏಶ್ಯಾದಲ್ಲಿನ ಅಧ್ಯಾಯಗಳು (ಬಿ. ಅಲ್ಚಿನ್‌ರವರದ್ದೂ ಸೇರಿ) ಒಂದು ಮಧ್ಯ ಏಶ್ಯಾ ಕಣ್ಣೋಟವನ್ನು ಸೇರಿಸುತ್ತವೆ. ಇದಕ್ಕೆ ಪೂರಕವಾಗಿ ವಿ.ಸಿ. ಶ್ರೀವಾಸ್ತವ ಅವರ ದಿ ಪ್ರಿಹಿಸ್ಟೀರಿಕ್‌ ಆಫಘಾನಿಸ್ತಾನ್‌ ಎ ಸೋರ್ಸ್‌ ‌ಬುಕ್ಕ, ಅಲಹಾಬಾದ್‌, ೧೯೮೨, ಇದನ್ನು ನೋಡಬಹುದು. ದಿಲೀಪ್‌ಕೆ. ಚಕ್ರಬರ್ತಿ, ಇಂಡಿಯಾ ಏನ್‌ ಆರ್ಕಿಯಾಲಜಿಕಲ್‌ ಹಿಸ್ಟರಿ, ನವದೆಹಲಿ, ೧೯೯೯, ಅಧ್ಯಾಯ ೨ ಮತ್ತು ೩ ಸಮಕಾಲಿಕ ಸಾಮಗ್ರಿಗಳನ್ನು ಮತ್ತು ಆಕರಗಳನ್ನು ಒದಗಿಸುತ್ತದೆ.

ಉಪಖಂಡಕ್ಕೆ ಸಂಬಂಧಪಟ್ಟಂತೆ ಎರಡು ವರ್ಷಗಳಿಗೊಮ್ಮೆ ಪ್ರಕಟವಾಗುವ ಸೌತ್‌ಏಶ್ಯನ್‌ಆರ್ಕಿಯಾಲಜಿಯ ಸಂಪುಟಗಳು (ಇವು ಯೊರೋಪಿಯನ್‌ ಅಸೋಸಿಯೇಶನ್‌ ಆಪ್‌ ಸೌತ್‌ ಏಶ್ಯನ್‌ ಆರ್ಕಿಯಾಲಜಿಸ್ಟ್‌ನ ಕಲಾಪಗಳು) ಪೂರ್ವೇತಿಹಾಸದ ಮೇಲೆ ಬಹಳಷ್ಟು ಶ್ರೀಮಂತ ಸಾಮಗ್ರಿಗಳನ್ನು ಕೊಡುತ್ತವೆ. ಇದಕ್ಕೆ ಸಂಬಂದಪಟ್ಟಂತೆ ಎರಡು ಪ್ರಮುಖ ಭಾರತೀಯ ಪತ್ರಿಕೆಗಳೆಂದರೆ ಮ್ಯಾನ್‌ ಅಂಡ್‌ ಎನ್ವಾಯರ್ನ್‌‌ಮೆಂಟ್‌ ಮತ್ತು ಪುರಾತತ್ವ. ಈ ಎರಡನೇ ಪತ್ರಿಕೆಯ ಗುಣಮಟ್ಟ ಒಂದೇ ರೀತಿಯಲ್ಲಿ ಇರುವುದಿಲ್ಲ.

ಪೊಟ್ವಾರ್/ಪಬ್ಬಿ ಗುಡ್ಡಗಳ ಸಂಸ್ಕೃತಿಯ ಸಂಶೋಧನೆಗಳನ್ನು ಕುರಿತಂತೆ ಮ್ಯಾನ್‌ ಅಂಡ್‌ ಎನ್ವಾಯರ್ನ್‌‌ಮೆಂಟ್‌, ಸಂಪುಟ ೨೧, ಸಂಚಿಕೆ ೧, ಪುಣೆ, ೧೯೯೫, ಪುಟ ೨೧-೨೮ರಲ್ಲಿ ಪ್ರಕಟವಾದ ಆರ್. ಡಬ್ಲ್ಯು. ಡೆನ್ನೆಲ್‌ರ ವರದಿ ಅರ್ಲಿ ಸ್ಟೋನ್‌ ಏಜ್‌ ಆಫ್ ಪಾಕಿಸ್ತಾನ್‌: ಎ ಮೆಥೊಡೋಲಾಜಿಕಲ್‌ ರಿವ್ಯೂ ಒಂದು ಉತ್ತಮ ಸಾರಾಂಶ, ಪಾಕಿಸ್ತಾನ್‌ ಆರ್ಕಿಯಾಲಜಿ, ಸಂಚಿಕೆ ೨೩, ೧೯೮೭-೮೮, ಪುಟ ೧-೪೨ ಮತ್ತು ಸಂಚಿಕೆ ೨೪, ೧೯೮೯, ಪುಟ ೧-೨೦, ಇವುಗಳಲ್ಲಿ ಎಸ್‌. ಎಂ. ಅಶ್ಫಾಕ್‌ ಮತ್ತು ಸಲೀಂ ಉಲ್‌ ಹಕ್‌ ಅವರ ಹಾಗೂ ಬಿ. ಅಲ್ಚಿನ್‌ ಮತ್ತು ಆರ್. ಡಬ್ಲ್ಯು. ಡೆನ್ನೆಲ್‌ ಅವರ ಲೇಖನಗಳನ್ನೂ ನೋಡಿ, ಜರ್ನಲ್‌ ಸೆಂಟ್ರಲ್‌ ಏಶ್ಯಾ, ಸಂಪುಟ ೨೦, ಸಂಚಿಕೆ ೨, ಇಸ್ಲಾಮಾಬಾದ್‌, ೧೯೯೭, ಇದರಲ್ಲಿ ಎಂ. ಸಲೀಂ ಅವರ ಪೊಟ್ವಾರ್ ನ ಹಳೆ ಶಿಲಾಯುಗದ ಸಂಸ್ಕೃತಿಗಳು ಕೂಡಾ ನೋಡಿ.

ಶೋರಾಪುರ್ ದೊಅಬ್‌ನ ಅಲಗು-ಉಪಕರಣ ಉದ್ದಿಮೆಯ ಬಗ್ಗೆ ಎಸ್‌. ಬಿ. ದೇವ್‌ ಮತ್ತು ಎಂ. ಕೆ. ಧವಲಿಕರ್ ಸಂಪಾದಕತ್ವದ ಸ್ಟಡೀಸ್‌ ಇನ್‌ ಇಂಡಿಯನ್‌ ಆರ್ಕಿಯಾಲಜಿ, ಮುಂಬಯಿ, ೧೯೮೫, ಪುಟ ೧೬೫-೯೦ ರಲ್ಲಿ ಇರುವ ಕೆ. ಪೆದ್ದಯ್ಯ ಅವರ ಪ್ರಬಂಧವನ್ನು ನೋಡಿ ಸರಾಯ್‌ನಹರ್ ರಾಯ್‌ ಮತ್ತು ಮಹಾದಹದ ಬಗ್ಗೆ ಜಿ. ಆರ್. ಶರ್ಮ, ವಿ.ಡಿ. ಮಿಶ್ರ ಮತ್ತಿತರರ ಫ್ರಂ ಹಂಟಿಂಗ್‌ ಅಂಡ್‌ ಪುಡ್‌ ಗ್ಯಾದರಿಂಗ್‌ ಟು ಡೊಮೆಸ್ಟಿಕೇಶನ್‌ ಆಫ್‌ ಪ್ಲಾಂಟ್ಸ್‌ ಅಂಡ್‌ ಅನಿಮಲ್ಸ್‌ (ಎಕ್ಸ್ಕವೇಶನ್ಸ್‌ ಆಟ್‌ ಚೊಪನಿ ಮಂಡೊ, ಮಹಾದಹ ಅಂಡ್‌ ಮಹಗರ), ಅಲಹಾಬಾದ್‌, ೧೯೮೦ ನೋಡಿ. ಮಹಾದಹದಲ್ಲಿನ ಮಾನವ ಅಸ್ಥಿಪಂಜರಗಳ ಬಗ್ಗೆ ಪುಟ ೮೬-೯೮ರಲ್ಲಿ ವರ್ಣಿಸಲಾಗಿದೆ.

ವಿವಿಧ ಶಿಲಾ ತಂತ್ರಜ್ಞಾನಗಳ ಬಗ್ಗೆ ಎ.ಕೆ. ಬಾಗ್‌(ಸಂ), ಹಿಸ್ಟರಿ ಆಫ್‌ ಟೆಕ್ನಾಲಜಿ ಇನ್‌ ಇಂಡಿಯ, ಸಂಪುಟ ೧, ನವದೆಹಲಿ, ೧೯೯೭, ಪುಟ ೧-೨೭ರಲ್ಲಿ ವಿದುಲ ಜಯಸ್ಟಾಲ್‌ ಅವರ ಒಂದು ಉಪಯೋಗಿ ವಿವರಣಾ ಅಧ್ಯಾಯ ಇದೆ.

ಯಶೋಧರ ಮಠಪಲ್‌, ಪ್ರಿಹಿಸ್ಟೋರಿಕ್‌ ರಾಕ್‌ ಪೈಂಟಿಂಗ್ಸ್‌ ಆಫ್‌ ಭಿಂಬೆಟ್ಕ, ಸೆಂಟ್ರಲ್‌ ಇಂಡಿಯಾ, ನವದೆಹಲಿ, ೧೯೮೪, ಭಿಂಬೆಟ್ಕದಲ್ಲಿನ ಚಿತ್ರಗಳ ಕರಾರುವಕ್ಕಾದ ಪ್ರತಿಗಳನ್ನು ವಿವರವಾದ ತಾಂತ್ರಿಕ ಮಾಹಿತಿಗಳೊಂದಿಗೆ ಕೊಡುತ್ತದೆ.

ಗ್ರೆಗರಿ ಎಲ್‌. ಪೊಸೆಹ್ಲ್‌ ಅವರ ರೇಡಿಯೋಕಾರ್ಬನ್‌ ಡೇಟ್ಸ್‌ ಫಾರ್ ಸೌತ್‌ ಏಶ್ಯನ್‌ ಆರ್ಕಿಯಾಲಜಿ, ಪೆನ್ಸಿಲ್ವೇನಿಯ ವಿಶ್ವವಿದ್ಯಾಲಯ, ಪೆನ್ಸಿನ್ವೇಯ, ೧೯೮೯ ಒಂದು ಮಹತ್ವದ ನೆರವು.

ವಿ. ಗೋರ್ಡನ್‌ ಚೈಲ್ಡ್‌ ಅವರು ‘ಮ್ಯಾನ್‌ ಮೇಕ್ಸ್‌ ಹಿಮ್‌ಸೆಲ್ಫ್‌’ ಲಂಡನ್‌, ೧೯೩೬ರ (ನಂತರ ಹಲವು ಆವೃತ್ತಿಗಳು ಬಂದಿವೆ), ಅಧ್ಯಾಯ ೫ರಲ್ಲಿ ನವಶಿಲಾಯುಗದ ಕ್ರಾಂತಿಯು ತನ್ನ ಸಿದ್ಧಾಂತವನ್ನು ಮುಂದಿಟ್ಟರು. ಇದು ಈಗಲೂ ಓದಬೇಕಾದ್ದು. ಏಕೆಂದರೆ ಈ ಪರಿಕಲ್ಪನೆಯ ಮೇಲೆ ನಂತರ ಬಂದ ಹಲವು ಆಕ್ಷೇಪಣೆಗಳನ್ನು ಅದು ಮೊದಲೇ ನಿರೀಕ್ಷಿಸಿದೆ. ಅವರ ‘ವಾಟ್‌ ಹ್ಯಾಪಂಡ್‌ ಇನ್‌ ಹಿಸ್ಟರಿ’ ಪೆಂಗ್ವಿನ್‌, ೧೯೪೨, ಅಧ್ಯಾಯ ೩ ಸಹ ನೋಡಿ. ನವಶಿಲಾಯುಗ ಕ್ರಾಂತಿಯ ಬಗ್ಗೆ ಅತ್ಯಂತ ಇತ್ತೀಚಿನ ಸಮಗ್ರ ಸಂಪುಟವೆಂದರೆ ಡೇವಿಡ್‌ ಆರ್. ಹ್ಯಾರಿಸ್‌ ಅವರ ಸಂಪಾದಕತ್ವದ ‘ದಿ ಆರಿಜಿನ್ಸ್‌ ಅಂಡ್‌ ಸ್ಪ್ರೆಡ್‌ ಆಫ್‌ ಅಗ್ರಿಕಲ್ಚರ್ ಅಂಡ್‌ ಪೆಸ್ಟೊರಲಿಸಂ ಇನ್‌ ಯುರೇಶಿಯಾ’ ಲಂಡನ್‌, ೧೯೯೬. ಇದರಲ್ಲಿ ಭಾರತವೂ ಸೇರಿದಂತೆ ವಿಭಿನ್ನ ಪ್ರದೇಶಗಳ ಮೇಲೆ ಪ್ರಖ್ಯಾತ ಪುರಾತತ್ವಶಾಸ್ತ್ರಜ್ಞರ ಹಲವು ಪ್ರಬಂಧಗಳಿವೆ.

ಡೇವಿಡ್‌ ಆರ್. ಹ್ಯಾರಿಸ್‌ (ಸಂ.),  ದಿ ಆರಿಜಿನ್ಸ್‌ ಅಂಡ್‌ ಸ್ಪ್ರೆಡ್‌ ಆಫ್‌ ಅಗ್ರಿಕಲ್ಚರ್ ಅಂಡ್‌ ಪೆಸ್ಟೊರಲಿಸಂ ಇನ್‌ ಯುರೇಶಿಯಾ ಲಂಡನ್‌, ೧೯೯೬ ಸಹ ನೋಡಿ. ಇದರಲ್ಲಿ ಈ ಆಧ್ಯಾಯಕ್ಕೆ ಸಂಬಂಧಪಟ್ಟಂತೆ ಹಲವು ಸಾಮಗ್ರಿಗಳಿವೆ.

ಈ ಅಧ್ಯಾಯದಲ್ಲಿ ಪರಿಶೀಲಿಸಿದ ವಿಷಯ ಕುರಿತಂತೆ ಓದಿಗಾಗಿ ಬ್ರಿಡ್ಗೆಟ್‌ ಮತ್ತು ರೇಮೆಂಡ್‌ ಆಲ್ಚಿನ್‌, ದಿ ರೈಸ್‌ ಆಫ್‌ ಸಿವಿಲಿಝೇಶನ್‌ ಇನ್‌ ಇಂಡಿಯ ಅಂಡ್‌ ಪಾಕಿಸ್ತಾನ್‌, ಭಾರತೀಯ ಆವೃತ್ತಿ, ನವದೆಹಲಿ, ೧೯೮೩, ವಿಶೇಷವಾಗಿ ಅಧ್ಯಾಯ ೩ ಈಗಲೂ ಲಭ್ಯವಿರುವ ಅತ್ಯುತ್ತಮ ಪಠ್ಯ. ಇವೇ ಲೇಖಕರು ತಮ್ಮ ಆರಿಜಿನ್ಸ್‌ ಆಫ್‌ ಸಿವಿಲಿಝೇಶನ್, ನವದೆಹಲಿ, ೧೯೯೭, ಅಧ್ಯಾಯ ೫ರಲ್ಲಿ ಒಂದು ಹೊಸ ಸರ್ವೆಯನ್ನು ಕೊಟ್ಟಿದ್ದಾರೆ. ದಿಲೀಪ್‌ಕೆ. ಚಕ್ರಬರ್ತಿ, ಇಂಡಿಯಾ ಏನ್‌ ಆರ್ಕಿಯಾಲಜಿಕಲ್‌ ಹಿಸ್ಟರಿ, ನವದೆಹಲಿ, ೧೯೯೯, ಅಧ್ಯಾಯಗಳು ೪ ಮತ್ತು ೫ ಸಹ ನೋಡಿ. ಈ ಅವಧಿಗೆ (ಮತ್ತು ಎಲ್ಲ ಆರಂಭದ ಇತಿಹಾಸದ ಘಟ್ಟಗಳಿಗೆ) ಒಂದು ಮಹತ್ವದ ಪರಾಮರ್ಶನ ಕೃತಿಯೆಂದರೆ ಎ. ಘೋಷ್‌ (ಸಂ.), ಯ್ಯಾನ್‌ ಎನ್‌ಸೈಕ್ಲೋಪೀಡಿಯ ಆಫ್‌ ಇಂಡಿಯನ್‌ ಆರ್ಕಿಯಾಲಜಿ, ೨ ಸಂಪುಟಗಳು, ನವದೆಹಲಿ, ೧೯೮೯. ಸಂಪುಟ-೧ ವಿಷಯಗಳ ಬಗ್ಗೆ ಇದೆ, ಸಂಪುಟ ೨ ಪುರಾತತ್ವ ನಿವೇಶನಗಳ ಗೆಝೆಟಿಯರ್. ಅದನ್ನು ಬಳಸುವಾಗ, ಅದು ೧೯೭೦ರ ದಶಕದ ಕೊನೆಯ ಭಾಗದಲ್ಲಿ ಪುರಾತತ್ವಶಾಸ್ತ್ರಜ್ಞರಿಗೆ ಏನು ತಿಳಿದಿತ್ತೋ ಅವನ್ನು ಮುಂದಿಡುತ್ತದೆ, ಪಾಕಿಸ್ತಾನ ಮತ್ತು ಬಾಂಗ್ಲಾದೇಶ ಇದರ ವ್ಯಾಪ್ತಿಯಲ್ಲಿಲ್ಲ ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಬೇಕು.

ಗ್ರೆಗರಿ ಎಲ್‌. ಪೊಸೆಹ್ಲ್‌ ಅವರ ಇಂಡಸ್‌ ಏಜ್‌ ದಿ ಬಿಗಿನಿಂಗ್ಸ್‌, ನವದೆಹಲಿ, ೧೯೯೯. ಭೌಗೋಳಿಕ ಸನ್ನಿವೇಶಗಳು, ಸಸ್ಯ ಮತ್ತು ಪ್ರಾಣಿ ಇತಿಹಾಸ, ಪಶ್ಚಿಮ ಏಶ್ಯಾ ಸಂಪರ್ಕಗಳು, ಮತ್ತು ಬಲೂಚಿಸ್ತಾನ ಹಾಗೂ ಸಿಂಧೂ ನವಶಿಲಾಯುಗ ಸಂಸ್ಕೃತಿಗಳನ್ನು ಕುರತಂತೆ ಎಲ್ಲ ಸಂಬಂಧ ಮಾಹಿತಿಗಳನ್ನು ಒಟ್ಟು ಸೇರಿಸಿದ ಒಂದು ಸಮಗ್ರ ಕೃತಿ. ಇದಲ್ಲದೆ ಈ ಕೃತಿಯಲ್ಲಿ ಹಲವು ಅನ್ಯ ಸೈದ್ಧಾಂತಿಕ ಮತ್ತು ಇತರ ಪ್ರಸ್ತಾಪಗಳಿವೆ. ಇವುಗಳಿಂದಾಗಿ ಇದೊಂದು ಓದಲು ಬಹಳ ಉತ್ತೇಜನಕಾರಿಯಾದ ಪುಸ್ತಕವಾಗಿದೆ. ಪಶ್ಚಿಮದ ನವಶಿಲಾಯುಗದ ಸಂಸ್ಕೃತಿಗಳಿಗೆ, ಮಹೆರ್ಘಢ Iರಿಂದ ಹಕ್ರಾ-ಮಡಕೆ ಘಟ್ಟದವರೆಗೆ, ವಿವಿಧ ನಿವೇಶನಗಳ ಕಾರ್ಬನ್‌೧೪ ದಿನಾಂಕಗಳು ಒಂದು ನೇರ ಅನುಕ್ರಮತೆಯನ್ನು ತೋರಿಸದಿದ್ದರೂ, ನಾವು ಪೊಸೆಹ್ಲ್‌ಅವರ ಕಾಲಾನುಕ್ರಮಣಿಕೆಯನ್ನು ಸ್ವೀಕರಿಸಿದ್ದೇವೆ. ಸಾಂಸ್ಕೃತಿಕ ಉಳಿಕೆಗಳು ಸೂಚಿಸುವ ಸರಣಿ ಮತ್ತು ಏಕಕಾಲಿಕತೆಯನ್ನು ಸರಿಹೊಂದಿಸಲು ಅವರು ಪ್ರಯತ್ನಿಸಿದ್ದು ಸರಿಯಾಗಿದೆ. ಕಾರ್ಬನ್‌ ದಿನಾಂಕಗಳ ಪ್ರಯೋಗ ಶಾಲಾ ವರದಿಗಳಿಗೆ ಪೊಸೆಹ್ಲ್‌ ಅವರದ್ದೇ ಕೃತಿ ರೇಡಿಯೋ ಕಾರ್ಬನ್‌ ಡೇಟ್ಸ್‌ ಫಾರ್ ಸೌತ್ ಏಶ್ಯನ್‌ ಆರ್ಕಿಯಾಲಜಿ, ಪೆನ್ಸಿಲ್ವೇನಿಯಾ ವಿಶ್ವವಿದ್ಯಾಲಯ, ಪೆನ್ಸಿಲ್ವೇನಿಯಾ, ೧೯೮೯ ನೋಡಿ.

ಎಂ. ಜಾನ್ಸೆನ್‌, ಎಂ. ಮುಲ್ಲೊಯ್‌ ಮತ್ತು ಜಿ. ಅರ್ಬನ್‌ ಸಂಪಾದಿಸಿದ ಫೊರ್ಗೋಟನ್‌ ಸಿಟೀಸ್‌ ಆಫ್‌ ಇಂಡಸ್‌, ಮೈನ್‌, ೧೯೯೧,  ಇದರಲ್ಲಿ ಮೆಹರ್ಘಡದ ಮೇಲೆ ಜೆ. ಎಫ್‌. ಜಾರ್ರಿಗೆ ಮತ್ತು ಅವರ ಸಹಯೋಗಿಗಳ ಆರು ಉತ್ಕೃಷ್ಟ ಅಧ್ಯಾಯಗಳಿವೆ (ಪುಟ ೫೯-೧೦೩).

ಜಿ. ಆರ್. ಶರ್ಮ, ವಿ. ಡಿ. ಮಿಶ್ರ ಮತ್ತಿತರರ ಫ್ರಂ ಹಂಟಿಂಗ್‌ ಅಂಡ್‌ ಪುಡ್‌ ಗ್ಯಾದರಿಂಗ್‌ ಟು ಡೊಮೆಸ್ಟಿಕೇಶನ್‌ ಆಫ್‌ ಪ್ಲಾಂಟ್ಸ್‌ ಅಂಡ್‌ ಅನಿಮಲ್ಸ್‌ (ಎಕ್ಸ್ಕವೇಶನ್ಸ್‌ ಅಟ್‌ ಚೊಪನಿ ಮಂಡೊ, ಮಹಾದಹ ಅಂಡ್‌ ಮಹಗರ), ಅಲಹಾಬಾದ್‌, ೧೯೮೦. ಈ ಪುಸ್ತಕ ವಿಂಧ್ಯ ಮತ್ತು ತಡವಾದ ಮಧ್ಯಶಿಲಾಯುಗ ಹಾಗೂ ನವಶಿಲಾಯುಗದ ಘಟ್ಟಗಳಿಗೆ ಮಹತ್ವದ್ದು. ಒಂದೇ ದೋಷವೆಂದರೆ ನವಶಿಲಾಯುಗ ಘಟ್ಟಕ್ಕೆ ಅದು ಅಸಾಧ್ಯವೆನಿಸುವಷ್ಟು ಹಿಂದಿನ ದಿನಾಂಕವನ್ನು ಅಂಗೀರಿಸಿದ್ದು (ಇದನ್ನು ಅಧ್ಯಾಯ ೨.೪ರ ಪ್ರಮುಖ ಪಠ್ಯದಲ್ಲಿ ಪರಿಶೀಲಿಸಲಾಗಿದೆ).

ಭಾರತದಲ್ಲಿ ಪುರಾತತ್ವ ನಿವೇಶನಗಳ ಮೇಲಿನ ವರದಿಗಳಿಗೆ ಒಂದು ಪ್ರಮುಖ ಮೂಲವೆಂದರೆ ಆರ್ಕಿಯಾಲಜಿಕಲ್‌ ಸರ್ವೇ ಆಫ್‌ಇಂಡಿಯಾದ ಇಂಡಿಯನ್‌ ಆರ್ಕಿಯಾಲಜಿ ಎ ರಿವ್ಯೂ, ಒಂದು ವಾರ್ಷಿಕ ಪ್ರಕಟಣೆ, ಈಗ ಬಹಳ ವರ್ಷಗಳಿಂದ ಬಾಕಿಯಿದೆ. ಇದಕ್ಕೆ ಪೂರಕವಾಗಿ ಮ್ಯಾನ್‌ ಅಂಡ್‌ ಎನ್ವಾಯರ್ನ್‌‌ಮೆಂಟ್‌, ಪುಣೆ ಮತ್ತು ಪಾಕಿಸ್ತಾನ್‌ ಆರ್ಕಿಯಾಲಜಿ, ಕರಾಚಿ ಇವುಗಳ ಸಂಪುಟಗಳನ್ನು ನೋಡಬಹುದು. ಇದು ಅನಿಯಮಿತವಾಗಿ ಪ್ರಕಟವಾಗುತ್ತದೆ. ಸೌತ್‌ ಏಶ್ಯನ್‌ ಆರ್ಕಿಯಾಲಜಿಯ ಸಂಪುಟಗಳನ್ನು ವಿಶೇಷವಾಗಿ ಶಿಫಾರಸು ಮಾಡಬೇಕು.

ಸರಸ್ವತಿ ನದಿಯ ಸಮಸ್ಯೆಯ ಮೇಲೆ ಬಹಳಷ್ಟು ಬರೆಯಲಾಗಿದೆ. ಸೋಶಿಯಲ್‌ ಸೈಂಟಿಸ್ಟ್‌, ಸಂಪುಟ – XXX. ಸಂಚಿಕೆ-೧೨, ನವದೆಹಲಿ, ೨೦೦೧ರಲ್ಲಿ ಇರ್ಫಾನ್‌ ಹಬೀಬ್‌ ಅವರ ಇಮೇಜಿಂಗ್‌ ದಿ ರಿವರ್ ಸರಸ್ವತಿ ಎ ಡಿಫೆನ್ಸ್‌ ಆಫ್‌ ಕಾಮನ್‌ಸೆನ್ಸ್ (ಪುಟ ೪೬-೭೪) ಎನ್ನುವ ಲೇಖನವನ್ನು ಆಧರಿಸಿದೆ.