ಶ್ರೀ ಗುರುವಿನ ಪಾದ | ಪೂಜೆ ಮಾಡುವ ಜ್ಞಾನ
ಯೋಗಿಣಿಯರೆ ಬನ್ನಿ ಮುದದಿಂದ || ಶ್ರೀಗುರು ||

ವರನಿರ್ಮಲೋಕದಲಿ ಮಿಂದು |
ಭಸಿತಾವ ಧರಿಸುತ್ತೆ ವಿಧಿಯಿಂದ |
ಷಡ್ಲಿಂಗಕ್ಕೆ | ಉರುತರ ದಿಷ್ಟಾ ಪ್ರಾಣವು ಭಾವವಕೂಡಿ
ತ್ವರಿತದಿಂದಲಿ ಶಿವಪೂಜೆ ಮುಗಿಸುತ್ತೆ ||

|| ಶ್ರೀಗುರು || ಗುರುಪಾದತಗ್ಗಣಿ ಅರಿಶಿನ ವಿಭೂತಿ
ವರ ಗಂಧ | ಕುಂಕುಮ ಪತ್ರೆ | ಅಕ್ಷತೆಯಾ
ಪರಿಮಳಮಾಡ | ಧೂಪನಕೊಂಡು | ನಮ್ಮ ಶ್ರೀಗುರು
ಪಾದದೆಡೆಗೆ | ಸಂತಸದಿ ಆಗಮಿಸುತ್ತೆ ||
ಧರೆಯೊಳಧಿಕ ರಂಭಾಪುರದೊಳು ನೆಲಸಿಹ
ಪರಮ ಸದ್ಗುರು ರೇಣುಕರ ಪಾದಕ || ಗುರು ಮಾತ್ರ
ದಿಂದಪ ವಿಧ ಅರ್ಚನೆಯ | ಮಾಡಿ ಸಿರಸಹಿತಲಿ
ವರಗಳರ್ಪಿಸುತೆ || ಶ್ರೀ ಗುರುವಿನಪಾದ
ಪೂಜೆ ಮಾಡುವ ಜ್ಞಾನಾ ||