14. ಇಡ ನಿನ್ನ ಪ್ರೀತಿ ಮರಿಬ್ಯಾಡ
ಹುಡಹುಂಟ ಅನಬ್ಯಾಡ
ಅಡಮೂಟ ಆದೇನ
ಕಡಿತಾನ ನಾರಿ ಕರುಣಿರಲಿ ॥
ಪುಟಚೆಂಡ ಎರಡು ಮಲಿಗಳು
ಸೆಟದ ಬಂದಾವ ಕಟದ ಬಗರಿ
ಮಟಮಳ್ಳ ನನಕೂಡ ಮಾತನಾಡ
ಸೆಟ ಸೆಟದ ಅತ್ತತ್ತ ಹೋಗಬ್ಯಾಡ ॥
ಉಮ್ಮೇದ ಬಂದೀತ ಮಲಿಮ್ಯಾಲ
ಒಮ್ಮೆರೆ ನಾ ಹಿಡಿತೇನೇನ
ಸುಮ್ಮನ ನನ ಬಂದಕೂಡ
ಕದನವು ಬ್ಯಾಡ ಸುಮ್ಮsಗ
ಮಾಡೋಣ ರತಿಕ್ರೀಡೆ ॥
ಕೋಗಿಲೆಂತ ಸ್ವರ ನಿಂದು
ಮೂಗ ಸಂಪಿಗಿ ತೆನಿ ಕಾಣ
ಭೋಗ ಸಂವಿ ತೋರಸ್ತೇನ ನೋಡ
ರುಚಿ ಹತ್ತಿದ ಬಳಿಕ
ಹೋಗ ಅಂದರ ಹೋಗಾಕ್ಕಿಲ್ಲ ಪಾಡ ॥
ಕಡದಿಟ್ಟ ನಾರಿ ಕರುಣಿರಲಿ
ನನ್ನ ಮ್ಯಾಲ
ಇಡ ನಿನ್ನ ಪ್ರೀತಿ ಮರಿಬ್ಯಾಡ ॥
* * *
15. ಉಸರ ಹಾಕತೀನ ಉಣುವಾಗ
ಹೆಸರ ಇಡಬ್ಯಾಡ ಬಾಲಿ
ಕಸರ ಇಲ್ಲದಾಂವ ನಾನs
ಉಸರ ಹಾಕತೇನ ಉಣುವಾಗ ॥
ಗಂಡನಂಜಿಕಿ ನನ ಮುಂದ ಹೇಳಬ್ಯಾಡ
ನೋಡಿ ಬಿಟ್ಟಿದೇನ ಮನಗಂಡ
ಕುಂಡಿಯ ತಿರವಿ ಕೈ ಬೀಸಿ
ನಡಿತಾನ ಹೇಸಿ ಸೂಳೀಮಗ ॥
ನಂದು ನಿಂದು ಕೂಡಿತ ಬಾಳ ಮಿಗಲ
ದೇಸ ದೇಸ ಹುಡುಕಿದರೆ ಸಿಗಾಣಿಲ್ಲಾ
ತಾಸ ಮಾಸ ಹೇಳತೀನ ದೋಸಿಲ್ಲಾ ॥
ರಾಶಿ ಮಾತಿದು ನಾ ಸಾಗೋದಿಲ್ಲಾ
ಉಸರ ಹಾಕತೀನ ಉಣುವಾಗ
ನೆಂಪಾಗಿ ಉಣ್ಣೋದ ಬಿಟ್ಟ ಬಂದೇನ ॥
* * *
16. ಸುಗ್ಗಿಮ್ಯಾಲ ಬತ್ತ ಕೊಡತೇನ
ಇದ್ದೂರಾಗಿನ ಗೆಣತಿ
ಮುದ್ದಾಗಿ ಇರಬೇಕs
ಸುಗ್ಗಿ ಮ್ಯಾಲ ಬತ್ತ ಕೊಡತೇನ ॥
ಆಷಾಡ ದಿನದಾಗ ಕಾಡಿ ನನ್ನ
ಕುಬಸದ ಲೆಕ್ಕ ಬೇಡಬ್ಯಾಡ
ಈ ವರ್ಷ ಭೂಮಿ ಆಗಿದಾವ ಕರಿಸಾಲ ॥
ಮುಂದಿನ ವರ್ಷ ಮಾಡತೇನ
ಮತ್ತೊಂದ ಹೊಲಾ
ಕೊಟ್ಟ ಹರಿತೇನ ನಿನ್ನ ಸಾಲಾ ॥
ಸುಗ್ಗಿ ಮ್ಯಾಲ ಬತ್ತ ಕೊಡತೇನ
ಎಲೆ ಹುಡಗಿ
ಇಡ ನಿನ್ನ ಪ್ರೀತಿ ಮರಿಬ್ಯಾಡ ॥
* * *
17. ಖಂಡೀತ ನಿನ್ನ ಬಿಡೂದಿಲ್ಲ
ಉಂಡಾನೊ ಕೀಚಕನು
ಭಂಡ ಮಾತುಗಳನಾಡಿ
ಪುಂಡ ಭೀಮಸೇನ ಸೀಳೂಗದೊ ॥
ದ್ವಾಪರದೊಳಗಿನ ಮಾತ ತಂದ
ಸೋಪರಿಸಿ ನೀ ಹೇಳಬ್ಯಾಡ
ಗೋಪಾಲ ಕೀಚಕ ಮಾಡಿಟ್ಟ ॥
ಇಂದಿನವರಿಗಿ ಹೆಸರಾತ
ಈ ಕೀರ್ತಿ ಮಾಡಿಬಿಟ್ಟ
ಅವನಂಗ ಹೆಣ ಆಗಲಿ ನಂದು ॥
ಪ್ರಾಣ ನಿನಗ ಕೊಡತೇನ
ಅನುಮಾನ ಯಾಕ ಇನ್ನ ಆಸೆ ಬಿಟ್ಟ
ಮನ ಒಡದ ಆಗೇತs ಮಾ ಕೆಟ್ಟ ॥
ಬಿಟ್ಟರ ನಾನು ಗಂಡಸನಲ್ಲ
ಸೊಟ್ಟ ಮಾತಿನ ದುಷ್ಟ ನಾರಿ
ಕೊಟ್ಟ ಮಾಡ ಈಗ ಭೋಗಾಟ
ತುಟ್ಟಿ ತುದಿಗೆs ಮುಟ್ಟುವೆ
ಬಸವಣ್ಣನ ತಿಳಿ ಒಟ್ಟಾ ॥
ಗೊಂಡೇದ ಹೆರಳಾ
ಹಿಡದೇನ ಈ ಮಾತಾ
ಖಂಡೀತ ನಿನ್ನ ಬಿಡೋದಿಲ್ಲಾ ॥
* * *
18. ಗ್ವಾಡಿ ಜಿಗದ ಬಾರ
ಕೂಡು ಮನಸ ಇದ್ದsರ
ಗ್ವಾಡಿ ಜಿಗದ ಬಾರs
ನೋಡತಾರ್ಹೆಂಗ ನಿಮ್ಮವರಾ ॥
ಹೊತ್ತ ಮುಳಗಿದ ಬಳಿಕ ನಿಮ್ಮ
ಹಿತ್ತಲದಾಗ ಕುಂತಿರತೇನ
ಸುತ್ತ ಮುತ್ತ ಗೊಂಜಾಳ, ಬೆಳಿ ಜಡದs ॥
ಹಂತಾದರೊಳಗ ಒತ್ತರಮಾಡಿ
ಕಳದ ಬಾರ ದೀಪ
ನೋಡತಾರ್ಹೆಂಗ ನಿಮ್ಮವರ ॥
ನೋಡತಾರ್ಹೆಂಗ ನಿಮ್ಮವರ
ಎಲೆ ಹುಡಗಿ ಹಿತ್ತಲ ಬಾಗಿಲ
ಅಗಳಿ ಹಿರದಿಡ ॥
* * *
19. ಮದವಿ ಹೇಣತಿ ಮರತೇನ
ವಸ್ತಾನ ಇಟಗೊಂಡ
ಶಿಸ್ತಾಗಿ ಬರುವಳೊ
ವಸ್ತಿ ಮಾಡಿಂದ ಮಾಳಿಗ್ಯಾಗ ॥
ಕೂಡಿದ ಕುಡಿ ಹುಬ್ಬ
ತೀಡಿದ ಬೈತೇಲಿ
ಹೆಣ್ಣ ಕಂಡೇನೊ ಯಾರವಳಾ
ಶಿವನ ಮನಿಯ ರಂಬಿs
ಪುತ್ತಳಿ ಹಂತವಳಾ ॥
ಏಳು ಮಂದಿ ಗೆಳತೇರು ಕೂಡಿ
ಬಾವಿಗಿ ನೀರಿಗಿ ಹೋಗುವಾಗ
ನಾ ನಿಂತ ನೋಡೀನs ಹಣಕಿs
ನೀ ಏನ ಬೇಡತಿ ಬೇಡ ಗೆಣತಿ
ಕೊಡತೇನ ಬಂಗಾರ ವಂಕಿ ॥
ಸುಳ್ಳಪಳ್ಳ ಹೇಳಬ್ಯಾಡ
ಸಳ್ಳಹೊಡದ ಹೋಗಬ್ಯಾಡ
ಕಳ್ಳ್ಯಾಗ ಸಿಕ್ಕೀ ಒಮ್ಮ್ಯಾರ
ಅಂಜಿಕಿಲ್ಲದ ಮಂಚಾನೇರಿ
ಮಾಡೋಣ ಕಾಮಸುಖಾ
ವಸ್ತಾನ ಇಟಗೊಂಡ
ಶಿಸ್ತಾಗಿ ಬರುವಳೊ
ವಸ್ತಿಮಾಡಿಂದ ಮಾಳಿಗ್ಯಾಗ
ನಿನ ಸಲುವಾಗಿ
ಮದವಿ ಹೇಣತಿಮರತೇನ ॥
* * *
20. ವಜ್ಜರ ತೇದ ಕುಡಿವೇನ
ಗೆಜ್ಜಿ ಪೈಜಣ ಕಟ್ಟಿ
ಹೆಜ್ಜಿ ಚೆಲ್ಲುವಳ್ಯಾರೊ
ಗುಜ್ಜರ ಹುಡಗಿ ನಡದಂಗ ॥
ಎಲಿಯ ತಿಂದ ಹೊಂಟಾಳಣ್ಣ
ಮಲಿಯ ಮ್ಯಾಲಿನ ಸೆರಗ ಒಗದ
ಬೆಲಿಯ ಇಲ್ಲದ ದೇವಲೋಕದ ರಂಭಾ
ನೆಲಿ ಮುರದ ಹೋದಂಗಾತೊ
ಹಿರಿ ಹೊಳಿ ತುಂಬ ॥
ಸುಂದರಿ ಕಂಡಾಕ್ಷಣಕ್ಕs
ನಿಂದರವಲ್ತ ಧರಣೀಮ್ಯಾಲ
ಇಂದ್ರ ಹೋತ ನನ್ನ ಧೋತರ ತುಂಬ
ನೀ ಬಂದರ ಆಗೋದ
ನನಗ ಆರಂಭs ॥
ಗೆಜ್ಜಿ ಪೈಜಣ ಕಟ್ಟಿ
ಹೆಜ್ಜಿ ಚೆಲ್ಲುವಳ್ಯಾರೊ
ಗುಜ್ಜರ ಹುಡಗಿ ನಡದಾಂಗ
ಎಲೆ ಹುಡಗೀ ನೀ ಬರದಿದ್ದರ
ವಜ್ಜರ ತೇದ ಕುಡಿವೇನ ॥
* * *
21. ಅಂಗಜನ ಬಾಣ ಹೊಡದಾವ
ಬಂಗಾರದ ಬಳಿಯಿಟ್ಟ
ಅಂಗಡಿಗೆ ಹೋಗುವಳೊ
ಮುಂಗುರುಳ ತಿದ್ದಿ ಒನಪೀಲೆ ॥
ಬಾಲಿ ನಿನ್ನ ಕಂಡಾಕ್ಷಣಕ
ನೀಲದ ಹರಳ ರತ್ನದಂಗ
ಮ್ಯಾಲ ಹೊಳಿತಾವ ವಾಲಿ ಜೋಡಾ
ಗಿಳಿಯ ರೂಪ ದ್ರಾಕ್ಷಿ ಬಳ್ಳಿ
ಸುರುಳಿ ಸುತ್ತಿದ ಪಾಡಾ ॥
ಪುತಳಿ ಸರದ ಮ್ಯಾಲ ಹೊಳೆವ
ರತನದ ಹಾರ ಏಕಾsವಳಿ
ಒತನದಾರಗ ಕೊಟ್ಟಾರ ಒಯ್ಯರಿ
ನಾ ಬಡವಂತ ಮತ್ತನ ಬ್ಯಾಡ ॥
ನೋಡ ನನ್ನ ಮಾರಿ
ಮುಂಗುರುಳ ತಿದ್ದಿ ಒನಪೀಲೆ ॥
ಹೋಗುದ ಕಂಡ
ಅಂಗಜನ ಬಾಣ ಹೊಡದಾವ ॥
* * *
22. ಇಂಚಲ ಕೊಮ್ಮಿ ಬಂದ್ಹೋಗ
ಹಂಚಿ ಬಟ್ಟಿನ ಮ್ಯಾಲ
ಮಿಂಚ ಕುಂಕುಮ ರೇಖ
ಪಂಚ ವರಣೈತಿ ನಿನ ಸೀರಿ
ಸಾವಕಾರ ಮನಿಗಿ ಕೊಟ್ಟಾರೇನ
ಒಡ್ಯಾಣಂತು ನಿವಳೈತಿs
ಶುಭ ಕಾರ್ಯ ತೀರಿದಂಗ ಕಾಣೋದಿಲ್ಲ
ಮೈನೆರದೆ ಏನs
ಕನ್ನಡಿ ಪರಿ ಮಿಂಚತಾವ ಗಲ್ಲ ॥
ಕಟ್ಟಾಣಿ ಗುಂಡಿನೊಳಗ
ಪುಟವರದ ಪುತಳಿಸರಾ
ರತನದಂತಾ ಏಕಾವಳಿ ಹಾsರ ॥
ಪಂಚವರ್ಣದ ಹೆಣ್ಣ
ನೀ ಹೆಚ್ಚಂತ ನಾ ಬನ್ಯ
ಪಂಚವರ್ಣೈತಿ ನಿನ ಸೀರಿ
ಎಲೆ ಬಾಲಿ ಪಂಚವರ್ಣೈತಿ ನಿನ ಸೀರಿ
ಇಂಚಲಕೊಮ್ಮೆ ಬಂದ್ಹೋಗ ॥
* * *
23. ಮದರಂಗಿ ಗೊನಿಯ ಮರಿಮಾಡ
ಕುದರಿಯ ಕುಣಸುತ
ಚದುರ ಎದುರಿಗೆ ಬಂದ
ಮದರಂಗಿ ಗೊನಿಯ ಮರಿ ಮಾಡ ॥
ಕಾಲಿಗಿ ಕಾಲುಂಗರ ತನ್ನ
ಮೇಲ ತೋಡೇನ ತನ್ಯ
ಮೂಗಿನ್ಯಾಗ ಮೂಗಬಟ್ಟ ತನ್ಯ
ನಡಿನ್ಯಾಗ ಒಡ್ಯಾಣ ತನ್ಯ
ಕಿವಿನ್ಯಾಗ ಹೂವನ ತನ್ಯ
ಹಚ್ಚಾಕ ಕುಂಕುಮ ತನ್ಯ ॥
ಕೊಳ್ಳಾಗ ಚಿಂತಾಕ ತನ್ಯ
ಚಿಂತಿ ಮಾಡಬ್ಯಾಡ ಅನ್ಯ
ಜರದ ಕುಬಸ ತನ್ಯ
ತರದ ಮಡಿಯ ತನ್ಯ
ಮಲಗು ಮಂಚವ ತನ್ಯ
ತೆಲಗುಂಬ ಲೋಡನ ತನ್ಯ
ಹಾಸು ಗಾದೀನ ತನ್ಯ
ಹಚ್ಚಾಕ ಸಮಯನ ತನ್ಯ
ಒಳ್ಳೆ ಸಮಯಕ ಬನ್ಯ
ಕೂಡಿ ಮಲಗಾಕ ಬನ್ಯ
ಮದರಂಗಿ ಗೊನಿಯ ಮರಿ ಮಾಡಿ
ಗೆಣಿಯಾಗಿ ಇದರಗೊಳ
ಎಲೆ ಹುಡುಗಿ ಇರುಳಲ್ಲಿ ॥
* * *
24. ಏನ ಬೇಡತಿ ಬೇಡ
ಜಾಕ ಪಾಕ ಜೋಕ ನಾರಿ
ನೋಕ ತಾರಿ ಹಂಗ
ಚಕಮಕಿ ಕಟದಂಗ
ತಾರಕ್ಕಿ ಮೂಡಿದಾಂಗ
ಚಿಟ್ಟಚೌಡ್ಲ ಸಿಡಿದಾಂಗ
ಸುಂಟರಗಾಳಿ ಸುಳಿದಂಗ
ನಿನ ಸುರತ ಕಂಡಿನಲಾ ಒಂದ ಜರಾ
ಮರತ ಬನ್ಯ ಮನಿಮಾರಾ ॥
ಏನ ಹಿಂದ ಮುಂದ ನಡಿತಾಳ
ಸೂಸ ಗಾಳಿ ಬಡಿದಾಂಗ
ಹೊಳಿ ನೆಲ ಮುರದಂಗ
ಬಾಳಿಗೊನಿ ಬೆಳೆದಂಗ
ಏನ ಬಾಗಿ ಬಂತ ನಿನ್ನ ಭಾರಾ
ಊರಾಗ ಇಲ್ಲ ನಿನ್ನ ವರಾ ॥
ಏನ ನಿನ್ನ ಕುಚ ರುಚಿ
ಊಚ ನಿಂತಿ ಹಣ್ಣಿನಾಂಗ
ಒತ್ತಿದರ ಅತ್ತಿ ಹಣ್ಣಿನಂಗ
ತಿಂದರ ಪೇರು ಹಣ್ಣಿನಂಗ
ನಿನ್ನ ಸವಿಯ ತಕ್ಕೊಂಡಿಲ್ಲ ಯಾರ್ಯಾರಾ
ಹೆಂಗ ಹೋತ ನಿನ್ನ ಹರೆ ಭಾರಾ ॥
ಹೊಸಬಾವಿ ನೀರ ಜಳಜಳಾ
ಕೊಡಬೆಳಗಿ ತರತಿದ್ದಿ ಥಳಥಳಾ
ಹೊಳೆವುತಿತ್ತ ಬಾಳಸವಳಾ
ಕಾಮ ಏರಿದಾಂಗ ಆತ ಏಕಾ ಏಕಿ ॥
ಏನ ಬೇಡತಿ ಬೇಡ
ವಾಲಿ ಕೊಡತೇನ ಎಲೆ ಹುಡಗಿ
ಒಲ್ಲಿ ಅನಬ್ಯಾಡ
ಬಾ ನನ್ನ ಹಿಂಬಾಲಿ
ಹೊಡವತೇನ ಜೋಲಿ ॥
* * *
25. ಶೀಲವಂತಿ ಸಿಟ್ಟ ಮಾಡಬ್ಯಾಡ
ಇರೂನಿಬ್ಬರು ಕೂಡಿ
ವರಾಸುದ್ದ ಕಾಣೋನ
ಶೀಲವಂತಿ ಸಿಟ್ಟ ಮಾಡಬ್ಯಾಡ ॥
ಹೋದ ವರ್ಷ ಸಣ್ಣಕಿದ್ದಿ
ಹೊಲಸಿ ಗತೆ ಕಾಣತಿದ್ದಿ
ಹೊಲಕ ಮನಿಗಿ ಓಡ್ಯಾಡತಿದ್ಯ ನೀನ
ಈ ವರ್ಷ ಎಂತಾಬರಾ
ಕಣ್ಣಕಿತ್ಯ ಬಾಲಿ ॥
ಹೊಳಿಯ ನೀರಿಗಿ ಹೋಗುವಾಗ
ಎಳಿಯ ಬಿಲಿಸಿಗಿ ಕುಂತಿನ್ಯ ನಾನಾ
ಥಳಾಥಳಾ ಹೊಳಿಯತಿತ್ತು ಗೆಜ್ಜಿಟಿಕ್ಕೆ
ಏನ ಸುದ್ದ ಸುಳದಾಂಗಾದೆ ॥
ಸೂತರ ಗೊಂಬಿ ಹಂಗ
ಏನ ಬೇಡತಿ ಗೆಣತಿ
ಕೊಡತೇನ ಬಂಗಾರ ವಂಕಿ ॥
ಶೀಲವಂತಿ ಸಿಟ್ಟ ಮಾಡಬ್ಯಾಡ
ನನ ಮಾತಾ
ಅರುವಿಟ್ಟು ಕೇಳ ಗುಣವಂತಿ ॥
* * *
26. ಚೆದುರಿ ಚಿಗರಿಮರಿಹಂಗ
ಯಾರವಳು ಸ್ತ್ರೀಯಳೊ
ಭಾರಕ ಬಂದಿಹಳೊ
ಮೈ ನೆರೆದ ನೋಟ ಮುಖದಲಿ ॥
ಚೆದುರಿ ಚಿಗರಿಮರಿಹಾಂಗ
ಬೆದರಿ ನಿಂದರಬ್ಯಾಡ ಪೋರಿ
ನಿಗರಿ ಬಂದಾವ ಎದಿ ಮ್ಯಾಗ ಕುಚಗೋಳ
ಸರಸ ಕುಚ ನಿರಸವಾಗಿ
ಕೊಡ ಕೈ ಒಳಗ ॥
ಶಾಮುಸುಂದರನಂತ ಹುಡಗ
ಕಾಮವೇರಿ ಕೇಳತೇನ
ನೇಮ ಒಂದ ಹೇಳವಲ್ಲಿ ಮಾತ ॥
ಮೈನೆರೆದ ನೋಟ ಮುಖದಲಿ
ಏ ಬಾಲಿ ಕಳಾ ನೋಡಿ
ಹೊರಳಿ ಬೀಳುವೆನ ॥
* * *
ga;mso-q�Dif0�=x�=y: Calibri;mso-ascii-theme-font:minor-latin;mso-hansi-font-family:Calibri; mso-hansi-theme-font:minor-latin’>ಮೋಜಾ ನೋಡತೇನ
ಇಡತೀನ ನಿನ್ನ ದೂರೋದ
ನಾ ನಿನಗ ಕೊಡತsನ ಹರಕ ಪಡಿಕೊಕೊಂದ ॥
* * *
Leave A Comment