ಗುರುಪಾದದೊಳು ಮನ ಬೆರೆಯಲಿಲ್ಲಾ
ಜನ್ಮ ಹರಿಯಲಿಲ್ಲಾ ಸ್ಥಿರ ಮುಕ್ತಿಸುಖವದು
ದೊರೆಯಲಿಲ್ಲಾ ಪಾಪಿ ಅರಿಯನಲ್ಲಾ || ಗುರು ||

ಜಿವ ಶಿವರಿಗೆ ಭೇದ ಮಾಡಬೇಡಿ ಅದನೋಡ
ಬೇಡ ಭ್ರಾಪಿಸಿ ಕರ್ಮದೊಳು ಕೊಡ ಬೇಡ
ಓಡಾಡಬ್ಯಾಡಿ || ಗುರುಪಾದ ||

ಎರಡೆಂಬ ಭ್ರಾಂತಿಯ ಪೋಗಲಿಲ್ಲ ಜನ್ಮ
ನೀಗಲಿಲ್ಲ ಗುರುಪಾದಸೇವೆ ಕೊನೆ ಸಾಗಲಿಲ್ಲಾ
ಬ್ರಹ್ಮನಾಗಲಿಲ್ಲಾ || ಗುರುಪಾದ ||

ತನ್ನ ಮರತು ತನುವ ತೊಳದರೇನೂ
ಬೂದಿ ಬಳಿದರೇನೂ ಬಿನ್ನ ಸಗೈವ ಧ್ಯಾನ
ಬಲ್ಲದೇನೊ ವೇದ ಕಲ್ತರೇಯೊ || ಗುರುಪಾದ ||

ನೂಪ್ರನಾಮ ಬಿಟ್ಟಮೇಲೆ ಕೋಪವಿಲ್ಲಾ ಪರಬ್ರಹ್ಮ
ಮೊಳು ತಾಪವಿಲ್ಲಾ ಅಧ್ಯಾಗೆಪವೆಲ್ಲಾ || ಗುರುಪಾದ ||

ಸತ್ಯವರಿತ ಮೇಲೆ ನೀತಿಯಿಲ್ಲಾ ಕುಲಜಾತಿ ಇಲ್ಲ
ವಿದ್ಯೆಯ ಕಳದ ಮೇಲೆ ರೀತಿಯಿಲ್ಲಾ ಲೋಕ
ಭೀತಿಯಿಲ್ಲಾ || ಗುರುಪಾದ ||

ತಾನಾರು ಎಂಬುದು ತಿಳಿಯಾಬೇಕೂ ಭೇದ
ವಳಿಯಬೇಕು ನಾನಪ್ಪ ಭವವನಳಿಯಬೇಕು
ಜನ್ಮ ಕಳಿಯಬೇಕು || ಗುರುಪಾದ ||

ಜ್ಞಾನವಿಲ್ಲದ ಬರಿ ಮೌನವೇಕೆ ಜಪದ್ಯಾನ
ತಾನೆ ತಾನಾದಮೇಲೆ ಮೌನಬೇಕೆ
ಗಂಗಸ್ನಾನ ಬೇರೆ || ಗುರುಪಾದ ||

ಅಹನಿಲ್ಲದ ಮೇಲೆ ಚಿಂತೆಯಿಲ್ಲಾ ಬೇರೆ
ಶಾಂತಿಯಿಲ್ಲಾ ಭ್ರಾಂತಿಯ ಕಳೆದ ಮೇಲೆ ಪಂತವಿಲ್ಲ
ತನ್ನಂತೆಯೆಲ್ಲಾ || ಗುರುಪಾದ ||

ಅಂಗತನಾದ ಮೇಲೆ ಭಂಗವಿಲ್ಲಾ ಪಾಪ ಸಹ
ವಿಲ್ಲಾ ಅಂಗವ ಕಳೆದ ಮೇಲೆರಿಗನಿಲ್ಲ
ನರಸಿಂಹನಿಲ್ಲಾ || ಗುರುಪಾದ ||

ಸಂಶಯ ವಳಿಯ ದೇಹ ಬುದ್ಧಿಯಿಲ್ಲಾ
ಜಗದ ಸುದ್ಧಿಯಿಲ್ಲಾ ಸಂಸಾರಗೊಳಗವನದ್ದು ಇಲ್ಲ
ಮುಂದೆ ಬಿದ್ಧನಲ್ಲಾ || ಗುರುಪಾದ ||

ಗುರು ಶಂಕರಾಯನ ಚರಣದಲ್ಲಿ ಶಿರವನಿರಿಸಲ್ಲಿ
ಮರಳಿ ಜನ್ಮಸವಿ ಧರಣಿಯಲ್ಲಿ ಬೆರೆವ
ಪರಮನಿಲ್ಲಿ || ಗುರುಪಾದ ||