ಭಾಷಾ ತಂತ್ರಜ್ಞಾನ ಕುರಿತು ಮಾಹಿತಿಯುಳ್ಳ ಈ ಕಿರು ಹೊತ್ತಿಗೆಯ ಒಳಗೆ ಭಾಷಾಧ್ಯಯನಕ್ಕೆ ಪೂರಕವಾಗಿ ಬಂದಂತಹ ತಂತ್ರಜ್ಞಾನಗಳ ಬಗೆಗಿನ ಲೇಖನಗಳಿವೆ. ಎಲ್ಲ ವಲಯಗಳೂ ತಂತ್ರಜ್ಞಾನದ ಸಹಾಯದಿಂದ ಅಭಿವೃದ್ದಿಯನ್ನು ಸಾಧಿಸುತ್ತಿದ್ದರೆ, ಕೆಲವು ವಲಯಗಳು ಉದಾಹರಣೆಗೆ ವಾಣಿಜ್ಯ ಇತ್ಯಾದಿ, ಭಾಷಾ ತಂತ್ರಜ್ಞಾನವನ್ನು ಅವಲಂಬಿಸಿದೆ. ಇಂದು ಭಾಷಾ ತಂತ್ರಜ್ಞಾನದ ಮಾರುಕಟ್ಟೆ ಅತಿ ವೇಗವಾಗಿ ಬೆಳೆಯುತ್ತಿದೆ. ಭಾಷಾ ತಂತ್ರಜ್ಞಾನಕ್ಕೆ ಅಗತ್ಯವಾದ ಅನೇಕ ಸಹಾಯಕ ತಂತ್ರಜ್ಞಾನಗಳನ್ನು ಸಹಾ ಅಭಿವೃದ್ದಿಪಡಿಸಲಾಗುತ್ತಿದೆ. ಉದಾಹರಣೆಗೆ ಕಾಗುಣಿತ ಪರೀಕ್ಷಕ, ವ್ಯಾಕರಣ ಪರೀಕ್ಷಕ, ಅನುವಾದ ಸಂಬಂಧಿ ತಂತ್ರಜ್ಞಾನ ಹೀಗೆ ಒಂದೊಂದಾಗಿ ಸೇರಿ ಇಂದು ಭಾಷಾ ತಂತ್ರಜ್ಞಾನ ಕ್ಷೇತ್ರ ಸಾಕಷ್ಟು ಬೆಳೆದಿದೆ. ಆದರೆ ಇದರ ಬಗೆಗಿನ ಮಾಹಿತಿ ಮಾತ್ರ ಪ್ರಚಾರಕ್ಕೆ ಬಂದಿಲ್ಲ. ಭಾಷಾ ತಂತ್ರಜ್ಞಾನ ಕುರಿತ ಈ ಕೃತಿ ಒಂದು ಪ್ರಯತ್ನವಷ್ಟೇ.

ಈ ಕೃತಿಯನ್ನು ಪ್ರಕಟಿಸಲು ಅನುಮತಿ ನೀಡಿದ ಮಾನ್ಯ ಕುಲಪತಿಯವರಾದ ಪ್ರೊ.ಎ.ಮುರಿಗೆಪ್ಪ ಅವರಿಗೆ ಕೃತಜ್ಞತೆಗಳು. ಅಂತೆಯೇ ನಮ್ಮ ವಿಭಾಗದಲ್ಲಿ ಹಿರಿಯ ಪ್ರಾಧ್ಯಾಪಕರಾಗಿದ್ದ ಡಾ.ಕೆ.ವಿ.ನಾರಾಯಣ ಅವರು ನಮ್ಮ ಶೈಕ್ಷಣಿಕ ಚಟುವಟಿಕೆಗಳ ಹಿಂದಿನ ಶಕ್ತಿಯಾಗಿದ್ದಾರೆ. ಅವರಿಗೂ ನನ್ನ ಕೃತಜ್ಞತೆಗಳು.

ಲೇಖನಗಳನ್ನು ಬರೆದುಕೊಟ್ಟು ಸಹಕರಿಸಿದ ಡಾ.ಕೆ.ವಿ.ನಾರಾಯಣ, ಡಾ.ಪಾಂಡುರಂಗಬಾಬು, ಡಾ.ಅಶೋಕ ಕುಮಾರ, ಡಾ.ಪಿ.ಮಹಾದೇವಯ್ಯ, ಡಾ.ವೀರೇಶ ಬಡಿಗೇರ, ಡಾ.ಎನ್.ಎ.ಎಂ.ಇಸ್ಮಾಯಿಲ್, ಶ್ರೀಪ್ರಕಾಶ್, ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೆ ನನ್ನ ಕೃತಜ್ಞತೆಗಳು.

ಈ ಕೃತಿಯನ್ನು ಪ್ರಕಟಿಸುತ್ತಿರುವ ಕನ್ನಡ ವಿಶ್ವವಿದ್ಯಾಲಯ ಪ್ರಸಾರಾಂಗದ ನಿರ್ದೇಶಕರಾದ ಡಾ.ಎ.ಮೋಹನ ಕುಂಟಾರ್ ಅವರಿಗೂ ಸಹಾಯಕ ನಿರ್ದೇಶಕರಾದ ಶ್ರೀ ಬಿ.ಸುಜ್ಞಾನಮೂರ್ತಿ ಅವರಿಗೂ ಮುಖಪುಟ ವಿನ್ಯಾಸ ಮಾಡಿದ ಶ್ರೀ ಕೆ.ಕೆ.ಮಕಾಳಿ ಅವರಿಗೂ ಸುಂದರವಾಗಿ ಅಕ್ಷರ ಸಂಯೋಜಿಸಿದ ಶ್ರೀ ಸಾವಳಗಿ ಶಿವಲಿಂಗೇಶ್ವರ ಗ್ರಾಫಿಕ್ಸ್‌ನ ಶ್ರೀಮತಿ ಬಿ.ರಶ್ಮಿ ಅವರಿಗೂ ನನ್ನ ಕೃತಜ್ಞತೆಗಳು

ಡಾ. ಸಾಂಬಮೂರ್ತಿ